ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಚರ್ಚೆ

ನಿನ್ನೆ ಸಂಪಾದಕರು ಬರೆದ ‘ಜನರನ್ನತಲುಪುವ ಮಾರ್ಗ’ ಬರಹಕ್ಕೆಕವಿಮಿತ್ರರಾದ ಡಿ.ಎಸ್.ರಾಮಸ್ವಾಮಿಯವರು ನೀಡಿರುವ ಉತ್ತರ ಇಲ್ಲಿದೆ. ಈ ಚರ್ಚೆಯಲ್ಲಿ ನೀವೂ ಪಾಲ್ಗೊಳ್ಳಬಹುದು ಡಿ.ಎಸ್.ರಾಮಸ್ವಾಮಿ ಇವತ್ತಿನ ನಿಮ್ಮ ಬರಹ ನೋಡಿದೆ. ಸಾಹಿತ್ಯ ಪತ್ರಿಕೆಗಳು ಏಕೆ ನಿಲ್ಲಲಾರದೇ ಸೋಲುತ್ತಿವೆ ಎಂದು ಹೇಳ ಹೊರಟ ಬರಹ ಕಡೆಗೆ ಹತ್ತು ರೂಪಾಯಿಗೆ ಮುದ್ರಿಸಿ ಹಂಚುವ “ಜನಪ್ರಿಯ ಸಾಹಿತ್ಯ” ಪ್ರಸರಣದ ಲಾಭದವರೆಗೆ ಬಂದು ನಿಂತಿದೆ. ಕೆಲವು ವರ್ಷಗಳ ಕಾಲ ಎಡವೂ ಅಲ್ಲದ ಬಲಕ್ಕೂ ವಾಲದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗತಿಗಳಿಗಳಿಗೆ ಮೀಸಲಾದ ಖಾಸಗೀ ಪ್ರಸಾರದ ಪತ್ರಿಕೆಯೊಂದರ ಜೊತೆ ಗುರ್ತಿಸಿಕೊಂಡು ಆ ಪತ್ರಿಕೆಯು ವಿಶೇಷವಾಗಿ ತಂದ ಅದರ ೭೫ ಮತ್ತು ೧೦೦ ನೇ ಸಂಚಿಕೆಯ ಕಾವ್ಯ ವಿಶೇಷ ಸಂಚಿಕೆಗಳಿಗೆ ನಾಡಿನ ಖ್ಯಾತನಾಮರ ಕವಿತೆಗಳನ್ನು ಹೆಕ್ಕಿ ಓರಣಗೊಳಿಸಿ ನಿಜಕ್ಕೂ ನಿಲ್ಲುವಂಥ ಸಮೃದ್ಧ ಸಂಚಿಕೆ ಮಾಡಿದೆವು. ನಾವು ಆಯ್ಕೆ ಮಾಡಿದ ಕವಿಗಳಲ್ಲಿ ಕೆಲವರು ಸಂಭಾವನೆ ಕೊಡಲ್ಲವೆ ಅಂತ ಕೇಳಿದರೆ ಹಲವು ಕಾರಣಗಳಿಂದ ಹೊರಗುಳಿದ ಕವಿಗಳ ಖಾಯಂ ಶತೃತ್ವ ನನಗೊದಗಿತು. ಕವಿತೆಯೇ ಮುಖ್ಯ ಕವಿ ಆಮೇಲೆ ಅನ್ನುವ ಕಾರಣಕ್ಕೆ ಪರಿವಿಡಿಯಲ್ಲಿ ಬರೀ ಕವಿತೆಗಳನ್ನು ಅಕಾರಾದಿ ವಿಭಾಗಿಸಿ ಕಡೆಯಲ್ಲಿ ಕವಿಯ ವಿಳಾಸ ಕೊಟ್ಟಿದ್ದೆವು. ಅದಕ್ಕೂ ಪ್ರತಿರೋಧ ಬಂತು. ಅದಕ್ಕಿಂತ ಮುಖ್ಯವಾಗಿ ಎಡದವರು ನೀವು ಬಲಕ್ಕೆ ವಾಲುತ್ತೀರ ಅಂತ ನಮ್ಮನ್ನು ಹೊರಗಿಟ್ಟರೆ ಬಲದವರದು ಬಿಡಿ ಕಾಸು ಖರ್ಚಾಗದೇ ಬಿಟ್ಟಿ ಪ್ರಚಾರ ಬಯಸುವ ಅವರಿಗೆ ನಾವು ಸಂಸ್ಕೃತಿಯ ಮೇಲಣ ದಂಗೆಕೋರರಂತೆ ಕಂಡೆವು. ಸರಿಸುಮಾರು ಮೂವತ್ತು ವರ್ಷ ಆ ಪತ್ರಿಕೆಯನ್ನು ತಮ್ಮೆಲ್ಲ ಸಮಯ ಶ್ರಮ ಮತ್ತು ದುಡಿಮೆಗಳಿಂದ ನಡೆಸುತ್ತಿದ್ದ ಆ ಸಂಪಾದಕರನ್ನು ಅಷ್ಟೂ ದಿನ ಯಾವ ಯಾವ ಕಾರಣಕ್ಕೋ ಸಂಪರ್ಕ ಇರಿಸಿಕೊಂಡಿದ್ದ ಮಹಾಮಹಿಮರೆಲ್ಲ ಆ ಪತ್ರಿಕೆ ಇತ್ತು ಅನ್ನುವುದನ್ನೇ ಮರೆತು ಬಿಟ್ಟರು. ಇನ್ನೂ ಆಸಕ್ತಿಯ ವಿಚಾರವೆಂದರೆ ಆ ಪತ್ರಿಕೆ ಕನ್ನಡದ ಹೊಸ ಬರಹಗಾರರನ್ನು ಕಾಸು ಪೀಕದೇ ಪುಸ್ತಕ ಪ್ರಕಟಿಸುವುದರ ಮೂಲಕ ಬೆಳಸಿತ್ತು ಕೂಡ. ಯಾವತ್ತೂ ಈ ಖಾಸಗೀ ಪ್ರಸಾರಕ್ಕೆ ಅಥವ ಗುಂಪಿಗೆ ನಡೆಸುವ ಮುದ್ರಣವಾಗುವ ಪತ್ರಿಕೆಗಳಿಗೆ ಜಾಹೀರಾತು ಅಥವ ಕೊಡುಗೆಯ ಬೆಂಬಲ ಬೇಕೇ ಬೇಕು. ಇಲ್ಲವಾದರೆ ನಡೆಸೋದಾದರೂ ಹೇಗೆ? ಇನ್ನು ಪೋರ್ಟಲ್ ಮೂಲಕ ಸದ್ಯ ಲಭ್ಯವಿರುವ ಕನ್ನಡದ ಪತ್ರಿಕೆಗಳಿಗೆ ಓ(ನೋ)ದುಗರಿದ್ದಾರ ಪರಿಶೀಲಿಸಿದರೆ ನಿರಾಸೆ ಗ್ಯಾರಂಟಿ. ಆ ಕುರಿತು ಮತ್ತೊಮ್ಮೆ ಬರೆಯುವೆ. ಏಕೋ ನೀವು ಸುರುವಿನಲ್ಲೇ ನಿರಾಸೆಗೊಂಡಂತಿ‍ದೆ. ಮೊದಲು ತಿಳಿಯಬೇಕಾದ ಸತ್ಯ ಎಂದರೆ ಸಾಹಿತ್ಯ ಸಂಸ್ಕೃತಿ ಸಂಗೀತ ಇವೆಲ್ಲವೂ ಯಾವತ್ತೂ ಅಲ್ಪಸಂಖ್ಯಾತರು ಬಯಸುವಂಥವು. ಆದರೆ ಧರ್ಮ ಜಾತಿ ರಾಜಕೀಯ ಮತ್ತು ಮುಖ್ಯವಾಗಿ ಮನರಂಜನೆ ಬಹುಸಂಖ್ಯಾತರ ಇಷ್ಟದ ವಲಯ. ಹಾಗಾಗಿ ಅವನ್ನು ಪ್ರಸರಿಸುವ ಪತ್ರಿಕೆ ಗುಂಪು ಅಥವ ವಾಹಿನಿ ಯಾವತ್ತೂ TRP ಯಲ್ಲಿ ಮೇಲಿರುತ್ತದೆ. ಒಂದು ಬದ್ಧತೆಗೆ ಮತ್ತು ವ್ಯವಸ್ಥೆಯ ವಿಮರ್ಶೆಗೆ ನಿಂತವರು ನಿರಂತರ ಹೊಡೆದಾಡಲೇ ಬೇಕಾದ ಅನಿವಾರ್ಯತೆ ಇರುತ್ತದೆ. ದಯವಿಟ್ಟು ಕೈ ಚಲ್ಲದೇ ಮುಂದುವರೆಯಿರಿ. ಬೇರೆ ಯಾರಿಗೂ ಅಲ್ಲದಿದ್ದರೂ ನಿಮಗೆ ಇಷ್ಟವಾದ ಬರಹಗಳನ್ನು ಕೆಲವರಿಗಾದರೂ ಮುಟ್ಟಿಸಬಹುದೆನ್ನುವ ಅವಕಾಶಕ್ಕಾದರೂ ಮುನ್ನಡೆಯಿರಿ (ನೀವೂ ಈ ಚರ್ಚೆಯ ಭಾಗವಾಗಿಬರೆಯಬಹುದು)

