ಎರಡೂವರೆ ದಶಕಗಳ ಹಿಂದಿನ ಹಳ್ಳಿಯೊದರ ಮುಗ್ಧ ನೈಜ ಪ್ರೇಮ ಕತೆಯೇ “ಸಿರೈ” ಸಿನಿಮಾ-ಪ್ರಶಾಂತ್ ಬೆಳತೂರು
ಸಿನಿಮಾ ಸಂಗಾತಿ ಪ್ರಶಾಂತ್ ಬೆಳತೂರು ಎರಡೂವರೆ ದಶಕಗಳ ಹಿಂದಿನ ಹಳ್ಳಿಯೊಂದರ ಮುಗ್ಧ ನೈಜ ಪ್ರೇಮ ಕತೆಯೇ “ಸಿರೈ” ಸುರೇಶ್ ರಾಜಕುಮಾರಿ ತಮಿಳಿನ ಖ್ಯಾತ ಚಲನಚಿತ್ರ ನಿರ್ದೇಶಕ ವೆಟ್ರಿಮಾರನ್ ಅವರ ಗರಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದವರು, ಇದೇ ಮೊದಲ ಬಾರಿಗೆ ಸಿರೈ ಎಂಬ ತಮ್ಮ ಚೊಚ್ಚಲ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಈ ಚಿತ್ರವನ್ನು ಒಮ್ಮೆ ನೋಡಬೇಕೆಂಬ ಇಂಗಿತ ಅದು ಬಿಡುಗಡೆಯಾದ ದಿನಗಳಿಂದಲೂ ಇತ್ತು. ಹಾಗಾಗಿ ಈ ಸಿರೈ ಚಿತ್ರದ ಕುರಿತು ಯಾರಾದರೂ ವಿಮರ್ಶೆ ಬರೆಯುತ್ತಾರೋ ಅಥವಾ ಕನಿಷ್ಠ ಮುಖಪುಟದಲ್ಲಿ ಇದರ ಕುರಿತು ಅನಿಸಿಕೆ ಅಭಿಪ್ರಾಯಗಳನ್ನು ದಾಖಲಿಸಬಹುದೇನೊ ಎಂದು ಆಗಾಗ್ಗೆ ನನ್ನ ಬಿಡುವಿನ ವೇಳೆಯಲ್ಲಿ ಮುಖಪುಟವನ್ನು ಗಮನಿಸುತ್ತಿದ್ದೆ. ಯಾಕೋ ಏನೋ ಈ ಬಾರಿ ಹೆಚ್ಚಿನ ಬರಹಗಳು ದುನಿಯಾ ವಿಜಿ ಅವರ ಲ್ಯಾಂಡ್ ಲಾರ್ಡ್ ಸಿನಿಮಾ ಕುರಿತೇ ಇದ್ದವು. ಅದನ್ನು ನಾನಿನ್ನೂ ನೋಡದೆ ಇರುವುದರಿಂದ ಅದರ ಕುರಿತು ಈಗ ಮಾತಾಡುವುದು ಥರವಲ್ಲ.ಆದರೆ ಸಿರೈ ಚಿತ್ರದ ಕುರಿತು ಒಂದೆರಡು ಸಣ್ಣ ಟಿಪ್ಪಣಿಗಳಿನ್ನಷ್ಟೇ ಗಮನಿಸಿದ್ದ ನಾನು ಚಿತ್ರದ ಪೋಸ್ಟರ್ ನಲ್ಲಿ ವಿಕ್ರಮ್ ಪ್ರಭುವಿನೊಂದಿಗೆ ಹರೆಯದ ಹೊಸ್ತಿಲಿನ ಮುಗ್ಧ ಮುಖವನ್ನು ಹೊತ್ತಂತೆ ಕಾಣುತ್ತಿದ್ದ ತಮಿಳಿನ ಹೊಸ ಮುಖಗಳಾದ ಎಲ್. ಕೆ ಅಕ್ಷಯ್ ಕುಮಾರ್ ಮತ್ತು ಅನಿಷ್ಮಾ ಅವರನ್ನು ಕಂಡ ಮೇಲೆ ಒಂದು ಭಾನುವಾರ ಇದನ್ನು ಬಿಡುವು ಮಾಡಿಕೊಂಡು ನೋಡಲೆಬೇಕೆಂಬ ಹಟಕ್ಕೆ ಬಿದ್ದು ಸಿನಿಮಾ ನೋಡಿದೆ.