ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಿರಾಕರಣೆ

ಕವಿತೆ ನಿರಾಕರಣೆ ಕಾವ್ಯ ಎಸ್. ನನ್ನ ಮರೆತ ಹೊನ್ನ ಮೆತ್ತ ಹೊತ್ತುನನ್ನ ತೊರೆದು ಯೋಚಿಸಿದಆ ಘಳಿಗೆಗಳ ಚಲನಗಳುಕಳಚುತ್ತಿವೆ, ಇಂದು-ನಾಳೆಗಳ ಅಂಗಿಯಯಾರ ಕತ್ತಲು ಯಾರ ಒಡಲ್ಲಲ್ಲಿಜಿನುಗಿ ಹಾವಾಗುತ್ತಿರುವುದೋಕಡಲ ತುಂಬೆಲ್ಲ ಬರುವ ನಿನ್ನ ನೆನಪಿನಆರಿದ ಮಲ್ಲಿಗೆಯ ಕೆಂಡಗಳುಎಷ್ಟು ಹೊತ್ತು ಸುಡಬಲ್ಲವು ನನ್ನಕರಕಲಾಗಿಸಲು ಅಥವಾ ಕಪ್ಪು ಬಣ್ಣ ಹಚ್ಚಲುಬೇಕ ಸಮಯದ ಎಲ್ಲೆಗಳುಬೂದಿಯ ಮಣ್ಣಲ್ಲಿ ಒಲೆಯ ತೂತುಗಳಾಗಿಹರಿದು ಹೋಗಲಿಎಷ್ಟೆಂದು ಉರಿಯ ಕಾವಿಗೆ ತಲೆ, ಕಾಲು ಕೊಡಲಿಆತ್ಮಶಕ್ತಿಯ ಅಂತರಾಗದ ಹಾಹಾಕಾರ ಮುಗಿಲೆದ್ದಿದೆಒಡಲಿನ ಭಾರ ಹೆಚ್ಚಿ ನಜ್ಜಾಗುತ್ತಿದೆಆಳಗರ್ಭದಲ್ಲಿ ಅಡಗಿ ನೆರೆ ಉಕ್ಕದಿರಲಿಅಲ್ಲೇ ಬೆನ್ನು ಮೇಲಾಗಿಸಿ, ಸಮುದ್ರರಾಜನತೋಳಲ್ಲಿ ಮಲಗಲಿನನ್ನೊಬ್ಬಳದೇ ಎಂಬ ಸಾಕ್ಷಾತ್ಕಾರಗೋರಿಯ ಮೇಲೆ ಬೆಳೆದ ರಜವಾಗಿದೆಕಳೆಯ ಭಾರಕೆ, ನೀ ಬರುವ ದಾರಿ ಕಾಣುತ್ತಿಲ್ಲಇಂದು -ನೆನ್ನೆಗಳಲ್ಲಿ ಭೂಗತವಾಗಿ ನಿರಾತ್ಮವಾಗಿದ್ದಅಣುಗಳೆಲ್ಲ ಕಣ್ಣು, ಕಿವಿ, ಮೂಗು, ಬಾಯಿಗಳಾಗಿಅಸ್ಥಿಪಂಜರಕ್ಕೆ ಇಂದು ರೆಕ್ಕೆ ಬಂದು ಉಸಿರಾಡುತ್ತಿವೆನನ್ನ ನೋವುಗಳೆಲ್ಲ ಸುಟ್ಟ ಬದನೆಕಾಯಿಗಳಾಗಿಹೊಟ್ಟೆ ಸೇರಿ ಆರಾಮದಲ್ಲಿ ನಿದ್ರಿಸುತ್ತಿವೆ. ****************************

ನಿರಾಕರಣೆ Read Post »

ಕಾವ್ಯಯಾನ

ಧಿಕ್ಕಾರ… ಧಿಕ್ಕಾರ…!!

ಕವಿತೆ ಧಿಕ್ಕಾರ… ಧಿಕ್ಕಾರ…!! ಡಾ. ಮಲ್ಲಿನಾಥ ಎಸ್. ತಳವಾರ ಭೋಗದ ವಸ್ತುವೆಂದು ಭಾವಿಸಿದ ಈ ಸಮಾಜಕ್ಕೊಂದು ಧಿಕ್ಕಾರಹೆರಿಗೆಯ ಯಂತ್ರವೆಂದು ಭಾವಿಸಿದ ಗಂಡುಕುಲಕ್ಕೊಂದು ಧಿಕ್ಕಾರ ನಯ ನಾಜೂಕಿನ ಬಲವಂತದ ಫೋಷಾಕು ತೊಡಿಸಿದರು ಹೆತ್ತವರುತಾಳ್ಮೆಯ ಅನಗತ್ಯ ಮಾಲೆ ಕೊರಳಿಗೆ ಹಾಕಿದರು ಬೆಳ್ಳಿ ಕೂದಲಿನವರುಬಿಟ್ಟು ಕೊಡುವುದರಲ್ಲಿಯೇ ತೃಪ್ತಿ ಪಡೆಯಬೇಕೆಂದರು ಬಂಧುಗಳುಗಂಡಿಗಿಲ್ಲದ ಮೌಲ್ಯ ನಮ್ಮ ಮೇಲೆ ಹೇರಿದ ಪುಸ್ತಕಗಳಿಗೊಂದು ಧಿಕ್ಕಾರ ಕಾಮದ ಕಂಗಳಲಿ ನುಂಗುವ ತೋಳಗಳಿವೆ ನಮ್ಮ ನೆರೆಹೊರೆಯಲ್ಲಿಮುಖವಾಡದಿ ಉಬ್ಬು-ತಗ್ಗುಗಳ ಕಂಡು ಜೊಲ್ಲು ಸುರಿಸುವ ನಮ್ಮವರಿದ್ದಾರೆಹಣ ಚೆಲ್ಲಿ ಕನಸುಗಳನ್ನು ದೋಚುವ ಧನಿಕರು ಇದ್ದಾರೆ ಜಗದೊಳಗೆಬೆತ್ತಲೆ ದೇಹಕ್ಕೆ ಬೆಣ್ಣೆ ಸವರುವ ಮಾತಿನ ಮಲ್ಲರಿಗೊಂದು ಧಿಕ್ಕಾರ ತಮ್ಮ ದೇಹಕ್ಕಿಂತ ನಮ್ಮ ತುಂಬಿದ ಅವಯವಗಳ ಮೇಲೆ ಅವರ ಕಣ್ಣುಚಾವಡಿಗಳ ತುಂಬೆಲ್ಲ ಸೀರೆ, ಚೂಡಿದಾರ ಎಳೆಯುವ ನಯವಂಚಕರಿದ್ದಾರೆಅಂತರ್ಜಾಲವೂ ಬಿಕರಿಯಾಗುತಿದೆ ಇಂದು ಸೌಂದರ್ಯದ ಮಣ್ಣಿನಲ್ಲಿರಕ್ತಸಿಕ್ತ ಅಂಗಾಂಗಗಳ ಮೇಲೆ ಆಟ ಆಡುವ ಸಜ್ಜನರಿಗೊಂದು ಧಿಕ್ಕಾರ ಧಿಕ್ಕಾರ.. ಧಿಕ್ಕಾರ.. ಪುರುಷಾರ್ಥಗಳಲ್ಲಿ ಕಾಮವನ್ನು ಪೂಜಿಸುವವರಿಗೆಧಿಕ್ಕಾರ… ಧಿಕ್ಕಾರ.. ದಾನವ ರೂಪದಲ್ಲಿ ಅಡಗಿರುವ ಬುದ್ಧಿವಂತರಿಗೆ *******************************

ಧಿಕ್ಕಾರ… ಧಿಕ್ಕಾರ…!! Read Post »

ಕಾವ್ಯಯಾನ

ಸ್ವಗತ

ಕವಿತೆ ಸ್ವಗತ ಮಮತಾ ಶಂಕರ್ ದೂರದಲ್ಲಿ ನಾನು ನೀನುಒಂದಾಗಿ ಕಂಡರೂ ಒಂದಾಗದ ನಿಜದೂರದ ಕಣ್ಗಳಿಗೆ ಸುಳ್ಳೆಲ್ಲವೂ ಸತ್ಯವೇ….ನೀನು ಮೇಲೆ ತನ್ನ ಪಾಡಿಗೆ ತಾನಿರುವ ಗಗನಸೂರ್ಯ ಮೋಹಿತೆ ಭೂಮಿಗೆ ತನ್ನ ಕಕ್ಷೆಯಲ್ಲೇ ಯಾನ ನೀನು ಒಮ್ಮೊಮ್ಮೆ ಉರಿಯೆದ್ದುಸುರಿಸುವೆ ಕೆಂಡ ಮೈಮನಗಳಿಗೆ ;ನಾನೋ ಹಪಹಪಿಸುವೆ ಒಂದೆರಡುತಂಪನಿಗಳಿಗೆಹುಚ್ಚೆದ್ದು ಮಳೆ ಸುರಿಸುವೆ ಅದೆಒಲವೆಂದು ಬಾನೆದೆಯ ಸೀಳಿ ;ಕಡಲುಕ್ಕಿಸಿ ನದಿ ಸೊಕ್ಕಿಸಿ ತಳಮಳಿಸುವೆಬಿಕ್ಕಳಿಸುತ ನಾನಿಲ್ಲಿ…… ನಿನ್ನಿಂದ ಅದೆಷ್ಟು ಬಾರಿ ಬಿರುಮಳೆಗೆಬಿರುಗಾಳಿಗೆ ಬಿರುಬಿಸಿಲಿಗೆ ತುತ್ತಾದರೂ ನಾನುನಿನಗುಂಟೆ ಈ ಒಡಲೊಳಗಿಂದಕಣಕಣವು ನೋವಾಗಿ ಚಿಗುರಿ ಮರಹೂ ಕಾಯಿ ಹಣ್ಣಾಗುವ ಭಾರ ?ನೀ ಸುರಿಸಿದರೂ ಬೆಳದಿಂಗಳು ಮಳೆಯಕ್ಷಣವಷ್ಟೆ ; ಮತ್ತೆಲ್ಲ ಮಾಯೆ…….. ನನ್ನೆದೆಯ ನೋವುಗಳು, ನಿಟ್ಟುಸಿರುಗಳುತಾಕುವುದೇ ಇಲ್ಲ ನಿನಗೆಏಕೆಂದರೆ ತಾಕುವುದೇ ಇಲ್ಲನಾ ನಿನಗೆ ನೀ ನನಗೆ !ಆದರೂ ಇರಬೇಕಾಗುತ್ತದೆಒಬ್ಬರಿಗೊಬ್ಬರು ಪೂರಕವಾಗಿಸೌಖ್ಯಯಾನಕೆ ಒಂದಾಗದರೈಲು ಹಳಿಗಳ ಹಾಗೆಒಂದಾಗಿ ಬಾಳುವುದೆ ಬದುಕೆಂದುಕೊಳ್ಳುವುದಕ್ಕಿಂತಜೊತೆಯಾಗಿ ಸಾಗುವುದೆ ಒಲವೆಂದುಕೊಳ್ಳುತ್ತ **************************************

ಸ್ವಗತ Read Post »

ಕಾವ್ಯಯಾನ

ಚಿಂದಿ ಆಯುವ ಕುಡಿಗಳು

ಕವಿತೆ ಚಿಂದಿ ಆಯುವ ಕುಡಿಗಳು ನೂತನಾ ದೋಶೆಟ್ಟಿ ಆಗಸವ ಬೇಧಿಸುವ ಸೂರುಚಂದ್ರನಿಗೂ ಗಾಬರಿಪ್ರೇಯಸಿಯ ಮೈಮೇಲೆಪ್ಲ್ಯಾಸ್ಟಿಕ್ಕಿನ ಗಾಯಬೆಳದಿಂಗಳೂ ಆರಿಸದ ಬೇಗೆ ಓಝೋನಿನ ತೇಪೆಯಲ್ಲಿಇಣುಕುವ ಸೂರ್ಯಸತಿಯ ಜಾಲಾಡುವ ಅವನುಸಹಿಸಲಾಗದ ಧಗೆ ಮತ್ಸರವೇಕೆ?ಅವಳ ಪ್ರಶ್ನೆಒಡಲ ಮಮತೆಯ ಕುಡಿಗಳವುಎದೆ ಭಾರ ಕಳೆಯುವವು ನೀರ ಕಾಣದ ದೇಹಹಣಿಗೆ ಸೋಕದ ತಲೆಸಿಗುವ ರೂಪಾಯಿಗೆಏನೆಲ್ಲ ಬವಣೆ ಸೈರಣೆ! ತಾಯ ಮಮತೆಗೆಪ್ರೇಮಿಗಳ ಹನಿಗಣ್ಣುಹೆತ್ತೊಡಲ ಉರಿಗೆಗೋಳಿಟ್ಟ ರಾತ್ರಿಗಳುಹರಸಿದವು ಕೈಯೆತ್ತಿಚಿಂದಿ ಆಯುವ ಕುಡಿಗಳ ಇರಲೆಂಟು ಜನುಮಎಲೆ ತುಂಬಿ ಉಣಲಿಕನಸುಗಳ ನಿದ್ರಿಸಲಿನಿನ್ನ ಸ್ವಚ್ಛ ಮಡಿಲಲ್ಲಿ **********************