ಚರ್ಚೆ Read Post »

ನಿಮ್ಮೊಂದಿಗೆ

ಜನರನ್ನು ತಲುಪುವ ಮಾರ್ಗ

ಕು.ಸ.ಮಧುಸೂದನ ರಂಗೇನಹಳ್ಳಿ ಸಾಹಿತ್ಯಕ ಪತ್ರಿಕೆಗಳ್ಯಾಕೆ ಜನರನ್ನುತಲುಪುತ್ತಿಲ್ಲ ಮತ್ತು  ದೀರ್ಘಕಾಲ ಬದುಕುತ್ತಿಲ್ಲ?ನನಗನಿಸಿದ್ದು- ನನ್ನ ಮುಂದೆ ಕೆಲವು ಸಾಹಿತ್ಯಕ ಪತ್ರಿಕೆಗಳಿವೆ. ಬಹುತೇಕ ಅವೆಲ್ಲವೂ ಪ್ರಗತಿಪರ ಲೇಖಕರೆನಿಸಿಕೊಂಡವರ ಬರಹಗಳಿಂದಲೇ ತುಂಬಿವೆ. ಹೆಚ್ಚೂಕಡಿಮೆ ಅವವೇ  ಲೇಖಕರೇ ಎನ್ನ ಬಹುದು.ಒಂದಿಷ್ಟಾದರು ಸಾಹಿತ್ಯ ಬಲ್ಲವರಿಗೇನೆ ಅರ್ಥವಾಗದಂತಹ    ಕಠಿಣವಾದ ತೀರಾ ಗಂಭೀರವಾದ ವೈಚಾರಿಕ ಬರಹಗಳು ಅವುಗಳಲ್ಲಿವೆ.ಹಾಗೆ ನೋಡುತ್ತಾ ಹೋದರೆ   ಆ ಸಾಹಿತ್ಯ ಪತ್ರಿಕೆಗಳು ಬರಹಗಾರರು ಮತ್ತವರ ಹಿಂಬಾಲಕರುಗಳ ನಡುವೆಯೇ ಪ್ರಸಾರಗೊಳ್ಳುತ್ತಿವೆ ಎನ್ನ ಬಹುದು. ಸಾಹಿತ್ಯಕ ವಲಯದ ಆಚೆ ಇರುವ ಸಾಮಾನ್ಯ ಓದುಗರನ್ನುಅವು ತಲುಪಿಲ್ಲ ಮತ್ತುತಲುಪಲು ಸಾದ್ಯವೂ ಇಲ್ಲ. ಯಾಕೆಂದರೆ ಸಾಮಾನ್ಯ ಓದುಗನೊಬ್ಬನಿಗೆ ನೇರವಾಗಿ ತಲುಪಬಲ್ಲಂತಹ  ಬರಹಗಳು ಅವುಗಳಲ್ಲಿ ಕಾಣಬರುವುದಿಲ್ಲ. ಹಾಗೆ ಗಂಬೀರವಾಗಿ ಬರೆಯುವುದೇ ತಮ್ಮ ಪ್ರತಿಭೆಯ ಅನಾವರಣ ಎನ್ನುವಂತಹ  ಭಾವನೆ ಬಹಳಷ್ಟು ಲೇಖಕರಿಗೆ ಇರುವಂತೆ ಕಾಣುತ್ತಿದೆ.  ಹೀಗಿರುವಾಗ ಸಾಹಿತ್ಯಕ ಪತ್ರಿಕೆಗಳು ಹೇಗೆ ಬದುಕಲು ಸಾದ್ಯ? ಸಾಹಿತ್ಯಕ ಪತ್ರಿಕೆಗಳನ್ನೂ ಸರಳವಾಗಿ, ಗಂಬೀರ ವಿಷಯವನ್ನೂ ಜನರನ್ನು ತಲುಪುವಭಾಷೆಯಲ್ಲಿ ತರದ ಹೊರತು ಯಾವ ಸಾಹಿತ್ಯ ಪತ್ರಿಕೆಯೂ ಬಹಳ ಕಾಲ ಬದುಕಲುಸಾದ್ಯವಿಲ್ಲ. ಅದರಪರಿಣಾಮವಾಗಿ ಪ್ರಗತಿಪರ ವಿಚಾರಧಾರೆಗಳು,ಕೋಮುವಾದ ಮತ್ತು ಬಂಡವಾಳಶಾಹಿ ಶಕ್ತಿಗಳಕುರೂಪಿ ಮುಖಗಳ ಪರಿಚಯ ಜನಸಾಮಾನ್ಯರಿಗೆಆಗುತ್ತಿಲ್ಲ. ಹೀಗಾಗಿಯೇ  ನಮ್ಮ ಹೋರಾಟಗಳು ಬಹುಜನರನ್ನುತಲುಪುತ್ತಿಲ್ಲಇನ್ನಾದರುನಮ್ಮ ಸಾಹಿತ್ಯ ಪತ್ರಿಕೆಗಳ ಲೇಖಕರು ತಮ್ಮ ನುಡಿಕಟ್ಟನ್ನು ಬಲಾಯಿಸಿಕೊಳ್ಳಬೇಕು.  ಸರಳವಾಗಿ ಜನರನ್ನು ತಲುಪುವಂತೆ ಬರೆಯುವುದೇ ಮಹಾಪರಾಧವೆಂದು ನಂಬಿಕೊಂಡಿರುವ ನಮ್ಮ  ಸಾಹಿತಿಗಳು ಸಹ ತಮ್ಮ ವಿಚಾರಸಂಕೀರ್ಣಗಳ, ವಿಶ್ವ ವಿದ್ಯಾನಿಲಯಗಳ ಗಾಂಭೀರ್ಯಭರಿತ ಶಬ್ದಗಳ ಹಂಗಿನಿಂದ ಹೊರಬಂದು  ಸಾಮಾನ್ಯರನ್ನು ತಲುಪಲು ಪ್ರಯತ್ನಿಸಬೇಕುಇಲ್ಲ ಜನರ  ಬಾಯಲ್ಲಿ ನಮ್ಮ ಹೆಸರು ಬಂದು ಪ್ರಚಾರ ಸಿಕ್ಕರೆ ಸಾಕು ನಮ್ಮ ಬರಹಗಳನ್ನು ಅವರು ಓದದೇ ಹೋದರೂ ನಡೆಯುತ್ತದೆ ಎಂದವರು ಬಾವಿಸಿದ್ದರೆ ನನ್ನದೇನೂ ತಕರಾರೇನಿಲ್ಲ.  ಅದೇ ನೀವು ಬಲಪಂಥೀಯ ವಿಚಾರಧಾರೆಯ ಪತ್ರಿಕೆಗಳನ್ನು  ಮತ್ತು ಪುಸ್ತಕಗಳತ್ತ ಗಮನಹರಿಸಿನೋಡಿ:   ಜನಸಾಮಾನ್ಯರಿಗೆ ಅರ್ಥವಾಗುವ ಬಾಷೆಯಲ್ಲಿ ತಮಗೇಒಗ್ಗುವ ಲೇಖಕರಿಂದ ಬರೆಸಿ ಅತ್ಯಂತಕಡಿಮೆ ಬೆಲೆಯಲ್ಲಿ ಪತ್ರಿಕೆ ಪುಸ್ತಕಗಳನ್ನು ಅವರು ಹೊರ ತರುತ್ತಿದ್ದಾರೆ. ಐದು ಹತ್ತುರೂಪಾಯಿಗಳಕಿರು ಹೊತ್ತಿಗೆಗಳನ್ನು ಮಾಡಿತಮ್ಮ ವಿಚಾರಧಾರೆಯನ್ನು ಜನರಿಗೆ ಸರಳವಾಗಿ ಅರ್ಥವಾಗುವ ಭಾಷೆಯಲ್ಲಿ ತಲುಪಿಸುತ್ತಿದ್ದಾರೆ ಹೀಗಾಗಿಯೇ ಬಲಪಂಥೀಯ ವಿಚಾರದಾರೆಗಳು ಜನಸಾಮಾನ್ಯರನ್ನು ವೇಗವಾಗಿ ತಲುಪಿ ,ಅವರು ಅದನ್ನೇ ಸತ್ಯವೆಂದು ನಂಬಿಕೊಂಡಿದ್ದಾರೆ.  ಇದರ  ನಡುವೆ ನಾವುಪ್ರಗತಿಪರ ವಿಷಯಗಳನ್ನು ಗಂಬೀರವಾಗಿ ಅವರಿಗೆ ಅರ್ಥವಾಗದ ಬಾಷೆಯಲ್ಲಿ ಹೇಳಿದರೆ ಅವರಿಗೆ ಸತ್ಯ ಸುಳ್ಳಿನ ನಡುವೆ  ವ್ಯತ್ಯಾಸಹೇಗೆ ತಿಳಿಯುತ್ತದೆ. ಹಾಗಾಗಿಯೇ ನಮ್ಮ    ವಿಚಾರಗಳೇನಿದ್ದರೂ ಸೆಮಿನಾರುಗಳಲ್ಲಿ ಕಮ್ಮಟಗಳಲ್ಲಿಯೇ ಕೊಳೆತು ಹೋಗುತ್ತಿವೆ. ಇದರಬಗ್ಗೆ ನಮ್ಮ ವಿಚಾರವಂತರು ಯೋಚಿಸಬೇಕಿದೆ ಕು.ಸ.ಮಧುಸೂದನ ರಂಗೇನಹಳ್ಳಿ

