ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಕಥಾಯಾನ

ಬಣ್ಣಾತೀತ ಅಶ್ವಥ್ ಅವತ್ತೊಂದು ದಿನ ಭಟ್ರಿಗೆ ಶ್ಯಾವಿಗೆ ಪಾಯಸ ಮಾಡುವ ಮನಸ್ಸಾಯಿತು. ಆಹಾ, ಸಿಹಿ… ಎಂಥಾ ಆಲೋಚನೆ, ರುಚಿರುಚಿಯಾದ ಶ್ಯಾವಿಗೆ ಪಾಯಸ, ಮನೆಯೆಲ್ಲ ಘಮಘಮ ಎಂದುಕೊಳ್ಳುತ್ತಲೇ ಪದಾರ್ಥಗಳ ಪಟ್ಟಿ ಮಾಡಿಕೊಳ್ಳುತ್ತಿರುವಾಗ…. ಬೆಲ್ಲ? ಸಕ್ಕರೆ? ಸದ್ಯಕ್ಕೆ ಸಿಗುವಂಥಾದ್ದು ಯಾವುದು? ಅಗ್ಗದ ಬೆಲೆಯಲ್ಲಿ ಸರಳವಾಗಿ ಸಿಗುವಂಥಾದ್ದು ಯಾವುದು? ಅನ್ನುವ ಯೋಚನೆ ಕೊರೆಯತೊಡಗಿತು. ಬೆಲ್ಲವಾದರೆ ಶ್ಯಾವಿಗೆಯ ಮಹತ್ತೇ ಹೊರಟುಹೋಗಿಬಿಡುತ್ತೆ. ಸಕ್ಕರೆಯಾದರೆ ಬಣ್ಣ ಅಷ್ಟಿಲ್ಲದ್ದರಿಂದ ಶ್ಯಾವಿಗೆ ನಳನಳಿಸುತ್ತಾ ರುಚಿಯ ಜೊತೆಗೆ ನೋಟವೂ ಅಂದ… ಹಾಗಾಗಿ ಸಕ್ಕರೆ ಬಣ್ಣಾತೀತ ಅಂದುಕೊಳ್ಳುತ್ತಿರುವಾಗ, ಇಲ್ಲೊಂದು ಕತೆಯೇ ಉಂಟಲ್ಲ ಅನ್ನುವ ವಿಚಾರವೂ ಹೊಳೆಯಿತು! ಹಳೆ ಕಾಲದಲ್ಲಿ ಭಟ್ರ ಪೂರ್ವಜರು ಕಟ್ಟಿದ್ದ ಬೆಲ್ಲದ ಕತೆಯ ನೆನಪು ಮರುಕಳಿಸತೊಡಗಿತು. ಮೆದ್ದವನೇ ಬಲ್ಲ ಬೆಲ್ಲದ ರುಚಿಯ…. ಆದರೆ ಬೆಳೆದವನೇ ಬಲ್ಲ ಬೆಲ್ಲದ ನಿಜಬಂಡವಾಳವ. ಒಂದು ಮಾರಗಲದ ಚೌಕದಲ್ಲಿ ಬೆಳೆದಿರುವ ಎರಡು ಹೊರೆಯಷ್ಟು ಕಬ್ಬನ್ನು ಗಾಣದಲ್ಲಿ ಅರೆದು ಮೂರು ಸೇರು ಕಬ್ಬಿನ ಹಾಲು ಹಿಂಡಿ, ನಾಲ್ಕಡಿ ಬಾಯಗಲದ ಬಾಣಲೆಯೊಳಗೆ ಐದು ಗಂಟೆ ನಿಧಾನದ ಉರಿಯಲ್ಲಿ ಕುದಿಯಿಸಿ ಕುದಿಯಿಸಿ ಕುದಿಸುತ್ತಲೇ ಅರೆದ್ರವಘನರೂಪದ ಪಾಕದ ಹದಕ್ಕೆ ತಂದು ಕಡೆಗೆ ಒಂದಡಿ ಅಗಲದ ಅಚ್ಚಿನ ಮಣೆಯೊಳಗೆ ಸುರಿಯಬಹುದಾದಷ್ಟು ಪಾಕವಷ್ಟೇ… ಒಂದು ವಾರದ ಕಾಫಿಗೆ ಸಾಕಾಗದೆ ಉಳಿಯದಷ್ಟು ಬೆಲ್ಲಕ್ಕಾಗಿ ಎರಡು ದೊಡ್ಡ ಹೊರೆ ಕಬ್ಬನ್ನು ಅರೆಯುವುದರ ಹಿಂದಿನ ನಿಜ ಅರ್ಥ ಪೂರ್ವಜರಿಗೆ ಗೊತ್ತಿತ್ತು. ಖುದ್ದಾಗಿ ಕಬ್ಬಿನ ಜಲ್ಲೆಯನ್ನು ಹಿಡಿದು ಸೀಳುವಾಗ ಒಂದೋ ಅಥವಾ ಅಬ್ಬಬ್ಬಾ ಅಂದರೆ ಎರಡು ಜಲ್ಲೆಯನ್ನು ಜಗಿಯುವಷ್ಟರಲ್ಲಿ ವಸಡುಗಳು ತಡವರಿಸುವಂತಾಗಿ ಕಬ್ಬಿನ ಸಿಹಿಯನ್ನು ಹೀರುವುದರ ಮಹತ್ವದ ಜೊತೆಯಲ್ಲೇ ಅದಕ್ಕೆ ಪಡಬೇಕಾದ ಶ್ರಮದ ಅರಿವೂ ಆಗುತ್ತಿತ್ತು. ಆ ಅರಿವಿನ ಹಿನ್ನೆಲೆಯಲ್ಲಿ ಎರಡು ಹೊರೆ ಕಬ್ಬಿನಿಂದಾದ ಬೆಲ್ಲದ ಅಚ್ಚು ಎಷ್ಟು ಉಪಯೋಗಿಸಿದರೆ ಆರೋಗ್ಯಕ್ಕೆ ಒಳ್ಳೆಯದೆಂದು ಭಟ್ರ ಪೂರ್ವಜರಿಗೆ ಗೊತ್ತಿತ್ತು. ಆದರೆ ಆರೋಗ್ಯದ ವಿಚಾರವನ್ನೇನೂ ಹೇಳದೇ, ಅವರು ಆವಿಷ್ಕರಿಸಿದ ಆಕರ್ಷಕ ಬೆಲ್ಲದ ರುಚಿಯನ್ನಷ್ಟೇ ಮುಂದುವರಿಸಿಕೊಂಡು ಬಂದು ಕಡೆಗೆ ದಾಸರ ಪದವೂ ಸೇರಿ ʼಸಕ್ಕರೆ ತುಪ್ಪದ ಕಾಲುವೆ ಹರಿಸಿ…ʼ. ತನಕವೂ ಬಂದು ಬೆಲ್ಲ ಸಕ್ಕರೆಯೆಲ್ಲವೂ ರುಚಿಯ ಮಾರುಕಟ್ಟೆಯಲ್ಲಿ ಹೊಳೆಯುವಾಗ, ಆರೋಗ್ಯದ ಅರಿವು ಮೂಲೆ ಹಿಡಿದು ಕೂತಿತ್ತು. ಈಗ ಭಟ್ಟರಿಗೆ ಸಕ್ಕರೆಯೇ ಬೇಕೆನಿಸಿದ್ದಕ್ಕೆ ಕಾರಣವಿದೆ. ಮುಖ್ಯವಾಹಿನಿಯಲ್ಲಿ ಸಕ್ಕರೆಯದೇ ಕಾರುಬಾರು. ಈ ಸಕ್ಕರೆ ಬಣ್ಣಾತೀತ. ಪಾನಕ ಮಾಡಿದರೆ ಅದರಲ್ಲಿ ಬಣ್ಣವೇ ಇಲ್ಲ ಹಾಗಾಗಿ ಸಿಹಿಯಲ್ಲಿರುವ ಬೇರೆ ಪದಾರ್ಥಗಳನ್ನು ಹೆಚ್ಚು ಆಕರ್ಷಕವನ್ನಾಗಿಸಬಹುದು. ಸಕ್ಕರೆಯ ಹಿಂದಿನ ಆರೋಗ್ಯದ ಗುಟ್ಟಂತೂ ಬೆಲ್ಲಕ್ಕಿಂತ ಇನ್ನೂ ಅತ್ತತ್ತ. ಯಾಕೆಂದ್ರೆ ಮುಖ್ಯವಾಹಿನಿಗೆ ಸಕ್ಕರೆಯನ್ನು ತರುವುದಕ್ಕೋಸುಗ, ಅದನ್ನು ಕಾರ್ಖಾನೆಗಳಲ್ಲಿ ತಯಾರಿಸಬೇಕಾದ್ದು. ದೊಡ್ಡದೊಡ್ಡ ಕಾರ್ಖಾನೆ, ಅದಕ್ಕಂಟಿಕೊಂಡ ಕುಂಠಿತ ಆಡಳಿತ ವಗೈರೆ ವಗೈರೆ… ಆದರೆ ಈಗ ಭಟ್ರಿಗಿನ್ನೊಂದು ವಿಷಯ ಹೊಳೆಯಿತು. ಪೂರ್ವಜರ ಬೆಲ್ಲದ ಹಿನ್ನೆಲೆಯ ಕತೆ. ಈಗಿರುವ ಮುಖ್ಯವಾಹಿನಿಯ ಬಣ್ಣಾತೀತ ಸಕ್ಕರೆಯ ಕತೆ. ಎರಡನ್ನೂ ಒಮ್ಮೆ ಮಿಲಾಯಿಸಿದರೆ! ಬಣ್ಣರೂಪಾಂತರ… ಕತೆ…ಪೂರ್ವಜರ ಬೆಲ್ಲದ ಪಾಯಸದ ಘಮಲು ಮನೆಯಲ್ಲಷ್ಟೇ ಆವರಿಸದೇ ಊರಿಗೂರೇ ಆವರಿಸುತ್ತಿತ್ತು. ಸಕ್ಕರೆಯವರು ಬಂದು ಸುವಾಸೆಯನ್ನು ಕಡಿಮೆ ಮಾಡಲಾಗಿ, ಸದ್ಯ ಮನೆಯನ್ನಷ್ಟೇ ಆವರಿಸುತ್ತಿದೆ. ಭಟ್ಟರು ಮರೆತ ವಿಚಾರ, ಬೆಲ್ಲವೂ ಸಕ್ಕರೆಯೂ ಅಥವಾ ಮತ್ತೊಂದು ಸಿಹಿಯೂ ಮೂಲದಲ್ಲಿ ಕಬ್ಬಿನ ಹೊರೆಗಳೆಲ್ಲ ಒಂದೇ ಆಗಿದ್ದು, ಅದರ ಹಿಂದಿರುವ ಆರೋಗ್ಯದ ಅರಿವಿನ ಕತೆ ಅತಿ ಮುಖ್ಯವಾದುದೆಂದು. ಹಾಗೆಂದುಬಿಟ್ಟರೆ ಭಟ್ಟರ ಪಾಯಸದ ಕತೆಯ ಗತಿಯೇನು? *******

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಕು.ಸ.ಮದುಸೂದನರವರ ಕಥೆ ಲಾರಿಯಿಂದ ಲಾರಿಗೆ ಯನ್ನು ಪ್ರತಿಲಿಪಿಯವರುಆಡೀಯೊ ರೂಪದಲ್ಲಿ ಹೊರತಂದಿದ್ದಾರೆ ನೀವೂ ಈ ಕಥೆ ಕೇಳಿ ಚಿತ್ರದ ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ ಕಥೆ ಕೇಳಿ https://kannada.pratilipi.com/audio/ಲಾರಿಯಿಂದ-ಲಾರಿಗೆ-pdrylv2au9op?utm_campaign=Shared&utm_source=Link ಲಾರಿಯಿಂದ ಲಾರಿಗೆ ಕಥೆ

ಕಥಾಯಾನ Read Post »

ಕಥಾಗುಚ್ಛ

ಮಹಿಳಾದಿನದ ವಿಶೇಷ

ಮುಖಾಮುಖಿ ಟಿ.ಎಸ್.ಶ್ರವಣಕುಮಾರಿ ಮುಖಾಮುಖಿ ಸುಜಾತ ಊರಿಗೆ ಬಂದು ನಾಲ್ಕು ದಿನವಾಗಿತ್ತಷ್ಟೆ.  ಅವಳ ಗಂಡನಿಗೆ ಕಲ್ಕತ್ತೆಗೆ ವರ್ಗವಾಗಿ ಹೋದಮೇಲೆ ಇದೇ ಮೊದಲಸಲ ತವರಮನೆಗೆ ಬಂದಿರುವುದು. ಬೆಂಗಳೂರಿನಲ್ಲಿದ್ದಾಗ ವರ್ಷದಲ್ಲಿ ಮೂರ್ನಾಲ್ಕು ಸಲವಾದರೂ ಬಂದು ಹೋಗುತ್ತಿದ್ದವಳಿಗೆ ಈಗೆರಡು ವರ್ಷದಿಂದ ಬರಲು ಆಗಿರಲಿಲ್ಲ. ಮಕ್ಕಳೂ ಅಮ್ಮ ವಾಪಸ್ಸು ಹೋಗುವುದಕ್ಕೆ ವಾರದ ಮುಂಚೆ ಬಂದು ಸೇರಿಕೊಳ್ಳುತ್ತೇವೆ, ಅಲ್ಲಿಯವರೆಗೆ ಏನೇನೋ ಕ್ಲಾಸುಗಳಿವೆ ಎಂದು ಹೇಳಿ ಇವಳೊಂದಿಗೆ ಬರುವುದನ್ನು ತಪ್ಪಿಸಿಕೊಂಡಿದ್ದರು. ದೊಡ್ಡ ಹುಡುಗರಾದ್ದರಿಂದ ಇವಳೂ ಒತ್ತಾಯಿಸಲು ಹೋಗಿರಲಿಲ್ಲ. ಎಷ್ಟೇ ಫೋನಲ್ಲಿ ಅಮ್ಮನ ಹತ್ತಿರ ಮಾತಾಡುತ್ತಿದ್ದರೂ ಎದುರೆದುರು ಕೂತು ಸಮಯದ ಪರಿವೆಯಿಲ್ಲದೆ, ಯಾವುದೇ ನಿರ್ದಿಷ್ಟ ವಿಷಯವಿಲ್ಲದೆ, ನಿರಾತಂಕವಾಗಿ ಹರಟುತ್ತಾ ಕುಳಿತುಕೊಳ್ಳುವ ಸೊಬಗೇ ಬೇರೆ.  ಜೊತೆಯಲ್ಲಿ ಮಧ್ಯೆ ಮಧ್ಯೆ ಕುರುಕುಲು ತಿಂಡಿಯೋ, ಕಾಫಿಯೋ, ಮಜ್ಜಿಗೆಯೋ, ಪಾನಕವೋ ಏನೋ ಒಂದನ್ನು ಸ್ವಾಹಾಮಾಡುತ್ತಾ ಮಾತನಾಡುವ ಮಜಾನೇ ಬೇರೆ.  ಎರಡು ವರ್ಷದಲ್ಲಿ ಊರಲ್ಲಿ ಎಲ್ಲೆಲ್ಲಿ ಏನಾಯಿತು; ಗುರುತು ಪರಿಚಯದವರ ಯಾರ ಯಾರ ಮನೆಯಲ್ಲಿ ಏನೇನು ನಡೆಯಿತು ಅದಕ್ಕೆ ಅಮ್ಮನ ಟಿಪ್ಪಣಿಗಳೇನು.. ಎಲ್ಲವೂ ಪುರಸೊತ್ತು ಇಲ್ಲದಂತೆ ಬರಬೇಕು. ಹೀಗೇ ಮಾತಾಡುತ್ತಿರುವಾಗ ಇವರು ಮೊದಲು ಇದ್ದವಠಾರದ ಮನೆಯ ಪಕ್ಕದಮನೆಯ ಮೇಷ್ಟ್ರು ರಾಮಾಜೋಯಿಸರ ವಿಷಯವೂ ಬಂತು.  “ಆತಂಗೆ 90.. 92.. ವರ್ಷವಾಗಿತ್ತೇನೋ ಕಣೆ, ಈ ದಸರಾ ಹಬ್ಬದ ಮಹರ್ನಮಮಿಯ ದಿನ ಹೋಗಿ ಬಿಟ್ಟರಂತೆ.” ಅಂದರು. “ಅವರ ಹೆಂಡತಿ ಅಹಲ್ಯಾಬಾಯಿ ಇನ್ನೂ ಚಿಕ್ಕವರಲ್ವಾ” ಸುಜಾತ ಕೇಳಿದಳು. “ಹ್ಞೂಂ.. ನನಗಿಂತ ಎಂಟು ಹತ್ತು ವರ್ಷವೇ ಚಿಕ್ಕವರು.  ನನಗೀಗ 60 ದಾಟಿತು. ಆಕೆಗಿನ್ನೂ 50ರ ಸುಮಾರೇನೋ” ಅಮ್ಮ ಅಂದರು. “ಆಕೆ ಇನ್ನೂ ಅಲ್ಲೇ ಇದಾರಾ?” “ಇಲ್ಲ; ಆತ ಹೋದ್ಮೇಲೆ ಅಷ್ಟು ಬಾಡಿಗೆ ಕೊಡಕ್ಕೆ ಆಗ್ದೆ ಅವರ ಸೋದರಮಾವನ ಮನೆ ಒಂದು ದೊಡ್ಡ ಬ್ರಾಹ್ಮಣರ ಬೀದಿಯಲ್ಲಿ ಇದೆಯಂತೆ. ಹಳೇಮನೆ. ಎಷ್ಟೋ ವರ್ಷದಿಂದ ಯಾರೂ ಆ ಮನೇನಲ್ಲಿ ವಾಸವಾಗಿರ್ಲಿಲ್ಲವಂತೆ; ಯಾರೋ ಅದನ್ನ ಸ್ವಲ್ಪ ಕ್ಲೀನ್ ಮಾಡಿಸಿ ಕೊಟ್ಟಿದಾರಂತೆ. `ಇರೋಷ್ಟು ಕಾಲ ಇದ್ಗೊಂಡು ಹೋಗು’ ಅಂತ. ಅಲ್ಲೇ ಇದಾರೇಂತ ಕೇಳ್ದೆ.  ಪಾಪ ಏನು ಜೀವನವೋ ಆಕೇದು. ಸುಖಾ ಅನ್ನೋದನ್ನ ಕೇಳಿಕೊಂಡೇ ಬರ್ಲಿಲ್ಲ” ನಿಟ್ಟುಸಿರಿಟ್ಟರು ಅಮ್ಮ.  “ಯಾಕಮ್ಮಾ, ಅದೇನು ಜೋರಿದ್ರಲ್ವಾ ಆಕೆ.  ಮೇಷ್ಟ್ರನ್ನ ಹುರಿದು ಮುಕ್ಕಿ ತಿಂತಾ ಇದ್ರು. ದಿನ ಬೆಳಗಾದ್ರೆ ಓನರ್ ಕಿಟ್ಟಣ್ಣ ಇಲ್ಲಾ ಅವ್ರ ಹೆಂಡ್ತಿ ಪದ್ದಕ್ಕನ ಜೊತೆ ಅವ್ರ ರಗಳೆ ತಪ್ಪಿದ್ದೇ ಇಲ್ಲ ಎಷ್ಟೋ ಸಲ ಕೊಡ ಕೊಡಾನೇ ಹಿಡ್ಕೊಂಡು ಹೊಡದಾಡ್ಕೋತಾ ಇದ್ರಲ್ಲ. ಅವ್ರಿಗೆ ಅಯ್ಯೋ ಅಂತಿದೀಯಲ್ಲ” ಅಚ್ಚರಿಯಿಂದ ಕೇಳಿದಳು ಸುಜಾತ.  “ಅಲ್ಲಾ ತನ್ಗಿಂತ ಸುಮಾರು ಹತ್ರ ಹತ್ರ ನಲವತ್ತು ವರ್ಷ ದೊಡ್ಡ ಗಂಡನ್ನ ಕಟ್ಟಿಕೊಂಡು ಆಕೆ ಏನು ಕಮ್ಮಿ ಅನುಭವಿಸಿದ್ರಾ.  ಏನೇನು ಸಂಕಟಾ ಇತ್ತೋ ಆಕೆ ಮನಸ್ನಲ್ಲಿ.  ಜಗಳದಲ್ಲಿ ತೀರಿಸ್ಕೋತಾ ಇದ್ರು” ಅಮ್ಮ ಕಳಕಳಿಯಿಂದ ಅಂದರು.  “ಅದೂ ಸರಿಯೇ ಆದ್ರೆ ನಮ್ಮೇಲೆಲ್ಲಾ ಸುಮ್ಸುಮ್ನೆ ರೇಕ್ಕೊತಿದ್ರು. ಪಾಠ ಹೇಳಿಸ್ಕೊಳ್ಳೋಕೆ ಅವ್ರ ಮನೇಗೆ ಹೋಗ್ತಿದ್ವಲ್ಲ; ಒಂದೊಂದ್ಸಲ ಅದ್ಹೇಗೆ ಬೈಯೋರು ಗೊತ್ತಾ. `ಬಂದ್ಬುಟ್ವು ಪಿಶಾಚಿಗಳು; ಹೊತ್ತಿಲ್ಲ-ಗೊತ್ತಿಲ್ಲ; ಎದ್ದ್ಹೋಗ್ರೆ’ ಅಂತ ಕೋಲು ತೆಗೆದುಕೊಂಡೇ ಬಂದು ಬಿಡೋರಲ್ಲ.  ಮೇಷ್ಟ್ರು ಅವ್ರನ್ನ ಗದರಿಸಿಕೊಂಡು ನಮಗೆ ಸಮಾಧಾನ ಹೇಳ್ತಿದ್ರು.  ದೇವ್ರಂತ ಮೇಷ್ಟ್ರು ನಿಜವಾಗ್ಲೂ. ರಾತ್ರಿ ಮನೇ ಹೊರಗೆ ಹಾಸಿಕೊಂಡು ನಮ್ಮನ್ನೆಲ್ಲಾ ಪಕ್ಕಕ್ಕೆ ಕೂರಿಸ್ಕೊಂಡು ನಕ್ಷತ್ರ ತೋರಿಸ್ತಾ ಎಷ್ಟು ಚೆನ್ನಾಗಿ ಕತೆ ಹೇಳ್ತಿದ್ರು. ಆಗ ಆಕೇಗೆ ಎಷ್ಟು ರೇಗೋದು. ವಟವಟಾಂತ ಅಂತಿರೋವ್ರು.” ಸುಜಾತ ಮಾತು ಮುಗಿಸುವಷ್ಟರಲ್ಲಿ ಅಪ್ಪ ಬಂದಿದ್ದರಿಂದ ಊಟಕ್ಕೆ ತಟ್ಟೆ ಹಾಕಲು ಅಮ್ಮ ಎದ್ದರು. ಆ ಮಾತು ಅಲ್ಲಿಗೇ ನಿಂತಿತು…. ಮನೆಯಲ್ಲಿ ಆಡಬಹುದಾದ ಮಾತಿನ ಒಂದು ಹಂತದ ಸರಕೆಲ್ಲಾ ಮುಗಿದ ಮೇಲೆ ಅಂದು ತನ್ನ ಬಾಲ್ಯದ ಗೆಳತಿ, ರಾಮದೇವರ ಗುಡಿಯ ಹತ್ತಿರದಲ್ಲಿರೋ ಗಾಯಿತ್ರಿಯನ್ನು ಮಾತನಾಡಿಸಿಕೊಂಡು ಬರೋಣವೆಂದು ಸುಜಾತ ಊಟಕ್ಕೆ ಮುಂಚೆಯೇ ಹೊರಟಳು.  ಅವರ ಮನೆಗೆ ಯಾವಾಗ ಹೋದರೂ ಹಾಗೆ.  ಊಟಕ್ಕೆ ಮುಂಚೆ ಒಂದಷ್ಟು ಹರಟಿ, ಗಂಟೆಗಟ್ಟಲೇ ಮಾತಾಡುತ್ತಲೇ ಊಟ ಮಾಡಿ, ಅದಾದ ನಂತರ ಹಾಲ್ನಲ್ಲಿ ಚಾಪೆಯ ಮೇಲೆ ಉರುಳಿಕೊಂಡು ಆ ಮಾತಿನ ವರಸೆಯನ್ನು ಮುಂದುವರೆಸುತ್ತಾ ಪ್ರೈಮರಿ ಸ್ಕೂಲಿನಿಂದ ಹಿಡಿದು ಡಿಗ್ರಿವರೆಗಿನ ಎಲ್ಲ ದಿನಗಳನ್ನು, ಜನಗಳನ್ನು, ಸ್ನೇಹಿತರನ್ನೂ, ಮೇಷ್ಟ್ರು, ಲೆಕ್ಚರರ್ಸ್ ಎಲ್ಲರೂ ಒಂದು ಮೆರವಣಿಗೆ ಬಂದು ಹೋಗಬೇಕು. ನಂತರ ಕಾಫಿ ಜೊತೆಗೊಂದಷ್ಟು ಕುರುಕುಲು ಮೆಲ್ಲುತ್ತಾ ಇಂದು ಏನೂ ಮಾತಾಡಿದ ಹಾಗೆ ಆಗಲಿಲ್ಲ ಎನ್ನುತ್ತಾ ಇನ್ನೊಂದು ದಿನ ತನ್ನ ಮನೆಗೆ ಬಂದು ಮಾತು ಮುಂದುವರೆಸಲು ಆಹ್ವಾನವಿತ್ತು ಬರುತ್ತಿದ್ದಳು ಸುಜಾತ.  ಹೀಗೆ ಅವಳು ವಾಪಸ್ಸು ಹೋಗುವಷ್ಟರಲ್ಲಿ ಕನಿಷ್ಟ ಪಕ್ಷ ಇವಳೆರಡು ಸಲ, ಅವಳೆರಡು ಸಲ ಒಬ್ಬರೊಬ್ಬರ ಮನೆಗೆ ಬಂದು ಹೋಗುವುದು ಸಾಮಾನ್ಯ ನಡಾವಳಿಯಾಗಿತ್ತು.  ಹೀಗೇ ದೀಪ ಹಚ್ಚುವ ಹೊತ್ತಾದಾಗ “ಅಯ್ಯಯ್ಯೋ ಅಮ್ಮ ಹೇಳಿದ್ರು, ದೀಪ ಹಚ್ಚೋ ಹೊತ್ತೊಳಗೆ ಬಂದ್ಬಿಡು ಅಂತ. ಹೊರಡ್ತೀನಿ ಕಣೆ” ಎನ್ನುತ್ತಾ ಗಡಬಡಿಸಿಕೊಂಡು ಎದ್ದಳು. *** ಅದೆಲ್ಲಿದ್ದವೋ ಅಷ್ಟೊಂದು ಮೋಡಗಳು.. ಒಮ್ಮೆಲೇ ಕವಿಯತೊಡಗಿ ಮಳೆ ಬರುವುದರೊಳಗೆ ಆಟೋ ಹಿಡಿಯಬೇಕು ಎಂದು ದಾಪುಗಾಲು ಹಾಕುತ್ತಾ ನಡೆದಳು.  ಆ ಸರ್ಕಲ್ಲಿನಲ್ಲಿ ಒಂದೂ ಆಟೋ ನಿಂತಿರಲಿಲ್ಲ.  ಹೋಗುವಷ್ಟು ದೂರ ಹೋಗುತ್ತಿರೋಣ, ಆಟೋ ಸಿಕ್ಕ ತಕ್ಷಣ ಹತ್ತಿಕೊಂಡರಾಯಿತು ಎಂದುಕೊಂಡು ಗಾಂಧೀಬಜಾರಿನಲ್ಲಿ ನಡೆಯಲೂ ಕಷ್ಟ ಎಂದುಕೊಂಡು ದೊಡ್ಡ ಬ್ರಾಹ್ಮಣರ ಕೇರಿಯ ಕಡೆ ತಿರುಗಿದಳು.  ಅಲ್ಲಿ ಲಕ್ಷ್ಮೀನಾರಾಯಣ ದೇವಸ್ಥಾನದ ಹತ್ರ ಯಾವುದಾದರೂ ಸಿಗಬಹುದು ಎನ್ನುವ ಆಸೆಯಿಂದ ಇನ್ನೂ ಒಂದು ಅರ್ಧ ಫರ್ಲಾಂಗ್ ಕೂಡಾ ನಡೆದಿದ್ದಳೋ ಇಲ್ಲವೋ ಧಡಧಡನೆಂದು ಮಳೆ ಶುರುವಾಗೇ ಹೋಯಿತು. ಮಳೆಯಿಂದಾಗಿ ಕತ್ತಲೂ ಕವಿಯತೊಡಗಿತು.  ಎಲ್ಲಾದರೂ ನಿಲ್ಲಲು ಜಾಗ ಸಿಗುವುದೇನೋ ಎಂದು ಅಕ್ಕ ಪಕ್ಕ ನೋಡಿ ಒಂದು ಜಗಲಿಯ ಮನೆಯ ಮುಂದೆ ಅವಳು ನಿಲ್ಲುವ ಹೊತ್ತಿಗೆ ಕರೆಂಟೂ ಹೋಗಿ ಪೂರ್ಣವಾಗಿ ಕತ್ತಲಾಯಿತು.  ಇನ್ನೇನು ಮಾಡಲೂ ತೋಚದೆ ಜಗಲಿಯ ಒಪ್ಪಾರದ ಒಳಗೆ ಹೋಗಿ ನಿಂತಳು. ಮಳೆ ಧಾರಾಕಾರವಾಗಿ ಸುರಿಯತೊಡಗಿ ಭಯವೂ ಶುರುವಾಯಿತು.  ಅಮ್ಮ ಹೇಳಿದ ಹಾಗೆ ಹೊತ್ತಿಗೆ ಮುಂಚೆಯೇ ಮನೆ ಸೇರಿಕೊಳ್ಳಬೇಕಿತ್ತು ಎಂದು ಸಲಸಲವೂ ಹೇಳಿಕೊಂಡಳು.  ಕಡಿಮೆಯಾಗುವ ಲಕ್ಷಣವೇ ಕಾಣುತ್ತಿಲ್ಲ.  ಜೋರಾಗಿ ಮಿಂಚು, ಗುಡುಗು ಅಬ್ಬರಿಸಿತು.  ಆ ಬೆಳಕಲ್ಲಿ ಅವಳಿಗೆ ಆ ಮನೆಯ ಬಾಗಿಲು ತೆಗೆದೇ ಇದೆ ಎಂದು ತಿಳಿಯಿತು. ಇದ್ಯಾರು ಪುಣ್ಯಾತ್ಮರು ಈ ಮಳೆಯಲ್ಲಿ ಹೀಗೆ ಮನೆಬಾಗಿಲು ಹಾರುಹೊಡೆದುಕೊಂಡು ಕೂತಿದಾರಲ್ಲ; ಒಂದು ಸಪ್ಪಳವೂ ಒಳಗಿಂದ ಕೇಳುತ್ತಿಲ್ಲ.  ಯಾರಾದರೂ ಇದ್ದಾರೋ ಇಲ್ಲಾ ಪಾಳು ಬಿದ್ದ ಮನೆಯೋ ಎಂದು ಅವಳಿನ್ನೂ ಅಂದುಕೊಳ್ಳುತ್ತಿರುವಾಗಲೇ ಒಳಗಿಂದ ಒಂದು ಗೊಗ್ಗರು ದನಿ ಕೇಳಿಸಿತು… “ಯಾರಲ್ನಿಂತಿರೋದು?..” ಹೆದರಿಕೆಯಿಂದಲೂ, ಮಳೆಯಿಂದಲೂ ಮುದ್ದೆಯಾಗಿ ಹೋಗಿದ್ದ ಸುಜಾತ ನಡುಗುತ್ತಾ “ತುಂಬಾ ಮಳೆ ಬರ್ತಿದೆಯಲ್ಲಾ.. ಅದಕ್ಕೆ ನಿಂತಿದೀನಿ.  ನಿಮಗೇನೂ ತೊಂದರೆ ಮಾಡಲ್ಲ.  ಮಳೆ ನಿಂತ ತಕ್ಷಣ ಹೊರಟು ಹೋಗ್ತೀನಿ” ತಡವರಿಸಿದಳು. “ಅದ್ಸರೀ.. ಅಲ್ಲೇ ನಿಂತಿದ್ರೆ ಎರಚಲು ಬಡಿದು ಇನ್ನು ಒದ್ದೆಯಾಗ್ತೀಯಮ್ಮ. ಒಳಗೆ ಬಂದು ಕೂತ್ಕೋ ಬಾ” ಕರೆಯಿತು ಒಳಗಿನ ಕಂಠ.  ಇನ್ನೂ ಸುಜಾತ ಅನುಮಾನಿಸುತ್ತಿರುವುದನ್ನು ನೋಡಿದ ಆಕೆ “ಪರವಾಗಿಲ್ಲ ಬಾಮ್ಮ.  ನಾನು ಒಬ್ಳೇ ಇರೋದು.” ಭಂಡ ಧೈರ್ಯ ಮಾಡಿಕೊಂಡು `ಬಾಗಿಲ ಬಳಿಯೇ ಕೂತರಾಯಿತು. ಏನಾದರೂ ಹೆಚ್ಚು ಕಡಿಮೆಯಾದರೆ ಓಡಿಬಿಡಬಹುದು’ ಎಂದುಕೊಳ್ಳುತ್ತಾ ಮನೆಯೊಳಗೆ ಹೆಜ್ಜೆಯಿಟ್ಟಳು.  “ಅಲ್ಲೇ ಒಂದು ಪೆಟ್ಟಿಗೆ ಇದೆ. ಕೂತ್ಕೋ.  ಸ್ವಲ್ಪ ಕೈಚಾಚಿದ್ರೆ ಪಕ್ಕದಲ್ಲಿರೋ ಬುಟ್ಟೀನಲ್ಲಿ ಒಂದು ಒಣ ಸೀರೆ ತುಂಡಿದೆ. ತೊಗೊಂಡು ತಲೆ ಒರಸ್ಕೋ” ಎಂದಿತು ಮುದುಕಿ. ಇಷ್ಟು ಹೊತ್ತಿಗೆ ಸ್ವಲ್ಪ ಧೈರ್ಯ ಬಂದಿದ್ದರಿಂದ ಅಲ್ಲಿ ಕೂತುಕೊಂಡು ಒಣಬಟ್ಟೆಯ ತುಂಡಿನಿಂದ ತಲೆಯನ್ನೂ ಕೈಯನ್ನೂ ಒರಸಿಕೊಂಡಳು.  “ನೀನ್ಯಾರು? ಎಲ್ಲಿ ನಿಮ್ಮನೆ?” ಕೇಳಿತು ಮುದುಕಿ.  ಈ ಊರಿನಲ್ಲಿ ಹೆಚ್ಚುಕಡಿಮೆ ಹಳಬರೆಲ್ಲರಿಗೂ ಒಬ್ಬರಿಗೊಬ್ಬರು ತಿಳಿದೇ ಇರ್ತಾರೆ ಎಂದುಕೊಂಡ ಸುಜಾತ ಹೇಳಿದಳು “ಆಯಿಲ್ ಮಿಲ್ ಶಿವರಾಮಯ್ಯನವರ ಮಗಳು…” “ಓ.. ನೀನೇ.. ಪಂಕಜಮ್ಮನ ಮಗಳು ಸುಜಾತ ಅಲ್ವೇ. ಅಥವಾ ಸುನೀತಾನೋ… ನಿಮ್ಮಣ್ಣ ಸುರೇಶ ಅಲ್ವಾ” ಸಂಭ್ರಮದಿಂದ ಕೇಳಿತು ಆ ಕಂಠ. `ಇಷ್ಟು ಚೆನ್ನಾಗಿ ನಮ್ಮ ಇಡೀ ಕುಟುಂಬವನ್ನೇ ಜ್ಞಾಪಕ ಇಟ್ಟುಕೊಂಡಿರೋವ್ರು ಈ ಬೀದೀನಲ್ಲಿ ಯಾರಿದಾರೆ?’ ಅವಾಕ್ಕಾಗಿ ಹೋದಳು ಸುಜಾತ. “ಹಾ! ನಾನು ಸುಜಾತಾನೇ… ನೀವು ಯಾರೂಂತ ಗೊತ್ತಾಗಲಿಲ್ಲ..” ಸಧ್ಯ ಯಾರೋ ಗೊತ್ತಿರೋರ ಮನೆಯಲ್ಲೇ ಕೂತಿದೀನಿ ಎಂದು ಸ್ವಲ್ಪ ಧೈರ್ಯ ತಂದುಕೊಳ್ಳುತ್ತಾ ನುಡಿದಳು.  “ನಾನು ಯಾರೂಂತ ಗೊತ್ತಾಗ್ಲಿಲ್ವೇನೇ ಪುಟ್ಟಿ; ನಿಮ್ಮನೇ ಪಕ್ಕದಲ್ಲಿದ್ವಲ್ಲ.. ಮೇಷ್ಟ್ರ ಹೆಂಡ್ತಿ ಅಹಲ್ಯಾಬಾಯಿ” ಎಂದಾಗ ಸುಜಾತ `ಹಾ!‘ಎನ್ನುತ್ತಾ ಧ್ವನಿ ಬಂದ ಮೂಲೆಯನ್ನೇ ನೋಡಿದಳು. ಏನೂ ಕಾಣಲಿಲ್ಲ.  ಅವರೊಂದಿಗಿನ ಮುಖಾಮುಖಿಗೆ ತಯಾರಿದ್ದಿಲ್ಲದ ಸುಜಾತ ಈಗ ಮಾತನ್ನು ಮುಂದುವರೆಸಲೇ ಬೇಕಿತ್ತು.  “ನೀವೊಬ್ರೇ ಇದೀರೀಂತ ಹೇಳಿದ್ಳು ಅಮ್ಮ, ಮತ್ತೆ ಮನೆ ಬಾಗಿಲು ಇಷ್ಟು ಹೊತ್ತಿನಲ್ಲಿ ತೆಕ್ಕೊಂಡು ಕೂತಿದೀರಲ್ಲ.  ಯಾರಾದ್ರೂ ನುಗ್ಗಿದ್ರೆ?”  “ನುಗ್ಗಿ ಏನ್ಮಾಡ್ತಾರೆ? ಏನು ನಗವಾ, ನಾಣ್ಯವಾ? ಏನಿದೆ ಕೊಳ್ಳೇ ಹೊಡೆದು ತೊಗೊಂಡು ಹೋಗೋಕೆ ಈ ಮುದಿಗೂಬೆ ಪ್ರಾಣ ಒಂದು ಬಿಟ್ಟು.  ಅದ್ಯಾರಿಗೂ ಬೇಕಾಗಿಲ್ಲ.. ಯಮನಿಗೂ..” ಕಹಿಯಾಗಿ ಹೇಳಿದಳು ಅಹಲ್ಯಾಬಾಯಿ.  “ಅಟ್ಟದ ಮೇಲೆ ಯಾವ ಕಾಲದಿಂದಲೋ ಒಟ್ಟಿರೋ ಕಟ್ಟಿಗೇಗಾದ್ರೂ ಒಂದಿಷ್ಟು ಬೆಲೆಯಿದೆಯೇನೋ.. ಈ ಮುದಿಕೊರಡಿಗೆ ಏನೂ ಇಲ್ಲ.. ನನ್ನ ಪ್ರಾಣ ತೊಗೊಂಡು ಯಾವನು ಏನು ಮಾಡ್ತಾನೆ ಹೇಳು”.  “ಛೇ, ಹಾಗನ್ಬೇಡಿ. ನೋವಾಗತ್ತೆ.” ನೋವಿನಿಂದ ನುಡಿದಳು ಸುಜಾತ “ಮೇಷ್ಟ್ರು ದಸರಾ ಹಬ್ಬದ ದಿನಗಳಲ್ಲಿ ಹೋಗಿಬಿಟ್ಟರೂಂತ ಅಮ್ಮ ಹೇಳಿದ್ಳು.  ಜೀವನಕ್ಕೆ ಏನು ಮಾಡ್ತಿದೀರಿ?”  “ಅವರಿದ್ದಾಗ ಏನು ಮಾಡ್ತಿದ್ವೋ ಅದೇ, ಪಿಂಚಣೀ ಅಂತ ಆಗ ಸಾವಿರ ರೂಪಾಯಿ ಬರ್ತಿತ್ತು; ಈಗ ಮುನ್ನೂರು ರೂಪಾಯಿ ಬರತ್ತೆ.  ಆಗ ಇವ್ರನ್ನ ಹುಡುಕ್ಕೊಂಡು ಯಾರೋ ಶಿಷ್ಯರು ಆಗ-ಈಗ ಬಂದು ಏನಾದ್ರೂ ಸ್ವಲ್ಪ ಕೈಯಲ್ಲಿ ಹಾಕಿ ಹೋಗ್ತಿದ್ರು.  ಈಗ ಯಾರೂ ಈ ಕಡೆ ತಿರಗಲ್ಲ.  ಏನೋ ಇರೋಕೆ ಈ ಮನೆ ಕೊಟ್ಟಿರೋದೆ ದೊಡ್ಡ ಪುಣ್ಯ” ನಿಟ್ಟುಸಿರಿಟ್ಟಳು ಆಕೆ. ಮಳೆ ಜೋರಾಗುತ್ತಲೇ ಇತ್ತು.. ಮೌನ ಮಾತಾಗಿತ್ತು.. ಇದ್ದಕ್ಕಿದ್ದಂತೇ “ನಿಮ್ಮಮ್ಮ ಬಹಳ ಒಳ್ಳೆಯ ಹೆಂಗಸು.  ವಠಾರದವ್ರೆಲ್ಲಾ ನನ್ನ ವಿರುದ್ಧವಾಗಿದ್ದಾಗ ಒಂದಿನಾನೂ ಆಕೆ ಒಂದು ಕೆಟ್ಟ ಮಾತು ಅಂದವರಲ್ಲ.  ಏನೋ.. ಅವರೊಬ್ರಿಗೇ ನನ್ನ ನೋವು, ಕಷ್ಟ ಅರ್ಥವಾಗಿತ್ತೇನೋ… “ ಅಂದಳು. ಆಕೆ ಅಳುತ್ತಿದ್ದಳೇ.. ಕತ್ತಲಲ್ಲಿ ಗೊತ್ತಾಗಲಿಲ್ಲ.. ಸ್ವಲ್ಪಹೊತ್ತು ತಡೆದು ಕೇಳಿದಳು “ನಾನೇನಾದ್ರೂ ಮಾತಾಡಿದ್ರೆ ನಿಂಗೆ ಬೇಜಾರಾಗತ್ತಾ.  ಯಾಕೋ ಈ ಮಳೆ ಬಂತೂಂದ್ರೆ ನಂಗೆ ಹಳೆಯದೆಲ್ಲಾ ನೆನಪಿಗೆ ಬರತ್ತೆ.  ಹೇಳ್ಕೊಳಕ್ಕೂ ಯಾರೂ ಇಲ್ಲ; ಈಗ ನಿನ್ಮುಂದೆ ಹೇಳ್ಳಾ..” “ಖಂಡಿತಾ ನಂಗೆ ಬೇಜಾರಾಗಲ್ಲ; ನಿಮಗೆ ನೋವಾಗತ್ತೇನೋ ಅಂತ ನಾನೇನೂ ಕೇಳಲಿಲ್ಲ ಅಷ್ಟೆ.  ನಾವು ಚಿಕ್ಕವ್ರಿದ್ದಾಗ ನಿಮ್ಮನ್ನ ಕಂಡ್ರೆ ಭಯ ಪಡ್ತಾ ಇದ್ವಿ.  ಆದ್ರೆ ನೀವು ಯಾಕೆ ಹಾಗಿದ್ರೀ ಅಂತ ಯೋಚ್ನೆ ಮಾಡೋ ವಯಸ್ಸು ನಮ್ಮದಲ್ವಲ್ಲಾ.  ಈಗ ನೀವು ಏನು ಹೇಳಿದ್ರೂ ನಂಗರ್ಥವಾಗತ್ತೆ. ನಿಮ್ಮ ಮನಸ್ಸು ಹಗುರಾಗೋ ಹಾಗಿದ್ರೆ ಹೇಳಿ.” ಕಕ್ಕುಲತೆಯಿಂದ ನುಡಿದಳು ಸುಜಾತ.  ಏನನ್ನೋ ನೆನಪಿಸಿಕೊಳ್ಳುತ್ತಿರುವಂತೆ ಸ್ವಲ್ಪ ಹೊತ್ತು ಮೌನವಾಗಿದ್ದ ಆಕೆ ಕನಸಿನಲ್ಲಿರುವಂತೆ ಎಂದೋ ನಡೆದದ್ದನ್ನು ಹೇಳತೊಡಗಿದಳು… “ನಮ್ಮಮ್ಮಂಗೆ ನಮ್ಮಣ್ಣ, ಮತ್ತೆ ನಾವಿಬ್ರು ಹೆಣ್ಣು ಮಕ್ಕಳು.  ನಾನೇ ಕಡೆಯವಳು. ನನಗೂ, ನಮ್ಮಕ್ಕನಿಗೂ ಹದಿನೈದು ವರ್ಷಗಳ ಅಂತರ. ಆ ಕಾಲಕ್ಕೆ ಹೆಣ್ಣು ಮಕ್ಕಳಿಗೆ 13, 14 ವರ್ಷಕ್ಕೆಲ್ಲಾ ಮದುವೆ ಮಾಡಿ ಬಿಡ್ತಿದ್ರು. ನಾನು ಹುಟ್ಟಕ್ಮುಂಚೇನೆ ಅಕ್ಕನ್ನ ಕೇಳಿಕೊಂಡು ಬಂದು ಮದುವೆ ಮಾಡಿಕೊಂಡು ಹೋಗಿದ್ರಂತೆ.  ಹಾಗಾಗಿ ಅವಳು ಯಾವತ್ತೂ ನಂಗೆ ಹತ್ತಿರ ಆಗ್ಲೇ

ಮಹಿಳಾದಿನದ ವಿಶೇಷ Read Post »

ಕಥಾಗುಚ್ಛ

ಕಥಾಯಾನ

ಆಕಾಂಕ್ಷಿ ಅಶ್ವಥ್ ವ್ಯಾಪಾರಿ ಬುದ್ಧಿಯಿಲ್ಲದ ಬೀದಿವ್ಯಾಪಾರಿ ರಾಮು, ಬಂದಿರುವ ಬೀದಿಯ ಗ್ರಾಹಕರಿಗೆ ಏನು ಬೇಕೆಂದು ಕೇಳುವುದು, ಅದಕ್ಕೆ ಹಣ ಎಷ್ಟು  ಎಂದು ಹೇಳಿ ಹೆಚ್ಚಿಗೆ ಹಣ ಕೊಟ್ಟವರಿಗೆ ಚಿಲ್ಲರೆ ಕೊಡುವುದರ ಹೊರತಾಗಿ ಒಂದೇ ಒಂದು ಹೆಚ್ಚಿನ ಮಾತನ್ನೂ ಆಡುವವನಲ್ಲ. ಇನ್ನು ಗಿಲೀಟಿನ ಮಾತು ಅಂದರೆ ಅವನಿಗೆ ಪರದೇಶೀ ಭಾಷೆಯೇನೋ ಅನ್ನುವಷ್ಟು ದೂರವೆನಿಸುವುದು.          ನಿತ್ಯವೂ ಬಿಳಿಕೆರೆ ಸರ್ಕಲ್ಲಿನ ರಾಯರ ಮಠದ ಹಿಂಭಾಗದಲ್ಲಿ, ಬೆಳಿಗ್ಗೆ ತಳ್ಳುವ ಗಾಡಿಯಲ್ಲಿ ಇಡ್ಲಿ ಮಾರುತ್ತಾ, ಸಂಜೆ ಹೊತ್ತಿನಲ್ಲಿ  ಬೇಲ್ ಪೂರಿ, ಚುರುಮುರಿ ಮಸಾಲೆ ಸೌತೆಕಾಯಿ ಮಾರುತ್ತಾ ನಿಂತಿರುತ್ತಿದ್ದ ರಾಮು, ದೂರದ ಸಕಲೇಶಪುರದಿಂದ ಬಂದಿದ್ದ ಸಂದೇಶನಿಗೆ ಆಪತ್ಬಾಂಧವನಾಗಿದ್ದ. ಸಂದೇಶ್ ಓದುವುದಕ್ಕೆಂದು ಬೆಂಗಳೂರಿಗೆ ವಲಸೆ ಬಂದವನು, ಬಿಳಿಕೆರೆ ಏರಿಯಾದ ಬಾಡಿಗೆಯ ಮನೆಯಲ್ಲಿ ವಾಸವಾಗಿದ್ದ  ದಿನಗಳಿಂದಲೂ, ರೂಮಿನಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದ. ಬೆಳಿಗ್ಗೆ ಎಚ್ಚರವಾಗುವುದು ತಡವಾದಾಗ, ಪರೀಕ್ಷೆಗಳಿದ್ದ ಸಮಯದಲ್ಲಿ, ಅಡುಗೆಗೆ ಸಮಯ ಹೊಂದಿಸಲಾಗದೇ, ರಾಮುವಿನ ಗಾಡಿ ಮುಂದೆ ಹಾಜರಾಗಿ, ತಿಂಡಿ ಪ್ಯಾಕ್ ಮಾಡಿಸಿಕೊಂಡು ಬರುತ್ತಿದ್ದ. ಎಂಜಿನಿಯರಿಂಗ್ ಕಾಲೇಜಾಗಿದ್ದರಿಂದ ಲ್ಯಾಬ್ ಗಳಿದ್ದು ಸಂಜೆ ತಡವಾಗಿ ಮನೆಗೆ ಬರುವಂತಹ ದಿನಗಳಲ್ಲಿ  ಬೇಲ್ ಪೂರಿಯನ್ನೋ, ಮಂಡಕ್ಕಿಯ ಚುರುಮುರಿಯನ್ನೋ ಕಟ್ಟಿಸಿಕೊಂಡು ಮನೆ ಸೇರಿಕೊಳ್ಳುತ್ತಿದ್ದ. ಮೂರು ವರ್ಷಗಳ ತನಕ ರೂಮಿನಲ್ಲಿ ಅಡುಗೆ ಮಾಡಲಾಗದ ಬಹುತೇಕ ದಿನಗಳಲ್ಲಿ ರಾಮುವಿನ ತಳ್ಳುವ ಗಾಡಿಯ ತಟ್ಟೆಇಡ್ಲಿ, ಮಸಾಲೆ ವಡೆ, ಸಂಜೆಯ ಸ್ನ್ಯಾಕ್ ಗಳು ಸಂದೇಶನಿಗೆ ಒಂದು ರೀತಿಯ ಕಡಿಮೆ ಖರ್ಚಿನ, ಶ್ರಮರಹಿತ ಹೊಟ್ಟೆಪಾಡು ಎನ್ನುವಂತಾಗಿದ್ದವು. ರಾಮುವಿನ ತಿನಿಸುಗಳ್ಯಾವೂ ಆರೋಗ್ಯದ ಮೇಲೆ ವಕ್ರದೃಷ್ಟಿಬೀರದೇ ಇದ್ದುದರಿಂದ ಬೇರೆ ಜಾಗಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲದಾಯಿತು.          ರಾಮು ಸಂಕೋಚದ ಸ್ವಭಾವದವನಾಗಿದ್ದರೂ ಅವನ ಸಣ್ಣ ವಯಸ್ಸು, ಮುಗ್ಧತೆಯನ್ನು ಕಂಡು ಜನರಿಲ್ಲದಿದ್ದ ಸಮಯದಲ್ಲಿ ಸಂದೇಶನು ತಾನೇ ಮಾತಿಗಿಳಿಯುತ್ತಿದ್ದ. “ ಏನೋ ಹುಡುಗಾ, ಇಡ್ಲಿ ವ್ಯಾಪಾರ ಮಾಡಿ ಸ್ಕೂಲ್ ಗೆ ಎಷ್ಟೊತ್ತಿಗೆ ಹೋಗ್ತೀಯೋ?” ಅಂದರೆ, ‘ಯಾಪಾರ ಮುಗಿಸಿದ್ಮೇಲೆ’ ಅಂದು ಸುಮ್ಮನಾಗಿಬಿಡುತ್ತಿದ್ದ.  ಕೆಲವೊಮ್ಮೆ ಇವನ ವ್ಯಾಪಾರವೆಲ್ಲ ಮುಗಿದ ಮೇಲೆ ಗಾಡಿಗೆ ಸಾಮಾನು ತುಂಬಿಕೊಂಡು ಹೋಗಲು ಅಪರೂಪಕ್ಕೊಮ್ಮೆ ಹೆಂಗಸರೊಬ್ಬರು ಬರುತ್ತಿದ್ದುದನ್ನು ಗಮನಿಸಿದ್ದ ಸಂದೇಶ, ಹುಡುಗನ ಅಮ್ಮ ಎಂಬುದನ್ನು ತಿಳಿದು ‘ಸ್ಕೂಲ್ ಗೆ ಹೋಗುವ ವಯಸ್ಸಿನ ಹುಡುಗನ್ನ ವ್ಯಾಪಾರಕ್ಕೆ ನಿಲ್ಲಿಸಿದೀರಿ, ಸಂಜೆಯೂ ವ್ಯಾಪಾರದಲ್ಲೇ ಇರ್ತಾನೆ. ಸರಿಯಾಗಿ ಓದ್ತಾನಾ ಏನು?’ ಎಂದು ಕೇಳಿದ್ದಕ್ಕೆ  ಅಮ್ಮ ಮಗ ಇಬ್ಬರೂ ಮುಖ ನೋಡುತ್ತಾ  ಹೌದೆನ್ನುವಂತೆ ಕತ್ತು ಅಲ್ಲಾಡಿಸಿದ್ದರು. ಸಂದೇಶನಿಗೆ ಯಾಕೋ ಅನುಮಾನವೆನಿಸಿತು.        ಒಂದು ಸಂಜೆ ಚುರುಮುರಿ ತೆಗೆದುಕೊಂಡು ಬೇರೆ ಗ್ರಾಹಕರಾರೂ ಇಲ್ಲದ್ದನ್ನು ಕಂಡ ಸಂದೇಶ, ರಾಮುವಿನ ಬಗ್ಗೆ ಸ್ವಲ್ಪ ವಿಚಾರಿಸಿದ. ಅಷ್ಟರಲ್ಲಿ ರಾಮುವೂ ಸಹ ಸಂಕೋಚ ಸರಿಸಿ ಸಂದೇಶನೊಂದಿಗೆ ಮಾತನಾಡುವಷ್ಟು ಹೊಂದಿಕೊಂಡಿದ್ದ.  “ಹೇ ರಾಮು, ನೀನ್, ನನ್ನ ಸೋಮಾರಿ ಮಾಡ್ತಿದ್ದೀಯೇನೋ ಅನಿಸ್ತಿದೆ ಕಣೋ”  ಇನ್ನೂ ಎರಡು ವರ್ಷ ಕಾಲೇಜು ಇದೆ, ಅಷ್ಟರಲ್ಲಿ ನಾನು ಅಡುಗೆ ಮಾಡಿಕೊಳ್ಳೋದೇ ನಿಲ್ಲಿಸಿಬಿಡ್ತೀನೇನೋ ಅನ್ಸತ್ತೆ, ಕೆಲವು ಸಾರ್ತಿ”  ಅನ್ನುತ್ತಾ ಹಾಗೆಯೇ ಪಕ್ಕದಲ್ಲಿ ನಿಂತು ಮೊಣಕೈಯಿಂದ ಮೆಲ್ಲನೆ ನೂಕಿದ. “ಓ, ನೀವೇನ್ ಸಂದೇಶಣ್ಣ ಅಪರೂಪಕ್ಕೆ ಬರೋವ್ರು, ಬಸ್ಸಿಗೆ ಹೋಗುವ ಎಷ್ಟೊಂದ್ ಜನ ರೆಗ್ಯುಲರ್ ಕಸ್ಟಮರಿದಾರೆ ಗೊತ್ತಾ? ಸಂಜೆನೂ ಪರಾಠ, ರಾಗಿಮುದ್ದೆ ತರ ಅಡುಗೆ ಮಾಡಿದ್ರೆ ಅವರಿಗೆ ಅನುಕೂಲ ಅಂತಾರೆ” ಅಂದು ತನ್ನ ಕೆಲಸದಲ್ಲಿ ತೊಡಗಿದ. “ಹೌದೇನೋ, ವ್ಯಾಪಾರ ಜೋರಾಗಿ ಆಗ್ತಿದೆ ಅನ್ನು ಮತ್ತೆ… ಹಂಗಂತ ಓದೋ ಕಡೆ ಗಮನ ಬಿಟ್ಟು ಬರೀ ದುಡ್ಡು ನೋಡೋ ತರ ಆಗಬೇಡ ಮತ್ತೆ” ಎಂದಿದ್ದಕ್ಕೆ ರಾಮು, “ಎಲ್ಲಣ್ಣಾ, ಆರನೇ ಕ್ಲಾಸಿಗೇ ಸ್ಕೂಲ್ ನಿಲ್ಸಾಯ್ತು, ಈ ಕೆಲಸದಲ್ಲಿ  ನಿಲ್ಲೋಕೇಂತ” ಅಂದ. ಸಂದೇಶನ ಅನುಮಾನ ನಿಜವಾಗಿತ್ತು. ಏನೆಂದು ವಿಚಾರಿಸಿದರೆ, ಅವರ ಅಮ್ಮನ ಮನೆಯಲ್ಲಿ ಬಡತನ, ಕನಕಪುರದ ಕಡೆ ದಿನಗೂಲಿ ಕೆಲಸ ಮಾಡಿಕೊಂಡು ಕಾಲೋನಿಯೊಂದರ ಸಣ್ಣ ಮನೆಯಲ್ಲಿ ವಾಸವಾಗಿದ್ದವರು. ಅಪ್ಪ ಹೊಸೂರಿನ ಕಡೆಯಿಂದ  ಕೆಲಸಕ್ಕೆಂದು ಬಂದಿದ್ದು, ರಾಮುವಿನ ಅಜ್ಜನಿಗೆ ಸ್ವಲ್ಪ ಪರಿಚಯವಾದ್ದರಿಂದ ಮಗಳನ್ನು ಮದುವೆ ಮಾಡಿದ್ದನಂತೆ. ರಾಮು ಆನಂತರ ಒಬ್ಬಳು ತಂಗಿ ಇದ್ದು, ಮದುವೆಯಾಗಿ ಹತ್ತು ವರ್ಷವಾಗುವಷ್ಟರಲ್ಲಿ ಅಪ್ಪ ಎಲ್ಲಿಯೋ ಹೋಗಿ ವಾಪಸಾಗಲಿಲ್ಲವಂತೆ. ಸಂಸಾರದ ಜವಾಬ್ದಾರಿ ಹೊತ್ತ ಅಮ್ಮ, ಸರ್ಕಾರಿ ಶಾಲೆಯಲ್ಲಿದ್ದ ರಾಮುವನ್ನೂ ತಂಗಿಯನ್ನೂ ಕರೆದುಕೊಂಡು ಬೆಂಗಳೂರು ಸೇರಿದರೆಂದು ಹೇಳಿದ.            ರಾಯರ ಮಠದ ಸ್ವಲ್ಪ ದೂರದಲ್ಲಿದ್ದ  ಸಣ್ಣ ಬೀದಿಯಲ್ಲಿ ಕಡಿಮೆ ಬಾಡಿಗೆಯ ಮನೆ ಹಿಡಿದು, ಕೆಲಸಕ್ಕೆಂದು ಹುಡುಕುವಾಗ ಮಠದ ಆವರಣವನ್ನು ಗುಡಿಸುವ, ನಿತ್ಯ ಮುಂಬಾಗಿಲು ತೊಳೆಯುವ ಕೆಲಸವಾಗಿ, ಆನಂತರ ಮೂರ್ನಾಲ್ಕು ಮನೆ ಕೆಲಸಗಳನ್ನೂ ಮಾಡಿಕೊಳ್ಳುತ್ತಿದ್ದ ಅಮ್ಮ ಹೇಗೋ ದಿನ ದೂಡುತ್ತಿದ್ದರು. ಮಠದ ಹಿಂದಿನ ಬಸ್ ನಿಲ್ದಾಣದಲ್ಲಿ ತರಕಾರಿ ಮಾರಾಟ ಮಾಡುವ ಹೆಂಗಸರೊಬ್ಬರ ಸಲಹೆಯಂತೆ, ಬಸ್ ಸ್ಟಾಂಡಿಗೆ ಬರುವ ಅನೇಕರಿಂದ ಬೆಳಗಿನ ತಿಂಡಿಯ ವ್ಯಾಪಾರ ಹೊಳೆದಿತ್ತಂತೆ.  ತಕ್ಕಮಟ್ಟಿಗೆ ಅಡುಗೆ ಗೊತ್ತಿದ್ದ ರಾಮುವಿನ ಅಮ್ಮ ತಟ್ಟೆಇಡ್ಲಿ ವ್ಯಾಪಾರಕ್ಕೆ ಮುಂದಾಗಿ,  ಆವರಣ ಗುಡಿಸುವ ಹೆಂಗಸಿನ ಅಡುಗೆ ವ್ಯಾಪಾರವನ್ನು ಯಾರಾದರೂ ಮೆಚ್ಚಿಯಾರೇ ಎಂದುಕೊಂಡು, ವ್ಯಾಪಾರ ನಿಭಾಯಿಸುವ ಹೊಣೆ ರಾಮುವಿಗೆ ಬಂದಾಯಿತು. ಆ ಬಗ್ಗೆ ನೋವು ಬಚ್ಚಿಕೊಂಡು ಅಭಿಮಾನದಲ್ಲಿ, ಅಮ್ಮನ ಸಂಪಾದನೆಗೆ ಕಡಿಮೆಯಿಲ್ಲದಂತೆ ಬೆಳಗಿನ ಹಾಗೂ ಸಂಜೆಯ ಮೂರ್ನಾಲ್ಕು ಗಂಟೆಗಳಲ್ಲಿ ಸಂಪಾದಿಸಿಕೊಂಡು ತಂಗಿಯನ್ನು ಓದಲು ಕಳಿಸ್ತಿದ್ದಾರೆ. ಸಂದೇಶನಿಗೆ ಕೇಳಿದ್ದು ಪಿಚ್ಚೆನಿಸಿದರೂ ಬದುಕಿನ ಅನಿವಾರ್ಯತೆಗಳು ಒಬ್ಬೊಬ್ಬರಿಗೆ ಒಂದೊಂದು ರೀತಿ ಎಂದುಕೊಂಡು ಸಣ್ಣ ಬೇಸರದಿಂದಲೇ ಬೆನ್ನುತಟ್ಟಿದ. ‘ನಮ್ಮಮ್ಮ “ಬೆಟ್ಟದ ಹೂವು” ಸಿನಿಮಾ ನೋಡಿ ನನಗೆ ರಾಮು ಅಂತ ಹೆಸರಿಟ್ಟಿದ್ದಂತೆ ಸಂದೇಶಣ್ಣಾ’ ಅನ್ನುತ್ತಾ ಪುನೀತ್ ರಾಜಕುಮಾರರ ಬಾಲ್ಯದ ಚಿತ್ರವೊಂದನ್ನು ಗಾಡಿಯ ತುದಿಯಲ್ಲಂಟಿಸಿರುವುದು ತೋರಿಸಿಸುವಾಗ ಅವನ ಕಣ್ಣುಗಳ ಹೊಳಪು, ಕಷ್ಟದ ಬದುಕಾದರೂ ಚೈತನ್ಯಕ್ಕೆ ಕುಂದಿಲ್ಲ ಎನಿಸುವಂತಿತ್ತು.        ಸಂದೇಶನ ಮೂರನೇ ವರ್ಷದ ಕಾಲೇಜು ಮುಗಿದು ರಜೆಗೆ ಊರಿಗೆ ಹೋಗಿದ್ದಾಗ, ಬಿಳಿಕೆರೆ ಸರ್ಕಲ್ಲಿನಲ್ಲೊಂದು ಹೊಸ ಫಲಹಾರ ಭವನ ತಲೆಯೆತ್ತಿತ್ತು. “ಶ್ರೀ ರಾಘವೇಂದ್ರ ಭವನ, ಸಸ್ಯಾಹಾರಿ” ಎನ್ನುವ ಸಣ್ಣ ಅಕ್ಷರಗಳ ನಾಮಫಲಕದಲ್ಲಿ, ಬಾಳೆ ಎಲೆಗಳ ದೊಡ್ಡ ಚಿತ್ರದಲ್ಲಿ ತಟ್ಟೆಇಡ್ಲಿ, ಉದ್ದಿನ ವಡೆಗಳು ತಾಜಾತನವನ್ನು ಹೊರಹೊಮ್ಮುತ್ತಿರುವಂತೆ ಕಾಣುತ್ತಿದ್ದವು. ರಾಯರ ಮಠದ ಹಿಂಭಾಗದ ಬಿಳಿಕೆರೆ ಬಸ್ ಸ್ಟಾಂಡಿಗೆ ಕಾಣುವಂತೆ ಹೊಸ ಎಸ್ಆರ್ ಬಿ ಮಳಿಗೆಯು, ರಾಮುವಿನ ತಳ್ಳುವ ಗಾಡಿಯ ನಿಲ್ದಾಣಕ್ಕೆ ನೂರು ಅಡಿಯಷ್ಟು ದೂರದಲ್ಲಿದ್ದಿತ್ತು. ಅಲ್ಲಿಯತನಕ ಅಷ್ಟೇನೂ ಜೋರು ವ್ಯಾಪಾರವಿಲ್ಲದಿದ್ದರೂ, ನಿತ್ಯವೂ ತಪ್ಪದಂತೆ ವ್ಯಾಪಾರಕ್ಕೆ ಬರುತ್ತಿದ್ದ ರಾಮುವಿಗೆ  ಈಗ ಹೊಚ್ಚ ಹೊಸ ಎಸ್ ಆರ್ ವಿ ಭವನದ ಅಡುಗೆ ಕೋಣೆಯಿಂದ ಬರುವ ತಾಜಾ ಚಟ್ನಿಯ ಘಮಲು, ಉದ್ದಿನ ವಡೆ ಕರಿಯುವ, ನರುಗಂಪಿನ ಡಿಕಾಕ್ಷನ್ ಕಾಫಿಯ  ಸುವಾಸನೆ, ಮಿರುಗುವ ಹೊಸ ಟೇಬಲ್ಲುಗಳು, ಬಾಳೆ ಎಲೆಯ ಹಸಿರು ಹಿನ್ನೆಲೆಯಲ್ಲಿ ಬಿಳಿಯ ತಟ್ಟೆಇಡ್ಲಿಯ ಮೇಲೆ ಹೊಂದಿಕೆಯಾಗುವಂತಹ ತಿಳಿ ಕೇಸರಿ ಬಣ್ಣದ ಚಟ್ನಿ, ಇವೆಲ್ಲಾ ಆಕರ್ಷಣೆಗಳನ್ನೂ ಎದುರಿಸಬೇಕಾದ ಸವಾಲು ಕಾದಿತ್ತು. ಯಾವಾಗಲೋ ಬಣ್ಣ ಬಳಿದಂತೆ ಕಾಣುವ ನಾಲ್ಕು ಸೈಕಲ್ ಚಕ್ರದ ತಳ್ಳುವ ಗಾಡಿಯ ಮೇಲೆ  ಹಬೆಯನ್ನು ಹೊಮ್ಮುವ ಒಂದು ಪಾತ್ರೆ, ಇಡ್ಲಿ ಬಡಿಸುವ ಪ್ಲಾಸ್ಟಿಕ್ ತಟ್ಟೆ ಅದರ ಮೇಲೊಂದು ಒಣಗಿದ ಮುತ್ತುಗದ ಎಲೆ, ಕುಡಿಯುವ ನೀರು ತುಂಬಿರಿಸಿದ್ದ  ಮೂರು ಪ್ಲಾಸ್ಟಿಕ್ ಜಗ್ಗುಗಳು, ವಿದ್ಯುದ್ದೀಪಗಳ ಅಲಂಕಾರದಿಂದ ಕಂಗೊಳಿಸುವ ಮೈಸೂರು ಅರಮನೆಯ ಮುಂದೆ ಝೀರೋ ವ್ಯಾಟ್ ಬಲ್ಬಿನಂತಾಯಿತು.          ಆದರೂ ಧೃತಿಗೆಡದವನಂತೆ ತನ್ನ ಪಾಡಿಗೆ ತಾನು ಮಾಮೂಲಿನ ಜಾಗದಲ್ಲಿ ನಿಂತು ವ್ಯಾಪಾರ ಮಾಡುತ್ತಿದ್ದ ರಾಮುವಿಗೆ  ಒಂದೆರಡು ವಾರಗಳಲ್ಲಿ ಎಸ್.ಆರ್ ಬಿ ಯ ವತಿಯಿಂದ ಒಂದು ನೋಟೀಸ್ ಬಂತು. ವ್ಯಾಪಾರದ ಪ್ರಮಾಣ ಕ್ಷೀಣಿಸಿದ್ದಕ್ಕೆ ತಕ್ಕಂತೆ ತಟ್ಟೆಇಡ್ಲಿ, ಮಸಾಲೆ ವಡೆಗಳ ಪ್ರಮಾಣವನ್ನೂ ಕಡಿಮೆ ಮಾಡಿಕೊಂಡಿದ್ದ ರಾಮು ಮೊದಲಿನಂತೆ ಹತ್ತೂವರೆಯ ಬಸ್ಸು ಹೊರಡುವ ತನಕ ಕಾಯದೇ ಮಾರಾಟವಾಗುವ ಇಡ್ಲಿಯ ಪ್ರಮಾಣದ ಆಧಾರದ ಮೇಲೆ ಜಾಗ ಖಾಲಿ ಮಾಡುತ್ತಿದ್ದನು. ಸ್ವಸಹಾಯ ಪದ್ಧತಿಯ ಎಸ್ ಆರ್ ವಿ ಯ ಮಳಿಗೆಯಲ್ಲಿ ತಿಂಡಿ ಸರಬರಾಜು ಮಾಡುತ್ತಾ ಗಲ್ಲಾಪೆಟ್ಟಿಗೆಯನ್ನೂ ನಿಭಾಯಿಸುವ ನಲವತ್ತು ದಾಟಿರಬಹುದಾದ ಮಧ್ಯವಯಸ್ಸಿನ ಭಟ್ಟರು, ಹಣೆಗೆ ಮಠದ ಚಂದನ, ಕುಂಕುಮವನ್ನು ಹಣೆಗೆ ಧರಿಸಿ, ಒಳಗಿನ ಜನಿವಾರ ಕಾಣುವಂತಹ ತೆಳುವಾದ ಬನಿಯನ್ನು ಧರಿಸಿ ನೀಟಾಗಿರುತ್ತಿದ್ದರು.  ಕಪ್ಪಗೆ ಕುಳ್ಳಗೆ ಇದ್ದ, ಇನ್ನೂ ಹೈಸ್ಕೂಲಿಗೆ ಹೋಗುವ ವಯಸ್ಸಿನ ರಾಮುವಿನಿಂದ ಅವರಿಗೇನೂ ಉಪಟಳವಾಗುವಂತಿರಲಿಲ್ಲ. ಆದರೂ ರಾಯರ ಮಠದ ಆವರಣಕ್ಕೆ ತಕ್ಕನಾಗಿದ್ದ ಉಪಹಾರ ಭವನದ ಕಣ್ಣಳತೆಯ ದೂರದಲ್ಲಿ ರಾಮುವಿನ ಗಾಡಿಯನ್ನು ಕಾಣುವುದೆಂದರೆ ಅವರಿಗೆ ಅಷ್ಟಾಗಿ ಸರಿಕಾಣಲಿಲ್ಲ. ಮಠದ ಮೂಲಕ ಪರಿಚಯವಾಗಿದ್ದ ಸ್ಥಳೀಯರೊಬ್ಬರಿಗೆ ಈ ವಿಚಾರವನ್ನು ನಯವಾಗಿ ಹೇಳಿದ ಭಟ್ಟರು ಬೇರೆ ಎಲ್ಲಾದರೂ ಜಾಗ ನೋಡಿಕೊಳ್ಳುವಂತೆ ನೋಟೀಸು ಕಳಿಸಿಕೊಟ್ಟಿದ್ದರು. ರಾಮು ಹೆಚ್ಚೇನೂ ಮಾತನಾಡದೇ ‘ನಾಲ್ಕು ವರ್ಷದಿಂದ ಇಲ್ಲೇ ಬತ್ತೀನಿ, ಇಲ್ಲಿ ತರಕಾರಿ ಮಾರುವ ಕೆಲವರನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. ಬಸ್ ಸ್ಟಾಂಡಿಗೆ ಬರೋವ್ರು ಯಾಪಾರ ಮಾಡ್ತಾರೆ ಅಂತ ಇಲ್ಲಿದಿನಿ; ಈಗ ಒಂದೇ ಸಲ ಬೇರೆ ಜಾಗ ಅಂದರೆ” ಎಂದು ಮೆಲುದನಿಯಲ್ಲೇ ಹೇಳುತ್ತಾ “ಏನ್ ಕೊಡ್ಲಿ ಸಾರ್” ಎಂದು ಕೇಳಿದ.  “ನಿನ್ನ ಪುರಾಣ ಕೇಳೋಕೆ ಟೈಮಿಲ್ಲ, ಹೇಳ್ದಷ್ಟು ಮಾಡೋದುಕಲಿ” ಎಂದು ಭಟ್ಟರ ನೋಟೀಸುದಾರರು ಹೊರಟು ಹೋಗಿದ್ದರು. ವ್ಯಾಪಾರದ ಈ ಹೊಸ ಸ್ಪರ್ಧಾತ್ಮಕತೆಯ ಬಗ್ಗೆ ಏನೂ ಮಾತನಾಡದಿದ್ದರಿಂದ, ತಾನಾಗಿಯೇ ಕೆದಕಿ ಕೇಳದೇ ಸಂದೇಶನೂ ತನ್ನಷ್ಟಕ್ಕಿದ್ದು ಮಾಮೂಲಾಗಿ ತಿಂಡಿ ಕಟ್ಟಿಸಿಕೊಂಡು ಹಿಂತಿರುಗುತ್ತಿದ್ದನು. ಅಂತಿಮ ವರ್ಷದಲ್ಲಿ ಪ್ರಾಜೆಕ್ಟ್ ಕೆಲಸಗಳ ಪ್ರಯುಕ್ತ ಕಾಲೇಜಿಗೆ ಲೇಟಾಗಿ ಹೋಗುತ್ತಿದ್ದಾಗ ವಾರದ ಕೆಲವು ದಿನಗಳು, ದಾರಿಯಲ್ಲಿ ರಾಮುವಿನ ಗಾಡಿಯ ಗೈರುಹಾಜರಿಯನ್ನು ಸಂದೇಶ ಗಮನಿಸಿದ್ದ. ಆನಂತರ ಶಾಶ್ವತವೆನಿಸುವಂತೆ, ರಾಮು  ಒಂದು ದಿನ ಇದ್ದಕ್ಕಿದ್ದ ಹಾಗೆ ಹೇಳದೇ ಕೇಳದೇ ಮಾಯವಾಗಿಬಿಟ್ಟಿದ್ದ. ಹಾಗಾಗಿ ತಿಂಡಿಗೆ ಅನಿವಾರ್ಯವೆನಿಸಿದಾಗ ಎಸ್ ಆರ್ ಬಿ ಯನ್ನೋ ಅಥವಾ ಕಾಲೇಜು ಕ್ಯಾಂಟೀನನ್ನೋ ಅವಲಂಬಿಸತೊಡಗಿದ. ಮುಖ ನೋಡುತ್ತಲೇ ತಿಂಡಿ ಪ್ಯಾಕ್ ಮಾಡದೇ,  ಕೌಂಟರ್ ಗೆ ಹೋಗಿ ಆರ್ಡರ್ ಮಾಡಿ ಹಣಕೊಟ್ಟು, ಮಾಣಿಗೆ ಟೋಕನ್ ತಲುಪಿಸುವಾಗ  ಬೆಟ್ಟದ ಹೂವಿನ ನಾಯಕನಂತಹ ಮಹತ್ವಾಕಾಂಕ್ಷಿ ರಾಮು ನೆನಪಾಗುತ್ತಿದ್ದ.        ಕಾಲೇಜು ಮುಗಿಸಿ ಕೆಲಸ ಪ್ರಾರಂಭಿಸಿದ್ದ ಸಂದೇಶನು ನಿತ್ಯ ಬಿಳಿಕೆರೆಯಿಂದ ಬನ್ನೇರುಘಟ್ಟ ರಸ್ತೆಗೆ ಪ್ರಯಾಣಿಸುವುದು ದೂರವೆನಿಸಿ, ಆಫೀಸಿನ ಒಂದು ಶಾಖೆ ಜಯನಗರದಲ್ಲೂ ಇದ್ದುದರಿಂದ ಎರಡೂ ಬ್ರಾಂಚುಗಳಿಗೆ ಸಮಾನ ದೂರವೆನಿಸುವಂತೆ ಪುಟ್ಟೇನಹಳ್ಳಿಯಲ್ಲಿ ಬಾಡಿಗೆ ಮನೆ ಹಿಡಿದಿದ್ದ. ಕಾಲೇಜಿಗೆ ಹೋಗುವಾಗಿನ ಸೆಕೆಂಡ್ ಹ್ಯಾಂಡ್ ಸ್ಪ್ಲೆಂಡರ್ ಬೈಕ್ ಬದಲಾಯಿಸಿ ಹೊಸ ಬುಲೆಟ್ಟ್ ಖರೀದಿಸಿದ್ದ. ಒಂದು ದಿನ ಸೌತ್ಎಂಡ್ ಸರ್ಕಲ್ಲಿನ ಟ್ರಾಫಿಕ್ ಲೈಟ್ ಕಾಯುತ್ತಾ ನಿಂತಿದ್ದಾಗ, ಅಚಾನಕ್ಕಾಗಿ ಅಪರಿಚಿತ ದನಿಯೊಂದು “ಸಂದೇಶಣ್ಣ” ಎಂದು ಕೂಗಿದಂತಾಗಿ ಸುತ್ತ ನೋಡುವಾಗ ಆಟೋ ಒಂದರಿಂದ ಮೆಲ್ಲನೆ ತಲೆ ಹೊರಗೆ ಬಂದಿದ್ದು ಕಂಡ. ದೃಷ್ಟಿಯಿಟ್ಟು ಗಮನಿಸಿ ಇಡ್ಲಿರಾಮು ಎಂದು ಗೊತ್ತುಮಾಡಿಕೊಂಡು ಅವನತ್ತ ಬರುವಂತೆ ಸೂಚಿಸಿ ಸಿಗ್ನಲ್ ನೋಡಿದ. ಅಷ್ಟರಲ್ಲಿ ಆಟೋ ಗೆ ಹಣಕೊಟ್ಟು ಇಳಿದುಬಂದ ರಾಮುವನ್ನು ಕೂರಿಸಿಕೊಂಡು ಮುಂದಿನ ರಸ್ತೆಯ ಕ್ಯಾಂಟೀನಿನತ್ತ ನಿಲ್ಲಿಸಿ ವಿಚಾರಿಸತೊಡಗಿದ-         “ಏನೋ ರಾಮು, ಧಿಡೀರನೆ ಮಾಯವೂ ಆಗ್ತೀಯ, ಮತ್ತೆ ಹೀಗೇ ಪ್ರತ್ಯಕ್ಷನೂ ಆಗ್ತೀಯಾ, ಹೇಗಿದ್ದೀಯಾ” ಎಂದು ವಿಚಾರಿಸುತ್ತಲೇ ತನ್ನ ಓದು ಮುಗಿಸಿ ಕೆಲಸ ಶುರುಮಾಡಿ ಹೊಸ ಏರಿಯಾದಲ್ಲಿರುವುದನ್ನೂ ಹೇಳಿದ. ಬಿಳಿಕೆರೆಯ ತಳ್ಳುವ ಗಾಡಿಗೆ ಒಂದು ದಿನ ಪೊಲೀಸ್ ಪೇದೆಯೊಬ್ಬರು ಬಂದು ಹೆದರಿಸಿ ಗಾಡಿ ಸೀಝ್ ಮಾಡ್ತೀವಿ ಅಂದಿದ್ದನ್ನೂ, ಅದಾಗಿ ಒಂದು ವಾರದಲ್ಲಿ ಸ್ಥಳೀಯ ದಾಂಡಿಗರಿಬ್ಬರು ಗಾಡಿಯ ಚಕ್ರವನ್ನು ಜಖಂಗೊಳಿಸಿದರೆಂದೂ ನಂತರ ಬಾಡಿಗೆಯ ತಳ್ಳುವ ಗಾಡಿಯೂ

