ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಇತರೆ

“ಕಲ್ಲಂಗಡಿ ಹಣ್ಣಿನ ಪೂಜೆ” ತಾರಾ ಸತ್ಯನಾರಾಯಣ ನನ್ನ ಮದುವೆಯಾಗಿದ್ದ ಹೊಸದು ಮದುವೆಯಾಗಿ ಹದಿನೈದು ದಿನಕ್ಕೆ ಯುಗಾದಿ ಹಬ್ಬ ಬಂತು ಹಬ್ಬಕ್ಕೆ ನಮ್ಮಿಬ್ಬರನ್ನು ಕರೆದುಕೊಂಡು ಹೋಗಲು ನನ್ನ ಅಣ್ಣ ಬಂದ ಇವರಿಗೆ ಆಫೀಸಿನ ಕೆಲಸದ ನಿಮಿತ್ತ ಚೆನ್ನೈಗೆ ಹೋಗಬೇಕಾದ್ದರಿಂದ ಇವರು “ನಾನು ಬರಲು ಸಾಧ್ಯವಿಲ್ಲ ನೀನು ಹೋಗಿ ಬಾ “ಎಂದು ಹೇಳಿದರು. ನಾನು ಅಣ್ಣನ ಜೊತೆ ತವರಿಗೆ ಹೋದೆ.ಹಬ್ಬ ಮುಗಿಸಿಕೊಂಡು ಅಣ್ಣನ ಜೊತೆ ಗಂಡನ ಮನೆಗೆ ಹೊರಟೆ .ನಾನು ಹೋಗುವ ಹಿಂದಿನ ದಿನ ಅವನ ಫ್ರೆಂಡ್  ತೋಟದಿಂದ ಒಂದೆರಡು ಕಲ್ಲಂಗಡಿ ಹಣ್ಣು ತಂದ. ತುಂಬ ದೊಡ್ಡದಿತ್ತು ಒಂದನ್ನು ಹೆಚ್ಚಿ ತಿಂದೆವು” ಅಣ್ಣ ಹಣ್ಣು ತುಂಬಾ ಚೆನ್ನಾಗಿದೆ ನಾಳೆ ನೀನೊಂದು ಹಣ್ಣು ತಗೊಂಡು ಹೋಗು ಅಲ್ಲಿ ಎಷ್ಟು ದುಡ್ಡು ಕೊಟ್ಟರೂ ಬೆಂಗಳೂರಲ್ಲಿ ಇಂಥ ಹಣ್ಣು ಸಿಗಲ್ಲ” ಅಂದ  ನಾನು ಸರಿ ಎಂದು ದಪ್ಪಗಿದ್ದ ಹಣ್ಣನ್ನು ಎತ್ತಿಟ್ಟುಕೊಂಡು ಮರುದಿನ ಅಣ್ಣನ ಜೊತೆ ಬೆಂಗಳೂರಿಗೆ ಬಂದೆ .ಅಣ್ಣ, “ಗೀತಾ ನಂಗೆ ಇಲ್ಲೇ ಸ್ವಲ್ಪ ಕೆಲಸ ಇದೆ ಮುಗಿಸಿಕೊಂಡು ರಾತ್ರಿ ಮನೆಗೆ ಬರ್ತೀನಿ ಈಗ ನಿನ್ನನ್ನು ಆಟೋ ಹತ್ತಿಸುತ್ತೇನೆ” ಎಂದು ಹೇಳಿದ.ನಾನು ಆಟೋ ಹತ್ತಿ ಮನೆಗೆ ಬಂದೆ ಪುಟ್ಟ ಲಗೇಜ್ಹಿಡಿದು ಕಲ್ಲಂಗಡಿ ಹಣ್ಣನ್ನು ಕೊಂಕಳಲ್ಲಿ  ಇಟ್ಟುಕೊಂಡು ಮನೆಗೆ ಬಂದೆ ಅಲ್ಲೇ ಇದ್ದ ಅಲ್ಲೇ ನನ್ನ ಮೈದುನ “ಏನತ್ತಿಗೆ ಇಷ್ಟು ದೊಡ್ಡ ಕಲ್ಲಂಗಡಿ ಹಣ್ಣು!! ಎಂದು ಆಶ್ಚರ್ಯ ಪಟ್ಟ. ಆಗ ತಾನೆ ಚೆನ್ನೈಯಿಂದ ಬಂದಿದ್ದ ಇವರು “ಏನು !