ಶಾಲೆಯ ಹೆಡ್ ಬಾಯೋರು ಬಳಸಿದ ಹಳೆಯ ಕರಿ ಬಣ್ಣದ ಮೊಬೈಲನ್ನು ಸಾಳೂಗೆ ಕೊಟ್ಟಿದ್ದರು. ಅದೇ ಮೊಬೈಲು ರ‍್ಸಿನಿಂದ ತೆಗೆದು ಘಂಟೆ ಎಷ್ಟಾಯಿತೆಂದು ನೋಡಿದಳು. ಏಳು ಗಂಟೆಯಾಗುತ್ತಾ ಬಂತು ಬೇಗ ಮುಟ್ಟಬೇಕು ಎಂದುಕೊಳ್ಳುತ್ತಾ ದೊಡ್ಡ ದೊಡ್ಡ ಹೆಜ್ಜೆಗಳನ್ನು ಹಾಕಲು ಶುರು ಮಾಡಿದಳು. ಆದರೆ ಈಗೀಗ ಸಾಳೂಗೆ ನಡೆಯಲು ತುಂಬಾ ತ್ರಾಸು ಆಗುತ್ತಿತ್ತು
ಇಂದು ವಿಮಾನ ನಿಲ್ದಾಣದಲ್ಲಿ ನಾನು, ವೈಶಾಲಿ, ವೆಂಕಟೇಶ, ಶ್ರೀನಿವಾಸ, ರಾಜೇಶ ಹಾಗೂ ಶ್ರೀನಾಥ ಬೆಂಗಳೂರಿನ ವಿಮಾನಕ್ಕಾಗಿ ಕಾಯುತ್ತಿದ್ದೇವೆ. ವಿಮಾನ ಹೊರಡುವುದು ಆರು ಗಂಟೆ ತಡವಾಗಿದ್ದರಿಂದ ನಿಮ್ಮೊಂದಿಗೆ ನನ್ನ ಈ ಕತೆಯನ್ನು ಬರೆದು ಹಂಚಿಕೊಳ್ಳಲು ಸಾಧ್ಯವಾಯಿತು. ವಿಮಾನ ತಡವಾಗಿದ್ದೂ ಗೋವಿಂದನ ದಯೆಯೇ ಎಂಬುದು ನನ್ನ ನಂಬಿಕೆ. ಇಲ್ಲಾ ಅಂದ್ರೆ ನನ್ನ ಕತೆ ನಿಮ್ಮೊಂದಿಗೆ ಹೇಳೋಕ್ಕೆ ಸಮಯ ಎಲ್ಲಿ ಸಿಕ್ತಾ ಇತ್ತು ಹೇಳಿ. ಸರಿ ಹಾಗಾದ್ರೇ, ಮತ್ತೇ ಬೆಂಗಳೂರಿನಲ್ಲಿ ಸಿಗೋಣವೇ………..
ವಾರದ ಕಥೆ ಅರಿವು ಮಧುರಾ ಕರ್ಣಮ್ ಮೊದಲೇ ಹೇಳಿಬಿಡುತ್ತೇನೆ. ನಾನೊಬ್ಬ ಗುಮಾಸ್ತ. ಪ್ರೆöÊವೇಟ್ ಕಂಪನಿಯಲ್ಲಿ ಕಾರಕೂನ. ಮಧ್ಯಮ ವರ್ಗದ ಬದುಕು. ತೀರಾ ಕೆಳ ಮಧ್ಯಮ ವರ್ಗದ ಜೀವನವನ್ನು ಮಧ್ಯಮ ವರ್ಗದ ಸನಿಹಕ್ಕೆ ಅಪ್ಪ-ಅಮ್ಮ ಎಳೆದು ತಂದು ನಿಲ್ಲಿಸಿದರೆಂದರೂ ತಪ್ಪಿಲ್ಲ. ಪುಟ್ಟ ಗುಡಿಸಲಿನಂತಿದ್ದ ಮನೆಯಲ್ಲಿದ್ದು, ಪೈಸೆಗೆ ಪೈಸೆ ಲೆಕ್ಕ ಹಾಕಿ, ತುತ್ತಿಗೆ ತಾತ್ವಾರ ಮಾಡಿಕೊಂಡು ಈ ಮನೆ ಕಟ್ಟಿ, ನನಗೆ ಶಿಕ್ಷಣ ಕೊಡಿಸಿ ಒಂದು ಮಟ್ಟಕ್ಕೆ ಬಂದರು. ಹಾಗೆಂದು ಹೇಳಿಕೊಳ್ಳುವ ಹಾಗೆ ದೊಡ್ಡದಲ್ಲ ಮನೆ. ಎರಡು ಬೆಡ್ ರೂಮ್‌ಗಳೆಂದು ಕರೆಸಿಕೊಳ್ಳುವ ಪುಟ್ಟ ಕೋಣೆಗಳು, ಸುಮಾರಾದ ಹಾಲು, ಚಿಕ್ಕ ಅಡಿಗೆಮನೆ, ಪಕ್ಕದಲ್ಲೊಂದು ಬಾಥ್‌ರೂಮು. “ಇದೇನು ಮಹಾ?” ಎನ್ನಬಹುದು ನೀವು. ಆದರೆ ಪಟಾಕಿ ಕಾರಖಾನೆಯಲ್ಲಿ ನೂರು ರೂಪಾಯಿಯ ಸಂಬಳದಿAದ ಕೆಲಸವನ್ನಾರಂಭಿಸಿದ ಅಪ್ಪನಿಗೆ, ಹುಳಿಪುಡಿ, ಸಾರಿನಪುಡಿ ಮಾಡಿ ಮಾರುವ ಅಮ್ಮನಿಗೆ, ನನ್ನ ಪಾಲಿಗೆ ಅದು “ತಾಜ್ ಮಹಲ್” ಎಂದೇ ಹೇಳಬಹುದು. `ಒಂದೇ ಸಂತಾನ ಸಾಕು’ ಎನ್ನುತ್ತ ನನ್ನನ್ನು ಯಾವುದಕ್ಕೂ ಕಡಿಮೆಯಾಗದಂತೆ ಬೆಳೆಸಿ, ಜೋಪಾನ ಮಾಡಿ, ಜತನದಿಂದ ಕಾಯ್ದು…..ಹೀಗೆ ಒಮ್ಮೆಲೆ……ನಡುನೀರಲ್ಲಿ ಕೈ ಬಿಟ್ಟು ಹೋಗಿಬಿಡುವುದೇ? ಅದೂ ಇಬ್ಬರೂ ಒಟ್ಟಿಗೆ…… ಹೋಗಲು ಏನಾಗಿತ್ತು? ಒಂದು ಕಾಯಿಲೆಯಿಲ್ಲ. ಕಸಾಲೆಯಿಲ್ಲ. ಗಟ್ಟಿ ಮುಟ್ಟಾದ ದೇಹ. ಮುಪ್ಪು ಈಗ ಮೊದಲನೇ ಮೆಟ್ಟಿಲೇರತೊಡಗಿತ್ತು. ಅರವತ್ತೆöÊದೇನು ಸಾಯುವ ವಯಸ್ಸೇ? ಅದಾವ ಮಾಯದಲ್ಲಿ ಗಾಡಿ ಬಂದು ಹೊಡೆಯಿತೋ. ಮಾಮೂಲಿನಂತೆ ತರಕಾರಿ ತರಲು ಇಬ್ಬರೂ ಯಶವಂತಪುರದ ಮಾರ್ಕೆಟ್ಟಿಗೆ ಹೋಗಿದ್ದರು. ಮಕ್ಕಳು ಚಿಕ್ಕವರೆಂದು ನನ್ನ ಹೆಂಡತಿ ಸುಧಾ ಹೋಗಿರಲಿಲ್ಲ ಬಿಡಿ. ನಾನಂತೂ ಫ್ಯಾಕ್ಟರಿ ತಪ್ಪಿದರೆ ಮನೆ ಅಂತಿದ್ದವ. ಹಾಗಿದ್ದರೂ ನಾನು ತಂದರೆ “ಎಷ್ಟು ದುಡ್ಡು ಕೊಟ್ಟೆ? ಸೊಪ್ಪಿನ ಕಟ್ಟು ಸಣ್ಣದು” ಎಂದೆಲ್ಲ ತಕರಾರು ಆರಂಭವಾಗುತ್ತಿತ್ತು. ನನಗೆ ಕಿರಿಕಿರಿ. ಸುಧಾಳಿಗೂ ಸಹ. ಹೀಗಾಗಿ ಸಂತೆ-ಕೊAತೆಯೆಲ್ಲ ಅವರದೇ. ತರುವ ಬರುವ ವ್ಯವಹಾರವನ್ನೆಲ್ಲ ಅಪ್ಪನಿಗೇ ಬಿಟ್ಟಿದ್ದೆ. ಬೇಕಾದಷ್ಟು ಚೌಕಾಸಿ ಮಾಡಿ ತರಕಾರಿಗಳನ್ನೆಲ್ಲ ಹೊತ್ತುಕೊಂಡು ಬರುವಾಗ ಬೂದುಗುಂಬಳಕಾಯಿ ಹೊತ್ತಿದ್ದ ಮೋಟಾರು ವ್ಯಾನೊಂದು ಎದುರಿಗೆ ಬಂದಿತAತೆ. ಭಾರವಾದ ಚೀಲಗಳನ್ನು ಹೊತ್ತು ಇವರಿಬ್ಬರೂ ಅತ್ತಿತ್ತ ಸರಿದು ತಪ್ಪಿಸಿಕೊಳ್ಳುವಷ್ಟರಲ್ಲಿ ಮೈಮೇಲೆ ಹರಿಯಿತಂತೆ. ಬ್ರೇಕ್ ಫೇಲಾಗಿತ್ತೋ ಏನೋ ಹಾಳಾದದ್ದು. ಅವರಿಬ್ಬರ ಪಾಲಿಗೆ ಯಮಸ್ವರೂಪಿಯಾಗಿತ್ತು. ಎಲ್ಲಾ ಕುಂಬಳಕಾಯಿಗಳೂ ಅಪ್ಪನ ಮೇಲೆ. ಇವರ ಕೈಚೀಲದಲ್ಲಿದ್ದ ತರಕಾರಿಗಳೆಲ್ಲ ಕೆನ್ನೀರ ಹೊಳೆಯಲ್ಲಿ ಮಿಂದು ರಸ್ತೆ ಪಾಲಾದವಂತೆ. ಡ್ರೈವರ್ ಪರಾರಿಯಾದ. ಮಾಲೀಕ ನಾಪತ್ತೆ. ಆಸ್ಪತ್ರೆಗೆ ಸೇರಿಸುವಷ್ಟೂ ವ್ಯವಧಾನವಿಲ್ಲದೆ ಮೊದಲು ಅಮ್ಮ ಕಣ್ಮುಚ್ಚಿದಳಂತೆ. ಬಳಿಕ ಅಪ್ಪ. ನನಗೆ ಸುದ್ದಿ ಬಂದಾಗಲೇ ಮಧ್ಯಾಹ್ನವಾಗಿತ್ತು. ಆಕಾಶವೇ ಕಡಿದು ಬಿದ್ದಂತೆ ದಿಗ್ಮೂಢನಾಗಿ ನಿಂತೆ. ನಾನೇನು ತೀರ ಚಿಕ್ಕವನಲ್ಲ. ಮದುವೆಯಾಗಿ ಎರಡು