ನಾನು ಓದಿದ ಪುಸ್ತಕ
“ಐ ಕಾಂಟ್ ಬ್ರೀದ್” ಕವನ ಸಂಕಲನವು ಮೌಲಿಕವಾಗಿದೆ.ಬದುಕಿನ ಮರ್ಮವನು ತಿಳಿಸುವ,ನಯನಾಜೂಕಿನ ಕ್ರಾಂತಿ ಬಿಂಬಿಸಿದಂತೆ ಮಹೇಶ ಬಳ್ಳಾರಿ ಇವರ ವಿನಯ ಗುಣಗಳು ಇಲ್ಲಿ ಮೆರೆದಿವೆ
“ಐ ಕಾಂಟ್ ಬ್ರೀದ್” ಕವನ ಸಂಕಲನವು ಮೌಲಿಕವಾಗಿದೆ.ಬದುಕಿನ ಮರ್ಮವನು ತಿಳಿಸುವ,ನಯನಾಜೂಕಿನ ಕ್ರಾಂತಿ ಬಿಂಬಿಸಿದಂತೆ ಮಹೇಶ ಬಳ್ಳಾರಿ ಇವರ ವಿನಯ ಗುಣಗಳು ಇಲ್ಲಿ ಮೆರೆದಿವೆ
ಪುಸ್ತಕ ಸಂಗಾತಿ ಕಾವ್ಯವೆಂಬ ಕಾವು ಆರದ ಮಗ್ಗಲು ಕಾವ್ಯವೆಂಬುದು ಕಾಣುವ ಜಗತ್ತಿನೊಳಗಿನ ಕಾಣದ ಅನುಭೂತಿಯನ್ನು ಹುಡುಕುವ ಪಯಣ. ಈ ವ್ಯಕ್ತದೊಳಗಿನ ಅವ್ಯಕ್ತವನ್ನು ಹುಡುಕುವ ತಳಮಳವು ಅಲ್ಲಮನಾದಿಯಾಗಿ ನಮ್ಮ ಪರಂಪರೆಯಲ್ಲೇ ಹರಿದುಬಂದಿದೆ. ಇದಕ್ಕೆ ಆಕಾರಕೊಡುವ ಹೊಸ ಬಗೆ, ಹೊಸ ಬನಿಯಿಂದಾಗಿ ತೇಜಾವತಿಯವರ ಕವಿತೆಗಳು ನಮ್ಮೊಳಗೆ ನಿಚ್ಚಳ ಬಿಂಬವೊಂದನ್ನು ಮೂಡಿಸುತ್ತವೆ. ಕವಿತೆಯೆಂದರೆ ಮಣ್ಣಿನೊಳಗೆ ಬೀಜ ಬೆರೆತು ಮೊಳೆತು ಎಸಳೊಡೆದು ದಳಗಳಾಗಿ ಅರಳಿ ಮಿಡಿಯಾಗಿ ಕಾಯಾಗಿ ಮಾಗಿದ ಹಣ್ಣಿನಂತೆ…. (ಕವಿತೆ) ಕವಿತೆ ಅವ್ಯಕ್ತದ ದಾಹವಾಗಿದ್ದರೂ ಅದು ಅನುಭವಗಳ ಮೈಯೊಳಗೇ ಅರಳುವ ವಿದ್ಯಮಾನ. ಬೀಜ ಮೊಳೆತು ದಳಗಳಾಗಿ ಅರಳಿ,ಹಣ್ಣಾಗಿ ಮಾಗುವ ಈ ವಿಕಸನದ ಕ್ರಿಯೆ ಜೀವಂತ. ಭವದಿಂದ ಅನುಭವ, ಅನುಭವದಿಂದ ಅನುಭಾವ. ಈ ಗುಟ್ಟು ಕವಿತೆಯನ್ನು ಒಳಗೊಳಗೇ ಮಾಗಿಸುತ್ತದೆ. ತೇಜಾವತಿಯವರ ಕವಿತೆಗಳಲ್ಲಿ ಹೀಗೆ ಹಿಗ್ಗುವ ಮಹತ್ವಾಕಾಂಕ್ಷೆಯಿದೆ. ಆ ದಾರಿಯಲ್ಲಿ ಅವರ ಹಸಿಹೆಜ್ಜೆಗಳು ಮೂಡುತ್ತಿವೆ. ಕವಿತೆ ಹದಗೊಂಡ ತನ್ನೊಳಗನ್ನು ಕಾಣಿಸಲು ಭಾಷೆಯು ಸೂಕ್ಷ್ಮಗೊಳ್ಳಬೇಕು. ಕಣ್ಣಿನಾಚೆಯ ಸತ್ಯವನ್ನು ಕವಿಯು ಕಾಣಲು ಪ್ರಜ್ಞೆಯು ಸೂಕ್ಷ್ಮಗೊಳ್ಳಬೇಕು. ಇಂಥ ಸೂಕ್ಷ್ಮತೆಯಿಂದ ಕಂಪಿಸುವ ಹಲವು ಕವಿತೆಗಳು ಈ ಸಂಕಲನದಲ್ಲಿವೆ. ಕವಿ ತನ್ನ ಪ್ರಜ್ಞೆಯನ್ನು ಬೆಳಕಾಗಿಸಿ ಕತ್ತಲನ್ನು, ದುಃಖವನ್ನು ಸದಾ ದಾಟಲು ಪ್ರಯತ್ನಿಸುತ್ತಿರುತ್ತಾಳೆ/ತ್ತಾನೆ. ಅಂಥ ಬೆಳಕಿನ ಕಾವು ಆರದಂತೆ ಕಾಪಿಟ್ಟುಕೊಳ್ಳುವ ನಿಗಿನಿಗಿ ಹಂಬಲವು ಇಲ್ಲಿನ ಕವಿತೆಗಳನ್ನು ಸದಾ ಎಚ್ಚರದಲ್ಲಿ ಇರಿಸಿದೆ. ಸುತ್ತುವರಿದ ಸಮಾಜದ ಚೌಕಟ್ಟುಗಳು, ತೋರಿಕೆಯ ಬದುಕಿನ ಬಂಧನದಾಚೆಗೆ ತೂರಿಬರಲು ತಪಿಸುವ ಆರ್ದ್ರ ದನಿಯೊಂದು ಇಲ್ಲಿ ನಿನದಿಸುತ್ತದೆ. ತೇಜಾವತಿಯವರ ಕವಿತೆಗಳು ಸ್ಮೃತಿ, ಎಚ್ಚರ ಹಾಗೂ ಇದನ್ನು ಮೀರಿದ ಇನ್ನೇನನ್ನೋ ಹಿಡಿಯುವ ಸನ್ನಾಹದಲ್ಲಿ ಬೆರಗು