ಗೀತಾ ಕಲ್ಲಂಗಡಿ ಹಣ್ಣು  ಒಳಗೆ ತಂದ್ ಬಿಟ್ಲಾ?””  ಗೀತ ಏನ್ಮಾಡ್ತಿದಿಯಾ?” ಅಂದುಕೊಂಡು ರೂಮಿನಿಂದ ಆಚೆ ಬಂದರು. “ಹಣ್ಣು ತಗೊಂಡು ಆಚೆ ನಡಿ” ಅಂದಾಗ ನಾನು ಹೆದರಿಕೊಂಡು ಹಣ್ಣು ತಗೊಂಡು ಆಚೆ ಬಂದೆ.  ಇವರು ತಮ್ಮ ನಿಗೆ “ಏನು ನೀನು ಸುಮ್ನೆ ನೋಡ್ತಾ ಇದೀಯಾ? ಅಪ್ಪ ಅಮ್ಮ  ಆಚೆ ಹೋಗಿದ್ದಾರೆ ಇಲ್ಲದಿದ್ದರೆ ಕಲ್ಲಂಗಡಿ ಹಣ್ಣನ್ನು ಪೂಜೆ ಮಾಡದೆ ಒಳಗೆ ತಂದಿದ್ದು ನೋಡಿದ್ರೆ ಎಲ್ಲರಿಗೂ ಗ್ರಹಚಾರ ಬಿಡಿಸೋರು. ಗೀತಾಳಿಗೆ ನಮ್ಮನೆ ಪದ್ಧತಿ ಗೊತ್ತಿಲ್ಲ ನಾವು ಕಲ್ಲಂಗಡಿ ಹಣ್ಣು ತಂದಾಗ ಅದಕ್ಕೆ ಪೂಜೆ ಮಾಡಿ ಅಲ್ವೇ ಒಳಕ್ಕೆ ತರೋದು! ಅಂದ್ರು ತಕ್ಷಣ ಮೈದುನ “ಹೌದೌದು  ನಾನು ಇಷ್ಟು ದಿನ ಅಮೇರಿಕದಲ್ಲಿ ಇದ್ದು ಇಲ್ಲಿಯ ಪದ್ಧತಿ ಮರ್ತೆ ಬಿಟ್ಟಿದ್ದೆ “ಅಂದು, “ಅತ್ತಿಗೆ ಹಣ್ಣನ್ನು ಆಚೆ ಇಟ್ಟು ಪೂಜೆ ಮಾಡಿ “ಅಷ್ಟೊತ್ತಿಗೆ ಒಳಗಡೆಯಿಂದ ನಾದಿನಿ ಬಂದಳು ಕಲ್ಲಂಗಡಿ ಹಣ್ಣು ತಂದ್ರಾ??” ಅತ್ತಿಗೆ ಚೂಡಿದಾರದಲ್ಲಿ ಪೂಜೆ ಮಾಡ್ಬೇಡಿ  ಬನ್ನಿ ಬೇಗ ಹೋಗಿ ಸೀರೆ ಉಟ್ಟುಕೊಂಡು ಬನ್ನಿ “ಅಂದಾಗ,ನಾನು ತಕ್ಷಣ ರೂಮಿಗೆ ಹೋಗಿ ಸೀರೆ ಉಟ್ಕೊಂಡು ಬಂದೆ ನಾದಿನಿ ಅರಿಶಿನ ಕುಂಕುಮ ತಟ್ಟೆ ಕೊಟ್ಲು ಆಮೇಲೆ ದೇವರ ಮುಂದೆ ಇದ್ದ ಹೂವನ್ನು ಕೊಟ್ಲು. ನಾನು ಕಲ್ಲಂಗಡಿ ಹಣ್ಣಿಗೆ ನೀರು ಹಾಕಿ ತೊಳೆದು ಅರಿಶಿನ ಕುಂಕುಮ ಹಚ್ಚಿ ಹೂವು ಹಾಕಿ ಪೂಜೆ ಮಾಡಿದೆ.