ಹೆಚ್ಚಿನ ನಿರೀಕ್ಷೆಯೇನೋ ಇತ್ತು ಆದರೆ ಮಂದಗತಿಯಲ್ಲಿ ಸಾಗುವ ಈ ಸಿನಿಮಾ ಹೆಚ್ಚಿನ ಕುತೂಹಲವನ್ನೇನೂ ಉಂಟು ಮಾಡುವುದಿಲ್ಲ.ಆದರೆ ಸಂಯಮದಿಂದ ತನ್ನೊಳಗನ್ನು ನೋಡಿಸಿಕೊಂಡು ಹೋಗುತ್ತದೆ. 2003 ರಲ್ಲಿ ವೆಲ್ಲೂರಿನ ಸಶಸ್ತ್ರ ಮೀಸಲು ಪಡೆಯಲ್ಲಿ ಪೊಲೀಸ್ ಪೇದೆಯಾಗಿ ಕಾಣಿಸಿಕೊಳ್ಳುವ ವಿಕ್ರಮ್ ಪ್ರಭುವಿನ ಮೂಲಕ ಕತೆಗೆ ಆರಂಭವನ್ನು ಒದಗಿಸುವ ನಿರ್ದೇಶಕ ಪೊಲೀಸ್ ಇಲಾಖೆಯಲ್ಲಿ ಸಾಮಾನ್ಯ ಪೇದೆಗಳನ್ನು ಹೈರಾಣಾಗಿಸುವ ನಿಯಮಗಳು, ಮೇಲಾಧಿಕಾರಿಗಳ ಅಧಿಕಾರದ ಗರ್ವಕ್ಕೆ ಸಹಜವಾಗಿ ತುತ್ತಾಗಿ ಬಿಡುವ ಕೆಳಹಂತದ ಉದ್ಯೋಗಿಗಳಾದ ಪೇದೆಗಳ ತಾಕಲಾಟವನ್ನು ತಣ್ಣಗೆ ತೋರಿಸುತ್ತಲೇ ಇಲ್ಲಿನ ಪೊಲೀಸ್ ಇಲಾಖೆಯನ್ನು ಪರಿಚಯಿಸುವ ನಿರ್ದೇಶಕ ಜೈಲಿನಿಂದ ಕೋರ್ಟಿಗೆ ವಿಚಾರಣೆಗೆ ತೆರಳುವ ವೇಳೆ ದುಷ್ಟ ಅಪರಾಧಿಯೊಬ್ಬ ತನ್ನ ಬೆಂಗಾವಲಿಗಿರುವ ಪೊಲೀಸ್ ಪಡೆಯ ಪೇದೆಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಕೊನೆಗೆ ಆ ಬೆಂಗಾವಲು ಪಡೆಯಲ್ಲಿದ್ದ ಧೈರ್ಯವಂತ ಅನುಭವಿ ಪೇದೆ ಕಥಿರವನ್ನಿಂದ ಶೂಟೌಟ್ಗೆ ಒಳಪಟ್ಟು ಹತ್ಯೇಗೀಡಾಗುತ್ತಾನೆ. ಆ ಮೂಲಕ ಕಥಿರವನ್ ಹಿನ್ನೆಲೆ, ಪೊಲೀಸ್ ವೃತ್ತಿಯಲ್ಲಿ ಆತನಿಗಿರುವ ನಿಷ್ಠೆ, ಬದ್ದತೆಗಳನ್ನು ಪರಿಚಯಿಸುತ್ತಾ, ಆರ್ ಐ ವಿಚಾರಣೆಯಲ್ಲಿ ಶೂಟೌಟ್ಗೆ ಸಂಬಂಧಪಟ್ಟಂತೆ ಅದನ್ನು ಸಮರ್ಥಿಸಿಕೊಳ್ಳುವ ಕಥಿರವನ್ ಸಂಭಾಷಣೆಗಳು ತುಂಬಾ ಗಟ್ಟಿಯಾಗಿ ಮೂಡಿವೆ.