ವೈದೇಹಿ-75
ಇರುವಂತಿಗೆ ವೈದೇಹಿ ಗೌರವ ಗ್ರಂಥ ಸಮರ್ಪಣೆ ದಿನಾಂಕ:01-12-2019 ಭಾನುವಾರ ಬೆಳಿಗ್ಗೆ 10.30ಕ್ಕೆ ಪತ್ರಿಕಾಭವನ, ಶಿವಮೊಗ್ಗ ಸಾಹಿತ್ಯಾಸಕ್ತರಿಗೆ ಸ್ವಾಗತ
ಇರುವಂತಿಗೆ ವೈದೇಹಿ ಗೌರವ ಗ್ರಂಥ ಸಮರ್ಪಣೆ ದಿನಾಂಕ:01-12-2019 ಭಾನುವಾರ ಬೆಳಿಗ್ಗೆ 10.30ಕ್ಕೆ ಪತ್ರಿಕಾಭವನ, ಶಿವಮೊಗ್ಗ ಸಾಹಿತ್ಯಾಸಕ್ತರಿಗೆ ಸ್ವಾಗತ
ಲೋಕಾರ್ಪಣೆ ಹೆಚ್.ಎಸ್.ಸುರೇಶ್ ಸೂರ್ಯನ ಕಥೆಗಳು(ಕಥಾಸಂಕಲನ) ಹೊಗರೆ ಖಾನ್ ಗಿರಿ(ಕಾದಂಬರಿ) ನಮ್ಮೂರಿನ ಕಾಡು ಮಲ್ಲಿಗ(ಕಥಾ ಸಂಕಲನ) ತೀರ್ಪು(ಕಥಾ ಸಂಕಲನ) ಹೀಗೂಇದ್ದನೇ ರಾವಣ(ನಾಟಕ) ಪ್ರಶ್ನಿಸುವ ಸಾಹಿತ್ಯಕ್ಕೆ ದೇಶದ್ರೋಹದ ಪಟ್ಟ “ಇಂದುಜನಪರ ಸಾಹಿತ್ಯವು ಆತಂಕದ ಸ್ಥಿತಿಯಲ್ಲಿದೆ.ವ್ಯವಸ್ಥೆಯ ಲೋಪದೋಷಗಳನ್ನುಪ್ರಶ್ನಿಸುವ ಸಾಹಿತಿಗಳಿಗೆ ದೇಶದ್ರೋಹಿಗಳ ಪಟ್ಟ ಕಟ್ಟುವಹೊಸಸಂಪ್ರದಾಯ ಪ್ರಾರಂಭವಾಗಿದೆ: ಎಂದು ಹಿರಿಯ ಸಾಹಿತಿ ಶ್ರೀ ಕು.ಸ.ಮಧುಸೂದನರಂಗೇನಹಳ್ಳಿ ವಿಷಾದಿಸಿದರು. ಶ್ರೀಯುತರು ಲೋಕಾರ್ಒಣೆ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು ತರೀಕೆರೆಯಲ್ಲಿ ಬಾನುವಾರ (17-11-2019ರಂದು)ಶ್ರೀ ಹೆಚ್.ಎಸ್.ಸುರೇಶ್ ಅವರ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ್ಲಲ್ಲಿ ಅವರು ಮಾತನಾಡುತ್ತ “ಸಾಹಿತಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು,ಸತ್ಯಹುಡುಕಬೆಕು”ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ತಿನಮಾಜಿ ಅದ್ಯಕ್ಷರಾದ ಶ್ರೀ ಹೆಚ್. ಚಂದ್ರಪ್ಪನವರು ಅದ್ಯಕ್ಷತೆ ವಹಸಿದ್ದು,ಕಿರುತೆರೆಕಲಾವಿದೆ ಶ್ರೀಮತಿ ನಂದಿನಿ ಪಟವರ್ಷನ್ ಉದ್ಘಾಟನೆ ಮಾಡಿದರು.ಸಾಹಿತಿಗಳಾದಶ್ರೀನಾಗೇನಹಳ್ಳಿತಿಮ್ಮಯ್ಯ,ಶ್ರೀಭಗವಾನ್,ಎಂ.ಕೆ.ವಿಜಯಕುಮಾರ್,ಶ್ರೀಓಂಕಾರಪ್ಪನವರು ಉಪಸ್ಥಿತರಿದ್ದು ಕೃತಿಗಳ ಬಗ್ಗೆ ಮಾತನಾಡಿದರು.
ಕೃತಿ-ಗುಣ (ಕಾದಂಬರಿ) ಲೇಖಕರು-ಡಾ.ಗುರುಪ್ರಸಾದ್ ಕಾಗಿನೆಲೆ ಛಂದ ಪುಸ್ತಕ ಡಾ.ಅಜಿತ್ ಹರೀಶಿ ಶಿವಮೊಗ್ಗದಲ್ಲಿ ಹುಟ್ಟಿ ಬಳ್ಳಾರಿಯಲ್ಲಿ ಎಂಬಿಬಿಎಸ್.ಎಂಡಿ ಮಾಡಿ ಪ್ರಸ್ತುತ ಅಮೆರಿಕದಲ್ಲಿ ಎಮರ್ಜೆನ್ಸಿ ವೈದ್ಯರಾಗಿ ಕೆಲಸಮಾಡುತ್ತಿರುವ ಗುರುಪ್ರಸಾದರು ಬರೆದಿರುವ ಕಾದಂಬರಿಯಿದು. ಬಿಳಿಯ ಚಾದರ,ಗುಣ ಮತ್ತು ಹಿಜಾಬ್ ಅವರ ಪ್ರಕಟಿತ ಕಾದಂಬರಿಗಳು. ನಿರ್ಗುಣ, ಶಕುಂತಳಾ ಕಥಾಸಂಕಲನಗಳು, ಲೇಖನ ಸಂಗ್ರಹ-ವೈದ್ಯ ಮತ್ತೊಬ್ಬ, ಆಚೀಚೆ ಕಥೆಗಳು- ಸಂಪಾದಿತ ಕಥಾಸಂಕಲನಗಳನ್ನು ಇವರು ಪ್ರಕಟಿಸಿದ್ದಾರೆ. ಹಿಂದಿನ ದಶಕದಲ್ಲಿ ಅಮೆರಿಕೆಯಲ್ಲಿ ಘಟಿಸಿರಬಹುದಾದ, ಈ ದಶಕದಲ್ಲಿ ಭಾರತದ ಮಹಾನಗರಗಳಲ್ಲಿ ನಡೆಯುತ್ತಿರಬಹುದಾದ ಮತ್ತು ಮುಂದಿನ ದಿನಮಾನಗಳಲ್ಲಿ ನಾವೇ ಕಾಣಬಹುದಾದ ವಿಶಿಷ್ಟ ಕಥಾನಕವೇ ‘ ಗುಣ ‘ ಎನ್ನಬಹುದು. ಇದು ವಿದೇಶಿ ನೆಲದಲ್ಲಿ ಚಲಿಸುವ ಘಟನಾವಳಿಗಳ ನೋಟವಾದರೂ ಇದರ ಕೇಂದ್ರ ಭಾರತೀಯ ಮನಸ್ಥಿತಿಯೇ ಆಗಿದೆ. ಗೌತಮ ಮತ್ತು ಭಾರತಿ ಎಂಬ ವೈದ್ಯರ ಬದುಕಿನ ಕಥೆಯನ್ನು ಹೇಳುತ್ತಾ ವಾಸ್ತವದ ಮೇಲೆ ಬೆಳಕನ್ನು ಚೆಲ್ಲುತ್ತದೆ. ಅಮಿಗ್ಡಲ್, ಥ್ಯಾಲಮಸ್, ಹೈಪೊಥ್ಯಾಲಮಸ್ ಸೇರಿ – ‘ಅಮಿಗ್ಡಲ ಸರ್ಕ್ಯೂಟ್’ ಆಗುತ್ತದೆ. ಈ ಸರ್ಕ್ಯೂಟ್ ಬೇಗ ಫೈರ್ ಆಗುತ್ತದೆ. ಇದರಿಂದ ಸಿಟ್ಟು ಬಲು ಬೇಗ ಬರುತ್ತದೆ. ಅದೇ ಹೈಪೊಥ್ಯಾಲಮಸ್, ಥ್ಯಾಲಮಸ್ ಜೊತೆ ಪ್ರಿಫ್ರಂಟಲ್ ಕಾರ್ಟೆಕ್ಸ್ ಸೇರಿದರೆ ‘ ಪ್ರಿಫ್ರಂಟಲ್ ಸರ್ಕ್ಯೂಟ್’ ಆಗುತ್ತದೆ. ಇದು ಶಾಂತಿ, ಪ್ರೀತಿ ಮತ್ತು ತಾಳ್ಮೆಯ ಸರ್ಕ್ಯೂಟ್ . ಸೋ…. ಪ್ರಿಫ್ರಂಟಲ್ ಸರ್ಕ್ಯೂಟ್ ಸ್ಟಿಮ್ಯುಲೇಟ್ ಮಾಡಿಕೊಳ್ಳೋಣ. ಇದೇ ‘ ಮೈಂಡ್ ಫುಲ್ ಅವೇರ್ ನೆಸ್’ ಎಂಬಂತಹ ಶಕ್ತಿಯುತ ವೈದ್ಯಕೀಯ ಸಾಲುಗಳನ್ನು ಇಲ್ಲಿ ಕಾಣಬಹುದಾಗಿದೆ. ಜೊತೆಗೆ ಗೌತಮ ಮತ್ತು ಮಲಿಸ್ಸಾ ಎಂಬ ನರ್ಸ್ ಇರುವಾಗ ನಡೆಯುವ ಪೋಲಿ ಸಾಲುಗಳೂ ಇವೆ. ಗೌತಮ ಮತ್ತು ಭಾರತಿ ಅವರ ಮಗಳು ಕ್ಷಮಾಳ ಪಾತ್ರ ಸಶಕ್ತವಾಗಿದ್ದು ಗಮನ ಸೆಳೆಯುತ್ತದೆ. ಸ್ಟೀವ್ ವಾರೆನ್, ಕೀರ್ತಿ ಎಂಬ ಗೇ ಗಳ ಸಮಸ್ಯೆ ಮತ್ತು ಬದುಕು ಕಾಡುತ್ತದೆ. ಗುಂಡಪ್ಪ ಮತ್ತು ನರಸಿಂಹರಾಯರು ಈಗ ಬೆಂಗಳೂರಿನಲ್ಲಿ ಅಥವಾ ನಮ್ಮೂರಿನಲ್ಲಿ ಸಿಗಬಹುದು. ಅಂತೆಯೇ ಶಕುಂತಳಾ ಬಾಯಿ ಎಂಬ ಟಿಪಿಕಲ್ ವುಮನ್ ಕೂಡ. ಜನರೇಷನ್ ಗ್ಯಾಪ್, ಇಂದಿನ ತಲೆಮಾರು ಬಳಸುವ ಪದಪುಂಜ ಗೌತಮ ಮತ್ತು ಭಾರತಿ ಎಂಬ ಪಾಲಕರನ್ನು ಮಾತ್ರವಲ್ಲ, ನಮ್ಮನ್ನೂ ಯೋಚನೆಗೀಡುಮಾಡುತ್ತದೆ. ಫ್ರೆಂಡ್, ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಗಳ ವ್ಯತ್ಯಾಸ ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ. ಹೀಗೆ ವಿವಿಧ ಆಯಾಮಗಳನ್ನು ಹೇಳುತ್ತಾ ಕಥೆ ತೆರೆದುಕೊಳ್ಳುವ ಪರಿ ಅನನ್ಯವಾದುದು. ಒಂದು ಉತ್ತಮ ಕಾದಂಬರಿ ‘ಗುಣ’. ಗುಣಮಟ್ಟದ ಓದಿಗಾಗಿ ಖಂಡಿತಾ ಈ ಕೃತಿಯನ್ನು ಓದಿ.