ಮೈದುನ ಕರ್ಪೂರ ಹೊತ್ತಿಸಿ ಕೊಟ್ಟ ಆಮೇಲೆ ಇವರು ತೆಂಗಿನಕಾಯಿ ಒಡೆದು ಕೊಟ್ಟರು ಅದನ್ನು ಒಡೆದು,ಆರತಿ ಬೆಳಗಿ,ನಮಸ್ಕಾರ ಮಾಡಿದೆ.  ಅಷ್ಟು ಹೊತ್ತಿಗೆ ಆಚೆ ಹೋಗಿದ್ದ ಅತ್ತೆ ಮಾವ ಬಂದರು ಇದನ್ನೆಲ್ಲ ನೋಡಿ “ಏನ್ರೋ ಇದು?  ಅದೇ ಅಮ್ಮಾ, ಕಲ್ಲಂಗಡಿ ಹಣ್ಣು ತಂದರೆ ಅದನ್ನು ಹೇಗೆ ಒಳಗೆ ತಗೊಂಡು ಬರಬೇಕು ಅಂತಹೇಳ್ತಿದ್ವಿ” ಗೀತಾಳಿಗೆ ನಮ್ಮ ಪದ್ಧತಿ ಗೊತ್ತಿರಲಿಲ್ಲ ಅದಕ್ಕೆ ನಾವೆಲ್ಲರೂ ಸೇರಿ ಪೂಜೆ ಮಾಡಿಸಿದ್ದೇವೆ ನೋಡು” ಅಂದ್ರು “ನಿಮ್ಮ ಪೂಜೆಗೆ ಏನು ಹೇಳಲಿ !ನೀವು ಹೇಳಿದ್ರಿ ಪಾಪ ಅವಳು ಮಾಡಿದಳು” ಅಂತ ಅತ್ತೆ ಅಂದಾಗ ಇವರೆಲ್ಲರೂ ಸೇರಿ ನನ್ನನ್ನು ಮೂರ್ಖರನ್ನಾಗಿ ಮಾಡಿದ್ದಾರೆ ಎಂದು ಗೊತ್ತಾದಾಗ ಎಲ್ಲರ ಮೇಲೆ ಸಿಕ್ಕಾಪಟ್ಟೆ ಕೋಪ ಬಂತು.  ಎಲ್ಲರೂ ಸೇರಿ “ಏಪ್ರಿಲ್ ಫೂಲ್” ಅಂದಾಗ ವಿಪರೀತ ಅವಮಾನವಾಗಿ ಕೈಯಲ್ಲಿದ್ದ ಹಣ್ಣನ್ನು ಅಲ್ಲೇ ಎತ್ತಿಹಾಕಿ ರೂಮ್ ಗೆ ಹೋಗಿ ಬಾಗಿಲು ಹಾಕಿಕೊಂಡೆ ಎಲ್ಲರೂ ಬಂದು ನನ್ನನ್ನು ಕರೆಯೋಕೆ ಶುರು ಮಾಡಿದರು ಪ್ಲೀಸ್ ಅಂದರು ಸಾರಿನು ಕೇಳಿದರೂ ನನ್ನ ರೂಮಿನಿಂದ ಯಾವು ದೆ ಶಬ್ದವು ಬರದಿದ್ದಾಗ ಒಂದು ಗಳಿಗೆ ಎಲ್ಲಾ ಹೆದರಿ ಬಾಗಿಲು ಬಡಿಯೋಕೆ ಶುರು ಮಾಡಿದ್ರು.ಎಲ್ಲಾರು ತುಂಬಾನೆ ಹೆದರಿದ್ರು.ನಾನು ಐದು ನಿಮಿಪ ಸುಮ್ಮನಿದ್ದು, ಆಮೇಲೆ ನಾನು ನಕ್ಕೊಂಡು ಇನ್ನೊಂದು ಬಾಗಿಲಿಂದ ಆಚೆ ಬಂದೆ. ಆಗ ಅವರುಗಳ ಮುಖ ಇಂಗು ತಿಂದ ಮಂಗನಂತಾಗಿತ್ತು. *************************

