ಗಾಯ
ಕವಿತೆ ಗಾಯ ಕಾತ್ಯಾಯಿನಿ ಕುಂಜಿಬೆಟ್ಟು ನಾನೇ ಒಂದು ಗಾಯ!ಆಳವಾಗುತ್ತಲೇ ಇರುತ್ತೇನೆಹೃದಯದ ತಳದವರೆಗೂ…!ನೋವಿನ ಹಲ್ಲಿಗೇ ನಾಲಗೆಯುಮತ್ತೆ ಮತ್ತೆ ತುಡಿಯುವಂತೆತಾನೇ ತಾನಾಗಿ ನೊಂದು ಕೀವಾಗಿ ನವೆಯಾಗಿಬೆರಳುಗಳನ್ನು ತುಡಿಸುತ್ತದೆನಿದ್ದೆಯಲ್ಲೂ ಅಭ್ಯಾಸವಾಗಿ! ” ಉಬ್ಬಸಕ್ಕಾದರೂ ಮದ್ದುಂಟು… ಅಭ್ಯಾಸಕ್ಕಿಲ್ಲ!” ಎ೦ದುಬಿಟ್ಟರುಹಾಗನ್ನುವುದೇ ಅಭ್ಯಾಸವಾಗಿದ್ದಗೀಳುತಜ್ಞರು! ಬದುಕಿನ ಕಷ್ಟಗಳನ್ನು ಹಾಡುಹಗಲಲ್ಲೇ ಕಂಡುಹನಿಹನಿದು ಬತ್ತಿವೆ ಕಂಗಳ ಕೆರೆಗಳು !ವಿಲಿವಿಲಿ ಒದ್ದಾಡುತ್ತಿವೆ ಕಣ್ಣ ಮೀನುಗಳು!ನಿದ್ದೆಯಲ್ಲಿ ನಕ್ಷತ್ರ ಸುಟ್ಟುಕಣ್ಣಬೊಂಬೆಗಳು ಉರುಳಿಬಾಯಿಯ ವಸಡಿಗೆ ಬೀಳುತ್ತವೆಹಲ್ಲುಗಳು ಕಳಚಿ ಹೃದಯಕ್ಕೇ ಉದುರಿಕಚ್ಚಿ ಕಚ್ಚಿ ಕಿತ್ತು ತಿನ್ನತೊಡಗುತ್ತವೆ!ಕೈಗಳು ತಲೆಯನ್ನೇ ಕಿತ್ತುಪಕ್ಕಕ್ಕೆ ಎಸೆಯುತ್ತವೆಮೆದುಳನ್ನೇ ಗೆದ್ದಲು ತಿನ್ನುವನೋವನ್ನು ಸಹಿಸಲಾಗದೆ ಚೀರಿ!ಮುಂಡವು ಮಂಡೆಯಿಲ್ಲದೆಯೇಆಗ ಹಾಯಾಗಿ ಊರೂರು ಸುತ್ತುತ್ತದೆ!ನೀನಾಗ ಬಂದು ನನ್ನ ರುಂಡವನ್ನುಮುಂಡಕ್ಕೆ ಜೋಡಿಸುತ್ತಿ” ಹೀಗೆಲ್ಲ ರುಂಡವಿಲ್ಲದೆ ಅಲೆಯಬೇಡ!” ಅನ್ನುತ್ತಿ! ನನ್ನ ರುಂಡ ಈಗಾಗಲೇಆಕ್ಷೋಹಿಣಿ ಚತುರಂಗ ಬಲಗಳಬಬ೯ರ ಕುರುಕ್ಷೇತ್ರ ಯುದ್ಧವನ್ನೇ ನೋಡಿಬಿಟ್ಟಿದೆಘಟೋತ್ಕಚನ ಮಗ ಬಬ೯ರಿಕನಂತೆಮು೦ಡವಿಲ್ಲದೆಯೇ… ಈಗ ಮತ್ತೆ ಬಾಳ ಪಯಣಮೊದಲoತೆಯೇನೀನು ಅಂದದ್ದಕ್ಕೆಅನ್ನಲಾರದ್ದಕ್ಕೆ!ಈ ಮೆದುಳು ಹೃದಯವೆಂಬಎರಡು ಗಾಯಗಳಿಗೆಮದ್ದೇ ಇಲ್ಲದ್ದಕ್ಕೆ.. ನಾನೇ ಒಂದು ಗಾಯ!ಇನ್ನೂ ಎಷ್ಟು ಆಳ! **************************************









