ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

2019ಮುಗಿಯುತ್ತಿದೆ… ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹಳೆಯ ವರ್ಷಕ್ಕೊಂದು ವಿದಾಯ ಹೇಳಬೇಕಾಗಿದೆ

ಖ್ಯಾತ ಕವಿ ಗುಲ್ಜಾರರ ಕವಿತೆ ಹೇಳಿರುವ ವಿದಾಯದ ಸಾಲುಗಳು ನಿಮಗಾಗಿ

ಮೆಲ್ಲ ಮೆಲ್ಲನೆ ನಡೆ ಜೀವನವೆ

ತೀರಿಸಬೇಕಾದ ಋಣವಿನ್ನು ಉಳಿದಿದೆ !

ಇನ್ನಷ್ಟು ನೋವುಗಳ  ನಿವಾರಿಸಬೇಕಿದೆ,

ನಿಭಾಯಿಸುವ ಕರ್ತವ್ಯ ಇನ್ನಷ್ಟಿದೆ.

 ಹೊರಳಿ ನಡೆಯುವ ನಿನ್ನ ವೇಗಕೆ,

ಕೆಲವು ಕೈ ಜಾರಿದವು ಕೆಲವು ಮುನಿದವು

 ಮುನಿದವರ ಮನವೊಲಿಸಬೇಕಿದೆ,

ಅಳುವವರ ಮತ್ತೆ ನಗಿಸಬೇಕಿದೆ.

ಮನದ
ಬಯಕೆಗಳದೆಷ್ಟೋ ಅಪೂರ್ಣವಾಗಿವೆ,

ಕೆಲ ಅಗತ್ಯ ಕರ್ಮಗಳ ಮುಗಿಸಬೇಕಿದೆ.

 ಈಡೇರಿಸಲಾಗದ ಎದೆಯ ಬಯಕೆಗಳ

 ಅಲ್ಲೇ ಸಮಾಧಿ ಮಾಡಬೇಕಿದೆ.

ಅರಳಿ ಮುರಿದವು ಕೆಲ ಸಂಬಂಧಗಳು,

ಕೊಂಡಿ ಬೆಸೆದರೂ ಕೈ ತಪ್ಪಿದವು ಕೆಲವು.

ಕಡಿದುಕೊಂಡ ಸಂಬಂಧಗಳು
ಉಳಿಸಿಹೋದ

ಗಾಯಗಳ  ಮಾಗಿಸಬೇಕಿದೆ.

ನಡೆ
ಮುಂದೆ ನೀನು,ಬರುವೆ ನಾ ಹಿಂದೆ ಹಿಂದೆ.

ಬದುಕಲಾಗುವುದೇ ನಾ ನಿನ್ನನಗಲಿ?

ಈ ಉಸಿರ ಮೇಲೆ ಹಕ್ಕಿದೆ ಯಾರಿಗೆ,

ಅದ ಮನವರಿಕೆ ಮಾಡಿಸುವುದಿನ್ನೂ ಬಾಕಿ ಇದೆ.

ಮೆಲ್ಲ ಮೆಲ್ಲನೆ ನಡೆ ಜೀವನವೆ

ತೀರಿಸಬೇಕಾದ ಋಣವಿನ್ನು ಉಳಿದಿದೆ!


ಕವಿತೆ ಕನ್ನಡಕ್ಕೆ ಅನುವಾದಿಸಿದವರು-ಅವ್ಯಕ್ತ

About The Author

3 thoughts on “ಹಳೆಯ ವರ್ಷಕ್ಕೊಂದುವಿದಾಯ”

  1. ರಾಜೇಶ್ವರಿ

    ನಿಜಕ್ಕೂ ಅಮೋಘವಾಗಿದೆ . ಸರ್ ನಮ್ಮಲ್ಲಿ ಕವಿತೆ ಗಳಿದ್ದಲ್ಲಿ ಸ್ವರಚಿತ ಕಳಿಸಬಹುದೆ❓❓

Leave a Reply

You cannot copy content of this page

Scroll to Top