ಶ್ರೀದೇವಿ ಮ ಗುಮ್ಮಗೋಳ ಅವರ ಸಣ್ಣಕಥೆ “ಬದುಕು ಇಬ್ಬದಿ”
ಕಥಾ ಸಂಗಾತಿ ಶ್ರೀದೇವಿ ಮ ಗುಮ್ಮಗೋಳ “ಬದುಕು ಇಬ್ಬದಿ” ಅಂದು ರಜನಿ ಮಕ್ಕಳಿಗೆ ಕ್ಲಾಸಿನಲ್ಲಿ ಸಮಾಜಶಾಸ್ತ್ರದ ಕುಟುಂಬದ ಕುರಿತು ಪಾಠ ಮಾಡುತ್ತಿದ್ದಳು. ಸಮಾಜದಲ್ಲಿ ಕುಟುಂಬ ಅಂದರೆ ಏನು ಕುಟುಂಬದ ಪ್ರಕಾರಗಳಾವವು, ಮಹತ್ವ ಏನು ಎನ್ನುವದನ್ನು ಮಕ್ಕಳಿಗೆ ವಿವರಿಸಿ ಹೇಳುತ್ತಿದ್ದಳು. “ನೋಡಿ ಒಂದು ಕುಟುಂಬ ಸಮಾಜದ ಸಂಸ್ಥೆ. ಕುಟುಂಬದ ಸಂತೊಷ ನೆಮ್ಮದಿ ಮತ್ತು ಸ್ಥಿರತೆ ಆ ಕುಟುಂದಲ್ಲಿರುವ ಪ್ರತಿಯೊಬ್ಬರ ನಡುವಿನ ಪ್ರೀತಿ, ಸಹಕಾರ, ಹೊಂದಾಣಿಕೆ, ಸಹಬಾಳ್ವೆಯ ಮೇಲೆ ನಿಂತಿದೆ. ನಾನು ಹೆಚ್ಚು ನೀನು ಕಡಿಮೆ ಎನ್ನುವ ಮನೊಭಾವ ಇರುವ ಕುಟುಂಬ ನೆಮ್ಮದಿಯಾಗಿ ಇರಲಾರದು. ಕುಟುಂಬದ ಪ್ರತಿ ಸದಸ್ಯ ಆ ಕುಟುಂಬದ ಗೋಡೆ ಇದ್ದ ಹಾಗೆ. ಪ್ರತಿಯೊಬ್ಬರ ಮದ್ಯೆ ಸಹಾನುಭೂತಿ, ಪ್ರೀತಿ, ಕಾಳಜಿಯ ಸಿಮೆಂಟು ಗಟ್ಟಿಯಾಗಿದ್ದಾಗ ಕುಟುಂಬದ ಗೊಡೆಗಳ ಮದ್ಯೆ ಬಿರುಕು ಬೀಳಲಾರದು.” ಎಂದು ಹೇಳುತ್ತಿದ್ದಂತೆ ಒಳಗಡೆ ಬಂದ ಪ್ಯೂನ್ “ಮೆಡಮ್ ನಿಮ್ಮನ್ನು ಯಾರೊ ಬೇಟಿ ಆಗಲು ಬಂದಿದ್ದಾರೆ” ಎಂದು ಹೇಳಿ ಹೊರಟ. ರಜನಿ ಯಾರಿರಬಹುದು? ನನಗೆ ಈಗ ನನ್ನಮ್ಮನ ಕಡೆಯ ಸಂಬಂಧಿಕರಾದ ಇಬ್ಬರೂ ಮಾವಂದಿರು ಒಬ್ಬ ತಂಗಿಯನ್ನು ಬಿಟ್ಟರೆ ಯಾರೂ ಸಂಬಂಧಿಕರಿಲ್ಲ. ಅವರೆಲ್ಲಾ ಸೀದ ಮನೆಗೆ ಬರುತ್ತಿದ್ದರು. ನನ್ನ ಕಾಲೇಜ ಕಡೆ ಬರುವಂತದೇನಿದೆ. ಅದು ಅಲ್ಲದೇ ಈ ಊರಿಗೆ ಬಂದು ಕೇವಲ ಒಂದು ವರ್ಷವಾಯಿತು