ಮೂಡಿಸುತ್ತವೆ. ಚಲಿಸುವ ಕಾಲದ ಬಿಂಬಗಳನ್ನು ರೂಪಕಗಳಲ್ಲಿ ಸೆರೆಹಿಡಿಯಲು ಹವಣಿಸುತ್ತಾರೆ. “ಊರುಗಳೇ ತಲೆದಿಂಬಾದವು” ಎಂಬ ಕವಿತೆ ಇಂಥ ಬೆರಗಲ್ಲಿ ಹುಟ್ಟಿದ್ದು. ಪ್ರೀತಿ -ಸ್ನೇಹಗಳ ಸೆಳೆತದಲ್ಲಿ ಹಿಗ್ಗುತ್ತ ಹರಿಯುವ ಬದುಕಲ್ಲಿ ಅದನ್ನು ನಿರ್ಬಂಧಿಸುವ ವರ್ತಮಾನದ ಸೂಕ್ಷ್ಮತೆಯನ್ನು ತೇಜಾವತಿಯವರ ಕವಿತೆ ಪ್ರಶ್ನಿಸುತ್ತ ಪ್ರತಿರೋಧಿಸುತ್ತ ಹರಿಯುತ್ತವೆ. ಬೀಸುವ ಗಾಳಿ, ಹರಿಯುವ ನದಿ, ಕೊರೆಯುವ ಹಿಮಗಲ್ಲಿಗಿಲ್ಲದ ಧರ್ಮದ ಹಂಗು ನಮಗೆಲ್ಲ ಯಾಕೆ? ಎಂದು ಆರ್ತವಾಗಿ ಕೇಳುತ್ತಾರೆ. ಮನುಷ್ಯನ ಪ್ರಜ್ಞೆಯನ್ನು ಪ್ರಕೃತಿಯ ಅನಿರ್ಬಂಧಿತ ಪ್ರಜ್ಞೆಯಲ್ಲಿ ಕರಗಿಸುವ ನುಡಿಗಳಿಂದ ಕವಿತೆ ಒಳಗಿನ ಸ್ವಾತಂತ್ರ್ಯದ ಝರಿಯನ್ನು ಶೋಧಿಸಿಕೊಳ್ಳುತ್ತದೆ. ಘೋಷಣೆಗಿಳಿಯದೇ, ಕಾದಾಡದೇ ಎಲ್ಲವನ್ನೂ ಮೀರುವ ಸಂಯಮದ ದನಿಯೇ ಇಲ್ಲಿ ಕಸುವುಗೊಂಡಿದೆ. ಸುತ್ತಲಿನ ದಿಗ್ಬಂಧನಗಳನ್ನು ಕಳಚಿ ನಿರಾಳವಾಗುವ ದಾರಿಗಳನ್ನು ಹುಡುಕುವ ಮಾಧ್ಯಮವೂ ಇಲ್ಲಿ ಕವಿತೆಯೇ ಆಗಿದೆ. ಒಂದು ದಿನ ಬೀಗ ಹಾಕಿಕೊಂಡಿದ್ದ ಬಾಯಿಗೆ ನಾಲಿಗೆ ಬಂದಿತು ಒಳಗಿಟ್ಟುಕೊಂಡಿದ್ದ ಕೆಂಡ ದುಃಖದ ಮಡುವಲ್ಲಿ ಕರಗಿಹೋಯಿತು.. (ನೀರ ಮೇಲಿನ ಪಾದ) ತೇಜಾವತಿಯವರ ಕವಿತೆಯಲ್ಲಿರುವ ಬೆಳಕಿನ ಹಂಬಲ, ಆಶಾವಾದ, ಭವಿಷ್ಯದ ಕುರಿತ ಕನಸುಗಳು…. ಇವೆಲ್ಲ ಕತ್ತಲ ಗರ್ಭದಲ್ಲಿಯೇ ಬೆಳಕಿನ ಬೀಜಗಳನ್ನು ಊರುತ್ತವೆ. ಅದರ ಅಪಾರ ಸಾಧ್ಯತೆಗಳನ್ನು ಕನಸುತ್ತವೆ. ಕಾವ್ಯವು ಕಾವು ಆರದ ಮಗ್ಗಲಾಗಿ ಅವರಿಗೆ ಕಾಣಿಸುವುದೇ ಚೇತೋಹಾರಿ. ಬಾ… ಭವಿಷ್ಯದ ನಕ್ಷತ್ರಗಳಾಗೋಣ ಕಾವು ಆರದ ಮಗ್ಗಲುಗಳು ಎಡಬಿಡದೆ ಕಾಡಿಸುತ್ತವೆ ನಿನ್ನನ್ನೇ… ಬದುಕಿನ ಎಲ್ಲ ಮರ್ಮರಗಳಿಗೆ ಕಿವಿಯಾಗುತ್ತಲೇ ದಿವ್ಯವಾದುದೊಂದು ನಮ್ಮನ್ನು ಕಾಡದೇ ಹೋದರೆ, ನಮ್ಮ ಕನಸುಗಳನ್ನು ಹಸಿಯಾಗಿ ಉಳಿಸದೇ ಹೋದರೆ ಕಾವ್ಯ ಹಳಹಳಿಕೆಯಾಗುತ್ತದೆ. ತೇಜಾವತಿಯವರ ಕಾವ್ಯ ಜೀವಂತವಾಗಿರುವುದೇ ಅದರ ಚಲಿಸುವ ಚೈತನ್ಯದಿಂದ ಹಾಗೂ ಸದಾ ಹಿಗ್ಗುವ ಹಂಬಲದಿಂದ. ****************************************** ಡಾ. ಗೀತಾ ವಸಂತ
ಕಾವ್ಯವೆಂಬ ಕಾವು ಆರದ ಮಗ್ಗಲು Read Post »
ಸುಮಾರು ಇಪ್ಪತ್ತು ಷೇರ್ ಗಳನ್ನು ಹೊಂದಿರುವ ೯೦ ನೇ ಗಜಲ್ ತನ್ನ ಮಗನ ಸಾರ್ಥಕ ಬಾಳಿಗಾಗಿ ಜೀವ ಸವೆಸಿ ಕೊನೆಗೆ ಒಂಟಿತನದಲ್ಲಿ ನರಳುತ್ತಾ ತಾನು ತೊರೆದಿದ್ದ ಮದಿರೆಗೇ ದಾಸನಾಗುವ ತಂದೆಯ ಕರುಣಾಜನಕ ಕಥೆಯನ್ನು ಕಟ್ಟಿಕೊಡುತ್ತದೆ.
