ಮೀನಾಕ್ಷಿ
ನನ್ನವಳು ಕಾಫೀ ತಿಂಡಿ ತಂದಳು. ಸಂತೋಷದಿಂದ ಎಲ್ಲರೂ ಕೂಡಿ ಮುಗಿಸಿದೆವು. ಮೀನಾಕ್ಷಿಯ ಮಾವನವರೂ ಅವರಲ್ಲಿಗೆ ಬರಲು ಆಮಂತ್ರಿಸಿದನರು. ನಾವು ಸಮ್ಮತಿಸಿದೆವು. ನಾನು, ನನ್ನ ಮನೆಯವಳು ಹಾಗೂ ನಚಿಕೇತ ಗೇಟಿನವರೆಗೆ ಹೋಗಿ ಅವರನ್ನು ಬೀಳ್ಕೊಟ್ಟೆವು. ನಾನು ಮನೆಯವಳಿಗೆ ಗೊತ್ತಾಗದ ಹಾಗೆ ಕಣ್ಣೊರಸಿಕೊಂಡೆ
ಮಾಸಿದ್ದ ಬಿಳಿ ಪಂಚೆ ಉಟ್ಟು, ಕಿತ್ತುಹೋದ ಯಾವುದೋ ಒಂದು ಟೀಶರ್ಟ್ ಧರಿಸಿ, ಅಡುಗೆ ಮನೆಯಿಂದ ಕಾಫೀ ಮಾಡಿ ಒಂದು ದೊಡ್ಡ ತಟ್ಟೆಯಲ್ಲಿ ಕಾಫೀ ಲೋಟಗಳನ್ನು ತರುತ್ತಿದ್ದ ಶಿವರಾಮನ ಕಡೆ ಎಲ್ಲರ ದೃಷ್ಟಿ ನಾಟಿತ್ತು
ಅಷ್ಟಲ್ಲದೇ ಹೇಳುತ್ತಾರೆಯೇ, “ಸಂಸಾರದಲ್ಲಿ ಇದ್ದು ಆಧ್ಯಾತ್ಮ ಆಚರಿಸುವುದು, ಮೊಸಳೆಯ ಮೇಲೆ ಕುಳಿತು ನದಿ ದಾಟಿದ ಹಾಗೆ” ಎಂದು. ಆಧ್ಯಾತ್ಮ ಆಧ್ಯಾತ್ಮವೇ-ಸಂಸಾರ ಸಂಸಾರವೇ.
ಆ ವರ್ಷದ ಮಳೆಗಾಲದಾರಂಭ. ”ಇನ್ನೊಂದೇ ವಾರದ ಗಡುವು” ಇಲಾಖೆಯವರ ಘೋಷಣೆ. ಆಯಿತಲ್ಲ!! ಈ ನೆಲದ ಋಣ ತೀರಿತು. ಆಗಲೇ ಕೆಲವರು ಹೊಸ ಊರು ಸೇರಿದ್ದರು. ಸಂಭ್ರಮವಿಲ್ಲ. ಅಲ್ಲೊಂದು ಇಲ್ಲೊಂದು ಮನೆ, ತೆರಳುಳಿದ ಜನ. ಹಳ್ಳಿಯೆಲ್ಲ ಖಾಲಿ ಖಾಲಿ, ತಿಮ್ಮಕ್ಕನ ಮನಸ್ಸಿನಂತೆ.
ಮಗನ ಮೇಲೆ ಬಂದ ಕಳ್ಳತನದ ಅಪವಾದಕ್ಕೆ ಕೊನೆ ಹಾಡಲು ಅದೇ ಅಂಗಡಿಯಿಂದ ಇನ್ನೊಂದು ಇಂಚುಪಟ್ಟಿ ಖರಿದಿಸಿ ಲಾವಣ್ಯಳಿಗೆ ಕೊಟ್ಟಿದ್ದನ್ನು ಲಕ್ಷ್ಮಿ ಹೇಳಿರಲಿಲ್ಲ. ಮಗ ಅವಿನಾಶನ ಕೈಯಲ್ಲಿ ಅವನ ಇಂಚುಪಟ್ಟಿಯನ್ನು ಕಂಡ ಲಾವಣ್ಯಳಿಗೆ, ಲಕ್ಷ್ಮಿ ಮಾಡಿರಬಹುದಾದ ಕೆಲಸವನ್ನು ಊಹಿಸುವದು ಕಷ್ಟವಾಗಲಿಲ್ಲ. ‘ನಾಳೆ ಲಕ್ಷ್ಮಿಯಲ್ಲಿ ಕ್ಷಮೆ ಕೋರಬೇಕು’ ಎಂದು ಮನಸ್ಸಿನಲ್ಲೇ ಎಣಿಸಿದ ಲಾವಣ್ಯ ಕಣ್ಣಿನಿಂದ ಉದುರುವ ನೀರನ್ನು ಒರಸಿಕೊಂಡಳು.
ಇಲ್ಲಮ್ಮಾ ನಿಮ್ಮ ಅಮ್ಮನಂಥ ಮುತ್ತು ನನ್ನ ಜೀವನದಲ್ಲಿರುವಾಗ ಬೇರೆ ಹುಡುಗಿ ಬಗ್ಗೆ ಯೋಚಿಸುವುದೂ ದೊಡ್ಡ ಪಾಪ. ಆ ದೇವರು ನಿಮ್ಮಮ್ಮನನ್ನು ನಮ್ಮ ಪಾಲಿಗೆ ಬಿಟ್ಟುಕೊಟ್ಟು ಅವಳ ಮೌಲ್ಯ ತೋರಿಸಿಕೊಟ್ಟಿದ್ದಾರೆ ಅವಳು ನಮಗಾಗಿ ಅವಳ ಜೀವವನ್ನೇ ಮುಡಿಪಾಗಿಟ್ಟಳು. ಈಗ ನಮ್ಮ ಬಾರಿ. ನಮ್ಮ ಈ ಪ್ರೀತಿಯ ಕುಟುಂಬದ ಮೇಲೆ ಯಾರ ಕೆಟ್ಟ ದೃಷ್ಟಿ ಬೀಳದಿರಲಿ ದೇವರೇ” ಸುಧಾಕರ್ ನಮ್ಮೆಲ್ಲರನ್ನು ತನ್ನ ಬಿಗಿಯಪ್ಪುಗೆಯಲ್ಲ ಅಡಗಿಸಿದರು
ಕೆಲವೊಮ್ಮೆ ಅವರ ಅಮೇರಿಕಾ ಮಾತು ಪುನರಾವರ್ತನೆಯಾಗುತ್ತಿತ್ತು ಮತ್ತು ವಿಪರೀತವಾಗುತ್ತಿತ್ತು. ಸುತ್ತಲೂ ಇದ್ದವರಿಗೆ ಬೇಸರ ತಂದಿದ್ದರೂ ಆಶ್ಚರ್ಯವಿಲ್ಲ.