ಚಿಂದಿ ಆಯುವ ಕುಡಿಗಳು Read Post »

ಕಾವ್ಯಯಾನ

ಮತ್ತೊಮ್ಮೆ ಬೆಳಕು

ಕವಿತೆ ಮತ್ತೊಮ್ಮೆ ಬೆಳಕು ಹುಳಿಯಾರ್ ಷಬ್ಬೀರ್ ಹುಳಿಯಾರ್ ಷಬ್ಬೀರ್ ಅಂದಿನ ಅರೆಬೆತ್ತಲೆ ಫಕೀರನ ಬಿಡದ ನೆರಳು ಇಂದು ಮತ್ತೊಮ್ಮೆ ಆಗಿದೆ ಗೋವರ್ಧನ ಗಿರಿಗೆ ಹಿಡಿದ ಶ್ರೀ ಕೃಷ್ಣನ ಬೆರಳು ಅಂದು ಹರಡಿದ್ದ ಫರಂಗಿಯವರ ಮುಳುಗದ ಸಾಮ್ರಾಜ್ಯದ ಗುಲಾಮಗಿರಿಗುಡಿಸಿ ಹಾಕಿ ಸ್ವಚ್ಛ ಮಾಡಿ,ಜಯಭೇರಿ ಹೊಡೆದಿತ್ತುನಮ್ಮ ಗಾಂಧಿಗಿರಿ. ಇಂದು ಎತ್ತ ಸಾಗುತ್ತಿದೆ ಸ್ವಾತಂತ್ರ್ಯ ಪಡೆದ ಈ ಪುಟ್ಟವಿಶ್ವಧಾಮ…..?ಮೀರ್ ಸಾಧಿಕ್ ರ ದರ್ಬಾರಿನಲ್ಲಿ ನೀತಿ ನಿಯಮಗಳಲ್ಲ ಅಯೋಮಯವೋ ರಾಮ ರಾಮ…. ತೋರಿಕೆಗೆ ಆಚಾರ, ಮಾತೆಲ್ಲ ಬಂಗಾರ ನಡೆ ನೋಡಿದಡೆ ರೂಢಿಗತ ಭ್ರಷ್ಟಾಚಾರಪ್ರಜೆ ಮೋಸ ಹೋದ ಮೇಕೆಕತ್ತಲೆಯೊಳಗೆ ಕೋತಿಗಳದೇ ಕೇಕೆಗಿಳಿ, ಕೋಗಿಲೆ, ನವಿಲುಗಳೆಲ್ಲನಮಕ್ ಹರಾಮರ ವಜ್ರ ಪಂಜರದಲ್ಲಿ ಬಂಧಿಗಳಾಗಿವೆ ಏಕೆ…? ಗಾಂಧಿ ಅಂದು ‘ ಗಿರಿ ‘ ಯಾದಂತೆ ಅಣ್ಣಾ ಇಂದು ‘ಧರೆ ‘ಯಾಗಿ ಅವತರಿಸಿ ಛಲವನೂಲಲು ಕುಳಿತಾಗ ನೀನುನೂಲಾಗು ಬಾ, ನೀನು ನೂಲಾಗು ಬಾ ಭಾರತೀಯಮತ್ತೊಂದು ಸ್ವಾತಂತ್ರ್ಯದ ಬಟ್ಟೆಗೆ…!! ***************************

ಮತ್ತೊಮ್ಮೆ ಬೆಳಕು Read Post »