ಜನರನ್ನು ತಲುಪುವ ಮಾರ್ಗ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಕೃತಿ ಬಿಕರಿಗಿಟ್ಟ ಕನಸು-ಕಾವ್ಯ ಲೇಖಕರು: ದೇವು ಮಾಕೊಂಡ ಡಾ.ವಿಜಯಶ್ರೀ ಇಟ್ಟಣ್ಣವರ ಕವಿಯೊಬ್ಬ ಕಾವ್ಯ ನರ‍್ಮಿತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕೆಂದರೆ ಕಾವ್ಯ ಪ್ರತಿಭೆ ಅವಶ್ಯ. ಅದನ್ನೇ ಆಲಂಕಾರಿಕರು ‘ಕವಿತ್ವ ಬೀಜಂ ಪ್ರತಿಭಾನಂ’ ಎಂದಿದ್ದಾರೆ. ಹಾಗಾದರೆ ಕಾವ್ಯ ನರ‍್ಮಿತಿಗೆ ಪ್ರತಿಭೆಯೊಂದೇ ಸಾಕೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಲ್ಲ, ಪ್ರತಿಭೆಯ ಜೊತೆಗೆ ಬದುಕಿನ ವಿಭಿನ್ನ ಅನುಭವ, ಆಲೋಚನೆಗಳು ಕವಿಯೊಬ್ಬನನ್ನು ನರ‍್ಮಿಸುತ್ತವೆ. ಹೊಸದನ್ನು ಕಾಣುವ, ಕಾಣಿಸುವ ಮನಸ್ಸು, ಪ್ರಜ್ಞೆ ಕವಿಗೆ ಬೇಕು.ಇದನ್ನೇ ಆಲಂಕಾರಿಕರು ‘ಪ್ರಜ್ಞಾ ನವನವೋನ್ಮೇಶ ಶಾಲಿನಿ’ ಎಂದಿದ್ದಾರೆ. ಜೊತೆಗೆ ಕಟ್ಟಿದ ಕಾವ್ಯವನ್ನು ಮತ್ತೆ ಮತ್ತೆ ಓರಣಗೊಳಿಸುವ ಪ್ರಯತ್ನವೂ ಅವಶ್ಯ. ಈ ಮೂರೂ ಮುಪ್ಪುರಿಗೊಂಡಾಗ ಯಶಸ್ವಿಗೊಂಡಾಗ ಯಶಸ್ವಿ ಕವಿಯೊಬ್ಬನನ್ನು ನರ‍್ಮಿಸುತ್ತವೆ. ಮೊದಲ ಪ್ರಯತ್ನದಲ್ಲೇ ಈ ಮೂರೂ ಲಕ್ಷಣಗಳನ್ನೊಳಗೊಂಡ ಕವಿ ದೇವಿ ಮಾಕೊಂಡ. ‌‌‌‌‌ ದೇವು ಮಾಕೊಂಡ ದೇಸೀ ಸಂಸ್ಕೃತಿ-ಪ್ರಜ್ಞೆಯನ್ನುಳ್ಳ ಕವಿ. ಹಳ್ಳಿ ವಿಭಿನ್ನ ಅನುಭವಗಳ ಆಗರ. ಲೊಕಜ್ಞಾನದ ಕೇಂದ್ರ. ಮನುಷ್ಯನಿಗೆ ಹಳ್ಳಿ ಕೊಡುವ ಅನುಭವ ಸಂಪತ್ತನ್ನು ಪಟ್ಟಣ ಕಟ್ಟಿಕೊಡಲಾರದು. ಪಟ್ಟಣದ ಕಂಪೌಂಡ ಸಂಸ್ಕೃತಿಯ ಅಡಿಯಾಳಾಗಿರುವ ನಾವುಗಳು ಇಂದು ನಮ್ಮ ಸುತ್ತ ಸ್ವರ‍್ಥದ ಗೋಡೆಕಟ್ಟಿಕೊಂಡಿದ್ದೇವೆ. ಆದರೆ ದೇವು ಮಾಕೊಂಡ ಹಳ್ಳಿಯೊಳಗೊಂದಾಗಿ ಬದುಕಿದ ಆಧುನಿಕ ಮನುಷ್ಯ. ಅಂತಲೇ ಈ ವ್ಯಕ್ತಿಗೆ ಹಳ್ಳಿಯಿಂದ ದಿಲ್ಲಿ ದಿಗಂತದವರೆಗಿನ ಅಪಾರ ಲೋಕಜ್ಞಾನವಿದೆ. ಅವರಿಗೆ ತಾನು, ತನ್ನ ವೈಯಕ್ತಿಕ ಬದುಕು ಇದಿಷ್ಟೇ ಜೀವನವಲ್ಲ. ಅದರಾಚೆಗೂ ತುಡಿತ-ತಲ್ಲಣಗಳಿವೆ. ಅಂತಲೇ ಅವರಿಗೆ ಅನ್ಯಾಯ, ಅತ್ಯಾಚಾರ, ಪರಿಸರ ನಾಶ, ಕೋಮು ಸಂರ‍್ಷ, ಜಾತಿ ಅಸಮಾನತೆಗಳ ಕುರಿತು ರೋಷವಿದೆ. ವಿರೂಪಗೊಂಡ ದೇಶದ ಚಿತ್ರಣದ ಜೊತೆಗೆ ನಮ್ಮಲ್ಲಿ ಇನ್ನೂ ಜೀವಂತವಿರುವ ಪ್ರೀತಿ, ಪ್ರೇಮ, ನನ್ನೂರು. ನನ್ನ ದೇಶಗಳ ಕುರಿತು ಅಭಿಮಾನವಿದೆ. ಇದನ್ನೆಲ್ಲ ನೋಡಿದಾಗ ಕವಿಗೆ ಒಟ್ಟು ಬದುಕಿನ ಬಗೆಗಿರುವ ವಿಶಾಲ ದೃಷ್ಟಿಕೋನದ ಅರಿವುಂಟಾಗುತ್ತದೆ. ಅದಕ್ಕೆ ಸಾಕ್ಷಿ ಬಿಕರಿಗಿಟ್ಟ ಕನಸುವಿನಲ್ಲಿನ ಕಾವ್ಯಾಭಿವ್ಯಕ್ತಿಗಳು.‍ ‘ಬಿಕರಿಗಿಟ್ಟ ಕನಸು’ ಸಮನ್ವಯ ಮಾದರಿಯ ಕವನ ಸಂಕಲನ. ಇಲ್ಲಿಯ ಕವನಗಳಲ್ಲಿ ನವೋದಯದ ಜೀವನ ಪ್ರೀತಿ, ರಾಷ್ಟ್ರಭಕ್ತಿ, ಪ್ರಕೃತಿ ಪ್ರೀತಿ, ಆರ‍್ಶ ಕಲ್ಪನೆಗಳಿವೆ. ಪ್ರಗತಿಶೀಲರ ಪ್ರಗತಿಯ ದೃಷ್ಟಿಕೋನವಿದೆ, ಡೋಂಗಿ ಬಾಬಾಗಳನ್ನು ಬಯಲಿಗೆಳೆಯುವ ದಿಟ್ಟತನವಿದೆ. ನವ್ಯರ ಪ್ರತೀಕಾತ್ಮಕವಾಗಿ ಹೇಳುವ ಕಲೆಗಾರಿಕೆ ಇದೆ, ಬದುಕು-ದೇಶದ ಬಗ್ಗೆ ಭ್ರಮನಿರಸನವಿದೆ. ಬಂಡಾಯದ ಪ್ರತಿಭಟನಾ ಗುಣವಿದೆ. ಹೀಗೆ ಇದುವರೆಗಿನ ಕನ್ನಡ ಸಾಹಿತ್ಯ ಚಳುವಳಿಗಳಿಗೆಲ್ಲ ಇಲ್ಲಿ ಸ್ಪಂದನೆ ಇದೆ. ಜೊತೆಗೆ ರ‍್ತಮಾನಕ್ಕೂ ಪ್ರತಿಕ್ರಿಯೆ ಇದೆ. ಈ ಸಂಕಲನದಲ್ಲಿ ಒಟ್ಟು ೪೩ ಕವನಗಳಿವೆ. ಅವನ್ನು ಸ್ಥೂಲವಾಗಿ ಐದು ವಿಭಾಗಗಳನ್ನಾಗಿ ಮಾಡಿಕೊಂಡು ನೋಡಬಹುದು. ಕೋಮು-ಜಾತಿ ಸಂರ‍್ಷ , ಪ್ರೇಮಕವಿತೆಗಳು , ಪರಿಸರ ಕಾಳಜಿ, ರ‍್ತಮಾನಕ್ಕೆ ಪ್ರತಿಕ್ರಿಯೆ ಹೀಗೆ ಅನೇಕ ಭಾವದ ಕವಿತೆಗಳು ಈ ಸಂಕಲನದಲ್ಲಿವೆ. ಮನುಷ್ಯ ಮನುಷ್ಯನನ್ನು ಒಡೆಯುವ ರ‍್ಮ ಜಾತಿಗಳ ಕುರಿತಾಗಿ ಕವಿಗೆ ಅಪಾರವಾದ ಆಕ್ರೋಶವಿದೆ. ಅದನ್ನು ಬಿಕರಿಗಿಟ್ಟ ಕನಸು, ಗುಲಾಮಗಿರಿ, ಚಂದ್ರನ ಸಾಕ್ಷಿಯಾಗಿ, ನನ್ನೆದೆಯೇ ಮಹಾಗ್ರಂಥಗಳಂತಹ ಕವನಗಳಲ್ಲಿ ಕಾಣಬಹುದು. ಉದಾಹರಣೆಗೆ, ಬಿಕರಿಗಿಟ್ಟ ಕನಸು ಕವಿತೆಯಲ್ಲಿ “ಬಂದೂಕಿನ ನಳಿಕೆಯಲಿ ಗೂಡು ಕಟ್ಟಲು ಹೋದ ಹಕ್ಕಿ ಮೊಟ್ಟೆ ಇಟ್ಟ ಭ್ರೂಣ ತಟ್ಟದೇ ಅಳಿಯುತ್ತಿದೆ” ಎಂಬ ಸಾಲುಗಳಲ್ಲಿ ಕವಿಯ ನೋವು ಅಭಿವ್ಯಕ್ತಗೊಳ್ಳುತ್ತದೆ. ಮಾನವೀಯತೆಯ ಆಶಯ ಬಂದೂಕಿನ ಬಾಯಲ್ಲಿ ಗುಬ್ಬಚ್ಚಿ ಗೂಡುಕಟ್ಟಬೇಕೆಂಬುದು. ಆದರೆ ಗುಬ್ಬಚ್ಚಿ ಬಂದೂಕಿನ ಬಾಯಲ್ಲಿ ಗೂಡು ಕಟ್ಟಿ ಇನ್ನೇನು ಆ ಭ್ರೂಣಕ್ಕೆ ಕಾವು ಕೊಟ್ಟು ಮರಿಮಾಡಬೇಕು ಅಷ್ಟರಲ್ಲಿ ಆ ಗೂಡು ತತ್ತಿ ಸಹಿತವಾಗಿ ಇಲ್ಲವಾಗುವದು ಇಂದಿನ ಕರಾಳ ವಾಸ್ತವ. ಇಂಥ ಸಾಲುಗಳು ಕವಿಯ ಕಾವ್ಯ ಶಕ್ತಿಗೆ ಕೈಗನ್ನಡಿ. ಬಿಕರಿಗಿಟ್ಟ ಕವಿತೆ ಕೋಮು ದಳ್ಳುರಿಯ ಬೆಂಕಿ ಹೇಗೆ ಜಗತ್ತನ್ನೇ ಬೇಯಿಸುತ್ತಿದೆ, ಶಾಂತಿ ಸೌಹರ‍್ದತೆಯ ನೆಲೆವೀಡಾದ ತಾಣಗಳನೇಕ ಇಂದು ರಕ್ತದ ಮಡುವಾಗಿ ಭಯ ಹುಟ್ಟಿಸುವ ತಾಣಗಳಾಗಿರುವುದರ ಬಗ್ಗೆ ಕವಿಗೆ ವಿಶಾದವಿದೆ. ಬೆಂಕಿಯ ಮಳೆ ಕವಿತೆಯಲ್ಲಿ ಇಂದು ದೇಶಾದ್ಯಂತ ಭಯೋತ್ಪಾದನೆ, ನಕ್ಸಲ್ ಚಟುವಟಿಕೆ, ಅತ್ಯಾಚಾರ, ಅನ್ಯಾಯ, ಅಸಹಿಷ್ಣುತೆ ತಾಂಡವವಾಡುತ್ತಿವೆ. ದೇಶಕ್ಕೊದಗಿದ ಇಂಥ ದರ‍್ದೆಸೆಗೆ ಕವಿ ಮನಸ್ಸು ಘಾಸಿಗೊಂಡಿದೆ. ಗುಲಾಮಗಿರಿ, ನೊಂದವರು ನೋಯುತ್ತಲೇ ಇರುತ್ತಾರೆಯಂಥ ಕವಿತೆಗಳಲ್ಲಿ ಪರಂಪರಾಗತವಾಗಿ ಬಂದ ಯಜಮಾನ್ಯ ಸಂಸ್ಕೃತಿಯನ್ನು ಪುರೋಹಿತಶಾಹಿಯನ್ನು ಕವಿ ಪ್ರತಿಭಟಿಸುತ್ತಾನೆ. ಆದರೆ ಈ ಪ್ರತಿಭಟನೆ ಸೌಮ್ಯ ತೆರನಾದದ್ದಾಗಿದೆ. ‘ಗುಲಾಮಗಿರಿ’ ಕವಿತೆಯಲ್ಲಿ “ನನ್ನ ಸುಕ್ಕುಗಟ್ಟಿದ ನಲುಗಿ ಬಾಡಿದ ದೇಹದ ಹನಿ ರಕ್ತದಿಂದ ನಿನ್ನ ಸುಖದ ಗೋಪುರ ಕಟ್ಟಿರುವೆ ನನ್ನ ನೋವಿನ ಮಡುವಿನಿಂದ ನಿನ್ನ ಜೀವನ ಸಾಗಿದೆ” ಎಂದು ಪ್ರತಿಭಟಿಸುತ್ತಾನೆ ಕವಿ. ‘ಚಂದಿರನ ಸಾಕ್ಷಿಯಾಗಿ’ ಕವಿತೆಯಂತೂ ಕತೆಯಾಗುವ ಕವಿತೆ. ಲಂಕೇಶರ ದಾಳಿ ಕಥೆಯನ್ನು ನೆನಪಿಸುವ ಕವಿತೆ. ಪ್ರಕೃತಿ ತಾನೆ ಮನುಷ್ಯನನ್ನು “ನಿಮ್ಮ ಮನೆಯ ಮಗಳೆಂದು ರಕ್ಷಿಸಿ” ಎಂದು ಬೇಡಿಕೊಳ್ಳುವ ದಯನೀಯತೆ ಪ್ರಕೃತಿ ಎದುರಾಗಿದ್ದನ್ನು ದುಃಖದಿಂದ ಹೇಳುತ್ತಾನೆ ಕವಿ. ಸಂಬಂಧ-ಸಾಂಗತ್ಯ ಕವಿತೆಯಲ್ಲಿ “ಕಣ್ಣು-ಕಿವಿ ಮೂಗು-ಬಾಯಿ ತುಂಡರಸಿ ಕಾಮನೋಟ ಬೀರಿ ನಿತಂಬ ಕತ್ತರಿಸಿ ಹಾಕುವಾಗ ತನಿರಸ ಧಾರೆ ಎರೆದ ಗಳಿಗೆ ನೆನಪಾಗಲಿಲ್ಲವೆ?” ಎನ್ನುತ್ತಾನೆ ಕವಿ. ಇದು ಕವಿತೆಯ ಕೊನೆಯ ನುಡಿ. ಈ ನುಡಿಗೆ ಬರುವವರೆಗೂ ಕವಿ ಪ್ರಕೃತಿ ಮತ್ತು ಜೀವ ಸಂಕುಲದ ಮಧ್ಯದ ಅವಿನಾಭಾವ ಸಂಬಂಧವನ್ನು ರ‍್ಣಿಸುತ್ತಾ ಕೊನೆಗೆ ಈ ಮೇಲಿನಂತೆ ಹೇಳುತ್ತಾನೆ. ಪ್ರಕೃತಿಯ ಮೇಲೆ ಮಾನವನ ಕಾಮದ ಕಣ್ಣು ಬಿದ್ದಿದೆ. ಎಲ್ಲೆಲ್ಲ ಕಾಮದ ಕಣ್ಣು ಬೀಳುವದೋ ಅಲ್ಲೆಲ್ಲ ಸ್ವರ‍್ಥ ಮನೆ ಮಾಡುತ್ತದೆ. ಮಾನವ ದಾನವನಾಗಿ ಅಮಾನುಷವಾಗಿ ರ‍್ತಿಸಲಾರಂಭಿಸುತ್ತಾನೆ. ಅದನ್ನೇ ಕವಿ ಇಲ್ಲಿ ಹೀಗೆ ಕವಿತೆಯಾಗಿಸಿದ್ದಾನೆ. ಇನ್ನು ವಸಂತಕಾಲದ ಚಿಟ್ಟೆ, ನಲ್ಲೆ, ಬರಿ ನೋಟವಲ್ಲದಂತಹ ಮುದನೀಡುವ ಪ್ರೇಮ ಕವಿತೆಗಳಿವೆ. ಆರ‍್ಶ ಮೌಲ್ಯಗಳನ್ನು ಪ್ರತಿಪಾದಿಸುವ ನಾಡ ಕಟ್ಟತೇವ, ಭಾವಕೋಶವೊಂದೇ ಭಾರತಯಂತಹ ಕವಿತೆಗಳು ಸಂಕಲನದ ಮೌಲ್ಯ ಹೆಚ್ಚಿಸುತ್ತವೆ. ಜೊತೆಗೆ ರ‍್ತಮಾನಕ್ಕೆ ಕವಿಯ ಪ್ರತಿಕ್ರಿಯೆಯಾಗಿ ಗೋರಿಯೊಳಗಿನ ಹೂವು, ಭೀಮೆಯ ಸಿರಿಯಂತಹ ಕವಿತೆಗಳಿವೆ. ಹೀಗೆ ಕವಿ ವಿಭಿನ್ನ ವಸ್ತು, ಆಶಯ, ಸನ್ನಿವೇಶಗಳಿಗೆ ತನ್ನದೇರೀತಿಯಲ್ಲಿ ಪ್ರತಿಕ್ರಿಯಿಸುತ್ತಾನೆ, ಅಭಿವ್ಯಕ್ತಿಸುತ್ತಾನೆ. ಕವಿಯೊಬ್ಬನ ಕವಿತೆಗಳೆಲ್ಲ ಒಂದೇ ಎತ್ತರದಲ್ಲಿರಲು ಸಾಧ್ಯವಿಲ್ಲ, ಅದನ್ನು ಕವಿಯಿಂದ ನಿರೀಕ್ಷಿಸಲೂ ಬಾರದು. ಎಷ್ಟೇ ದೊಡ್ಡ ಕವಿಯಾದರೂ ಸಾರಸ್ವತಲೋಕದಲ್ಲಿ ಕವಿಯೊಬ್ಬ ನೆಲೆ ನಿಲ್ಲುವದು ಕೆಲವು ಕವಿತೆಗಳಿಂದ ಮಾತ್ರ. ಅಂತೆಯೇ ದೇವು ಮಾಕೊಂಡ ಸಹ ಸುಡಗಾಡ ಹೂ, ಬಿಕರಿಗಿಟ್ಟ ಕನಸು, ಗುಲಾಮಗಿರಿ, ನೊಂದವರು ನೋಯುತ್ತಲೇ ಇರುತ್ತಾರೆ, ಚಂದ್ರನ ಸಾಕ್ಷಿಯಾಗಿ, ಗೋರಿಯೊಳಗಿನ ಹೂ, ಬಿಳಿ ಕ್ರಾಂತಿಯ ಶಿಶು ಅಂತಹ ಕವಿತೆಗಳಿಂದ ಒಂದಿಷ್ಟು ಕಾಲ ಈ ಸಾರಸ್ವತ ಲೋಕದಲ್ಲಿ ನೆಲೆ ನಿಲ್ಲುತ್ತಾರೆ. ಎಲ್ಲಕ್ಕೂ ಮಿಗಿಲಾಗಿ ಕಾವ್ಯ ರಸಾನಂದವನ್ನು ನೀಡಬೇಕು ಎನ್ನುವರು ಅಂಥ ರಸಾನಂದವನ್ನು ನೀಡುವ ಕವಿತೆ ಬಿಳಿ ಕ್ರಾಂತಿಯ ಶಿಶು. ಹೀಗೆ ಮೋದಲ ಸಂಕಲನದಿಂದಲೇ ಭರವಸೆಯನ್ನು ಮೂಡಿಸಿದ ಕವಿ ಮುಂದಿನ ದಿನಮಾನಗಳಲ್ಲಿ ಮತ್ತೊಂದಿಷ್ಟು ಸಂಕಲನಗಳ ಮೂಲಕ ಕಾವ್ಯ ಸಂಪತ್ತನ್ನು ಹೆಚ್ಚಿಸಲಿ.