ಪಂಚವರ್ಣದ ಹಂಸ ಸತ್ಯಮಂಗಲ ಮಹಾದೇವ ಕೃತಿ ಬಿಡುಗಡೆಯ ಸಂಭ್ರಮದ ಕ್ಷಣಗಳು ದಿನಾಂಕ: 04-11-2019 ಬಿಡುಗಡೆ: ಶ್ರೀ ಮಲ್ಲೇಪುರಂ.ಜಿ.ವೆಂಕಟೇಶ್ ಕೃತಿ ಕುರಿತು ಮಾತಾಡಿದವರು: ಡಾ.ಸಿ.ಎನ್. ರಾಮಚಂದ್ರನ್
ಬಂಟಮಲೆ ತಪ್ಪಲಿನಲ್ಲಿ ಪುಸ್ತಕಸಂಭ್ರಮ ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಮುಖ್ಯಸ್ಥ ಶ್ರೀ ಡಾ.ಪುರುಷೋತ್ತಮ ಬಿಳಿಮಲೆಯವರ-“ವಲಸೆ,ಸಂಘರ್ಷ ಮತ್ತು ಸಮನ್ವಯ” ಕೃತಿ ನವೆಂಬರ್ 9 ರಂದು ಲೋಕಾರ್ಪಣೆಗೊಳ್ಳಲಿದೆ. ಕೃತಿಯ ಹೆಸರು-“ವಲಸೆ, ಸಂಘರ್ಷ ಮತ್ತು ಸಮನ್ವಯ” ಲೇಖಕರು-ಡಾ.ಪುರುಷೋತ್ತಮ ಬಿಳಿಮಲೆ ಸ್ಥಳ-ಬಂಟಮಲೆ ತಪ್ಪಲಿನ ಬಿಳಿಮನೆ ಅದ್ಯಕ್ಷತೆ-ಟಿ.ಜಿ.ಮುಡೂರು ಬಿಡುಗಡೆ-ಪ್ರೊ.ಬಿ.ಎ.ವಿವೇಕ ರೈ ಅತಿಥಿಗಳು-ಪ್ರೊ.ಕೆ.ಚಿನ್ನಪ್ಪಗೌಡ ಮತ್ತು ಜಾಕೆ ಮಾದವಗೌಡರು.
ಕೃತಿ: ಭಾವಗಳು ಬಸುರಾದಾಗ. ಕವಿ:ಅರುಣ್ ಕೊಪ್ಪ ವಿಮರ್ಶೆ: ಜಿ.ವಿ.ಕೊಪ್ಪಲತೋಟ ಭಾವಗಳು ಬಸುರಾದಾಗ ಕವನ ಸಂಕಲನಕ್ಕೆ ಹಿರಿಯ ಪತ್ರಕರ್ತ ಶ್ರಿÃ ಜಯರಾಮ ಹೆಗಡೆ ಶಿರಸಿ ಮುನ್ನುಡಿ ಬರೆದಿದ್ದಾರೆ. ಬೆನ್ನುಡಿಯಲ್ಲಿ ಸಾಹಿತಿ ಡಾ|| ಬೇರ್ಯರಾಮಕುಮಾರ ಅವರು ಅರುಣಕೊಪ್ಪ ಅವರನ್ನು ಪರಿಚಯಿಸಿದ್ದಾರೆ. ಸಾಲದೂ ಎಂಬಂತೆ ಡಾ|| ಅಜಿತ್ ಹೆಗಡೆ ಹರೀಶಿಯವರೂ ಕೂಡಾ ಇವರನ್ನು ಓದುಗರಿಗೆ ಪರಿಚಯಿಸಿದ್ದಾರೆ. ಇವರ ಮೊದಲ ಕವನ ಸಂಗ್ರಹ ಹನಿಗಳ ಹಂದರ ಎರಡನೆ ಸಾಹಿತ್ಯ ಕೃತಿಯೇ ಭಾವಗಳು ‘ಬಸುರಾದಾಗ’ (ಕವನ ಸಂಕಲನ) ಈ ಸಂಕಲನದಲ್ಲಿ ಸಣ್ಣದು ದೊಡ್ಡದು ಸೇರಿ ಒಟ್ಟೂ ೭೬ ಕವನಗಳಿವೆ. ಭಾವಗಳು ಬಸುರಾದಾಗ ಏನಾಗುತ್ತದೆ? ಎಂಬುದಕ್ಕೆ ಕವಿ ಅರುಣ ನಾಯ್ಕ ಕೊಪ್ಪದವರ ಈ ಕವನ ಸಂಕಲನವನ್ನು ಓದಿದರೆ ಎಲ್ಲವೂ ಗೊತ್ತಾಗುತ್ತದೆ. ಎಂದು ಒಂದೇ ಮಾತಿನಲ್ಲಿ ಇದಕ್ಕೆ ವಿಮರ್ಶಿಸಬಹುದು. ಆದರೆ ಅದು ವಿಮರ್ಶಕನ ತರ್ಕಬದ್ಧ ಲಕ್ಷಣವಲ್ಲ ಮತ್ತು ಔಚಿತ್ಯವೂ ಅಲ್ಲ. ಮತ್ತು ಕವಿ ಇಟ್ಟುಕೊಂಡ ವಿಶಾಲ ಆಸೆ, ಆಕಾಂಕ್ಷೆ ಹರವನ್ನು ಮೊಟಕುಗೊಳಿಸಿದಂತಾಗಬಹುದೇನೂ?! ಅಲ್ಲದೇ ಬೆಳೆವ ಸಿರಿ ಮೊಳಕೆಯಲಿಯೇ ಚಿವುಟುವುದು ವಿಮರ್ಶೆ ಆಗಲಾರದು. ಕಾವ್ಯದ ಸಾರ, ಅದು ಸಾಗಿದ ಸತ್ಪಥ ಮತ್ತು ಕಾವ್ಯದ ಓದು ಅದು ಹೇಳುವ ಫಲಶ್ರುತಿ ಮತ್ತು ಅದರ ಒಳಧ್ವನಿ ಏನು ಎಂಬುದನ್ನು ತೆರೆದಿಡುವುದೇ ಒಂದು ವಿಮರ್ಶೆ ಎನಿಸಿಕೊಳ್ಳುತ್ತದೆ. ಕಾವ್ಯ ಅಥವಾ ಕವನ ಅದೇನು ಅಷ್ಟು ಸುಲಭವೇನಲ್ಲ. ಹೀಗೆ ಕಾವ್ಯ ರೂಪದಲ್ಲಿ ಹೇಳುವಾಗ ವಿಷಯದ ಪ್ರತಿಪಾದನೆ ಇಟ್ಟುಕೊಂಡಿರುವ ವಸ್ತುವಿನ ಅಸ್ತಿತ್ವ ಮತ್ತು ಭಾವ ಪ್ರತಿಮೆಗಳ ತುಲನಾತ್ಮಕ ಚಿಂತನೆ ಮಾಡುವದು, ಕಾವ್ಯ ರಚನೆಯ ನೀತಿ ಸಂಹಿತೆಯ ಉಲ್ಲಂಘನೆಯಾಗದಂತೆ ರಚಿಸುವುದೇ ಕವಿಯ ಮೇಧಾಶಕ್ತಿಗೆ ಒಡ್ಡುವ ಸವಾಲಾಗಿರುತ್ತದೆ. ಒಳ ಮನಸ್ಸಿನ ಆಳದಲ್ಲಿ ಹುದುಗಿದ ಯೋಚನೆಯನ್ನು ಭಾವನಾತ್ಮಕವಾಗಿ ಹೊರಹಾಕುವ ಮುನ್ನ ಅದು ಬಸುರಲ್ಲಿ ಬೆಳೆಯುತ್ತಿರುವ ಮಗುವಂತೆಯೇ ಎಂಬುದನ್ನು ಶ್ರಿÃ ಕೊಪ್ಪರÀವರು ತಮ್ಮದೇ ಆದ ಶೈಲಿಯಲ್ಲಿ ಸಾಕಷ್ಟು ಅರ್ಥಪೂರ್ಣವಾಗಿ ಹೇಳಿದ್ದಾರೆ. ಉದಾ :- ಕವನ ೧ ಅವ್ವನ ಕನಸು ಪ್ರಿÃತಿ ಪಾತ್ರ ನಾ ಇಷ್ಟಿತ್ತು ಮಮತೆಯ ಘನತೆ ಸಲ್ಲಿಸುವ ಗೌರವಕೆ ಕಿಂಚಿತ್ತು ಹೆಚ್ಚಲ್ಲ ಈ ಹೃದಯದಿಂದ ಹಸಿವಾದ ಈ ಮನಸ್ಸಿಗೆ ನೀಗಲು ಸಾಕು ನನ್ನ ಅವ್ವನ ಕನಸು ಹೇಗೆ ತಮ್ಮ ಮನಸನ್ನು ಕಾವ್ಯಾತ್ಮಕವಾಗಿ ಮಾರ್ಪಡಿಸಿಕೊಳ್ಳುವ ರೀತಿ ತುಂಬಾ ಹರಿತ ಮತ್ತು ಮೇಲ್ಸ್ತರದ ವಿಚಾರಗಳಾಗಿವೆ. ಕವನ ೬ ವೇದಿಕೆ : ಒಂದೇ ಬೇರು ಒಂದೇ ಕೊಂಬೆ ಹಸಿರು ಹಲವು ಸದಾ ಏಕತೆಯ ಉಸಿರು ರಂಗು ಈ ಸಂಜೆ ಹೀಗೆ ಹಲವು ಹತ್ತು ಕವನಗಳ ಸಾಲಿನಲ್ಲಿ ಶೃಜನಶೀಲತೆ ಇದೆ. ಉದಾ : ಕವನ ೮ :- ಮೂಡುವ ಕಾಡುವ ಮನಗಳ ಮಾತಿಗೆ ಹಾಡು ಪಾಡುವ ಒಲವಿನ ಗಡಿಬಿಡಿಗೆ ನಾ ಹೇಗೆ ಹೋಗಿ ಸಹಿಸಲಿ ನೀ ಹೇಳು ಹೇಗೆ ಮನಸ್ಸಿನ ಭಾವನೆಗಳನ್ನು ಭಾವನೆಯ ಬಸುರಲ್ಲಿಟ್ಟು ಹೇಳುವ ಅವರ ಮನಸ್ಸಿನ ಸ್ಥಾಯಿ ಸ್ಥಿತಿ ಅದರ ಮೇರು ವಿಚಾರಕ್ಕೆ ಮೆರಗು ತಂದಿದೆ. ಉದಾಃ ಕವನ ೬೦ : – ಶೀರ್ಶಿಕೆಯ ಕವನ “ಭಾವಗಳ ಬಸುರಾದಾಗ” ಇದರಲ್ಲಿ ಭಾವಗಳು ಬಸುರಾದಾಗ ಹರಿಸುವುದು ಸಂಗೀತ ಸಾಹಿತ್ಯದ ಕಾವ್ಯ ರಸದೌತಣ ಎಂದಿದ್ದಾರೆ. ಭಾವದ ಅಭಿವ್ಯಕ್ತಿಗೆ ಸಾಹಿತ್ಯ ಸಂಗೀತಕಲೆ ಎಲ್ಲವೂ ಲೀನವಾಗುತ್ತದೆ ಎಂಬುದನ್ನು ಸಾರವತ್ತಾಗಿ ಬಣ್ಣಿಸಿದ್ದಾರೆ. ಕವಿಯನ್ನು ಹೊಗಳಿ ಹೊಗಳಿ ಹೊನ್ನ ಶೂಲಕ್ಕೆÃರಿಸುವುದು ವಿಮರ್ಶೆಯೆ ಸರಿ ಸಮರ್ಪಕ ಪರಿಕಲ್ಪನೆಯಾಗಲಾರದು. ಕೆಲವು ಕವಿತೆಗಳು ಪ್ರಾಸರಹಿತವಾಗಿ ಅತಿ ಉದ್ದುದ್ದ ಸಾಲುಗಳಾಗಿ ಗದ್ಯದ ರೂಪ ತಳೆದಿರುವುದು ಓದುಗನ ಸಹನೆಯನ್ನು ಪರೀಕ್ಷಿಸುವಂತಿದೆ. ಉದಾ ಹರಿಸಬೇಕೆಂದರೆ : ನಿನ್ನ ನೆನಪಲಿ, ಗುಬ್ಬಿಗೂಡು, ನಮ್ಮ ಭಾರತ ಸಂವಿಧಾನ, ಹೀಗೆ ಕೆಲವಷ್ಟು ಕವನಗಳು ಮಿತಿಮೀರಿ ಬೆಳೆದು ನಿಂತಿವೆ. ಇವುಗಳು ಕಾವ್ಯಕ್ಕೆ ಭೂಷಣವಲ್ಲ ಎಂದೆನಿಸುತ್ತದೆ. ಕಲ್ಪನೆಯನ್ನು ಕವನವನ್ನಾಗಿಸುವ ಶಕ್ತಿ ಈ ಕವಿಗೆ ಚೆನ್ನಾಗಿದೆ. ತುಂಬಾ ಭಾವಾಭಿವ್ಯಕ್ತಿಯಲ್ಲಿ ಅಭಿವ್ಯಕ್ತಿಸುವ ರೀತಿಯಲ್ಲಿ ಸುತ್ತು ಬಳಸದಿರುವುದು ಒಳ್ಳೆಯದು. ಉದಾ : ನಾನು ಕವಿಯಲ್ಲ ಕವನ ೯ : ಮೂಡಿದ ಮನದ ಮರದಿ ಭಾವವೆಂಬ ಕೊಂಬೆ ! ಎತ್ತರದಿ ಸಿಗದ ಹಾಗೆ ಹಸಿರು ಎಲೆಗಳ ಚಪ್ಪರ ಮುಗಿಯದ ಹಕ್ಕಿ ಸಾಲಿನ ಆಸನ ನೋಡಿದಾಕ್ಷಣ ಕವನ ನಾನು ಕವಿಯಲ್ಲ ಕವಿಯ ವಿಚಾರಧಾರೆ ಹರಿತವಾಗಿದೆ. ವೈಚಾರಿಕತೆಯ ಹರವು ವಿಷಾಲವಾಗಿದೆ. ಸಂವೇದನಾ ಶೀಲತೆ ಎಲ್ಲ ಕವನದಲ್ಲಿಯೂ ಇದೆ. ಮನಸ್ಸಿಗೆ ಮುದ ನೀಡುವ ಶಕ್ತಿ ಕವನಗಳಿಗಿದೆ. ಬಸಿರು ಎನ್ನುವ ಶಭಾರ್ಥವೇ ಹಡೆಯುವ ಮೊದಲು ಇರುವ ತಾಯಿಯ ಸ್ಥಿತಿ. ಹುಟ್ಟುವ ಮಗುವಿನ ಬಗ್ಗೆ ತಾಯಿ ಏನೆಲ್ಲ ಚಿಂತಿಸುತ್ತಾಳೆ. ಏನೆಲ್ಲ ಕನಸು ಕಾಣುತ್ತಾಳೆ. ಹೇಳತೀರದು. ಹುಟ್ಟುವ ಮಗುವಿನ ಬಗ್ಗೆ ತರತರದ ಕನಸು ಕಾಣುತ್ತಾಳೆ. ಸರ್ವಾಂಗ ಸುಂದರವಾಗಿ ಮಗು ಹುಟ್ಟಲಿ ಎಂದು ಹಾರೈಸುತ್ತಾಳೆ. ಈ ಕವಿಯ ಎಲ್ಲ ಕವಿತೆಯಲ್ಲಿಯೂ ಇಂತ ಹಾರೈಕೆ ಎದ್ದು ಕಾಣುತ್ತದೆ. ಶಬ್ದಗಳ ಕೊರತೆ ಈ ಕವಿಗೆ ಇಲ್ಲ. ವಸ್ತುವನ್ನು ಹುಡುಕುವ ದಿವ್ಯ ಶೋಧಕ ಶಕ್ತಿ ತುಂಬಾ ಇದೆ. ಗೂಡ ನಿಗೂಡವಾಗಿ ವಿಷಯವನ್ನು ಸಾದರಪಡಿಸುವ ರೀತಿ ಓದುಗನಿಗೆ ಸ್ವಲ್ಪ ಕಬ್ಬಿಣದ ಕಡಲೆಯಾದರೂ ಪ್ರಬುದ್ಧ ಓದುಗನಿಗೆ ಏನೂ ಕಷ್ಟವೆನಿಸಲಾರದು. ಇವರ ಬರಹ ಪ್ರಬುದ್ಧತೆಯ ಪ್ರಬಲ ಪ್ರತಿಬಿಂಬ ಇವರ ಮನಸ್ಸು ಎನ್ನಬಹುದು. ಕವಿಗೆ ತುಂಬಾ ಭವಿಷ್ಯವಿದೆ. ವಿಚಾರದ ಅರಿಕೆ ಸಾಕಷ್ಟು ಮನಸ್ಸಿನ ಆಳಕ್ಕಿಳಿದಾಗಲೇ ಚಿಗುರುವ ಸಾಹಿತ್ಯದ ಕೊಂಬೆ ಬಲಿಷ್ಠವಾಗುತ್ತದೆ. ಕಾವ್ಯಕ್ಕೆ ಗಟ್ಟಿತನ ಬರುತ್ತದೆ. ವಿಚಾರವ ಅದುಮಿ ಹಿಡಿದಾಗ ಭಾವನೆಗಳು ಸ್ಪೊÃಟಗೊಳ್ಳುತ್ತವೆ ಎಂಬುದನ್ನು ಕೆಲವು ಕವನಗಳು ಸಾಬೀತುಪಡಿಸಿವೆ. ಕಾವ್ಯವೆಂದರೆ ಕಲ್ಪನೆ ಮತ್ತು ಭಾವಗಳ ಸಂಗಮ (ಹ್ಯಾಜ್ಲೀಟ್) ಇಂಗ್ಲಿÃಷ್ ಕವಿ ಕಾವ್ಯವೆಂದರೆ ಸೌಂದರ್ಯದ ಲಯಬದ್ಧ ಸೃಷ್ಟಿ ಎಂದಿದ್ದಾರೆ. (ಕೆಬ್ಲ) ಕವಿ ಅಚಿಡಿಟಥಿಟe ಹೇಳಿದ್ದಾರೆ. Poeಣಡಿಥಿ ತಿe ತಿiಟಟ ಛಿಚಿಟಟ musiಛಿಚಿಟ ಣhough ಎohಟಿsoಟಿ ಸಂಗೀತಮಯ ಚಿಂತನೆಯೇ ಕಾವ್ಯ ಹೇಳುತ್ತಾರೆ. ಎohಟಿsoಟಿ ಹೇಳುತ್ತಾರೆ. Poeಣಡಿಥಿ is meಣಡಿiಛಿಚಿಟ ಛಿomಠಿosiಣioಟಿ (ಕಾವ್ಯವೆಂದರೆ ಚಂದೋಬಂದ ರಚನೆ) ಎರ್ಡಸ್ ವಿತ್ರ ಹೇಳುತ್ತಾನೆ (Poeಣಡಿಥಿ is ಣhe bಡಿeಚಿಣh ಚಿಟಿಜ ಜಿiಟಿeಡಿ sಠಿiಡಿiಣ oಜಿ ಚಿಟಟ ಞಟಿoತಿಟeಜge ) ಕಾವ್ಯವು ಎಲ್ಲ ಜ್ಞಾನಕ್ಕಿಂತ ಮಿಗಿಲಾದ ಚೈತನ್ಯ ಉಸಿರು. ಮೇಲೆ ಹೇಳಿದ ಈ ಎಲ್ಲ ಅಂಶಗಳನ್ನು ಈ ಕವಿ ತಿಳಿದುಕೊಂಡು ಮುನ್ನಡೆಯಲಿ ಸಮಕಾಲೀನ ಸಮಸ್ಯೆಗಳ ಬಗ್ಗೆ ಕವಿ ದೃಷ್ಟಿ ಹಾಯಿಸಿದರೆ ಒಳಿತು. ಒಟ್ಟಾರೆ ಕವಿಯ ಈ ಎರಡನೆ ಹೆಜ್ಜೆ ಗಟ್ಟಿತನದ ದಿಟ್ಟ ಹೆಜ್ಜೆಯಾಗಿದೆ. ಕವಿಯ ಭವಿಷ್ಯ ಉಜ್ವಲವಾಗಲಿ, ಸಾಹಿತ್ಯಯಾನ ಚೆನ್ನಾಗಿ ಸಾಗಲಿ ಎಂದು ಹಾರೈಸುವೆ. ==============================================
ಲೋಕಾರ್ಪಣೆ ‘ಪಂಚವರ್ಣದ ಹಂಸ‘ ಸಾಹಿತ್ಯಾಸಕ್ತರಿಗೆ ಸ್ವಾಗತ ಕವಿ ಸತ್ಯಮಂಗಲ ಮಹಾದೇವ ಅವರ ಕವನ ಸಂಕಲನದ ಲೋಕಾರ್ಪಣೆಯ ಕಾರ್ಯಕ್ರಮ ದಿನಾಂಕ: 04/11/2019, ಸೋಮವಾರ ಸಮಯ: ಸಂಜೆ 6 ಗಂಟೆಗೆ ಸ್ಥಳ: ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಸಭಾಂಗಣ
ಪುಸ್ತಕ ಬಿಡುಗಡೆಯ ಸಂಭ್ರಮ Read Post »
ಕೃತಿ: ಹಾಣಾದಿ(ಕಾದಂಬರಿ ಲೇಖಕರು: ಕಪಿಲ ಪಿ.ಹುಮನಾಬಾದ್ ದೀಪಾಜಿ “ಹಾಣಾದಿ” ಕಾದಂಬರಿ ಒಬ್ಬ ಅದ್ಭುತ ಕಲಾಕಾರನ ಕೈಚಳಕದ ಪ್ರತೀಕದಂತಿದೆ. ಹಾಣಾದಿಯ ಹಾದಿಯಲ್ಲಿ ನಡೆಯುವ ಪ್ರತಿ ಸಂಗತಿಯು ಇಲ್ಲೆ ಓದುಗನೆದುರಲ್ಲೆ ಜರುಗುತ್ತಿರುವಂತೆ ಗೋಚರಿಸುತ್ತವೆ. ಅದಕ್ಕೆ ಕಾರಣ ಕಥೆಗಾರನ ತೂಕದ ಶಬ್ಧಗಳು ಹಾಗೂ ಆ ಶಬ್ದಗಳನ್ನು ಹಂದರದಂತೆ ಅಚ್ಚುಕಟ್ಟಾಗಿ ಹೊಂದಿಸಿದ ಕಲ್ಪಾನಾ ಶಕ್ತಿ. ಜೊತೆಗೆ ಉತ್ತರ ಕರ್ನಾಟಕದ ಕಿರೀಟ ಬೀದರದ ಮೆದು ಹೃದಯದ ಗಂಡು ಭಾಷೆ. ಕಥೆ ಓದುತ್ತ ಹೋದಂತೆ ಉಪಮೇಯಗಳು ಎದುರಾಗುತ್ತವೆ . “ಚಂದ್ರನಿಗೆ ಒದ್ದು ಸೂರ್ಯ ಹುಟ್ಟಲೇಬಾರದು ಜನ ಎಷ್ಟು ಆರಾಮವಾಗಿರುತ್ತಿದ್ದರು? ಕೇವಲ ಮಲಗಿರುತ್ತಿದ್ದರಷ್ಟೆ “, “ಶಿಲುಬೆಗೇರಿದ ಕ್ರಿಸ್ತನಿಗೆ ವಯಸ್ಸಾದಂತೆ ಕಂಡಿತು”, “ಈಗಿನವರಿಗೆ ಕಷ್ಟಗಳ ಸುಖ ಗೊತ್ತಿಲ್ಲ. ಸುಖದ ಸುಖ ಮಾತ್ರ ಗೊತ್ತು ಮಗ”. ಈ ವಾಕ್ಯರಚನೆಗಳು ಅದೆಷ್ಟು ಮಜಬೂತಾಗಿವೆ ಎಂದರೆ ಓದುಗನನ್ನು ಒಂದು ಕ್ಷಣ ನಿಲ್ಲಿಸಿ ಶಬ್ಧಾರ್ಥಕ್ಕೂ ಸನ್ನಿವೇಶದ ಭಾವಾರ್ಥಕ್ಕೂ ಇರುವ ಮಧ್ಯದ ತೆಳು ಗೆರೆಯೊಂದನ್ನು ಹುಡುಕ ಹಚ್ಚುತ್ತವೆ. ಪಾಳುಬಿದ್ದ ಊರಿಗೆ ಬಂದ ಅದೆ ಊರಿನ ಮಗನಿಗೆ ಕಾಲದ ಕಾಲಿಗೆ ಸಿಕ್ಕು ನಲುಗಿದ ತನ್ನೂರಿನ ಬದಲಾವಣೆಗಳು ದಿಗಿಲು ಹುಟ್ಟಿಸುವ ಬಗೆ ಮತ್ತದನ್ನು ಚಿತ್ರಿಸಿದ ಬಗೆ ಮಾರ್ಮಿಕವಾಗಿದೆ. ಕಥೆಗಾರನ ಕೈಯಲ್ಲಿ ಅರಳಿದ ಅಪ್ಪ ಒಮ್ಮೆ ಓದುಗರ ಅಪ್ಪನೊಂದಿಗೆ ಹೋಲಿಸಿಕೊಳ್ಳದೆ ಇರಲಾರನು. ತಾನು ಆಡಿದ ಅಂಗಳ, ಶಾಲೆಯ ಬಯಲು ಊರಾಚೆಗಿನ ಗೌವ್ವನೆ ಗುಹೆ, ಹೊಲದ ದಾರಿ, ಹಳ್ಳದ ಹುತ್ತ ಕೆಡಿಸಿ ಬಡಿಸಿಕೊಂಡ ಮೈ ನೋವು ಮನೋಜ್ಞವಾಗಿದೆ. ಅಕ್ಕನೆಂಬ ಬೆಂಬಲ, ಅವ್ವನೆಂಬ ಸೋತ ಜೀವ ಮತ್ತು ತನ್ನಪ್ಪನ ಜೀವಕ್ಕೆ-ಸಾವಿಗೆ ಜತೆಯಾದ ಬಾದಾಮ ಗಿಡ. ಮರದೊಡೆಯ ಅಪ್ಪ ಮರಕ್ಕಾಗಿ ಜೀವಿಸಿದ ಕಥೆ, ಜೀವ ತೆತ್ತ ಕಥೆ ಇಂದು ನಡೆಯುತ್ತಿರುವ ಪರಿಸರ ಪ್ರಜ್ಞೆಯ ಪ್ರತೀಕವೆನ್ನಿಸುವುದು ಸುಳ್ಳಲ್ಲ. ಹಳ್ಳಿಯ ಬದುಕಿನಲ್ಲಿ ಸಾಕು ಪ್ರಾಣಿಗಳು, ಬೆಳಸಿದ ಮರಗಳು ನಮ್ಮದೆ ಮನೆಮಕ್ಕಳಾಗಿ ಬದುಕುತ್ತವೆ ಮತ್ತು ಬದುಕಿಸುತ್ತವೆ ಎಂಬುದಕ್ಕೆ ಇಲ್ಲಿ ಹೆಜ್ಜೆ ಹೆಜ್ಜೆಗೂ ಸಕಾರಣಗಳು ಸಿಗುತ್ತವೆ. ಹೋರಾಟದ ಬದುಕಿಗೆ ಮುಳ್ಳಗಳು ಹೆಚ್ಚು, ಇಲ್ಲಿ ಕಥಾನಾಯಕನ ಅಪ್ಪನಿಗೆ ಸಿಕ್ಕ ನೆರೆ-ಹೊರೆಯ ಪಾತ್ರಗಳ ಕಾರ್ಯ ವೈಖರಿ ಕಂಡಾಗ ನಮ್ಮ ನಡುವಿರುವ ಖಳನಾಯಕರನ್ನು ಧೊಪ್ಪನೆ ಎಳೆದು ತಂದು ಎದುರಿಗೆ ನಿಲ್ಲಿಸುತ್ತವೆ. ಬೆಳೆದು ನಿಂತ ನೆರಳು ನೀಡುವ ಮರದೊಡನೆ ಜಿದ್ದಿಗೆ ಬಿದ್ದ ಊರ ಮಂದಿ, ಊರು ಬಿಟ್ಟು ಊಸಿರು ಬಿಟ್ಟು ಹೋದ ಕಥೆಯನ್ನು ಹೇಳುವ ಪರಿ-ವೈಖರಿ ಚಂದವಾಗಿದೆ. ಕಥೆಯ ಆರಂಭದಲ್ಲಿ ಸಿಗುವ, ಊರಿಗೆ ಹೋಗುವಂತೆ ದುಂಬಾಲು ಬೀಳುವ ಯುವ ಪೀಳಿಗೆಯ ಪ್ರತೀಕದಂತಿರುವ ಗೆಳತಿಯ ಮಾತುಗಳು ಎಂತವರಿಗಾದರೂ ಎರಡು ನಿಮಿಷಗಳ ಕಾಲ ತಟಸ್ಥವಾಗುವಂತೆ ಮಾಡುತ್ತವೆ. “ನಿವೇಲ್ಲ ಗಂಡಸರೆ ಹೀಗೆ ಕಣೊ ಕುಡಿಯೋಕೆ,ಸೇದೋಕೆ, ರಾತ್ರಿ ಮೈ ಬಿಸಿ ಆರಿಸೊಕೆ ಒಂದು ಹುಡುಗಿ ಸಿಕ್ರೆ ಸಾಕು ಜೀವನ ಸಾರ್ಥಕ ಅಂತೀರಾ”-ಎಂತ ಪಕ್ವ ಮಾತು.ಇಷ್ಟು ಮಾತ್ರ ಕಂಡ ಹುಡುಗನೊಬ್ಬ ವರಷಾನುಗಟ್ಟಲೆ ಹುಟ್ಟುರಿನ ಗೋಜಿಗೆ ಹೋಗದೆ ಉಳಿದರೆ ಹೆತ್ತ ತಂದೆಗೆ ಮರವೇ ಮಗನಂತೆ ಆಶ್ರಯಿಸುವ ಕಥೆ ಮನಕಲಕುತ್ತದೆ. ಕಂಟಿ ಎಂಬ ಆಳು ಧರ್ಮಾಂತರದ ಕಥೆ ಹೇಳುತ್ತಾನೆ. “ಚರ್ಚ್ ನ ಪೂಜಾರಪ್ಪ”ನೆನ್ನುವ ಮುಗ್ಧತೆ, ಅಪ್ಪನಿಗೆ ಜೀವದ ಗೆಳೆಯನಂತುಳಿಯುವ ಭಾವೈಕ್ಯತೆ ಸನ್ನವೇಶಗಳು ಧರ್ಮಾಂಧರ ಮುಖಕ್ಕೆ ರಾಚುವಂತಿವೆ. ಕಂಟಿಯ ಮಗ ತೋತ್ಯಾ ಕಥಾನಾಯಕನನ್ನು ಕೊನೆಯ ಪುಟಗಳಲ್ಲಿ ಕಾಯುವ ಬಗೆ, “ಮಾಲಕ್” ಎಂಬ ಶಬ್ಧ ಎಲ್ಲವು ಭಾವನೆಗಳ ತಿಕ್ಕಾಟದಲ್ಲಿ ಅರೆಗಳಿಗೆ ವಿರಮಿಸುತ್ತವೆ. ಇದು ಕಥೆಯಲ್ಲಿ ಬರುವ ಸಣ್ಣಪುಟ್ಟ ಪಾತ್ರಗಳ ವಿವರಣೆಯಾಯಿತು ಅಸಲಿ ಪಾತ್ರದ ಬಗೆಗೆ ನಾನೀನ್ನು ಎನನ್ನು ಹೇಳಲೆ ಇಲ್ಲ. ಪುಸ್ತಕದ ಮುಖಪುಟದಲ್ಲಿ ಕಾಣ ಸಿಗುವ ಹಣ್ಣು ಹಣ್ಣು ಮುದುಕಿ, ಬದುಕಿನ ಜಂಜಾಟಕ್ಕೊ ಕಾಲದ ಹೊಡೆತಕ್ಕೊ, ವಯಸ್ಸಿನ ಪಕ್ವತೆಗೋ ಸಿಕ್ಕು-ಸುಕ್ಕಾದ ಹಿರಿ ಜೀವ ಕಥೆಗೆ ಬೇಕಾದ ಮೂಲ ವಸ್ತುಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಅಸಲಿಗೆ ಕಥೆ ಹೇಳುವವಳು ಅವಳೆ ಇಲ್ಲಿ ಈ ಊರಿಗೆ ಬಂದ ಯುವಕ ತನ್ನ ನೆನಪನ್ನು ಅವಳ ಕಥೆಗೆ ಹೊಂದಿಸಿಕೊಳ್ಳುತ್ತಾ ಹೋಗುತ್ತಾನೆ. ಕಥೆಯಲ್ಲಿ ಅವಳ ಹೆಸರು ಗುಬ್ಬಿ ಆಯಿ. ಅವಳೆ ಹೇಳುವಂತೆ ಕಥೆ ಹೇಳಲಿಕ್ಕಾಗಿಯೆ ನಾನೊಬ್ಬಳು ಉಳಿದಿದ್ದೇನೆ ಎನ್ನುವ ಮಾತು ಕಥೆ ಓದುವವ ಗಮನಕ್ಕೆ ಬರದೆ ಇರಲಾರದು. ಗುಬ್ಬಿ ಆಯಿ, ಗುಬ್ಬಿ ಆಯಿ ಹಿಂದೆ ಮುಂದೆ ಚಿಲಿಪಿಲಿಗುಟ್ಟುವ ಗುಬ್ಬಿಗಳು ಆಕೆಯ ಹೃದಯವಂತಿಕೆಗೆ ಹಿಡಿದ ಕೈಗನ್ನಡಿ. ಆಕೆಯನ್ನು ವಿಮರ್ಶಿಸುವ ಗೋಜಿಗೆ ನಾನಿಲ್ಲಿ ಹೋಗಲಾರೆ ಕಾರಣ ವಿಮರ್ಶೆಗೆ ದಕ್ಕದ ಗತಕಾಲದ ಪ್ರತೀಕವದು. ಈ ಕಥೆಯ ರೂವಾರಿಯಾದ ತಮ್ಮನ ವಯಸ್ಸಿನ ಕಪಿಲ ಪಿ ಹುಮನಾಬಾದಿಯವರಿಗೆ ಸಾಕಷ್ಟು ಶುಭಕಾಮನೆಗಳು. ವಯಸ್ಸಿಗೆ ಮೀರಿದ ಬರವಣಿಗೆ ಒಂದನ್ನ ಓದುಗರಿಗೆ ನೀಡಿದ್ದೀರಿ ವಾಸ್ತವಕ್ಕೂ ಭೂತಕಾಲದ ಘಟನೆಗಳಿಗೂ ಕೊಂಡಿ ಹಾಕಿ ಹಾಣಾದಿಯಲ್ಲಿ ಹಳ್ಳ-ಕೊಳ್ಳ, ಜಾಲಿಯ ನೆರಳಲ್ಲಿ ನಡೆಸುವಾಗ ನಮ್ಮಲ್ಲೂ ಒಂದು ಜಾಲಿ ಮುಳ್ಳು ನಟ್ಟು ಕಿತ್ತಷ್ಟು ನೋವನ್ನು ಉಳಿಸುವ ತಾಕತ್ತು ನಿಮ್ಮ ಅಭಿವ್ಯಕ್ತಿ ಶೈಲಿಗೆದೆ. ಶುಭವಾಗಲಿ. ಹಾಣಾದಿ ಪುಸ್ತಕವನ್ನು ನಮ್ಮ ಹಸಿವಿಗೆ ಪೂರೈಸಿದ ತಮ್ಮ ಚಾಂದ್ ಕವಿಚಂದ್ರ ಹಾಗೂ ಬಯಲ ಬಾಗಿಲು ಖ್ಯಾತಿಯ ಶಿವಮಾಧುವಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.
