ಕವಿತೆ ನನ್ನಜ್ಜ….. ಕೋಟಿಗಾನಹಳ್ಳಿ ರಾಮಯ್ಯ ಇರಬೇಕು ಇದ್ದಿರಲೇಬೇಕುಅಜ್ಜನೊಬ್ಬ ನನಗೆನಿತ್ಯ ಮುದ್ದೆ ಗೊಜ್ಜಿಗೆನೋಡಿದವನಲ್ಲ , ಆಡಿದವನಲ್ಲ , ಕಾಡಿದವನಲ್ಲರೂಪ-ಘನರಹಿತ ಮಳೆ ಕಾಡಿನ ಶಬ್ದ ಮಾತ್ರಮಳೆ ಮಾತ್ರ ,ಜಡಿಮಳೆ ಮಾತ್ರಸುರಿಮಳೆ ಮಾತ್ರಸುರಿತುತ್ತಲೇ ಇದೆ ಸಥದಕ್ಕದಲ್ಲ ದಣಿದು ದಾವಾರಿದಕಿರು ನಾಲಗೆಗೆ ಕಿರು ತುಂತುರ ಹನಿನಡೆದೇ ಇದೆ ಥಕ ಥೈಯ್ಯಿ ದೇವಿ ಭಾಗವತಕೇಳಿಯೂ ಕೇಳದಂತೆನೋಡಿಯೂ ನೋಡದಂತೆಹಗಲೆನ್ನದೆ ಇರುಳೆನ್ನದೆ ನಡದೇ ಇದೆ ಚಂಡಮದ್ದಳೆನಡೆದಿದ್ದಾನೆ ನನ್ನಜ್ಜ ನನ್ನ ಕುರುಹ ಕಂಡವನಂತೆ ಗತಅರಬ್ಬಿನ ಮರಳುಗಾಡಲಿಒಂಟೆ ಕೊರಳ ಗಂಟೆ ಕಿಂಕಿಣಿಯಲಿಗೊತ್ತಿದ್ದೂ ನಾನು ಇಲ್ಲಿರುವೆ ಎಂದುಕೈಗೆ ಸಿಗದಂತೆ ಹೊನ್ನೇರಿನಲಿಬಂದಿದೆ ಬಿತ್ತನೆ ಹತ್ತಿರನೊಗ ಹೇರಿಸಿಲ್ಲ ಇನ್ನೂ ಹೆಗಲಿಗೆಉತ್ತು ಬಿತ್ತುವ ಮಾತು ಅತ್ತಗೆದತ್ತೂರಿ , ಗರಿಕೆ , ತುಂಗೆ ಒತ್ತಗೆ ಒತ್ತೊತ್ತಗೆತುಂಬಿ ಹೋಗಿದೆ ನೆತ್ತಿ ನೊಣ ಸೊಕ್ಕಿಗೆಡ್ಡೆ ರಸ ಬೊಡ್ಡೆಅರಸೊತ್ತಿಗೆಯ ಉನ್ಮತ್ತ ಹಕ್ಕಿನಲಿಪಾದುಕಾ ಪಟ್ಟಾಭಿಷೇಕದ ಅಣಕು ಪ್ರಹಸನದಲಿಅಜ್ಜ ಬಂದಾಗ ಬೀಜ ಬಿತ್ತುವ ಹೊತ್ತುಹದಗೊಂಡಿಬೇಡವೇನು ನೆಲ ಉತ್ತುನನ್ನಜ್ಜ ನೇಗಿಲಯೋಗಿಕಣ್ಣೂರ ಕಪ್ಪು ಕುಂಕುಮ ಭೂಮಿಯಲಿಶಬ್ದ , ಅಕ್ಷರ , ಧ್ವನಿ ರೂಪಬಿತ್ತುವ ಕೂರಿಗೆಯ ರಾಗ ಪರಾಗಬಿತ್ತಲೇ ಬೇಕಲ್ಲ ಅಜ್ಜ ಬಂದಾಗಹಿಡಿದ ಕೈಕೂರಿಗೆಗೆ ಒಂದೆರೆಡಾದರೂ ಘಟ್ಟಿ ಕಾಳುಅರಳಿ ಹೂವ್ವಾಗುವಂತೆ ಹುಚ್ಚೆಳ್ಳ ಹೂ ಬಾಳುನನ್ನಜ್ಜ ಹೂಗಾರಮಕರಂದ ಮಮಕಾರರಸಸಿದ್ದ ಮಾಯಕಾರಗಂಧ ಹೂವ್ವಿನದಿರಲಿನರನರವ ಕುಸುಮದ ಒಡಲೇ ಇರಲಿತೀಡಿ ತಂಗಾಳಿ , ನಾದು ಬಿರುಗಾಳಿಪಕಳೆ ಹೂ ಕಾಡ್ಗಿಚ್ಚನಬ್ಬಿಸಿ ಉರುಳಿಸಿ ಹೊರಳಿಸಿಘಮಲು ಘಮಲಿನ ಹೂ ದವನ ಬೆಳೆವ ಮಾಲಿಕನಸಿನ್ಹೂದೋಟಗಳ ಕೂಲಿಆದಿಯಿಂದಲೇ ಹೊತ್ತಿದ್ದಾನೆ ಚಟ್ಟಪಟ್ಟಆಳರಸರ ಪಲ್ಲಕಿ ಮೇನೆ , ಸತ್ತ ನಾಯಿ , ಸಗಣಿ,ಬಂಗಾರದ ಗಣಿನನ್ನಜ್ಜ ಮಾಲಿಗೂ ಮೊದಲು ಝಾಡಮಾಲಿಗುಡಿಸಿ ಕಲ್ಯಾಣದ ಓಣಿಗಳನುಆವಂತಿ , ಅಮರಾವತಿ , ಹಸ್ತಿನಾವತಿ , ರಾಜಬೀದಿಗಳನು….ಮುಗಿದ ದಾಸೋಹದ ಎಂಜಲೆಲೆ ರಾಶಿಅಗಳು , ತೇಗು , ಹೂಸು ಉಚ್ಚೆ ಬಚ್ಚಲ ಬಾಚಿಸತ್ತೆಮ್ಮೆ ಕರ ಹೊತ್ತು ನಡೆದವನು….ಕೂದು ಗುಡ್ಡೆ ಬಾಡು ಪಾಲ್ಹಾಕಿ ಈಚಲ ಹೆಂಡಕೆ ಸುಟ್ಟು ಕೊರಬಾಡಾಗಿ ನೆಂಜಿಕೊಂಡವನು.ನನ್ನಜ್ಜ ಕಟುಕ.ಕಡಿಯುತ್ತಾನೆ , ಕತ್ತರಿಸುತ್ತಾನೆ , ನರ ಹರಿಯುತ್ತಾನೆಹಿಡಿದ ಕಟುಗತ್ತಿ ಗುಲಾಬಿ ಗುತ್ತಿಕುಸುಮ ಕೋಮಲ ಖಡ್ಗದಲಗುನನ್ನಜ್ಜ ಕಡಿಯುತ್ತಾನಾದ್ದರಿಂದ ಕಟುಕ.ನನ್ನಜ್ಜ ಮೂಳೆ , ಮಾಂಸದ ತಜ್ಞ….ಗೋವಿನದೂ ಸೇರಿದಂತೆಕೋಣನದಂತೂ ಹೆಂಡ ಕುಡಿದಷ್ಟೇ ಸಲೀಸು .ಅಜ್ಜ ಕಂಡಿಲ್ಲ ಇನ್ನೂ…ನಡೆದ ಹೆಜ್ಜೆ ಗುರುತುಹಚ್ಚೆಯಾಗಿದೆ ಹೆಗ್ಗಲ್ಲ ಬೆನ್ನಮೂಳೆಯಲಿ…ನೀಲ ನಕ್ಷೆಯಾಗಿದೆ ಆಕಾಶ – ಬ್ರಹ್ಮಾಂಡ ಲೀಲೆಯಲಿನನ್ನಜ್ಜಬುದ್ದ , ಮಹಮದಸಿದ್ದ ರಸಸಿದ್ದಏಸುವಿನ ಮೊಳೆ ಗುರುತುಇನ್ನೂ ಅಂಗೈಯಲ್ಲಿ ಮಾಯದೆ ಹಸಿ ಹಸಿಇರಾಕಿನ ಮರಳ ಹಾದಿಗಳು ಹಾಸಿವೆಅವನ ಪಾದಗಳಡಿಗೋ ಪಾದವಾದರೂ ಅಷ್ಟೇ ಹುಲಿ ಪಾದವಾದರೂ ಅಷ್ಟೇಪ್ರೇಮದ ಸಿರಿಪಾದ ಎದೆ ಹಾಲು ಸುರಿಸುವಾಗಖರ್ಜೂರ , ಕಾಫಿ , ಹೂಬಳ್ಳಿ ಜವೆಗೋದಿಜೊತೆಗೂಡಿ ಹಿಂಬಾಲಿಸಿ ಬರುವಾಗನನ್ನಜ್ಜನ ಹೆಚ್ಚೆಯಡಿಯಲ್ಲಿ ನಾದ ನದಿಜೀವವೃಕ್ಷದ ಚಿಗುರುನನ್ನಜ್ಜನ ನಡೆಮೃದು ಮಧುರಪ್ರೇಮ ಕಾವ್ಯದ ಗುಲಾಬಿ ಅತ್ತರಿನ ಘಮಲುಬುಲ್ ಬುಲ್ ಸಿತಾರ ಝರಿ ಜುಳು ಜುಳು ಗುನುಗು… *****************************************************