ಮೌನೇಶ್ವರರ ಲೋಕದೃಷ್ಟಿ ಅತಿ ಮುಖ್ಯವಾ ದುದು.ಅವರು ಆಲೋಚಿಸದ ವಿಷಯಗಳೇ ಇಲ್ಲ .ಜಗತ್ತಿನಲ್ಲಿ ತಂದೆ ತಾಯಿಗಳು ಮಕ್ಕಳನ್ನು ಹಡೆದರೆ ಮುಗಿಯಲಿಲ್ಲ.ಅವರು ಯೋಗ್ಯರಾಗಿ ಬಾಳುವಂತೆ ಸಂಸ್ಕಾರ ಕೊಡುವದೂ ಅಗತ್ಯ.ಅದು ಅವರ ಜವಾಬ್ದಾರಿ ಕೂಡಾ.ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವ ಕುರಿತು ಮೌನೇಶ್ವರರು
ಮೌನೇಶ್ವರರ ವಚನ ವಿಚಾರ : ಡಾ ವೀರೇಶ ಬಡಿಗೇರ Read Post »
“ವಿಮೋಚನೆ” ಪ್ರೇಮ, ತ್ಯಾಗ, ಮೋಸ, ಹತ್ಯೆಯ ಸಿನಿಮೀಯ ಮಾದರಿಯ ಕಥೆಯಾದರೆ, ‘ಮಗ್ದಷ್ಟೇ ಬದ್ಕು’, ‘ಸಾಬೀತು’ ಸಿರಸಿ, ಧಾರವಾಡದ ವಿಶಿಷ್ಟ ಪ್ರಾದೇಶಿಕ ಭಾಷೆಯ ಸೊಗಡಿಗಾಗಿ ಓದಿಸಿಕೊಳ್ಳುವ ಕಥೆಗಳು..ಕೇತಕಿ, ಗೂಡು, ಆಯಿ ಸಹ ಉತ್ತಮ ಕಥೆಗಳು..
ಈ ಬಗೆಯ ಹಲವು ಉತ್ತಮ ಕವಿತೆಗಳ ಮುತ್ತಿನ ಮಾಲೆ “ಸೌಗಂಧಿಕಾ”. ಇಲ್ಲಿ ವೈವಿಧ್ಯಮಯ ವರ್ಣನೆಗಳಿಲ್ಲ, ವಯ್ಯಾರವಿಲ್ಲ. ಸರಳ ಸುಂದರ ಸುಭಗ, ಬಂಧುರವಿದು. ಇಲ್ಲಿನವು ಓದಿದಂತೆಲ್ಲಾ ಒಲವು ಮೂಡಿಸುವಂತಹ ಕವನಗಳು
ಸೌಗಂಧಿಕಾ ಒಂದು ಅವಲೋಕನ Read Post »
‘ ನಿಚ್ಚಂ ಪೊಸತು’ ಆಯ್ದ ಸಂಗಂ ಕವಿತೆಗಳನ್ನು ಕನ್ನಡದಲ್ಲಿ ಓದುವಾಗ ಭಾಷೆ ಕೋಶಗಳನ್ನು ಮೀರಿದ ಕಾಲಮಾನಗಳನ್ನು ಮೀರಿದ ಅನುಭವವಾಯಿತು ಎಂದು ಕವಿಯೇ ಹೇಳಿದ್ದಾರೆ. ಅಂಥ ದಿವ್ಯತೆ ಇಲ್ಲಿನ ಶಬ್ದಗಳಲ್ಲಿ ಸೆರೆಯಾಗಿದೆ.
ಪುಸ್ತಕ ಸಂಗಾತಿ ಒಂದೇ ಗುಟುಕಿಗೆ ಅಮಲೇರುವ ಕಾವ್ಯ ಅರಿವಿನ ಹರಿಗೋಲು ಮೂಲಕ ಕಾವ್ಯದ ಪಯಣ ಆರಂಭಿಸಿದ ಕೆ.ಬಿ.ವೀರಲಿಂಗನಗೌಡರು ಹಲವು ಅಗ್ನಿದಿವ್ಯ ಗಳನ್ನು ದಾಟಿಕೊಂಡು ಬಂದಿರುವವರು ಸದ್ಯ ಸಾಸಿವೆಯೊಳಗೆ ಸಾಗರ ಕಾಣುವ ಅವರ ಕವಿತೆಗಳು ಹುಸಿ ಲೋಕದ ವರ್ತಮಾನದ ತಲ್ಲಣಗಳಿಗೆ ಮುಖಾಮುಖಿಯಾಗುತ್ತವೆ ಹೇಳುವ ಸಾಲು ಎರಡಾದರೂ ದೀರ್ಘ ಕವಿತೆಯ ಎಲ್ಲ ಕಸುವನ್ನು ಆ ಸಾಲುಗಳಲ್ಲಿ ತುಂಬಿದ್ದಾರೆ, ಅಕ್ಕನಿಗೆ ಚನ್ನಮಲ್ಲಿಕಾರ್ಜುನನಂತೆ ,ಕೆ.ಬಿ ಅವರು ‘ಸಾಕಿ’ ಎನ್ನುವ ತಮ್ಮ ಆತ್ಮಸಂಗಾತದ ದನಿಯನ್ನು ನಿವೇದಿಸಿಕೊಳ್ಳುವ ಮುಖೇನ ಲೋಕಕ್ಕೆ ಹೇಳಬೇಕಾದ ಎಲ್ಲ ಸಂಕಟಗಳ ದ್ರವ್ಯ ಕಾವ್ಯದಲ್ಲಿ ಅಡಗಿದೆ ಬಯಲ ಹದಗೊಳಿಸಿ ಪ್ರೀತಿಯನ್ನು ಹರಡುವ ಸಂತನಂತೆ ಕಾಣುತ್ತಾರೆಸಾಕಿ ಪ್ರೀತಿಯೆಂದರೆ/ ಗುಟ್ಟಾಗಿ ಗುನುಗುವುದಲ್ಲ/ಸುಟ್ಟ ರೊಟ್ಟಿಯಂತಾಗುವುದು ಎನ್ನುವಲ್ಲಿ ಪ್ರೀತಿಗಿರಬೇಕಾದ ಗಟ್ಟಿತನ,ಸುಟ್ಟ ರೊಟ್ಟಿಯ ಅನುಭವ ದ್ರವ್ಯ,ಪ್ರೀತಿ ,ರೊಟ್ಟಿ ಎನ್ನುವುದು ಸದ್ಯದ ತುರ್ತು, ಮಾನವತೆಯ ಬದುಕಿನ ಪ್ರತೀಕ ಕೆ.