ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬದುಕು

Shallow Focus of Sprout

ಎನ್. ಆರ್. ರೂಪಶ್ರೀ

ಬೀಸುವ ಗಾಳಿ
ಹಾರುವ ಮುಂಗುರುಳು
ಮತ್ತೆ ನೀಡಬಹುದು
ಹೊಸ ಸಂತೋಷ.

ಬಾನ ಚುಕ್ಕಿ
ಹೊಳೆಯುವ ಚಂದಿರ
ಮತ್ತೆ ಬರಬಹುದು
ಆನಂದ.

ಹಕ್ಕಿಯ ಗಾನ
ಮರಗಳ ಕಲರವ
ಮತ್ತೆ ತರಬಹುದು
ಚೇತನ.

ತಿಳಿ ನೀರ ಅಲೆಗಳಲ್ಲಿ
ತೇಲುತ್ತಾ ಸಾಗುವ
ಗುಳ್ಳೆಗಳ ನಡುವೆ ಮತ್ತೊಮ್ಮೆ
ಚಿಮ್ಮಬಹುದು ಚಿಲುಮೆ.

ಇಂತಹ ಎಲ್ಲಾ
ಆಶಾ ಭಾವನೆಗಳ ನಡುವೆ
ಜೀವಿಸಲೇಬೇಕಾದ ಅನಿವಾರ್ಯತೆ.

ಇದ್ಯಾವುದೂ ಆಗದಿದ್ದರೂ
ಆಗುತ್ತದೆ ಎನ್ನುವ ನಂಬಿಕೆ
ಬಹುಶ: ಇದೇ
ಇರಬಹುದು ಬದುಕು.

********

About The Author

Leave a Reply

You cannot copy content of this page

Scroll to Top