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಜುಗ್ಗ ರಾಮಣ್ಣ ಕು.ಸ.ಮಧುಸೂದನ ಜುಗ್ಗ ರಾಮಣ್ಣ ಊರಲ್ಲಿ ಎಲ್ಲರೂ ರಾಮಣ್ಣನನ್ನು ಕರೆಯುತ್ತಿದ್ದುದು ಜುಗ್ಗ ರಾಮಣ್ಣ ಅಂತಲೆ. ಅವನ ಮನೆ ಇದ್ದ ಬೀದಿಯ ಉಳಿದ ಮನೆಗಳವರು ತಮ್ಮ ನೆಂಟರಿಗಾಗಲಿ, ಪರಿಚಯದವರಿಗಾಗಲಿ ಮನೆಯ ವಿಳಾಸ ಕೊಡಬೇಕಾದರೆ ಬಸ್ ಸ್ಟ್ಯಾಂಡಿನಿಂದ ದಾವಣಗೆರೆ ರಸ್ತೆಯ ಕಡೆ ನಾಲ್ಕು ಹೆಜ್ಜೆ ಬಂದು ಜುಗ್ಗ ರಾಮಣ್ಣನ ಬೀದಿ ಎಲ್ಲಿ ಬರುತ್ತೆ ಅಂತ ಯಾರನ್ನೇ ಕೇಳಿದರೂ ಸಾಕು ನಾವಿರುವ ಬೀದಿ ತೋರಿಸ್ತಾರೆ ಅಂತ. ಅಷ್ಟರಮಟ್ಟಿಗೆ ಆ ಊರಿನವರು ಆ ಹೆಸರಿಗೆ ಹೊಂದಿಕೊಂಡು ಬಿಟ್ಟಿದ್ದರು. ಇದು ರಾಮಣ್ಣನ ಮನೆಯವರಿಗಷ್ಟೆ ಅಲ್ಲದೆ ಸ್ವತ: ರಾಮಣ್ಣನಿಗು ಗೊತ್ತಿತ್ತು. ಅವನ ಮನೆಯವರಿಗೆ ಇದು ಸ್ವಲ್ಪ ಮುಜುಗರ ಎನಿಸಿದರೂ, ಸ್ವತ: ರಾಮಣ್ಣನಿಗೆ ಅದರಿಂದ ಯಾವ ಬೇಸರವಾಗಲಿ, ಮುಜುಗರವಾಗಲಿ ಇರಲಿಲ್ಲ. ತಾನು ಜುಗ್ಗ ಎನಿಸಿಕೊಳ್ಳುವ ನಿಟ್ಟಿನಲ್ಲಿನ ಆತನ ಪ್ರಯತ್ನ ಮುಂದುವರೆದಿತ್ತು. ಊರಲ್ಲಿ ತನ್ನ ಹೆಸರಿನ ಹಿಂದೆ ಸೇರಿಕೊಂಡ ಜುಗ್ಗ ಎನ್ನುವ ಶಬ್ದ ತನಗೆಸಿಕ್ಕ ಯಾವುದೊ ಪ್ರಶಸ್ತಿಯೇನೊ ಎಂಬಂತೆ ಒಳಗೊಳಗೆ ಖುಶಿ ಪಡುವಷ್ಟರ ಮಟ್ಟಿಗೆ ರಾಮಣ್ಣ ಅದಕ್ಕೆ ಒಗ್ಗಿ ಹೋಗಿದ್ದ. ಹಾಗೆ ನೋಡಿದರೆ ರಾಮಣ್ಣನೇನು ಹುಟ್ಟಾ ಶ್ರೀಮಂತನೇನಲ್ಲ. ಅವರ ಅಪ್ಪ ಆ ಕಾಲದಲ್ಲಿ ಒಂದು ಸೈಕಲ್ ಶಾಪ್ ಇಟ್ಟುಕೊಂಡು ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಚಿರಪರಿಚಿತರಾಗಿದ್ದರು. ಹೈಸ್ಕೂಲು ದಾಟದ ರಾಮಣ್ಣನೂ ಕ್ರಮೇಣ ಸೈಕಲ್ ಶಾಪಿನ ಕೆಲಸಕ್ಕೆ ನಿಂತು ಬಿಟ್ಟ. ಪಂಕ್ಚರ್ ಹಾಕುವುದರಿಂದ ಹಿಡಿದು ವೀಲ್ ಬೆಂಡ್ ತೆಗಿಯೋವರೆಗಿನ ಅಷ್ಟೂ ಕೆಲಸಗಳನ್ನು ಕಲಿತುಕೊಂಡು ಸೈಕಲ್ ರಿಪೇರಿಯ ವಿಚಾರದಲ್ಲಿ ಪಂಟರ್ ಅನಿಸಿಕೊಂಡಿದ್ದ. ರಾಮಣ್ಣನಿಗೆ ಇಪ್ಪತ್ಕಾಲು ವರ್ಷವಾಗಿದ್ದಾಗ ಅವರ ಅಪ್ಪ ತುಮಕೂರಿನ ವ್ಯಾಪಾರಸ್ಥರೊಬ್ಬರ ಮಗಳುಸಾವಿತ್ರಮ್ಮನ ಜೊತೆ ಮದುವೆ ಮಾಡಿಸಿದ್ದರು..ರಾಮಣ್ಣನನ್ನು ಮದುವೆಯಾಗಿ ಬರುವಾಗ ಸಾವಿತ್ರಮ್ಮನೇನು ಬರಿಗೈಲಿ ಬಂದಿರಲಿಲ್ಲ. ಆ ಕಾಲದಲ್ಲಿಯೇ ಇಪ್ಪತ್ತು ಸಾವಿರ ರೂಪಾಯಿ ನಗದು ಕಾಲು ಕೆಜಿ ಬಂಗಾರ ಅರ್ದ ಕೆಜಿ ಬೆಳ್ಳಿ ಒಡವೆಗಳ ಗಂಟಿನೊಂದಿಗೆಯೇ ಬಂದಿದ್ದಳು. ಒಂದರ ಹಿಂದೆ ಒಂದರಂತೆ ನಾಲ್ಕು ಮಕ್ಕಳ ತಾಯಿಯಾದ ಸಾವಿತ್ರಮ್ಮನಿಗೆ ಮಾವ ಇರುವತನಕ ಯಾವ ಕಷ್ಟವೂ ಎದುರಾಗಿರಲಿಲ್ಲ. ಮನೆ ಮತ್ತು ಅಂಗಡಿಗಳ ವ್ಯವಹಾರಗಳನ್ನು ತನ್ನ ಕೈಲೇ ಇಟ್ಟುಕೊಂಡಿದ್ದ ರಾಮಣ್ಣನ ಅಪ್ಪ ತೀರಾ ದಾರಾಳಿಯಲ್ಲದಿದ್ದರು ಮನೆಗೆ ತಂದು ಹಾಕುವಲ್ಲಿ ಉಣ್ಣುವುದು ತಿನ್ನುವುದರಲ್ಲಿ ಜುಗ್ಗತನ ತೋರಿಸಿದವನಲ್ಲ. ಹೀಗಾಗಿ ರಾಮಣ್ಣನ ಮಕ್ಕಳು ತಾತನ ಆರೈಕೆಯಲ್ಲಿಯೇ ಬೆಳೆಯತೊಡಗಿದ್ದರು. ರಾಮಣ್ಣನ ಮೊದಲ ಮೂರೂ ಮಕ್ಕಳು ಗಂಡು ಮಕ್ಕಳಾಗಿದ್ದು ನಾಲ್ಕನೆಯದು ಮಾತ್ರ ಹೆಣ್ಣಾಗಿತ್ತು. ನಾಲ್ಕನೆಯದಾಗಿ ಹೆಣ್ಣು ಹುಟ್ಟಿದ ಮೂರನೆ ತಿಂಗಳಿಗೆ ರಾಮಣ್ಣನ ಅಪ್ಪ ಪಾಶ್ರ್ವವಾಯುವಿಗೆ ತುತ್ತಾಗಿ ಶಿವನ ಪಾದ ಸೇರಿಬಿಟ್ಟಿದ್ದರು. ಅಲ್ಲಿಂದಾಚೆಗೆ ರಾಮಣ್ಣನ ಯಜಮಾನಿಕೆ ಶುರುವಾಯಿತು. ಕೈಗೆ ವ್ಯವಹಾರ ಸಿಕ್ಕೊಡನೆ ರಾಮಣ್ಣ ಕೈ ಬಿಗಿಮಾಡತೊಡಗಿದ. ಸೈಕಲ್ಲು ಶಾಪಿಗೆ ಬರುತ್ತಿದ್ದ ಗಿರಾಕಿಗಳ ಕಷ್ಟ ಸುಖ ತಿಳಿದುಕೊಂಡಿರುತ್ತಿದ್ದ ರಾಮಣ್ಣ ನಿದಾನವಾಗಿ ಮನೆಯಲ್ಲಿದ್ದ ದುಡ್ಡನ್ನು ಬಡ್ಡಿಗೆ ಬಿಡತೊಡಗಿದ. ಮೊದಲು ಸಣ್ಣದಾಗಿ ಶುರು ಮಾಡಿಕೊಂಡ ಈಬಡ್ಡಿ ವ್ಯವಹಾರ ರಾಮಣ್ಣನ ಕೈ ಹಿಡಿಯತೊಡಗಿತು. ಮೊದಮೊದಲು ನಂಬಿಕೆಗೆ ಸೀಮಿತವಾಗಿ ನಡೆಯುತ್ತಿದ್ದ ವ್ಯವಹಾರ ಕ್ರಮೇಣ ಪತ್ರಗಳನ್ನು ಬರೆಸಿಕೊಳ್ಳುವ ಹಂತಕ್ಕೆ ಬಂದಿತ್ತು. ದಿನಕಳೆದಂತೆ ರಾಮಣ್ಣ ನಿದಾನವಾಗಿ ದೊಡ್ಡ ವ್ಯವಹಾರಗಳಿಗೆ ಕೈ ಹಾಕತೊಡಗಿದ್ದ. ಮನೆಪತ್ರ, ಹೊಲಗದ್ದೆಗಳ ಪತ್ರವನ್ನು, ಬಂಗಾರದ ಒಡವೆಗಳನ್ನು ಅಡವಿಟ್ಟುಕೊಂಡು ಸಾಲ ಕೊಡತೊಡಗಿದ. ಈ ಲೇವಾದೇವಿವ್ಯವಹಾರ ದೊಡ್ಡದಾಗುತ್ತಿದ್ದಂತೆ ಸೈಕಲ್ಲುಗಳ ಜಾಗದಲ್ಲಿ ಆಗತಾನೆ ಮಾರ್ಕೆಟ್ಟಿಗೆ ಬಂದ ಮೋಟಾರ್ ಸೈಕಲ್ಲುಗಳ ಹಾವಳಿ ಕಂಡ ರಾಮಣ್ಣ ತನ್ನದೇ ಆದ ಮೋಟಾರ್ ಸೈಕಲ್ ಮಾರಾಟದ ಶೋರೂಮನ್ನು ಪ್ರಾರಂಬಿಸಿದ. ಅದರಲ್ಲಿ ಭರ್ಜರಿಯಾಗಿ ವ್ಯಾಪಾರ ನಡೆಯ ತೊಡಗಿತು. ಈ ನಡುವೆ ತನ್ನ ಲೇವಾದೇವಿ ವ್ಯವಹಾರಗಳಲ್ಲಿ ಪೋಲೀಸರ ಕಿರಿಕಿರಿ ತಡೆಯಲಾಗದೆ ನಾಮಕಾವಸ್ಥೆಗೆ ಒಂದು ಫೈನಾನ್ಸ್ ಕಂಪನಿ ರಿಜಿಸ್ಟರ್ ಮಾಡಿಸಿ ತನ್ನ ವ್ಯವಹಾರದ ಇಪ್ಪತ್ತೈದರಷ್ಟನ್ನು ಅದರ ಮೂಲಕ ಮಾಡ ತೊಡಗಿ, ಸರಕಾರದ ಕಣ್ಣಿಗೆ ಮಣ್ಣೆರಚಿ ವ್ಯವಹಾರ ನಡೆಸ ತೊಡಗಿದ. ಊರೊಳಗೆ ನಷ್ಟದಲ್ಲಿ ನಡೆಯುತ್ತಿದ್ದ ಒಂದು ರೈಸ್ ಮಿಲ್ಲನ್ನು ಖರೀಧಿಸಿ ಅದನ್ನು ಅಭಿವೃದ್ದಿ ಪಡಿಸಿ ಲಾಭ ಬರುವಂತೆ ಮಾಡಿಕೊಂಡ. ಕೊಟ್ಟ ಸಾಲ ಹಿಂದಿರುಗಿಸಲಾಗದವರ ಹತ್ತಾರು ಏಕರೆ ಗದ್ದೆ, ಅಡಿಕೆ ತೋಟಗಳನ್ನು ತನ್ನ ಹೆಸರಿಗೆ ಮಾಡಿಸಿಕೊಂಡು ಜಮೀನ್ದಾರನೆಂಬ ಹೆಸರು ಗಳಿಸಿಕೊಂಡ. ಇಷ್ಟೆಲ್ಲ ಆದರೂಹೀಗೆ ಯಥೇಚ್ಚವಾಗಿ ಸೇರುತ್ತಲೇ ಹೋದ ದುಡ್ಡು ಮನೆಯಲ್ಲಿ ಅವನ ಹೆಂಡತಿ ಮಕ್ಕಳಿಗೆ ಯಾವುದೆ ಸುಖಸಂತೋಷ ತರಲೇಇಲ್ಲ. ಮನೆಯಲ್ಲಿ ಒಂದು ಅಡುಗೆಮಾಡುವ ವಿಚಾರದಲ್ಲೂ ರಾಮಣ್ಣನ ಅನುಮತಿ ಬೇಕಾಗಿತ್ತು. ಆತ ತಂದು ಕೊಟ್ಟ ದಿನಸಿಯಲ್ಲಿಯೇ ಸಾವಿತ್ರಮ್ಮ ಸಂಸಾರ ನಿಬಾಯಿಸಬೇಕಿತ್ತು. ಮಕ್ಕಳು ಆಸೆಯಿಂದ ಏನಾದರು ತಿಂಡಿ ಕೇಳಿದರೂ ರಾಮಣ್ಣ ಸಂತೋಷವಾಗಿರುತ್ತಿದ್ದ ಸಮಯ ನೋಡಿ ಕೇಳಿ ಆತನ ಅಪ್ಪಣೆ ಪಡೆದೆ ಮಾಡಿಕೊಡಬೇಕಾಗಿತ್ತು. ಅವನ ಗಂಡುಮಕ್ಕಳಿಗು ಅಪ್ಪನ ಜುಗ್ಗತನ ಅರ್ಥವಾಗಿ ತಮ್ಮ ಆಸೆಗಳನ್ನು ಅದುಮಿಟ್ಟುಕೊಂಡೇ ಬೆಳೆಯ ತೊಡಗಿದ್ದರು. ವರ್ಷದಲ್ಲಿ ಗೌರಿ ಹಬ್ಬ ಮತ್ತು ದೀಪಾವಳಿಗೆ ಬಟ್ಟೆ ತೆಗೆಯುವಾಗಲೂ ಮೂವರು ಗಂಡು ಮಕ್ಕಳಿಗು ಒಂದೇ ತರದ ಅಗ್ಗದ ಬಟ್ಟೆ ತೆಗೆಯುತ್ತಿದ್ದ. ಅವನ್ನು ಹೊಲಿಸುವಾಗಲು ಅವರ ಅಳತೆಗಿಂತ ಸ್ವಲ್ಪ ಹೆಚ್ಚೇ ಅನ್ನುವಷ್ಟು ದೊಡ್ಡದಾಗಿಹೊಲಿಸುತ್ತಿದ್ದ.ಇನ್ನು ತನ್ನ ಮನೆಗೆ ಯಾರೇ ನೆಂಟರು ಬಂದರೂ ನೆಟ್ಟಗವರು ಒಂದು ರಾತ್ರಿಯೂ ಇರಬಾರದ ರೀತಿಯಲ್ಲಿ ಕಟುಕಿಯಾಡಿ ಕಳಿಸಿಬಿಡುತ್ತಿದ್ದ.ಅವನ ಇಂತಹ ಜಿಪುಣತೆಯನ್ನು ಕಂಡ ಸಾವಿತ್ರಮ್ಮನ ತವರಿನವರು ಸಹ ಈ ಕಡೆ ತಲೆಹಾಕಿ ಮಲಗುವುದನ್ನು ನಿಲ್ಲಿಸಿಬಿಟ್ಟಿದ್ದರು.ಗಂಡು ಮಕ್ಕಳಿಗೆ ಹದಿನಾರು ವರ್ಷ ದಾಟಿದರೂ ಯಾವತ್ತೂ ಅವರು ಒಂದೇ ಒಂದು ರೂಪಾಯಿ ತೆಗೆದುಕೊಂಡು ಅಂಗಡಿಗೆ ಹೋಗಿ ಸಾಮಾನು ತಂದವರಲ್ಲ.ಅವರುಗಳು ಹೈಸ್ಕೂಲು ಮುಗಿಸುವಷ್ಟರಲ್ಲಿ ಒಬ್ಬೊಬ್ಬರನ್ನೇ ತನ್ನ ವ್ಯವಹಾರಗಳನ್ನು ನಡೆಸಲು ಬಳಸಿಕೊಳ್ಳತೊಡಗಿದ.ದೊಡ್ಡ ಮಗ ಶೋರೂಮಿನಲ್ಲಿ ಕೂತರೂ ದಿನಸಂಜೆ ಅಪ್ಪನಿಗೆ ಪೈಸೆಪೈಸೆಗೆ ಲೆಕ್ಕ ಒಪ್ಪಿಸಬೇಕಿತ್ತು.ಬಂದ ಗಿರಾಕಿಗಳಿಗೆ ಒಂದು ಲೋಟ ಕಾಫಿ ತರಿಸಿ ಕುಡಿಸಲು ಸ್ವಾತಂತ್ರವಿಲ್ಲದೆಯೆ ಅವನು ಶೋರೂಮಲ್ಲಿ ಕೂರಬೇಕಿತ್ತು ಎರಡನೆಯವನು ಫೈನಾನ್ಸ್ ಆಪೀಸಲ್ಲಿ ಕೂತು ಲೆಕ್ಕಾಚಾರ ನೋಡಿಕೊಳ್ಳಬೇಕಿತ್ತು. ಜೊತೆಗೆ ಸಾಲ ವಸೂಲಿ ಮಾಡಿ ಅಪ್ಪನಿಗೆ ತಂದು ಕೊಡುವುದಷ್ಟನ್ನೆ ಮಾಡಬೇಕಾಗಿತ್ತು. ಇನ್ನು ವಸೂಲಿಗೆ ಹೋಗಲು ಹಳೆಯಕಾಲದ ಸೈಕಲ್ಲನ್ನೇ ತುಳಿಯಬೇಕಿತ್ತೇ ಹೊರತು ಮೋಟಾರ್ ಬೈಕು ಇರಲಿಲ್ಲ. ತಮ್ಮದೇಆದ ಮೋಟಾರ್ ಬೈಕಿನ ಶೋರೂಮಿದ್ದರೂ ಮಕ್ಕಳು ಮಾತ್ರ ಸೈಕಲ್ಲು ತುಳಿದೆ ಕೆಲಸ ಮಾಡಬೇಕಾಗಿತ್ತು. ಯಾರಾದರೂಅವನ ಸರೀಕರು ರಾಮಣ್ಣನನ್ನು ಕೇಳಿದರೆ ಸಯಕಲ್ಲು ಅನ್ನೋದು ನಮಗೆ ಮನೆದೇವರಿದ್ದ ಹಾಗೆ. ಅದರ ಪುಣ್ಯದಿಂದಲೇ ನಾವಿವತ್ತು ಈ ಮಟ್ಟಿಗೆ ಬಂದಿರುವುದೆಂದು ತಿಪ್ಪೆ ಸಾರಿಸುತ್ತಿದ್ದ. ಮೂರನೆಯವನು ರೈಸುಮಿಲ್ಲಿಗೆ ಹೋಗುತ್ತಾ ಗದ್ದೆತೋಟಗಳ ನಿಗಾ ವಹಿಸಿ ಕೆಲಸ ಮಾಡಬೇಕಾಗಿತ್ತೇ ಹೊರತು ಐದೇ ಐದು ಪೈಸೆಯ ಮುಖ ಕೂಡಾ ನೋಡಿರಲಿಲ್ಲ. ಇನ್ನು ರಾಮಣ್ಣ ಸ್ವತ: ತಾನಾದರು ಸುಖ ಅನುಭವಿಸಿದನೆ ಅಂದರೆ ಅದೂ ಇಲ್ಲ. ಒಂದು ದಿನವೂ ಒಳ್ಳೆಯ ಊಟಮಾಡದೆ ಒಂದೊಳ್ಳೆಯ ಬಟ್ಟೆ ಹಾಕದೆ ಜಿಪುಣತನದಲ್ಲಿಯೇ ಬದುಕುತ್ತಿದ್ದ. ಇನ್ನು ಊರಲ್ಲಿನ ಯಾವುದೇ ಸಮಾರಂಭಗಳಿಗೂ ನಯಾಪೈಸೆ ಕೊಡುತ್ತಿರಲಿಲ್ಲ. ಹಾಗಾಗಿ ಆತನ ಮನೆಯ ಬಾಗಿಲಿಗೆ ಸಾಲ ಕೇಳುವವರ ಹೊರತಾಗಿ ಬೇರೆಯವರೂ ಬರುತ್ತಿರಲಿಲ್ಲ. ಹಬ್ಬ ಹರಿದಿನಗಳನ್ನು ಆಚರಿಸಿದರೆ ಖರ್ಚಾಗುತ್ತದೆ ಅಂತ ಸಾವಿತ್ರಮ್ಮನ ತವರು ಮನೆಗೆ ಹೆಂಡತಿ ಮಕ್ಕಳನ್ನು ಕಳಿಸಿ ತಾನೊಬ್ಬನೆ ಮನೆಯಲ್ಲಿ ಇದ್ದು ಬಿಡುತ್ತಿದ್ದ. ಅವರು ಹೋಗಲು ಮಾತ್ರ ರೈಲಿನ ಟಿಕೇಟಿಗೆ ದುಡ್ಡು ಕೊಡುತ್ತಿದ್ದರಿಂದ ವಾಪಾಸು ಬರುವಾಗ ಅವಳ ತವರು ಮನೆಯವರೆ ಅವರನ್ನು ಕರೆದುಕೊಂಡು ಬಂದು ಬಿಟ್ಟುಹೋಗಬೇಕಾಗಿತ್ತು.. ರಾಮಣ್ಣ ಜುಗ್ಗರಾಮಣ್ಣನಾಗಿ ಹೀಗೆ ಹೆಸರುಮಾಡಿರುವಾಗಲೆ ನಡೆದ ಘಟನೆಯೊಂದು ರಾಮಣ್ಣನ ಜಂಘಾಬಲವನ್ನೇ ಉಡುಗಿಸಿಬಿಟ್ಟಿತ್ತು. ರಾಮಣ್ಣನ ಮೂವರು ಗಂಡುಮಕ್ಕಳ ನಂತರ ಹಿಟ್ಟಿದ ಮಗಳು ಸುಮ ಪಿಯುಸಿ ಓದುತ್ತಿದ್ದಳು. ಒಂದು ದಿನ ಕಾಲೇಜಿಗೆ ಹೋದವಳು ಮನೆಗೆವಾಪಾಸು ಬರದೆಕಣ್ಮರೆಯಾಗಿ ಬಿಟ್ಟಿದ್ದಳು. ಹಾಗೆ ನೋಡಿದರೆ ರಾಮಣ್ಣನಿಗೆ ಮಗಳನ್ನು ಕಂಡರೆ ಬಹಳ ಪ್ರೀತಿ ಇತ್ತು. ಎಷ್ಟೇ ಜುಗ್ಗನಾದರೂ ಮನೆಯಲ್ಲಿ ಬೇರ್ಯಾರಿಗು ಕಾಣದಂತೆ ಆಕೆಗೆ ಗುಟ್ಟಾಗಿ ತುಂಬಾ ದುಡ್ಡು ಕೊಡುತ್ತಿದ್ದ. ಅವಳಿಗೆ ಏನು ಬೇಕಾದರು ತೆಗೆದುಕೊಳ್ಳಲು ನಡೆದುಕೊಳ್ಳಲು ಸ್ವಾತಂತ್ರ ಕೊಟ್ಟಿದ್ದ. ಆದರೆ ಅವಳ ಮೇಲೆ ತನಗಿರುವ ಪ್ರೀತಿಯನ್ನು ಅವನ್ಯಾವತ್ತು ಬಹಿರಂಗವಾಗಿ ತೋರಿಸಿಕೊಂಡವನಲ್ಲ. ಅಂತಹ ಮಗಳು ವಾರವಾದರು ಮನೆಗೆ ಬಾರದೆ ನಾಪತ್ತೆಯಾದಾಗ ರಾಮಣ್ಣ ಕುಸಿದು ಕುಳಿತು ಬಿಟ್ಟಿದ್ದ. ವಾರ ಕಳೆದರು ಅವನು ಮನೆಯಿಂದಾಚೆ ಬರಲೆ ಇಲ್ಲ. ಕೊನೆಗೆ ಗಂಡು ಮಕ್ಕಳೆ ಸ್ಟೇಷನ್ನಿಗೆ ಹೋಗಿಕಂಪ್ಲೇಟ್ ಕೊಟ್ಟು ಬಂದಿದ್ದರು. ಹತ್ತನೆ ದಿನದ ಹೊತ್ತಿಗೆ ಅವಳು ಅದೇ ಊರಿನ ಹುಡುಗನನ್ನು ಮದುವೆಯಾಗಿ ಬೆಂಗಳೂರಲ್ಲಿ ಮನೆ ಮಾಡಿಕೊಂಡು ಸಂಸಾರ ನಡೆಸುತ್ತಿರುವುದು ಗೊತ್ತಾಯಿತು. ಈ ವಿಷಯ ಕೇಳಿದ ಸಾವಿತ್ರಮ್ಮ ಹೆಂಚು ಹಾರಿಹೋಗುವಂತೆ ಕಿರುಚಾಡಿ ಅಳುವಾಗ ‘ಮುಚ್ಚೇ ಬಾಯಿ! ಅವಳಿಗಿಷ್ಟ ಬಂದವನನ್ನು ಮದುವೆ ಮಾಡಿಕೊಂಡು ಹೋಗಿದ್ದಾಳೆ. ಎಲ್ಲೋ ಸುಖವಾಗಿರಲಿ’ ಅಂತೇಳಿ ಎಲ್ಲರಲ್ಲು ಅಚ್ಚರಿ ಹುಟ್ಟಿಸಿದ್ದ. ಬೆಂಗಳೂರಿಗೆ ಹೋಗಿ ಅವಳನ್ನು ನೋಡಿಕೊಂಡು ಬರೋಣ ಅಂತ ಹೆಂಡತಿ ಮಕ್ಕಳು ಹೇಳಿದರೂ ರಾಮಣ್ಣ ಸುತಾರಂ ಒಪ್ಪದೇ ಹೋದ.ಅಷ್ಟರಲ್ಲಿ ಊರಲ್ಲಿ ಇನ್ನೊಂದಿಷ್ಟು ವಿವರಗಳು ಬಯಲಾಗ ತೊಡಗಿದ್ದವು ಸುಮಾ ಪ್ರೀತಿಸಿ ಮದುವೆಯಾದ ಹುಡುಗ ಬೇರೆ ಯಾರೂ ಆಗಿರದೆ ನಾಲ್ಕು ವರ್ಷಗಳ ಹಿಂದೆ ರಾಮಣ್ಣನ ಸಾಲ ತೀರಿಸಲಾಗದೆ ಮನೆ ಹರಾಜಿಗೆ ಬಂದಾಗ ಅವಮಾನ ಸಹಿಸಲಾಗದೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದ ಚಂದ್ರಪ್ಪನ ಮಗ ಎನ್ನುವ ವಿಷಯವೇಊರಲ್ಲಿ ಕುತೂಹಲದ ಕತೆಯಾಗಿ ಹರಡಿತ್ತು. ರಾಮಣ್ಣನ ಮೇಲಿನ ಸೇಡಿನಿಂದಲೇ ಆ ಹುಡುಗ ಸುಮಾಳನ್ನು ತಲೆ ಕೆಡಿಸಿ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆಂದು, ಸ್ವಲ್ಪ ದಿನವಾದ ಮೇಲೆ ಅವಳನ್ನು ಕೈಬಿಟ್ಟು ತವರು ಮನೆಗೆ ಓಡಿಸುತ್ತಾನೆಂದು ಜನ ಮಾತಾಡಿಕೊಳ್ಳತೊಡಗಿದ್ದರು. ಈ ವಿಷಯ ರಾಮಣ್ಣನ ಕಿವಿಗೂ ಬಿದ್ದಿತ್ತು. ಇದನ್ನು ಕೇಳಿದ ಸಾವಿತ್ರಮ್ಮನಂತು ಅಯ್ಯೋ ಈ ಗಂಡಸಿನ ಜುಗ್ಗತನದಿಂದ ನನ್ನ ಮಗಳ ಜೀವನ ಹಾಳಾಯಿತಲ್ಲ ಎಂದು ಎದೆ ಬಡಿದುಕೊಂಡು ಮನೆತುಂಬಾ ಉರುಳಾಡಿ ಅತ್ತಳು. ಗಂಡು ಮಕ್ಕಳು ಅಪ್ಪನನ್ನು ಮಾತಾಡಿಸುವ ಧೈರ್ಯ ಸಾಲದೆ ಕೂತುಬಿಟ್ಟಿದ್ದರು. ಅಂತೂ ಗಂಡ ಏನಾದರು ಅಂದುಕೊಂಡು ಸಾಯಲಿ ಎಂದುಕೊಂಡ ಸಾವಿತ್ರಮ್ಮ ಅವತ್ತು ಸಾಯಂಕಾಲ ಮೂವರು ಗಂಡುಮಕ್ಕಳನ್ನು ಕರೆದು ರೂಮಿನಲ್ಲಿ ಕೂತಿದ್ದ ಗಂಡನಿಗೆ ಕೇಳುವಂತೆ ನಾಳೆ ಬೆಳಗ್ಗಿನ ರೈಲಿಗೆ ಬೆಂಗಳೂರಿಗೆ ಹೋಗಿ ಮಗಳು ಅಳಿಯನನ್ನು ನೋಡಿಕೊಂಡು ಬರೋಣ ಬೆಳಿಗ್ಗೆ ಬೇಗ ಎದ್ದು ರೆಡಿಯಾಗಿ ಎಂದು ಹೇಳಿದಾಗ ನಡುಮನೆಯಲ್ಲಿ ಸಾಲಾಗಿ ಕೂತಿದ್ದ ಗಂಡು ಮಕ್ಕಳು ಮೌನವಾಗಿ ತಲೆಯಾಡಿಸಿದ್ದರು. ಈ ಮಾತುಗಳನ್ನು ಕೇಳಿಸಿಕೊಂಡರಾಮಣ್ಣ ಏನೂ ಮಾತಾಡಿರಲಿಲ್ಲ. ರಾತ್ರಿ ಮಾಮೂಲಿಯಂತೆಎಂಟುಗಂಟೆಗೆ ಊಟಕ್ಕೆ ಕರೆದಾಗ ಹೊರಗೆದ್ದು ಬಂದ ರಾಮಣ್ಣ ಹೆಂಡತಿ, ಮೂರೂಮಕ್ಕಳನ್ನು ಮುಂದೆ ಕೂರಿಸಿಕೊಂಡು ತನ್ನ ಕೈಲಿದ್ದ ಸಣ್ನ ಪೆಟ್ಟಿಗೆಯನ್ನು ಸಾವಿತ್ರಮ್ಮನ ಕೈಲಿ ಕೊಟ್ಟು ಇದರಲ್ಲಿ ಮನೆ, ಶೋರೂಂ, ಪೈನಾನ್ಸ್ , ಸೈಟು-ಮನೆಗಳ ಪತ್ರಗಳು,ಬ್ಯಾಂಕುಗಳ ಪಾಸ್ ಬುಕ್ಕುಗಳು ಸೇರಿದಂತೆ ಎಲ್ಲ ಪತ್ರಗಳೂ ಇವೆ. ನೀವು ಬೆಂಗಳೂರಿಗೆ ಹೋಗುವ ಮುಂಚೆ ಈ ಆಸ್ತಿಯನ್ನು ನಾಲ್ಕು ಭಾಗವನ್ನಾಗಿ ಮಾಡಿ ನಾಲ್ಕೂ ಮಕ್ಕಳ ಹೆಸರಿಗೆ ಮಾಡಿಸಿಬಿಡು. ನಮ್ಮ ಲಾಯರ್ ವೆಂಕಟೇಶಯ್ಯ ನಾಳೆ ಬೆಳಿಗ್ಗೆ ಒಂಭತ್ತು ಗಂಟೆಗೆ ಮನೆಗೆ ಬರ್ತಾರೆ. ನೀವೆಲ್ಲ ಕೂತು ಮಾತಾಡಿ ಯಾರ್ಯಾರಿಗೆ ಏನೇನು ಅಂತ ನಿದರ್ಾರ ಮಾಡಿಕೊಳ್ಳಿ ಎಂದು ಯಾರೀಗೂ ಪ್ರಶ್ನೆ ಕೇಳುವ ಅವಕಾಶ ಕೊಡದೆ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ. ಬೆಳಿಗ್ಗೆ ಒಂಭತ್ತು ಗಂಟೆಯಾದರು ಯಾಕೆ ಎದ್ದಿಲ್ಲವೆಂದು ಸಾವಿತ್ರಮ್ಮ ಗಂಡನ ರೂಮಿಗೆ ಹೋದರೆ ಅವನಲ್ಲಿರಲಿಲ್ಲ. ಎಂದಿನಂತೆ ಬೆಳಿಗ್ಗೆ ಎದ್ದು ಯಾವುದಾದರು ವಸೂಲಿಗೆ ಹೋಗಿರಬೇಕೆಂದು ಕೊಳ್ಳುವಷ್ಟರಲ್ಲಿ ಲಾಯರ್ ವೆಂಕಟೇಶಯ್ಯ ಬಂದರು. ರಾಮಣ್ಣನ ಅನುಪಸ್ಥಿತಿಯಲ್ಲಿಯೇ ಅವರುಗಳು ಆಸ್ತಿಯ ಪತ್ರಗಳನ್ನಿಟ್ಟುಕೊಂಡು ಮಾತಾಡತೊಡಗಿದರು. ಅವರೆಲ್ಲ ಒಂದು ತೀಮರ್ಾನಕ್ಕೆ ಬರುವಷ್ಟರಲ್ಲಿ ಮದ್ಯಾಹ್ನ ಎರಡು ಗಂಟೆಯಾಗಿತ್ತು. ಅಷ್ಟು ಹೊತ್ತಾದರು ರಾಮಣ್ಣ ಬರದೆ ಹೋದಾಗ ಎಲ್ಲರಿಗು ಆತಂಕ ಅನುಮಾನ ಶುರುವಾಗಿತ್ತು. ಮತ್ತೊಂದು

