ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಾಹಿತ್ಯ

books on ground

ಶ್ವೇತಾ ಮಂಡ್ಯ

ಸಾಹಿತ್ಯ,
ಒಳಿತ ಉಣಿಸಿ
ಕೆಡುಕ ಅಳಿಸಿ
ಮನವ ಅರಳಿಸಿ
ಸರ್ವರ ಹಿತ ಬಯಸುವ
ಸಾಹಿತ್ಯ;

ಅಂತ:ಕರಣವ ತಟ್ಟಿ
ಮಾನವೀಯತೆಯ ಮುಟ್ಟಿ
ಕರ್ತವ್ಯಪ್ರಜ್ಞೆಯ ಎಚ್ಚರಿಸಿ
ಬದುಕಿನುದ್ದ ದಾರಿದೀಪವಾಗುವ
ಸಾಹಿತ್ಯ,

ಸರ್ವಜನ ಸರ್ವ ಭಾವಗಳ
ಶುದ್ದೀಕರಿಸಿ
ಮನುಕುಲದ ಕಲ್ಮಶಗಳ
ತೊಳೆಯುವ
ಸಾಹಿತ್ಯ;

ನಿನ್ನ ಮೆಚ್ಚಿ ನಿನ್ನಪ್ಪಿ
ಕೊಂಡವರೆಲ್ಲಾ
ನಡೆಯುತ್ತಿದ್ದರೆ ನಿನ್ನಾಶಯದಂತೆಯೇ
ಬದುಕುತ್ತಿದ್ದರೆ ತಾವು
ಬರೆಯುವಂತೆ…..!!!

********

About The Author

Leave a Reply

You cannot copy content of this page

Scroll to Top