ಗಝಲ್
ಗಝಲ್ ಪ್ರಭಾವತಿ ಎಸ್ ದೇಸಾಯಿ ಅರಳಿದ ಸುಮ ದೇವರಿಗೆ ಅಪಿ೯ತವಾಗಲಿ ಬಾಡುವ ಮುನ್ನವೀಣೆ ತಂತಿ ಮೀಟಿ ಶ್ರುತಿ ಸರಾಗವಾಗಲಿ ಹಾಡುವ ಮುನ್ನ ಜಗದ ನಿಂದೆ ಅಪಹಾಸ್ಯ ಗಳಿಗೆ ನೊಂದು ಅನುಮಾನಿಸದಿರುಜೀವಿಗಳ ಪ್ರೀತಿ ಬೆಸುಗೆ ಗಟ್ಟಿಯಾಗಲಿ ಕೂಡುವ ಮುನ್ನ ನೆರಳಿರದ ಹಾದಿಯಲಿ ಬದುಕಿನ ಬಂಡಿ ಸಾಗಿದೆ ಅನವರತಬಾಳಿನ ಕಹಿ ನೆನಪ ದಿನಗಳು ಮರೆಯಾಗಲಿ ಕಾಡುವ ಮುನ್ನ ವಿರಹ ದಳ್ಳುರಿಯಲಿ ನಿತ್ಯ ದಹಿಸುತಿವೆ ಪ್ರೇಮಿಗಳ ಉಸಿರುಅನುರಾಗ ಚುಂಬನಕೆ ಹೃದಯ ಹಗುರಾಗಲಿ ಬೇಡುವ ಮುನ್ನ ಕೋಶ ಕೀಟಕೆ ರೆಕ್ಕೆಗಳ ಹಚ್ಚಿ ಕೊಂಡು ಹಾರುವ ಆತುರಪ್ರಭೆಯ ಮೋಹ ಇರುಳ ಧ್ಯಾನ ದೂರಾಗಲಿ ಹೊರಡುವ ಮುನ್ನ *************************************************









