ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವಳೆಂದರೆ..

Image result for sculpture of mother

ವಿನುತಾ ಹಂಚಿನಮನಿ

ಬಿತ್ತಿರುವದ ಬೆಳೆಯುವ ಭೂಮಿ ಧರಣಿ
ಕಸವಿರಲಿ ವಿಷವಿರಲಿ ಬೀಜದ ಭ್ರೂಣ
ಅಂಕುರಿಸಲು ಒಡಲ ಕೊಡುವ ರಮಣಿ

ಜೀವಜಲ ಎರೆಯುವ ಅಮೃತ ವರ್ಷಿಣಿ
ಮೇಲು ಕೀಳೆನಿಸದೆ ಪಾಪ ತೊಳೆಯುವ ಜಾಹ್ನವಿ
ತಪ್ಪುಗಳ ಒಪ್ಪಿ ಒಪ್ಪಿಕೊಳ್ಳುವ ಮಹಾಮಾಯಿ

ಎಲ್ಲವನೂ ತನ್ನದಾಗಿಸಿಕೊಳ್ಳುವ ನೀಲಮಯಿ
ಸೂರ್ಯ ಚಂದ್ರ ತಾರೆಯರಿಗೆ ಅಂಗಳವಾಗಿರುವ
ಅನಂನ ಆಗಸದಂತ ವಿಶಾಲಮನದ ಪ್ರೇಮಮಯಿ

ಕೆಡುಕ ಧಿಕ್ಕರಿಸಿ ಸುಡುವ ಮೋಹಿನಿ
ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ಕರುಣಾಮಯಿ
ಅಸುರ ಮರ್ಧಿನಿ ಅಗ್ನಿ ಸ್ವರೂಪಿಣಿ

ಜಗದ ಎಲ್ಲ ತೇಜಸ್ಸಿಗೆ ಕಾರಣೀಭೂತಳು
ಚುಂಬಕ ಗುರುತ್ವ ಶಕ್ತಿಯ ಶಕ್ಕಿರೂಪಿಣಿ
ಅವಳೆಂದರೆ ಸಾಕ್ಷಾತ್ ಪಂಚಭೂತಾಯಿ

ರಕ್ತವ ಹಾಲಾಗಿಸಿ ಉಣಿಸುವಾಕಿ
ಶಕ್ತಿಯ ಬೆವರಾಗಿಸಿ ಸೇವೆಗೈಯುವಾಕಿ
ಮುಕ್ತ ಇಹ ಪರಕೆ ಬೇಕಿರುವಾಕಿ

ಸೃಷ್ಟಿ ಕಾರ್ಯದಲಿ ಚತುರ್ಮುಖ ಬ್ರಹ್ಮನಂತೆ
ಪೋಷಿಸುವಲ್ಲಿ ಕರುಣಾಳು ವಿಷ್ಣುವಿನಂತೆ
ಕ್ಷಮಿಸುವಲ್ಲಿ ಸಹನಶೀಲೆ ಧರಿತ್ರಿಯಂತೆ

ರವಿಚಂದ್ರರಿಂದ ಬೆಳಕ ಪಡೆದ
ತಾರೆಗಳಂತಲ್ಲ ಅವಳ ವ್ಯಕ್ತಿತ್ವ
ತನ್ನನು ತಾನು ಉರಿಸಿ ಬೆಳಗುವ ದೀಪ್ತಿ

********

About The Author

Leave a Reply

You cannot copy content of this page

Scroll to Top