ಕರಾವಳಿ ತೀರದ ಈ ಊರಲ್ಲಿ ನನಗಿನ್ನೂ ಅತೀಯಾಗಿ ಪರಿಚಿತರು ಯಾರು ಇಲ್ಲ. ಅಂದ ಮೇಲೆ ಮಕ್ಕಳ ಪಾಲಕರು ಯಾರಾದರೂ ಬಂದಿರುವರಾ? ಎಂದು ಹೀಗೆ ಮನದಲ್ಲೆ ಗೇಣಿಕೆ ಹಾಕುತ ರಜನಿ ಕ್ಲಾಸ್ ರೂಮಿನಿಂದ ಹೋರಗೆ ಬಂದಳು. ರಜನಿ ಕಾರವಾರದ ಪಿ.ಯು. ಕಾಲೇಜ ಒಂದಕ್ಕೆ ಉಪನ್ಯಾಸಕಳಾಗಿ ನೇಮಕಗೊಂಡಿದ್ದಳು. ದೂರದಲ್ಲಿ ಪ್ರಶಾಂತ ಅವಳಿಗಾಗಿ ಕಾಯುತ ನಿಂತಿದ್ದ. ಅವನನ್ನು ನೋಡಿ ರಜನಿಯ ಎದೆ ಒಮ್ಮೆಲೆ ಜಲ್ಲೆಂದಿತು. ಏಕೆ ಇವನು ಇಲ್ಲಿ ಬಂದಿದ್ದಾನೆ. ಅವನ ಬದುಕಿನಿಂದ ದೂರಾಗಿ ಎರಡು ವರ್ಷದ ಮೇಲಾಯಿತು. ತನ್ನ ಅವನ ಋಣ ತೀರಿದ ಮೇಲೆ ಮತ್ಯಾವ ಋಣಕ್ಕಾಗಿ, ಘನ ಕಾರ್ಯಕ್ಕೆ ತನಗೆ ಬೇಟಿಯಾಗಿತ್ತಿದ್ದಾನೆಂದು ರಜನಿಗೆ ತಿಳಿಯದಾಯಿತು. ರಜನಿಯನ್ನು ನೋಡಿದ ಪ್ರಶಾಂತ ಅವಳಡೆಗೆ ಬಂದು “ರಜನಿ ನನಗೆ ಗೊತ್ತು ನನ್ನನ್ನು ನೀನು ಇಲ್ಲಿ ನೋಡಿ ನಿನಗೆ ಬೇಸರವಾಗಿರಬಹುದು. ಯಾಕಪ್ಪ ಇವನು ಇಲ್ಲಿ ಬಂದ ಎಂದುಕೊಳ್ಳುತಿರಬಹುದು. ನಿನ್ನ ಜೊತೆ ಸ್ವಲ್ಪ ಮಾತನಾಡುವದಿತ್ತು ಮಾತನಾಡಬಹುದಾ?” ಎಂದಾಗ ರಜನಿಗೆ ಏನು ಹೇಳಬೇಕು ತಿಳಿಯದಾಯಿತು. ರಜನಿಯ ಮನಸ್ಸು ಬೆಣ್ಣೆಯಂತದ್ದು. ನಾನು ಅವನಂತೆ ವರ್ತಿಸಿದರೆ ಅವನಿಗೂ ನನಗೂ ಏನು ವ್ಯತ್ಯಾಸ ಎಂದುಕೊಂಡು “ಆಯಿತು ಈಗ ನನಗೆ ಕ್ಲಾಸ್ ಇದೆ. ನಾಲ್ಕು ಗಂಟೆಗೆ ಕಾಲೇಜ ಬಿಡುತ್ತದೆ. ಆಗ ಮಾತನಾಡೋನ” ಅಂದಳು. ಆಗ ಪ್ರಶಾಂತ “ಹಾಗಾದರೆ ಅಲ್ಲಿಯವರೆಗೆ ಇಲ್ಲಿ ನನಗೆ ಸ್ವಲ್ಪ ಕೆಲಸವಿದೆ. ನಾಲ್ಕು ಗಂಟೆಗೆ ನೀನು