ಕಾವ್ಯಯಾನ
ಮೌನ ಮಾರಾಟಕ್ಕಿದೆ ತನುನಯ ಮೌನದ ಜೊತೆ ಮಾತು ಬಿಡುವ ಮನಸಾಗಿದೆ ಮೌನವೂ ಸಮ್ಮತಿಸಿ ಟೂ ಬಿಟ್ಟು ನಡೆದಿದೆ ಹಾಳು ಮಳೆಯ ಜೊತೆ ಕಾಡು ಹರಟೆ ಜೋರಾಗಿದೆ ನಿಲ್ಲುತ್ತಿಲ್ಲ ಮಾತಿನ ಮಳೆ ಮುಗಿಸುವ ಮನಸಿಲ್ಲದೆ ಮಳೆಗೂ ಮನಸಿಗೂ ಮಾತಿಲ್ಲದ ಜೊತೆಗಾರರಿಲ್ಲದೆ ಮಳೆಯೂ ಕೂಡ ಮೌನವನು ಮಾರಿಬಿಡು ಎನ್ನುತಿದೆ ಮಾತು ಮುಗಿಯುತ್ತಿಲ್ಲ ಮೌನವಿಂದು ಮಾರಾಟಕ್ಕಿದೆ ಮಾತಿನ ಸಂತೆಯಲಿ ಕೊಳ್ಳುವವರಿಲ್ಲದೆ ಮೌನ ಮರುಗುತ್ತಿದೆ ಕೊಳ್ಳುವೆಯ ಮೌನವನು ನಿನ್ನ ಮಾತು ಮರೆತು ಬರೆಯುವೆನು ಕವಿತೆಯ ನಿನ್ನೊಲವ ಅರಿತು… =====================


