ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಇನ್ನೇನು ಬೇಕಿದೆ. ಪ್ರಮಿಳಾ ಎಸ್.ಪಿ. ಇನ್ನೇನು ಬೇಕಿದೆ. ಒಡೆದ ಹಿಮ್ಮಡಿಯೂರಿ ನಿಂತು ಎನ್ನ ಹೆಗಲಮೇಲಿರಿಸಿ ತಾನು ಕಾಣದ ಪರಪಂಚವ ನನಗೆ ತೋರಿಸಿದವ ನನ್ನಪ್ಪ. ಕುದಿಯುವ ಸಾರಿನೊಂದಿಗೆ  ಕುಳಿತ ಹೆಂಡತಿಯನು ತಣ್ಣೀರಿನೊಂದಿಗಾಡುವ ಮಕ್ಕಳನು ಮುದ್ದಾಡಿ ಬೆಳೆಸಿದ್ದ ನನ್ನಪ್ಪ. ಮಕ್ಕಳನು ಓದಿಸಲೇಬೇಕೆಂದು ಹಠಹಿಡಿದವಳು ….ನಾವು ಓದಿಕೊಂಡದ್ದು ಏನೆಂದು ತಿಳಿಯದವಳು ನನ್ನವ್ವ. ಕವಿತೆ ಬರೆಯಲು ಬಾರದವಳು ಮಕ್ಕಳ ಬದುಕನ್ನೇ ಸುಂದರ ಕವಿತೆಯಾಗಿಸಲು  ಭಾವವಾದವಳು ನನ್ನವ್ವ. ಹೀಗೆಲ್ಲಾ ಹೊಗಳಿ ಬರೆದ ನನ್ನ ಪ್ರಾಸವಿರದ ಕವಿತೆಗಳು ಬೇಕಿಲ್ಲಾ ಈಗ ಅವರಿಗೆ…! ಪಿಂಚಣಿ ಬಂದಿತೆ ಮಧುಮೇಹ ಮರೆಯಾಯಿತೆ ರಕ್ತದೊತ್ತಡ ಹೇಗಿದೆ ಎಂದೆಲ್ಲಾ  ಜಂಗಮ ಗಂಟೆ ಭಾರಿಸುವದು ಬೇಕಿಲ್ಲ ಅವರಿಗೆ…! ಇಳಿ ವಯಸ್ಸಿನವರ ಸನಿಹ  ಕುಳಿತು ಒಡಲಾಳದ ಮಾತನಾಡಿ ಮೊಮ್ಮಕ್ಕಳ ನಗುವಿಗೆ ನಗುವ ಬೆರೆಸಲು ನನ್ನುಪಸ್ಥಿತಿ ಬೇಕಿದೆ ಅವರಿಗೆ. ಕಾಣಬೇಕಿದೆ ನಾನು ಅವರಿಗೆ ಬೇಕಾಗಿದ್ದಾದರೂ ಇನ್ನೇನು!? ********

ಕಾವ್ಯಯಾನ Read Post »

ಇತರೆ

ನನಗೆ ಹೀಗನಿಸುತ್ತದೆ

ಕವಿತೆ ನನಗಿಷ್ಟ ಚಂದ್ರಪ್ರಭ ನನಗೆ ಹೀಗನಿಸುತ್ತದೆ…. ಕವಿತೆ ಬಗೆಗಿನ ಎಲ್ಲ ಆರಾಧನಾ ಭಾವಗಳಾಚೆ ಕವಿತೆ ಪುಸ್ತಕಗಳು ಅವಗಣನೆಗೆ ಒಳಗಾಗುವ ಸತ್ಯ ಬಹುಶಃ ಒಂದು ಕಾಲದ್ದಾಗಿಲ್ಲದಿರಬಹುದು. ಕವಿತೆ ಮೂಲತಃ ಒಂದು ಸಶಕ್ತ ಅಭಿವ್ಯಕ್ತಿ ಮಾಧ್ಯಮ. ಅದರ ಹರಿವಿನಗುಂಟ ಸಾಗುವಾಗ ಕೇಳಿಸುವ ಮೊರೆತವೂ ವಿಭಿನ್ನ. ಕವಿತೆ ನನಗೇಕೆ ಇಷ್ಟ ಎಂದೆನ್ನಿಸಿದ ಕ್ಷಣ ನನಗೆ ಹೀಗೆಲ್ಲ ತೋರಿತು… ಬಿಡುಗಡೆ ಗಾಗಿನ ಮನುಷ್ಯನ ಪ್ರಯತ್ನ ನಿರಂತರದ್ದು. ಒಂದಿಲ್ಲೊಂದು ಸಂಗತಿಯಿಂದ ಬಿಡುಗಡೆ ಹೊಂದುತ್ತ ಆಯುಷ್ಯವೇ ಕಳೆದು ಹೋಗುವುದು. ಯಾವುದರಿಂದ ಬಿಡುಗಡೆ, ಯಾರಿಂದ ಬಿಡುಗಡೆ, ಉಳಿದದ್ದು ಏನು, ಕಳಚಿಕೊಂಡದ್ದು ಏನನ್ನು ಎಂಬುದೆಲ್ಲ ಅಳವಿಗೆ ಸಿಗದೇ ಶೂನ್ಯತೆಯೊಂದು ಎದೆಯನ್ನು ಇರಿಯುವಾಗ.. ಎದೆಯಲ್ಲಿ ಉರಿಯುವಾಗ ಹನಿ ಹನಿ ಸಿಂಚನಗೈದು ಒಳಗಿನ ಆರ್ದ್ರತೆಯನ್ನು ಕಾಪಿಡುವ ಜೀವದಾಯಿನಿ ಕವಿತೆ. ಬದುಕಿನ ಬಗೆಗೆ ಭರವಸೆ ಉಳಿಯಲು ಇಷ್ಟು ಸಾಕಲ್ಲವೆ.. ಎಂಬ ಭಾವ ಮೂಡಿಸುವ ಸಂಗಾತಿ ಕವಿತೆ. ಹಿಂದೆಲ್ಲಾ ಎಷ್ಟು ನಿಧಾನವಾಗಿ ಬೆಳಗು ಆಗ್ತಿತ್ತು. ರಾತ್ರಿ ಕಳೆದು ಬೆಳಕಾಗುವಾಗ ಯುಗವೊಂದು ಸರಿದು ಹೋದ ಭಾವ ಮೂಡುವಷ್ಟು ನಿಧಾನ. ಬೆಳಕು ಹರಿದು ಮತ್ತೆ ಸಂಜೆಗತ್ತಲು ಕವಿಯುವಾಗಲೂ ಅಷ್ಟೇ, ಅಂದುಕೊಂಡ ಕೆಲಸಗಳೆಲ್ಲ ನೆರವೇರಿರುತ್ತಿದ್ದವು. ಈಗ ಹಾಗಿಲ್ಲ. ಓಡುತ್ತಿರುವುದು ಕಾಲುಗಳೊ ಕಾಲವೊ ಗೊತ್ತೇ ಆಗದ ವಿಚಿತ್ರ ಸನ್ನಿವೇಶ. ಸದಾ ಕಾಲವೂ ಮನಸ್ಸನ್ನು ಸತಾಯಿಸುವ ಎಂಥದೊ ಒಂದು ಪೀಡೆ, ಉದ್ವಿಗ್ನತೆ, ಅಶಾಂತಿ. ಯಾರಿಗೆ ಹೇಳಲಿ, ಏನು ಮಾಡಲಿ, ಹೊರಟುದೆಲ್ಲಿಗೆ, ದಾರಿ ಯಾವುದು ಎಂಬೆಲ್ಲ ಅಗಣಿತ ತುಂಡು ತುಂಡು ವಾಕ್ಯಗಳು. ಸಂತೆಯ ಸದ್ದಡಗಿ ಮೌನದೊಳು ಜಾರಿದ ಹೊತ್ತು ಸದ್ದೇ ಇಲ್ಲದೆ ಅರಳುವ ಪರಿಮಳ ಹೊತ್ತ ಮೊಗ್ಗು ಕವಿತೆ.. ಅಕ್ಷರಗಳು ಪದಗಳಾಗಿ ಪದಗಳು ಸಾಲುಗಳಾಗುವ ತಾಂತ್ರಿಕತೆಯೆಲ್ಲ ಮುಗಿವಾಗ ಆಂತರ್ಯದ‌ ಬೇಗುದಿ ಆವಿಯಾಗಿಯೊ ತೇವವಾಗಿಯೊ ಕರಗಿ ಹೋಗುವುದಿದೆಯಲ್ಲ ಅದು ಕವಿತೆಯ ಮೃದುವಾದ ಅಪ್ಪುಗೆ. ಹೀಗೆ ಹುಟ್ಟಿದ ಕವಿತೆ ಯಾರನ್ನೂ ಸೆಳೆಯಲಿಕ್ಕಿಲ್ಲ , ಅದನ್ನಾಲಿಸುವ ಕಿವಿಗಳು ಸಿಗಲಿಕ್ಕಿಲ್ಲ. ಆದರೆ‌ ತನ್ನೊಡನೆ ಏಕಾಂತವನ್ನು ಹಂಚಿಕೊಂಡ ಜೀವದ ಮೊರೆಯನ್ನು ನಿಶ್ಶಬ್ದವಾಗಿ ಆಲಿಸುತ್ತದೆ ಈ ಕವಿತೆ. ಬದುಕಿಗೆ ಬಣ್ಣ ತುಂಬದಿದ್ದರೂ ಬಣ್ಣ ಬಣ್ಣದ ಲೋಕದಲ್ಲಿ ಬದುಕು ಸಹ್ಯವಾಗುವಂತೆ ಮಾಡುತ್ತದೆ ಇದೇ ಕವಿತೆ. ಚೌಕಟ್ಟುಗಳನ್ನು ದಾಟುವುದನ್ನು, ಎಲ್ಲೆಗಳನ್ನು ಮೀರುವುದನ್ನು ಕಲಿಸುತ್ತದೆ ಈ ಕವಿತೆ. ನಾನು ಕರಗಿದಂತೆಲ್ಲ ಹುಟ್ಟುವ ವಿನಯದಿಂದ ಎಲ್ಲರೂ ನನ್ನವರು, ಎಲ್ಲವೂ ನನ್ನದು ಎಂಬ ಸರಳ ಸತ್ಯವನ್ನು ನುಡಿಯದೇ ನುಡಿದು ಬಿಡುತ್ತದೆ ಈ ಕವಿತೆ. ಮನುಷ್ಯರನ್ನು ಪರಿಚಯಿಸಿ ಮನುಷ್ಯನಾಗುವ ದಾರಿ ತೆರೆಯುತ್ತದೆ ಈ ಕವಿತೆ. ಯಾರಿಗೂ ಬೇಡವಾಗಿ ಪುಸ್ತಕದಲ್ಲೇ ಉಳಿದು ಬಿಡುವಾಗಲೂ ಕರೆದಾಕ್ಷಣ ಬಂದು ಬಿಡುವ, ಒದ್ದೆ ರೆಪ್ಪೆಗಳ ತೇವ ಸವರುವ ಸಖ/ಸಖಿ ಈ ಕವಿತೆ. ಮೌನವಾಗಿ ಎಲ್ಲವನ್ನೂ ಕೇಳಿಸಿಕೊಳ್ಳುತ್ತಲೇ ಸಾಗುವ ಸಹಪಥಿಕ ಕವಿತೆ. ಏನೊಂದನ್ನೂ ಮರು ನುಡಿಯದೆ ಬೆಳಗಿನ ಅರಿವಿನೆದುರು ಒಯ್ದು ನಿಲ್ಲಿಸಿ ಬಿಡುವ ಕವಿತೆ. ಮೌನ ಒಂದು ರಾಗವಾಗಿ, ಮೌನವೊಂದು ಗೀತೆಯಾಗಿ, ಮೌನ ಆಲಾಪವಾಗಿ ಮೌನವಾಗಿ ಬಿಡುವ ಆತ್ಮದ ಬೆಳಕು ಕವಿತೆ. ಆದ್ದರಿಂದ ಕವಿತೆ ನನಗಿಷ್ಟ…. *********

ನನಗೆ ಹೀಗನಿಸುತ್ತದೆ Read Post »

ಕಾವ್ಯಯಾನ

ಕಾವ್ಯಯಾನ

ಭರವಸೆ ನಾಗಶ್ರೀ ಸಾವಿರ ಬಾರಿ ಸೋತರು ಭರವಸೆಯೊಂದಿದೆ ಕಾಯುವ ಕನವರಿಕೆಯಲು ನಿನ್ನದು ಬರೀ ಹುಂಬತನ ಅರಿವಾಗುವುದು ಅಂತರ ಕಾಯ್ದುಕೊಳ್ಳಲು ಅದೆಷ್ಟು ಚಡಪಡಿಕೆಯೆಂದು ಅರಿಯಬೇಕಿತ್ತು ಅಂತರಾತ್ಮವ ಕಾದು ಕಾದು ಬೆಂಡಾದ ಭಾವನೆಗಳಿಗೆ ಸಮಯವೂ ಸೊಪ್ಪಾಕುತಿದೆ ನನ್ನ ನಾ ಅರಿಯದ ಇರಾದೆಗೆ ಅರ್ಥೈಸಲು ನೂರು ಬಾರಿ ಹೇಳುವ ಅವಶ್ಯಕತೆಯಾದರೂ ಇಲ್ಲವಲ್ಲ ಅರ್ಥಮಾಡಿಕೊಳ್ಳಲು ಒಂದು ಘಳಿಗೆ ಸಾಕಲ್ಲ ನಂಬಿಕೆಯ ಕವಲೊಳಗೆ ಅಪನಂಬಿಕೆಯ ಟಿಸಿಲುಗಳು ಮತ್ತೆದೆ ಹುಸಿಯ ನಂಬುವ ಹಂಬಲದತ್ತ ವಾಲುವ ಮನ ಕರುಳಿನ ನೋವು ಕಣ್ಣವರೆಗೂ ತಲುಪಿ ಕಣ್ಣರೆಪ್ಪೆಗೂ ನೋವಂತೆ ಕಣ್ತೆರೆಯಲಾಗದ ಮೋಸದ ಪ್ರಪಂಚಾವ ನೋಡಲು….. *******

ಕಾವ್ಯಯಾನ Read Post »