ಪುಸ್ತಕ ವಿಮರ್ಶೆ Read Post »

ಕಾವ್ಯಯಾನ

ಗಜಲ್

ಯಾರಿಗೆ ಯಾರು ಸಂಗಾತಿ? ವಿನುತಾ ಹಂಚಿನಮನಿ ಬಾಳಿನ ಬಂಡಿ ಎಳೆಯುವ ಕನಸಿನ ಕುದುರೆಗಳೇ ಯೋಚಿಸಿ ಹೇಳಿ ನಾಲ್ಕು ದಿನದ ಬದುಕಿನಲಿ ಯಾರಿಗೆ ಯಾರು ಸಂಗಾತಿ ಹೇಳಿ ಮರಕೆ ಕೋಮಲ ಲತೆಯೇ ಸಂಗಾತಿ ಹೃದಯಕೆ ಮಧುರ ಭಾವನೆಗಳೆ ಸಂಗಾತಿ ಲತೆಯ ಭಾವನೆ ಮರ ಅರಿಯದಾದರೆ ಹೃದಯದ್ದೇನು ತಪ್ಪು ಹೇಳಿ ಚಂದಿರನಿಗೆ ಹೊಳೆವ ತಾರೆಗಳೆ ಸಂಗಾತಿ ಸುಂದರ ತನುವಿಗೆ ನಿರ್ಮಲ ಮನವೇಸಂಗಾತಿ ನಕತ್ರಗಳಿಲ್ಲದ ಆಗಸದಲ್ಲಿ ಚಂದ್ರ ಏಕಾಂಗಿಯಾದರೆ ನಿಷ್ಟೆಯಿಲ್ಲದ ಮನದ ಮಾಲಿಕ ಕುರೂಪಿಯಲ್ಲವೇ ಹೇಳಿ ಹೂವಿಗೆ ಹಾರುವ ದುಂಬಿಯೇ ಸಂಗಾತಿ ನೋವಿಗೆ ಸುರಿವ ಕಂಬನಿಯೇ ಸಂಗಾತಿ ನಂಬಿದ ಹೂವಿಂದ ದುಂಬಿ ದೂರವಾದರೆ ಕಂಬನಿ ಒರೆಸುವವರು ಯಾರು ಹೇಳಿ ವಾರಿಧಿಗೆ ಭೋರ್ಗರೆವ ತೆರೆಗಳೆ ಸಂಗಾತಿ ಹರೆಯಕೆ ಸಂಭ್ರಮದ ಕನಸುಗಳೆ ಸಂಗಾತಿ ಅಲೆಗಳಿಲ್ಲದ ಕಡಲಲಿ ನಾವೆ ತೇಲದಾದರೆ ಕನಸುಗಳು ನನಸಾಗುವ ಬಗೆ ಹೇಳಿ ಹರಿವ ನದಿಗೆ ದಡವೇ ಸಂಗಾತಿ ಮರೆವ ಮನಕೆ ರೂಡಿಯೇ ಸಂಗಾತಿ ದಡದ ಗೊಡವೆ ನದಿಗೆ ಬೇಡವಾದರೆ ವಿನೂತನ ಮರೆತ ಮನಕೆ ಗತಿಯಾರು ಹೇಳಿ.

ಗಜಲ್ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಅವಳ ಕಣ್ಣುಗಳಲ್ಲಿ ಬೇಸಿಗೆಯ ಧಗೆಯನೆಲ್ಲ ಹೀರಿಬಿಡಬಲ್ಲ ಅವಳ ಕಣ್ಣುಗಳಲ್ಲಿ ಸದಾ ಒಂದು ಕನಸು ಬರಲಿಹ ನಾಳೆಗೆ. ಇಡಿ ಜಗದ ಕಸುವನೆಲ್ಲ ಹೀರಿಬಿಡಬಲ್ಲಂತ ಅವಳ ಕಣ್ಣುಗಳಲ್ಲಿ ಸದಾ ಒಂದು ಸೋನೆ ಒಳಗಿನ ದು:ಖಕ್ಕೆ. ಬದುಕಿನೆಲ್ಲ ವಿಷಾದಗಳ ಕೊನೆಗೊಳಿಸಬಲ್ಲಂತ ಉಡಾಫೆಯ ನೋಟವಿದ್ದ ಅವಳ ಕಣ್ಣುಗಳಲ್ಲಿ ಸದಾ ಒಂದು ನಗು ಮನುಜನ ಅಸಹಾಯಕತೆಗೆ. ಕಂಡಿದ್ದನ್ನೆಲ್ಲ ಮುಕ್ಕಿಬಿಡುವ ಹಸಿವಿದ್ದ ಅವಳ ಕಣ್ಣೊಳಗೆ ಸದಾ ಒಂದು ಆತುರ ಎದುರಿನ ಮಿಕದೆಡೆಗೆ. ನೋವುಗಳಿಗೆಲ್ಲ ಮುಕ್ತಿ ನೀಡುವ ಮುಲಾಮು ಇದ್ದ ಅವಳ ಕಣ್ಣೊಳಗೆ ಸದಾ ಒಂದು ನಿರಾಳತೆಯ ಭಾವ ನರಕಸದೃಷ ಬದುಕಿನೆಡೆಗೆ.. ಕು.ಸ.ಮಧುಸೂದನ

ಕವಿತೆ ಕಾರ್ನರ್ Read Post »

ಕಾವ್ಯಯಾನ

ಕಾವ್ಯಯಾನ

ಸಾವಿರದ ಸಾವಿರ ಕವಿತೆ ರವಿ ರಾಯಚೂರಕರ್ ಬಳಲಿ ಬೇಕೆಂದು ಬಿಕ್ಕಳಿಸಿ ಅತ್ತವನು ಎದೆಗಂಟಿ ನುಡಿ ನುಡಿದು ಆಸೆಯ ಗೋಪುರಕೆ ಹೊಸ ಕನಸುಗಳ ತುಂಬಿ ನೆಲಕಳಚಿ ಬಿದ್ದವನು ನೀನಲ್ಲವೇ ಹಸಿದು ಕುಳಿತಾಗ ಕುಟುಕಿ ಕಾಳನಿಟ್ಟು ನಿಟ್ಟುಸುರ ಹೆಜ್ಜೆಯಲಿ ಊರ ತಿರುಗಿದ ಬಿಕ್ಕು ಪ್ರಾಯದ ಪೊರೆ ಹರಿದು ಹದಿಹರೆಯದ ಒಲವನೆರದವನು ನೀನಲ್ಲವೇ ಬರಿ ಅರ್ಥಗಳನೆ ಈ ಮೌನಕೆ ತುಂಬಿ ಹಾಗೆ ತುಳುಕುವ ಸಾವಿರದ ಸಾವಿರ ಕವಿತೆಗಳ ಹಣತೆ ಹಚ್ಚಿ ಬೆಳಗಾಗುವವರೆಗೆ ಉರಿದು,ಸುಟ್ಟು, ಬೂದಿಯಾಗಿ ಈ ಕಣ್ಣ ಕಾಡಿಗೆಯಾದವನು ನೀನಲ್ಲವೇ ಶತಮಾನದ ನೋವಿಗೆ ಪ್ರೀತಿ ಒಂದೇ ಮದ್ದೆಂದು ಬಂಡಾಯವ ನನ್ನಲಿ ಬಿತ್ತಿ ದುಡಿದು,ತಡೆದು,ಮಣಿದು ರಮಿಸಿ,ಕ್ಷಮಿಸಿ,ಮುದ್ದಿಸಿ ಮುತ್ತಿನ ಮುದ್ರೆ ಹೊತ್ತಿ ಬೆಳಕಿಲ್ಲದೆ ದಾರಿಗೆ ಕೈ ಹಿಡಿದು ನಡೆಸಿಕೊಂಡೊದವರು ನೀನಲ್ಲವೇ ಕಿರು ಪರಿಚಯ: ಕನ್ನಡ ಉಪನ್ಯಾಸಕರು.’ಬಸವಮ ಕಾಲಿನ ಜೋಡಿ ಮೆಟ್ಟು’ಕವನಸಂಕಲನ

ಕಾವ್ಯಯಾನ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ನೀನು ಮಾತ್ರವೇ! ನೀನೊಂದು ಬರೀ ರಕ್ತಮಾಂಸದಏರುಯೌವನದ ಜೀವಂತ ಹೆಣ್ಣು ಮಾತ್ರವಾಗಿದ್ದರೆ ಇಷ್ಟೊಂದು ಪ್ರೀತಿಸುತ್ತಿರಲಿಲ್ಲ ನಾನು! ನನ್ನಗಾಢ ವಿಷಾದದ ಬಟ್ಟಲೊಳಗಿನ ಮಧು ನೀನುನನ್ನ ಒಂಟಿತನದ ನಟ್ಟಿರುಳುಗಳ ಕನಸು ನೀನುನನ್ನ ಅನಾಥಅಲೆಮಾರಿ ಹಗಲುಗಳ ಹುಡುಕಾಟ ನೀನುನಾನು ಕಳೆದುಕೊಂಡ ಎಲ್ಲವನೂಮೊಗೆಮೊಗೆದು ಕೊಡಬಲ್ಲ ಸಾವಿರದ ನೋವಿರದ ದೇವತೆ ನೀನು. ನೀನೊಂದು ಭೂಮಿಯ ಹಾಗೆ ನಾನೋ ನಿನ್ನತ್ತಲೇ ಸರಿಯುವ ಸುತ್ತುವ ಕ್ಷುದ್ರ ಗ್ರಹನಿರಾಕರಿಸಿದಷ್ಟೂ ನಿನ್ನ ಕನವರಿಸುವಕಷ್ಟದ ದಿನಗಳಲ್ಲಿಯೂ ಸತ್ಯವ ನುಡಿದು ಸರಳುಗಳಹಿಂದೆ ನರಳುತಿಹ ಜೀವ ಮಾತ್ರ ನಾನುಇಷ್ಟು ಮಾತ್ರ ಹೇಳಬಲ್ಲೆ ನನ್ನೆಲ್ಲ ತಪ್ಪುಗಳ ಕ್ಷಮಿಸಿನನ್ನ ಈ ಕೆಸರಿನಿಂದೆತ್ತಿ ಮತ್ತೆ ಜಗದ ಮುಂದೆತಲೆಯೆತ್ತಿ ನಿಲ್ಲಿಸಬಹುದಾದದ್ದು ನೀನು ಮಾತ್ರ!========== ಕು.ಸ.ಮದುಸೂದನ

ಕವಿತೆ ಕಾರ್ನರ್ Read Post »

ಕಾವ್ಯಯಾನ

ಕಾವ್ಯಯಾನ

ಗಜಲ್ ಸಿದ್ಧರಾಮ ಹೊನ್ಕಲ್ ಇಂಥವರ ನೆನಪಾದಾಗಲೆಲ್ಲ ನಿಟ್ಟುಸಿರೊಂದು ತಾನೇ ತಾನಾಗಿ ಹೊರಬರುತ್ತದೆ ಸಾಕಿ ಕಂಡಾಗಲೆಲ್ಲ ಗಂಟಲು ಕಟ್ಟಿ ಮಾತೆ ಮಥಿಸಿ ಮೌನ ಹೆಪ್ಪುಗಟ್ಟುತ್ತದೆ ಸಾಕಿ ಯಾರ ತಪ್ಪಿಗೆ ಯಾರ ಆಯುಷ್ಯಕ್ಕೆ ಯಾರು ಹೊಣೆ ಪಾಪ!ವವರು ಸಾಕಿ ಕುಂಕುಮ ಹೂ ಬಳೆ ಕೊನೆಗೆ ನಸು ನಗೆಯು ಮರೀಚಿಕೆಯಾಗುತ್ತದೆ ಸಾಕಿ ಸಂತೆಯೊಳಗೊಂದು ಮನೆಯ ಮಾಡಿ ಸುಮ್ಮನೆ ಶಬ್ದಕ್ಕೂ ಹೆದರಿ ಬಾಳುವದು ಇದೆಯಲ್ಲ ಅದು ಕಡುಕಷ್ಟ ಸಾಕಿ ಹದಿ ಬದೆಯ ಬಯಕೆಗಳ ತುಳಿದು ಹಸಿರುಟ್ಟು ಸಹ ಬರಡು ಮರದಂತೆ ಬದುಕಾಗುತ್ತದೆ ಸಾಕಿ ಫಲ ಪುಷ್ಪ ಹೂ ಬಿಡುವ ಹಸಿರು ಮರವು ಸಹ ಕಂಬನಿಗೆ ಕಾರಣವಾಗುತ್ತದೆ ಸಾಕಿ ಅಮಾಯಕರಿಗೆ ಬದುಕೇಕೆ ಇಷ್ಟು ಕ್ರೂರವಾಗಿ ಪರೀಕ್ಷೆಗೊಡ್ಡುತ್ತದೆ ಸಾಕಿ “ಹೊನ್ನಸಿರಿ” ಅಕ್ಕ-ಮೀರಾಳಂತೆ ಬದುಕು ಅಂತ ಹೇಳುವದು ಬಹು ಸುಲಭ ಸಾಕಿ ಬಯಕೆಗಳ ನುಂಗಿ ಬರೀದೇ ಬಾನಂಗಳದಲಿ ಚುಕ್ಕಿ ನೋಡುತ್ತಾ ಜಟಕಾಬಂಡಿಯಾಗುವದು ಕಡುಕಷ್ಟವಾಗುತ್ತದೆ ಸಾಕಿ. ಕಿರುಪರಿವಯ: ಪ್ರಕಟಿತ ಕೃತಿಗಳು- ಒಟ್ಟು 40 ಕೃತಿಗಳು.ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1996.ಪಂಚನದಿಗಳ ನಾಡಿನಲ್ಲಿ ಪ್ರವಾಸ ಕೃತಿಗೆ.ಗುಲ್ಬರ್ಗಾ ವಿವಿ ಚಿನ್ನದ ಪದಕ ಕಥೆಗಳಿಗೆ-1991,ರಾಜ್ಯೋತ್ಸವ ಪುರಸ್ಕಾರ,ಗುಲ್ಬರ್ಗ ವಿವಿ—2002 ಮತ್ತು 2006, ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಕೃತಿ. ನೆಲದ ಮರೆಯ ನಿಧಾನ ಕಥಾ ಸಂಕಲನಕ್ಕೆ ಸಂಕ್ರಮಣ ಸಾಹಿತ್ಯ ಪುರಸ್ಕಾರ-ಕಾವ್ಯ ಹಾಗೂ ಲಲಿತ ಪ್ರಬಂಧಕ್ಕೆ ಶ್ರೀ ವಿಜಯ ಪುರಸ್ಕಾರ, ಅತ್ತಿಮಬ್ಬೆ ಪುರಸ್ಕಾರ-ಗಾಂಧೀಯ ನಾಡಿನಲ್ಲಿ ಪ್ರವಾಸ ಕೃತಿಗೆ.ಹೀಗೆ ಅನೇಕ ಪುರಸ್ಕಾರ.