ಬೀಚ್ ಹತ್ತಿರ ಬಾ” ಎಂದು ಹೇಳಿದವನೆ ಹೊರಟು ಬಿಟ್ಟನು. ಪ್ರಶಾಂತನ ಬದುಕಿನಿಂದ ಹೊರ ಬಂದು ಈಗ ತಾನೆ ತಣ್ಣಗೆ ಉಸಿರಾಡುತ್ತಿರುವ ರಜನಿಗೆ ಮತ್ತೆ ಬೆಂಕಿಯ ಸಹವಾಸ ತನಗೇಕೆ ಬೇಕಿತ್ತು ಸುಮ್ಮನೆ ನಾನು ಬರುವದಿಲ್ಲವೆಂದು ಹೇಳಿಬಿಡಬಾರದಿತ್ತೆ ಎಂದು ಮತ್ತೊಮ್ಮೆ ಮನ ಹೋಯ್ದಾಡಿತು. ಆದದ್ದಾಗಲಿ ನಮ್ಮಿಬ್ಬರ ಮದ್ಯೆ ಈಗ ಯಾವ ಸಂಬಂಧವು ಉಳಿದಿಲ್ಲ ನೋಡೊಣ ಏತಕ್ಕೆ ಬಂದಿರುವನು ಎಂದು ತಿಳಿದ ಮೇಲೆ ಯೋಚಿಸಿದರಾಯಿತು ಎಂದುಕೊಂಡಳು. ಅದೇಕೊ ಪ್ರಶಾಂತನಿಂದಾಗಿ ಕ್ಲಾಸಿಗೆ ಬಂದರು ಅವಳಿಗೆ ಪಾಠ ಮಾಡುವ ಮೂಡೆ ಬರಲಿಲ್ಲ. ಅಷ್ಟಕ್ಕೆ ಪಾಠ ನಿಲ್ಲಿಸಿ ಸ್ವಲ್ಪ ಕೆಲಸವಿದೆ ನಾಳೆ ಪಾಠ ಮುಂದುವರೆಸುವೆ ಎಂದು ಹೇಳಿ ಸ್ಟಾಪ್ ರೂಮ್ ಗೆ ಬಂದು ತನ್ನ ಚೇರ ಮೇಲೆ ಕುಳಿತಳು. ಕಿಟಕಿಯ ಆಚೆ ತೂರಿಬರುತ್ತಿದ್ದ ಗಾಳಿ ಹಿತ ನೀಡಿತಾದರೂ ಮನದಾಳದ ಕಹಿ ನೆನಪುಗಳು ಕಣ್ಮುಂದೆ ಹಾದು ಹೋದವು. ******* ರಜನಿ ಮಾಸ್ಟರ ಡಿಗ್ರಿ ಓದಿ ಮುಂದೆ ಪಿ. ಎಚ್. ಡಿ ಮಾಡುತ್ತಿದ್ದಳು. ಅವಳಿಗೆ ತಾನು ಮುಂದೆ ಲೆಕ್ಚರ್ ಆಗಬೇಕೆಂಬ ಮಹದಾಸೆ ಇತ್ತು. ಆದರೆ ಪಿ.ಎಚ್.ಡಿ ಮುಗಿಯುತ್ತಲೇ ಅವರ ತಂದೆ ಅವಳಿಗೆ ಗಂಡು ನೋಡಿ ಮದುವೆ ಮಾಡಲು ತಯಾರಿ ನಡೆಸಿದರು. ಅವಳಿಗೆ ಇಷ್ಟವಿಲ್ಲದಿದ್ದರೂ ತನ್ನ ಹಿಂದೆ ಇರುವ ಇನ್ನೊಬ್ಬ ತಂಗಿಗಾಗಿ ತಾನು ಮದುವೆಯಾಗಲೇಬೇಕೆಂಬ ಅಪ್ಪನ ಒತ್ತಾಯಕ್ಕೆ ಕಟ್ಟು ಬಿದ್ದು ಒಪ್ಪಿಕೊಂಡಳು. ಒಬ್ಬ ಸುಂದರನಾದ ಪ್ರಶಾಂತ ಎನ್ನುವ ಹುಡಗನೊಂದಿಗೆ ಅವಳ ಮದುವೆಯಾಯಿತು. ಅವನು ಸರಕಾರಿಯಲ್ಲಿ ಗುಮಾಸ್ತನಾಗಿದ್ದ. ಮದುವೆಯ ಬಗ್ಗೆ, ಗಂಡ ಸಂಸಾರದ ಬಗ್ಗೆ ನೂರಾರು ಕನಸು ಕಂಡಿದ್ದ ರಜನಿಗೆ ಕನಸುಗಳು ಬರೀ ಕನಸಾಗಿಯೇ ಉಳಿದವು. ಮದುವೆಯಾದ ಹೊಸತರಲ್ಲಿ ರಾಮನಂತೆ ಕಂಡ ಗಂಡ ಅವಳ ಬಾಳಿನ ರಾವಣನಾದ. ರಜನಿಗೆ ಸ್ವಾತಂತ್ರ್ಯವೇ ಇರಲಿಲ್ಲ. ಮನೆಯಲ್ಲಿ ಗುಲಾಮಳಂತೆ ಕಾಣುತ್ತಿದ್ದ. ಅತ್ತೆ ಮಾವರ ಸೇವೆ ಮಾಡಿ ಗಂಡನಿಗೆ ಬೇಕಾದ ಅಚ್ಚುಕಟ್ಟಾದ ಅಡುಗೆ ಮಾಡಿದರೂ ಒಂದು ದಿನವೂ ಅವಳನ್ನ ನೀನು ನಮಗಾಗಿ ದುಡಿಯುತ್ತಿದ್ದಿಯಾ ಎಂದು ಹೇಳಲಿಲ್ಲ. ರಜನಿಯ ಅತ್ತೆ ಮಾವ ಗಂಡ ಎಲ್ಲರೂ ಸ್ವಾರ್ಥಿಗಳೆ. ತಮಗೆ ಏನೆಲ್ಲಾ ಬೇಕು ಎಲ್ಲವನ್ನು ಮಶಿನ್ ನಂತೆ ರಜನಿಯಿಂದ ಮಾಡಿಸಿಕೊಳ್ಳುತ್ತಿದ್ದರೂ. ಆದರೆ ಒಂದು ದಿನವೂ ನೀನು ನಮ್ಮಂತೆಯೇ ಮನುಷ್ಯಳು ನಿನಗೂ ಸ್ವಲ್ಪ ವಿಶ್ರಾಂತಿ ಬೇಕು ಎಂದು ಒಂದು ದಿನವೂ ಅತ್ತೆಯಾಗಲಿ, ಮಾವನಾಗಲಿ ಕಡೆಗೆ ಗಂಡನಾಗಲಿ ಹೇಳುತ್ತಿರಲಿಲ್ಲ. ಪ್ರಶಾಂತ ಅವಳನ್ನು ಹೊರಗಡೆ ಸಿನಿಮಾ, ಹೊಟೆಲು, ಪಾರ್ಕು ಅಂತ ಒಂದು ದಿನವೂ ಸುತ್ತಾಡಿಸಿಕೊಂಡು ಬರುತ್ತಿರಲಿಲ್ಲ. ಅವಳಿಗೂ ಒಂದು ಬದುಕಿದೆ. ಅವಳಿಗೂ ಆಸೆ ಆಕಾಂಕ್ಷೆಗಳಿವೆ ಎಂದು ಒಂದು ದಿನವೂ ಯೊಚಿಸಲಿಲ್ಲ. ಹೀಗೆಯೇ ಸಾಗಿರುವಾಗ ಒಮ್ಮೆ ರಜನಿಯ ಮಾವ ಕರುಳು ಬೇನೆಯಿಂದ ಕಾಯಿಲೆ ಬಿದ್ದ. ಮಾವನಿಗೆ ಹೊತ್ತು ಹೊತ್ತಿಗೆ ಸರಿಯಾಗಿ ಬಿಸಿ ಬಿಸಿ ಅಡುಗೆ ಮಾಡಿ ಬಡಿಸುತ್ತಿದ್ದಳು. ಅತ್ತೆ ಮಾಡಿಟ್ಟದ್ದನ್ನು ಗಂಡನಿಗೆ ಒಂದು