ಇತರೆ Read Post »

ಅನುವಾದ

ಕಾವ್ಯಯಾನ

ಅನುವಾದ ಸಂಗಾತಿ ಮೂಲ: ರಾಲ್ಫ ಯಾಕೊಬ್ಸೆನ್(ನಾರ್ವೆ ಕವಿ) ಕನ್ನಡಕ್ಕೆ: ಕಮಲಾಕರ ಕಡವೆ “ಸೂಕ್ಷ್ಮ ಸೂಜಿಗಳು” ತುಂಬಾನೇ ಸೂಕ್ಷ್ಮ ಈ ಬೆಳಕು.ಮತ್ತದು, ಇರುವುದು ಸಹ ಭಾಳ ಕಮ್ಮಿ. ಕತ್ತಲೋಬೃಹತ್ತರವಾದುದು.ಕೊನೆಯಾಗದ ರಾತ್ರಿಯಲ್ಲಿಸೂಕ್ಷ್ಮ ಸೂಜಿಯಂತೆ ಈ ಬೆಳಕು,ಮತ್ತದಕ್ಕೆ ಎಷ್ಟು ದೂರ ಕ್ರಮಿಸಬೇಕಿದೆಈ ಪಾಳು ಜಾಗದಲ್ಲಿ. ಎಂದೇ ಅದರೊಡನೆ ನಯವಾಗಿ ವರ್ತಿಸೋಣಆರೈಕೆ ಮಾಡೋಣ.ಮತ್ತೆ ಮುಂಜಾನೆ ತಿರುಗಿ ಅದು ಬರಲೆಂದುಹಾರೈಸೋಣ.********** “Just Delicate Needles” It’s so delicate, the light.And there’s so little of it. The darkis huge.Just delicate needles, the light,in an endless night.And it has such a long way to gothrough such desolate space. So let’s be gentle with it.Cherish it.So it will come again in the morning.We hope.

ಕಾವ್ಯಯಾನ Read Post »

ಇತರೆ

ಇತರೆ

ಎಲ್ಲಿ ಕಳೆದು ಹೋಯಿತು ಆ ಜಾತ್ರೆಯ ಸೊಬಗು ಬಿದಲೋಟಿ ರಂಗನಾಥ್ ಎಲ್ಲಿ ಕಳೆದು ಹೋಯಿತು ಆ ಜಾತ್ರೆಯ ಸೊಬಗು ಅದು ಎಂಬತ್ತರ ದಶಕ ಬಂದ ಫಸಲನ್ನು ಕೂಡಿಟ್ಟು ಮನೆಗೊಯ್ದು ಅವರೆ ಸೊಗಡನು ಬಿಡಿಸುವ ಕಾಲ, ಇನ್ನೂ ಕ್ಯಾಮೇನಹಳ್ಳಿ ಜಾತ್ರೆ ತಿಂಗಳಿರುವಾಗಲೇ , ಕೂಲಿ ನಾಲಿ ಮಾಡಿ ಬಂದ ಸಣ್ಣ ಕಾಸಿನಲ್ಲೇ ಮಕ್ಕಳಿಗೆ ಬಟ್ಟೆ ತರುವ ಅಪ್ಪನ ಇರಾದೆ. ವಾರದ ಮುಂಚೆಯೇ ಸಂತೆ ಬಟ್ಟೆ ತಂದು ಪೆಟಾರಿಯಲ್ಲಿ ಬಚ್ಚಿಡುವ ಪ್ರೀತಿ.ಅದರಲ್ಲು ಮೂವರು ಮಕ್ಕಳಿಗೂ ಒಂದೆ ತರಹದ ಬಣ್ಣ ಬಣ್ಣದ ಚಡ್ಡಿ ನಿಕ್ಕರುಗಳು.ಇದ್ಯಾಲ್ಲ ಒಂದು ರೀತಿಯಾದರೆ,ತಾತ ಅಜ್ಜ ಜಾತ್ರೆಗೆ ಬರುತ್ತಾರೆ ಐದೋ ಹತ್ತೋ ರೂಪಾಯಿ ಕೊಡುತ್ತಾರೆ ಎಂಬ ಖುಷಿ ಮನದೊಳಗೆ ಖುಷಿಯನ್ನು ಇಮ್ಮಡಿ ಮಾಡುತಿತ್ತು. ಬೊಮ್ಮಲ ದೇವಿಪುರದಿಂದ ನಡೆದೇ ಕ್ಯಾಮೆನಹಳ್ಳಿ ಜಾತ್ರೆ ತಲುಪುತ್ತಿದ್ದೆವು.ಆಗ ಬಲಿಷ್ಠರು ಮಾತ್ರ ಎತ್ತಿನ ಗಾಡಿಕಟ್ಟಿಕೊಂಡು ಹೋಗುತ್ತಿದ್ದರು.ನಮಗೆ ನಟರಾಜ ಎಕ್ಸ್ ಪ್ರೆಸ್ಸೇ ಗತಿ.ಎಲ್ಲರೂ ಕಣ್ಣಿಗೆ ಬೇಕಾದ್ದು ತಿಂದು ಖರೀದಿಸಿದರೆ,ಅಪ್ಪ ಕೊಟ್ಟಿದ್ದ ತಲಾ ಎರಡು ರುಪಾಯಿ ಕೇವಲ ಕನ್ನಡಕ್ಕೇ ಸರಿ ಹೋಗುತ್ತಿತ್ತು.ಊರಿನಿಂದ ತಾತ ಅಜ್ಜಿ ಬರುವವರೆಗೂ ನಾವು ಮಿಕ ಮಿಕ ಕಣ್ಣು ಬಿಡುತ್ತ ಗುಟುಕು ನೀರು ಕುಡಿಯುತ್ತಾ ಅವರಿವರನ್ನು ನೋಡುತ್ತಾ ಅಲ್ಲೊಂದು ಮರದಡಿ ನಿಂತಿರುತ್ತಿದ್ದೆವು. ಯಾರೋ ಒಬ್ಬರು ಮೊಳ ಹೂ ಖರೀದಿಸಿ ಇಷ್ಟಿಷ್ಟೇ ಎಲ್ಲರ ತಲೆಗೂ ಮುಡಿಸುತ್ತಿದ್ದರು. ಅದೆಂತಹ ಐಕ್ಯತಾ ಭಾವ. ತಾತ ಅಜ್ಜಿಯನ್ನು ಕಾದು ಕಾದು ಕಣ್ಣುಗಳು ಸೋತೆ ಹೋಗುತ್ತಿದ್ದವು.ಅಮ್ಮನ ಮುಖವಂತೂ ನೋಡಲಿಕ್ಕೇ ಆಗದ ಭಾವವೊಂದು ಸುಳಿದಾಡುತ್ತಿತ್ತು.ಅಪ್ಪನಿಗೆ ಹೇಗೂ ತೇರು ಹರಿವಾಗಲೇ ಬಂದ್ವಿ ನಡಿರಿ ಹೋಗೋನ.ದನ ಕರ ಮಂತಾಗೆ ಅವೆ.ಅಂತ ಪದೆ ಪದೇ ಅವಲತ್ತುಕೊಳ್ಳುತ್ತಾ ಮುಖ ಗಂಟಿಕ್ಕಿ ಕೊಳ್ಳುತ್ತಿದ್ದ ದೃಶ್ಯ ಇರಸು ಮುರಸಾಗುತ್ತಿತ್ತು.ಅಮ್ಮಳ ಕಣ್ಣುಗಳ ನೀರು ಕೆನ್ನೆ ಮೇಲೆ ಸೋರುವ ಹೊತ್ತಿಗೆ ತಾತ ಅಜ್ಜಿ ಕಾಣಿಸಿಕೊಳ್ಳುತ್ತಿದ್ದರು.ನಮಗಂತೂ ಖುಷಿಗೆ ಪಾರವೇ ಇರಲಿಲ್ಲ.ಬಂದು ಅಜ್ಜಿ ತಾತ ತಲಾ ಐದು ರೂಪಾಯಿ ಕೊಟ್ಟು.ಅಮ್ಮನಿಗೆ ಬಳೆ ತೊಡಿಸಿ ,ತಲೆಗೆ ಹೂ ಮುಡಿಸಿದ ಮೇಲೆಯೇ ಅಮ್ಮನ ಮುಖದಲ್ಲಿ ತವರಿನ ಕಳೆ ನವಿಲಾಗಿ ಗರಿಬಿಚ್ಚಿ ನಾಟ್ಯವಾಡುತ್ತಿತ್ತು.ಐದು ರೂಪಾಯಿಯಲ್ಲಿ ಕೈಗೊಂದು ವಾಚು ಪೀಪಿ ತಗೊಂಡು ಊರಿನ ದಾರಿ ಹಿಡಿಯುತ್ತಿದ್ದೆವು.ಕಲರ್ ಕನ್ನಡಕದಲ್ಲಿ ನಡೆದು ಹೋಗುತ್ತಿದ್ದರೇ ದಾರಿಯ ಮೇಲಿನ ಗುದ್ದರಗಳು ಲೆಕ್ಕಕ್ಕೇ ಇರಲಿಲ್ಲ.ಇಡೀ ವಿಶ್ವವೇ ಕಲರ್ಸ್ ಕನ್ನಡಕದ ಅಡಿಯಲ್ಲಿ ಕಾಣುತ್ತಾ ದಾರಿ ಸಾಗುವುದೇ ಗೊತ್ತಾಗುತ್ತಿರಲಿಲ್ಲ. ಅಂತಹ ಜಾತ್ರೆ ಸಂಭ್ರಮ ಇತ್ತಿಚೆಗೆ ನಾನು ಕಾಣಲೇ ಇಲ್ಲ.ತಾತ ಅಜ್ಜಿಯೂ ಇಲ್ಲ.! *******

