ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವಳ ಕಣ್ಣುಗಳಲ್ಲಿ

Image result for photos  black eyes

ಬೇಸಿಗೆಯ ಧಗೆಯನೆಲ್ಲ ಹೀರಿಬಿಡಬಲ್ಲ
ಅವಳ ಕಣ್ಣುಗಳಲ್ಲಿ
ಸದಾ ಒಂದು ಕನಸು
ಬರಲಿಹ ನಾಳೆಗೆ.

ಇಡಿ ಜಗದ ಕಸುವನೆಲ್ಲ ಹೀರಿಬಿಡಬಲ್ಲಂತ
ಅವಳ ಕಣ್ಣುಗಳಲ್ಲಿ
ಸದಾ ಒಂದು ಸೋನೆ
ಒಳಗಿನ ದು:ಖಕ್ಕೆ.

ಬದುಕಿನೆಲ್ಲ ವಿಷಾದಗಳ ಕೊನೆಗೊಳಿಸಬಲ್ಲಂತ
ಉಡಾಫೆಯ ನೋಟವಿದ್ದ ಅವಳ ಕಣ್ಣುಗಳಲ್ಲಿ
ಸದಾ ಒಂದು ನಗು
ಮನುಜನ ಅಸಹಾಯಕತೆಗೆ.

ಕಂಡಿದ್ದನ್ನೆಲ್ಲ ಮುಕ್ಕಿಬಿಡುವ
ಹಸಿವಿದ್ದ ಅವಳ ಕಣ್ಣೊಳಗೆ
ಸದಾ ಒಂದು ಆತುರ
ಎದುರಿನ ಮಿಕದೆಡೆಗೆ.

ನೋವುಗಳಿಗೆಲ್ಲ ಮುಕ್ತಿ ನೀಡುವ
ಮುಲಾಮು ಇದ್ದ ಅವಳ ಕಣ್ಣೊಳಗೆ
ಸದಾ ಒಂದು ನಿರಾಳತೆಯ ಭಾವ
ನರಕಸದೃಷ ಬದುಕಿನೆಡೆಗೆ..


ಕು.ಸ.ಮಧುಸೂದನ

About The Author

Leave a Reply

You cannot copy content of this page

Scroll to Top