ದಿನವೂ ಬಡಿಸದೇ ಎಲ್ಲವನ್ನು ಸೊಸೆಯ ಮೇಲೆ ಹಾಕಿ ಮನೆ ಮನೆ ತಿರುಗುತ್ತಿದ್ದಳು. ಅವಳ ಸೇವೆಯಿಂದ ಮಾವ ಗುಣಮುಖನಾದ. ಅದನ್ನು ಒಂದು ದಿನವೂ ಹೇಳದೇ ಎಲ್ಲರ ಮುಂದೆ ತಾನೇ ಪತಿವೃತೆಯಂತೆ ಗಂಡನ ಸೇವೆ ಮಾಡಿದಂತೆ ಮಾತಿನಲ್ಲಿ ಮನೆ ಕಟ್ಟೆ ಎಲ್ಲರನ್ನೂ ನಂಬಿಸುತ್ತಿದ್ದಳು. ಗಂಡನೂ ಕೂಡಾ ನಿನ್ನಂದಲೇ ಅಪ್ಪ ಗುಣಮುಖನಾದ ಅದರಲ್ಲಿ ನಿನ್ನ ಪಾತ್ರ ದೊಡ್ಡದು ಎಂದು ಒಂದೂ ದಿನವೂ ಹೇಳಲಿಲ್ಲ. ಜೊತೆಗೆ ಅತ್ತೆ ಎಷ್ಟೆ ಮಾಡಿದರು ಏನಾದರೊಂದು ಖ್ಯಾತೆ ತೆಗೆದು ಮಗನ ಮುಂದೆ ಸೊಸೆಯ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳಿ ಗಂಡ ಹೆಂಡಿರ ಮದ್ಯೆ ಜಗಳ ತಂದಿಡುತ್ತಿದ್ದಳು. ಅನೇಕ ಬಾರಿ ರಜನಿಯ ಮೇಲೆ ಕೈಯನ್ನು ಮಾಡಿದ್ದ. ಹೀಗರಲೂ ಒಮ್ಮೆ ರಜನಿಯ ತಂದೆಗೆ ಸಿರಿಯಸ್ಸಾಗಿ ಆಸ್ಪತ್ರೆಗೆ ದಾಖಲಿಸಿದರು. ರಜನಿಯ ತಂದೆಗೆ ಹೃದಯಘಾತವಾಗಿತ್ತು. ತನ್ನ ತಂದೆಯ ಸೇವೆಯನ್ನು ಮಾಡಿಸಿಕೊಂಡ ಪ್ರಶಾಂತ ತನ್ನ ತಂದೆಯಂತೆ ಅವಳಿಗೂ ಅವಳ ತಂದೆ ಇದ್ದಾರೆ ಗಂಡಮಕ್ಕಳಾರು ಇಲ್ಲ ಹೆಂಡತಿಯನ್ನು ಇಂತಹ ಸಮಯದಲ್ಲಿ ಮಗಳನ್ನು ತವರು ಮನೆಗೆ ಕಳಿಸಿ ಅವಳ ತಂದೆಯ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂಬ ದೊಡ್ಡ ಮನಸ್ಸು ಪ್ರಶಾಂತನಲ್ಲಿರಲಿಲ್ಲ. ಸಂಕುಚಿತ ಮನೋಭಾವನೆಯ ಪ್ರಶಾಂತ ರಜನಿಯನ್ನು ತವರು ಮನೆಗೆ ತಂದೆಯನ್ನು ನೋಡಲು ಕಳಿಸಲೇ ಇಲ್ಲ. “ಇದಾರಲ್ಲ ನಿನ್ನ ತಂಗಿ ತಾಯಿ ನೋಡಿಕೊಳ್ಳುತ್ತಾರೆ” ಎಂದು