ಇತರೆ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ರುಕ್ಮಿಣಿ ನಾಗಣ್ಣವರ ನೀ ಬರುವ ದಾರಿಯಲಿ ಕಂಗಳಿರಿಸಿ ಕಾಯುತಿರೆ ಕಾತುರದಿ ಸಂಧಿಸಲು ಬೇಗ ಬಾ ಕಾಣದ ನಿನ್ನನು ಹೊಳೆದಂಡೆಯೂ ಕೂಗುತಿರೆ ದಡಬಡಿಸಿ ಸಂತೈಸಲು ಬೇಗ ಬಾ ತುಟಿ ಮೇಲೆ ತರದ ಥರಥರ ಹೊಸಥರದ ಯೋಚನೆ ನೂರು ಪಟ್ಟಿ ಮಾಡಿರುವೆ ಎದುರು ಬದುರು ಕೂತು ಚರ್ಚಿಸಿ ನಾಳೆಗೊಂದ ಹೊಸಗನಸ ನೇಯಲು ಬೇಗ ಬಾ ಹೊತ್ತುಗಳೆಯಲರಿಯದ ಇಂದ್ರಿಯಗಳು ವಿರಹದಾಗ್ನಿಯಲಿ ಬೆಂದು ಚಡಪಡಿಸುತಿರೆ ಅಂಗೈಲ್ಹಿಡಿದ ಹರಳುಗಳು ಸಜೆ ಅನುಭವಿಸುತಿವೆ ಬಿಡುಗಡೆಗೊಳಿಸಲು ಬೇಗ ಬಾ ಹೃದಯಗೂಡಿನ ಬೆಚ್ಚನೆ ಭಾವಗಳು ನಿನಗಾಗಿ ಹಪಹಪಿಸಿ ಆತಂಕದಿ ತಲ್ಲಣಿಸುತಿರೆ ಎದೆಗೆದೆಯ ಬೆಸೆದು ತುಟಿಗೆ ತುಟಿ ಜಡಿದು ನನ್ನನ್ನೇ ಲೂಟಿ ಮಾಡಲು ಬೇಗ ಬಾ ಇರುಳ ದಾರಿಯಲಿ ಸುರಿದೊಲವ ಬೆಳಕ ತೊರೆದು ಹೋಗದಿರು ಕಡುವಿರಹ ಸುಡುತಲಿರೆ ‘ರುಕ್ಮಿಣಿ’ಯ ಒಂಟಿಹೆಜ್ಜೆಗೂ ನಿತ್ರಾಣ ಹೆಗಲಿಗ್ಹೆಗಲ ಜೋಡಿಸಿ ಕಾಲ ಸರಿಸಲು ಬೇಗ ಬಾ **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಎದೆಕದದ ಅಗುಳಿ ತೆಗೆದಂತೆ ಅದೊಂದು ಹಾಡು ಮತ್ತಕಡಲಲಿ ಮುಳುಗಿದಂತೆ ಅದೊಂದು ಹಾಡು ಚಿಟ್ಟೆಗಳ ಹಿಂಬಾಲಿಸುತ್ತ ಪರವಶ ಹುಡುಗ ಪುಲಕಗಳೆ ಬೊಗಸೆಗಿಳಿದಂತೆ ಅದೊಂದು ಹಾಡು ಸಂತೆಯ ಝಗಮಗಗಳಿಗೆ ಕಣ್ಣು ತೆತ್ತು ಪೋರಿ ಬಯಕೆಗಳಿಗೆ ಹರಯ ಬಂದಂತೆ ಅದೊಂದು ಹಾಡು ಕೋಲೂರಿ ತಡವರಿಸಿ ನಡೆದು ಇಳಿಸಂಜೆಗೆ ನೆನಪಮಡುವಲಿ ಮಿಂದಂತೆ ಅದೊಂದು ಹಾಡು ಸವೆದ ಜಾಡುಗಳ ಸವೆಸಿ ತಿರುಗಣಿ ಬದುಕು ‘ವಿಶು’ ನಡುವೆ ಕಾಡುವ ಕೊಳಲುಲಿಯಂತೆ ಅದೊಂದು ಹಾಡು ************

ಕಾವ್ಯಯಾನ Read Post »

You cannot copy content of this page

Scroll to Top