ಸಾಂಸರಿಕವಾಗಿ ಕಥಿರವನ್ ಮತ್ತು ಅವನ ಪತ್ನಿ ಮೇರಿ ಇಬ್ಬರು ಕೂಡ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಂದು ಸಾಮಾನ್ಯ ಕುಟುಂಬ ಎಂಬುದನ್ನು ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಹೋಗದೆ ಅರ್ಥೈಸಿ ಬಿಡುವ ನಿರ್ದೇಶಕ ಕಥಿರವನ್ ಪಾತ್ರದ ಮೂಲಕ ನಮ್ಮನ್ನು ಸಜ್ಜಾಗಿಸುವುದು ತಾನು ಹೇಳಲೊರಡುವ ಮುಖ್ಯ ಕತೆಯ ಎಳೆಗೆ.ವೆಲ್ಲೂರು ಜೈಲಿನಿಂದ ಸಿವಾಗಂಗೈ ಕೋರ್ಟಿಗೆ ವಿಚಾರಣೆಗೆಂದು ವಿಶೇಷ ಬೆಂಗಾವಲು ಪಡೆಗೆ ಮುಖ್ಯ ಪೇದೆಯಾಗಿ ಮೂವರು ತಂಡದೊಂದಿಗೆ ತೆರಳುವ ಕಥಿರವನ್ ವಿಚಾರಣಾ ಖೈದಿಯಾದ ಅಬ್ದುಲ್ ರೌಫ್ನನ್ನು ಬಸ್ಸಿನಲ್ಲಿ ಜೊತೆಗೆ ಕರೆದೊಯ್ಯುವಾಗ ಕಥಾನಾಯಕನ ಬದುಕಿನ ಹಿಂದಿನ ಚಿತ್ರಣ ಅವನ ಕಂಗಳಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ಸಿವಾಗಂಗೈನಾ ಹಳ್ಳಿಯೊಂದರಲ್ಲಿ ಕೇರಳದಿಂದ ಬಂದ ಅಬ್ದುಲ್ ಖಾಸಿಂ ಎಂಬ ಒಂದು ಬಡ ಮುಸ್ಲಿಂ ಕುಟುಂಬ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸೀರೆ ವ್ಯಾಪಾರ ಮಾಡುತ್ತಾ ಒಂದಷ್ಟು ಮೊತ್ತವನ್ನು ಒಟ್ಟುಗೂಡಿಸಿ ಹಳ್ಳಿಯೊಂದರಲ್ಲಿ ಅಂಗೈ ಅಗಲದ ಜಾಗ ಖರೀದಿಸಿ ಒಂದು ಸಾಧಾರಣ ಮನೆ ಕಟ್ಟಿಕೊಳ್ಳುವ ಮೂಲಕ ಆ ಹಳ್ಳಿಯಲ್ಲಿ ನೆಲೆಯೂರುತ್ತದೆ.ಮುಂದೆ ಅಲ್ಲಿ ಒಂದು ಸಣ್ಣ ಚಿಲ್ಲರೆ ಅಂಗಡಿಯನ್ನು ತೆರೆದು ಬದುಕು ಕಟ್ಟಿಕೊಳ್ಳುವ ಹೊತ್ತಿಗೆ ಖಾಸಿಂ ಮರಣವನ್ನು ಹೊಂದುತ್ತಾನೆ. ಆ ನಂತರ ಅದೇ ಹಳ್ಳಿಯಲ್ಲಿ ಬದುಕು ದೂಡುವ ಆತನ ಮಗ ಅಬ್ದುಲ್ ರೌಫ್ ಮತ್ತು ಆತನ ಪತ್ನಿಗೆ ಈ ಅಂಗಡಿಯೇ ಜೀವನಾಧಾರವಾಗಿರುತ್ತದೆ.