ಉಡಾಪೆ ಉತ್ತರಕೊಟ್ಟು ರಜನಿಯ ಮನಸ್ಸಿಗೆ ಗಾಯ ಮಾಡಿದ. ಕರಳು ತಂದೆಯನ್ನು ಕಾಣಲು ಹಾತೊರೆಯುತ್ತಿತ್ತು. ಗಂಡನ ವರ್ತನೆ ರಜನಿಯ ಮನಸ್ಸಿನ ಮೇಲೆ ದೊಡ್ಡದೊಂದು ಕಂದಕವನ್ನೆ ಕೊರೆಯಿತು. ತಂದೆಯನ್ನು ನೋಡಲು ಗಂಡ ಕಳಿಸಲೇ ಇಲ್ಲ. ರಜನಿಯ ಅಪ್ಪ ತೀರಿಕೊಂಡ.ಮಾವನ ಸೇವೆಯನ್ನು ಮಾಡಿದ ರಜನಿಯನ್ನು ಸ್ವತಃ ಅವಳ ತಂದೆ ಅನಾರೊಗ್ಯ ಬಳಲಿದಾಗ ಆಗಲಿ ಕಡೆಗೆ ಸತ್ತಾಗ ಅಪ್ಪನ ಮುಖವನ್ನು ನೋಡಲು ಕಳಿಸದೆ ಮೆರೆದ ಗಂಡನ ಅಮಾನವಿಯತೆ ರಜನಿಯ ಮನಸ್ಸಿಗೆ ಮತ್ತೊಂದು ಆಘಾತ ನೀಡಿತು. ಏನೆನೊ ಕನಸುಗಳನ್ನು ಕಟ್ಟಿಕೊಂಡು ಅವಳ ಬದುಕು ಒಂದಾದ ಮೇಲೊಂದರಂತೆ ಗಂಡ, ಗಂಡನ ಮನೆಯ ಅತ್ತೆ ಮಾವರ ವರ್ತನೆಯಿಂದ ದುಃಖದ ಅಲೆಗಳ ಹೊಡೆತ ಸಂಸಾರದ ಬಗ್ಗೆ ಗಂಡನಿಂದ ಒಂದೊಂದೆ ಹೆಜ್ಜೆ ದೂರ ಸರೆಯುವಂತೆ ಮಾಡಿತು. ಇದರ ಜೊತೆಗೆ ಮತ್ತೊಂದು ಆಘಾತ ಅವಳನ್ನು ಮತ್ತಷ್ಟು ಕುಗ್ಗುವಂತೆ ಮಾಡಿತು. ಅವಳಿಗೆ ಆ ಒಂದು ಘಟನೆಯಿಂದ ಪ್ರೀತಿ, ವಿಶ್ಚಾಸದ ಬಗ್ಗೆ ಇದ್ದ ನಂಬಿಕೆಯನ್ನೆ ಕೊನೆಗಾನುವಂತೆ ಮಾಡಿತು. ಒಂದು ದಿನ ರೂಮಿನಲ್ಲಿ ಗಂಡ ಬಹಳ ಹೊತ್ತು ಒಂದು ಹೆಣ್ಣಿನ ಜೊತೆ ಮಾತನಾಡುವದನ್ನು ಕೇಳಿಸಿಕೊಂಡಳು. ಆ ಮಾತಿನಲ್ಲಿ ಯಾವುದೊ ಅನೈತಿಕ ಸಂಬಂಧದ ವಾಸನೆ ಹೊಡೆಯಿತು. ರಜನಿ ಗಂಡನನನ್ನು ವಿಚಾರಿಸಿದಾಗ ಮೊದಲೆಲ್ಲಾ ಅಂತಹದೇನಿಲ್ಲ ಎನ್ನುತ ನಡೆದ. ಇಬ್ಬರ ಮದ್ಯೆ ಈ ವಿಷಯಕ್ಕೆ ಆಗಾಗ ಜಗಳ ಶುರುವಾಯಿತು. ಒಂದು ದಿನ ಪ್ರಶಾಂತ “ಹೌದು ನನಗೆ ಅವಳಿಗೂ ಸಂಬಂಧವಿದೆ. ಅವಳು