ಕಾವ್ಯಯಾನ

ಪಟ್ಟದರಸಿಯೊಂದಿಗೆ ಪಟ್ಟಾಂಗ

ಕವಿತೆ ಪಟ್ಟದರಸಿಯೊಂದಿಗೆ ಪಟ್ಟಾಂಗ ಪ್ರೇಮಶೇಖರ ಪಟ್ಟದಕಲ್ಲಿನ ಪಟ್ಟದರಾಣಿಯೇ ಇಷ್ಟದ ಒಡವೆಯ ಕೊಡಿಸುವೆ ಬಾ. ಕಷ್ಟವೇ ಆದರೂ, ನಿದ್ರೆಯೇ ಹೊದರೂ ತರುವೆನು ಸರವನು ನಿನಗೊಂದ. ಮೈಸೂರಿನ ಶೂರನೇ, ಪ್ರಾಣಕಾಂತನೆ ಒಡವೆಯು ನನಗೆ ಬೇಡಪ್ಪ. ಮಳೆಗಾಲಕೆ ಮೊದಲೇ ಸೋರುವ ಸೂರನು ಚಂದಕೆ ನೀನು ಹೊದಿಸಪ್ಪ. ಸೂರಿನ ಕೆಲಸವ ನಂತರ ಮಾಡುವೆ, ಮೊದಲಿಗೆ ನಿನ್ನ ಕೊರಳನು ತುಂಬುವೆ ಕಿವಿಯಲಿ ಓಲೆಗಳೆರಡನು ಅಂಟಿಸುವೆ, ಜುಮಕಿಗಳೆರಡನು ತಂದೂ ಕೂಡಿಸುವೆ. ಓಲೆಯು ಬೇಡ, ಜುಮಕಿಯೂ ಬೇಡ, ಒಡವೆಯ ಗೊಡವೆಯು ಬೇಡವೇಬೇಡ. ಮಳೆಗೇ ಮೊದಲೇ ಕಣಜವ ತುಂಬಪ್ಪ, ಒಡವೆಯ ಕನಸನು ಸದ್ಯಕೆ ನೀ ಮರೆಯಪ್ಪ. ಕಣಜದ ಕಥೆಯನು ನಾಳೆಗೆ ನೋಡುವೆ, ರಾಗಿಯೇ ಏಕೆ, ಭತ್ತವ ತುಂಬುವೆ. ನೋಡಲಾರೆನಿಂದು ನಿನ್ನಯ ಬರಿಗೈಗಳನು, ತರಬೇಕಿದೆ ಈಗಲೇ ಅಂದದ ಬಳೆಗಳನು. ರೊಟ್ಟಿಯ ತಟ್ಟಲು ಹಿಟ್ಟೇ ಇಲ್ಲ, ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆಯಲ್ಲ! ಕನಕದ ಕನಸಿಗೆ ಸಮಯವಿದಲ್ಲ, ಬೇಗನೆ ಹೋಗಿ ಸೇರು ರಾಗಿ ನೀ ತರುವೆಯಲ್ಲ? ರಾಗಿಯ ಚಿಂತೆ ಈಗಲೇ ಯಾಕೆ? ಹೊಟ್ಟೆಯ ಹಸಿವನು ಕೆದಕುವೆಯೇಕೆ? ಬಾ ನಿನ್ನಯ ಹೊಟ್ಟೆಯ ಮೇಲೆ ಡಾಬನು ಕಟ್ಟುವೆ, ನಿನ್ನಯ ಕೈಯನು ಹಿಡಿದು ದರ್ಪದಿ ವಾಕಿಂಗ್ ಹೋಗುವೆ. ನಿಮ್ಮಯ ಷರಾಯಿಯು ನೆಟ್ಟಗೆ ಹರಿದಿದೆ, ಅಂಗಿಯಲೆರಡು ತೂತೂ ಬಿದ್ದಿವೆ. ತೊಟ್ಟು ಹೇಗೆ ನಡೆವಿರಿ ನೀವು ಊರ ಮಧ್ಯದಲಿ? ನಾ ಒಗೆದು ಹೇಗೆ ಒಣಹಾಕಲಿ ಅದನು ಹಿತ್ತಲಲಿ? ಷರಾಯಿ ಹರಿದರೆ ಪಂಚೆಯ ಹಾಕುವೆ, ಅಂಗಿಯ ಎಸೆದು ಶಲ್ಯವನೇರಿಸಿ ನಡೆವೆ. ಚಿಂತೆಯ ಬಿಡು ನೀ ಚಿನ್ನಾರಿ ಚೆಲುವೇ, ಈಗಲೇ ನಿನಗೆ ನಾ ಕಾಲ್ಗೆಜ್ಜೆಯ ತರುವೆ. ಕಾಲ್ಗೆಜ್ಜೆಯ ಕಟ್ಟಿ ನಾ ಕುಣಿಯಲಿ ಎಲ್ಲಿ? ಸುಮ್ಮನೆ ಯಾಕೆ ಮಾತಿನ ಬಡಿವಾರವಿಲ್ಲಿ? ಸೂರನು ಹೊದಿಸದೆ, ಕಣಜವ ತುಂಬದೆ ಹೋದರೆ ನೀವೀಗ, ಮೊದಲ ಮಳೆಗೂ ಮೊದಲೇ ನಾ ನಡೆವೆ ತವರಿಗಾಗ. ಸೂರನು ಹೊದಿಸುವೆ, ಕಣಜವ ತುಂಬುವೆ ಕೇಳೇ ಜಾಣೆ. ನಾ ಎಲ್ಲ ಮುಗಿಸಿದ ಮೇಲೆ ಬಾ ನೀ ಬಿಟ್ಟು ಅಡುಗೆಕೋಣೆ. ಪಟ್ಟದಕಲ್ಲಿನ ಪಟ್ಟಣಶೆಟ್ಟಿಯ ಮುದ್ದಿನ ಕೂಸೇ, ತಗೋ ಈಗಲೇ ಕೈ ಮೇಲೆ ಭಾಷೆ. ಹೇ ಮೈಸೂರು ಮಹಾರಾಜ, ಓ ಮೈ ಲಾರ್ಡ್! ಸೂರೂ ಸೊಗಸಿದೆ, ನೆಲವೂ ಹಸನಿದೆ, ಕಣಜದ ತುಂಬ ಭತ್ತವು ತುಂಬಿದೆ. ನಾ ಸುಮ್ಮನೆ ನಿನ್ನಯ ಕಾಲೆಳೆದೆ. ಪಟ್ಟದಕಲ್ಲಿನ ಅತ್ತೆಯ ಮಗಳೇ, ತುಂಟ ತರಳೆ, ತಿಳಿಯದೇ ನನಗೆ ನನ್ನಯ ಪಟ್ಟದರಸಿ ಯಾರೆಂದು? ಇದನರಿತೇ ನಾ ಹಿಡಿದೆ ನಿನ್ನಯ ಕೈಯನು ಅಂದು. ಕಟ್ಟಿದೆ ಎನ್ನೆದೆಯರಮನೆಯನು ನೀ ಮೈಸೂರಿಗೆ ಬಂದು. ನನ್ನೀ ಕೊರಳಲಿ ಕನಕ ಕಂಠೀಹಾರ, ಕೆಳಗೆ ಕಾಲ್ಬೆರಳಲಿ ಬೆಳ್ಳಿಯ ಕಾಲುಂಗುರ, ಎರಡರ ನಡುವೆ ಹಲವು ಹತ್ತು ಬಂಗಾರ, ನಿನಗಾಗೇ ನನ್ನ ಈ ಎಲ್ಲ ಸಿಂಗಾರ. ನಡೆಯೋ ಎನ್ನಯ ಕೈಹಿಡಿದು‍, ನನ ಸರದಾರ. ==========================

ಪಟ್ಟದರಸಿಯೊಂದಿಗೆ ಪಟ್ಟಾಂಗ Read Post »

ಕಾವ್ಯಯಾನ

ಮೌನ ಬೆಳದಿಂಗಳಂತೆ ನಗುತ್ತದೆ…

ಕವಿತೆ ಮೌನ ಬೆಳದಿಂಗಳಂತೆ ನಗುತ್ತದೆ… ಬಿದಲೋಟಿ ರಂಗನಾಥ್ ಮೌನ ಬೆಳದಿಂಗಳಂತೆ ನಗುತ್ತದೆಮಾತಾಡುವುದಿಲ್ಲಎಷ್ಟೋ ದೂರ ನಡೆದು ಮತ್ತೆ ಬಂದುಕೂರುತ್ತದೆ ಮಡಿಲ ಮಗುವಂತೆ ಚಿಂತೆಗಳಿಗೆ ಬಟ್ಟೆ ತೊಡಿಸಿಶೃಂಗಾರ ಮುಡಿಸುತ್ತದೆಎಷ್ಟೊಂದು ಕೈಗಳು ಪರಚಲು ಬರುತ್ತವೆನಗುತ್ತವೆ ಅಳುತ್ತವೆಸೀಳಾದಿಯ ಮೇಲೆ ನಡೆದುಮುಗಿಲ ಚುಕ್ಕಿಗಳ ಮುಟ್ಟುತ್ತವೆ ಕಣ್ಣವೆಗಳ ಒಳಗಿನ ಧ್ಯಾನಬಾಗಿಲ ತೆರೆದುನಖಶಿಕಾಂತ ಕಾರುವ ಬೆಂಕಿಯ ಜ್ವಾಲೆ ನಂದಿಸಿಹೂ ಮುಡಿಸುತ್ತದೆ ನಡುವೆಅಳುವ ಧ್ವನಿಗೆ ಸೋತುಕಿವಿಗಳಿಗೆ ರೆಕ್ಕೆ ಬಂದುಬಹುದೂರ ನಡೆದು ಬೊಗಸೆ ತುಂಬಿನಿಜತ್ವದ ಸಾರಕೆ ಬುದ್ಧಿಯ ಮೆತ್ತಿನಡೆದು ಬರುವಾಗ ಮೋಡ ಗುಡುಗಿಮಳೆಯ ಬಿಲ್ಲುಗಳು ಬೀರಿದವುಭಾವ ಗುಚ್ಚದ ಎದೆಗೆ. ಮೌನದೊಳಗಿನ ಗೋಡೆಯ ಮೇಲೆಬರೀ ಶಾಂತತೆಯ ಚಿತ್ರ ಮೂಡುವುದಿಲ್ಲಬೆಳಕನು ನುಂಗುವ ಕತ್ತಲೆಗೆ ಕೈ ಇರುವಂತೆಸಿಕ್ಕಲುಗಳೂ ಮಾತಾಡುತ್ತವೆನೋಡಲು ಮಾತ್ರ ಮೌನಅದು ಎಂದಿಗೂಚಾಟಿಯಿಲ್ಲದ ಬುಗುರಿ. ***********************

ಮೌನ ಬೆಳದಿಂಗಳಂತೆ ನಗುತ್ತದೆ… Read Post »

ಕಾವ್ಯಯಾನ

ಅದೆ ಕೂಗು

ಕವಿತೆ ಅದೆ ಕೂಗು ಶಂಕರಾನಂದ ಹೆಬ್ಬಾಳ ಮತ್ತೆ ಮತ್ತೆ ಅದೆ ಕೂಗುಕೇಳಿದರೆ ಮೈಜುಂ ಎನ್ನುವ ಕ್ರೌರ್ಯಧಿಕ್ಕಾರವಿರಲಿ ನಿಮ್ಮ ಪುರುಷತ್ವಕ್ಕೆಅಬಲೆಯ ಮೇಲೆ ಪೌರುಷತೋರಿಸಿದ ನಾಚಿಕಗೇಡಿನ ಜನ್ಮ…..!! ಬಾಪುವಿನ ಕನಸು ನನಸಾಗಲಿಲ್ಲಒಡಲ ದಳ್ಳುರಿಯು ಹತ್ತಿ ಉರಿದಿದೆನಿಗಿ ನಿಗಿ ಕೆಂಡದಂತೆ…ಆರ್ತನಾದವ ಕೇಳುವರಿಲ್ಲದೆಕೇಳಿದರು ಮಂಗನಂತೆಕೈ ಬಾಯಿ ಕಣ್ಣು ಮುಚ್ಚಿಕುಳಿತಿದ್ದೆವೆ ಹೇಡಿಯಂತೆ……!! ನಿನ್ನ ದೇಹಕ್ಕೆ ಆಸೆ ಪಟ್ಟವರಿಗೆದಫನ್ ಮಾಡಬೇಕುಕಾಮುಕರ ಕೈಕತ್ತರಿಸಿನಾಯಿನರಿಗಳಿಗೆ ಹಾಕಬೇಕುಸತ್ತವಳು ನೀನಲ್ಲ….!! ಮತ್ತೆ ಮತ್ತೆ ಕೇಳುತಿದೆಅಮಾಯಕ ಹೆಣ್ಣುಮಕ್ಕಳಮೇಲಿನ ದೌರ್ಜನ್ಯದ ಕೂಗು..ನರಕದ ಹುಳುವಾಗಿ ಬಳಲಿದಮನುಜನ ಸಹವಾಸ ಸಾಕು….!! **************************

ಅದೆ ಕೂಗು Read Post »