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಕನಸು ತಾರಾ ಸತ್ಯನಾರಾಯಣ್ ದಿನಾ ಐದುವರೆಗೆ ಏಳುತ್ತಿದ್ದ ಸುಶೀಲಮ್ಮ, ಇಂದು ಬೆಳಿಗ್ಗೆ ಕಣ್ಣುಬಿಟ್ಟಾಗ ಘಂಟೆ ಆರುವರೆ ಆಗಿತ್ತು.ಅಯ್ಯೋ!ಇವತ್ತುಎದ್ದಿದ್ದು ತಡವಾಯ್ತು ,ಇನ್ನಮಕ್ಕಳೆಲ್ಲ  ಆಫೀಸಿಗೆ ಹೊರಟುಬಿಡ್ತಾರೆ .ಬೇಗ ತಿಂಡಿ ಮಾಡ್ಬೇಕು ಅಂದುಕೊಂಡ ಅವರಿಗೆ ಒಂದುಕ್ಷಣ ಬೆಳಗಿನ ಜಾವದ ಕನಸು ನೆನಪಿಗೆ ಬಂದು ಮೈಯಲ್ಲಾ ಜುಂ ಅಂದು,ದೇವರೆ ಆ ಕನಸು ನನಸಾಗದಿರಲಿ ಅಂತ ದೇವರಿಗೆ ಕೈ ಮುಗಿದು ಸ್ನಾನ ಮಡಲು ಬಾತ್ ರೂಂಗೆಹೋದರು. ನಂತರ ಕಾಫಿಡಿಕಾಕ್ಷನ್ ಹಾಕಿ ಒಲೆಮೇಲೆ ಹಾಲು ಕಾಯಲು ಇಟ್ಟಾಗಲೂ..‌‌‌‌‌..ಸುಶೀಲಮ್ಮನಿಗೆ ಬೆಳಗಿನ ಜಾವ ಬಿದ್ದ ಕನಸಿನದ್ದೇ ಯೋಚನೆ. ಹಾಗೂ ಹೀಗೂ ಕಾಫಿ ಬೆರಸಿ,ಎಲ್ಲರಿಗು ಕೊಟ್ಟು, ತಾವು ಕೈಯಲ್ಲಿ ಕಾಫಿ ಹಿಡಿದು ಕೂತರು. ಆದರೆ ಮನಸು ಮತ್ತೆ ಕನಸಿನತ್ತ ವಾಲಿತ್ತು.  ಯಾಕೆ ಹಾಗೆ ಕನಸು ಬಿತ್ತು?ಈಗ್ಗೆ ಸುಮಾರು ತಿಂಗಳ ಹಿಂದೆ ಕನಸಿನಲಿ ಹೊಗೆ ನೋಡಿದ್ದೆ.ಬೆಳಗ್ಗೆ ಎದ್ದ ಕೂಡ್ಲೆ ನನ್ನ ಚಿಕ್ಕಮ್ಮ ಹೋದರೆಂಬ ಸುದ್ದಿ ಬಂತು.ಸಾಮಾನ್ಯವಾಗಿ ನನಗೆ ಬೆಳಗಿನ ಜಾವ ಸ್ಪಷ್ಟವಾಗಿ ಕಂಡ ಕನಸು ಕೆಲವೂಮ್ಮೆನಿಜವಾಗುತ್ತೆ‌. ಇವತ್ತು  ನಮ್ಮ ಮನೆಯಲ್ಲಿ ಏನೋ ಅನಾಹುತವಾಗುತ್ತೆ.ಸುಶೀಲಮ್ಮನಿಗೆ ಇನ್ನು ತಡೆಯದಾಯಿತು.ಕೈಯಲ್ಲಿದ್ದ ಕಾಫಿ ತಣ್ಣಗಾಗಿತ್ತು;ಅದನ್ನು ತಂದು ಹಾಗೇ ಇಟ್ಟ ಸುಶೀಲಮ್ಮ, ಸೀದಾ ಮಗನ ರೂಂಗೆ ಹೋದರು.ಮಗ ಸ್ನಾನಮಾಡಿ ಆಫೀಸಿಗೆ ಹೋಗಲು ರೆಡಿಯಾಗುತ್ತಿದ್ದ ಮಗನನ್ನು ನೋಡಿ ಸುಶೀಲಮ್ಮ,”ಮಧುಕರ, ಇವತ್ತು ನೀನು ಅಕ್ಷರ ಇಬ್ರು ಆಫೀಸಿಗೆ ಹೋಗ್ಬೇಡಿ”ಅಂತ ಹೇಳುತ್ತಿರಬೇಕಾದರೆ,ಕೆಳಗಡೆಯಿಂದ ಶ್ರೀಪಾದರಾಯರು “‌ಸುಶೀ, ನನ್ನ ವಾಕಿಂಗ್ ಸ್ಟಿಕ್ ಎಲ್ಲಿ? ಕಾಣುಸ್ತಿಲ್ಲ!”ಅಂದಾಗ, ಸುಶೀಲಮ್ಮ,”ಮಧುಕರ ನೀನು, ಅಕ್ಷರ ಕೆಳಗೆ ಬನ್ನಿ”ಅಂದು ತರಾತುರಿಯಲ್ಲಿ ಇಳಿದು ಹೋದ್ರು.ಬಾತ್ ರೂಂನಲ್ಲಿದ್ದ ಅಕ್ಷರ ಆಚೆಬಂದು, “ಏನಂತೆ !ನಿಮ್ಮ ಅಮ್ಮಂದು?””ಏನೂಂತ ಗೊತ್ತಿಲ್ಲ. ಏನೋ ಇಬ್ರು ಆಫೀಸಿಗೆ ಹೋಗ್ಬೇಡಿ ಅಂತ ಹೇಳ್ತಿದ್ರು. ಅಷ್ಟೊತ್ತಿಗೆ ಅಪ್ಪಾ ಕರದ್ರು.ಅಮ್ಮ ಹೋದ್ರು.”ನೋಡಿ ನಿಂಮ್ಮಮ್ಮ ಏನ್ ಬೇಕಾದ್ರೂ ಹೇಳ್ಲಿ, ಇವತ್ತು ನಾನು ಆಫೀ‌‌ಸಿಗೆ ಹೋಗ್ಲೆ ಬೇಕು.ಇವತ್ತು ನನ್ನ ಪ್ರಾಜೆಕ್ಟ್ಂದು ‘ಡೆಮೋ’ಇದೆ. ಫಾರಿನ್ನಿನ್ನೀಂದ ನಮ್ಮ ಆಫೀಸಿನವರು ಬರುತ್ತಿದ್ದಾರೆ. “ಸರಿಯಮ್ಮ,ನಡಿ ಈಗ ಕೆಳಗೆ ಹೋಗೋಣ” “ಒಂದ್ನಿಮಿಷ, ತಲೆಬಾಚಿಕೊಂಡು ಬರುತೀನಿ ಆಫೀಸಿಗೆ ಹೊರಡಕ್ಕೆ ಸರಿಹೋಗುತ್ತೆ.”ಕೆಳಗಡೆ ಬಂದ ಸುಶೀಲಮ್ಮ ರಾಯರಿಗೆ,” ನೋಡಿ ಇವತ್ತು ವಾಕಿಂಗೇ ಅಲ್ಲಾ….ನೀವು ಮನೆ ಬಿಟ್ಟು ಆಚೆ ಎಲ್ಲು ಹೋಗಬಾರದು.!”” ಏನು !ನಂಗೆ ಆರ್ಡರ್ ಮಾಡ್ತಾ ಇದಿಯಾ? ಏನಿವತ್ತು ವಿಶೇಷ? ಕೋಣಂದು ಮುಂಜಿನಾ?”ಅಣಕಿಸಿಕೊಂಡು ಮಾತಾಡಿದರು ರಾಯರು . “ನೋಡಿ, ನೀವುನಂಗೆ ಏನು ಬೇಕಾದರು ಅನ್ನಿ .ಆದ್ರೆ ನಂಗೆ, ಎಲ್ರು ನನ್ನ ಕಣ್ಣಮುಂದೆ ಚನ್ನಾಗಿರಬೇಕೂಂತ ಹೇಳ್ತಿರೋದು.ಇವತ್ತು ಯಾರೂ ಮನೆಬಿಟ್ಟು ಆಚೆ ಹೋಗ್ಬೇಡಿ” ಅಂತ ಹೇಳಿ ಇಷ್ಟುಹೊತ್ತು ಅಳುವನ್ನು ನುಂಗಿಕೊಂಡಿದ್ದ ಸುಶೀಲಮ್ಮನಿಗೆ; ಇನ್ನುತಡೆಯಕ್ಕೆ ಆಗದೆ ಬಿಕ್ಕೀ ಬಿಕ್ಕೀ ಅತ್ತರು.ಅದನ್ನು ನೋಡಿ ಶ್ರೀಪಾದರಾಯರು,ತಣ್ಣಗಾಗಿ ತಕ್ಷಣ ಹೆಂಡತಿ ಹತ್ತಿರ ಧಾವಿ‌‌ಸಿ ಬಂದರು.ಅಷ್ಟೊತ್ತಿಗೆ ಮಧುಕರ ಅವನಹೆಂಡತಿ ಅಕ್ಷರ ಬಂದ್ರು. ಅಮ್ಮ ಅಳುತ್ತಿದ್ದನ್ನ ನೋಡಿ,”ಅಮ್ಮ,ಯಾಕಮ್ಮ ಅಳ್ತಿದಿಯಾ? ಏನಾಯ್ತು?”ರಾಯರಿಗೂ ಏನೂ ತೋಚದೆ ಗಾಬರಿಯಾಗಿದ್ದರು. ಪಕ್ಕದ ರೂಂನಲ್ಲಿದ್ದ ಶ್ರೀಕರ, ಇವರುಗಳ ಮಾತು ಕೇಳಿ, ಅವನ ಹೆಂಡತಿ ವಾಣಿ, ತನ್ನ ಮಗುವನ್ನು ಎತ್ತಿಕೊಂಡು ಅಲ್ಲಿಗೆ ಬಂದರು.ರಾಯರು,”ಸುಶೀ,ಯಾಕೆ ಅಳ್ತಿದೀಯಾ? ಏನಾಯ್ತು ಹೇಳು”ಅಂದಾಗ, ಸುಶೀಲಮ್ಮ ಕಣ್ಣುವರಸಿಕೊಂಡು,”ಇವತ್ತು ಬೆಳಗಿನ ಜಾವ ,ನನ್ನ  ಕನ‌‌ಸಿನಲಿ ನಮ್ಮ ಮನೆ ಮುಂದೆ ಬೆಂಕಿ ಹಾಕಿದೆ.!ಬೆರಣಿಯಿಂದ ಹೊಗೆ ಬರುತ್ತಿದೆ. ಇದು ಅಶುಭ ಕನಸು. ಅಷ್ಪೇಅಲ್ಲಾ.‌…!ಬೆಳಗ್ಗೆ ಎದ್ದಾಗಲಿಂದ ಏನೋ ಒಂಥರಾ ತಳಮಳ ಸಂಕಟ. ಏನೋ ಆಗಬಾರದ್ದು ಆಗುತ್ತೆ; ಅಂತ ಅನ್ನಿ‌ಸಿದೆ. ಬೆಳಗಿನ ಜಾವ ಬಿದ್ದ ಕನ‌ಸು ದಿನದಲ್ಲೆ ಫಲಕೊಡುತ್ತೆ.ಅದಕ್ಕೆ ಹೇಳ್ತಾ ಇದೀನಿ,ಇವತ್ತು ಯಾರೂ ಮನೆಬಿಟ್ಟು ಆಚೆ ಹೋಗ್ಬೇಡಿ.”ಮಧುಕರ ಅಮ್ಮನ ಕನಸು ಕೇಳಿ “ಇಷ್ಟೆನಾ? ನೀನು ನಮ್ಮನ್ನು ಇಲ್ಲಿಗೆ ಕರೆದಿದ್ದು ! ಇಲ್ಲಿ ನೀನು ಅಳ್ತಾಇದ್ದದ್ದು ನೋಡಿ ನನಗೆ ಗಾಭರಿ ಆಗಿತ್ತು.ನೋಡಮ್ಮ, ಹಾಗೆ ಕೆಟ್ಟದಾಗುತ್ತೆ ಅನ್ನೋದಾದ್ರೆ ನಾವು ಮನೆನಲ್ಲಿದ್ರು ಆಗುತ್ತೆ. ಸುಮ್ನೆ ಇರು ಏನೂಆಗಲ್ಲ.”ಶ್ರೀಕರ ಇದ್ದವನು, “ಅಮ್ಮಾ. ಕನಸಿಗೋಸ್ಕರ ಎಲ್ರನ್ನು ಆಚೆ ಹೋಗ್ಬೇಡಿ ಅಂತ ಹೇಳೋದು ತಪ್ಪಮ್ಮ. ನಿನ್ನ ಕನಸು ನಿಜವಾಗಿದೆ ಒಪ್ಕೋತೀನಿ. ಆದ್ರೆ ಅದು ಕಾಕತಾಳೀಯ ಅಷ್ಟೆ. ನಿನ್ನ ಚಿಕ್ಕಮ್ಮನಿಗೆ ಕ್ಯಾನ್ಸರ್ ಆಗಿತ್ತು ಅವರು  ಉಳಿಯಲ್ಲ ಅಂತ ಎಲ್ರಿಗು ಗೊತ್ತಿತ್ತು.ನಿನ್ನ ಕನಸನಲಿ ಹೊಗೆ ನೋಡ್ದೆ.ಬೆಳಗ್ಗೆ ಎದ್ದು,ಏನೋಸುದ್ದಿ ಬರುತ್ತೆ ಅಂದೆ.ಚಿಕ್ಕಮ್ಮ ಸತ್ತಸುದ್ದಿ  ಬಂತು.ಆಮೇಲೆ ನಿನ್ನ ತಂಗಿ ಮಗಳು ಲತಾಗೆ ಕೆಲಸ ಸಿಕ್ಕಹಾಗೆ ಕನಸುಬಿತ್ತು ಅಂದೆ .ಮೂರು ನಾಲ್ಕು ದಿನಗಳಾದ್ಮೇಲೆ ಅವಳಿಗೆ ಕೆಲ‌‌ಸ ಸಿಕ್ತು. ಇದು ಅಷ್ಟೆ, ಅವಳಿಗೆ ಕೆಲಸ ಸಿಕ್ಕಿದರೆ ಸಾಕೂಂತ ನೀನೂ ಚಿಕ್ಕಮ್ಮ ಯಾವ ಯಾವ ರೀತಿಯಲ್ಲಿ ದೇವರನ್ನ ಕೇಳಿಕೊಂಡಿಲ್ಲಾ ಹೇಳಿ.ಇದಕ್ಕೆ ನಮ್ಮ ಸುಪ್ತ ಮನಸ್ಸಿನ ಹಾಗೂ ಜಾಗೃತ ಮನಸ್ಸಿನ ತಾಕಲಾಟಗಳು, ಆಸೆ ನಿರಾ‌ಸೆಗಳು,ಅನುಭವಗಳು ಕನಸುಗಳಲ್ಲಿ ನೇರವಾಗಿ ಇಲ್ಲಾ ಸಂಕೇತವಾಗಿ ಪ್ರತಿಬಿಂಬಿಸುತ್ತೆ.ಈ ಕನ‌ಸು ನಮ್ಮ ಮಾನಸಿಕ ಸಮತೋಲನ ಕಾಪಾಡಲು ನೆರ ವಾಗುತ್ತೆ. ಆದ್ರೆ ಕನಸುಗಳನ್ನ ಸುಖ ದುಃಖ ಎಂದು ಗುರುತಿಸೋದು ಅದಕ್ಕೆ ಪ್ರಾಮುಖ್ಯತೆ ಕೊಡೋದು ತಪ್ಪು ಅಮ್ಮ.”ನೋಡು ಶ್ರೀ, ನೀನು ಡಾಕ್ಟರ್ ಆಗಿ ನೀನು ಹೇಳಿದ್ದು ಸರಿ ಇರಬಹುದು .ಆದ್ರೆ ನಿವೆಲ್ಲ ನನ್ನ ಕನಸಿಗೆ ಪ್ರಾಮುಖ್ಯತೆ ಕೊಡದಿದ್ರೂ ಪರವಾಗಿಲ್ಲ.ಆದ್ರೆ ನನ್ನ ಮನಸ್ಸಿಗೆ ಪ್ರಾಮುಖ್ಯತೆ ಕೊಡಿ.ನೋಡುಶ್ರೀ, ನೀನಿವತ್ತು ಕ್ಲನಿಕ್ ಗೆ ಹೋಗೋಹಾಗಿಲ್ಲ.” “ಸುಶೀ,ನನ್ನ ಮಾತು ಕೇಳು “ಏನೋ ಹೇಳಲು ಹೊರಟ ರಾಯರ ಮಾತನ್ನುಕೇಳದೆ,ಸುಶೀಲಮ್ಮ “ನೋಡಿ ನೀವು ಯಾರಾದ್ರು ಮನೆಯಿಂದ ಆಚೆ ಹೋದ್ರೆ  ನನ್ಮೇಲಾಣೆ.”ಎಂದುಹೇಳಿ ಕಣ್ಣಲ್ಲಿ ನೀರು ತುಂಬಿಕೊಂಡರು ಸುಶೀಲಮ್ಮ. ಅಮ್ಮನ ಕಣ್ಣೀರ  ನೋಡಿ ಎಲ್ರು ಒಪ್ಪಿಕೊಂಡರು. ಅಕ್ಷರ ಮಾತ್ರ ಗಂಡನಿಗೆ ಗುಟ್ಟಾಗಿ, “ನನ್ನ ಪಾಡಿಗೆ ನಾನು ಆಫೀಸಿಗೆ ಹೋಕ್ತೀನಿ. ನೀವು ಅತ್ತೆಗೆ ಏನೂ ಹೇಳೋಕೆಹೋಗ್ಬೇಡಿ, ನಂದು ‘ಡೆಮೋ’ಮುಗಿಸಿಕೊಂಡು ಬೇಗ ಬರ್ತೀನಿ”ಅಂದಾಗ, ಮಧುಕರ ಮನಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡ. ಅಂತು ಎಲ್ರು ಮನೇನಲ್ಲಿ ಇರುವುದಾಗಿ ಹೇಳಿದಮೇಲೆ ಸುಶೀಲಮ್ಮ ತಿಂಡಿಮಾಡಲು ಒಳಗೆ ಹೋಗುತ್ತಿದ್ದವರಿಗೆ, ರಾಯರು,”ಸುಶೀ ನಿನ್ನ ಮಾತಿಗೆ. ನಾವೆಲ್ಲ ಒಪ್ಪಿದೀವಿ ಅದಕ್ಕೆ ಈಗ ಮತ್ತೆಕಾಫಿಬೇಕು.”ಅಂದಾಗ, ಮಕ್ಕಳು ಸೊಸೆಯರೂ ಧ್ವನಿಗೂಡಿಸಿದರು.ಸುಶೀಲಮ್ಮ, “ಆಯ್ತು ಈಗ ತಂದೆ” ಅನ್ನುತ್ತ ಒಳಕ್ಕೆ ಹೋದರು.            ಸುಶೀಲ,ಶ್ರೀಪಾದರಾಯರಿಗೆ, ಇಬ್ಬರು ಗಂಡು ಮಕ್ಕಳು. ಇಬ್ಬರಿಗೂ ಮದುವೆ ಆಗಿದೆ. ಮೊದಲನೆ ಮಗ ಶ್ರೀಕರ ಡಾಕ್ಟರ್.ಮದುವೆ ಆಗಿ ಮೂರು ವರ್ಷವಾಗಿದೆ. ಎಂಟು ತಿಂಗಳ ಹೆಣ್ಣು ಮಗುವಿದೆ. ಎರಡನೇ ಮಗ ಮಧುಕರ ಈಗಷ್ಟೇ ಮದುವೆ ಆಗಿದೆ ಗಂಡ ಹೆಂಡತಿಇಬ್ರು ಸಾಫ್ಟವೇರ್ ಇಂಜನಿಯರ್ ಗಳು ಶ್ರೀಪಾದರಾಯರು ಪ್ಯಾಕ್ಟರಿ ಒಂದರಲ್ಲಿ ಕೆಲ್ಸದಲ್ಲಿದ್ದರು. ಈಗ ರಿಟೈರ್ಡ ಆಗಿ ಮೂರುವರ್ಷ ವಾಗಿದೆ. ಸುಖೀಕುಟುಂಬ ಅಂತ ಹೇಳಬಹುದು.     ಎಲ್ಲರಿಗು ಮತ್ತೂಂದು ಬಾರಿ ಕಾಫಿಕೊಟ್ಟು ರಾಯರಿಗೆ ಅವರಿಗೆ ಇಷ್ಟವಾದ ಸಕ್ಕರೆ ಇಲ್ಲದ ಕಾಫಿ ಕೊಟ್ಟು, ಸುಶೀಲಮ್ಮ ಇವತ್ತು ತಿಂಡಿ ತಡವಾಯಿತೆಂದು, ತರಾತುರಿಯಲ್ಲಿ ಬೇಗ ಉಪ್ಪಟ್ಟು ಮಾಡಿದರು.ಮಧುಕರ,ಅಮ್ಮನಿಗೆ ಹೆಂಡತಿ ಆಫೀಸಿಗೆ ಹೋಗಿದ್ದು, ತಿಳಿಯಬಾರದೆಂದು”,ಅಮ್ಮಾ,ಅಕ್ಷರ ಕಂಪ್ಯೂಟರ್ ನಲ್ಲಿಕೆಲ್ಸಮಾಡ್ತಿದಾಳೆ ನಮ್ಮಿಬ್ಬರಿಗೆ ಹಾಕಿಕೊಡು ನಾನು ಮೇಲೆ ತಗೊಂಡುಹೋಗ್ತೀನಿ”ಅಂತಹೇಳಿ ತಗೊಂಡುಹೋದ. ರಾಯರಿಗೆ ಇಷ್ಟವಿಲ್ಲದ ಉಪ್ಪಿಟ್ಟು ರುಚಿಸಲಿಲ್ಲ. ಸುಶೀಲಮ್ಮ ಹೇಗೋ ತಿಂಡಿಕಥೆ ಮುಗಿಸಿ ಅಡುಗೆಗೆ ಶುರು ಹಚ್ಚಿಕೊಂಡರು. ಅಡುಗೆ ಮಾಡಿ,ಎಲ್ಲರನ್ನುಊಟಕ್ಕೆ ಕರೆದು ಬಂದರು.ಅಷ್ಟೊತ್ತಿಗೆ ಅಕ್ಷರ ಆಫೀಸಿನಿಂದ ಬಂದಿದ್ದು ಮಧುಕರನಿಗೆ ‌ಸಮಾದಾನವಾಗಿತ್ತು.ಎಲ್ಲರು ಊಟಕ್ಕೆ ಬಂದರು.ರಾಯರು‌ ಸಹ ತಮ್ಮ ರೂಂನಿಂದ ಎದ್ದುಬರುತ್ತಿರ ಬೇಕಾದರೆ ಹಾಗೇ ಕುಸಿದುಬಿದ್ದರು. ಮುಖ ಮೈಯಲ್ಲಾ ಬೆವರುತ್ತಿತ್ತು.ಕೈಕಾಲುಗಳು ನಡುಗುತ್ತಿತ್ತು.ಇದನ್ನು ನೋಡಿದ ಮದುಕರ ತಕ್ಷಣ  ಶ್ರೀಕರನನ್ನು ಕರೆದ. ಇಬ್ಬರು ‌ಸೇರಿ ರಾಯರನ್ನು ರೂಂನಲ್ಲಿ ಮಲಗಿಸಿದರು.ಇದನ್ನು ನೋಡಿದ ಸುಶೀಲಮ್ಮನ ಎದೆ ಬಡಿತ ಜೋರಾಯಿತು.ರಾಯರಿಗೆ ಏನೋ ಆಗೇ ಬಿಡುತ್ತದೆಂದು ತುಂಬಾ ಹೆದರಿದರು, ಇಬ್ಬರು ಸೊಸೆಯರು ಮಾವನವರಿಗೆ ಏನೂ ಆಗಲ್ಲವೆಂದು ಸಮಾಧಾನ ಮಾಡುತ್ತಿದ್ದರು.ಶ್ರೀಕರ ರಾಯರಿಗೆ  ಬಿ.ಪಿ,ಶುಗರ್ ಟೆಸ್ಟ್ ಮಾಡಿದಾಗ ಶುಗರ್ ಕಡಮೆ ಇರುವುದು ಗೊತ್ತಾಗಿ ತಕ್ಷಣ ಸಕ್ಕರೆ ನೀರು ಕೊಟ್ಟಾಗ, ರಾಯರು ಚೇತರಿಸಿಕೊಂಡರು.ಆರೋಗ್ಯವಾಗಿದ್ದ ರಾಯರಿಗೇಕೆ ಹೀಗಾಯ್ತು?ಅಂತ ಸುಶೀಲಮ್ಮ ಶ್ರೀಯನ್ನು ಆತಂಕದಿಂದ ವಿಚಾರಿಸಿದಾಗ,”ನೀನು ಆತಂಕಪಡೋಂತಹುದು ಅಪ್ಪನಿಗೆ ಏನೂ ಆಗಿಲ್ಲ.ಅವರಿಗೆ ಶುಗರ್ ಇಲ್ಲದಿದ್ರು ಶುಗರ್ ಲೆಸ್ ಕಾಫಿ ಕುಡಿದಿದ್ದಾರೆ. ಅವರಿಗೆ ಇಷ್ಟ ಅಂತ ನೀನು ಕೊಡ್ತಿಯಾ!ಇವತ್ತು ಸರಿಯಾಗಿ ತಿಂಡಿಬೇರೆ ತಿಂದಿಲ್ಲ.ಎಲ್ಲಾಸೇರಿ ದೇಹದಲ್ಲಿ ಶುಗರ್ ಕಡಮೆಆಗಿದೆ‌ ಈಗ ಬೇಗ ಊಟಕ್ಕೆ ಬಡಿಸುನಡಿ‌. ಎಲ್ಲಾಸರಿಹೋಗುತ್ತೆ.” ಅಂದಾಗ ಎಲ್ರುಬಂದು ಊಟ ಮುಗಿಸಿದ್ರು.ಸುಶೀಲಮ್ಮ ಮಾತ್ರ ರಾಯರಮೇಲೆ  ಒಂದುಕಣ್ಣು ಇಟ್ಟಿದ್ದರು. ಎಲ್ಲರದು ಊಟ ಆದಮೇಲೆ ತಾವು ನಾಮಕಾವಸ್ಥಗೆ ಊಟ ಮಾಡಿ, ಸೀದ ರಾಯರಿದ್ದಕಡೆ ಬಂದು ಕುಳಿತರು .”ಈಗ ಹೇಗಿದೆ ?”ನಂಗೇನು ಆಗಿಲ್ಲ ಸುಶೀ ಆರಾಮವಾಗಿದೀನಿ.””ಯಾಕೋ ನೀವು ಸುಸ್ಥಾಗಿದ್ದು ನೋಡಿ ನನಗೆ ತುಂಬ ಭಯ ಆಯ್ತು.”ಅಂತ ಸುಶೀಲಮ್ಮಕೆಮ್ಮ ತೊಡಗಿದರು.”ನೀನ್ಯಾಕೆ ಕೆಮ್ಮುತಿದಿಯಾ?”ಅಂದು, “ಸುಶೀ”ಅನ್ನುತ್ತ ಹತ್ತಿರ ಬಂದ್ರು ರಾಯರು ,ಸುಶೀಲಮ್ಮ ರಾಯರ ಕೈ ಹಿಡಿದುಕೊಂಡು ಹಾಗೇ ವಾಲಿದರು. ರಾಯರು ಗಾಬರಿಯಾಗಿ ಮಕ್ಕಳನ್ನ ಕೂಗಿದರು ಮಗ ಬಂದು ಟಿಷ್ಟ್ ಮಾಡುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.ಅವರಿಗೆ ಹಾರ್ಟ ಫೇಲ್ಯುರ್ ಆಗಿ ಹೋಗಿಬಿಟ್ಟರು. ಅವರ ಕನಸು ನಿಜವಾಗಿತ್ತು. ನಮ್ಮನ್ನೆಲ್ಲ ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತ್ತಿದ್ದ ಅಮ್ಮ,ನಾವು ಅವರ ಬಗ್ಗೆ ಕಾಳಜಿ ವಹಿಸಬೇಕಾಗಿತೆಂದು ಎಲ್ಲರ ಮನಸಿಗು ನಾಟಿತ್ತು.  *********************

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಗೂಡು ಕು.ಸ.ಮ. ಗೂಡು ಅದೊಂದು ಸಾದಾರಣವಾದ ಕೆಂಪು ಹೆಂಚಿನ ಮನೆ. ಇತ್ತ ದೊಡ್ಡದೂ ಅಲ್ಲ,ಅತ್ತ ಚಿಕ್ಕದೂ ಅಲ್ಲ,ಅಂತಹುದು. ಮನೆಯ ಮುಂದೆ ಒಂದಷ್ಟು ದಾಸವಾಳ,ಕಣಗಿಲೆ.ನೀಲಿ ಗೊರಟೆ ಹೂವಿನ ಗಿಡಗಳು. ಪುಟ್ಟ ಕಾಂಪೋಂಡ್,ಹಿತ್ತಲಲಿ ಬಟ್ಟೆ ತೊಳೆಯುವ ಕಲ್ಲು,ಒಂದು ನುಗ್ಗೆ ಮರ,ಬಚ್ಚಲು ನೀರು ಹೋಗುವ ಚರಂಡಿಗೆ ಹೊಂದಿಕೊಂಡಂತೆ ಹರಡಿಕೊಂಡ ಬಸಳೆ ಬಳ್ಳಿ. ಆ ಮನೆಯಲ್ಲಿ ಇದ್ದವರು ಇಬ್ಬರೆ,ಅವನು-ಅವಳು. ಅವರ ಮದುವೆಯಾಗಿ ಎರಡು ವರ್ಷವಾಗಿತ್ತು.ಪ್ರಶಾಂತವಾಗಿ ಹರಿಯುವ ನದಿಯಂತೆ ಬದುಕು ಸಾಗುತ್ತಿತ್ತು.ಅವನು ಬೆಳಿಗ್ಗೆ ಬೇಗಗ ಏಳುತ್ತಿದ್ದ.ತಣ್ಣೀರ ಸ್ನಾನ ಮಾಡಿ ಅಂಗಳದ ಗಿಡಗಳಿಂದ ಹೂ ಬಿಡಿಸಿ ತಂದು ದೇವರ ಗೂಡಿನ ಪಟಗಳಿಗಿಟ್ಟು, ಗಟ್ಟಿಯಾಗಿ ಮಂತ್ರ ಹೇಳುತ್ತ ಪೂಜೆ ಮಾಡುತ್ತಿದ್ದ. ಅಷ್ಟರಲ್ಲವಳು ಬಚ್ಚಲು ಹಂಡೆಗೆ ಉರಿಹಾಕಿ,ಕಾಫಿಗಿಟ್ಟು ಕೆಲಸ ಶುರು ಮಾಡುತ್ತಿದ್ದಳು. ತಿಂಡಿ ತಿಂದವನು ಕ್ಯಾರಿಯರ್ ಹಿಡಿದು ಆಫೀಸಿಗೆ ಹೊರಟರೆ ಅವಳಿಗೆ ನಿರಾಳ. ಕೆಲಸವೆಲ್ಲ ಮುಗಿಸಿ, ಹಿತ್ತಲಿನ ನುಗ್ಗೆಮರದ ಕೆಳಗೆ ಕುಳಿತು ಕತೆ ಪುಸ್ತಕದೊಳಗೊ ಅಥವಾ ತವರಿನ ನೆನಪೊಳಗೊ ಮುಳುಗುತ್ತಿದ್ದಳು ಆ ನೆನಪುಗಳೊಳಗೆ ಸುಖವಿತ್ತು.ತವರು ಮನೆಯ ಹಿತ್ತಲಿಗೆ ಆತುಕೊಂಡಂತೆ ಹರಿಯುತ್ತಿದ್ದ ಭದ್ರಾ ನದಿ,ವಿಶಾಲವಾದ ಮನೆಯಂಗಳದಲ್ಲಿನ ಮಾವಿನ ಮರ,ಸಂಪಿಗೆಮರ,ಸೀಬೆಮರ, ತೂಗುಹಲಗೆ ಉಯ್ಯಾಲೆ,ಕಾಡು ಗಿಡಗಳಪೊದೆ,ಮಲ್ಲಿಗೆ ಹಂದರ,ಎಲ್ಲ ಅಂದರೆ ಎಲ್ಲ ನೆನಪಾಗಿ ಕಾಡುತ್ತಿದ್ದವು! ಅವಳಿಗೆ ಮಾತು ಬೇಕಿತ್ತು. ಯಾವಾಗಲೂ ಗಲಗಲ ಅನ್ನುವ ಜನರು ಸುತ್ತ ಇರಬೇಕು ಅನಿಸುತ್ತಿತ್ತು. ಸೃಷ್ಠಿಯ ಪ್ರತಿ ವಸ್ತುವಿನಲ್ಲೂ ಅವಳಿಗೆ ಅಧಮ್ಯ ಕುತೂಹಲ. ಅವಳು ಎಲ್ಲವನ್ನೂ,ಎಲ್ಲರನ್ನೂ ಪ್ರೀತಿಸುತ್ತಿದ್ದಳು.ಅವನು ಆಫೀಸಿಗೆ ಹೋದ ತಕ್ಷಣ ಮನೆಯ ೆಲ್ಲ ಕಿಟಕಿ-ಬಾಗಿಲುಗಳನ್ನು ತೆರೆದು ಒಳಬರುತ್ತಿದ್ದ ಸೂರ್ಯನ ಬೆಳಕಿನಲ್ಲಿ ಮೀಯುತ್ತ,ಹಿತವಾದ ಗಾಳಿಗೆ ಮೈಯೊಡ್ಡಿ ಕನಸು ಕಾಣುತ್ತಿದ್ದಳು.. ಆದರವನು ಇದಕ್ಕೆ ತದ್ವಿರುದ್ದ. ಮೊದಲಿನಿಂದಲೂ ಅವನು ಮಿತಬಾಷಿ. ಆಡಿದರೂ ಅಗತ್ಯವಿದ್ದಷ್ಟು. ತನ್ನ ಆಫೀಸು,ಬೆಳಗಿನ ಪೂಜೆ,ಸಂಜೆಯ ಸಂಧ್ಯಾವಂದನೆಗಳಲ್ಲಿ ಕಳೆದು ಹೋಗುತ್ತಿದ್ದ. ರಜಾದಿನಗಳಲ್ಲಿ ಮನೆಯ ಎಲ್ಲ ಕಿಟಕಿ ಬಾಗಿಲುಗಳನ್ನು ಹಾಕಿಕೊಂಡು ಒಳಗಿನ ಧಗೆಯಲ್ಲಿ ಬೇಯುತ್ತಲೇ ನಿರಾಳವಾಗಿ ರಾಮಕೃಷ್ಣಪರಮಹಂಸರ ಪುಸ್ತಕಗಳನ್ನೊ ಭಗವದ್ಗೀತೆಯ ಸಾರವನ್ನೋ ಓದುತ್ತ ಕೂರುತ್ತಿದ್ದ. ಅವರಿಬ್ಬರೂ ಎರಡು ದೃವಗಳಾಗಿದ್ದರು. ಅವಳಿಗೆ ಅವನ ಬಗ್ಗೆ ವಿಚಿತ್ರ ಕುತೂಹಲ: ಅವನ ದೇವರ ಪೂಜೆ,ಆ ತನ್ಮಯತೆ,ಅಂತರ್ಮುಖತನ,ಪಾಪ-ಪುಣ್ಯಗಳ ಸ್ವರ್ಗ ನರಕಗಳ ಬಗೆಗಿನ ಅಪಾರ ನಂಬಿಕೆಗಳನ್ನು ಕಂಡು ಆಶ್ಚರ್ಯ! ಅವನಿಗೆ ಸಣ್ಣಪುಟ್ಟ ವಿಷಯಗಳಲ್ಲೂ ಅವಳು ಪಡೆಯುತ್ತಿದ್ದ ಸುಖದ ಬಗ್ಗೆ ತಿರಸ್ಕಾರ.ಅವಳ ಅತಿಯೆನಿಸುವಷ್ಟು ಪ್ರೀತಿ,ಜೋರಾಗಿ ಮಾತನಾಡಿದರೆ ಸಾಕು, ಕಣ್ಣು ತುಂಬಿ ಬರುವ ಸೂಕ್ಷ್ಮತೆ ಕಂಡು ಬೇಸರ. ಇಷ್ಟಿದ್ದರೂ ಅವರ ನಡುವೆ ಮಾತುಗಳಿಗೆ ನಿಲುಕದ ಪ್ರೀತಿಯಿತ್ತು. ಬದುಕು ಹೀಗೇ ಸಾಗುತ್ತಿರುವಾಗ, ಅದೊಂದು ದಿನನ ಆ ಗುಬ್ಬಚ್ಚಿಗಳು ಅವಳನ್ನು ಸೆಳೆದವು.ಅಡುಗೆ ಮನೆಯ ಪಕ್ಕದಲ್ಲಿದ್ದ ಸ್ಟೋರ್ ರೂಮಿನ ಸೂರಿನಲ್ಲಿ ಅವು ಗೂಡು ಕಟ್ಟಲು ಪ್ರಾರಂಬಿಸಿದ್ದವು. ಮೊದಮೊದಲು ಅವಳು ಅವುಗಳನ್ನು ಗಮನಿಸಿರಲಿಲ್ಲ. ಬರುಬರುತ್ತ ಅವುಗಳ ಕಿಚಕಿಚ ಶಬ್ದ ಜಾಸ್ತಿಯಾದಂತೆ ಅವಳ ಕಣ್ಣಿಗವು ಬಿದ್ದವು. ಬಂಗಾರದ ಬಣ್ಣದ ಒಣ ಹುಲ್ಲುಕಡ್ಡಿಗಳನ್ನು ಬಾಯಲ್ಲಿ ಕಚ್ಚಿತಂದು ಸೂರಿನಲ್ಲಿ ಸಿಗಿಸುತ್ತಿದ್ದವು..ಅವು ಕಿಟಕಿಯಲ್ಲಿ ಕೂತು ಅರ್ಥವಾಗದ ಬಾಷೆಯಲ್ಲಿ ಮಾತಾಡುವುದು,ಪುರ್ರನೆ ಹಾರಿಹೋಗಿ ಹುಲ್ಲು ತರುವುದು,ಕೊಕ್ಕಿನಿಂದ ೊಂದೊಂದೇ ಹುಲ್ಲು ಸೇರಿಸಿ ಕಲಾತ್ಮಕವಾಗಿ ಗೂಡು ಕಟ್ಟುವುದು,ಇವನ್ನೆಲ್ಲ ನೋಡುವುದು ಅವಳಿಗೆ ಹೊಸ ರೀತಿಯ ಅನುಭವ ಅನಿಸಿತು.ಆ ಪುಟ್ಟ ಹಕ್ಕಿಗಳ ಬದುಕು ಅದ್ಬುತವಾಗಿ ತೋರತೊಡಗಿತು.ಅವುಗಳ ನಿತ್ಯದ ಚಟುವಟಿಕೆಗಳನ್ನು ನೋಡುವುದರಲ್ಲಿ ಅವಳೆಷ್ಟು ತನ್ಮಯಳಾಗಿ ಬಿಟ್ಟಳೆಂದರೆ,ಅವನು ಆಫೀಸಿಗೆ ಹೋದ ತಕ್ಷಣ ಸ್ಟೋರಿನ ಬಾಗಿಲ ಬಳಿ ಬಂದು ಕೂರುತ್ತಿದ್ದಳು. ಪ್ರತಿನಿತ್ಯ ಅಕ್ಕಿಯ ಕಾಳುಗಳನ್ನುಅವುಗಳಿಗೋಸ್ಕರ ತಂದು ಹಾಕುವುದು,ಅದನ್ನು ತಿನ್ನುವಂತೆ ಹುಶ್ಹುಶ್ ಎಂದು ಸಂಕೇತದಲ್ಲಿ ಮಾತಾಡಿಸುವುದು ಮಾಮೂಲಿಯಾಗುತ್ತಾ ಹೋಯಿತು. ದಿನಕಳೆದಂತೆ ಗುಬ್ಬಚ್ಚಿಗಳ ಗೂಡು ಪೂರ್ಣವಾಯಿತು. ಸಂಜೆ ಅವು ಬಂದಾಗ ಸ್ಟೋರಿನ ಬಾಗಿಲು ಹಾಕಿದ್ದರೆ ಕೊಕ್ಕಿನಿಂದ ಕುಕ್ಕಿ ಶಬ್ದ ಮಾಡುತ್ತಿದ್ದವು. ಆಗವಳು ಓಡಿಹೋಗಿ ಬಾಗಿಲು ತೆಗೆದ ತಕ್ಷಣ ಗೂಡು ಸೇರುತ್ತಿದ್ದವು. ಬೆಳಿಗ್ಗೆ ಎದ್ದು ಕಿಟಕಿ ತೆಗೆಯುವುದು ಒಂದು ಕ್ಷಣ ತಡವಾದರೆ ಸಾಕು ಕಿಚಕಿಚ ೆಂದು ಹುಯಿಲೆಬ್ಬಿಸುತ್ತಿದ್ದವು. ಹೀಗವಳು ಗುಬ್ಬಚ್ಚಿಗಳ ಪ್ರಪಂಚದಲ್ಲಿ ಬೆರೆಯುತ್ತ ಹೋದಳು. ಹೀಗಿರುವಾಗ ಻ವಳು ಎರಡು ತಿಂಗಳು ಮುಟ್ಟಾಗಲಿಲ್ಲ. ಆಸ್ಪತ್ರೆಯಲ್ಲಿ ಲೇಡಿ ಡಾಕ್ಕರ್ ನಗುತ್ತಾ ನೀವು ತಂದೆಯಾಗಲಿದ್ದೀರಿ ಅಂದಾಗ ಅವನ ಮುಖ ಅರಳಿತ್ತು. ಅವು ಅಷ್ಟೊಂದು ಸಂತೋಷ ಪಟ್ಟಿದ್ದನ್ನು ಈ ಎರಡು ವರ್ಷಗಳಲ್ಲಿ ಅವಳು ಒಮ್ಮೆಯೂ ನೋಡಿರಲಿಲ್ಲ..ಆಗಿನಿಂದ ಅವನು ಬದಲಾಗತೊಡಗಿದ. ಅವಳೊಡನೆ ಹೆಚ್ಚು ಮಾತಾಡತೊಡಗಿದ. ಕಣ್ಣಲ್ಲಿ ಕಣ್ಣಿಟ್ಟು ಅವಳ ಆರೈಕೆ ಮಾಡತೊಡಗಿದ. ಅವಳ ಆರೋಗ್ಯಕಾಗಿ ಕಂಡಕಂಡ ದೇವರುಗಳಿಗೆ ಅರ್ಚನೆ ಮಾಡಿಸತೊಡಗಿದ. ಅವನ ಪ್ರೀತಿಯ ನಡವಳಿಕೆ,ಗುಬ್ಬಚ್ಚಿಗಳ ಗೂಡು ಅವಳ ಬದುಕನ್ನು ಸುಂದರಗೊಳಿಸತೊಡಗಿದವು. ಒಂದು ಬಾನುವಾರ ಮದ್ಯಾಹ್ನ ಅವನು ಮನೆಯನ್ನು ಸ್ವಚ್ಚಗೊಳಿಸುತ್ತಿದ್ದ. ಒಂದು ಉದ್ದನೆಯ ಬಿದಿರು ಕಡ್ಡಿಗೆ ಪೊರಕೆ ಕಟ್ಟಿ ಸೂರಿನ ಜೇಡರ ಬಲೆಯನ್ನು ತೆಗೆಯಹತ್ತಿದ. ಸ್ಟೋರಿಗೆ ಬಂದಾಗ ಆ ಗುಬ್ಬಚ್ಚಿ ಗೂಡು ಅವನ ಕಣ್ಣಿಗೆ ಬಿತ್ತು. ಮನೆಯೊಳಗಿದಗದ ಗೂಡು ಅವನಿಗೆ ಅಸಹ್ಯವಾಗಿಯೂ ಅಪಶಕುನವಾಗಿಯೂ ಕಂಡಿತು. ಅದನ್ನು ತೆಗೆಯಲು ಪ್ರಯತ್ನಿಸಿದಾಗ ಅವಳು ತಡೆದಳು. ಆ ಗೂಡನ್ನು ಮುಟ್ಟದಂತೆ ಅವನನ್ನು ವಿನಂತಿಸಿದಳು. ಅದೇಕೋ ಅವನು ಅವಳ ಮಾತಿಗೆ ಕಿವಿಗೊಡದೆ ಗೂಡನ್ನು ಕೋಲಿನಿಂದ ತಳ್ಳಿದ. ತಳ್ಳಿದ ರಭಸಕ್ಕೆ ಗೂಡು ನೆಲಕ್ಕೆ ಬಿತ್ತು.ಅದರೊಳಗಿದ್ದ ಬಿಳಿಯ ಬಣ್ಣದ ಪುಟ್ಟಮೊಟ್ಟೆಗಳು ಒಡೆದು ಹೋದದ್ದನ್ನು ನೋಡಿದ ಻ವಳು ಬಿಕ್ಕಿಬಿಕ್ಕಿ ಅಳ ತೊಡಗಿದಳು. ಅವನ ಯಾವ ಸಮಾಧಾನವೂ ಅವಳನ್ನು ಸಣತೈಸಲಾಗಲಿಲ್ಲ.಻ವನು ಕಳಚಿ ಬಿದ್ದ ಗೂಡು ,ಒಡೆದ ಮೊಟ್ಟೆಗಳನ್ನು ಹೊರಗೆಸೆದು ಬಂದರೂ ಅವಳ ಻ಳು ನಿಂತಿರಲಿಲ್ಲ. ಬೇಸಿಗೆಯ ಧಗೆಗೆ,ಅತ್ತ ಸುಸ್ತಿಗೆ ತಲೆ ಸುತ್ತಿದಂತಾಗಿ ಕೆಳಗೆ ಬಿದ್ದಳು. ಅವಳನ್ನು ಎತ್ತಿಕೊಂಡುಹೋಗಿ ಹಾಸಿಗೆಯಲ್ಲಿ ಮಲಗಿಸಿ,ಮುಖಕ್ಕೆ ನೀರು ಚುಮುಕಿಸಿದ.ಪ್ರಜ್ಞೆ ಮರಳಿದ ಅವಳ ಕಣ್ಣುಗಳಲ್ಲಿದ್ದ ಬಾವನೆಗಳನ್ನು ಅವನಿಂದ ೋದಲಾಗಲಿಲ್ಲ. ಅವಳ ಸೂಕ್ಷ್ಮ ಮನಸ್ಸಿಗೆ ಒಡೆದ ಮೊಟ್ಟೆಗಳ ಚಿತ್ರವನ್ನು ಮರೆಯಲಾಗಲಿಲ್ಲ. ಒಂದು,ಎರಡು,ಮೂರು..ಹೀಗೆ ದಿನಗಳು ಉರುಳುತ್ತ ಹೋದವು.ಅವಳಿಗ ಮಾತು ಕಡಿಮೆ ಮಾಡಿದ್ದಳು. ಅವನ ಪ್ರಶ್ನೆಗಳಿಗೆ ಮೌನವೊಂದೇ ಉತ್ತರವಾಗ ತೊಡಗಿತ್ತು. ಅವಳ ಶೂನ್ಯದತ್ತ ನೆಟ್ಟದೃಷ್ಠಿ, ಅನ್ಯಮನಸ್ಕತೆಯಿಂದಾಗಿ ಅವನ ಻ಸಹನೆ ಹೆಚ್ಚುತ್ತ ಹೋಯಿತು. ಮನಸ್ಸು ಸ್ಥಿಮಿತದಲಿಟ್ಟುಕೊಳ್ಳಲು ಮತ್ತಷ್ಟು ಪೂಜೆ-ಪುನಸ್ಕಾರಗಳಲ್ಲಿ ಹೊತ್ತು ಕಳೆಯ ತೊಡಗಿದ. ಻ವನ ಮೌನಕ್ಕೆ ಅವಳಮೌನವೂ ಸೇರಿ ಆ ಮನೆಯಲ್ಲಿ ಶಬ್ದಗಳು ಕಳೆದುಹೋದವು. ಹೀಗಾಗಲೆ ಅವಳಿಗೆ ನಾಲ್ಕು ತಿಂಗಳು ತುಂಬುತ್ತ ಬಂದಿತ್ತು.ಒಂದು ಸಂಜೆ ಅವನು ಆಫೀಸಿನಿಂದ ಬಂದಾಗವಳು ಸ್ಟೋರ್ ರೂಮಿನ ಬಾಗಿಲಲ್ಲಿ ಬಿದ್ದಿದ್ದಳು. ಅವಳನ್ನು ಎತ್ತಕೊಂಡು ಆಸ್ಪತ್ರೆಗೆ ಓಡಿ ಹೋದ. ಡಾಕ್ಟರ್ ಅವಳಗೆ ಗರ್ಬಪಾತವಾಗಿದೆ, ತಕ್ಷಣಕ್ಕೆ ಮತ್ತೆ ಗರ್ಬಿಣಿಯಾದರೆ ಅಪಾಯವಿದೆ ಹುಶಾರಾಗಿ ನೋಡಿಕೊಳ್ಳಿ ಅಂದರು. ಒಂದಷ್ಟು ದಿನಗಳ ಾಸ್ಪತ್ರೆಯ ವಾಸದ ನಂತರ ಮತ್ತೆ ಮನೆಗೆಬಂದವಳೆಷ್ಟು ಕಂಗೆಟ್ಟಿದ್ದಳೆಂದರೆ ಯಾವಾಗಲೂ ಸೂರು ನಿಟ್ಟಿಸುತ್ತ ಮಲಗಿರುತ್ತಿದ್ದಳು. ಕಣ್ಣು ಬಿಟ್ಟರೆ ಸಾಕು ಅವನು ಗೂಡು ಕಿತ್ತೆಸೆದಂತೆ,ಸಂಜೆ ಗೂಡು ಕಾಣದೆ ತಾರಾಡುತ್ತಿದ್ದ ಗುಬ್ಬಚ್ಚಿಗಳ ದೃಶ್ಯವೇ ಕಾಣುತ್ತಿತ್ತು. ಹಗಲು-ರಾತ್ರಿ ಬಾಗಿಲುಕಿಟಕಿಗಳನ್ನು ಹಾಕಿಕೊಂಡೇ ಮಲಗಿರುತ್ತಿದ್ದಳು. ರಾತ್ರ ಻ವನು ದೀಪ ಹಾಕಿದರೆ ಅವಳದನ್ನು ಆರಿಸಿ ಮಾತಾಡದೆ ಮಲಗುತ್ತಿದ್ದಳು. ಅವಳೀಗ ಕತ್ತಲನ್ನು ಆರಿಸಿಕೊಂಡಿದ್ದಳು. ಅವಳ ಪರಿಸ್ಥಿತಿಯನ್ನು ಕಂಡು ಅವನು ದಿಗ್ಬ್ರ್ರಮೆಗೊಳಗಾಗಿದ್ದ. ಻ವಳ ೀ ಸ್ಥಿತಿಗೆ ತಾನೇಕಾರಣವೇ ಎಂಬ ಪ್ರಶ್ನೆ ಅವನನ್ನ ಕಾಡತೊಡಗಿತು. ಪಾಪಪುಣ್ಯಗಳ ಬೀತಿಯಲ್ಲೇ ಬೆಳೆದವನಿಗೆ ತಾನು ಒಡೆದ ಮೊಟ್ಟೆಗಳಿಗೂ,ಅವಳ ಗರ್ಬಪಾತಕ್ಕೂ ಸಂಬಂದವಿರಬಹುದೆನಿಸಿ ಪಾಪಪ್ರಜ್ಞೆಯಲಿ ನರಳತೊಡಗಿದ. ಮಾತಾಡಲು ಪ್ರಾರಂಬಿಸಿದವನು ಮತ್ತೆ ಮೌನಿಯಾದ. ಾ ಪುಟ್ಟ ಮನೆಯೊಳಗೆ ಮಾತುಗಳಿಲ್ಲವಾಗಿ ವಿಷಾದದ ನೆರಳು ಆವರಿಸ ತೊಡಗಿತು. ಅವನೀಗ ಮನೆಯ ಎಲ್ಲ ಕೆಲಸಗಳನ್ನೂ ತಾನೇ ಮಾಡುತ್ತಾನೆ. ಬೆಳಿಗ್ಗೆ ಅವಳಿಗೆ ತಿಂಡಿ ಕೊಟ್ಟು ಆಫೀಸಿಗೆ ಹೋಗುತ್ತಾನೆ. ಹೋಗುವ ಮುಂಚೆ ಸ್ಟೋರಿನ ಕಿಟಕಿ ಬಾಗಿಲುಗಳನ್ನು ತೆರೆದಿಡುತ್ತಾನೆ. ಸಂಜೆ ತಿರುಗಿ ಬಂದವನು ಅವಳಿಗೆ ತಿನ್ನಲು ಏನಾದರು ಕೊಟ್ಟು ಸ್ಟೋರ್ ರೂಮಿಗೆ ಹೋಗುತ್ತಾನೆ,ತಾನೇ ಕಿತ್ತು ಹಾಕಿದ ಗೂಡಿನ ವಾರಸುದಾರ ಗುಬ್ಬಚ್ಚಿಗಳ ಹಾದಿ ಕಾಯುತ್ತಾನೆ. ಪ್ರತಿನಿತ್ಯವೂ ಅವನು ಹಾಕಿಟ್ಟ ಅಕ್ಕಿ ಕಾಳುಗಳು ಹಾಗೆ ಬಿದ್ದಿವೆ. ಓ! ದೇಚರೆ ,ಮತ್ತೆ ಆಗುಬ್ಬಚ್ಚಿಗಳು ಬರಲಿ, ಈ ಮನೆಯೊಳಗೆ ಗೂಡು ಕಟ್ಟಲಿ ಎಂದು ಪ್ರಾರ್ಥಿಸುತ್ತಾನೆ. ಆದರೆ, ತೆರೆದ ಕಿಟಕಿಗಳು ತೆರೆದೇ ಇವೆ! *******************************************************