ಜೊತೆಗೆ ಅಬ್ದುಲ್ ರೌಫ್ ತೊಂಬತ್ತರ ಕಾಲಘಟ್ಟದಲ್ಲಿ ದೃಶ್ಯಮಾಧ್ಯಮಗಳು ಆಗಷ್ಟೇ ಕಣ್ಣು ಬಿಡುತ್ತಿದ್ದ ಕಾಲಮಾನದಲ್ಲಿ ಸಾಮಾನ್ಯವಾಗಿ ಊರಿನ ಹಬ್ಬಹರಿದಿನಗಳಲ್ಲಿ, ಸಾವು -ನೋವುಗಳಲ್ಲಿ ಟಿವಿಗಳ ಮೂಲಕ ಚಲನಚಿತ್ರಗಳನ್ನು ಬಿಡುವುದೆಂದರೆ ಎಲ್ಲರಿಗೂ ಆಗ ಅದೊಂದು ಸಂಭ್ರಮದ ದಿನಗಳಾಗಿತ್ತು.ಹಿರಿಯರು, ವಯಸ್ಸಾದವರು ಭಕ್ತಿಪ್ರಧಾನ, ಸಾಂಸಾರಿಕ ಅರ್ಥಪೂರ್ಣ ಚಿತ್ರಗಳನ್ನು ನೋಡಲು ಬಯಸಿದರೆ ಅಂದಿನ ಯುವವರ್ಗ ಸಾಮಾನ್ಯವಾಗಿ ಪ್ರೀತಿ ಪ್ರೇಮದಂತಹ ಕಥಾವಸ್ತುವುಳ್ಳ ಸಿನಿಮಾಗಳನ್ನು ನೋಡಲು ಹಾತೊರೆಯುತ್ತಿತ್ತು. ಅಬ್ದುಲ್ ರೌಫ್ ತನ್ನ ಹಳ್ಳಿಯಲ್ಲಿ ಅಂಗಡಿಯ ಜೊತೆ ಜೊತೆಗೆ ಬಿಡುವಿನ ವೇಳೆಯಲ್ಲಿ ಟಿವಿಯಲ್ಲಿ ಚಲನಚಿತ್ರಗಳನ್ನು ಬಿಡುವ ಕಾಯಕವನ್ನು ಮಾಡಿಕೊಂಡಿದ್ದು, ತನ್ನ ಎಕ್ಸೆಲ್ ಬೈಕಿನಲ್ಲಿ ಟಿವಿಯನ್ನು, ವಿಡಿಯೋ ಕ್ಯಾಸೆಟ್ಗಳನ್ನು ಊರಿಂದ ಊರಿಗೆ ಹೊತ್ತು ಹೋಗುತ್ತಿದ್ದ. ಇವಿಷ್ಟು ಅಬ್ದುಲ್ ನ ವೃತ್ತಿ ಬದುಕು. ಇಂತಹ ಅಬ್ದುಲ್ ಗೆ ಅದೇ ಹಳ್ಳಿಯ ಕಲೈರಸಿಯ ಮೇಲೆ ಬಾಲ್ಯದಿಂದಲೂ ಒಲವಿರುತ್ತದೆ.ಕಲೈರಸಿಗೂ ಕೂಡ ಅಬ್ದುಲ್ ನ ಮೇಲೆ ಅಷ್ಟೇ ಒಲವು. ಇದು ಅವರ ಹರೆಯ ಕಾಲದಲ್ಲಿ ಮತ್ತಷ್ಟು ಗರಿಗೆದರಿ ತೀರಾ ಹತ್ತಿರಕ್ಕೆ ಕರೆತರುತ್ತದೆ.ಆದರೆ ಆ ಹಳ್ಳಿಯಲ್ಲಿ ಅಬ್ದುಲ್ನದು ಏಕೈಕ ಮುಸ್ಲಿಂ ಕುಟುಂಬ ಮತ್ತು ಕಲೈರಸಿ ಸಾಮಾನ್ಯ ತಳಹಂತದ ಜಾತಿಗೆ ಸೇರಿದವಳಾದರೂ ಆ ಹಳ್ಳಿಯಲ್ಲಿ ಅವಳದು ಸಂಖ್ಯಾತ್ಮಕ ಪ್ರಾಬಲ್ಯವನ್ನು ಹೊಂದಿರುವ ಜಾತಿಯಾಗಿದ್ದ ಕಾರಣ ಇವರಿಬ್ಬರ ಪ್ರೇಮ ಈ ಸಮಾಜಕ್ಕೆ ತಿಳಿಯುತ್ತಿದ್ದಂತೆ ಅದು ತಿಕ್ಕಾಟಕ್ಕೆ ಘರ್ಷಣೆಗೆ ಎಡೆಮಾಡಿಕೊಡುತ್ತದೆ ಎಂಬ ಅರಿವು ಆರಂಭದಲ್ಲಿ ಇವರಿಗೆ ಮನವರಿಕೆಯಾದರೂ ಅವರ ಪ್ರೇಮ ಮಾತ್ರ ಮುಂದುವರೆಯುತ್ತದೆ. ಕಲೈರಸಿಯ ಅಕ್ಕ ತನ್ನ ಸೋದರಮಾವನನ್ನೇ ಮದುವೆಯಾದರೂ ಅವನ ದುಶ್ಚಟಗಳಿಂದ ಅತಿರೇಕದ ವರ್ತನೆಗಳಿಂದ ಸಾಂಸಾರಿಕ ಬದುಕಿನಲ್ಲಿ ಇನ್ನಿಲ್ಲದಂತೆ ನರಳುತ್ತಿರುತ್ತಾಳೆ. ಹೀಗಿರುವಾಗ ಕಲೈರಸಿಯ ಅಕ್ಕನ ಗಂಡನಾದ ಪಾಂಡಿ ತನ್ನ ಗೆಳೆಯರೊಂದಿಗೆ ಮಧ್ಯಪಾನ ಮಾಡುತ್ತಿದ್ದ ಸ್ಥಳಕ್ಕೆ ಟಿವಿಯೊಂದಿಗೆ ವಿಡಿಯೋ ಕ್ಯಾಸೆಟ್ಗಳನ್ನು ಹೊತ್ತೊಯ್ದ ಅಬ್ದುಲ್ ನನ್ನು ನೀಲಿಚಿತ್ರವೊಂದರ ಕ್ಯಾಸೆಟ್ ಹಾಕುವಂತೆ ಒತ್ತಾಯಪಡಿಸುತ್ತಾನೆ. ಆದರೆ ಅಂತಹ ಯಾವುದೇ ನೀಲಿಚಿತ್ರಗಳ ಕ್ಯಾಸೆಟ್ ತನ್ನ ಬಳಿ ಇಲ್ಲವೆಂದು ಹೇಳುವ ಅಬ್ದುಲ್ ಅದನ್ನು ನಿರಾಕರಿಸುತ್ತಾ ತಾವು ಮಾಲೀಕರೊಂದಿಗೆ ಮಾತಾಡಿಕೊಳ್ಳಿ ಎಂದು ಹೊರಟುಬಿಡುತ್ತಾನೆ. ಇದು ತಮ್ಮ ಮಾತುಗಳಿಗೆ ಸೊಪ್ಪು ಹಾಕದೆ ಸೊಕ್ಕು ತೋರಿಸುತ್ತಿದ್ದಾನೆ ಈ ಸಾಬಿ ನನ್ಮಗ ಎಂದು ಬಗೆಯುವ ಪಾಂಡಿ ಅವನ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಾನೆ.ಆದರೆ ಅದು ಅಲ್ಲಿದ್ದ ಅವನ ಗೆಳೆಯರುಗಳಿಂದ ಅತಿರೇಕಕ್ಕೆ ತಿರುಗದೆ ಶಾಂತವಾಗುತ್ತದೆ.ಅಬ್ದುಲ್ ಹೀಗೆ ತನ್ನದಲ್ಲದ ತಪ್ಪಿನ ವಿಷಯಕ್ಕೆ ತನ್ನ ಮಾವನಿಂದ ಏಟು ತಿಂದ ವಿಚಾರ ಕಲೈರಸಿಗೆ ತಿಳಿಯುತ್ತದೆ. ಇದರಿಂದ ಉರಿದು ಬೀಳುವ ಕಲೈರಸಿಯು ಅಬ್ದುಲ್ ನ ಶಾಂತ ಸ್ವಭಾವವನ್ನು ಕೆಣಕಿ ಮಾತಾಡುತ್ತಾಳೆ. ಊರಿನ ಪುಂಡ ಪೋಕರಿ ನಾಯಿಗಳು ಹೊಡೆದರೆ ಅವರಿಗೆ ತಿರುಗಿಸಿ ಹೊಡೆಯುವ ತಾಕತ್ತಿಲ್ವೇನೋ ನಿನಗೆ ಎಂದು ಜರಿಯುತ್ತಾ ಅವನಿಗೆ ಧೈರ್ಯ ತುಂಬುವವಳು ಇದೇ ಕಲೈರಸಿ. ಹೀಗೆ ಆ ರಾತ್ರಿ ಅವರು ಪರಸ್ಪರ ಮನೆಯಿಂದ ಹೊರಗೆ ಮಾತುಕತೆಯಲ್ಲಿ ತೊಡಗಿದ್ದಾಗ ಕಲೈರಸಿಯ ಮನೆಯಲ್ಲಿ ಜಗಳದ ಸದ್ದು ಕೇಳಿಸುತ್ತದೆ. ಪ್ರತಿನಿತ್ಯ ಕುಡಿದು ಬರುವ ತನ್ನ ಸೋದರಮಾವ ಪಾಂಡಿ ತನ್ನ ಹೆಂಡತಿಯಾದ ಕಲೈರಸಿಯ ಅಕ್ಕನೊಂದಿಗೆ ಮಾತಿಗಿಳಿದಿರುತ್ತಾನೆ. ಉಳಿದರ್ಧ ಭೂಮಿಯನ್ನು ಮಾರಿ ಮಕ್ಕಳಾಗದಿರುವ ತನ್ನ ಹೆಂಡತಿಗೆ ಒಳ್ಳೆಯ ಆಸ್ಪತ್ರೆಗೆ ಸೇರಿಸುತ್ತೇನೆ ಎನ್ನುವ ಅವನ ಮಾತುಗಳಿಂದ ಆರಂಭವಾಗುವ ಅವರ ಸಂಭಾಷಣೆ ತುಂಬಾ ಸತ್ವಪೂರ್ಣವಾಗಿದೆ. ಮಕ್ಕಳಾಗದಿರಲು ಕೇವಲ ಹೆಣ್ಣನ್ನೇ ಕಾರಣವೆಂದು ನೋಡುವ ಈ ಪುರುಷ ಸಮಾಜ, ಮಕ್ಕಾಳಾಗದಿರಲು ಪುರುಷನ ದೌರ್ಬಲ್ಯಗಳು ಕಾರಣವಾಗುತ್ತವೆ ಎಂಬ ಸತ್ಯವನ್ನು ಮರೆಮಾಚಿ ಸದಾ ಹೆಣ್ಣಿನತ್ತಲೇ ವಕ್ರದೃಷ್ಟಿ ಬೀರುವ ಪುರುಷ ಪ್ರಾಧಾನ್ಯತೆಗೆ ಚಾಟಿ ಬೀಸುತ್ತದೆ. ಪ್ರತಿನಿತ್ಯ ಪುಂಡಪೋಕರಿಗಳೊಂದಿಗೆ ಎಗ್ಗಿಲ್ಲದೆ ಕುಡಿದು, ಒಂದಷ್ಟು ಪೋಲಿ ಚಿತ್ರಗಳನ್ನು ನೋಡಿ ರಾತ್ರಿ ಮನೆಗೆ ಬಂದು ಎರಡು ನಿಮಿಷ ಕೋಳಿ ಕುಕ್ಕುವ ಹಾಗೆ ಕುಕ್ಕಿ ಬಿಟ್ಟರೆ ಮಕ್ಕಾಳಗಲ್ಲ ಮಾರಾಯ ಎಂಬ ತನ್ನ ಹೆಂಡತಿಯ ಮೂದಲಿಕೆಯ ಮಾತುಗಳಿಂದ ರೊಚ್ಚಿಗೇಳುವ ಪಾಂಡಿ ತನ್ನ ಪುರುಷತ್ವವನ್ನು ಅನುಮಾನಿಸಿದಳೆಂಬ ಕಾರಣಕ್ಕೆ ಅವಳನ್ನು ಕೊಂದು ಹಾಕಿಬಿಡುವಷ್ಟು ಕೋಪದಿಂದ ಹಲ್ಲೆ ಮಾಡಲು ಮುಂದಾಗುತ್ತಾನೆ. ಇದರಿಂದ ಅವರ ಕೂಗಾಟಗಳು ಹೆಚ್ಚಿದ್ದರಿಂದ ಕಲೈರಸಿ ಅಬ್ದುಲ್ ನನ್ನು ಹಿತ್ತಾಲಾಚೆಯಲ್ಲಿಯೇ ನಿಲ್ಲಿಸಿ ಮನೆಯೊಳಗೆ ಓಡಿ ಬರುತ್ತಾಳೆ ಜಗಳ ವಿಕೋಪಕ್ಕೆ ತಿರುಗುತ್ತದೆ. ಹೊಡೆದಾಟ ತೀವ್ರವಾಗುತ್ತಿದ್ದಂತೆ ಮನಸ್ಸು ತಾಳಲಾರದೆ ಅಬ್ದುಲ್ ಕಲೈರಸಿಯ ಮನೆಯೊಳಗೆ ಕಾಲಿರಿಸುತ್ತಾನೆ.