ಪುಸ್ತಕ ಬಿಡುಗಡೆ ಕಾವ್ಯಕಂದೀಲು ಬಳಗ,ಬಾಗಲಕೋಟೆ ಹಾಗೂ ಕನ್ನಡಸಾಹಿತ್ಯಪರಿಷತ್ತು,ಬಾಗಲಕೋಟೆ ಹಾಗೂ ಫೀನಿಕ್ಸ್ ಪ್ರಕಾಶನ’_ ತೀರ್ಥಹಳ್ಳಿ, ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ;20/10/2019ರಬಾನುವಾರ ಬಾಗಲಕೋಟೆಯ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕನ್ನಡ ಸಾಹಿತ್ಯ ಲೋಕದ ಎರಡು ಹೊಸ ಪುಸ್ತಕಗಳೂ ಲೋಕಾರ್ಪಣೆಗೊಂಡವು ‘ನವಿಲೂರ _ದಾರಿಯಲ್ಲಿ’ (ಕಥಾಸಂಕಲನ)- ಶ್ರೀಹರಿದೂಪದ ‘ತೊರೆದು ಜೀವಿದಬಹುದೆ?’(ಭಾವಲಹರಿಗಳ ಗುಚ್ಛ)-ಪುನರ್ವಸು ಪ್ರಶಾಂತ್
ಬಿದಲೋಟಿ ರಂಗನಾಥ್ ಕೃತಿಯ ಹೆಸರು: ನನ್ನಪ್ಪ ಒಂದು ಗ್ಯಾಲಕ್ಸಿ ( ಕವನಸಂಕಲನ) ಕವಿ: ನೂರುಲ್ಲಾ ತ್ಯಾಮಗೊಂಡ್ಲು ” ಹೊಸ ತಲೆಮಾರಿನ ನಿಜದ ಕಾವ್ಯಾಭಿವ್ಯಕ್ತಿ ” ಗೆಳೆಯ ನೂರುಲ್ಲಾ ತ್ಯಾಮಗೊಂಡ್ಲು ಮತ್ತು ನನ್ನ ಸ್ನೇಹ ಸುಮಾರು ಆರುವರೆ ವರ್ಷದ್ದು, ಸಿಟ್ಟು ಸಿಡುಕು ಆವೇಶ ಅವರಲ್ಲಿ ಕಂಡಂತೆ ಅವರ ಕವಿತೆಗಳಾಲ್ಲೂ ಇದೆ. ಯಾವುದನ್ನೇ ಆಗಲಿ ಖಡಕ್ಕಾಗಿ ಪ್ರತಿಭಟಿಸುವ ನೇರ ಮಾತಿನ ನಿಷ್ಠೂರವಾದಿ ಮನುಷ್ಯ. ಅಷ್ಟು ಸುಲಭವಾಗಿ ರಾಜಿಯಾಗದ ನಡತೆ. “ನನ್ನಪ್ಪ ಒಂದು ಗ್ಯಾಲಕ್ಸಿ” ಅವರ ಎರಡನೆಯ ಕವನ ಸಂಕಲನ. ಕಾವ್ಯಮನೆ ಎಂಬ ಪ್ರಕಾಶನ ಗಝಲ್ ಮಾಂತ್ರಿಕೆ ಮೆಹಬೂಬ್ ಬೀಯವರ ಸಹಕಾರದಿಂದ ಪ್ರಕಟಿಸಿದೆ. ಇದರಲ್ಲಿ ಐವತ್ತೊಂದು ಕವಿತೆಗಳಿವೆ. ಎನ್ಟಿ ಎಂದೇ ಹೆಸರಾಗಿರುವ ಇವರ ಕವಿತೆಗಳು ಭ್ರಮೆಯ ಹಂಗನ್ನು ತೊರೆದು ನೇರವಾಗಿ ಖಡಕ್ಕಾಗಿ ಕೈ ತೋರಿಸಿ ಮಾತಾಡಿಸುತ್ತವೆ. ಹಬ್ಬಿದ ಕತ್ತಲೆಯ ಪರದೆಯನ್ನು ಸರಿಸಿ ಬೆಳಕಿನ ಕಿರಣಗಳನ್ನು ತೊಟ್ಟು ಬೆಳಗುವ ಇವರ ಈ ಕವಿತೆಗಳನ್ನು ಐದು ಭಾಗಗಳಲ್ಲಿ ನೋಡಬೇಕಾಗುತ್ತದೆ. ಒಂದನೇ ಭಾಗದಲ್ಲಿ ಭುಗಿಲೆದ್ದ ಹಾಡು, ಗನ್ನುಹಿಡಿದ ಕೈ, ದಿನ ಪತ್ರಿಕೆ, ಟ್ರೈಗೀಸ್ ನದಿ ದಂಡೆ-ನಿಮ್ಮದು, ಹಸಿವು, ಖಾಲಿಜೇಬುಗಳು, ಮೌನ ತ್ರಿವರ್ಣಧ್ವಜ, ರಾಜಬೀದಿ, ಬಂದೂಕು …ಬದುಕು, ಒಂದು ಅಸ್ಮಿತೆ ಕವಿತೆಗಳು ಸಮಾಜದಲ್ಲಿ ಮನೆ ಮಾಡಿರುವ ಧರ್ಮಾಂಧಕಾರ ,ಜಾತಿಯತೆ ಮೌಢ್ಯತೆಯ ವಿರುದ್ಧ ನೋವಿನಿಂದಲೇ ತೊಡೆ ತಟ್ಟಿ ನಿಂತು ಗದರಿಸುವಲ್ಲಿ ಯಶಸ್ವಿಯಾಗಿವೆ. “ಇಂಡಿಯಾದ ಇಂಡಿಪೆಂಡೆಂಟಿನ ದಿನಗಳು ಸತ್ತು ಬೂದಿಯಾಗಿ ಎಷ್ಟೋ ದಿನಗಳಾಗಿ ನಿನಗೆ ಮಾತ್ರ ಖಬರಿಲ್ಲ” ದೇಶದ ಹೆಸರಲ್ಲಿನ ಸ್ವಾತಂತ್ರ್ಯ ನೆಪ ಮಾತ್ರ. ಇಲ್ಲಿನ ಗುಲಾಮತನ ಜಾತಿಯತೆ ಅಸಮಾನತೆ ಮೌಢ್ಯತೆ ಅಂಧಕಾರ ಇನ್ನೂ ಅಳಿಸಿಲ್ಲ. ಸಮಾನತೆಯ ಶ್ರೀರಕ್ಷೆಗಾಗಿ ಈಗಲೂ ಒದ್ದಲಾಡುತ್ತಿರುವ ದಲಿತರು ಅಲ್ಪಸಂಖ್ಯಾತರು ನಮ್ಮ ಕಣ್ಣ ಮುಂದಿದ್ದಾರೆ. ಜಾತಿಯ ಹೆಸರಲ್ಲಿ , ತಿನ್ನುವ ಆಹಾರದ ಹೆಸರಲ್ಲಿ ಶೋಷಣೆ ನಡೆಯುತ್ತಲೇ ಬಂದಿದೆ. ಖಾಕಿಯ ಕೋಮು ನಡೆ, ಬ್ರಷ್ಟತೆ; ಕಾವಿಯ ಪಕ್ಷಪಾತದ ಕಾವು; ಖಾದಿಯ ಗುಂಡಾಗಿರಿ ಅಧಿಕಾರದ ದಾಹ, ಮದ, ಮತ ಭ್ರಷ್ಟತೆ, ಸೋಗಲಾಡಿತನ ಬಡವರ ಬದುಕನ್ನು ಹೈರಾಣಾಗಿಸಿದೆ. ಇವರೆಲ್ಲರ ಕಾಲಡಿ ಬಂಧಿಯಾಗಿರುವ ಸ್ವತಂತ್ರ ನಿಜಕ್ಕೂ ಸತ್ತು ಬೂದಿಯಾಗಿದೆ ಎಂದು ಕವಿ ಇಂದಿನ ರಾಜಕೀಯ ನಡೆ ನುಡಿಯನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ. “ಗನ್ನು ಹಿಡಿದ ಕೈ ” ಇದೊಂದು ಆಶಾವಾದದ ಕವಿತೆ. ಕ್ರೂರ ಮೃಗತ್ವದ ಮನಸುಗಳು ಅಕ್ಷರದ ವ್ಯಾಮೋಹಕ್ಕೆ ಬೀಳದೆ ಗನ್ನು ಹಿಡಿದ ರಾಕ್ಷಸಿ ಕೃತ್ಯವನ್ನು ನೇರವಾಗಿ ತಳ್ಳಿಹಾಕುತ್ತಾರೆ. ಈ ಕವಿತೆಯಲ್ಲಿ ವ್ಯಕ್ತಪಡಿಸಿರುವಂತೆ ಒಂದುವೇಳೆ ಪೆನ್ನು ಹಿಡಿದಿದ್ದರೆ ಮೃದುತ್ವದ ಬುದ್ದತ್ವ ಧೋರಣೆ ತಾಳುತ್ತಿದ್ದರೇನೋ ಎಂಬುದು ಕವಿಯ ಆಶಯ. “ನಾಳೆಯಾದರೂ ಉಳಿಯಲಿ ಈ ನೆಲದ ನಾಗರೀಕತೆ ಸಂಸ್ಕೃತಿ-ಮನುಕುಲತೆ” ಎಂದು ಹೇಳುವ ಕವಿಯ ಆಶಯ ಪ್ರಜ್ಞೆ ಈ ಹೊತ್ತಿನ ಜೀವಂತ ಕಾವ್ಯದನಿ. “ಬಾ ಇನ್ನು ಕಾಲ ಮಿಂಚಿಲ್ಲ ಮತ ಧರ್ಮಗಳ ಬಂಧವನ್ನು ಮುರಿದು ಪ್ರೇಮದ ಋಜುತ್ವವಿದೆ ಹೃದಯದ ಚಿಲುಮೆಯಲಿ ಒಂದಿಷ್ಟು ಕುಡಿದು ನಿರಾಳಿಸೋಣ” ಎನ್ನುವ ಕವಿಯ ಪ್ರೇಮ ಭಾಷೆ ವರ್ತಮಾನಕ್ಕೆ ಅಪ್ಯಾಯಾಮಾನವಾಗಿರುವಂಥದ್ದು. ವಿಮರ್ಶಕ ಡಿ ಆರ್ ನಾಗರಾಜ್ ರವರು ಹೇಳುವಂತೆ “ಕಾವ್ಯ ಬರೀ ಲೋಲಪತೆ ಅಲ್ಲ .