ಕಥಾಯಾನ Read Post »

ಕಥಾಗುಚ್ಛ

ವ್ಯಾಲಂಟೈನ್ಸ್ ಡೇ ವಿಶೇಷ

ವಿಶ್ ಯೂ ಹ್ಯಾಪಿ ವ್ಯಾಲೆಂಟೈನ್ಸ್ ಡೇ. ಪ್ರಮಿಳಾ ಎಸ್.ಪಿ. ಈಗ್ಗೆ ಹನ್ನೆರೆಡು ವರ್ಷಗಳ ಕೆಳಗೆ ಕಾಲೇಜಿನ ಗೆಳತಿಯರೆಲ್ಲ ಗುಂಪು ಸೇರಿ ಒಂದು ತೀರ್ಮಾನ ಕ್ಕೆ ಬಂದರು.ಯಾರಿಗೆಲ್ಲಾ ಪ್ರೇಮಿ ಇದ್ದಾನೋ ಅವರು ಹಸಿರು ಬಟ್ಟೆ ತೊಡುವುದು…ಯಾರಿಗೆ ಪ್ರಿಯತಮ ಇಲ್ಲವೋ ಅವರು ಕೆಂಪು ಬಟ್ಟೆ ಧರಿಸಿ ಕಾಲೇಜಿಗೆ ಬರುವುದು ಎಂದು.ನಾಳೆ ಪ್ರೇಮಿಗಳ ದಿನ ಹೀಗೆ ಆಚರಿಸೋಣ ಎಂದರು.ಹಳ್ಳಿ ಹುಡುಗಿ ನಾನು.ಅದರ ಕಲ್ಪನೆ ಇಲ್ಲದ ನಾನು ಕೆಂಪು ಬಟ್ಟೆ ಧರಿಸಿ ಕಾಲೇಜಿಗೆ ಬಂದೆ.ಇಡೀ ದಿನ ಹಾಡು ಆಟ ಪಾಠ ಮುಗಿಸಿ ಹೊರ ಬರುವ ವೇಳೆಗೆ ಎದುರಿಗಿದ್ದ ಕಾರ್ ಶೋ ರೂಮಿನ ಯುವಕ ಕೈ ನೀಡಿ ಕೆಂಪು ಗುಲಾಬಿ ಚಾಚಿದ. ನಗುತ್ತಾ ತೆಗೆದುಕೊಂಡೆ.ಗುಲಾಬಿ ಸ್ವೀಕರಿಸಿ ದರೆ ಅವನ ಪ್ರೀತಿಯನ್ನು ಸ್ವೀಕರಿಸಿದಂತೆ ಎಂಬ ಕನಿಷ್ಠ ಆಲೋಚನೆ ನನಗೆ ಬರಲಿಲ್ಲ. ಕೆಂಪು ಗುಲಾಬಿಯ ಇವನೊಂದಿಗೆ ಮಾತು,ಸ್ನೇಹ,ಪ್ರೇಮ ,ಸುತ್ತಾಟ ಪ್ರಾರಂಭವಾಯಿತು.ಜಗತ್ತಿನ ಕಣ್ಣಿಗೆ ನಾವು ಕಾಣಿಸಿದರೂ ನಮ್ಮ ಕಣ್ಣಿಗೆ ಜಗತ್ತು ಕಾಣಲಿಲ್ಲ. ಅಪ್ಪನ ಸಾವಿನಿಂದಾಗಿ ಅಮ್ಮ ಸಂಸಾರದ ನೊಗ ಹೊತ್ತಿದ್ದಳು.ಇಬ್ಬರು ಅಕ್ಕಂದಿರ ಮದುವೆ ಮುಗಿದಿತ್ತು.ಅಕ್ಕ ಭಾವ ಸೇರಿ ಬೇರೆ ಕಡೆಗೆ ನನ್ನ ಮದುವೆ ಒಪ್ಪಂದ ಮಾಡಿಕೊಂಡರು.ನಾನು ಇವನೇ ಪ್ರೇಮ…ಪ್ರೇಮವೇ ಇವನು ಎಂದು ಭಾವಿಸಿ ಈಗ್ಗೆ ಹನ್ನೊಂದು ವರ್ಷದ ಕೆಳಗೆ “ಪ್ರೇಮಿಗಳ ದಿನ”ವೇ ಉಟ್ಟ ಬಟ್ಟೆಯಲ್ಲಿ ಹೊರಟು ಬಂದೆ.ಅಂದಿಗೆ ಅಮ್ಮನ ಮತ್ತು ಅಮ್ಮನ ಕಡೆಯ ಎಲ್ಲರೂ ಹರಿದ ಚಪ್ಪಲಿ ಎಸೆದಂತೆ ಮನಸ್ಸಿನಿಂದ ತೆಗೆದುಬಿಟ್ಟರು. ಇವನ ನಂಬಿ ಹಿಂದೆ ಬಂದೆ.ಕಾಫಿ ತೋಟದ ಬೆಟ್ಟದ ಮೇಲೊಂದು ಒಂಟಿಯಾದ ಪುಟ್ಟ ಮನೆ.ಮುಖ್ಯ ರಸ್ತೆಗೆ ಐದು ಕಿಲೋಮೀಟರ್ ದೂರ.ಅಕ್ಕ ಪಕ್ಕದಲ್ಲಿ ಮನೆಗಳ ಸುಳಿವೂ ಇಲ್ಲ.ಅತ್ತೆ ಮಾವ ಅತ್ತಿಗೆ ಮನೆ ತುಂಬಿಸಿಕೊಂಡರು.ಇವನ ಹೆಜ್ಜೆಗೆ ಗೆಜ್ಜೆಯ ನಾದವಾದೆ. ಉಸಿರಿಗೆ ದ್ವನಿಯಾದೆ.ನನ್ನೊಳಗೆ ನಾನೇ ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದೆ.ಹೊಸತನ… ಹೊಸಬಾಳು ಖುಷಿ ನೀಡಿತು.ಎರೆಡು ಮುದ್ದಾದ ಗಂಡು ಮಕ್ಕಳು ಹುಟ್ಟಿದವು.ತಾಯ್ತನ ತೃಪ್ತಿ ತಂದಿತ್ತು. ದಿನ ಕಳೆದಂತೆ ಅತ್ತೆ ಅತ್ತಿಗೆ ನಾನು ಕಾರಣ ಎಂದು ತೋರಿಸುತ್ತಾ ಕುಡಿಯಲು ಶುರುವಿಟ್ಟು ಕೊಂಡ.ಸಿಗರೇಟು ಹೊಗೆ ಆವರಿಸಿತು.ಕುಟುಂಬ ಕಲಹ ಹೆಚ್ಚಾಗಿ… ನನ್ನ ಬೆನ್ನು ಬಾಸುಂಡೆಗಳಿಗೆ ಜಾಗ ನೀಡಿತು.ತಲೆ ಕೂದಲು ತೆಳ್ಳಗಾದವು.ಕೆನ್ನೆಗಳ ಮೇಲೆ ಕಪ್ಪು ಮಚ್ಚೆಗಳು ದೊಡ್ಡವಾದವು.ಈಗ ನನ್ನ ಪಾಲಿಗೆ ಜಗತ್ತು ಕತ್ತಲಾಯಿತು. ಕಾಡಿನ ಹಸಿರು ಬೇಡವಾಯಿತು.ದಿನೇ ದಿನೇ ಹಕ್ಕಿಗಳ ಹಾಡು ಬೋರೆನಿಸಿತು. ಕುಡಿದವನು ವಾಪಸ್ಸು ಮನೆಗೆ ಬರುವುದನ್ನು ಮರೆತುಹೋದ.ನಾನು ಒಂಟಿಯಾದೆ.ಅತ್ತೆ ಅತ್ತಿಗೆ ಮಾವ ಸೇರಿ ನನ್ನನ್ನು ಇಲ್ಲಿಂದಲೂ ಎಸೆದರು. ಈಗ ನಾನು ಬೀಳುವುದಾದರೂ ಎಲ್ಲಿಗೆ…? ಎರೆಡು ಮಕ್ಕಳನ್ನು ಏನು ಮಾಡಲಿ…? ಉದ್ಯೋಗ ಕ್ಕೆ ಎಲ್ಲಿಗೆ ಹೋಗಲಿ…? ಅರ್ಧಕ್ಕೆ ನಿಂತ ಓದಿಗೆ ಯಾವ ಕೆಲಸ ಸಿಕ್ಕೀತು…? ನನ್ನ ಪಾಲಿಗೆ ಯಾರಿದ್ದಾರೆ…? ಯಾರ ಪ್ರೇಮಕ್ಕೆ ನಾನು ಕಾಯಲಿ..? ಮುದ್ದಾದ ಮಕ್ಕಳನ್ನು ಅವನ ಮನೆಯಲ್ಲೇ ಬಿಟ್ಟು ದೂರ ಹೊರಟು ಬಂದು ಹಾಸ್ಟೆಲ್ ಸೇರಿದ್ದೇನೆ.ಗಾರ್ಮೆಂಟ್ಸ್ ಗೆ ಕಾಲಿಟ್ಟು ಕೆಲಸ ಮಾಡಲು ನಿಂತಿದ್ದೇನೆ. ರಾತ್ರಿಗೂ…ಹಗಲಿಗೂ ವ್ಯತ್ಯಾಸ ಇಲ್ಲವಾಗಿದೆ.ಇವನ ಪ್ರೇಮವೂ ಇಲ್ಲ.ಮಕ್ಕಳಿಗೆ ವಾತ್ಸಲ್ಯ ನೀಡಲೂ ಆಗುತ್ತಿಲ್ಲ. ಅಮ್ಮನ ಮನೆಯ ಮೆಟ್ಟಿಲೂ ತುಳಿಯಲಾಗುತ್ತಿಲ್ಲ. ಹಾಸ್ಟೆಲ್ ಹಾಸಿಗೆಯ ಮೇಲೆ ಜೀವಂತ ಶವದಂತೆ ಮಲಗಿದ್ದೇನೆ. ನಾಳೆ ಮತ್ತೊಂದು “ಪ್ರೇಮಿಗಳ ದಿನ” ಬಂದು ನಿಂತಿದೆ.ಹಸಿರು ಬಟ್ಟೆ,ಕೆಂಪು ಗುಲಾಬಿ ಕಾಣದಷ್ಟು ನೀರು ತುಂಬಿದೆ ನನ್ನ ಕಣ್ಣಿನೊಳಗೆ.ಕನಸಿನ ಮೂಟೆಗೆ ನೋವಿನ ದಾರ ಬಿಗಿದು ಆ ಮೂಟೆಯ ಮೇಲೆ ನಿಂತು ಹೇಳಲೇ…. “ವಿಶ್ ಯೂ ಹ್ಯಾಪಿ ವ್ಯಾಲೆಂಟೈನ್ಸ್ ಡೇ”…ಎಂದು…!!? *************************

ವ್ಯಾಲಂಟೈನ್ಸ್ ಡೇ ವಿಶೇಷ Read Post »

ಕಥಾಗುಚ್ಛ

ಮಕ್ಕಳ ಕಥೆ

ಬೆಳ್ಳಿಬೆಕ್ಕು ಮತ್ತು ಸಿ.ಸಿ ಕ್ಯಾಮರಾ. ವಿಜಯಶ್ರೀ ಹಾಲಾಡಿ ಬೆಳ್ಳಿಬೆಕ್ಕು ಮತ್ತು ಸಿ.ಸಿ ಕ್ಯಾಮರಾ……(ಮಕ್ಕಳ ಕತೆ) ಅವತ್ತು ಬೆಳಗ್ಗೆ ಚಳಿ. ಇಬ್ಬನಿ ಹನಿ ಕೂತ ನಾಚಿಕೆ ಮುಳ್ಳಿನ ಗಿಡ ಮತ್ತಷ್ಟು ನಾಚಿ ಮಣ್ಣ ಹೆಗಲಿಗೆ ತಲೆ ಇಟ್ಟಿತ್ತು. ಸುತ್ತ ಕಣ್ಣರಳಿಸಿ ನೋಡಿದ ಬೆಳ್ಳಿಬೆಕ್ಕು ಬಾಳೆಗಿಡದ ಬುಡದಲ್ಲಿ ಶ್ರದ್ಧೆಯಿಂದ ಗುಂಡಿ ತೋಡತೊಡಗಿತ್ತು. ನಿನ್ನೆ ಪುಟ್ಟ ಹೇಳುತ್ತಿದ್ದ ‘ಬೆಳ್ಳಿಯ ಬಾಲ ಟಿಶ್ಯೂ ಪೇಪರ್, ಸುಸ್ಸು ಮಾಡಿ ಅದರಲ್ಲೇ ಒರೆಸಿಕೊಳ್ಳೋದು.’ ಅಂತ! ಬೆಳ್ಳಿಗೆ ನಗು ಬಂತು. ಹಾಗೆ ಒಂದು ಹಾಡು ಗುನುಗತೊಡಗಿತು. ‘ಅದ್ಸರಿ ಪ್ರತಿ ದಿನ ನೋಡ್ತೀನಿ ಈ ಬಾಗಾಳು ಮರ ಬೆಳ್‌ಬೆಳಗ್ಗೆ ಒಂದಷ್ಟು ಹೂ ತಯಾರಿಸಿ ಎಸೆದಿರುತ್ತಲ್ಲ, ಏನು ಸೊಕ್ಕು ಅಂತೀನಿ’ !! ಬೆಳ್ಳಿಬೆಕ್ಕಿಗೆ ಒಬ್ಬೊಬ್ನೆ ಮಾತಾಡೋ ಚಟ! ‘ನಮ್ಮ ಪುಟ್ಟನ ಶಾಲೆಯಲ್ಲಿ ಸಿ.ಸಿ. ಕ್ಯಾಮರಾ ಅಂತೆ.. ಕಥೆ ಪಡ್ಚ ಆಯ್ತು. ಆ ಕ್ಯಾಮರಾದಡಿ ಓದುವುದು ಹೇಗಪ್ಪ, ಹರಟೆ ಹೊಡೆಯುವುದು ಹೇಗೆ, ಹುಣಸೇಬೀಜ ತಿನ್ನೋದು ಹೇಗೆ, ಕದ್ದು ಆಡೋವಾಗ ಕ್ಯಾಮರಾ ಆಫ್ ಮಾಡ್ತಾನಾ ಹೇಗೆ, ” ” “’ ನಗು ಬಂದು ಉರುಳಿ ಉರುಳಿ ನಕ್ಕು ಬಿಟ್ಟಿತ್ತು.‘ಹೂ ಗುಂಡಿ ಸರಿ ಹೋಗಿಲ್ಲ ಇನ್ನು’ ತನ್ನ ತಲೆಗೆ ತಾನೇ ಹೊಡೆದುಕೊಂಡು ಮಿದು ಪಂಜದಲ್ಲಿ ಮಣ್ಣು ಹೊರ ಹಾಕತೊಡಗಿತು. ‘ಹೂಂ ಬೆಳ್ಳಿ ಶಹಭಾಷ್ ಈಗ ಸರಿ ಹೋಯ್ತು’ ಪಟಪಟ ಬಾಲ ಬಡಿದು ಗುಂಡಿ ಮೇಲೆ ಕೂರಬೇಕೆನ್ನುವಾಗ..‘ಇದೆಂತದಪ್ಪ ಆ ಹಲಸಿನ ಮರದ ಮೇಲೆ?’ ಥಟ್ಟ ಎದ್ದು ಹಲಸಿನ ಮರದ ಕಡೆಗೆ ನೆಗೆಯಿತು. ನೋಡುವುದೆಂತ !! ಅಲ್ಲೂ ಒಂದು ಸಿ.ಸಿ. ಕ್ಯಾಮರಾ! ‘ಹಾಂ ಇದೆಂತ ಕಥೆಯಪ್ಪ ಪುಟ್ಟನ ಅಪ್ಪ ಹಾಕಿಸಿದ್ದ ಅಂತ’. ಬೆಳ್ಳಿ ಮೂಗಿನ ಮೇಲೆ ಬೆರಳಿಟ್ಟು ಬಾಲದ ಮಣ್ಣನ್ನು ಕೊಡವಿತು. ‘ಅಯ್ಯೋ ಕ್ಯಾಮರಾ ನಾನು ತೋಡಿದ ಗುಂಡಿಯನ್ನೇ ನೋಡುತ್ತಿದೆ ಥೂ. ಕಕ್ಕ ಮಾಡೋದು ಹೇಗೆ ಈಗ?’ ಯೋಚಿಸುತ್ತಾ ಬೆಳ್ಳಿಗೆ ಸಿಟ್ಟು ಬಂದು ಬಿಳಿಯ ಮುಖ ಕೆಂಪಾಯಿತು.ಧಪಧಪ ಕಾಲು ಬಡಿಯುತ್ತಾ ಮನೆಯೊಳಗೆ ಓಡಿ ಕಂಪ್ಯೂಟರ್ ಹತ್ತಿ ಹೊದಿಕೆಯೊಳಗೆ ತಲೆ ಹಾಕಿ ಮಲಗಿತು. ‘ಎಲ್ಲರೂ ಕೇಳಿಸಿಕೊಳ್ಳಿ ಇನ್ನು ನಾಲ್ಕು ದಿನ ಕಕ್ಕ ಮಾಡೋಲ್ಲ, ಐದನೇ ದಿನ ಆ ಸಿ.ಸಿ. ಕ್ಯಾಮರಾ ಅಲ್ಲಿಂದ ಹೋದರೆ ಸರಿ ಇಲ್ಲಾ ಅಂದ್ರೆ ಅಷ್ಟೆ! ಪುಟ್ಟ ನನ್ನನ್ನು ಕಳಕೋಬೇಕಾಗುತ್ತೆ, ನಂಗೇನೂ ಬೇರೆ ಮನೆ ಸಿಗಲ್ವ..’ !?ತಿರುತಿರುಗಿ ಗೊಣಗಿತು. ಹೆದರಿಕೆ ಏನೀಗ ಜೋರಾಗೇ ಅರಚಿತು. ಪುಟ್ಟನ ಅಮ್ಮ ಬಂದು ‘ಈ ಬೆಕ್ಕಿಗೆ ಏನಾಯ್ತಪ್ಪ ಪೋಕಾಲ’ ಎಂದು ತಲೆಗೆ ಮೊಟಕಿದರು. ಬೆಳ್ಳಿ ಸುಯ್ಯನೆ ಬಾಲ ಮಡಚಿ ಚಳಿ ಚಳಿ ಎನ್ನುತ್ತ ನಿದ್ದೆಯ ನಾಟಕ ಮಾಡಹತ್ತಿತು!*****************************

ಮಕ್ಕಳ ಕಥೆ Read Post »

