ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೀನು ಮಾತ್ರವೇ!

Blue and White Smoke Digital Wallpaper

ನೀನೊಂದು ಬರೀ ರಕ್ತಮಾಂಸದ
ಏರುಯೌವನದ ಜೀವಂತ ಹೆಣ್ಣು
ಮಾತ್ರವಾಗಿದ್ದರೆ ಇಷ್ಟೊಂದು ಪ್ರೀತಿಸುತ್ತಿರಲಿಲ್ಲ ನಾನು!

ನನ್ನಗಾಢ ವಿಷಾದದ ಬಟ್ಟಲೊಳಗಿನ ಮಧು ನೀನು
ನನ್ನ ಒಂಟಿತನದ ನಟ್ಟಿರುಳುಗಳ ಕನಸು ನೀನು
ನನ್ನ ಅನಾಥಅಲೆಮಾರಿ ಹಗಲುಗಳ ಹುಡುಕಾಟ ನೀನು
ನಾನು ಕಳೆದುಕೊಂಡ ಎಲ್ಲವನೂ
ಮೊಗೆಮೊಗೆದು ಕೊಡಬಲ್ಲ
ಸಾವಿರದ ನೋವಿರದ ದೇವತೆ ನೀನು.

ನೀನೊಂದು ಭೂಮಿಯ ಹಾಗೆ
ನಾನೋ ನಿನ್ನತ್ತಲೇ ಸರಿಯುವ ಸುತ್ತುವ ಕ್ಷುದ್ರ ಗ್ರಹ
ನಿರಾಕರಿಸಿದಷ್ಟೂ ನಿನ್ನ ಕನವರಿಸುವ
ಕಷ್ಟದ ದಿನಗಳಲ್ಲಿಯೂ ಸತ್ಯವ ನುಡಿದು ಸರಳುಗಳ
ಹಿಂದೆ ನರಳುತಿಹ ಜೀವ ಮಾತ್ರ ನಾನು
ಇಷ್ಟು ಮಾತ್ರ ಹೇಳಬಲ್ಲೆ ನನ್ನೆಲ್ಲ ತಪ್ಪುಗಳ ಕ್ಷಮಿಸಿ
ನನ್ನ ಈ ಕೆಸರಿನಿಂದೆತ್ತಿ ಮತ್ತೆ ಜಗದ ಮುಂದೆ
ತಲೆಯೆತ್ತಿ ನಿಲ್ಲಿಸಬಹುದಾದದ್ದು ನೀನು ಮಾತ್ರ!
==========

ಕು.ಸ.ಮದುಸೂದನ

woman wearing gray long-sleeved shirt facing the sea

About The Author

6 thoughts on “ಕವಿತೆ ಕಾರ್ನರ್”

Leave a Reply

You cannot copy content of this page

Scroll to Top