ವರ್ತಮಾನದಲ್ಲಿಲ್ಲದ ಆದರೆ ಭವಿಷ್ಯದ ಗರ್ಭದಲ್ಲಿರುವ ಸಮಾಜದ ಅಮೃತಕ್ಕೆ ಹಾರುವ ಗರುಡ ಅದು. ಆದರೆ ಗರುಡನಿಗೆ ಕಾಲ ಕೆಳಗೆ ಹರಿವ ಹಾವಿನ ಕಡೆಗೂ ಗಮನವಿರಬೇಕು. ಅಂದರೆ ಸಾಮಾಜಿಕ ವೈರುಧ್ಯಗಳಿಗೂ ತೀವ್ರವಾಗಿ ಪ್ರತಿ ಸ್ಪಂದಿಸಬೇಕು. ಉದಾಹರಣೆ ಎಂಬಂತೆ ಇಲ್ಲಿನ ಮೊದಲ ಭಾಗದಲ್ಲಿನ ಕವಿತೆಗಳಲ್ಲಿ ಅಂಥಹ ವೈರುಧ್ಯತೆ, ತಳಮಳ ಬಂಡಾಯ ಪ್ರಜ್ಞೆ ಚುರುಕಾಗಿವೆ. “ಪ್ರಶ್ನಿಸಬೇಕಿದೆ ನಮ್ಮ ಎದೆಗಳಿಗೆ ಗುಂಡು ಹೊಡೆಯುವ ಚಂಡ ಶೂರರನ್ನು ಕ್ರೂರ ಕಿರಾತಕರನ್ನು ನಮ್ಮ ಸುಂದರ ಬದುಕನ್ನು ಕಸಿಯುತ್ತಿರುವ ಗೋಮುಖ ವ್ಯಾಘ್ರರನ್ನು ದೇಶಕ್ಕೆ ದಾರಿದ್ರ್ಯದ ಮುಸುಕನ್ನು ಹೊದಿಸುತ್ತಿರುವ ಮೂಲಭೂತವಾದಿಗಳನ್ನು.” ಹೌದು ಯಾವುದನ್ನು ಪ್ರಶ್ನಿಸದ ಹೊರತು ಪಡೆಯಲಾಗದ ಸ್ಥಿತಿಯನ್ನು ತಲುಪಿರುವ ದೇಶದಲ್ಲಿ. ಪ್ರಶ್ನಿಸಲಾರದೇ ಎಷ್ಟೋ ಜನರ ಬದುಕು ಮಣ್ಣಾಗಿದೆ, ಮುರಾಬಟ್ಟೆಯಾಗಿದೆ. ಅಂಥ ದೇಶದಾರಿದ್ರ್ಯತೆಗೆ ನಮ್ಮ ಅಭಿವ್ಯಕ್ತತೆ ಪ್ರಶ್ನೆಯೇ ಪುರುಷೋತ್ತಮನ ಅಸ್ತ್ರವಾಗಲಿದೆ. ಎರಡನೇ ಭಾಗದಲ್ಲಿ ನೋಡುವ ಕವಿತೆಗಳು ಸೂಫಿ ಹೃದಯ ಸಮುದ್ರದ ಬೆಳಕಿನ ಹಾದಿಯದು. ಇಲ್ಲಿನ ರಾಬಿಯಾ ಬಸ್ರಿ, ಪ್ರೇಮ ಸಮಾಧಿ, ಆದಿ, ಒಂದಿಷ್ಟು ಕರುಣೆ ಸಾಕು, ಸಾಕಿ ನಾನೊಂದು ಹುಲ್ಲೆಸಳು, ಫಕೀರರ ಗೂಡು, ಬೆತ್ತಲೆ ಫಕೀರ , ಆತ್ಮ ಯಾವ ಕುಲ? ಯಶಸ್ವಿ ಕವಿತೆಗಳು. ಪ್ರೇಮಾನುಸಂಧಾನ ಸೂಫಿ ಕಾವ್ಯತತ್ಪರತೆ. ಅಂಥ ಒಂದು ಕವಿತೆ “ಆತ್ಮ ಯಾವ ಕುಲ”? “ನೀನು ಕುಲದ ಪ್ರಶ್ನೆಯೆತ್ತುಕೊಂಡಾಗ ನನ್ನೊಳಗೆ ಕಲಕಿದ್ದು ಮತ್ತೆ ಅದೇ ಪ್ರಶ್ನೆ ಆತ್ಮ ಯಾವ ಕುಲ ?” ಆತ್ಮದ ಚಲಿಸುವ ದಾರಿಯಲ್ಲಿ ಯಾವುದೇ ಕತ್ತಲೆಯ ಕೂಪಗಳು ಇರುವುದಿಲ್ಲ . ಅದು ತತ್ವಪದ ಶಾರೀರಿಕ ನೆರಳಿನಲ್ಲಿ ವಿಶ್ರಮಿಸುವ ಒಂದು ಮುಕ್ತ ತಾವು. ತಾನು ದೇವರು ಪ್ರೀತಿಯ ನಡುವಿನ ಮುಕ್ತ ಮೆದು ಮಾತುಕತೆ. ಅಲ್ಲಿ ಯಾವ ಗೋಜಲುಗಳ ಶಂಖ ಮೊಳಗುವುದಿಲ್ಲ. ಅಲ್ಲಿ ಪ್ರೀತಿ ಮಂಪರಲ್ಲಿ ತೇಲುವ ಮತ್ತೇರಿದ ಧ್ಯಾನದ ಜಾಡು. ತನ್ನ ಶರೀರದಲ್ಲಡಗಿದ ಬೆಳಕಿನ ಹುಡುಕಾಟದಲ್ಲಿ ನಡೆಯುವ ಸೂಫಿಗಳು ಎಲ್ಲವನ್ನೂ ತ್ಯಜಿಸಿ ಬೆತ್ತಲೇ ಫಕೀರನ ಹಾಗೆ ಚಲಿಸುವ ಬೆಳ್ತಿಂಗಳು. ಅಲ್ಲಿ ಹೊಸ್ತಿಲ ಸಂಸ್ಕಾರವಿಲ್ಲದ ಚಂದನೆಯ ರೆಕ್ಕೆ ಬೀಸುವ ಮೌನ ಹಕ್ಕಿಯು ನುಲಿದ ಮೃದು ದೋರಣೆ ಎಂತಹವರನ್ನು ಮುಖವನ್ನಾಗಿಸುತ್ತದೆ. ಅದೊಂದು ಮುಕ್ತ ಭಾವ ಸಂವೇದಿ ಕ್ರಿಯೆ . ಸೂಫಿ ತತ್ವಪದಕಾರರಿಗೆ ನೆಲೆ ಕುಲವಿಲ್ಲದ ಅಲೆಮಾರಿಗಳಂತೆ ಚಲಿಸುವ ಮೌನ ಸಂಭಾಷಣೆ, ಧ್ಯಾನದ ಹಂಗು. ತನಗೇನು ಬೇಕಿಲ್ಲದ ತನಗಾಗೀ ಏನೂ ಸಂಪಾದಿಸಿ ಕೊಳ್ಳದ ಏಕತಾರಿಯ ತಂತಿಯೊಳಗಣ ಶಬ್ಧವು ಹರಿದ ಜಾಡಿನಲ್ಲಿ ಕಂಡುಕೊಂಡ ಮಮತೆ ಪ್ರೀತಿಯ ಬುತ್ತಿ ಹೊತ್ತ ಅವರಿಗೆ ಬಾಹ್ಯ ಜಗತ್ತಿನ ಕನಸುಗಳೇ ನಗಣ್ಯ. ಸೂಫಿ ನಡೆ ಮುಕ್ತವಾಗಿ ಚಲಿಸುವ ಹಕ್ಕಿಯ ಮುಖವಿಲ್ಲದ ದಿಕ್ಕು. ಕವಿಯೇ ಹೇಳುವಂತೆ ಹೊರಗಿನ ದೀಪ ಆರಿದರೂ ಎದೆಯೊಳಗಿನ ಬೆಳಕು ಎಂದೂ ಸಾಯುವುದಿಲ್ಲ. ಅದು ನಿರಾಢಂಬರ ಜಂಗಮ ನಿಲುವು. ಘಟಶೋಧನೆಯಲ್ಲಿ ದೇಹ ತೊರೆಯುವ ಜೀವ ದೇವರು ಪ್ರೀತಿಯೆಂಬ ತಾದ್ಯತ್ಮದ ಮುಖಾಮುಖಿ. ಸೂಫಿಗಳು ಆ ಬೆಳಕಿನ ಹೆಗಲ ಮೇಲೆ ಕೂತು ಚಲಿಸುವ ಪರಿ ನಿಜಕ್ಕೂ ಮೆಚ್ಚುವಂತಹದ್ದು. ಈ ಸಂಕಲನದ ಸೂಫಿ ಕವಿತೆಗಳನ್ನು ಧ್ಯಾನಿಸಿದರೆ ಆ ತಾದ್ಯತ್ಮದ ಬೆಳಕು ಘೋಚರಿಸುತ್ತದೆ. ಸೂಫಿಗಳ ಗಾಢ ಪ್ರಭಾವ ಕವಿಯ ಹೃದಯ ಕಮಲದಲ್ಲಿ ಕೂತು ಜೀಕುವ ಪರಿ ಕವಿತೆಗಳಲ್ಲಿ ಕಾಣಿಸುತ್ತಾದರೂ ಕವಿಯೊಳಗಿನ ಸಂಸಾರದ ತಾಕಲಾಟಗಳು ಧ್ಯಾನದ ಮುಕ್ತಪ್ರವೇಶಕ್ಕೆ ಅಡ್ಡಿಯ ಛಾಯೇ ಇದ್ದೆ ಇದೆ . ಸಂಸಾರಿಕ ಜೀವನದ ನೆಲೆಗಟ್ಟೇ ಎಲ್ಲಾಕ್ಕೂ ಮೂಲ ಬೇರು. ಅಲ್ಲಿದ್ದುಕೊಂಡೇ ತನ್ನೊಳಗೆ ಮಾಗುವ ಭಾವದ ಬೆಳಕು ಸೂಫಿಯ ಅಂತರಂಗವನ್ನ ತಟ್ಟಬೇಕು. ಅಪ್ಪಬೇಕು. ಆಗ ಜಂಗಮ ಫಕೀರನ ಜೋಳಿಗೆಯಲ್ಲಿ ಭೌದ್ಧಿಕತೆಯ ಕಾವು ಪಸರಿಸುತ್ತದೆ.ಅದರ ಸಿದ್ಧಾಂತ ಅರಿವಿನ ದಾರಿ ತೆರೆದುಕೊಳ್ಳುತ್ತದೆ. ಸಂಕಲನದ ಮೂರನೇ ಭಾಗದಲ್ಲಿನೋಡುವ ಕವಿತೆಗಳು ” ‘ ಕಾಲ ಮತ್ತು ನಾನು, ಕಾವ್ಯವೆಂದರೆ, ಕವಿತೆ ನನ್ನದು, ಕವಿತೆಯ ಸತ್ಯ , ನೆರಳ ಮುಂದೆ ಬೆಳಕು. ಕಾವ್ಯದ ಬೆರಗನ್ನು ಜೀವ ಸತ್ವದ ನೆಲೆಯಲ್ಲಿ ತಳವೂರುವ ಕಾವ್ಯ ಮಿಮಾಂಸೆಯ ಜಾಡು. ಇಲ್ಲಿನ ಕವಿತೆಗಳ ನೆರಳು. “ಕಾವ್ಯವೆಂದರೆ ಹಾಗೆ ಒಂದು ಉತ್ಕಟ ಭಾವ ಕವಿಯ ಕಣ್ಣ ಒಂದು ಸಣ್ಣ ಬೆಳಗು ಕಡಲುಪ್ಪಿನ ಕಿನಾರೆಯಲಿ ಚಿಪ್ಪುಗಳನಾಯ್ವ ಗೂನು ಬೆನ್ನಿನ ಆಕ್ರಂದನ ಮೂರ್ತ ಅಮೂರ್ತ ಕಲ್ಪನೆಯ ಚಕ್ರ” “ನಾ ನೇಯುವ ಕಾವ್ಯ ಯಾವತ್ತೂ ನನ್ನದಲ್ಲ ನನ್ನ ಮತ್ತು ಕಾವ್ಯದ ಸಂಬಂಧ ಇರುವುದಾದರೂ ಒಂದಿಷ್ಟು ಹೊತ್ತು ಮಾತ್ರ” ಕವಿತೆ ಬರೆದಾದ ನಂತರ ಕವಿ ಅಲ್ಲಿರುವುದಿಲ್ಲ, ಕವಿತೆ ಮಾತ್ರ ಇರುತ್ತದೆ ಎಂಬ ಅರಿವು ಪ್ರತಿಯೊಬ್ಬ ಕವಿಗೂ ಇರಬೇಕು .