ಮನೆ ಎದುರಿನ ಚಚ್ಚೌಕದ ಜಾಗದಲಿ ಕೆಂಪು ಬಣ್ಣ ಮೆತ್ತಿದ ಸಿಮೆಂಟಿನ ಕಟ್ಟೆಯ ಮೇಲೆ ಕುಳಿತು, ದೊಡ್ಡದಾದ ಕಂಬಕ್ಕೆ ವಾಲಿಕೊಂಡು, ಕತ್ತನ್ನು ಎತ್ತೆತ್ತಿ,ಅತ್ತಿತ್ತ ನೋಡುತ್ತ,ಬಿಟ್ಟ ಹೂಗಳ ಲೆಕ್ಕ ಹಾಕುತ್ತಿದ್ದಳು
ನಮ್ಮದಾರಿ ಬರಿ ಚಂದ್ರನ ವರೆಗೆ Read Post »
ಕಥೆ ತಟ್ಟಿದ ತಾಳ ಎಂ. ಆರ್. ಅನಸೂಯ ಮಂಜು, ಟೀ ಮಾಡ್ತೀಯಾ” ಎಂದು ಸುರೇಶ್ ಕೂಗಿ ಹೇಳಿದಾಗ ಅಡುಗೆಮನೆಯಲ್ಲಿ ಮಗುವಿಗೆ ಕುಡಿಸಲು ಹಾಲು ಬಿಸಿ ಮಾಡುತ್ತಿದ್ದ ಮಂಜುಳ ಅವನಿಗೆ ಉತ್ತರ ಕೊಡದೆ ಟೀಗಿಡುತ್ತಲೇ ಇದಕ್ಕೆಲ್ಲಾ ಏನು. ಕಡಿಮೆಯಿಲ್ಲ ಎಂದು ಮನದಲ್ಲಿಯೆ ಗೊಣಗಿದಳು. ಟೀ ಕೊಡಲು ಬಂದಾಗ ಬಂದವರು ” ನಮಸ್ಕಾರ” ಎಂದರು. ಇವಳು ಪ್ರತಿ ನಮಸ್ಕರಿಸಿದಳು. ಆ ಅತಿಥಿ ಸುಮಾರು ಇಪ್ಪತ್ತೈದು ವರ್ಷದ ಯುವಕ. ಒಳಬಂದವಳು ಮಗುವಿಗೆ ಹಾಲು ಕುಡಿಸಿ ಮಲಗಿಸುತ್ತಿರುವಾಗ ಸುರೇಶ ಅ ಯುವಕನಿಗೆ ಹೇಳುತ್ತಿದ್ದ ಮಾತುಗಳು ಕಿವಿಗೆ ಬಿದ್ದವು. ಯುವಕನಿಗೆ ಕೆಲಸ ಕೊಡಿಸುವ ವಿಚಾರವೆಂದು ತಿಳಿಯಿತು.”ಕೆಲಸಕ್ಕೆ ಸಂಬಂಧಿಸಿದಂತೆ ನೀವು ಸ್ವಲ್ಪ ದುಡ್ಡು ಖರ್ಚು ಮಾಡಲು ರೆಡಿಯಿರಬೇಕು. ಎಷ್ಟು ಬೇಕಾಗುತ್ತೆ ಅಂತ ಸ್ವಲ್ಪ ದಿನ ಬಿಟ್ಟು ಹೇಳ್ತೀನಿ. ಒಳ್ಳೇ ಪರ್ಸೆಂಟೇಜ್ ಇದ್ದರೂ ದುಡ್ಡು ಕೊಡದು ತಪ್ಪಲ್ಲಾ. ನೋಡೋಣ ಪ್ರಯತ್ನ ಮಾಡೋಣ” ಎಂದೆಲ್ಲಾ ಹೇಳಿ ಕಳುಹಿಸಿದ. ಇದ್ಯಾವುದೊ ಹೊಸ ಮಿಕ ಬಿತ್ತು .ಏನು ಪಾಪ ಮಾಡಿತ್ತೋ ಎಂದುಕೊಳ್ಳುತ್ತಲೇ ರೂಮಿಗೆ ಬಂದು ಮಗುವನ್ನು ಮಲಗಿಸುತ್ತ ಮಲಗಿದ್ದ ಮಂಜುಳನಿಗೆ ಕೇಳಿಸುವಂತೆ ” ಸಿಟ್ಟು ಕಡಿಮೆಯಾಗಿದೆ ಸಧ್ಯ ಟೀ ಮಾಡಿ ನನ್ನ ಮರ್ಯಾದೆ ಉಳಿಸಿದ್ದಕ್ಕೆ ತುಂಬ ಥ್ಯಾಂಕ್ಸ್” ಎಂದು ಅವಳ ತೋಳು ಮುಟ್ಟಿದ. ತಕ್ಷಣವೇ ಮಂಜುಳ ಅವನ ಕೈಯನ್ನು ಒರಟಾಗಿ ದೂಕಿ ಕಣ್ಮುಚ್ಚಿ ಕೊಂಡಳು. ” Ok, no problem” ಎನ್ನುತ್ತ ಪಡಸಾಲೆಗೆ ಹೋಗಿ T. V. ನೋಡುತ್ತಾ ಕುಳಿತೆವು. “ಹೌದು, ನನಗೆ ತಾನೇ ಎಲ್ಲಾ ಪ್ರಾಬ್ಲಮ್”” ಎಂದು ಮನದಲ್ಲೇ ಅಂದು ಕೊಳ್ಳುವಾಗ ಅವಳಿಗರಿವಿಲ್ಲದೆ ಕಣ್ಣಾಲಿಗಳು ತುಂಬಿ ಬಂದವು. ಮಗುವಿನ ಮುಖ ನೋಡುತ್ತಾ ಮೌನವಾಗಿ ಅಳುತ್ತಿದ್ದಳು. ಸುರೇಶ ರೂಮಿಗೆ ಬರುವ ಸದ್ದು ಕೇಳಿ ಕಣ್ಣೊರೆಸಿಕೊಂಡು ಕಣ್ಣು ಮುಚ್ಚಿಕೊಂಡಳು. ಕನ್ನಡಿಯ ಮುಂದೆ ನಿಂತು ತಲೆಬಾಚಿಕೊಂಡು ಮಂಬಾಗಿಲನ್ನೆಳೆದು ಕೊಂಡು ಹೊರಟ ಸದ್ದಾಯಿತು. ಸುರೇಶ ತಾಲ್ಲೂಕು ಕೇಂದ್ರದ ಕೃಷಿ ಇಲಾಖೆಯ ಅಧಿಕಾರಿ ಮಂಜುಳ ಎಂ.ಎಸ್ಸಿ. ಬಿ.ಇಡಿ. ಮುಗಿಸಿದ್ದರೂ ಸಹ ಕೆಲಸ ಮಾಡುವ ಇರಾದೆಯೇನೂ ಇರಲಿಲ್ಲ. ತಂದೆತಾಯಿಗಳಿಗೆ ಮಂಜುಳ ಮತ್ತು ಅವಳ ತಮ್ಮ ಪ್ರಕಾಶ ಇಬ್ಬರೆ ಮಕ್ಕಳು ಮಂಜುಳಾಳ ತಂದೆಯು ಬ್ಯಾಂಕ್ ಮ್ಯಾನೇಜರ್ ಆಗಿದ್ದು ನಿವೃತ್ತರಾಗಿದ್ದರು. ಪ್ರಕಾಶ ಸಾಪ್ಟ್ ವೇರ್ ಇಂಜಿನೀಯರ್ ಆಗಿ ವಿದೇಶಿ ಕಂಪನಿಯಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದ. ಸುರೇಶನ ತಂದೆ ಕೃಷ್ಣಮೂರ್ತಿ ಪ್ರೌಢಶಾಲಾ ಶಿಕ್ಷಕರು, ತಾಯಿ ಸುಶೀಲಾ ಗೃಹಿಣಿ. ವೃತ್ತಿಯ ಜೊತೆಗೆ ಪಾಲಿಗೆ ಬಂದಿದ್ದ ಐದು ಎಕರೆ ತೆಂಗಿನ ತೋಟದ ಆದಾಯವೂ ಇತ್ತು. ಎಲ್ಲವೂ ಸೇರಿ ಸಾಕಷ್ಟು ಅನುಕೂಲವಾಗಿದ್ದರು. ಅವರ ಮಗಳು ಹೇಮ ಸರ್ಕಾರಿ ಪ.ಪೂರ್ವ ಕಾಲೇಜು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಳು. ಮಗನಾದ ಸುರೇಶ ಕೃಷಿ ಇಲಾಖೆಯ ಅಧಿಕಾರಿ. ಮಂಜುಳ ಮತ್ತು ಸುರೇಶರ ಮದುವೆಯಾಗಿ ಎರಡು ವರ್ಷದೊಳಗಾಗಿ ಅವರಿಬ್ಬರ ದಾಂಪತ್ಯದ ಫಲವಾಗಿ “ಸಿರಿ” ಹುಟ್ಟಿದಳು. ಬಾಣಂತನ ಮುಗಿಸಿ ಮಂಜುಳ ಬಂದು ಸ್ಪಲ್ಪ ದಿನಗಳು ಕಳೆದಾದ ನಂತರ ಸುರೇಶನ ನಿಜವಾದ ಬಣ್ಣ ಅರಿವಿಗೆ ಬಂದಿತ್ತು. ಮನೆಯ ಸಣ್ಣ ಪುಟ್ಟದ್ದಕ್ಕೆಲ್ಲ ಸಿಡುಕು, ಜಗಳ ಕೂಗಾಟಗಳು ಸಾಮಾನ್ಯವಾಗಿ ಬಿಟ್ಟಿದ್ದು ವಾದವಿವಾದ ಗಳು ಬೆಳೆದು ಜಗಳದಲ್ಲಿ ಅಂತ್ಯಗೊಳ್ಳುತ್ತಿದ್ದವು. ಗಂಡ ಹೆಂಡತಿ ಜಗಳವು ಉಂಡು ಮಲಗುವ ತನಕ ಎಂಬಂತೆ ಜಗಳಗಳು ದೀರ್ಘ ಕಾಲದ ತನಕ ಎಳೆಯುತ್ತಿರಲಿಲ್ಲ. ಆದರೂ ಕೆಲವೊಮ್ಮೆ ಅವನ ಮಾತಿನ ಒರಟುತನ, ಕೆಟ್ಟ ಬೈಗುಳಗಳಿಂದಾಗಿ ಮಂಜುಳ ಮಾನಸಿಕವಾಗಿ ನೊಂದು ಬಿಟ್ಟಿದ್ದಳು. ಒಮ್ಮೊಮ್ಮೆ ಅವನ ವರ್ತನೆ ಒಗಟಿನಂತೆಯೆ ಭಾಸವಾಗಿ ಅರ್ಥವಾಗಲು ಕಷ್ಟವಾಗುತ್ತಿತ್ತು. ಅಂದು ಭಾನುವಾರ. ಅವನಿಗಿಷ್ಟದ ಚಿಕನ್ ಬಿರೀಯಾನಿ ಮತ್ತು ಫ್ರೈ ಮಾಡಲು ಚಿಕನ್ ತಂದುಕೊಟ್ಟು ಮಗಳೊಡನೆ ಆಟ ಆಡುತ್ತ ಟಿ.ವಿ. ನೋಡುತ್ತ ಕುಳಿತಿದ್ದ. ಮಂಜುಳ ಅಡುಗೆ ಮಾಡುತ್ತಿದ್ದಳು. ಇದ್ದಕ್ಕಿದ್ದ ಹಾಗೆ ಅಡುಗೆ ಮನೆಗೆ ಬಂದ ಸುರೇಶ ” ಮಂಜು, ನನ್ನ ಫ್ರೆಂಡ್ಸನ ಮೀಟ್ ಮಾಡಿ ಬೇಗ ಬರ್ತಿನಿ. ಒಂದರ್ಧ ಗಂಟೆ ಅಷ್ಟೆ.ಬಂದು ಬಿಡ್ತೀನಿ” ಎಂದ. ” ಏನಂಥಾ ಅರ್ಜೆಂಟ್ ನಾಳೆ ಮೀಟ್ ಮಾಡಿದ್ದಾಯ್ತು ಬಿಡ್ರಿ” ಎಂದು ಮಂಜುಳ ಹೇಳಿದಳು. ” ಇಲ್ಲ ಕಣೆ. ಬೇಗ ಬಂದು ಬಿಡ್ತೀನಿ. ಅಡುಗೆ ಮಾಡಿ ಮುಗಿಸಿರು .ಬಂದ ತಕ್ಷಣ ಊಟ ಮಾಡೋಣ” ಎನ್ನುತ್ತಾ ಹೊರಟೇ ಬಿಟ್ಟ. ಮಾಡಿದ ಅಡುಗೆಯನ್ನೆಲ್ಲಾ ಡೈನಿಂಗ್ ಟೇಬಲ್ ಮೇಲೆ ಜೋಡಿಸಿಟ್ಟು ಸುರೇಶನಿಗಾಗಿ ಕಾಯುತ್ತ ಕುಳಿತಳು. ಸುರೇಶನ ಮೊಬೈಲ್ ಗೆ ಫೋನ್ ಮಾಡಿದರೆ ನಾಟ್ ರೀಚಬಲ್. ಸಿಟ್ಟು ಬಂದು ಕುಕ್ಕಿದಳು ಮಗುವಿಗೆ ಊಟ ಮಾಡಿಸಿ ಮಲಗಿಸಿದಳು. ಈಗ ಸುರೇಶನ ಮೊಬೈಲ್ ಗೆ ಫೋನ್ ಮಾಡಿದರೆ ಸ್ವಿಚ್ಡ್ ಆಫ್. ಎಲ್ಲಿಲ್ಲದ ಸಿಟ್ಟು ಉಕ್ಕಿ ಬಂತು. ಹೊಟ್ಟೆ ಹಸಿಯುತ್ತಿದ್ದರೂ ಇಬ್ರು ಜೊತೆಯಲ್ಲಿ ಮಾಡೋಣವೆಂದು ಸುಮ್ಮನಾದಳು. ಗಂಟೆ ಐದಾದರು ಸುರೇಶನ ಸುಳಿವಿಲ್ಲ. ಫೋನ್ ಸ್ವಿಚ್ಡ್ ಆಫ್ ಮನದಲ್ಲಿ ಏನೇನೋ ಕೆಟ್ಟ ಯೋಚನೆಗಳು ಬರತೊಡಗಿ ಯಾಕೋ ಭಯದಿಂದ ದಿಕ್ಕು ತೋಚದಂತಾಯಿತು. ಅಮ್ಮನಿಗೆ ಫೋನ್ ಮಾಡಿ ಹೇಳೋಣ ಎಂಬ ಯೋಚನೆ ಬಂದ ಬೆನ್ನಲ್ಲೇ ಅವರು ಗಾಬರಿಯಾಗುತ್ತಾರೆಂದು ಬೇಡವೆನಿಸಿ ಸುಮ್ಮನಾದಳು.ಆದರೂ ಮನಸ್ಸು ತಡೆಯದೆ ನಾದಿನಿ ಹೇಮಾಗೆ ಫೋನ್ ಮಾಡಿ ವಿಷಯವನ್ನು ಹೇಳುತ್ತಲೇ ಅಳಲು ಶುರುಮಾಡಿದಳು. ಆಗ ಫೋನ್ ಕೈಗೆತ್ತಿಕೊಂಡ ಅವಳ ಮಾವ “ನಾವು ಈಗಲೇ ಹೊರಟು ಬರುತ್ತೇವೆ. ಧೈರ್ಯವಾಗಿರು ಗಾಬರಿಯಾಗಬೇಡಮ್ಮ” ಎನ್ನುತ್ತಾ ಅವಳ ಅತ್ತೆಯ ಕೈಗೆ ಫೋನ್ ಕೊಟ್ಟರು. ಅತ್ತೆಯೂ ಸಮಾಧಾನ ಹೇಳಿದರು. ಮನಸ್ಸಿಗೆ ಒಂದಿಷ್ಟು ನಿರಾಳ ಅನಿಸಿದಾಗ ಹೊಟ್ಟೆ ಚುರುಗುಟ್ಟ ತೊಡಗಿತು. ಊಟ ಮಾಡಲು ಮನಸ್ಸಾಗದೆ ಟೀ ಕುಡಿದಳು. ತೊಡೆ ಮೇಲೆ ಮಗುವನ್ನು ಮಲಗಿಸುತ್ತ ಕೂತಿದ್ದಳು. ಒಂಭತ್ತು ಗಂಟೆ ಸುಮಾರಿಗೆ ತುಮಕೂರಿನಿಂದ ಅತ್ತೆ ಮಾವ ನಾದಿನಿಯು ಬಂದರು. ಅತ್ತೆ ಒಳಗೆ ಬಂದ ತಕ್ಷಣವೆ ಮಂಜುಳನಿಗೆ ಬಲವಂತ ಮಾಡಿ ಊಟ ತಂದು ಕೊಟ್ಟರು. ಅವಳು ಮಾತ್ರ ಒಂದಿಷ್ಟು ಮೊಸರನ್ನ ಮಾತ್ರ ಕಲೆಸಿ ತಿಂದಳು ಹೇಮಾ ಮಗುವಿನೊಡನೆ ಆಟವಾಡುತ್ತ ಕುಳಿತುಬಿಟ್ಟಳು “ಅಲ್ಲಾ ಚಿಕನ್ ತಂದುಕೊಟ್ಟು ಅಡುಗೆಮಾಡು ಅರ್ಧ ಗಂಟೆಯೊಳಗೆ ಬರ್ತಿನಿ ಅಂತ ಹೇಳಿಹೋದವನು ರಾತ್ರಿ ಒಂಭತ್ತು ಗಂಟೆ ಆದ್ರೂ ಬರಲಿಲ್ಲ ಅಂದ್ರೆ ಏನರ್ಥ? ಆ ಹುಡುಗಿ ಏನು ತಿಳ್ಕಬೇಕು. ಯಾಕಿಂಗಾಗ್ಬಿಟ್ಟ ಸುರೇಶ” ಎಂದು ಅಲವತ್ತುಕೊಂಡರು. “ನಿಮ್ಮಪ್ಪ ನಿಮ್ಮಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸಿದಿಯೇನಮ್ಮ” ಎಂದು ಮಾವನವರು ಕೇಳಿದಾಗ ಮಂಜುಳ “ಇಲ್ಲ” ಎಂದಳು. “ಈಗ ನಾವು ಬಂದಿದೀವಲ್ವ. ಬೆಳಿಗ್ಗೆ ತನಕ ನೋಡೋಣ” ಎಂದು ಮಾವನವರು ಹೇಳಿದಾಗ ” ಎಲ್ಲರಿಗು ತಾಕಲಾಟ ತಂದಿಟ್ಟು ಎಲ್ಲೋಗಿದ್ದಾನಪ್ಪ ಇವನು” ಎಂದು ಅತ್ತೆಯು ಹೇಳುವಷ್ಟರಲ್ಲಿ ಬಾಗಿಲು ತಟ್ಟಿದ ಶಬ್ದ. ಅರೆಕ್ಷಣ ನಿಶ್ಯಬ್ಧ. ” ಮಂಜು, ಮಂಜು” ಎಂಬ ಸುರೇಶನ ಧ್ವನಿ ಕೇಳಿದ ಕ್ಷಣ ಮಂಜುಳ ಧಡಕ್ಕನೆದ್ದು ಬಾಗಿಲು ತೆಗೆದಳು. ಒಳಗೆ ಬಂದ ಸುರೇಶ ಅಪ್ಪ ಅಮ್ಮ ತಂಗಿಯನ್ನು ನೋಡಿ ಅವಾಕ್ಕಾಗಿ ನಿಂತು ” ಏನಮ್ಮಾ ಇದ್ದಕ್ಕಿದ್ದಂತೆ ಬಂದು ಬಿಟ್ರಿ” ಎಂದಾಗ “ಬರೋ ಹಾಗೆ ಮಾಡಿದ್ದು ನೀನೇ. ಬರಲೇ ಬೇಕಾಯ್ತು” ಎಂದರು ಸುಶೀಲಮ್ಮ.” ನಾನೇನು ಮಾಡಿದೆಅಂಥಾದ್ದು” ಎಂದು ಸುರೇಶ್ ಹೇಳಿದಾಗ “ಅರ್ಧಗಂಟೆ ಒಳಗೆ ಬಂದು ಬಿಡ್ತೀನಿ ಅಂತ ಹೋದವನು ರಾತ್ರಿ ಹತ್ತು ಗಂಟೆ ಆದ್ರು ಬರದಿದ್ರೆ ಆ ಹುಡುಗಿ ಏನು ತಿಳ್ಕಬೇಕು. ಗಾಬರಿ ಆಗ್ಬಿಟ್ಟು ನಮಗೆ ಫೋನ್ ಮಾಡಿದಳು. ನಮಗೂ ಗಾಬರಿಯಾಗಿ ಬಂದ್ಬಿಟ್ಟವಪ್ಪ. ಎಲ್ಲೋಗಿದ್ದೆ ಇಷ್ಟು ಹೊತ್ತು. ರಾತ್ರಿ ಹತ್ತು ಗಂಟೆ ಆದ್ರೂ ಬರದೇ ಇರೋ ಅಂಥಾ ಕೆಲಸ ಏನಿತ್ತಪ್ಪ? ನೀನ್ಯಾಕೊ ಹಿಂಗಾದೆ ? ನಿನಗೆ ಹೇಳೋರು ಕೇಳೋರು ಯಾರು ಇಲ್ಲ ಅಂದುಕೊಂಡ್ಯಾ? ಎಂದು ಜೋರುಧ್ವನಿ ಮಾಡಿ ಕೃಷ್ಣಮೂರ್ತಿ ಕೇಳಿ “ನಮಗೆ ಫೋನ್ ಮಾಡೋ ಬದ್ಲು ಅವಳು ಅವರಪ್ಪ ಅಮ್ಮನಿಗೆ ಫೋನ್ ಮಾಡಿದ್ರೆ ಏನಾಗ್ತಿತ್ತು ಅಂತ ಯೋಚನೆ ಮಾಡು” ಎನ್ನಲು ” ಫ್ರೆಂಡ್ಸ್ ಬಹಳ ಬಲವಂತ ಮಾಡಿದ್ರು. ಎಲ್ಲರೂ ನಂದಿಹಿಲ್ಸ್ ಗೆ ಹೋಗಿದ್ವಿ ಅಷ್ಟಕ್ಕೆಲ್ಲ ಇಷ್ಟು ರಾದ್ದಾಂತ ಬೇಕಿತ್ತ ಫೋನ್ ಮಾಡಿ ಕರೆಸಿಕೊಳ್ಳ ಅಂಥಾದ್ದು ಏನಾಯ್ತು ” ಎನ್ನುತ್ತ ಸುರೇಶ ಮಂಜುಳ ಕಡೆ ನೋಡುತ್ತ ಹೇಳಿದಾಗ ರೇಗಿದ ವೆಂಕಟೇಶ್ “ಆ ಹುಡುಗಿಗೆ ಒಂದು ಫೋನ್ ಮಾಡಿದ್ರೆ ಅವಳ್ಯಾಕೆ ಗಾಬರಿ ಆಗ್ತಿದ್ದಳು. ಒಂದು ಮೆಸೇಜ್ ಹಾಕಕ್ಕೆ ಏನಾಗಿತ್ತು? ಫೋನ್ ಸ್ವಿಚ್ ಆಫ್ ಮಾಡ್ಕಂಡ್ರೆ ಏನರ್ಥ?” ನಾವ್ ಬರೋ ತನ್ಕ ಊಟಾನೂ ಮಾಡ್ದೆ ಕಾದುಕೊಂಡು ಕೂತಿದ್ದಳು. ಅದರ ಪರಿಜ್ಞಾನ ಇದ್ಯಾ”ಎಂದಾಗ ಮರು ಮಾತನಾಡದೆ ರೂಮಿಗೆ ಹೋದನು.”