ನನ್ನ ಆಫಿಸಿನಲ್ಲಿ ಕೆಲಸ ಮಾಡುತ್ತಾಳೆ. ಗಂಡ ಕುಡುಕ. ನನ್ನ ಮದುವೆಗೂ ಮುಂಚೆ ಅವಳು ಗಂಡನನ್ನು ಬಿಟ್ಟು ನಿನ್ನನ್ನು ಗಾಡವಾಗಿ ಪ್ರೀತಿಸುತ್ತೇನೆ ಎಂದು ನನ್ನ ದುಂಬಾಲು ಬಿದ್ದಳು. ಅವಳ ಪ್ರೀತಿಗೆ ಕರಗಿದೆ. ನಮ್ಮಿಬ್ಬರ ಮದ್ಯೆ ದೈಹಿಕ ಸಂಬಂಧವಿದೆ. ನಾನು ಅವಳನ್ನು ಮದುವೆಯಾಗಬೆಕೆಂದೆ. ಮನೆಯಲ್ಲಿ ಮನೆಯ ಮರ್ಯಾದೆಗೊಸ್ಕರ ಬೇರೆ ಹೆಣ್ಣನ್ನು ಮದುವೆಯಾಗು ಎಂದು ಗಂಟು ಬಿದ್ದರು. ಅದಕ್ಕಾಗಿ ನಿನ್ನ ಮದುವೆಯಾದೆ. ಈಗೇನು… ನಿನಗೆ ಬೇಕಾದರೆ ಇರು ಬೇಡವಾದರೆ ಹೋಗು…” ಎಂದು ಎಷ್ಟು ಸಲೀಸಾಗಿ ಹೇಳಿ ಬಿಟ್ಟ. ಮದುವೆ, ದಾಂಪತ್ಯ ಬಂಧನ, ಕುಟುಂಬದ ಬಗ್ಗೆ ಇವನೀಗೇನಾದರೂ ಅರಿವಿದೆಯಾ? ಇವನಿಗೆ ಸಮಾಜಿಕ ಬದ್ದತೆ ಇದೆಯಾ?. ಕುಟುಂಬದ ಬಗ್ಗೆ ಸಂಸಾರದ ಬಗ್ಗೆ ಕಾಳಜಿ ಕಳಿಕಳಿ ಇದ್ದರೆ ತನ್ನ ಅನೈತಿಕ ಸಂಬಂಧವನ್ನು ಈ ರೀತಿ ಮುಂದುವರೆಸುತ್ತಿದ್ದಿಲ್ಲಾ. ಪ್ರಶಾಂತನ ದೃಷ್ಟಿಯಲ್ಲಿ ರಜನಿ ಕೇವಲ ತನಗಾಗಿ ಮಕ್ಕಳನ್ನು ಹೆರಲು ಬಂದ, ತಂದೆ ತಾಯಿಯ ಮತ್ತು ತನ್ನ ಚಾಕರಿಯನ್ನು ಮಾಡಲು ಬಂದ ಒಂದು ಯಂತ್ರವಾಗಿದ್ದಳೇ ಹೊರತು. ಒಂದು ಜೀವವಾಗಲಿ ಅವಳಿಗೂ ಭಾವನೆಗಳು ಆಸೆ ಆಕಾಂಕ್ಷೆಗಳಿವೆ. ಅವಳಿಗೂ ಒಂದು ಬದುಕಿದೆ ಎಂದು ತಿಳಿಯಲೇ ಇಲ್ಲ . ಹೆಣ್ಣಿನ ಮನಸ್ಸು ನಂಬಿಕೊಂಡು ಬಂದವನ ನಿಷ್ಕಲ್ಮಷವಾದ ಪ್ರೀತಿ ಆಸರೆ, ಕಾಳಜಿ, ಕನಿಕರಕ್ಕೆ ಜೀವ ಹಾತೊರೆಯುವದು ಎಂದು ಪ್ರಶಾಂತನಿಗೆ ಅನಿಸಲೇ ಇಲ್ಲ. ಅವಳ ಮತ್ತು ತನ್ನ ಸುಃಖ ದುಃಖಗಳನ್ನು