ಇತರೆ

ಜೀವನ್ಮುಖಿ

ಹೊಸ ವರ್ಷ ಹೊಸ ಹರ್ಷ ಜಯಲಕ್ಷ್ಮಿ ಕೆ. ಹೊಸ ವರ್ಷ -ತರಲಿ ಹರ್ಷ . “ಆದದ್ದು ಆಗಿ ಹೋಯ್ತು, ಮಣ್ಣಾಗಿ ಹೋದ ನನ್ನವರು ತಿರುಗಿ ಬರಲಾರರು. ಇರುವವನು ಇರುವಷ್ಟು ದಿನ ಬದುಕಬೇಕಲ್ಲ? ನನ್ನ ಗಾಡಿ, ನನ್ನ ಎತ್ತುಗಳೂ ಭೂಕಂಪದ ಅಂತರoಗ ಸೇರಿದ್ದರೆ ನನಗೆ ಕಷ್ಟವಾಗುತ್ತಿತ್ತು. ಪುಣ್ಯಕ್ಕೆ ಸ್ವಲ್ಪ ಹೊಲವೂ ಉಳಿದಿದೆ. ಬದುಕಬೇಕಾದ ನನ್ನ ಬದುಕಿಗೆ ಇಷ್ಟು ಸಾಕಲ್ಲ ….ಉಳಲು, ಬಿತ್ತಲು, ಮನೆಕಟ್ಟಲು …..” 1993 ರಲ್ಲಿ ಮಹಾರಾಷ್ಟ್ರದಲ್ಲಿ ಸಂಭವಿಸಿದ್ದ ಭಾರೀ ಭೂಕಂಪದಲ್ಲಿ ತನ್ನವರನ್ನೆಲ್ಲ ಕಳೆದುಕೊoಡಿದ್ದ ವೃದ್ದನೊಬ್ಬ ಪತ್ರಕರ್ತನ ಪ್ರಶ್ನೇಯೊoದಕ್ಕೆ ನೀಡಿದ ಉತ್ತರವಿದು. ಪ್ರಕೃತಿಯ ವಿಕೋಪಕ್ಕೆ ಬಲಿಯಾಗಿ ತತ್ತರಿಸಿ ಹೋಗಿದ್ದ ಲಾತೂರ್-ಉಸ್ಮಾನಾಬಾದ್ಗಳಲ್ಲಿ ಅಳಿದುಳಿದ ಜನರ ಸ್ಥಿತಿ -ಗತಿ ತಿಳಿದುಕೊಳ್ಳಲು ಹೋದ ಪತ್ರಕರ್ತನಿಗೆ ಎತ್ತಿನಗಾಡಿಯಲ್ಲಿ ಹೊಲದತ್ತ ಹೊರಟ ವೃದ್ದನೋರ್ವ ಕಣ್ಣಿಗೆ ಬಿದ್ದ. ತನ್ನ ಪ್ರಶ್ನೆಗಳಿಗೆ ಹತಾಶೆಯ ಶಿಖರದಿoದ ದುಃಖದ ಬುಗ್ಗೆಯನ್ನೇ ಚಿಮ್ಮಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಆತನಿಗೆ ಅಚ್ಚರಿಯಾಗಿತ್ತು! ಭೂತಕಾಲದ ನಶ್ವರತೆ -ಭವಿಷ್ಯದ ಬಗೆಗಿನ ವ್ಯರ್ಥ ಕಾಳಜಿ ಇವೆರಡನ್ನೂ ತೊರೆದು ವರ್ತಮಾನದಲ್ಲಿ ಬದುಕು ಸಾಗಿಸಬೇಕೆoಬ ಸತ್ವವನ್ನರುಹಿದ ಆ ವೃದ್ದ ಅವನಿಗೆ ತತ್ವಜ್ಞಾನಿಯoತೆ ಕಂಡಿದ್ದ. ” ನೆಲ ಕಚ್ಚಿ ನಿಲ್ಲು “ಎನ್ನುವ ಅಡಿಗರ ಸಾಲಿನ ಸಾರ ಇದುವೇ ಇರಬೇಕು. ಅದುವೇ ಜೀವನೋತ್ಸಾಹ. ಜೀವನ ಪ್ರೀತಿ ಅನ್ನೋದು ಒಂದು ಅಪರಾಜಿತ ಶಕ್ತಿ. ತನಗಾಗಿ ತಾನು ಬದುಕಬೇಕು ಎನ್ನುವ ವ್ಯಕ್ತಿಗೆ ಇರಲೇಬೇಕಾದ ಅಮೂಲ್ಯ ಆಸ್ತಿಯದು. ಈ ಉತ್ಸಾಹ-ಉಲ್ಲಾಸ ಅನ್ನೋದು ಎಲ್ಲಿoದಲೋ , ಯಾರಿಂದಲೋ ಪಡೆಯತಕ್ಕoತಹ ಅoಶವಲ್ಲ .ನಮ್ಮೊಳಗೇ ಸುಪ್ತವಾಗಿರುವ ಚೈತನ್ಯ. ಕೆಲವರು ಸದಾ ಕಾಲ ನಗುತ್ತಲೇ ಇರುತ್ತಾರೆ. ಹಾಗೆoದು ಅವರಿಗೆ ಸಮಸ್ಯೆಗಳೇ ಇಲ್ಲವೆoದಲ್ಲ ; ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಆಂತರಿಕ ಶಕ್ತಿ ಅವರಲ್ಲಿದೆ ಎಂದರ್ಥ. ಇನ್ನೈದು ನಿಮಿಷಗಳಲ್ಲಿ ಆಕಾಶವೇ ಕಳಚಿ ಬೀಳುತ್ತೆ ಎಂದರೆ ಆ ಐದು ನಿಮಿಷಗಳಲ್ಲಿ ಒಂದು ಕಪ್ ಕಾಫಿ ಹೀರಬಾರದೇಕೆ ..? ಎನ್ನುವ ಮನೋಭಾವದವರಿವರು. ಮಸಣದಲ್ಲೂ ಸಂತಸದ ಅಲೆಯನ್ನು ಹರಡಿದ “ನಗುವ ಬುದ್ಧ” ಅಥವಾ ಪು -ಟ್ಸೆ ಯ ವ್ಯಕ್ತಿತ್ವವನ್ನು ನಾವಿಲ್ಲಿ ನೆನೆಯಲೇಬೇಕು. ಝೆನ್ ಪದ್ಧತಿಯ ಶವ ಸಂಸ್ಕಾರಕ್ಕೆ ವಿರುದ್ಧವಾಗಿ “ನನ್ನ ಮೃತದೇಹವನ್ನು ಸುಡಬೇಕು ” ಎಂದು ಹೇಳಿದ್ದ ಈ “ನಗುವ ಬುದ್ಧ “ನ ಮಾತಿನಲ್ಲಿ ಒಂದು ವಿನೋದವಿತ್ತು. ಅದೇನೆoದರೆ, ಅವನು ತನ್ನ ಬಟ್ಟೆಯೊಳಗೆ ಪಟಾಕಿಗಳನ್ನು ತುoಬಿಕೊoಡಿದ್ದ. ಅವನ ದೇಹಕ್ಕೆ ಅಗ್ನಿ ಸ್ಪರ್ಶವಾಗುತ್ತಿದ್ದoತೆ ಸಿಡಿ ಮದ್ದು ಸಿಡಿಯಲಾರಂಭಿಸಿ ಸ್ಮಶಾನದಲ್ಲೂ ಹಬ್ಬದ ವಾತಾವಾರಣ ಸೃಷ್ಟಿಯಾಗಿತ್ತು. ಚಿಂದಿ ಬಟ್ಟೆಯ ಚೀಲ ಎನ್ನುವ ಅರ್ಥವನ್ನು ತನ್ನ ಹೆಸರಿನಲ್ಲಿ ಹುದುಗಿಸಿಕೊoಡಿದ್ದ ಪು -ಟ್ಸೆ ತಾನು ಹೋಗುವೆಡೆಗಳಿಗೆಲ್ಲ ಚೀಲ ತುoಬಾ ಸಿಹಿ ತಿoಡಿ ಒಯ್ದು, ಅವನ್ನೆಲ್ಲ ಮಕ್ಕಳಿಗೆ ಹಂಚಿ, ಚೀಲವನ್ನು ಆಗಸದೆತ್ತರಕ್ಕೆ ಎಸೆಯುತ್ತಾ ಜೋರಾಗಿ ನಗುತ್ತಿದ್ದ. ಅವನ ನಗುವಿನಲ್ಲಿ ಇತರರು ಪಾಲ್ಗೊಳ್ಳುವಷ್ಟರಲ್ಲಿ ತನ್ನ ಡೊಳ್ಳು ಹೊಟ್ಟೆಯ ಮೇಲೊಮ್ಮೆ ಕೈಯಾಡಿಸುತ್ತಾ ..