ಅವರ ಜಗಳವನ್ನು ಬಿಡಿಸುವ ವೇಳೆ ಭರದಲ್ಲಿ ಪಾಂಡಿಯನ್ನು ಅಚಾನಾಕ್ಕಾಗಿ ಕೆಳಗೆ ನೂಕುತ್ತಾನೆ. ಕುಡಿದ ಮತ್ತಿನಲ್ಲಿದ್ದ ಪಾಂಡಿಗೆ ಇದು ಈ ಸಾಬಿಯ ಅತಿರೇಕದ ವರ್ತನೆ ಎನಿಸುತ್ತದೆ. ಯಾರ ಮನೆಗೆ ಯಾರ ಅನುಮತಿಯಿಲ್ಲದೆ ಏಕಾಏಕಿ ಹೀಗೆ ಒಳಗೆ ಬಂದ ಎಂದು ಅವನ ಮೇಲೆ ಎರಗುತ್ತಾನೆ. ಈ ಪೆರುಮಾಳ್ ಮನೆಯಲ್ಲಿನ ಹೊಡೆದಾಟದ ತೀವ್ರತೆಯ ವಿಚಾರ ಚಿಲ್ಲರೆ ಅಂಗಡಿಯಲ್ಲಿ ಕೂತ ಮಾಯಮ್ಮನನ್ನು ಮುಟ್ಟುತ್ತದೆ. ಅವಳು ಆತಂಕದಲ್ಲಿ ಧಾವಿಸಿ ಬರುವಾಗ ದಾರಿಯಲ್ಲಿ ಸಿಗುವ ಮಗ ಅಬ್ದುಲ್ ನ ನೋಡಿ ಅವನ ತಲೆಯಿಂದ ಸೋರುತ್ತಿದ್ದ ರಕ್ತದಿಂದ ಕೆಂಡಾಮಂಡಲವಾಗುವ ಅವಳ ತಾಯಿ ಹೃದಯ ಸುಮ್ಮನಾಗದೆ ಮಗ ಬೇಡವೆಂದರೂ ಅವನ ಕೈ ಹಿಡಿದೆಳೆದು ಪೆರುಮಾಳ್ ಮನೆಯ ಮುಂದೆ ಜಗಳಕ್ಕೆ ಬೀಳುತ್ತಾಳೆ. ಮಾಯಮ್ಮ ತನ್ನ ಮಗನಿಗೆ ಈ ಪರಿ ಹೊಡೆಯಲು ಕಾರಣವೇನು? ತನ್ನ ಮಗನಿನ್ನು ಚಿಕ್ಕವನು. ನಿನ್ನ ಅಳಿಯ ಕುಡಿದಿದ್ದಾನೆ ಎಂದು ಯಾರಿಗೆ ಏನು ಬೇಕಾದರೂ ಮಾಡಬಹುದೇ? ಕುಡಿದಿದ್ದಾನೆ ಎಂದು ಹೆಂಡತಿಗೂ ಮತ್ತೆ ತಾಯಿಗೂ ವ್ಯತ್ಯಾಸ ತಿಳಿಯುವುದಿಲ್ಲವೇ ? ಎಂಬ ಮರ್ಮಾಘಾತುಕ ಮಾತುಗಳನ್ನಾಡುತ್ತಾಳೆ. ಕೈಲಾಗದವನು ಎಂದು ಜರೆಯುತ್ತಾಳೆ ಇದು ಪಾಂಡಿಯ ಗಂಡಸುತನವನ್ನು ಕೆಣಕಿ ಅಬ್ದುಲ್ ನ ತಾಯಿಗೆ ತನ್ನ ಪುರುಷ ಸೂಚ್ಯವಾದ ಮರ್ಮಾಂಗವನ್ನು ಎತ್ತಿ ತೋರಿಸುವ ಉದ್ದಟತನದ ಕೀಳುಮಟ್ಟದ ವರ್ತನೆಗೆ ಇಳಿಯುವುದರಿಂದ ಸಹಜವಾಗಿ ಅಬ್ದುಲ್ ಉದ್ರಿಕ್ತನಾಗಿ ಪಾಂಡಿಯ ಮೇಲೆ ಎರಗುತ್ತಾನೆ. ಈ ಗಲಾಟೆಯಿಂದ ಯಾರಿಗೂ ಅಂತಹ ಅಪಾಯಗಳಾಗದೆ ಇದ್ದರೂ ಆ ರಾತ್ರಿ ಅಬ್ದುಲ್ ನಿಗೆ ತನ್ನ ಮತ್ತು ಕಲೈರಸಿಯ ಪ್ರೇಮ ಮುಂದೆ ತಂದೊಡ್ಡಬಹುದಾದ ಚಿತ್ರಣ ಕಣ್ಮುಂದೆ ಬಂದು ನಿಲ್ಲುತ್ತದೆ. ಆದರೆ ಆ ದಿನ ಅಪರಾತ್ರಿ ದಿಢೀರೆಂದು ಅನಿರೀಕ್ಷಿತವಾಗಿ ಅಬ್ದುಲ್ ನ ಮನೆಗೆ ಕದ್ದು ಭೇಟಿ ನೀಡುವ ಕಲೈರಸಿ ತನ್ನೊಳಗಿರುವ ನೈಜ ಪ್ರೇಮವನ್ನು ಅಬ್ದುಲ್ ನಿಗೆ ಅರ್ಥ ಮಾಡಿಸಲು ಸಫಲಳಾಗುತ್ತಾಳೆ. ತಮ್ಮ ಪ್ರೇಮಕ್ಕೆ ಈ ಸಮಾಜದಲ್ಲಿ ಅಡ್ಡಿ ಆತಂಕಗಳು ತುಂಬಿರುವುದರಿಂದ ಅದನ್ನು ಇಲ್ಲಿಗೆ ಕೊನೆಗೊಳಿಸಬೇಕೆಂದು ಆಲೋಚಿಸಲೊರಡುವ ಅಬ್ದುಲ್ ಈ ಹಳ್ಳಿಯಲ್ಲಿ ತಾನು ತನ್ನ ತಾಯಿ ಕ್ಷೇಮದಿಂದ ಬದುಕಾಬೇಕಾದರೆ ನಿನ್ನ ಪ್ರೇಮವನ್ನು ಮರೆತು ಮುಂದುವರೆಯುವುದು ಅನಿವಾರ್ಯ ಎನ್ನುವ ಹಂತಕ್ಕೆ ಬಂದಾಗ, ತಮ್ಮೊಳಗಿನ ಪ್ರೇಮವನ್ನು ಮತ್ತೆ ಬಡಿದೆಬ್ಬಿಸುವ ಕಲೈರಸಿ ಈ ಜನ ಹೆಚ್ಚೆಂದರೆ ನಮ್ಮನ್ನು ಕೊಲ್ಲಬಹುದು ನಾನು ಅದಕ್ಕೂ ತಯಾರಾಗಿಯೇ ಇರುವೆನು ಎನ್ನುವ ಮೂಲಕ ತನ್ನ ಪ್ರೇಮದ ಗಟ್ಟಿತನವನ್ನು ಸಾರುತ್ತಾಳೆ. ನಿನಗೆ ಭಯವಿದ್ದರೆ ಹೇಳು ಈ ಹಳ್ಳಿಯನ್ನು ತೊರೆದು ಎಲ್ಲಾದಾರೂ ದೂರ ಬದುಕೋಣವೆನ್ನುವ ಕಲೈರಸಿಯ ಮಾತುಗಳು ಅಬ್ದುಲ್ ನನ್ನು ಮತ್ತೆ ಚಿಂತನೆಗೆ ಹಚ್ಚುತ್ತವೆ. ಇವಿಷ್ಟು ಅಬ್ದುಲ್ ನ ಪೂರ್ವಕತೆಯೆಂದು ಅವನೀಗ ಜೈಲಿನಲ್ಲಿ ಐದು ವರ್ಷಗಳನ್ನು ಕಳೆದಿದ್ದು ಇದೀಗ ಕೊಲೆ ಆರೋಪದಲ್ಲಿ ವಿಚಾರಣೆಗೆಂದು ಬೆಂಗಾವಲು ಪಡೆಯೊಂದಿಗೆ ವೆಲ್ಲೂರಿನಿಂದ ದೂರದ ಸಿವಾಗಂಗೈ ಕೋರ್ಟಿಗೆ ತೆರಳುತ್ತಿದ್ದಾನೆಂದು ಅರ್ಥ ಮಾಡಿಸುತ್ತದೆಯಾದರೂ ಒಂದು ಸಣ್ಣ ಕುತೂಹಲವನ್ನು ಕಾಯ್ದುಕೊಳ್ಳುತ್ತದೆ.ಹೀಗೆ ಬೆಂಗಾವಲು ಪೊಲೀಸ್ ಪಡೆ ಅಬ್ದುಲ್ ನನ್ನು ಕರೆದೊಯ್ಯುವಾಗ ವಿಲ್ಲುಪುರಂ ಎಂಬ ಸ್ಥಳದಲ್ಲಿ ರಾತ್ರಿ ಊಟಕ್ಕೆ ಬಸ್ಸಿನಿಂದಿಳಿದು ಹೋಟೆಲ್ನಲ್ಲಿ ಊಟ ಮಾಡಿ ವಾಪಾಸ್ಸಾಗುವ ವೇಳೆ ಕಥಿರವನ್
ಎರಡೂವರೆ ದಶಕಗಳ ಹಿಂದಿನ ಹಳ್ಳಿಯೊದರ ಮುಗ್ಧ ನೈಜ ಪ್ರೇಮ ಕತೆಯೇ “ಸಿರೈ” ಸಿನಿಮಾ-ಪ್ರಶಾಂತ್ ಬೆಳತೂರು Read Post »