ಬಿ ಅವರ ಕಾವ್ಯದ ಗಟ್ಟಿ ನಿಲುವಿನ ಉತ್ತರವಾಗಿದೆ ಪ್ರೀತಿಯ ಶಕ್ತಿ ಅದು ಅಸ್ಸೀಮ ಬಯಲು ಅಕ್ಕ ಹೇಳಿದಂತೆ ಸೀಮಿಯಲ್ಲಿದ ನಿಸ್ಸಿಮಂಗೆ ಒಲಿದನವ್ವಂತೆ,ಪಿನಿಕ್ಸ ಹಕ್ಕಿಯಂತಾಗುವುದು,ಶರಣಾಗುವುದಲ್ಲ,ಶರಣ ಸಂಸ್ಕೃತಿಗೆ ಅಣೆಯಾಗುತ್ತಾರೆ ಪ್ರೀತಿಯಂತೆ ಮುದ್ದಾಡುವುದಲ್ಲ ಕಾವ್ಯದ ಕೊನೆಯಲ್ಲಿ ಹೇಳುವ ಮಾತ್ರ ಅಲೌಕಿಕತೆಯೆಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ” ಎದ್ದು ಹೋಗಿ ಬುದ್ಧನಾಗುವುದು ಎನ್ನುವಲ್ಲಿ ಕಾವ್ಯವನ್ನು ಗರಡಿ ಮನೆಗೆ ಕರೆತರುತ್ತಾರೆಸಾಕಿ /ಕುಡಿಯುತ್ತಿದ್ದೇನೆ/ನಿರುತ್ತರದಲಿ ಕುಳಿತು/ಅಮೂರ್ತ ಅರ್ಥವಾಗದ್ದಕ್ಕೆ ಕವಿ ಸಾಕಿಗೆ ನಿವೇದಿಸಿಕೊಳ್ಳುವುದು , ಕುಡಿಯುವುದು ಏಕೆ ಅಂದರೆ ಅಮೂರ್ತ ಅರ್ಥವಾಗದ್ದಕ್ಕೆ,ಎಲ್ಲರ ಹುಡುಕಾಟವೂ ಅಮೂರ್ತ ವೇ ಎಷ್ಟೂ ಅರೆದು, ಮುರಿದು,ತೊರೆದು,ಕರಗಿ,ಮರುಗಿದರು ಅದು ಇನ್ನೂ ಮುಖಾಮುಖಿಯಾಗಿಲ್ಲ ಅಮೂರ್ತ ವನ್ನು ಮೂರ್ತವಾಗಿಸುವುದು ಕವಿಯೇ ಹೇಳಿದಂತೆ ಪ್ರೇಮವನ್ನು ಕುಡಿಯಬೇಕಾಗಿದೆ ಅದು ಲೋಕವನ್ನು ತಿಳಿಗೊಳಿಸುತ್ತದೆ ಸಾಕಿ/ ಕವಿತೆಯೆಂದರೆ/ಬೆಳೆಯುವುದಲ್ಲ/ ಬೇರಾಗಿ ಕೆಳಗಿಳಿಯುವುದು ಸಾಕಿ/ಕವಿತೆಯೆಂದರೆ/ ಹೊಸೆಯುವುದಲ್ಲ/ಒಲವ ಬೆಸೆಯುವುದು ಕವಿ ಎಲ್ಲಿಯೂ ಈ ಪ್ರೇಮವನ್ನು ಬಿಟ್ಟಿಲ್ಲ ಎಲ್ಲಿ ಪ್ರೇಮವನ್ನು ತೊರೆಯುತ್ತವೆಯೊ ಅಲ್ಲಿ ಅಶಾಂತಿ ,ಯುದ್ಧ ಕ್ಕೆ ದಾರಿಯಾಗುತ್ತದೆ ಎನ್ನುವ ಎಚ್ಚರಿಕೆಯನ್ನಿಟ್ಟುಕೊಂಡೆ ಒಲವ ಬೆಸೆಯಲು ಹಡದಿ ಹಾಸುತ್ತಾರೆ ಬಯಲ ಹಣತೆಯೆದುರು ಕತ್ತಲೆಯನ್ನೇ ಬೆತ್ತಲಾಗಿಸುತ್ತಾರೆಒಲವಿನೆದುರು ಕನಸನ್ನು ಶುಚಿಗೊಳಿಸುತ್ತಾರೆ******************************** ಹೆಬಸೂರ ರಂಜಾನ್
ಇದು ನನಸಾಗುವ ಕನಸೆಂಬುದು ಕವಿ, ಕಥೆಗಾರರ ಭಾವನೆಯಾಗಿದೆ. ಭಾಷೆ, ಧರ್ಮಗಳ ಸರಿ ಪ್ರಜ್ಞೆ ಇರುವವರ ಹೃದಯ ಮಿಡಿತವಾಗಿದೆ. ಈ ಭಾವನೆಗಳು ವಸ್ತುವಾಗುಳ್ಳ ಭಾರತೀಯ ಭಾಷೆಗಳಲ್ಲಿನ ಕಥೆಗಳನ್ನು ಸಂಕಲಿಸಿದರೆ ಅನೇಕ ಸಂಪುಟಗಳು ನಮಗೆ ಸಿಗುತ್ತದೆ. ಈ ನಿಟ್ಟಿನ ಚಲನೆಯಲ್ಲಿ ತೆಲುಗು ಕಥೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.
