ಅಮ್ಮ
ಕವಿತೆ ಅಮ್ಮ ಸಂತೋಷ್ ಹೆಚ್ ಈ ಈ ಜೀವಕ್ಕೆ ಗರ್ಭದಿ ನೆಲೆ ಕೊಟ್ಟುಹೃದಯದಲಿ ಪ್ರೀತಿಯ ಬಚ್ಚಿಟ್ಟುಭವಿಷ್ಯದ ಕನಸಿನ ಗಿಡನೆಟ್ಟುನವಮಾಸ ಕಳೆದಳು ಅಮ್ಮ ನನ್ನ ಒಡಲಿಗೆ ಮಡಿಲಾದೆ ನೀನುಹಾಲನ್ನು ಎರೆದ ತಾಯಿಯು ನೀನುಈ ದೇಹಕ್ಕೆ ಉಸಿರನ್ನು ನೀಡಿದವಳು ನೀನುಆ ಋಣವ ತೀರಿಸಲಾಗದ ಮಗನಾದೆ ನಾನು ಮನೆಯೆಂಬ ಗುಡಿಗೆ ದೇವರು ನೀನುಹಸಿವನ್ನು ನೀಗಿಸೋ ಕರುಣಾಮಯಿ ನೀನುಬಿಸಿಲಲ್ಲೂ ಕೂಡ ನೆರಳಾದೆ ನೀನುಆ ಮರಕ್ಕೆ ನೀರೆರೆಯುವ ಮಗನಾದೆ ನಾನು ಅಜ್ಞಾನವೆಂಬ ಇರುಳನ್ನು ಸರಿದುಅರಿವೆಂಬ ಬೆಳಕನ್ನು ನೀಡಿದೆ ನೀನುಈ ಬಾಳಿಗೊಂದು ದೀಪವು ನೀನುಆ ದೀಪ ಕಾಯೋ ಮಗನಾದೆ ನಾನು ಎಲ್ಲ ಜೀವಿಗಳಿಗೂ ಅಮ್ಮನೇ ಮೂಲಹುಡುಕಿದರು ಸಿಗದು ಅದರ ಮೂಲಅಮ್ಮನ ಒಡಲು ಪ್ರೀತಿಯ ಕಡಲುಅಳಿವಿಲ್ಲದ-ಹುಳುಕಿಲ್ಲದ ಪ್ರೀತಿಯು ನಿನ್ನದು ********









