ಕವಿತೆ ಮೊಬೈಲಾಯಣ ಪೂರ್ಣಿಮಾ ಸುರೇಶ್ ಹಳೆಯದು,ಉಪಯೋಗಕ್ಕೆ ಬಾರದು ಎಂದು ಸರಿಸಿಟ್ಟಮೂಲೆ ಸೇರಿದ ಮೊಬೈಲ್ಇಂದು ಅಚಾನಕ್ ಸಿಕ್ಕಿದೆ ಗಾತ್ರದಲ್ಲಿ ಚಿಕ್ಕದುಅಡ್ಡಡ್ಡ ತರಚಿದ ಕವಚಪರದೆ ದೃಷ್ಟಿ ಮಂದಇದರ ಮಿದುಳಲ್ಲಿ ನಾನು ಎಷ್ಟೊಂದು ಭಾವರಸ, ಚಿತ್ರಪಟಕಸವನ್ನೂ ತುಂಬಿಟ್ಟಿದ್ದೆಬೇಕಾದಾಗ ನೆರವಾಗುವುದೆಂದು ನಂಬಿದ್ದೆ ಕುತೂಹಲ ಆಶ್ಚರ್ಯಕರಹಿಡಿಯಲ್ಲಿ ಬ್ರಹ್ಮಾಂಡಧರ ಅಳಿಸದ ಮಾತು ತಳದಲ್ಲಿ ಉಳಿದಿರಬಹುದೇನನ್ನೊಡನೆ ಅನುಸಂಧಾನ ನಡೆಸಬಹುದೇಬಿಚ್ಚದೆ ರೆಕ್ಕೆ ತೆಪ್ಪಗಿದೆಚಾರ್ಜರ್ ಗೆ ಸಿಕ್ಕಿಸಿದೆಧ್ಯಾನಬಿಂದು ಮಿನುಗುವಂತೆಆಹಾ! ಕೆಂಪು ಚುಕ್ಕಿ ಅತ್ತ ಸರಿದು ದಿಟ್ಟಿಸಿದೆಈಡಾಗಿ ಸೂಕ್ಷ್ಮ ಸೆಳೆತಕ್ಕೆ ಈಗ ತನ್ನನ್ನು ತಾನೇತೆರೆದುಕೊಂಡಿತು ಕ್ಷಣಾರ್ಧದಲ್ಲಿನನ್ನ ಮೊಗದಲ್ಲಿ ಮುಗುಳ್ನಗೆಯ ಚೆಲ್ಲಿ- ಜಾತ್ರೆಯಲ್ಲಿ ಕಳೆದುಹೋದಹಸುಳೆ ಸಿಕ್ಕಂತೆಆಪ್ತತೆಯಿಂದ ಅಪ್ಪಿ,ಕೆನ್ನೆ ಸವರಿ ಸಂಭಾಷಿಸಿದೆಮುಗುಳ್ನಗು,ಅರೆನಗು, ಚೂರುಮಾತುಹಳಹಳಿಕೆ ಪ್ರಶ್ನೆಗಳ ಖಜಾನೆ;ಸ್ವಲ್ಪ ಹಾಡಿ ಬಿಟ್ಟ ಹಾಡು,ಕಾವ್ಯ ಆಗದ ಪದಗಳ ತಂಡ,ಕಥೆ, ಚುಟುಕು,ಲಹರಿಪೆಚ್ಚುಮುಖ, ವಿಜಯದ ನಿಶಾನೆರವಾನೆಯಾದ ದಾಖಲೆ ಕಳಚಿ ಬಿದ್ದ ಕ್ಷಣಗಳುಪರಾಗಸ್ಪರ್ಶ ನಡೆಸಿವೆಮೌನದ ಮೊಗ್ಗಿಗೆ ಸುಗಂಧವನು ಕೂಡಿಸಿದೆ ನೀನೆಂಬ ಕಳಚಿಹೋದ ನಾನುಕಳಚಲಾಗದಂತೆಎದುರಾದೆವು ನುಡಿಯಲಾಗದೆಪರಿಸ್ಥಿತಿಗೆ ತುಡಿಯಲಾಗದೆ ಈಗ ಗುಂಗಿನ ಸುರಿಮಳೆಎಲ್ಲೆಲ್ಲೂ ಹೊಮ್ಮಿದಂತೆ ಜೀವಸೆಲೆಎದೆ ಒದ್ದೆಹರವಾಗಿ ಉತ್ತ ಗದ್ದೆಕವನ ಪಲ್ಲವಿಸಿಪರಿಮಳಿಸಿದ ಮುಹೂರ್ತ; ಬದುಕಿಗೆ ದೊರಕಿದಂತೆ ಅರ್ಥ ********************************************************************************************************