ಇಬ್ಬರೂ ಸಮನಾಗ ಹಂಚಿಕೊಂಡು ಸಂತೋಷದಿಂದ ಜೀವನ ನಡೆಸಬೇಕು ಎಂದು ಅವನು ಬಯಸಲೇ ಇಲ್ಲವೆಂಬಂತೆ ಕಾಣುತ್ತಿತ್ತು. ಗಂಡನನಿಂದ ಬೇರೆಯಾಗಬೇಕೆಂದಳು. ಅಷ್ಟರಲ್ಲಿ ರಜನಿಯು ಮೂರು ತಿಂಗಳ ಗರ್ಬಿಣಿಯಾದಳು. ತನಗಲ್ಲವಾದರೂ ಇನ್ನ ಮೇಲೆ ಹುಟ್ಟುವ ಮಗುವಿಗಾದರೂ, ಭವಿಷ್ಯದಲ್ಲಿ ತನ್ನೊಡಲೊಳಗೆ ಚಿಗುರೆಡುಯುತ್ತಿದ್ದ ಹೊಸ ಜೀವದಲ್ಲಿ ಹೊಸ ಕನಸುಗಳನ್ನು, ಆಸೆಗಳನ್ನು ಹೊತ್ತು ಗಂಡನ ಗಂಡನಮನೆಯವರ ನೋವನ್ನು ಬದುಕಿದರಾಯಿತೆಂದು ನಿರ್ದಾರ ಮಾಡಿದಳು. ಒಮ್ಮೆ ರಜನಿಯ ಅತ್ತೆ ಬಿದ್ದು ಕಾಲಿಗೆ ಪೆಟ್ಟಾಯಿತು ಅದನ್ನೆ ನೆವ ಮಾಡಿಕೊಂಡು ಮಲಗಿಕೊಂಡೆ ಎಲ್ಲ ಸೇವೆಯನ್ನು ಸೊಸೆ ಕಡೆ ಮಾಡಿಸಿಕೊಳ್ಳತೊಡಗಿದಳು. ತಿಂಗಳು ತುಂಬುತ್ತಿದ್ದ ಸೊಸೆಗೆ ಹೊಟ್ಟೆಯಲ್ಲಿ ಒಂದು ಕೂಸಿದೆ ಅವಳಿಗೆ ಆಯಾಸವಾಗುತ್ತದೆ ಅವಳಿಗೂ ವಿಶ್ರಾಂತಿ ಬೇಕು ಎಂದು ಯೊಚಿಸಿದ ಸ್ವಾರ್ಥಿ ಮತ್ತು ಕಟುಕ ಹೆಣ್ಣಾಗಿದ್ದಳು. ಎಲ್ಲರೂ ಎರಡು ಹೊತ್ತು ಉಂಡರೆ ಇವಳು ಕೂತಲ್ಲೆ ನಾಲ್ಕೈದು ಬಾರಿ ಸೊಸೆ ಕಡೆಯಿಂದ ನೀಡಿಸಿಕೊಂಡು ಉಂಡರು ಮಗನ ಮುಂದೆ ನನಗೆ ಸರಿಯಾಗಿ ನೀಡುತ್ತಿಲ್ಲ ಎಂದು ಸೊಸೆಯ ಬಗ್ಗೆ ಮಗನ ಮುಂದೆ ಅಪಾದನೆ ಹೊರೆಸಿದಳು. ಹೊಡೆತಗಳ ಮೇಲೆ ಹೊಡೆತಗಳನ್ನು ತಿಂದು ಮಾನಸಿಕವಾಗಿ ಜರ್ಜಿತಳಾಗಿ ರೊಸಿ ಹೋಗಿದ್ದ ರಜನಿ ಅತ್ತೆಯನ್ನು ತರಾಟೆಗೆ ತೆಗೆದುಕೊಂಡಳು. ಆಗ ಪ್ರಶಾಂತ ಅವಳು
ಶ್ರೀದೇವಿ ಮ ಗುಮ್ಮಗೋಳ ಅವರ ಸಣ್ಣಕಥೆ “ಬದುಕು ಇಬ್ಬದಿ” Read Post »