ಕಾವ್ಯಯಾನ

ಅರೆನಗ್ನ ಕನಸು

ಕವಿತೆ ಅರೆನಗ್ನ ಕನಸು ಕಾವ್ಯ ಎಸ್. ನಿನ್ನ ಅರೆ ಬೆಳಕಿನ ಇಬ್ಬನಿಯ ಮನೆಯಲ್ಲಿ ನಾ ಒದ್ದೆಯಾಗಿ ಒಣಗುತ್ತಿರುವಾಗ ಕೋಲ್ಮಿಂಚಂತೆ ನೀ ಹೊಕ್ಕೆ ಚಳಿಯನ್ನು ತಬ್ಬಲಿಯಾಗಿ ಹೊದ್ದಿದ್ದ ನನಗೆ ಕಣ್ಣುಗಳಿಂದ ಬಿಟ್ಟ ಇರುವೆ ಮೈಯೆಲ್ಲಾ ಸುತ್ತುತ್ತಿದೆ ನಿನ್ನ ಎದುರಿನ ಅಂತರದಲ್ಲಿ ನಾ ಮುದುಡಿದರೆ ತುಟಿಯಂಚಿನ ಮೊಗ್ಗಿನ ತಾವರೆಯು ಮುಡಿಯಲ್ಲಿ ಬಿಸಿ ಉಸಿರಿನ ತಾಪಕ್ಕೆ ಹಬ್ಬಿ ಚುಂಬನದ ಅಂಬರಕ್ಕೆ ಅರಳಿದ ಕೊಡೆಯಾಯಿತು ನಿನ್ನ ಕೆಮ್ಮಣ್ಣು ತುಟಿಯಲ್ಲಿ ನನ್ನ ರೂಪು ಬಿತ್ತಿದಾಗ ನನ್ನೊಳಗೆ ನವಿಲುಗಳು ಗುಂಪುಗಟ್ಟಿ ನೃತ್ಯವಾಡಿದ್ದವು ಹಿಡಿದೆಳೆದ ಒರಟು ರಭಸದ ಬಿಗಿತಕ್ಕೆ ಕೆನ್ನೆಯ ಗುಳಿಯ ಕಚಗುಳಿಯಲ್ಲಿ ನಗುವ ಕಂದಮ್ಮನಾಗಿದ್ದೆ ಅಡ್ಡಾ ದಿಡ್ಡಿನ ಹಾಸು ಹೊಕ್ಕಳ್ಳಲ್ಲಿ ಮಲಗಿದ ನನಗೆ ಮತ್ತದೇ ಇರುವೆ ಮತ್ತೆ ತೆವಳಿದಾಗ ಮೈಯೆಲ್ಲಾ ಕಾದ ಬಾಣಲೆ ಎಣ್ಣೆಯಲ್ಲಿ ಅದ್ದಿದಂತಾಗಿ ಮೀನಾಕಾರದ ಕಣ್ಣು ಬಿಟ್ಟಾಗ ಬವಣೆ ಯಮರಾಯನ ಕುಣಿಕೆ ಪಾಶಕ್ಕೆ ಬೆವೆತು ನೀರಿನ ಹೊಳೆಯಲ್ಲಿ ಈಜಾಡಿ ಮುಳುಗಿದ್ದೆ. *************************

ಅರೆನಗ್ನ ಕನಸು Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಎ.ಹೇಮಗಂಗಾ ನಿನ್ನ ಮನ ಪರಿತಾಪದಿ ಬೇಯುವ ಮೊದಲು ಮರಳಿಬಿಡು ನನ್ನೆಡೆಗೆಅಂತರಾಳದಿ ಕಹಿಭಾವ ಬೇರೂರುವ ಮೊದಲು ಮರಳಿಬಿಡು ನನ್ನೆಡೆಗೆ ಬಾಳದೋಣಿ ಮುನ್ನಡೆಸಲು ಹುಟ್ಟು ಹಾಕಬೇಕಿತ್ತು ಜೊತೆ ಸೇರಿಕಾಲದ ಕಡಲಲಿ ಮುಳುಗುವ ಮೊದಲು ಮರಳಿಬಿಡು ನನ್ನೆಡೆಗೆ ಹೃದಯ ನಿನಗಾಗಿ ಮಿಡಿಯುವುದನ್ನು ಈ ಕ್ಷಣಕ್ಕೂ ನಿಲ್ಲಿಸಿಲ್ಲಅಂತರದ ಕಂದಕ ಆಳವಾಗುವ ಮೊದಲು ಮರಳಿಬಿಡು ನನ್ನೆಡೆಗೆ ಅರಳಿದೊಲವ ಹೂವ ಬಿಸುಟು ನಡೆದ ನಿನ್ನ ನಡೆ ಸರಿಯೇ ಹೇಳುಕಣ್ಣೆದುರೇ ಮಣ್ಣಲಿ ಮಣ್ಣಾಗುವ ಮೊದಲು ಮರಳಿಬಿಡು ನನ್ನೆಡೆಗೆ ಪ್ರೀತಿಸುಧೆಯ ಉಂಡ ಜೀವ ವಿಷವ ಉಣಿಸಬಹುದೇ ಹೇಮ?ಕೊನೆ ಉಸಿರು ದೇಹ ತೊರೆವ ಮೊದಲು ಮರಳಿಬಿಡು ನನ್ನೆಡೆಗೆ **********************

ಗಝಲ್ Read Post »

You cannot copy content of this page

Scroll to Top