ಅಣ್ಣಾ, ಬಾರೋ ಊಟಕ್ಕೆ “ಎಂದು ಕರೆಯಲು ಬಂದಾಗ” ನಂದು ಊಟ ಆಗಿದೆ. ನೀವು ಮಾಡ್ರಿ” ಎಂದು ಹೇಳಿ ಮಲಗಿದನು. ಆ ರಾತ್ರಿ ಗಂಡ ಹೆಂಡತಿಯ ನಡುವೆ ಮೌನ ರಾಜ್ಯವಾಳಿತ್ತು. ಹೇಮಾಳಿಗೆ ರಜೆಗಳು ಹೆಚ್ಚಿಲ್ಲವೆಂದು ಮಾರನೆಯ ದಿನ ತಿಂಡಿ ತಿಂದು ಹೊರಟರು. ಹೊರಡುವಾಗ ಕೃಷ್ಣಮೂರ್ತಿ ಮಗನಿಗೆ ಕಿವಿಮಾತುಗಳನ್ನು ಹೇಳಿದರು. ಮತ್ತೊಮ್ಮೆ ಇಂಥ ಘಟನೆಗಳು ಮರುಕಳಿಸಬಾರದೆಂದು ತಾಕೀತು ಮಾಡಿದ್ರು. ಅಂದು ಸಂಜೆ ಆಫೀಸಿನಿಂದ ಬಂದ ಸುರೇಶ ಹೆಂಡತಿ ಹಾಗು ಮಗುವನ್ನು ಹೊರಗಡೆ ಊಟಕ್ಕೆ ಕರೆದು ಕೊಂಡು ಹೋದ. ಸಿಡುಕು, ಕೂಗಾಟ ಕಡಿಮೆಯಾಗುತ್ತ ಬಂದಿದ್ದು ಮಂಜುವಿಗೆ ನೆಮ್ಮದಿ ತಂದಿತು. ಆಫೀಸ್ ಗೂ ಮನೆಗೂ ಬಹು ದೂರವಿದ್ದ ಕಾರಣ ಆಫೀಸ್ ಹತ್ತಿರವೇ ಮನೆ ಮಾಡುವ ಯೋಚನೆಯಿತ್ತು ಇಬ್ಬರಿಗೂ. ಎರಡು ಬೆಡ್ ರೂಂ ಹೊಂದಿರುವ ಹೊಸ ಮನೆಯೊಂದು ಖಾಲಿ ಇದೆಯೆಂದು ತಿಳಿದು ಮನೆ ನೋಡಿಕೊಂಡು ಬರೋಣ ಬಾ ಎಂದು ಮಂಜುವನ್ನು ಜೊತೆಯಲ್ಲೇ ಕರೆದೊಯ್ದ. ಪಕ್ಕದಲ್ಲೇ ಹೊಂದಿಕೊಂಡಿದ್ದ ಎರಡು ಮನೆಗಳು ಹೊಸ ರೀತಿಯ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು ಇಬ್ಬರಿಗೂ ಇಷ್ಟವಾಯಿತು. ಪಕ್ಕದ ಮನೆಯವರು ಊರಿಗೆ ಹೋದ ಕಾರಣ ಬೀಗ ಹಾಕಿತ್ತು. ಅಲ್ಲಿಂದಲೇ ಮನೆ ಮಾಲೀಕರಿಗೆ ಫೋನ್ ಮಾಡಿ ಸುರೇಶ ನಾಳೆಯೆ ಮುಂಗಡ ಹಣವನ್ನು ಕೊಡುವುದಾಗಿ ತಿಳಿಸಿದ. ಮಗು ಇರುವುದರಿಂದ ಹೊಸ ಮನೆಗೆ ಸಾಮಾನುಗಳನ್ನು ಜೋಡಿಸಲು ಕಷ್ಟವಾಗುತ್ತೆ ಎಂದು ಸುಶೀಲಮ್ಮ ಹಿಂದಿನ ದಿನವೇ ಬಂದರು. ಎಲ್ಲಾ ಹೊಂದಿಸಿ ಎರಡು ದಿನ ಕಳೆಯುವಷ್ಟರಲ್ಲಿ ಪಕ್ಕದ ಮನೆ ಒಡತಿಯು ಇಬ್ಬರು ಮಕ್ಕಳೊಡನೆ ತಾವಾಗಿಯೆ ಬಂದು ತನ್ನ ಹೆಸರು ಲತಾ ಎಂದು ರಕ್ಷಿತ ಮತ್ತು ರಾಘವೇಂದ್ರ ಮಕ್ಕಳೆಂದು ತಮ್ಮ ಪರಿಚಯ ಮಾಡಿಕೊಂಡು ಅವಳ ಪತಿ ಬ್ಯಾಂಕ್ ಮ್ಯಾನೇಜರ್ ಎಂದು ತಿಳಿಸಿದರು. ಆಗ ಅಲ್ಲೆ ಇದ್ದ ರಕ್ಷಿತ ” ಆಂಟೀ ನನಗೆ ನಿಮ್ಮ ಹೆಸರು ಗೊತ್ತು” ಎಂದಳು. “ಹೌದಾ ಹೇಳು ನೋಡೋಣ” ಮಂಜುಳ ಹೇಳಿದಾಗ ” ನಿಮ್ಮ ಹೆಸರು ವಿಜಯಾ ಅಲ್ವಾ” ಎಂದಳು. ” ನನ್ನ ಹೆಸರು ಮಂಜುಳ. ನಿನಗೆ ವಿಜಯಾ ಅಂತ ಹೇಗೆ ಗೊತ್ತಾಯ್ತು”ಎಂದಳು. ” ಅವತ್ತು ಮನೆ ಖಾಲಿಯಿತ್ತಲ್ಲ ಅವಾಗ ಅಂಕಲ್ ಜೊತೆ ನೀವು ಬಂದಿದ್ದಾಗ ಅಂಕಲ್ ವಿಜಯಾ ಅಂತ ಹೇಳ್ತಿದ್ದರು” ಎಂದರು. ತಕ್ಷಣವೇ ಲತಾ “ಇವರಲ್ಲ ಕಣೆ ಬೇರೆಯವ್ರು ” ಎಂದು ಹೇಳಿ ಮಕ್ಕಳನ್ನು ಮನೆಗೆ ಕಳಿಸಿದಳು. ಮಂಜುಳ “ನಾವು ಮನೆ ನೋಡಲು ಬಂದಾಗ ನೀವಿರಲಿಲ್ಲ” ಎಂದಾಗ ಲತ ಅವರೆಲ್ಲ ಅವಳ ತವರು ಮನೆ ದಾವಣಗೆರೆಗೆ ಹೋಗಿದ್ದರು ಎಂದು ಹೇಳಿ ಮನೆಗೆ ಹೊರಟಳು. ಎರಡು ದಿನ ಕಳೆದ ಮೇಲೆ ಸುಶೀಲ ಊರಿಗೆ ಹೊರಟರು. ಉಳಿದ ಕೆಲಸಗಳನ್ನು ಮುಗಿಸುವ ಕಾರ್ಯದಲ್ಲಿ ಸುರೇಶ ಸಹ ಹೆಂಡತಿಗೆ ನೆರವು ನೀಡಿದನು ಹೊಸ ಪರಿಸರದಲ್ಲಿ ತನ್ನ ಗಂಡನ ವರ್ತನೆಯಲ್ಲಾಗುತ್ತಿದ್ದ ಬದಲಾವಣೆ ನೋಡಿ ಮಂಜುಳನಿಗೆ ನಿರಾಳ.
ಕಥೆ ಎಲ್ಲಿದ್ದೇನೆ? ಬಿ ಎನ್ ಭರತ್ ಮಲಗಿಕೊಂಡು ಇರುವಾಗ ಮನೆಯಿಂದ ತಂದು ಕೊಟ್ಟಿದ್ದ ಮೆಚೂರ್ ಆದ ಎನ್ ಎಸ್ ಸಿ ನೆನಪಾಯಿತು.ಎದ್ದು ಕುಳಿತು ಪೆನ್ನಿಗಾಗಿ ತಡಕಾಗಿ ಸಹಿ ಮಾಡಿ ಎತ್ತಿಟ್ಟೆ. ಆಸ್ಪತ್ರೆಯ ಬಿಲ್ಲು ಕಟ್ಲಿಕ್ಕೆ ಎಷ್ಟು ದುಡ್ದಿದ್ರೂ ಸಾಕಾಗ್ಲಿಕ್ಕಿಲ್ಲ. ಮಂಪರು ಬಂದ ಹಾಗೆ ಆಯಿತು. ” ಪೋಸ್ಟ್ ಮಾಷ್ಟ್ರು ಇಲ್ಲವಾ ” ವಿಟ್ಲ ಬಸ್ ಸ್ಟಾಂಡ್ ನ ಎದುರಿನ ಕಟ್ಟಡದ ಮಾಳಿಗೆಯಲ್ಲಿ ಹೋಗಿ ಕೇಳಿದೆ. ಅಲ್ಲಿದ್ದವನು ಒಂಥರಾದಲ್ಲಿ ನನ್ನನ್ನೇ ನೋಡಿದ ” . ಕಾರಂತರು ರಜೆಯಲ್ಲಿದ್ದಾರಾ ” ಮತ್ತೆ ಕೇಳಿದೆ. ” ಬಟ್ಟೆಯಂಗಡಿಗೆ ಬಂದು ಇವನದ್ದೆಂತ? ಪೋಸ್ಟ್ ಅಂತೆ! ಪೆಟ್ಟು ಕಮ್ಮಿಯಾ ಅಂತ ” ಅಲ್ಲಿಯವನು ಇನ್ನೊಬ್ಬನೊಟ್ಟಿಗೆ ಮಕ್ಕಾರು ಮಾಡಿದ. ಮನೆಗೆ ಬಂದು ಅಪ್ಪ ಹೇಳಿದ್ದನ್ನು ಪೋಸ್ಟ್ ಮಾಷ್ಟ್ರನ್ನೇ ಕೇಳುವ ಅಂತ ನೋಡಿದ್ರೆ ಇದೆಂತ ಹೀಗೆ? ಪಾಪ ರಿಟೈರ್ ಮೆಂಟ್ ದುಡ್ಡಲ್ಲಿ ಸ್ವಲ್ಪ ದೊಡ್ಡ ಅಮೌಂಟನ್ನೇ ಎನ್ ಎಸ್ ಸಿ ಯಲ್ಲಿ ಹಾಕಿದ್ರು. ಇರುವ ಆರೇಳು ಸ್ಟಾಫ್ ಗೆ ಚಾ ತರ್ಲಿಕ್ಕೆ ಹೇಳಿದ್ರಂತೆ ಅಪ್ಪ. ಅಲ್ಲಿರುವ ಪಿಯೋನ್ ಮಹಾಶಯ ಹೋಗಿ ಮಾಲ್ಪುರಿ, ಮಸಾಲೆ ದೋಸೆ, ಸ್ಪೆಷಲ್ ಚಾ ವನ್ನೇ ತರಿಸಿದ. ಪಾಪ ರಿಟೈರ್ ಆದ ಅಪ್ಪನಿಗೆ ಎಕ್ಸ್ಟ್ರಾ ಟ್ಯಾಕ್ಸ್ ! ಪೋಸ್ಟ್ ಮಾಷ್ಟ್ರು ಎಲ್ಲ ಫಾರ್ಮ್ ಗಳಲ್ಲಿ ಸೈನ್ ತೆಕ್ಕೊಂಡರಂತೆ. ಅಲ್ಲಿಯ ಸ್ಟಾಫ್ ನಮ್ಮ ನೆರೆಕರೆಯ ಕಾರಂತರು. ಮನೆಯ ಹತ್ರ ಬಂದು ಆಮೇಲೆ ಅಪ್ಪನ ಹತ್ರ ಹೇಳಿದ್ರಂತೆ. ಪೋಸ್ಟ್ ಮಾಷ್ಟ್ರು ಅವರ ಹೆಂಡತಿ ಹೆಸರಲ್ಲಿ ಏಜೆಂಟ್ ಆಗಿ ಸಾವಿರಗಟ್ಲೆ ಎಕ್ಸ್ಟ್ರಾ ಸಂಪಾದನೆ ಮಾಡ್ತಾರಂತೆ. ” ಕಮಿಷನ್ ನಲ್ಲಿ ನಿಮಿಗೂ ಶೇರ್ ಕೊಡ್ಬೇಕಿತ್ತು ” ಅಂತ ಕಾರಂತರು ಅಪ್ಪನ ಹತ್ರ ಹೇಳಿದ ಮೇಲೆ ಅಪ್ಪನಿಗೂ ಛೇ ಅಂತ ಚಪ್ಪೆ ಆಯ್ತಂತೆ. ಹೋಗಿ ಆ ಬಗ್ಗೆ ವಿಚಾರಿಸುವ ಅಂತ ಮಾಡಿದ್ರೆ ಅಲ್ಲಿದ್ದವನು ಎಂತ ಹಾಗೆ ಪೆದಂಬು ಮಾತಾಡುದು. ” ಬಾಕಿಮಾರು ಗೆದ್ದೆಲಿ ಇಂದು ಎಂತ ಆಟ ಹೇಳಿ ಕೇಳಿಗೊಂಡು ಬಾ ” ಅಂತ ಅಮ್ಮ ಹೇಳಿದ್ದು ನೆನಪಾಗಿ ಅಲ್ಲಿ ಪೇಪರ್ ಅಂಗಡಿಯ ಅಜ್ಜನ ಹತ್ರ ಕೇಳಿದಾಗ ದಪ್ಪ ಕನ್ನಡಕ ಸರಿ ಮಾಡಿ ” ಅಲ್ಲಿ ಗದ್ದೆ ಎಲ್ಲಿ ಉಂಟು ಈಗ? ಗವರ್ನಮೆಂಟ್ ಬಸ್ ಸ್ಟಾಂಡ್ ಆಗಿಯೇ ಮೂವತ್ತು ವರ್ಷಕ್ಕಿಂತ ಮೇಲೆ ಆಯ್ತಲ್ಲಾ? “ಅಂದ. ” ಆಸ್ಪತ್ರೇಲಿ ಇದ್ದೀಯ ಅಂತ ಗೊತ್ತಾಯಿತು ಅದಕ್ಕೆ ಫೋನ್ ಮಾಡಿದ್ದು ” ಚಡ್ಡಿ ದೋಸ್ತಿ ಹರೀಶ ಫೋನ್ ಮಾಡಿ ” ಈಗ ಅಕ್ಕ ಅಷ್ಟು ಬರೆಯುವುದಿಲ್ಲವಾ ” ಎಂದು ಮಾತು ಮುಂದುವರಿಸಿದ. ನಿಜವಾಗಿಯೂ ಹೌದು ಆಗ ಅಕ್ಕ ಒಬ್ಬಳು ಉದಯೋನ್ಮುಖ ಬರಹಗಾರ್ತಿ. ಮತ್ತೆ ಎಲ್ಲ ಬತ್ತಿಯೇ ಹೋಗಿ ಬಿಟ್ಟಿತು, ಕೆಲವು ಕ್ರಿಕೆಟರ್ ಗಳು ಫಾರ್ಮ್ ಕಳಕೊಳ್ಳುವ ಹಾಗೆ. ಅಕ್ಕ ನವಭಾರತ ತರ್ಲಿಕ್ಕೆ ಹೇಳಿದ್ದು ನೆನಪಾಗಿ ಅವನ ಹತ್ರ ಕೇಳಿದಾಗ ” ಅದೆಲ್ಲಿ ಉಂಟು ಈಗ ” ಅಂತ ಹೇಳಿ ಒ೦ಥರಾದಲ್ಲಿ ನೋಡ್ತಾ ಅವನು ಗಿರಾಕಿಗೆ ಯಾವುದೋ ಮ್ಯಾಗಝೀನ್ ಕೊಟ್ಟ. ನನಗೆ ಹೇಗೆ ಹೇಗೋ ಆಯ್ತು. ತಲೆ ಬುಡ ಅರ್ತ ಆಗದೆ ನಾನು ನಾಕು ಮಾರ್ಗದ ಗೋಡೆಯ ಮೇಲಿದ್ದ ಸಿನಿಮಾ ಪೋಸ್ಟರ್ ನೋಡ್ತಾ ಹಾಗೇ ನಿಂತೆ. ಅಕ್ಕ ನವಭಾರತ ಪೇಪರ್ ತರ್ಲಿಕ್ಕೆ ಯಾಕೆ ಹೇಳಿದ್ದು ಮತ್ತೆ? ಕಳೆದ ವಾರ ಅಕ್ಕ ಬರ್ದ ಕಥೆ ಮ್ಯಾಗಝೀನ್ ವಿಭಾಗದಲ್ಲಿ ಪ್ರಕಟ ಆಗಿತ್ತು. ಅದಕ್ಕೆ ಓದುಗರ ಪ್ರತಿಕ್ರಿಯೆ ಉಂಟಾ ಅಂತ ನೋಡ್ಲಿಕ್ಕೆ ಇರ್ಬಹುದು. . ಬಾಯಿಗೆ ಮಾಸ್ಕ್ ಹಾಕಿಕೊಂಡು ಸ್ಟೆತೋಸ್ಕೋಪ್ ನಿಂದ ನನ್ನ ಎದೆಯಲ್ಲಿ ಬಡಿತ ಚೆಕ್ ಮಾಡಿದ ಬಿಳೀ ಕೋಟ್ ಹಾಕಿದ ಡಾಕ್ಟ್ರು ನಸು ನಗುತ್ತಾ ” ಯು ಹ್ಯಾವ್ ಇಮ್ ಪ್ರೂವ್ಡ್ ಎ ಲಾಟ್ ” ಎನ್ನುತ್ತಾ ಕಾಟ್ ನ ಪ್ಯಾಡ್ ನಲ್ಲಿ ಏನೋ ನೋಟ್ ಮಾಡಿ ಮುಂದಿನ ಬೆಡ್ ಗೆ ಹೋದರು. ಎಂತ ಇಂಪ್ರೂವ್ ಮಣ್ಣಾ೦ಗಟ್ಟಿ! ಆಯಾಸವಾದಂತಾಗಿ ಮತ್ತೆ ಕಣ್ಣು ಮುಚ್ಚಿದೆ. ಯಾರೋ ಕಾಲಿಂಗ್ ಬೆಲ್ ಸದ್ದು ಮಾಡಿದ ಹಾಗೆಯೋ ಮಾರ್ಗದಲ್ಲಿ ಜೋರಾಗಿ ಸೈಕಲ್ ಬೆಲ್ ಕಿಣಿ ಕಿಣಿ ಅಂತ ಬಾರಿಸಿದ ಹಾಗೆಯೋ ಶಬ್ದ ಕೇಳ್ತಾ ಉಂಟಲ್ಲಾ? ಬಸ್ ಸ್ಟಾಂಡ್ ನ ಹತ್ತಿರ ಇದ್ದ ಖಾಲಿ ಜಾಗದಲ್ಲಿ ಸೈಕಲ್ ಬ್ಯಾಲೆನ್ಸ್ ನೋಡ್ಲಿಕ್ಕೆ ಅಂತ ಸುಮಾರು ಹೊತ್ತು ನಿತ್ತುಕೊಂಡೇ ಇದ್ದೆ. ಪಳನಿ ಸ್ವಾಮಿ ಸೈಕಲ್ ನ ಪೆಡಲಲ್ಲಿ ನಿತ್ತುಕೊಂಡೇ ಕೊಡಪಾನ ದಿಂದ ನೀರು ಸುರಿದು ಸ್ನಾನ ಮಾಡುದು, ಹ್ಯಾಂಡಲ್ ಮೇಲೆ ತಿರ್ಗಿ ಕೂತು ಪೆಡಲ್ ತುಳಿಯುವುದು ಇದೆಲ್ಲ ನೋಡ್ಲಿಕ್ಕೆ ಎಷ್ಟು ಚಂದ! ” ಮಕ್ಕಳೆಲ್ಲ ಜೋ …..ರಾ… ಗಿ ಚಪ್ಪಾಳೆ ಹೊಡೀರಿ ” ಅಂತ ಅವನು ಹೇಳುದನ್ನೇ ನಾವೆಲ್ಲ ಕಾಯ್ತಿದ್ದೆವು. ಒಂದು ವಾರ ಅವನು ಸೈಕಲ್ ನಿಂದ ಕೆಳಗೆ ಇಳೀಲಿಕ್ಕೆ ಇಲ್ಲ ಅಂತೆ. ರಾತ್ರಿ ಮಲಗ್ಲಿಕ್ಕೆ ಎಂತ ಮಾಡ್ತಾನೆ ಅಂತ. ಮತ್ತೆ ಒಂದು ಎರಡು ಎಲ್ಲಾ ಹೇಗೆ ಅಂತ? ಶೆ! ಎಂಥ ಅವಸ್ಥೆ! ” ನೀವು ಇನ್ನೂ ಮಾತ್ರೆ ತಿನ್ಲಿಲ್ವಾ , ಎಷ್ಟು ಸಲ ಹೇಳುದು ನಿಮಗೆ ” ಬಿಳೀ ಡ್ರೆಸ್ ನಲ್ಲಿದ್ದವಳು ಜೋರು ಮಾಡಿದಾಗ ” ಈವತ್ತು ಸೈಕಲ್ ಬ್ಯಾಲೆನ್ಸ್ ಇಲ್ವಾ ? ” ಅಂತ ಕೇಳಿದೆ. ಅದಕ್ಕವಳು ” ಸೈಕಲ್ ಬ್ಯಾಲನ್ಸ್ ಎಂತ ಅದು ” ಅಂತ ಕೇಳುದಾ? ಛೆ! ಪಳನಿ ಸ್ವಾಮಿ ಎಷ್ಟು ಚಂದ ಬ್ಯಾಲೆನ್ಸ್ ಮಾಡುದು. ಕೆಲವು ಸಲ ಸೈಕಲನ್ನು ಬ್ರೇಕ್ ಮತ್ತು ಪೆಡಲ್ ಮೂಲಕ ಬ್ಯಾಲೆನ್ಸ್ ಮಾಡುದು ನೋಡ್ಲಿಕ್ಕೆ ಎಷ್ಟು ಖುಷಿಯಾಗ್ತದೆ , ಇವಳಿಗೆ ಅದೆಲ್ಲಾ ಗೊತ್ತೇ ಇಲ್ವಾ ಅಂತ. ಪಕ್ಕದಲ್ಲಿ ಮಲಗಿದ್ದವರು ಮೊಬೈಲ್ ಫೋನ್ ನೋಡ್ತಾ ಹಾಸಿಗೆಯಿಂದ ಎದ್ದು ಕೂತು ” ಔಟ್ ” ಅಂದ್ರು. ” ತೆಂಡೂಲ್ಕರ್ ಔಟಾ ” ಅಂತ ಆಶ್ಚರ್ಯದಲ್ಲಿ ಕೇಳಿದೆ. ” ತೆಂಡೂಲ್ಕರಾ ? ಪರಬ್ಬನಿಗೆ ಎಂತ ಆಗಿದೆ? ” ಅಂತ ತಲೆ ಮೀಸೆ ಎಲ್ಲ ಬಿಳಿಯಾದವನು ನನಗೆ ಕೇಳುದು ಮಾರಾಯ್ರೆ! ಎಂತದೋ ಜೋರು ಬಚ್ಚುತಾ ಉಂಟು ಆಯ್ತಾ , ಹಾಗೇ ಸ್ವಲ್ಪ ಮಲಗ್ತೇನೆ. ಸಿದ್ದಾಪುರದಲ್ಲಿ ಗ್ರೌಂಡಲ್ಲಿ ದೋಸ್ತಿ ಗಳೊಟ್ಟಿಗೆ ಬ್ಯಾಟ್ ಬಾಲ್ ಆಡಿದ ಮೇಲೆ ಸಾಯಂಕಾಲ ತೆಂಗಿನ ಮರದ ಕಟ್ಟೆಯ ಹೋಟ್ಲಲ್ಲಿ ಒಂದು ಮಸಾಲೆ ದೋಸೆ ತಿಂದು, ರಾಗಿ ಮಾಲ್ಟ್ ಕುಡ್ದು ಇಪ್ಪತ್ತು ಪೈಸೆ ಕೊಟ್ಟೆ. ಕ್ಯಾಷಿಯರ್ ” ಎಲ್ಲಿಂದ ಎಲ್ಲ ಬರ್ತಾರೆ ಈ ಗಿರಾಕಿಗಳು ಅಂತ. ಕೊಡಿ ಮೂವತ್ತು ರೂಪಾಯಿ ” ಜೋರಲ್ಲೇ ಕೇಳಿದ. ” ಶಂಕರ ನಾರಾಯಣ ಜಾತ್ರೆಗೆ ಹೋಗ್ಬೇಕು. ಶಂಕರ ವಿಠ್ಠಲ್ ಬಸ್ಸು ಎಷ್ಟು ಘಂಟೆಗೆ ” ಅಂತ ಕೇಳುವಾಗ ಅವನು ನನ್ನನ್ನೊಮ್ಮೆ ನೋಡಿ “ಶಂಕರ ವಿಠ್ಠಲಾ ಅದು ನಿಂತು ಹೋಗಿ ಮೂವತ್ತು ವರ್ಷ ಆಗಲಿಲ್ಲವಾ? ಈ ಮರ್ಲ ಎಲ್ಲಿಂದ ಬಂದದ್ದು. ಹೋಗ್ತೀಯಾ ಇಲ್ವಾ ? ” ಜೋರು ಮಾಡಿದ. ಜೋರು ಕೂಗುದು ಕೇಳಿಸಿತು. ಪಕ್ಕದ ಬೆಡ್ ನವ, ನಿನ್ನೆ ಕ್ರಿಕೆಟ್ ನೋಡುವಾಗ ನನಗೆ ಮಕ್ಕಾರು ಮಾಡಿದವ, ಎಂತ ಆಯ್ತು ಅವನಿಗೆ ಅಂತ. ನನಗಿಂತ ಸಣ್ಣ ಅಂತ ಇತ್ತು ಅವನಿಗೆ. ಛೆ ಎಂತ! ಅವನ ಮೇಲೆ ಇಡೀ ಬಿಳೀ ಬಟ್ಟೆ ಹಾಕಿದ್ದಾರೆ. ಎಂತ ಆಯ್ತು? ಅವನ ಸುತ್ತಲೂ ಎಲ್ಲರೂ ಕೂಗಿಕೊಂಡು ಇದ್ದಾರೆ. ನೋಡ್ಲಿಕ್ಕೆ ಆಗುದಿಲ್ಲ. ಪಕ್ಕಕ್ಕೆ ಹೊರಳಿ ಮತ್ತೆ ಮಲಗಿದೆ. ಎಂತ ಅದು ಅಷ್ಟು ಉದ್ದ ಕ್ಯೂ? ನೋಟ್ ಎಕ್ಸ್ಚೇಂಜ್ ಮಾಡ್ಲಿಕ್ಕಾ? ಮನೆಯಲ್ಲಿರುವ ಎಲ್ಲ ಐನೂರು ರೂಪಾಯಿ ಬೇಗ ತರುದು ಒಳ್ಳೇದಾ ಅಂತ. ಬೇಗ ಬೇಗ ಮನೆ ಸಾಮಾನೂ ತರ್ಬೇಕು ಮತ್ತೆ ಲಾಕ್ ಡೌನ್ ಆದರೆ ಕಷ್ಟ ಅಲ್ವಾ? ಗಾಳಿಯಲ್ಲಿ ತೇಲಾಡುವ ಹಾಗೆ ಆಗ್ತಾ ಇದೆ. ಎಂತ ಆಗ್ತಾ ಉಂಟು? ಯಾವ ಊರು ಇದು ಗೊತ್ತೇ ಆಗುದಿಲ್ಲ. ಸಮುದ್ರ, ಎಷ್ಟು ಒಳ್ಳೇ ಗಾಳಿ, ಅದೆಂತ ಕಬ್ಬಿನ ಗದ್ದೆಯಾ, ಅದು ಅಡಿಕೆ ತೋಟವಾ, ಅದ್ಯಾವ ಸಂಕ, ಅಲ್ಲಿ ಅಷ್ಟು ದೊಡ್ಡ ಮೈದಾನ, ಮೈಕಲ್ಲಿ ಎಂತ ಭಜನೆಯಾ ಅದು, ಅಲ್ಲಿ ಮುಂದೆ ಅದೂ ..ಅದೂ ..ಎಂತ ಸರಿ ಕಾಣುದಿಲ್ಲ. ಹಾಂ …ಹಾಂ… ************************** –
You cannot copy content of this page