ಕಾವ್ಯಯಾನ Read Post »

ಅಂಕಣ ಸಂಗಾತಿ

ನಾನು ಕಂಡ ಹಿರಿಯರು

ಕೋಟ ಶಿವರಾಮ ಕಾರಂತ್ ಡಾ.ಗೋವಿಂದ ಹೆಗಡೆ “ವಿದ್ಯಾಸಾಗರ’ ಕಾರಂತರು (೧೯೦೨-೧೯೯೭) ಅದು ೧೯೭೭ರ ಬೇಸಿಗೆಯಿದ್ದಿರಬಹುದು. ತುರ್ತುಸ್ಥಿತಿಯನ್ನು ಹಿಂತೆಗೆದುಕೊಂಡು ಚುನಾವಣೆಯನ್ನು ಘೋಷಿಸಲಾಗಿತ್ತು. (ಇವೆಲ್ಲ ತಿಳಿದಿದ್ದು ನಂತರ,ಆಗ ಅಲ್ಲ.) ನಮ್ಮ ಊರಿನ ಬಳಿಯ ಉಮಚಗಿಯಲ್ಲಿ ಒಂದು ಕಾರ್ಯಕ್ರಮ. ಹತ್ತು ಹನ್ನೊಂದರ ಹುಡುಗ ನಾನು ಅಲ್ಲಿದ್ದೆ. ಎತ್ತರದ, ಗೌರವರ್ಣದ, ನೀಳ ಕೇಶದ ಪಂಚೆಯುಟ್ಟ ಹಿರಿಯರು ಮಾತನಾಡಿದರು. ಮುಂದೆ ಕುಳಿತಿದ್ದ ನಾವು ನಾಲ್ಕಾರು ಮಕ್ಕಳು ಕೆಲಹೊತ್ತು ಅವರ ಮಾತು ಕೇಳಿದೆವು ಏನೂ ತಿಳಿಯಲಿಲ್ಲ ; ಬೇಸರ ಬಂತು. ಗುಸುಗುಸು ಪಿಸುಮಾತು ಕೊನೆಗೆ ಜೋರಾಯಿತು. ಅವರು ನಮ್ಮನ್ನು ಗದರಿ ಮಾತು ಮುಂದುವರಿಸಿದರು. ಕೋಟ ಶಿವರಾಮ ಕಾರಂತರನ್ನು ನಾನು ಮೊದಲು ನೋಡಿದ್ದು ಹೀಗೆ. ಮುಂದೆ ಕಾಲೇಜು ದಿನಗಳಲ್ಲಿ ಅವರ ಅನೇಕ ಬರಹಗಳನ್ನು, ಹುಚ್ಚು ಮನಸ್ಸಿನ ಹತ್ತು ಮುಖಗಳನ್ನು ಓದಿದಾಗ ಕಾರಂತರ ಕಿರು ಪರಿಚಯವಾದದ್ದು. ೧೯೮೫ರಲ್ಲಿ ಮೈಸೂರಿನಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಳನ ನೆನಪಿನಲ್ಲಿ ಹಸಿರಾಗಿದೆ. ಉದ್ಘಾಟನೆಯಲ್ಲಿ ಅತಿಥಿ ಯಾಗಿದ್ದ ಕಾರಂತರು”ಬರದ ಕಾರಣ ಸಮ್ಮೇಳನ ನಡೆಯಕೂಡದು “ಎಂಬ ತಾರಕಕ್ಕೇರಿದ್ದ ವಿವಾದವನ್ನು ತಮ್ಮ ಮಾತಿನ ಆರಂಭದಲ್ಲೇ ಪ್ರಸ್ತಾಪಿಸಿದರು. ‘ ಬರ ದ ಕಾರಣಕ್ಕೆ ಮಸಾಲೆದೋಸೆ ತಿನ್ನುವುದನ್ನು ಬಿಟ್ಟಿದ್ದೇವಾ?’ ಎಂಬ ಅವರ ಮಾತು ಇನ್ನೊಂದು ವಿವಾದವನ್ನೇ ಸೃಷ್ಟಿಸಿತ್ತು. ೧೯೯೫/೯೬ ರ ಸುಮಾರಿಗೆ ಶಿರಸಿಯಲಿ ನಡೆದ ‘ಬಿ ಎಚ್ ಶ್ರೀಧರ ಸಾಹಿತ್ಯ ಪ್ರಶಸ್ತಿ’ ಸಮಾರಂಭದಲ್ಲಿ ಕಾರಂತರು ಮುಖ್ಯ ಅತಿಥಿ. ಪ್ರಶಸ್ತಿ ಪುರಸ್ಕೃತರು ದು ನಿಂ ಬೆಳಗಲಿ. ‘ಸ್ನೇಹಿತರೇ’ಎಂದು ಆರಂಭಿಸಿ ಇಪ್ಪತ್ತೈದು ಮೂವತ್ತು ನಿಮಿಷಗಳ ಕಾಲ ಮಾತನಾಡಿದ ಕಾರಂತರ ಒಂದು ಗುಡುಗು ಈಗಲೂ ನೆನಪಿನಲ್ಲಿದೆ. ಶಿರಸಿಯ ಬಳಿಯ ಯಾಣ ಒಂದು ಪ್ರಾಕೃತಿಕ ವಿಸ್ಮಯ. ಅಲ್ಲಿ ಬತ್ತಲೇಶ್ವರ ಎಂಬ ಕವಿ ಇದ್ದನಂತೆ. ಅವನ ಬತ್ತಲೇಶ್ವರ ರಾಮಾಯಣ ಕೃತಿ ಈಗ ಸಿಗುತ್ತಿಲ್ಲ ಎಂದು ವಿಷಾದಿಸಿದ ಕಾರಂತರು ಮರುಗಳಿಗೆಯಲ್ಲಿ ನಮ್ಮ ಜಡ ನಡತೆಯ ಮೇಲೆ ಕೆಂಡವನ್ನೇ ಕಾರಿದರು! “ಇಷ್ಟು ಜನ ಮೇಷ್ಟ್ರುಗಳಿದ್ದೀರಿ,ಕನ್ನಡದ ಹೆಸರಿನಲ್ಲಿ ಅನ್ನ ತಿನ್ನುತ್ತೀರಿ. ಅಂಥದೊಂದು ಪುಸ್ತಕವನ್ನು ಈ ನೆಲದ ಕೊಡುಗೆಯನ್ನು ಪುನರ್ಮುದ್ರಣ ಮಾಡುವ ಯೋಗ್ಯತೆ ಇಲ್ಲವೆ ನಿಮಗೆ?” ಎಂದರು… ಕಾರ್ಯಕ್ರಮದ ಕೊನೆಯಲ್ಲಿ ಮುದ್ದಾದ ಮಗುವನ್ನು ಯಾರೋ ಅವರ ಬಳಿ ತಂದರು. ಮಗುವಿನ ಗಲ್ಲ ನೇವರಿಸಿದ ಕಾರಂತರ ಹೊಳಪುಗಣ್ಣು ಕಲಾವಿದ, ಛಾಯಾಚಿತ್ರಗ್ರಾಹಕ ಜಿ ಎಂ ಹೆಗಡೆ ತಾರಗೋಡ ಅವರ ಕ್ಯಾಮರಾದಲ್ಲಿ ಸೆರೆಯಾದಂತೆ ನೆನಪು. ೧೦-೨-೧೯೦೨ ರಂದು ದಕ್ಷಿಣಕನ್ನಡದ ಕೋಟದಲ್ಲಿ ಜನಿಸಿದ ಕಾರಂತರು ಗಾಂಧೀಜಿಯವರ ಪ್ರಭಾವಕ್ಕೊಳಗಾಗಿ ಕಾಲೇಜು ಶಿಕ್ಷಣವನ್ನು ತ್ಯಜಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ, ಸಮಾಜ ಸುಧಾರಣೆಯಲ್ಲಿ ಸ್ವದೇಶಿ ಆಂದೋಲನದಲ್ಲಿ, ತೊಡಗಿಸಿಕೊಂಡವರು.. ಅವರು ಕಲಿತಿದ್ದು ಜಗದ ಶಿಕ್ಷಣ ಶಾಲೆಯಲ್ಲಿ. ಪತ್ರಿಕೆಯ ಸಂಪಾದಕ,ಪ್ರಕಾಶಕ ಮುದ್ರಣಾಲಯ ಸ್ಥಾಪಕ, ಮುದ್ರಕ, ಕಾದಂಬರಿಕಾರ, ಪ್ರಾಥಮಿಕ ಶಿಕ್ಷಣದಲ್ಲಿ ಪ್ರಯೋಗ ನಿರತ, ಮಕ್ಕಳಿಗಾಗಿ ಬಾಲಪ್ರಪಂಚ ವಿಜ್ಞಾನ ಪ್ರಪಂಚ ಹೀಗೆ ವಿಶ್ವಕೋಶಗಳನ್ನು ಬರೆದಾತ, ಯಕ್ಷಗಾನ ಕಲಿಕೆ ಕಲಿಸುವಿಕೆ ,ಅದರಲ್ಲಿ ಸಂಶೋಧನೆ ಮತ್ತು ಬರಹ, ಸಿನಿಮಾ ನಿರ್ದೇಶನ, ನಿಘಂಟು ಬರಹ, ಪರಿಸರ ಚಳುವಳಿ, ಪ್ರವಾಸ,ಫೋಟೋಗ್ರಫಿ ಹೀಗೆ ಕಾರಂತರ ವ್ಯಕ್ತಿತ್ವಕ್ಕೆ ಹಲವು ಮುಖಗಳು! ೪೩ ಕಾದಂಬರಿಗಳು, ಕವನಸಂಕಲನಗಳು, ಕಥಾಸಂಕಲನ, ಜ್ಞಾನ ವಿಜ್ಞಾನದ ಹಲವು ಶಾಖೆಗಳಲ್ಲಿ ಬರಹ…ಕಾರಂತರ ಬಗ್ಗೆ, ಅವರ ಬರಹಗಳ ಬಗ್ಗೆ ಬರೆದಷ್ಟೂ ಕಡಿಮೆಯೇ. ‘ವಿದ್ಯಾಸಾಗರ ಕಾರಂತರು’.. ಈ ಮಾತು ನನ್ನದಲ್ಲ. ದೇಜಗೌ ಅವರದು. ಪದ್ಮಭೂಷಣ ಪುರಸ್ಕಾರ,ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಹಲವಾರು ಗೌರವ ಡಾಕ್ಟರೇಟ್ ಗಳು, ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಹೀಗೆ ಅವರನ್ನು ಅಲಂಕರಿಸಿದ ಪ್ರಶಸ್ತಿ-ಪುರಸ್ಕಾರ, ಗೌರವಗಳು ಹಲವು. ತೊಂಬತ್ತೈದು ವರ್ಷಗಳ ತುಂಬು ಜೀವನ ನಡೆಸಿ ೯-೧೨-೧೯೯೭ರಂದು ನಿಧನರಾದರು ಈ ಕಡಲತಡಿಯ ಭಾರ್ಗವ. ಕನ್ನಡದ ಬದುಕನ್ನು ಹತ್ತು ಹಲವು ರೀತಿಗಳಲ್ಲಿ ಕಟ್ಟಿದ ಕಾರಂತರಿಗೆ ಅವರೇ ಸಾಟಿ. ಅವರ ಮಾತುಗಳನ್ನು ಕೇಳಿದ್ದೆ ಎಂಬುದು ನನ್ನ ಭಾಗ್ಯಗಳಲ್ಲಿ ಒಂದು. ಕೃತಿಗಳು ಕಾದಂಬರಿಗಳು-ಮೂಜನ್ಮ, ಯಾರು ಲಕ್ಷಿಸುವರು?,ಸರಸಮ್ಮನ ಸಮಾಧಿ, ಇದ್ದರೂ ಚಿಂತೆ, ಒಂಟಿ ದನಿ,ಮೈಮನಗಳ ಸುಳಿಯಲ್ಲಿ,ಮರಳಿ ಮಣ್ಣಿಗೆ,ಮೂಕಜ್ಜಿಯ ಕನಸುಗಳು, ಚಿಗುರಿದ ಕನಸು, ಚೋಮನದುಡಿ, ಗೊಂಡಾರಣ್ಯ, ಇಳೆಯೆಂಬ.., ಸ್ವಪ್ನದ ಹೊಳೆ, ಕುಡಿಯರ ಕೂಸು, ಬೆಟ್ಟದ ಜೀವ, ಔದಾರ್ಯದ ಉರುಳಲ್ಲಿ, ಮೊಗ ಪಡೆದ ಮನ, ಉಕ್ಕಿದ ನೊರೆ,ಆಳ ನಿರಾಳ, ಅದೇ ಊರು ಅದೇ ಮರ ,ಇನ್ನೊಂದೇ ದಾರಿ, ಜಗದೋದ್ಧಾರ ನಾ,ಬತ್ತದ ತೊರೆ,ಅಂಟಿದ ಅಪರಂಜಿ, ಗೆದ್ದ ದೊಡ್ಡಸ್ತಿಕೆ, ನಾವು ಕಟ್ಟಿದ ಸ್ವರ್ಗ, ಶನೀಶ್ವರನ ನೆರಳಿನಲ್ಲಿ, ನಂಬಿದವರ ನಾಕ-ನರಕ,ಮುಗಿದ ಯುದ್ಧ,ಧರ್ಮರಾಯನ ಸಂಸಾರ ಇತರ- ಬಾಲ ಪ್ರಪಂಚ, ವಿಜ್ಞಾನ ಪ್ರಪಂಚ, ಯಕ್ಷಗಾನ ಬಯಲಾಟ, ಪ್ರವಾಸ ಸಾಹಿತ್ಯ- ಅಬುವಿನಿಂದ ಬರಾಮಕ್ಕೆ, ಅಪೂರ್ವ ಪಶ್ಚಿಮ,ಅರಸಿಕರಲ್ಲ, ಪಾತಾಳಕ್ಕೆ ಪಯಣ ಆತ್ಮಕಥೆ- ಹುಚ್ಚು ಮನಸ್ಸಿನ ಹತ್ತು ಮುಖಗಳು ಸ್ಮೃತಿಪಟಲದಿಂದ (ಮೂರು ಭಾಗಗಳು) ಮಕ್ಕಳ ಸಾಹಿತ್ಯ- ಓದುವ ಆಟ-ಸಿರಿಗನ್ನಡ ಪಾಠ ಮಾಲಿಕೆ ಹುಲಿರಾಯ ಮೈಲಿಗಲ್ಲಿನೊಂದಿಗೆ ಮಾತುಕತೆಗಳು ನಚಿಕೇತ ಮರಿಯಪ್ಪನ ಸಾಹಸಗಳು ವಿಜ್ಞಾನ ಪ್ರಪಂಚ ಬಾಲ ಪ್ರಪಂಚ ಜೀವನ ಚರಿತ್ರೆ- ಪಂಜೆ ಮಂಗೇಶರಾಯರು ಶ್ರೀ ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆ ಕಲೆ ಶಿಲ್ಪಕಲೆ ಇತ್ಯಾದಿ- ಕಲಾದರ್ಶನ ಕಲಾಪ್ರಪಂಚ ಚಾಲುಕ್ಯರ ಶಿಲ್ಪಕಲೆ ಭಾರತೀಯ ಚಿತ್ರಕಲೆ ಅರಿವಿನ ಆನಂದ ಜ್ಞಾನ

ನಾನು ಕಂಡ ಹಿರಿಯರು Read Post »

You cannot copy content of this page

Scroll to Top