ಕಥಾಗುಚ್ಛ

ಕಥಾಯಾನ

ಎಲ್ಲೆಲ್ಲೋ ಹಾರಾಡುತ್ತಿದ್ದ ಕತೆ ಟಿ. ಎಸ್.‌ ಶ್ರವಣ ಕುಮಾರಿ ಎಲ್ಲೆಲ್ಲೋ ಹಾರಾಡುತ್ತಿದ್ದ ಕತೆ ಕಾಗಕ್ಕ ಇನ್ನೂ ಬೆಳಗಾಗ ಗೂಡಿನ ಬಾಗಿಲು ತೆರೆಯುತ್ತಿರುವಾಗಲೇ ತನ್ನ ಗೂಡಿನ ಮುಂದೆ ಆಗಲೇ ರಂಗೋಲಿ ಇಡುತ್ತಿದ್ದ ಗುಬ್ಬಕ್ಕ ಇವಳನ್ನೇ ಕಾಯುತ್ತಿದ್ದವವಂತೆ ಶಬ್ದ ಮಾಡಿ ಗಮನ ಸೆಳೆದಳು.  ಬಲಗೈಲಿದ್ದ ಪೊರಕೆಯನ್ನು ಎಡಗೈಗೆ ಬದಲಾಯಿಸಿಕೊಂಡ ಕಾಗಕ್ಕ ಏನು ಎನ್ನುವಂತೆ ಸನ್ನೆ ಮಾಡಿದಳು. “ತುಂಬಾ ವಿಷಯ ಇದೆ ಮಾತಾಡಕ್ಕೆ; ಗಂಡ ಮಕ್ಕಳು ಹೊರಟ ಮೇಲೆ ಬರ್ತೀನಿ” ಎನ್ನುವಂತೆ ಸಂಜ್ಞೆ ಮಾಡಿ ಕಾಗಕ್ಕನೊಂದಿಗೆ ಅಪಾಯಿಂಟ್ಮೆಂಟ್ ಫಿಕ್ಸ್ ಮಾಡಿಕೊಂಡು ರಂಗೋಲಿ ಡಬ್ಬಿಯನ್ನೆತ್ತಿಕೊಂಡು ಗೂಡೊಳಗೆ ಹೋದಳು. ಕಾಗಕ್ಕನಿಗೋ ಆಗಿನಿಂದಲೇ ಕದನ ಕುತೂಹಲ ಶುರುವಾಯಿತು. ಬೆಳ್ಳಂಬೆಳಗ್ಗೆಯೇ ತನಗಾಗಿ ಕಾದು ನಿಂತು ಕತೆಯ ಪ್ರೋಮೋದ ಮೊದಲ ಕಾರ್ಡ್ ತೋರಿಸಿ ಹೋಗಿದ್ದಾಳೆಂದರೆ ವಿಷ್ಯ ಸಖತ್ತಾಗೇ ಇದ್ದಿರಬೇಕು.  ಯಾವುದಕ್ಕೂ ಇಬ್ಬರ ಗೂಡಿಂದಲೂ ಎಲ್ಲರೂ ಹೊರಡುವುದಕ್ಕೆ ಕಾಯಬೇಕಲ್ಲ ಎಂದುಕೊಂಡು ಆತುರಾತುರವಾಗೆ ಬೆಳಗಿನ ಸ್ನಾನ, ತಿಂಡಿ, ಅಡುಗೆ ಎಲ್ಲವನ್ನೂ ಮುಗಿಸಿ ಗಡಿಯಾರದ ಮುಳ್ಳು ಮುಂದೆ ಸಾಗುವುದನ್ನೇ ನಿರೀಕ್ಷಿಸುತ್ತಾ ನಿಂತವಳಿಗೆ ಇಂದೇಕೋ ಅದು ಬಲು ನಿಧಾನವಾಗೇ ಚಲಿಸುತ್ತಿದೆ ಅನ್ನಿಸಹತ್ತಿತು. ಅಂತೂ ಕಡೆಗೆ ಗಂಡ, ಮಕ್ಕಳೆಲ್ಲರೂ ತಿಂಡಿ ತಿಂದು, ಊಟದ ಡಬ್ಬಿ ಹಿಡಿದು ಹೊರಟ ತಕ್ಷಣ ಹೊರಗೆ ಬಂದು ಗುಬ್ಬಕ್ಕನ ಗೂಡಿನ ಕಡೆ ನೋಡಿದರೆ ಅಲ್ಲಿ ಇನ್ನೂ ಯಜಮಾನರ ಸವಾರಿ ಹೊರಟಂತಿರಲಿಲ್ಲ. ಅವರ ವಾಹನ ಮುಂದೇ ನಿಂತಿತ್ತು.  ಯಾರೋ ಬಂದಿರಬಹುದೇನೋ… ಅವರ ಗಾಡಿಯೂ ಅಲ್ಲೇ ನಿಂತಿದೆ. ಎಷ್ಟು ಹೊತ್ತಿಗೆ ಹೊರಡುತ್ತಾರೋ… ಇವಳ ಕಾತರ ಹೆಚ್ಚಾಗತೊಡಗಿ, ಅದನ್ನು ತೋರಿಸುವಂತಿಲ್ಲದೆ ಆ ಬಿಸಿಲಲ್ಲೂ ಮುಂದಿನ ಕೈತೋಟದ ಗಿಡಗಳ ಒಣಗಿದೆಲೆಯನ್ನು ಕೀಳುತ್ತಾ, ಬಿದ್ದಿರುವ ಒಣ ಹೂವುಗಳನ್ನೂ, ಕಸಕಡ್ಡಿಗಳನ್ನೂ, ತರಗೆಲೆಗಳನ್ನೂ ಹೆಕ್ಕಿ ತೆಗೆಯುತ್ತಾ ಕಾಲ ಕಳೆಯ ತೊಡಗಿದಳು. ಅಂತೂ ಇಂತೂ ಕಡೆಗೆ ಎರಡು ಗಾಡಿಗಳೂ ಗುಬ್ಬಕ್ಕನ ಗೂಡಿನ ಮುಂದಿನಿಂದ ಹೊರಟ ಶಬ್ಧ ಕೇಳಿ ಪರಮಾನಂದವಾಯಿತು. ಹೊರಗೆ ತಲೆ ಹಾಕಿದ ಗುಬ್ಬಕ್ಕ ʻಐದು ನಿಮಿಷ ತಡಿ ಬಂದೆʼ ಎನ್ನುವಂತೆ ಇಷಾರೆ ಮಾಡಿ ಮತ್ತೆ ಒಳಹೊಕ್ಕಳು.  ಬಾಗಿಲನ್ನು ತೆರೆದಿಟ್ಟೇ ಒಳಬಂದ ಕಾಗಕ್ಕನಿಗೋ ಒಂದೊಂದು ನಿಮಿಷವೂ ಗಂಟೆಯಂತೆ ತೋರುತ್ತಿದ್ದರೆ, ತನ್ನ ತಲೆಯಲ್ಲಿ ಹುಳ ಬಿಟ್ಟು ಗುಬ್ಬಕ್ಕ ಆರಾಮಾಗಿ ಇದ್ದಾಳೆ ಅನ್ನಿಸಿ ಅವಳ ಮೇಲೆ ತುಸು ಕೋಪವೇ ಬಂದರೂ, ಮಾತಿನ ಮಧ್ಯ ತಿನ್ನಲು ಒಂದಷ್ಟು ಹಚ್ಚಿದ ಕಳ್ಳೆಪುರಿಯನ್ನು ಒಂದು ಬಟ್ಟಲಿಗೆ ಹಾಕಿಕೊಂಡು ಬಂದು ಟೇಬಲ್ಲಿನ ಮೇಲೆ ಇರಿಸಿದಳು. ಕಾಫಿ ಡಿಕಾಕ್ಷನ್ ಇದೆ ತಾನೇ ಎಂದು ಫಿಲ್ಟರ್‌ನ ಕೆಳಗಿನ ಬಟ್ಟಲನ್ನು ಮತ್ತೊಮ್ಮೆ ನೋಡಿ ಸಮಾಧಾನಗೊಂಡಳು.  ಇವಳ ಐದು ನಿಮಿಷ ಇನ್ನೂ ಆಗಲಿಲ್ಲವೇ ಎಂದು ಸಿಡಿಮಿಡಿಗೊಳ್ಳುತ್ತಿರುವಾಗಲೇ ಅಂತೂ ಗುಬ್ಬಕ್ಕ “ಉಸ್ಸಪ್ಪ.  ಸಾಕಾಯ್ತು…” ಎನ್ನುತ್ತಾ ಒಳಬಂದು ಸೋಫಾದ ಮೇಲೆ ಕಾಲು ಚಾಚಿ ಕುಳಿತುಕೊಂಡು ಕಣ್ಣು ಮುಚ್ಚಿಕೊಂಡು ಹಿಂದಕ್ಕೆ ಒರಗಿಕೊಂಡಳು.  ಕಾಗಕ್ಕನಿಗೋ ಅವಳ ತಲೆಯ ಮೇಲೆ ಮೇಜಿನ ಮೇಲಿದ್ದ ವೇಸನ್ನೆತ್ತಿ ಕುಟ್ಟಿಬಿಡುವಷ್ಟು ಕೋಪ ಬಂದರೂ ತಡೆದುಕೊಂಡು “ಏನೋ ದೊಡ್ಡದಾಗಿ ಕತೆ ಹೇಳೋ ಸಸ್ಪೆನ್ಸ್ ತೋರ್ಸಿ ಈಗ ಇಲ್ಲಿ ಆರಾಮಾಗಿ ಊಟ ಮಾಡಿದ್ಮೇಲೆ ಮಲಗೋ ತರ ತಣ್ಣಗೆ ಕಣ್ಣು ಮುಚ್ಚಿಕೊಂಡು ಆರಾಮ್ ತೊಗೋತಾ ಇದೀಯಲ್ಲ. ಎದ್ದೇಳು” ಎಂದು ಮಾತಲ್ಲೇ ತಿವಿದಳು. “ಏ… ಸ್ವಲ್ಪ ಇರು ಬೆಳಗಿಂದ ದಡಬಡಾಂತ ಕೆಲ್ಸ ಮಾಡಿ ಸುಸ್ತಾಗಿದೆ”. “ನಾನೇನು ಸುಮ್ನೆ ಕೂತಿದ್ನಾ. ನಿನ್ನಷ್ಟೇ ಕಷ್ಟ ಪಟ್ಟು ಮಾಡಿದೀನಿ. ಎದ್ದೇಳು ಮೇಲೆ. ಅದೇನು ಕತೆಯೋ ಬೇಗ ಹೇಳು.  ಬೆಳಗಿಂದ ನಾಲಕ್ಕು ಕಿವಿಯಾಗಿ ಕೇಳಕ್ಕೆ ಕೂತಿದೀನಿ. ಸ್ವಲ್ಪ ಹೊತ್ತಾದ ಮೇಲೆ ಬೇಕಾದ್ರೆ ಸ್ವಲ್ಪ ಕಾಫಿ ಮಾಡ್ಕೊಂಡು ಬಂದು ಕೊಡ್ತೀನಿ” ಎನ್ನುತ್ತಾ ಅವಳು ಒರಗಲಿಕ್ಕೆ ಬಿಡದೇ ಮಾತಿಗೆಬ್ಬಿಸಿದಳು. “ಆದೇನಾಯ್ತಪ್ಪಾ ಅಂದ್ರೇ ….” ಎನ್ನುತ್ತಾ ಹೆಚ್ಚು ಕಡಿಮೆ ಮಲಗಿದಂತೇ ಕುಳಿತಿದ್ದವಳು ಯಾರೋ ಎಳೆಯುತ್ತಿದ್ದಾರೇನೋ ಎನ್ನುವಂತೆ ಎದ್ದು ಕುಳಿತಳು. “ನಿನ್ನೆ ನಮ್ಮಮ್ಮನ ಮನೇತ್ರ ಹೋಗಿದ್ನಾ…” “ಅಲ್ಲೇನಾಯ್ತು?” “ಸ್ವಲ್ಪ ತಡಕೋ. ಅದ್ನೇ ಅಲ್ವಾ ಹೇಳ್ತಿರೋದು. ಅಲ್ಲಿಂದ ಎರಡೇ ಮರದಾಚೆ ಅಲ್ವಾ ನಿಮ್ಮಣ್ಣನ ಬೀಗರಿರೋದು.. ಅವ್ರಲ್ಲೂ ನಮ್ಮಮ್ಮನ ಮನೇಲೂ ಗೀಜಕ್ಕನೇ ಕೆಲಸ ಮಾಡೋದು. ಅವ್ಳೇಳಿದ್‌ ವಿಷ್ಯ… ಮೊನ್ನೇ ಅಲ್ಲಿ ಗಂಡ ಹೆಂಡ್ತಿ ಮಧ್ಯ ಜೋರು ಜೋರು ಮಾತುಕತೆ ನಡೀತಾ ಇತ್ತಂತೆ. ಮಗಳು ಗಿಣಿಮರಿ ಹತ್ರ ಫೋನಲ್ಲಿ ಮಾತಾಡ್ತಿದ್ರಂತೆ. “ನಿನ್ ಗಂಡ ಎನಂತ ತಿಳ್ಕೊಂಡಿದಾನೆ, ನೀನೇನು ಗತಿಗೆಟ್ಟೋರ ಕಡೆಯಿಂದ ಹೋಗಿಲ್ಲ. ನಿನ್ ಸಂಬಳದಿಂದಾನೇ ಅಲ್ವಾ ಅವರಪ್ಪ ತನ್ ಮರಿಗಳ್ನ ಓದುಸ್ತಿರೋದು. ನಿನ್ನ ಹೊಡೆಯೋ ಅಷ್ಟು ಮುಂದುವರೆದ್ನ?  ಮುಂದಿನ್ವಾರ ನಾವಿಬ್ರೂ ಬರ್ತೀವಿ. ಅಲ್ಲೀವರ್ಗೆ ತಡಕೋ. ಬಂದು ವಿಚಾರಿಸಿಕೋತೀವಿ.” ಅಂತ. ಮೈನಕ್ಕ ಮಾತಾಡ್ತಿರೋವಾಗ್ಲೇ ಅವಳ್ಗಂಡ ಪಾರ್ವಾಳಪ್ಪ ಫೋನ್ ಕಿತ್ಕೊಂಡು “ಗೊರವಂಕಂಗೆ ತಲೆಗೆ ಏರಿರೋ ಪಿತ್ತ ಇಳಿಸ್ತೀನಿ. ಕೆಲ್ಸ ಇಲ್ದೇ ಬಿದ್ದಿದ್ದಾಗ ಯಾರ್ಯಾರ ಕೈಯಿ ಕಾಲು ಕಟ್ಟಿ ಅವನಿಗೆ ಕೆಲ್ಸ ಕೊಡಿಸಿದ್ದು.  ಜೊತೆಗೆ ಬಾಳ್ವೆ ಮಾಡು ಅಂತ ಮುದ್ದಿಂದ ಸಾಕಿದ ಮಗ್ಳುನ್ನೂ ಕೊಟ್ರೆ ಬಾಳ್ವೆ ಮಾಡಕ್ಕೆ ಯೋಗ್ಯತೆ ಇರಬೇಕಲ್ವಾ. ನೀನು ಬೇಜಾರು ಮಾಡ್ಕೋಬೇಡ ಪುಟ್ಟ. ನಾನೆಲ್ಲ ನೋಡ್ಕೋತೀನಿ” ಅಂತ ಮಗ್ಳಿಗೆ ಸಮಾಧಾನ ಹೇಳ್ತಿದ್ರಂತೆ. “ಇನ್ನೂ ಏನೇನು ಮಾತಾಡ್ತಿದ್ರೋ… ಗೀಜಕ್ಕ ಎಷ್ಟು ಹೊತ್ತೂಂತ ಕಸ ಬಳಿಯೋ ನಾಟಕ ಆಡ್ತಾಳೆ. ಅವ್ಳಿಗೆ ತಿಳಿದಷ್ಟನ್ನ ನಮ್ಮಮ್ಮನ ಹತ್ರ ಹೇಳಿದ್ಳಂತೆ. ನಮ್ಮಮ್ಮ ನನ್ನತ್ರ ಹಂಗಂದ್ರು. ನಿಂಗೇನಾದ್ರೂ ನಿಮ್ಮಣ್ಣನಿಂದಾನೋ ಅತ್ಗೇಂದಾನೋ ಏನಾದ್ರೂ ಸಮಾಚಾರ ಬಂದಿರ್ಬೋದೇನೋ ಅಂದುಕೊಂಡೆ.” ಎನ್ನುತ್ತಾ ಕಾಗಕ್ಕನ ಮುಖ ನೋಡಿದಳು.  “ಹಂಗಾ.. ನಿಜವಾ ನೀ ಹೇಳ್ತೀರೋದು…” ಕಾಗಕ್ಕನ ಮುಖ ಅಚ್ಚರಿಯಿಂದ ಅರಳಿತು.  “ಯಾವ್ಮುಖ ಇಟ್ಕೊಂಡು ಹೇಳ್ತಾರೆ ಹೇಳು? ಎನ್ ಸುಖದ್ ಸಮಾಚಾರಾನಾ ಬಿಂಕವಾಗಿ ಹೇಳಕ್ಕೆ. ನನ್ ಮಗ್ಳುನ್ನ ಸೊಸೆ ಮಾಡ್ಕೊಳ್ಳೋ ಅಣ್ಣಾ, ತೌರುಮನೇಗೆ ನಮ್ಮನೇ ಬಳ್ಳಿ ಸುತ್ಕೊಳತ್ತೆ ಅಂದ್ರೇ, “ನಿಂಗೊತ್ತಿಲ್ಲಾ ಕಾಗೀ,  ಬಳಗದಲ್ಲಿ ಮದ್ವೆ ಮಾಡ್ಕೊಂಡ್ರೆ ಉಟ್ಟೋ ಪಿಳ್ಳೆಗಳು ರೋಗವಾಗಿ ಉಟ್ಟುಟ್ವೆ. ನಿನ್ನ ಮಗ್ಳೂ ನನ್ನ ಮಗಳಾಂಗೇ ಅಲ್ವಾ.  ಸಂಬಂಧ ಬೆಳಸೋದು ಬೇಡ. ಇರೋ ಸಂಬಂಧ ಚೆನ್ನಾಗಿಟ್ಕೋಣೋಣ’ ಅಂದ. ಅತ್ಗೇ… “ಕಾಗೀ ನಿನ್ನ ಮಗ್ಳು ಕಪ್ಪಿದ್ರೂ ಕಡಿದ ಶಿಲೆ ಹಾಗಿದಾಳೆ. ಯಾರಾದ್ರೂ ಹುಡುಕ್ಕೊಂಡು ಬಂದು ಮಾಡ್ಕೋತಾರೆ. ಯೋಚ್ನೇನೇ ಮಾಡ್ಬೇಡ’ ಅಂತ ವೈಯ್ಯಾರವಾಗಿ ನನ್ನ ಮಗ್ಳ ಬಣ್ಣಾನ ಎತ್ತಿ ಅಡೋದ! ಆಗ್ಬೇಕು ಆವಂಗೆ ಹಿಂಗೆ” ಕೂತಲ್ಲೇ ನೆಟಿಕೆ ಮುರಿದವಳು “ಸ್ವಲ್ಪ ತಡೀ ಕಾಫಿ ತರ್ತೀನಿ ಅಲ್ಲೀವರ್ಗೂ ಕಳ್ಳೇಪುರಿ ತಿಂತಿರು ಎಂದು ಬಟ್ಟಲನ್ನ ಮುಂದು ಸರಿಸಿದಳು. ಅದರಲ್ಲಿಂದ ಒಂದೊಂದೇ ಕಡಲೇಕಾಯಿ ಬೀಜವನ್ನು ಹೆಕ್ಕುತ್ತಾ ಗುಬ್ಬಕ್ಕ ಬಾಯಾಡಿಸ ತೊಡಗಿರುವಾಗಲೇ “ಮುಂದೇನಾಯ್ತಂತೆ?” ಎನ್ನುತ್ತಾ ಕಾಗಕ್ಕ ಕಾಫಿಯ ಬಟ್ಟಲನ್ನು ತೆಗೆದುಕೊಂಡು ಬಂದಳು.  ಕಾಫಿ ಹೊಟ್ಟೆಗೆ ಬಿದ್ದ ಮೇಲೆ ಇನ್ನೂ ಏನಾದ್ರೂ ಒಳಗೆ ಇರೋ ವಿಷ್ಯಾ ಹೊರಕ್ಕೆ ಕಾರುತ್ತೇನೋ ಅಂತ ಗುಬ್ಬಕ್ಕನ ಮುಖವನ್ನೇ ನೋಡತೊಡಗಿದಳು.  ನಿಧಾನವಾಗಿ ಗುಟುಕರಿಸುತ್ತಾ ಏನೋ ಗಹನವಾದ ಆಲೋಚನೆಯಲ್ಲಿರುವಂತೆ ಮುಖ ಮಾಡಿಕೊಂಡ ಗುಬ್ಬಕ್ಕ “ಒಂದ್ಕೆಲ್ಸ ಮಾಡೋಣ” ಎನ್ನುತ್ತಾ ಬಟ್ಟಲನ್ನು ಕೆಳಗಿಟ್ಟಳು.  `ಏನು?’ ಎನ್ನುವಂತೆ ನೋಡಿದ ಕಾಗಕ್ಕನ ಮುಖವನ್ನೇ ನೋಡುತ್ತಾ ನಾಳೇನೋ ನಾಡಿದ್ದೋ ಹಂಸನ ಹತ್ರ ಹೋಗೋಣ.  ಅವ್ಳ ಮಗ್ಳೂ, ಈ ಅರಗಿಣೀನೂ ಗೆಳ್ತೀರು. ಅಂದ್ಮೇಲೆ ಏನೋ ಒಂದಷ್ಟು ವಿಷ್ಯ ಗೊತ್ತೇ ಇರತ್ತಲ್ವ.  ಏನಾದ್ರೂ ಅವರಮ್ಮನ ಹತ್ರ ಹೇಳಿರ್ಬೋದು. ಹೋದ್ರೆ ಗೊತ್ತಾಗುತ್ತೆ.  ಫೋನ್ ಮಾಡಿ ಕೇಳಕ್ಕಾಗಲ್ಲ”.  “ನಾವು ಹೋಗಿ ಕೇಳಿಬಿಟ್ರೆ ಅವ್ಳು ಹೇಳಿಬಿಡ್ತಾಳೋ” ಕಾಗಕ್ಕ, ಹಂಸ ಹೇಳ್ಳಿಕ್ಕಿಲ್ಲ ಎನ್ನುವ ಭಾವ ವ್ಯಕ್ತಪಡಿಸಿದಳು. “ಕೇಳೋ ತರ ಕೇಳಿದ್ರೆ ಹೇಳ್ತಾಳೆ.  ಅವ್ಳಿಗೆ ಗೊತ್ತಿರೋ ವಿಷ್ಯ ಕಕ್ಸೋ ಭಾರ ನಂದು. ಯಾವಾಗ ಹೋಗೋಣ ಹೇಳು” ಎಂದ ಗುಬ್ಬಕ್ಕನಿಗೆ “ಇವತ್ತಿನ್ನೂ ಮಂಗಳ್ವಾರ.  ನಾಳೆ ಬುಧವಾರ. ಎರ್ಡು ದಿನ್ವೂ ಇವ್ರು ಬೇಗ ಬರ್ತಾರೆ. ಎಲ್ಲೂ ಹೋಗೋ ಹಂಗಿಲ್ಲ. ಈ ವಿಷ್ಯಕ್ಕೆ ಅಂತೇನಾದ್ರೂ ತಿಳಿದ್ರೆ ಅಷ್ಟೇ ಬಡದು ಬಲಿ ಹಾಕ್ಬಿಡ್ತಾರೆ. ಶುಕ್ರವಾರದ ಪೂಜೇಗೆ ಕರೆಯೋ ನೆಪ ಮಾಡ್ಕೊಂಡು ಗುರುವಾರ ಹೋಗೋಣ” ಎಂದಳು.  “ಆದೇನ್ ನಿನ್ನ ಗಂಡನ ಕೆಲಸ್ವೋ. ವಾರಕ್ಕೆ ಮೂರ್ ದಿನ ನಾಲಕ್ಕುಗಂಟೇಗೇ ಬಂದು ಕೂತ್ಕೋತಾರೆ. ದೂರ್ವಾಸನ್ ಸಾವಾಸ ನಿಂಗೆ. ನನ್ನ ಗಂಡ ನೋಡು ರಾತ್ರಿ 9 ಗಂಟೇಗ್ ಮುಂಚೆ ಬರಲ್ಲ. ಇನ್ನೇನ್ಮಾಡೋದು? ಗುರ್ವಾರವೇ ಹೋಗೋಣ. ಈಗ ಅಲ್ಲೀವರ್ಗೂ ತಡ್ಕೊಂಡು ಕೂತಿರ್ಬೇಕಲ್ಲಾ ನಾವು…  ಹೊಸತರಲ್ಲಿರೋ ಮಜಾ ಅಮೇಲಿರಲ್ಲ. ಏನ್ ಮಾಡೋದು.. ಸರಿ ..  ಅಷ್ಟರಲ್ಲಿ ಇನ್ನೇನಾದ್ರೂ ವಿಷ್ಯ ಗೊತ್ತಾದ್ರೆ ನೀನೂ ಹೇಳು; ನಾನೂ ಹೇಳ್ತೀನಿ” ಎನ್ನುತ್ತಾ ಅಂದಿನ ಮೀಟಿಂಗ್ ಭರ್ಕಾಸ್ತ್ ಮಾಡಿ ಗುಬ್ಬಕ್ಕ ಹೊರಟಳು. ಕಾಗಕ್ಕನಿಗೋ ಒಂದ್ಕಡೆ ಖುಷಿ, ಇನ್ನೊಂದ್ಕಡೆ ಕುತೂಹಲ ಎನಾಗಿರ್ಬೋದು?  ಯಾಕೆ ಗಂಡ ಹೆಂಡ್ತಿ ಮಧ್ಯ ಈ ಮಟ್ಟಕ್ಕೆ ಜಗಳ ಆಯ್ತು…  ಈ ಗುಬ್ಬಕ್ಕನ್ ಮಾತನ್ನ ಪೂರಾ ನಂಬಕ್ಕಾಗಲ್ಲ; ಇನ್ಯಾರನ್ನ ಕೇಳಿದ್ರೆ ಸರಿಯಾಗಿ ಏನು ನಡೀತು ಅಂತ ತಿಳಿಯತ್ತೆ … ಏನೂ ತೋಚದೆ ತಲೆಯನ್ನ ಪರಪರ ಕೆರೆದುಕೊಂಡ್ರೂ ಯಾರೂ ತಲೆಗೆ ಬರ್ಲಿಲ್ಲ.  ಮಧ್ಯಾನ್ಹದ ಊಟಾನೂ ಸರಿಯಾಗಿ ಸೇರ್ಲಿಲ್ಲ. ಒಂದ್ ಗಳಿಗೆ ಕಣ್ಣುಮುಚ್ಚಿಕೊಳ್ಳೋಣ ಅಂತ ಉರುಳಿಕೊಂಡ್ರೂ ಸಮಾಧಾನವಿಲ್ಲ. ಹಿಂಗೇ ಯೋಚ್ನೇ ಮಾಡ್ತಾ ಒಂದ್ ಕಣ್ ಹತ್ತಿತ್ತೋ ಏನೋ ಅಷ್ಟರಲ್ಲೇ ಬಾಗಿಲು ಡಬಡಬ ಬಡ್ಕೊಂತು. `ಯಾರ್ಬಂದ್ರೋ ಪಾಪಿಗ್ಳು ನಿದ್ದೇಗೆ ಎರವಾಗಿ’ ಎಂದು ಬೈದುಕೊಳ್ಳುತ್ತಾ ಕಷ್ಟ ಪಟ್ಟು ಎದ್ದು ಹೋಗಿ ಬಾಗಿಲು ತೆರೆದಳು.`ವಿಷ್ಯಾ ಗೊತ್ತಾಯ್ತಾ…’ ಆತಂಕದಿಂದ ಒಳ ಬಂದಳು ಕುಕ್ಕುಟಕ್ಕ… ಅತ್ತಿಗೆಯ ಅತ್ತಿಗೆ. “ಏನತ್ಗೆ.. ಬಾ.. ಕೂತ್ಕೋ  ಎನ್ನುತ್ತಾ ಸೋಫಾ ತೋರಿದಳು.  “ಇಲ್ಬೇಡಾ.. ನಮ್ಮನೇಗ್ ಬಾ” ಎಂದಳು.  “ಆಯ್ ಇವತ್ತು ಇವ್ರು ಇನ್ನೊಂದು ಗಂಟೇಗೆಲ್ಲಾ ಬಂದು ಎಲ್ಲೋ ಓಗ್ಬೇಕಂತೆ.  ಇನ್ನೂ ತಿಂಡಿ ಮಾಡ್ಬೇಕು.. ಮಕ್ಳೂ ಐದು ಗಂಟೆಗೆಲ್ಲಾ ಬಂದ್ಬಿಡ್ತಾವೆ. ಬರಕ್ಕಾಗಲ್ಲ. ಇಲ್ಲೇ ಹೇಳು ಮತ್ತೆ.’  “ಇಲ್ಲ; ನಾನು ಬರುವಾಗ ಗುಬ್ಬಕ್ಕ ನೋಡಿದ್ಳು.  ಅವ್ಳಿಗೆ ತಿಳಿಯೋದು ಬೇಡ.  ನೀನೊಬ್ಳೇ ಮಂಗಳ ಗೌರಿ ಪೂಜೆ ಅರಿಶಿನ ಕುಂಕುಮಕ್ಕೆ ಕರೆದೆ ಅನ್ನೋ ನೆಪ ಮಾಡಿಕೊಂಡು ಬಾ. ನಾನು ಇನ್ನೊಂದು ನಿಂಷ ಇಲ್ಲಿದ್ರೆ ಅವ್ಳು ಬಂದ್ಬಿಡ್ತಾಳೆ. ಏಳು ಗಂಟೇಗೆ ಕಾಯ್ತಿರ್ತೀನಿ” ಎನ್ನುತ್ತಾ ಹೊರಟೇಬಿಟ್ಟಳು. `ಅಯ್ಯೋ ದೇವ್ರೆ.  ಏನು ಇವ್ಳ ಕತೆ.  ಈ ಥರ ಸಸ್ಪೆನ್ಸ್ ಹುಟ್ಟು ಹಾಕಿ ಹೋಗೋದ…’ ಎಂದು ಕೊಳ್ಳುತ್ತಿರುವಾಗಲೇ ಗುಬ್ಬಕ್ಕ ನುಸುಳಿದಳು “ಏನಂತೆ ಕುಕ್ಕುಟಕ್ಕನ ಕತೆ…” ರಾಗವಾಗಿ ಕೇಳಿದಳು.  ಏನೋ ಖಂಡಿತವಾಗಿ ಇದೆ ಎನ್ನುವಂತೆ.  “ಮಂಗಳ ಗೌರಿ ಪೂಜೆಯಂತೆ. ಸಂಜೇಗೆ ಅರಿಶ್ನ ಕುಂಕ್ಮಕ್ಕೆ ಬಂದೋಗು ಅಂತ ಕರಿಯಕ್ಕೆ ಬಂದಿದ್ಲು.”  “ಅಂಗಾ.. ಗೊತ್ತಾಯ್ತು ಬಿಡು.. ನಂಗ್ ಹೇಳ್ದೇ ಹೋದೀಯ” ಕಣ್ಣು ಮಿಟುಕಿಸಿದಳು.  “ಏ… ವಿಷ್ಯ ಇದ್ರೆ ನಿಂಗೆ ಹೇಳ್ದೇ ಇರ್ತೀನಾ.  ನಿಜವಾಗೂ ಕರೆಯಕ್ಕೇ ಬಂದಿದ್ಳು” ಕಾಗಕ್ಕ ವಿಷಯದ ತಿಂಡಿಯ ಮೇಲೆ ಮುಸುಕು ಹಾಕಲು ನೋಡಿದಳು. “ಸರಿ ಸರಿ ಹೋಗು…  ಆಮೇಲೆ ಸಿಗ್ತೀನಿ” ಎನ್ನುತ್ತಾ ಅವಳು ಹೊರಟರೂ ತನ್ನ ಮಾತನ್ನ ಅವಳು ನಂಬಿಲ್ಲ ಎನ್ನುವುದು ಕಾಗಕ್ಕನಿಗೆ ಗೊತ್ತಾಗಿ ಹೋಯಿತು. ಸಂಜೆ ಗಂಡ ಮಕ್ಕಳು ಬಂದ ಮೇಲೆ, ರಾತ್ರಿ ಆಡುಗೇನೂ ಮಾಡಿಟ್ಟು ʻಕುಕ್ಕುಟಕ್ಕನ ಮನೆಗೆ ಅರಿಶ್ನ ಕುಂಕ್ಮಕ್ಕೆ ಹೋಗ್ಬರ್ತೀನಿʼ ಅಂತ ಹೇಳಿ ಹೊರಟಳು.  ಬಾಗಿಲಲ್ಲೇ ಕಾಯ್ತಾ ನಿಂತಿದ್ದ ಕುಕ್ಕುಟಿ “ಬಂದ್ಯಾ ಬಾ ಬಾ” ಎನ್ನುತ್ತಾ ಒಳಗೆ ಎಳೆದುಕೊಂಡಂತೇ ಕರೆದುಕೊಂಡು ಹೋದಳು.  ಸೋಫಾದ ಮೇಲೆ ಇನ್ನೂ ಊರುತ್ತಿದ್ದ ಹಾಗೇ “ಗೊತ್ತಾ ವಿಷ್ಯ…” ಆತಂಕದಿಂದ ಕೇಳಿದ್ಳು. ಏನೂ ಗೊತ್ತಿಲ್ಲದ ಸೋಗು ಹಾಕಿಕೊಳ್ಳುತ್ತ “ಏನತ್ತಿಗೆ… ಏನಾಯ್ತು?” ಆತುರದಿಂದ ಕೇಳಿದಳು. “ಏನ್ ಗೊತ್ತಾ ಕಾಗಿ, ನಿಮ್ಮಣ್ಣನ ಮಗನ

ಕಥಾಯಾನ Read Post »

You cannot copy content of this page

Scroll to Top