ಸದ್ದಿಲ್ಲದೆ ನಗುತ್ತಾ ತನ್ನ ಚೀಲದೊoದಿಗೆ ಮತ್ತೊoದೂರಿಗೆ ಸಾಗುತ್ತಿದ್ದ. ಸಮಸ್ಯೆ ಎಂಬ ಚೀಲವನ್ನು ದೂರಕ್ಕೆಸೆದು ಸದಾ ನಗುತ್ತಿರಬೇಕು ಎನ್ನುವ ಆಶಯ ಅವನದಾಗಿತ್ತು.ತನ್ನ ವಿಚಿತ್ರ ರೂಪ -ವ್ಯಕ್ರಿತ್ವ ಬೇರೆಯವರಲ್ಲಿ ಯಾವ ಭಾವನೆ ಮೂಡಿಸೀತು ಎನ್ನುವ ಕಲ್ಪನೆ ಕೂಡಾ ಆತನಿಗಿರಲಿಲ್ಲ ..ಅದಕ್ಕೇ ಅವ ನಗುವ ಬುದ್ದನಾದ ! ಸೋಲಿಗೆ ಹತಾಶನಾಗದೆ, ಬದುಕಿನ ಏರಿಳಿತಗಳನ್ನು ಒಪ್ಪಿಕೊoಡು ನಡೆವ ವ್ಯಕ್ತಿ ಅನ್ಯರ ಹೊಗಳಿಕೆ -ತೆಗಳಿಕೆಗಳಲ್ಲಿ ತಾನು ಕಳೆದುಹೋಗುವುದಿಲ್ಲ.ಕಷ್ಟಗಳು ಬಂದರೂ ನಿವಾರಿಸಿಕೊoಡು ಮೈ ಕೊಡವಿ ನಿಲ್ಲುತ್ತಾನೆ.ಕೆಲವರು ತಮಗೆ ಬಂದ ಚಿಕ್ಕ -ಪುಟ್ಟ ಸಮಸ್ಯೆಗಳನ್ನೇ ಬೆಟ್ಟವಾಗಿಸಿಕೊoಡು ಅವರಿವರಿoದ ಪರಿಹಾರ ನಿರೀಕ್ಶಿಸುತ್ತಾರೆ. ತನ್ನೊಳಗೆ ತಾನು ಗಟ್ಟಿ ಇಲ್ಲದವನಿಗೆ ಯಾರ ಸಲಹೆಗಳೂ ಪರಿಹಾರವೆನಿಸದು. ಕೊಚ್ಚಿದಷ್ಟು ಹೆಚ್ಚಿ ಬರುವ ಪ್ರಕೃತಿಯoತೆ, ತುಳಿದ ಧೂಳು ಅವಮಾನವನ್ನು ಧಿಕ್ಕರಿಸಿ ನಮ್ಮ ಶಿರವೇರುವoತೆ, ಗೋಡೆಗೆಸೆದ ಚೆoಡು ಪುಟಿದು ಮತ್ತೆ ನಮ್ಮತ್ತ ಬರುವoತೆ ನಮ್ಮೆಲ್ಲರಲ್ಲೂ ಜೀವನೋತ್ಸಾಹ ಪುಟಿಯುತ್ತಿರಲಿ…ಹೊಸ ವರ್ಷ ಹರ್ಷದೊoದಿಗೆ ಆರoಭವಾಗಲಿ . *******

ಜೀವನ್ಮುಖಿ Read Post »

You cannot copy content of this page

Scroll to Top