ಅಪ್ಪನಿಗೆ ಹೆಚ್ಚೇನು ಆಸೆಗಳಿರಲಿಲ್ಲ’
ಕವಿತ ಅಪ್ಪನಿಗೆ ಹೆಚ್ಚೇನು ಆಸೆಗಳಿರಲಿಲ್ಲ ವಸುಂಧರಾ ಕದಲೂರು ನನ್ನಪ್ಪನಿಗೆ ಹೆಚ್ಚೇನೂ ಆಸೆಗಳಿರಲಿಲ್ಲನಮ್ಮ ಓದಿನ ಕುರಿತೂ…ಹೆಣ್ಣು ಮಕ್ಕಳಿಗೆ ಆದಷ್ಟು ಬೇಗಮದುವೆಯಾದರೆ ಸಾಕು. ಒಳ್ಳೆಯಹುಡುಗ ತನಗೆ ಅಳಿಯನಾಗಿ,ಮಕ್ಕಳಿಗೆ ಬಲವಾದ ಗಂಡನಾಗಿಒಟ್ಟಾರೆ ಚೆಂದಾಗಿ ಬದುಕಿದರೆ ಸಾಕು. ಇಷ್ಟೇ… ನನ್ನಪ್ಪ ಎಂದೂ ಯಾವಹೆಣ್ಣುಮಕ್ಕಳನ್ನು ಹೀಗಳೆಯಲಿಲ್ಲ,ನಿಮ್ಮ ಕೈಲಾಗದ ಕೆಲಸವಿದೆಂದುಹೇಳಿ ನಮ್ಮ ಚೈತನ್ಯವನೆಂದೂಉಡುಗಿಸಲಿಲ್ಲ.ನಾವೊಂದು ಹೊರೆಯೆಂದುನಡೆ ನುಡಿಯಲೆಂದೂ ತೋರಲಿಲ್ಲ.ಗಂಡುಮಕ್ಕಳೊಡನೆ ಹೋಲಿಸಿಜರಿಯಲಿಲ್ಲ. ಜರಿಯ ಲಂಗ ಹೊಲೆಸಿಕೊಡುವುದ ಮರೆಯಲಿಲ್ಲ. ನನ್ನಪ್ಪನಿಗೆಂದೂ ಅಪಾರಆಸ್ತಿ ಗಳಿಸುವ ಹುಕಿ ಹುಟ್ಟಿರಲಿಲ್ಲ.ಬಂಧುಜನ ಪ್ರೀತಿ; ಗಳಿಸಿದ ಸ್ನೇಹವಿಶ್ವಾಸಗಳನು ಜೋಪಾನ- ಜತನಮಾಡುವ ರೀತಿ ಇಷ್ಟೇ ಆತ ಕೊನೆಗೆನಮಗಾಗಿ ಗಳಿಸಿಟ್ಟ ಆಸ್ತಿ.. ಅಪ್ಪನಿಗೆಂದೂ ಇತರೆ ಆಸೆಗಳಿರಲಿಲ್ಲ ತನ್ನ ಮಕ್ಕಳಿಗಿಂತಲೂಕಾಣದ ಮೊಮ್ಮಕ್ಕಳ ಮೇಲೆಯೇಹೆಚ್ಚು ಮೋಹ! ಆಗಾಗ್ಗೆ ಕನಸುಕಟ್ಟಿನುಡಿಯುವ ಹುಚ್ಚು ವ್ಯಾಮೋಹ.‘ನಿಮಗೆ ಮದುವೆಯಾಗಿ, ಮೊಮ್ಮಕ್ಕಳೆಲ್ಲಾದೊಡ್ಡವರಾಗಿ ಊರ ಮನೆ ಬಾಗಿಲಿಗೆಕಾರುಭಾರಿನ ಭರಾಟೆಯಲಿಬರುವಾಗ ಅಂಗಳದಿ ನಿಂತು ಆದರದಿ ಬರಮಾಡಿಕೊಳುವೆ..’ ಹೀಗೆ.. ಒಂದು ನಿರಪಾಯಕಾರಿ ಕನಸು ಕಾಣುತ್ತಾ ನಿರುಮ್ಮಳವಾಗಿದ್ದ ಅಪ್ಪ ಮರಳಿ ಬಾರದಊರಿಗೆ ತೆರಳಿ; ಈಗ ಅವರ ಮಕ್ಕಳನೂಮೊಮ್ಮೊಕ್ಕಳನೂ ಊರಿಗೊಮ್ಮೆ ಬನ್ನಿರೆಂದು ಕರೆಯಲಾರದ ಕನಸಾಗಿ ಉಳಿದರು. ಹಬ್ಬಹರಿದಿನಗಳಲಿ ಹೋದೆವೆಂದರೂ ‘ನಾಕುದಿನ ಹೆಚ್ಚು ನಿಲ್ಲಿರೆಂದು’ ತಡೆಯಲಾರದಊರು ಈಗ ಸವೆಯಲಾರದ ದಾರಿಯಲ್ಲಿದೆ. ಆ ನನ್ನಪ್ಪನಿಗೆ ಹೆಚ್ಚು ಆಸೆಗಳಿರಲಿಲ್ಲಇದ್ದವುಗಳನೂ ಈಡೇರಿಸಿಕೊಳಲುಕಾಲನೆಂಬ ಕಟುಕ ಕರುಣೆ ತೋರಲಿಲ್ಲ.
ಅಪ್ಪನಿಗೆ ಹೆಚ್ಚೇನು ಆಸೆಗಳಿರಲಿಲ್ಲ’ Read Post »