ಆಗ ಮಾತ್ರ ಕವಿತೆ ಜೀವಂತ ಇರುತ್ತದೆ ಎಂಬ ಅರಿವು ಕವಿಗೆ ಇದೆ. ಆ ನಿಟ್ಟಿನಲ್ಲಿನಲ್ಲಿ ಕವಿತ್ವ ಗೆದ್ದಿದೆ. ಕವಿ ಅಭಿವ್ಯಕ್ತಿ ತೆರೆದು ಕೊಂಡಿರುವ ಬಗೆಯೇ ವಿಭಿನ್ನ. ಕಾವ್ಯದ ಬಗ್ಗೆ ಮಿಮಾಂಸಕರು ಬರೆದ ಹೊಳಹುಗಳ ಬೆಳಕಲ್ಲಿ ಇಲ್ಲಿನ ಕವಿ ನಡೆಯುವ ಕಾವ್ಯ ದಾರಿ ಹೂವಿನೆಸಳು ಎತ್ತಿದಷ್ಟೇ ಸಲೀಸು. ಇನ್ನು ನಾಲ್ಕನೆ ಭಾಗದಲ್ಲಿ ಗುರುತಿಸಿರುವ ಕವಿತೆಗಳು ಹೆಣ್ಣಿನ ಅಸ್ಮಿತೆಯನ್ನು , ಆಕೆಯ ಸಂಕಟದ ನೋವಿನ ನಲ್ಲಿ ಬಂದಿಯಾದ ಕವಿತೆಗಳಾಗಿವೆ “ಅದೊಂದು ಅಸಾಹಾಯಕ ರಾತ್ರಿಯಲಿ ಕಡು ಕತ್ತಲೆಯ ಕೋಣೆಯಲಿ ನನ್ನ ಮೈ ಮನಸುಗಳ ಮೇಲೆ ಹರಿದಾಡಿ ನನ್ನಾತ್ಮವನ್ನು ನಂಜು ಮಾಡಿ ಹೋದ ಈ ಕರಿನಾಗರವನ್ನು ಸುಡುವ ಒಂದು ಕೊನೆ ಕ್ಷಣಕ್ಕಾಗಿ ಕಾಯುತ್ತಲೇ ಇದ್ದೇನೆ ಹೀಗೆ ಮತ್ತೆ ಮತ್ತೆ ಸುಟ್ಟು ಹೋಗುತ್ತಲೇ ಇದ್ದೇನೆ” ನೋಡಿ ಇಲ್ಲಿನ ಕವಿತೆಯ ಆಕ್ರೋಶದ ದನಿಯು ಹೃದಯವನ್ನೇ ಕಲಕುತ್ತದೆ ಹಾಗೂ ದ್ವನಿಸುತ್ತದೆ. ದೇಹ ಮನಸ್ಸನ್ನು ಬರ್ಬರವಾಗಿ ಶೋಷಿಸಿದ ಗಂಡೆಂಬ ಕರಿನಾಗರನನ್ನು ಸುಡುವ ಶಪಥ ಇಲ್ಲಿ ಮೊನಾಚಾಗಿ ಬಂದಿದೆ. ಆ ನಿಟ್ಟಿನಲ್ಲಿ ಕವಿ ಹೆಣ್ಣಿನ ನೋವಿನ ಪದರುಗಳನ್ನು ಬಿಚ್ಚಿಡುತ್ತಾರೆ ಆದರೆ ಹೆಣ್ಣಿನ ಪ್ರತಿಕಾರ ಸಾಧಿಸಿದ ಅಥವಾ ಸಬಲೆಯ ಕಾವ್ಯ ಈ ಸಂಕಲನದಲ್ಲಿ ಕೊಟ್ಟಿಲ್ಲ. ಹೆಣ್ಣು ಸಾಧಿಸಿದ ಬದುಕಿನ ಚಿತ್ರಣಗಳು ಕಾವ್ಯವಾಗಿಸುವಲ್ಲಿ ಮರೆತಿದ್ದಾರೆ ಅನ್ನಿಸುತ್ತದೆ. ಇನ್ನು ಕೊನೆಯದಾಗಿ ಸಂಸಾರದ ಭಾಗವಾಗಿರುವ ಭವ ಬಂಧನದ ಕವಿತೆಗಳು ಓದುತ್ತಾ ಹೋದಂತೆ ಹಲವು ಪ್ರಜ್ಞೆಯ ಹೊಳಹುಗಳು ತೆರೆದುಕೊಳ್ಳುತ್ತವೆ. ಸಂಕಲನದ ಶೀರ್ಷಿಕೆಯ ಕವನವಂತೂ ಅಪ್ಪನ ಮೇಲಿನ ಪ್ರೀತಿ ಜೋಗು ನೆಲವಾಗಿದೆ. ನಿಜದ ಬದುಕಿನ ಅನಾವರಣದ ಬೆಳಕನ್ನು ಚೆಲ್ಲುವ ಕವಿತೆ ನಿಜಕ್ಕೂ ಗಮನ ಸೆಳೆಯುತ್ತದೆ. ಅಲ್ಲಿ ತಾಳಿರುವ ರೂಪಕಗಳು ಪ್ರತಿಮೆಗಳು ಕವಿತೆಯನ್ನು ಮತ್ತೆ ಮತ್ತೆ ಓದಿಸುತ್ತದೆ. ದೀಪಗಳು ಆರಬಹುದು ಆದರೆ ಎದೆಯೊಳಗಿನ ಬೆಳಕಲ್ಲ. “ಅಪ್ಪ ಆ ರುದ್ರ ಕಿರಣಗಳನ್ನು ಮುರಿದು ಬಂಡೆಗೆ ಕಾವು ಕೊಡುತ್ತಾನೆ ನನ್ನಪ್ಪ ಈಗಲೂ ನಾಳೆಯೂ ಬರಿಯ ಸೂರ್ಯನಲ್ಲ ಒಂದು ಗೆಲಾಕ್ಸಿ” ಅಪ್ಪನ ಬದುಕನ್ನು ಕಣ್ಣಾರೆ ಕಂಡಿರುವ ಕವಿ. ಅಪ್ಪನ ಬಂಡೆ ಕೀಳುವ ಕೆಲಸದ ಮಜಲುಗಳನ್ನು ವಿವಿಧ ರೂಪಗಳಲ್ಲಿ ವರ್ಣಿಸುವ ಪರಿ ವರ್ಣಿಸಲಸದಳ. ಕವಿಯ ಎದೆಯಾಳದಲ್ಲಿ ಬೇರು ಬಿಟ್ಟ ಕಾವ್ಯದ ಕಾವು ಹೂವಾಗಿ ಅರಳಿ ಘಮಿಸುವಂತಿದೆ. ಜೀವಕೊಟ್ಟ ಅಪ್ಪನಿಗೊಂದು ಉಡುಗೊರೆಯಂತಿದೆ ಈ ಕವನ. ಇನ್ನು ಐದುವರ್ಷದ ನಡಿಗೆ ಕವನ ಮತ್ತೆ ನಮ್ಮನ್ನು ಬಾಲ್ಯಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದೆ. ಮೃದು ತಾಯ್ತನದ ಭಾವ ಹೃದಯ ಕಲಕುತ್ತದೆ. ಅಜ್ಜನ ಸುಕ್ಕುಗಳು, ಅವ್ವನೆಟ್ಟ ಮೆಹಂದಿಗಿಡ ನೆನಪುಗಳ ಬುತ್ತಿ ಬಿಚ್ಚಿ ಉಣಬಡಿಸುವಲ್ಲಿ ಇಷ್ಟವಾಗುವ ಕವನಗಳಾಗಿವೆ. ಈ ಸಂಕಲನದ ಅನೇಕ ಕವಿತೆಗಳಲ್ಲಿ ಹಸಿವು ಧರ್ಮಾಂಧಕರದ ವಿರುದ್ದ ಸಿಡಿದೆದ್ದಿರುವ ಲಕ್ಷಣಗಳು ಘೋಚರಿಸದಿರದು.ಆ ವಿಷಯದ ಮೇಲೆ ಪದೆ ಪದೆ ಕವನಗಳ ಶರೀರ ರೂಪುಗೊಂಡಿರುವುದು ತುಸು ಕ್ಲಿಷೆ ಎನಿಸಿದರೂ ಸಂಕಲನದ ಎಲ್ಲಾ ಕವಿತೆಗಳು ಎದೆಗಪ್ಪಿಕೊಳ್ಳಬಹುದಾದ ಕವಿತೆಗಳೇ ಆಗಿವೆ. ಗೆಳೆಯ ಎನ್ಟಿಗೆ ಆತ್ಮೀಯ ಅಭಿನಂದನೆ. ಬಿದಲೋಟಿ ರಂಗನಾಥ್ ವಿಮರ್ಶಕರ ಪರಿಚಯ: ತುಮಕೂರು ಜಿಲ್ಲೆಯವರಾದ ಕವಿ, ಕಥೆಗಾರ, ವಿಮರ್ಶಕ, ಬಿದಲೋಟಿ ರಂಗನಾಥ ವೃತ್ತಿಯಿಂದ ವಕೀಲರು.ಅವರು ಮಾಡುವ ಕೆಲಸಕ್ಕೂ ಸಾಹಿತ್ಯಕ್ಕೂ ಅಜಗಜಾಂತರವಾದರೂ ಸಾಹಿತ್ಯವೆಂದರೆ ಅವರು, ಅವರೆಂದರೆ ಸಾಹಿತ್ಯ ಎನ್ನುವಷ್ಟು ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಇವರು ಬಿ ರಂ ಎಂದೇ ಹೆಸರಾದವರು.ಅವರ ಪ್ರಕಟಿತ ಸಂಕಲನಗಳು ಮಣ್ಣಿಗೆ ಬಿದ್ದ ಹೂಗಳು ,ಬದುಕು ಸೂಜಿ ಮತ್ತು ನೂಲುತಾಲ್ಲೋಕು ರಾಜ್ಯೋತ್ಸವ ಪ್ರಶಸ್ತಿ,ಸಂಕ್ರಮಣ ಕಾವ್ಯ ಬಹುಮಾನ ಬಂದಿವೆ.ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಇವರ ಕವಿತೆ ಕಥೆ ವಿಮರ್ಶೆಗಳು
You cannot copy content of this page