ಪುಸ್ತಕ ಸಂಗಾತಿ ಹಾವೇರಿಯಾಂವ್ ದ್ವೇಷ, ಅಸೂಯೆಗಳಿಲ್ಲದೆ ಜೀವನ ಪ್ರೀತಿ ತೋರಿಸುವ ‘ಹಾವೇರಿಯಾಂವ್’ ವನ್ಯಜೀವಿ ಛಾಯಾಗ್ರಾಹಕ, ಕವಿಯೂ ಆಗಿರುವ ಮಾಲತೇಶ ಅಂಗೂರ ಮೂರು ದಶಕಗಳಿಂದ ಹಾವೇರಿಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಇತ್ತೀಚಿಗೆ ತಮ್ಮ ಅಂಕಣ ಬರಹಗಳ “ಹಾವೇರಿಯಾಂವ್’’ ಪುಸ್ತಕ ಹೊರ ತಂದಿದ್ದಾರೆ. ಟಿ.ಕೆ.ತ್ಯಾಗರಾಜರ ಸಂಪಾದಕತ್ವದಲ್ಲಿ ಬರುತ್ತಿದ್ದ ‘ಡೆಕ್ಕನ್ ನ್ಯೂಸ್’ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದ ‘ಕಾಕಾ ಕಾಲಮ್’ ಅಂಕಣ ಬರಹಗಳ ಸಂಕಲನವೇ ಈ ‘ಹಾವೇರಿಯಾಂವ್’. ಈ ಸಂಕಲನದಲ್ಲಿ ಒಟ್ಟು ೪೪ ಲೇಖನಗಳಿವೆ. ನಮ್ಮ ಸಮಾಜದ ಅಂಕುಡೊಂಕುಗಳನ್ನು ಜನರೆದುರು ತೆರೆದಿಡಲು ತಮ್ಮದೇ ಆದ ವಿಶಿಷ್ಟ ಭಾಷಾ ಶೈಲಿ ಕಂಡುಕೊಂಡಿದ್ದಾರೆ. ಇಲ್ಲಿಯ ಬರಹಗಳು ವಿಡಂಬನೆಯಾದರೂ ಅದಕ್ಕೊಂದು ಬೆರಗಿದೆ. ಅದೇ ‘ಹಾವೇರಿಯಾಂವ್’ ಕೃತಿಯ ವಿಶಿಷ್ಟ . ಮಾಲತೇಶರವರದ್ದು ಕೇವಲ ಉತ್ತರ ಕರ್ನಾಟಕದ ಗಂಡು ಭಾಷೆಯಷ್ಟೆ ಎನ್ನಲಾಗದು. ನೆಲದ ನಂಟಿದೆ. ಈ ನೆಲದ ನಾಣ್ಣುಡಿ, ಆಡು ಭಾಷೆ ಬಳಸಿಕೊಂಡು ಸಮಾಜದ ಎಲ್ಲ ಬಗೆಯ ಜನರಿಗೆ ಬಿಸಿ ಮುಟ್ಟಿಸುವ ರೀತಿಯೇ ಅಪರೂಪದ್ದು. ಹಾವೇರಿಯಾಂವ್ ಯಾರಿಗೂ ಮುಲಾಜು ತೋರಿಸಿಲ್ಲ. ತೋರಿಸುವುದೂ ಇಲ್ಲ. ಪತ್ರಕರ್ತರು ಆಧುನಿಕ ಸಮಾಜದ ಕನ್ನಡಿಯೆಂದೇ ಹೇಳಬಹುದು. ಪತ್ರಕರ್ತನು ಸ್ಥಳಿಯ ಮತ್ತು ಹೊರನಾಡಿನ ಪ್ರಸ್ತುತ ಸುದ್ದಿ-ಸನ್ನಿವೇಶಗಳನ್ನು ಸಮಾಜದ ಮುಂದೆ ಪತ್ರಿಕೋದ್ಯಮದ ಮೂಲಕ ವಿವರಿಸುತ್ತ ಹೋಗುತ್ತಾನೆ. ಅದೇ ರೀತಿ ರಾಜಕೀಯ ವ್ಯವಸ್ಥೆ, ಜಗತ್ತಿನ ಷಡ್ಯಂತ್ರಗಳು ಇವೇ ಮೊದಲಾದ ವಿಷಯಗಳ ಬಗ್ಗೆ ಕಾಲಕಾಲಕ್ಕೆ ಜನತೆಗೆ ವರದಿ ಮಾಡುವದರ ಜೊತೆಗೆ ಒಂದು ರೀತಿಯ ಜನಾಭಿಪ್ರಾಯ ಮೂಡಿಸುವಲ್ಲಿಯೂ ತನ್ನ ಪಾತ್ರ ವಿಸ್ತರಿಸುತ್ತಾ ಹೋಗುತ್ತಾನೆ. ಈ ರೀತಿಯ ಜನಾಭಿಪ್ರಾಯದಿಂದಲೇ ಸರ್ಕಾರ ಬದಲಾಗಿದ್ದೂ ಉಂಟು. ಹಾಗಾಗಿ ಪತ್ರಿಕೋದ್ಯಮ ಮತ್ತು ಪತ್ರಕರ್ತನನ್ನು ಸಮಾಜದ ನಾಲ್ಕನೇ ಅಂಗ ಎಂದು ಕರೆದಿದ್ದಾರೆ. ಜಾಗತೀಕರಣದ ಕಾಲವಿದು. ಸೋತವನು ಮತ್ತು ದಣಿದವನು ಬೆರಗಾಗಿ ಬದಲಾವಣೆಯತ್ತ ನೊಡುತ್ತ ನಿಲ್ಲುವ ದಿನಮಾನಗಳಲ್ಲಿ ಪತ್ರಕರ್ತನೊಬ್ಬನ ಮನಸ್ಥಿತಿ ಹೇಗಿರಬಹುದೆಂಬುದು ಉಹಿಸಲು ಅಸಾಧ್ಯ. ಹೆಚ್ಚು ರೋಚಕವೂ, ಹೆಚ್ಚು ಜನಪ್ರೀಯ, ಹೆಚ್ಚೆಚ್ಚು ಓದುಗರನ್ಬು ಹಿಡಿಯಲೇಬೇಕೆಂಬ ವ್ಯವಸ್ಥೆಯಲ್ಲಿ ಮಾಲತೇಶ ಅಂಗೂರು ತಮ್ಮ ಶಕ್ತಿ ಇತಿ ಮಿತಿಗಳನ್ನು ‘ಹಾವೇರಿಯಾಂವ್’ ದಲ್ಲಿ ವ್ಯಕ್ತಪಡಿಸುವ ಶಕ್ತಿಯನ್ನು ದಕ್ಕಿಸಿಕೊಂಡಿದ್ದಾರೆ. ಹಾವೇರಿಯ ಜನಸಾಮಾನ್ಯರಲ್ಲಿ ಕಂಡುಕೊಂಡ ಪಾತ್ರಗಳು ಬಹು ವಿಭಿನ್ನವಾಗಿವೆ. ಇಡೀ ಕೃತಿಯ ಬಹುಮೂಖ್ಯ ಪಾತ್ರದಾರಿಗಳಾದ ಬಸ್ಯಾ, ಲಕ್ಷö್ಮವ್ವ, ಪಾಟೀಲರು, ಕಾಕಾ ಇವರೆಲ್ಲರೂ ನಮ್ಮ ಜೊತೆನೆ ಇರುವವರು. ಹೀಗೆ ಈ ಪಾತ್ರಗಳ ಮೂಲಕ ಯಾವುದೇ ಮುಲಾಜಿಲ್ಲದೇ ದೊಡ್ಡವರ ಸಣ್ಣತನಗಳನ್ನು ಬಟಾಬಯಲು ಮಾಡುತ್ತಾ ಜನಸಾಮಾನ್ಯರ ಸಂಭಾಷಣೆಗಳಿಗೆೆ ಮಾಲತೇಶ ದನಿಯಾಗಿದ್ದಾರೆ. ‘ಯಡೆಯೂರಪ್ಪನ ಬಾಯಾಗ ಬೆಣ್ಣೆ, ಬಗಲಾಗ ಡೊಣ್ಣೆ’ ಲೇಖನವು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಳ್ಳುವ ಸಂದರ್ಭವನ್ನು ಇವರ ವಿಡಂಬನೆಯ ಕಣ್ಣು ತೀಕ್ಷ÷್ಣವಾಗಿ ನೋಡುತ್ತದೆ. ಬಳೆಗಾರ ಸಾಹೇಬ್ರು ಕುರ್ಚೆಗ ಪೆವಿಕಾಲ್ ಹಾಕಿ ಕುಂತ ಬಿಟ್ಟಾರ!, ಲೇಖನದಲ್ಲಿ ನಿವೃತ್ತ ಅಧಿಕಾರಿ, ಸಾಹಿತಿ ಮನು ಬಳಿಗಾರ ಕನ್ನಡ ಸಾಹಿತ್ಯ ಪರಿಷತ್ತಿನ ಕಾಯಂ ಅಧ್ಯಕ್ಷರಾಗುವ ನಿಟ್ಟಿನಲ್ಲಿ ನಡೆಸಿದ ಕುತಂತ್ರಗಳನ್ನು ಎತ್ತಿ ತೋರಿಸುತ್ತದೆ. ‘ಗಾಳಿ ಬಿಟ್ಟಾಗ ತೂರಿಕೋ, ಇಲೆಕ್ಷನ್ ಬಂದಾಗ್ ಮಾರಿಕೋ…!, ಈ ಲೇಖನ ಪಕ್ಷಾಂತರಿಗಳನ್ನು ಚೆನ್ನಾಗಿ ಜಾಡಿಸಿದೆ. ಬೆಲೆ ಏರಿಕೆಯ ಪರಿಸ್ಥಿತಿಯನ್ನು ಬಿಂಬಿಸುವ ‘ಮಳಿಗಾಲ್ದಾಗ್ ಛತ್ರಿ ಬಿಡ್ಬರ‍್ದು.. ಚಳಿಗಾಲ್ದಾಗ್ ಹೆಂಡ್ತಿ ಬಿಡ್ಬರ‍್ದು..! ಬರಹ ಬದುಕಿನ ಮಗ್ಗಲನ್ನು ಹೊರಳಿಸಿ ತೋರಿಸುವಂತಿದೆ. ಹಸಿದ ಹೊಟ್ಟೆಗಳು ಜಪಿಸಲಾರವು ಹೆಚ್ಚು ದಿನ ರಾಮನಾಮ, ರಾಜಕಾರಣಿಗಳಿಗೆ ಓಟಿನ ಚಿಂತಿ, ಜನ್ರಿಗೆ ಕುಡಿಯುವ ನೀರಿನ ಚಿಂತಿ…, ಅಂದು ಗೋಲಿಬಾರಪ್ಪ.. ಇಂದು ಲಾಠಿಏಟಪ್ಪ…!, ದೇವ್ರಾಗಬಹುದು ಆದ್ರ ಬಸವಣ್ಣ ಆಗಾಕ ಸಾಧ್ಯ ಇಲ್ಲ..! ,ಇವ್ರಿಗೆ ಜನ್ರ ಜೀವಕ್ಕಿಂತ ರೊಕ್ಕಾನ ಮುಖ್ಯ..! ಪಾರ್ಲಿಮೆಂಟ್ ಅಂದ್ರ ಇವ್ರು ಮಾವುನ ಮನಿ ಅಂತ್ ತಿಳಕ್ಕಂಡಾರೇನೋ, ಶಾಸಕರು ರೇಸಾರ್ಟನಲ್ಲಿ-ಅಧಿಕಾರಿಗಳು ಎಸಿ ರೂಂನಲ್ಲಿ- ಸರ್ಕಾರ ಕೋಮಾದಲ್ಲಿ ಹಿಂಗಾದ್ರ ಹೆಂಗ್ಯ… ಕತ್ತಿ,ಕೊಡ್ಲಿ,ಕುಡುಗೋಲು, ನಮ್ನ ಮಂತ್ರಿ ಮಾಡ್ರಿ ಅಂತ್ ಗಂಟ್ ಬಿದ್ದಾವು… ಈ ರೀತಿಯಾದ ಲೇಖನಗಳ ತಲೆ ಬರಹಗಳಿಂದಲೇ ರಾಜಕೀಯದ ಗೇಲಿ ಮಾಡುವ ಪರಿ, ಪರಸ್ಪರ ಕೆಸರೆರಚಿಕೊಳ್ಳುವಿಕೆ , ಕೋಳಿ ಜಗಳ ಮಾಡುವವರ ಮುಖಕ್ಕೆ ಮಂಗಳಾರತಿ ಮಾಡುತ್ತಾ ಧನ ಬಲ, ಜಾತಿ ಬಲ ರಾಜಕೀಯದ ನಗ್ನ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಸಾಂದರ್ಭಿಕ ವಿಷಯಗಳಿಗೆ ಹಾಸ್ಯದ ಸ್ಪರ್ಶ ಕೊಟ್ಟು ವಿಡಂಬಿಸುವ ರೀತಿ ಬೆರಗು ಹುಟ್ಟಿಸುವಂತಿದೆ. ತನ್ನ ಸುತ್ತಲಿನ ದಾರಿದ್ರ‍್ಯ, ಬಡತನ, ಸಂಕಟ, ಹಸಿವು, ಜಾತಿ ನಿಂದನೆ, ಅನಾಥ ಪ್ರಜ್ಞೆಯ ವೇದನೆಗಳನ್ನು ಎತ್ತಿ ಹಿಡಿದಿರುವ ಮಾಲತೇಶ ಅಂಗೂರವರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಬಡತನದ ಬೇಗೆಯಲ್ಲಿ ನೊಂದ ಜನರ ಹಾಗೂ ಮಹಿಳೆಯರ ದುಃಖ ದುಮ್ಮಾನ, ಕ್ರೌರ್ಯ, ಹಿಂಸೆಯ ಸೂಕ್ಮ ಸಂವೇದನೆಗಳನ್ನು, ಪರಿಸರ ಜಾಗೃತಿ, ಜೀವಸಂಕುಲ, ಪಕ್ಷಿಗಳ ಬದುಕು ಹೀಗೆ ತಮ್ಮ ಬರಹಗಳಲ್ಲಿ ಯಥಾವತ್ತಾಗಿ ಹಿಡಿದಿಟ್ಟಿದ್ದಾರೆ. ಈಟಿಯಂತೆ ತಿವಿಯುವಷ್ಟು ಹರಿತವಾದ ಬರಹಗಳಿವೆ. “ಬಂಡವಾಳಶಾಹಿ ಶಕ್ತಿ ನಮ್ಮ ವ್ಯವಸ್ಥೆಯನ್ನು ಹಿಡಿದುಕೊಂಡಿರುವ ರೀತಿಯನ್ನು, ಬಡವರ ಕಷ್ಟ, ತುತ್ತು ಕೂಳಿಗೂ ನಡೆಸುವ ಪರದಾಟವನ್ನು ಇವರ ಬರಹಗಳಲ್ಲಿ ಕಾಣಬಹುದು. ಬದುಕಿನ ಮಗ್ಗಲುಗಳ ಎಲ್ಲ ಮಜಲುಗಳು ಇವರ ಬರಹಗಳಲ್ಲಿ ಸಾಕಾರಗೊಂಡಿವೆ. ಗ್ರಾಮೀಣ ಜನರ ಬದುಕು, ಜನರ ವಿಷಾದ, ಅಸಹಾಯಕತೆ, ಗ್ರಾಮೀಣ ಮನೋರಂಜನೆ, ಇವನ್ನೆಲ್ಲಾ ‘ಹಾವೇರಿಯಾಂವ್’ ದಲ್ಲಿ ಸೆರೆಹಿಡಿಯಲು ಯಶಸ್ವಿಯಾಗಿದ್ದಾರೆ. ಪ್ರಚಲಿತ ಸಮಸ್ಯೆಗಳಿಗೆ ಅಂಕಣಗಳ ಮೂಲಕ ಬೆಳಕು ಚೆಲ್ಲುವ ಕಾರ್ಯ ಮಾಡುತ್ತಿದ್ದು ಅವರ ಬರವಣಿಗೆಯ ಭಾಷಾ ಶೈಲಿಯಲ್ಲಿ ದ್ವೇಷ, ಅಸೂಯೆಗಳಿಲ್ಲದ ಜೀವನ ಪ್ರೀತಿ ಇದೆ. ಅವರು ಹಾವೇರಿಯಾಂವ್ ಅಂಕಣಗಳ ಬರಹಗಳಲ್ಲಿ ನಂಬಿಕೆ ಬಿತ್ತಿದ್ದಾರೆಯೇ ಹೊರತು ನಂಜನ್ನು ಬಿತ್ತಿಲ್ಲ ಎಂದು ಎದೆಯುಬ್ಬಿಸಿ ಹೇಳಬಹುದು. ಅಂಗೂರವರಿಗೆ ವಿಷಯ ಸಂಗ್ರಹದ ಮುಲಭೂತ ಅರ್ಹತೆಯನ್ನು ದಕ್ಕಿಸಿ ಕೊಟ್ಟಿದೆ. ಅವರ ಸ್ನೇಹಪರತೆಯೂ ಬರಹಗಾರನ ಅರ್ಹತೆಯಾಗಿ ಬೆಳೆದು ಎಮ್ಮರವಾಗಿ ನಿಂತಿದೆ. ಹೊಸ ವಿಷಯ ಹೊಸ ರೂಪದ ಬರಹಗಳಿಂದ ಹೆಚ್ಚಿನ ಓದುಗ ಬಳಗವನ್ನು ಕಟ್ಟಿಕೊಂಡಿದ್ದಾರೆ. ಲೇಖಕ ಆಯಾಕಾಲದ ಧೋರಣೆಗೆ ಪ್ರತಿಕ್ರಿಯಿಸುತ್ತಾನೆ. ಅಭಿವ್ಯಕ್ತಿಯಲ್ಲಿ ಯಾವ ಮಾರ್ಗವನ್ನೇ ಅನುಸರಿಸಲಿ ಕ್ರೂರವ್ಯವಸ್ಥೆಯ ವಿರೋಧಿ ನೆಲೆಯೊಂದು ಈ ಸಾಹಿತ್ಯದ ಹಿನ್ನೆಲೆಯಲ್ಲಿರುತ್ತದೆ. ಇಲ್ಲಿ ಜನಪರ ಹೋರಾಟಗಳೊಂದಿಗೆ ಕ್ರಿಯಾತ್ಮಕ ಸಂಬAಧ ಬೆಳೆಸಲು ಮತ್ತು ಪ್ರಧಾನವಾಗಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಜಾತಿ ಪದ್ಧತಿ, ಅಸಮಾನತೆ ಮತ್ತು ಮೂಢನಂಬಿಕೆಗಳನ್ನು ವಿರೋಧಿಸಿ ದುಡಿಯುವ ವರ್ಗಕ್ಕೊಂದು ಹೊಸಜಾಗೃತಿಯನ್ನು ‘ಹಾವೇರಿಯಾಂವ್’ ಕೃತಿಯಲ್ಲಿ ಕಾಣಬಹುದಾಗಿದೆ. ಸಾಮಾಜಿಕ, ರಾಜಕೀಯ ಬರಹಗಳ ಜೀವಂತಿಕೆಯಾಗಲಿ, ಪ್ರಸ್ತುತೆಯಾಗಲಿ ಏನೇ ಇದ್ದರೂ ಅಂಗೂರತ್ವವನ್ನು ಬಿಡದ ಬರಹಗಳಲ್ಲಿ ಒಂದು ರೀತಿಯ ಲವಲವಿಕೆ ಇರುತ್ತದೆ. ಇಂತಹ ಪ್ರಸ್ತುತೆ ಬರವಣಿಗೆ ಇದ್ದಾಗ ಮಾತ್ರ ಓದುಗನ ಪರೀಕ್ಷೆಯಲ್ಲಿ ಲೇಖಕ ಪಾಸಾಗಲು ಸಾಧ್ಯ. ಬರೆಯುವ ಕಷ್ಟ ಏನೆಂಬುದು ಬರಹಗಾರನಿಗೆ ಗೊತ್ತಿದೆ. ಅದನ್ನು ಯಾವುದೇ ಕಾರಣಕ್ಕೆ ಓದುಗನಿಗೆ ದಾಟಿಸಬಾರದು. ಯಾಕೆಂದರೆ ಅವನಿಗೆ ಓದುವ ಸುಖವಷ್ಟೇ ಮುಖ್ಯ. ಅಂಥ ಸುಖವನ್ನು ಇವರ ಬರಹಗಳಲ್ಲಿ ಕಾಣಬಹುದು. ಸಾಮಾಜಿಕ ಸ್ಥಿತಿಗತಿ, ಜನರ ಮನೋಸ್ಥಿತಿ, ಅಲ್ಲಿಯ ಸಮಸ್ಯೆಗಳು, ಆಚಾರ ವಿಚಾರ ಇವೆಲ್ಲವನ್ನೂ ಗಮನಿಸಿ ಮಾಲತೇಶ ಅಂಗೂರರವರು ನೀಟಾಗಿ ಮಾಡಿದ್ದಾರೆ ಸಮಾಜದಲ್ಲಿ ಪ್ರತಿಷ್ಠಾಪಿತ ಮೌಲ್ಯಗಳು ಜಡವಾದಾಗ, ಪ್ರತಿಗಾಮಿಯಾದಾಗ ಅವುಗಳ ವಿರುದ್ಧ ಹೋರಾಡುವ, ಸಮಾಜವನ್ನು ಎಚ್ಚರಿಸುವ ಸಾಹಿತ್ಯ ಅಂಕಣ ಬರಹಳ ಮೂಲಕ ಅಭಿವ್ಯಕ್ತಗೊಂಡಿದ್ದು, ಸಾಹಿತ್ಯ ಸೃಷ್ಟಿ ಖುಷಿಗಾಗಿ ಅಲ್ಲ, ಅದು ಸಾಮಾಜಿಕ ಹೊಣೆಗಾರಿಕೆ. ಇಂದು ಸಮಾಜವನ್ನು ಕಿತ್ತು ತಿನ್ನುತ್ತಿರುವ ಅಧೋಗತಿಗೆ ತಳ್ಳಿರುವ ಯಜಮಾನ ಸಂಸ್ಕೃತಿಯ ಮುಖ್ಯ ಅಂಶಗಳಾದ ಜಾತಿ- ವರ್ಗಗಳ ವಿರುದ್ಧ, ಶೋಷಣೆಯ ವಿರುದ್ಧ ಶ್ರಮ ಜೀವಿಗಳನ್ನು ಬಂಡಾಯಕ್ಕೆ ಅಣಿಗೊಳಿಸುವ ಮಾರ್ಗವನ್ನು ಲೇಖಕ ಮಾಲತೇಶ ಅಂಗೂರ ಅವರು ಹಾವೇರಿಯಾಂವ್ ಅಂಕಣ ಬರಹಳ ಮೂಲಕ ಕಂಡುಕೊಂಡಿದ್ದಾರೆ. ರಾಜಕೀಯ, ಸಾಮಾಜಿಕ ವಿಡಂಬನೆ, ಮಡಿವಂತಿಕೆಯ ವಿರೋಧ, ಮೂಢನಂಬಿಕೆ, ಜಾತಿಪದ್ಧತಿಗಳನ್ನು, ಬಡತನ, ಶೋಷಣೆ, ಇವನ್ನು ಕೇಂದ್ರವಾಗಿಟ್ಟುಕೊಂಡು ಅನೇಕ ಬರಹಗಳಿವೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ವೈರುಧ್ಯಗಳು ಸಂಘರ್ಷಕ್ಕಿಂತ ಶೋಷಣೆಗೀಡಾದವರು ಅಸಹಾಯಕ ಸ್ಥಿತಿಗತಿಗಳನ್ನು ಹೇಳುವ ಕಾಳಜಿ ಹೆಚ್ಚು. ಪ್ರತಿಭಟನೆಯ ಧೋರಣೆಯನ್ನು ವ್ಯಕ್ತಮಾಡಿವೆ ತೀಕ್ಷ್ಣವಾದ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆ ಈ ಕೃತಿಯಲ್ಲಿ ಕಾಣಬಹುದು. ಪ್ರಭುತ್ವ ಮತ್ತು ಹಿಂಸೆಗಳ ನಡುವಿನ ಸಂಗತಿಗಳನ್ನು ವೈಚಾರಿಕವಾಗಿ ಅಂಕಣಗಳ ಮೂಲಕ ಅಭಿವ್ಯಕ್ತಪಡಿಸಿದ ಅಂಗೂರ ಅವರು ಕೆಲವೊಮ್ಮೆ ಅಕ್ಷರಗಳಿಗೆ ಇಂಕ್ ಆಗಿದ್ದರೆ ಇನ್ನು ಕೆಲವೊಮ್ಮೆ ಬೆಂಕಿಯೂ ಆಗಿದ್ದಾರೆ. ಒಟ್ಟಾರೆ ಹಾವೇರಿ ನೆಲದ ಸತ್ವವನ್ನು ಹಾವೇರಿಯಾಂವ್ ಅಂಕಣದಲ್ಲಿ ಹಿಡಿದಿಟ್ಟಿದ್ದಾರೆ. ಬದುಕಿನ ಎಲ್ಲ ಕಷ್ಟ, ನಷ್ಟ ಹಾಗೂ ಸಂಕಷ್ಟಗಳನ್ನು ಅನುಭವಿಸಿ ಹಾವೇರಿ ನೆಲದ ಸಂಗತಿಗಳನ್ನು ತಮ್ಮ ಬರವಣಿಗೆ ಮೂಲಕ ಬಿಚ್ಚಿಟ್ಟಿದ್ದಾರೆ. ಜನಸಾಮಾನ್ಯರೂ ಸುಲಭವಾಗಿ ಓದಿ ಅರ್ಥಮಾಡಿಕೊಳ್ಳುವ ಸಾಹಿತ್ಯ ಅಂಕಣಗಳಲ್ಲಿದ್ದು ಅಂಗೂರ ಅವರು ಮನಸ್ಸನ್ನು ಅರಳಿಸುವ ಸಾಹಿತ್ಯ ರಚಿಸಿದ್ದು ಸುಕ್ಕುಗಟ್ಟಿದ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ. ತಮ್ಮ ವಿಶಿಷ್ಟ ಬರವಣಿಗೆಗಳ ಮೂಲಕವೇ ಮಾಲತೇಶ ಅಂಗೂರ ಜನಸಾಮಾನ್ಯರಿಗೂ ಚಿರಪರಿಚಿತರಾಗಿದ್ದಾರೆ. ಪತ್ರಕರ್ತನಾಗಿ ಇವರ ಸಾಮಾಜಿಕ ತುಡಿತ ಅನನ್ಯವಾದುದು . **************************** ನಾಮದೇವ ಕಾಗದಗಾರ
You cannot copy content of this page