ಮಕ್ಕಳಿರೋನೆ. ಆದರೆ ಅಪ್ಪ-ಅಮ್ಮನ ಶ್ರೀರಕ್ಷೆಯಲ್ಲಿ ಗೂಡಿನಲ್ಲಿದ್ದ ಮರಿಯಂತೆ ಬೆಚ್ಚಗಿದ್ದೆ. ಹೊರಗಿನ ವ್ಯವಹಾರ ಒಂದೂ ಗೊತ್ತಿಲ್ಲ. ಜಗತ್ತಿನ ಕಪಟ, ಮೋಸಗಳ ಮುಖವಾಡದ ಬದುಕು ಸ್ವಲ್ಪ ದೂರವೇ. ಉದ್ಯೋಗದಲ್ಲೂ ಅಷ್ಟೇ. ಕೆಲಸವೇ ಮಾತಿಗಿಂತ ಮುಖ್ಯ. ಹೀಗಾಗಿ ಮಾಲೀಕರು ನನ್ನ ಮೇಲೆ ವಿಶ್ವಾಸವನ್ನಿಟ್ಟಿದ್ದರು. ಉಳಿದವರ ಹೊಟ್ಟೆ ಉರಿದು ಹೋದರೂ ನನ್ನ ಪಾಡಿಗೆ ನಾನಿರುತ್ತಿದ್ದೆ. ಈಗ ಏಕಾಏಕಿ ಬಯಲಿಗೆ ತಂದು ಬಿಟ್ಟಂಥ ಸ್ಥಿತಿ. ಗೂಡಂತೂ ದೂರ, ಮೇಲೆ ಚಪ್ಪರವೂ ಇಲ್ಲ. ಕೆಳಗಡೆ ಭೂಮಿಯೂ ಇಲ್ಲ. ಸುದ್ದಿ ತಿಳಿದದ್ದೇ ತಡ, ಎಲ್ಲೆಲ್ಲಿಂದಲೋ ನೆಂಟರು ಬಂದಿಳಿದರು. ಸೋದರತ್ತೆ, ದೊಡ್ಡಮ್ಮ ಎಂದೂ ಬರದವರು “ಅಯ್ಯೋ! ಸಾವಿಗಾದ್ರೂ ಬರದಿದ್ರೆ ಹ್ಯಾಗೆ?” ಎನ್ನುತ್ತ ಬಂದಿದ್ದರು. ನನಗೋ, ಜವಾಬ್ದಾರಿ ಒಮ್ಮೆಲೆ ಮೈಮೇಲೆ ಬಿದ್ದಂಥ ಪರಿಸ್ಥಿತಿ. ಏನು ಹೇಳಲೂ ಬಾಯಿಲ್ಲ. ಏನೂ ಮಾಡಲೂ ತೋಚುತ್ತಿಲ್ಲ. ದು:ಖ ಇಡಿಯಾಗಿ ಆವರಿಸಿಬಿಟ್ಟಿತ್ತು. ಮುಖ್ಯ ನಿಧಿಗಳಂತಿದ್ದ ಅಪ್ಪ-ಅಮ್ಮರನ್ನೇ ಕಳೆದುಕೊಂಡ ಮೇಲೆ ಉಳಿದಿದ್ದು ಇದ್ದರೆಷ್ಟು? ಬಿಟ್ಟರೆಷ್ಟು? ಎನ್ನುವ ವೈರಾಗ್ಯ ಮನವನ್ನು ಪೂರ್ತಿಯಾಗಿ ಆಕ್ರಮಿಸಿತ್ತು. ಯಾರೋ ಪೋಲೀಸ್ ಕಂಪ್ಲೇಂಟ್ ಕೊಟ್ಟಿದ್ದರು. ಅದು ಎಳ್ಳಷ್ಟೂ ಉಪಯೋಗವಾಗಲಿಲ್ಲವೆಂಬುದು ಬೇರೆ ಮಾತು. “ಗೋಪಿ, ಅನಾಥನಾದೆ ಅನ್ಕೋಬೇಡ. ನಾವೆಲ್ಲ ಹಿರೀಕರಿದ್ದೀವಿ ಇನ್ನೂ. ಈ ಸಮಯದಲ್ಲಿ ಅವರಿಗೆ ಉತ್ತಮ ಗತಿ ಪ್ರಾಪ್ತಿಯಾಗಲು ಬೇಕಾದದ್ದನ್ನೆಲ್ಲ ಸರಿಯಾಗಿ ಮಾಡಬೇಕಪ್ಪ. ಒಮ್ಮೊಮ್ಮೆ ಮಾಡೋದಿರುತ್ತೆ. ಅಂತ್ಯಕಾಲದ ಎಲ್ಲಾ ಶಾಸ್ತ್ರಗಳನ್ನು…….”ಎನ್ನುತ್ತ ಬಿಕ್ಕಳಿಸಿದರು ಸೋದರತ್ತೆ. “ಇರುವಾಗ ಕಾಸಿಗೆ ಕಾಸು ಲೆಕ್ಕ ಹಾಕಿದ ಪುಣ್ಯಾತ್ಮ. ನಿನ್ನನ್ನು ಈ ಸ್ಥಿತಿಗೆ ತಂದ. ಅವಳಂತೂ ಮುತ್ತೆöÊದೆಯಾಗಿ ಹೋದಳು. ಪುಣ್ಯವಂತೆ. ಅವರಿಬ್ಬರಿಗೂ ಸರಿ ದಾರಿ ತೋರಿಸು.”ಎಂದು ಕಣ್ಣೊರೆಸಿಕೊಂಡರು ದೊಡ್ಡಮ್ಮ. ಇಂಥ ಸಮಯದಲ್ಲಿ `ಇಲ್ಲ’ವೆನ್ನಲಾದೀತೆ? ಇನ್ನು ಸುಧಾಳ ತಾಯಿ ನನ್ನತ್ತೆ ಕೂಡ ಪರಮ ಆಸ್ತಿಕಳು. “ಒಮ್ಮೊಮ್ಮೆ ಮಾಡೋದೆಲ್ಲ ವಿಧಿವತ್ತಾಗಿ ಮಾಡಿ. ಖರ್ಚಿನ ಚಿಂತೆ ಮಾಡಬೇಡಿ” ಎಂದು ಸೆರಗು ಬಾಯಿಗೆ ತುಂಬಿದರು. ಅಮ್ಮ ಹಾಕಿದ ಗೆರೆ ದಾಟದ ನನ್ನವಳು ಅದನ್ನು ಯಥಾವತ್ ಅನುಮೋದಿಸಿದಳು. ಮಾವ, ಸೋದರಮಾವ ಮೋಹನ, ಅಪ್ಪನ ಗೆಳೆಯ ಗೋವಿಂದ ರಾಜು ಸೂಕ್ಷö್ಮವಾಗಿ “ನೋಡಿಕೊಂಡು ಮಾಡು. ಸುಮ್ಮನೆ ಅತೀ ಖರ್ಚು ಮಾಡಬೇಡ”ಎಂದು ಹೇಳಿದ್ದೂ ಇತ್ತು. ಯಾರ ಮಾತು ಕೇಳಬೇಕೆನ್ನುವುದೇ ಧರ್ಮಸಂಕಟ. ಆದರೆ ಅಪ್ಪನಿಗಿತ್ತಿದ್ದ”ಜಿಪುಣ”ಎಂಬ ಬಿರುದು ನನಗೂ ಬರಬಾರದೆಂಬ ಆಸೆ ಪ್ರಬಲವಾಗಿತ್ತೋ ಅಥವಾ ಅಮಾಯಕನಾಗಿದ್ದೆನೋ ಗೊತ್ತಿಲ್ಲ. ಅವರು ಹೇಳಿದ್ದಕ್ಕೆಲ್ಲ ಕೋಲೆ ಬಸವನಂತೆ ತಲೆಯಾಡಿಸಿದ್ದೆ. ಕಾಮಾಕ್ಷತ್ತೆಯ ಭಾವಮೈದನೇ ಇವೆಲ್ಲ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದನಂತೆ. “ಕರೆಸಲೇ”ಎಂದಾಗ ಯಾರು ಹಿತವರು ತಿಳಿಯದೇ “ಹ್ಞೂಂ” ಎಂದಿದ್ದೆ. ಇವುಗಳ ಬಗ್ಗೆ ನನ್ನ ಜ್ಞಾನವೂ ಅಷ್ಟಕ್ಕಷ್ಟೆ. ಯಾರೋ ಎಲ್ಲ ನೋಡಿಕೊಂಡರೆ ಒಳಿತು ಅನ್ನಿಸಿದ್ದುಂಟು. ದಿನಕರ್ಮಗಳಿಗೆ ಪುರೋಹಿತರನ್ನು ಗೊತ್ತು ಮಾಡುವುದರಿಂದ ಹಿಡಿದು ಪ್ರಣತಿ ತಂದು ದೀಪವಿಡುವದು, ನೀರಿಡುವದು, ಬೆಳೆ ಹಾಕುವದೂ ಇತ್ಯಾದಿ ಇತ್ಯಾದಿಗಳನ್ನೆಲ್ಲ ಕಾಮಾಕ್ಷತ್ತೆಯ ಭಾಮೈದ ಅಣ್ಣಯ್ಯ ನೋಡಿಕೊಂಡಿದ್ದ. ನಾನು ಬರೀ ಅವನ ಹಿಂಬಾಲಕನಷ್ಟೇ. “ನೀನು ಸುಮ್ಮನಿದ್ದು ಬಿಡಪ್ಪ. ಏನೇನು ಮಾಡಬೇಕೋ, ಎಲ್ಲೆಲ್ಲಿ ಹೋಗಬೇಕೋ ಎಲ್ಲಾ ಹೇಳಿ ಮಾಡಿಸ್ತೇನೆ.”ಎಂದಿದ್ದ. ಅಮ್ಮನಿಗೆ ಮುತತ್ತತೈದೆಯ, ಬಳೆ, ಕರಿಮಣಿ, ಮೊರದ ಬಾಗಿನ ತೌರಿನವರೇ ತಂದಿದ್ದರು. ಇವೆಲ್ಲ ರೀತಿಗಳನ್ನು ನೋಡರಿಯದಲ್ಲ, ಕೇಳೂ ಅರಿಯದವ ಮೂಕನಾಗಿದ್ದೆ. ಅವರೇನೇನು ಹೇಳುತ್ತಾರೋ ಮಾಡುತ್ತ ಗಡಿಗೆ ಹಿಡಿದು ಮುಂದೆ ಹೋಗಿದ್ದೆ. ಯಾವ ಊರಿನ ನೆಂಟರೋ ನನಗೇ ಗೊತ್ತಿಲ್ಲ. ಅವರನ್ನು ಒಮ್ಮೆಯೂ ನೋಡಿದ ನೆನಪಿಲ್ಲ. ತಂಡೋಪತಂಡವಾಗಿ ಸಂತಾಪ ಸೂಚಿಸಲು ಬಂದಿಳಿದರು. ಅಪ್ಪ-ಅಮ್ಮನ ಗುಣಗಾನ ನಡೆಯುತ್ತಿತ್ತು. ಇದ್ದಾಗ ಕವಡೆ ಕಿಮ್ಮತ್ತಿಲ್ಲದಿದ್ದರೂ ಸರಿಯೇ. ಸತ್ತ ಎಮ್ಮೆಗೆ ಸೇರು ತುಪ್ಪವಂತೆ. ಕಾಮಾಕ್ಷತ್ತೆಯ ಪತಿ, ಇಬ್ಬರು ಹೆಣ್ಣು ಮಕ್ಕಳು ಲಲಿತಾ, ಸುವರ್ಣಾ, ದೊಡ್ಡಮ್ಮನ ಮಗ, ಸೊಸೆ, ಚಿಕ್ಕಮ್ಮ ಹೀಗೆ ಪಟ್ಟಿ ಬೆಳೆಯುತ್ತಾ ಹೋಗಿ ಮೂವತ್ತೆöÊದು ಜನರಾಗಿದ್ದರು. ಬಂದ ಗಂಡಸರೆಲ್ಲ ಸಂತಾಪ ಸೂಚಿಸಿ ಹೊರಟು ಬಿಟ್ಟರೆ ಹೆಂಗಳೆಯರನ್ನು ಅತ್ತೆ, ದೊಡ್ಡಮ್ಮ ಉಳಿಸಿಕೊಳ್ಳುತ್ತಿದ್ದರು. “ಎಳೆ ಮಕ್ಕಳನ್ನಿಟ್ಟುಕೊಂಡು ಬರೋದು, ಹೋಗೋದು ಮಾಡಕ್ಕಾಗುತ್ತಾ? ಈ ದು:ಖದ ಸಮಯದಲ್ಲಿ ನಮ್ಮೋರು ತಮ್ಮೋರೂಂತ ಬ್ಯಾಡ್ವ? ಇರಿ, ಕರ್ಮಾಂತರ ಮುಗಿಸಿಕೊಂಡೇ ಹೊರಟು ಬಿಡೋಣ” ಎಂದು ಹೇಳಿದಾಗಲೆಲ್ಲ ಸುಧಾ”ಹ್ಞೂಂ”ಗುಟ್ಟುತ್ತ ಕಣ್ಣೀರು ಹಾಕುತ್ತಿದ್ದಳು. ಮೊದಲನೇ ದಿನ ಸುಧಾಳ ತೌರಿನಿಂದ ಊಟ, ತಿಂಡಿ ಎಲ್ಲಾ ಬಂತು. ಮುಂದೆರಡು ದಿನಗಳೂ ನೆರೆಕೆರೆಯವರೇ ನೋಡಿಕೊಂಡಿದ್ದರು. ಮೂರನೇ ದಿನ ಶ್ರೀರಂಗಪಟ್ಟಣದಲ್ಲಿ ಅಸ್ಥಿ ವಿಸರ್ಜನೆಯಾದ ನಂತರ ಅಣ್ಣಯ್ಯ “ಇಲ್ನೋಡಪ, ನೀವಂತೂ ಮೈಲಿಗೆಯವರು. ಒಳಗೆ ಮುಟ್ಟುವಂತಿಲ್ಲ. ಇಷ್ಟು ಜನರಿಗೆ ಅಡಿಗೆ,ಪಡಿಗೆ ಹೇಗೇಂತ? ನಮ್ಮೋರೊಬ್ರಿದ್ದಾರೆ. ಅಡಿಗೆ, ತಿಂಡಿ ಮಾಡಿ ತಂದು ಬಡಿಸಿ ತೊಗೊಂಡ್ಹೋಗ್ತಾರೆ. ನೆಂಟರಿಗೆಲ್ಲ “ಮಾಡಿ” ಎನ್ನುವದಕ್ಕಿಂತ ಸುಮ್ನೆ ಒಂದು ಹುಳಿಯನ್ನ, ಮೊಸರನ್ನ….ಅಲ್ಲವಾ?” ಎಂದಾಗ `ಸರಿ’ ಎನಿಸಿತ್ತು. ಸಲಿಗೆ ಇಲ್ಲದ ನೆಂಟರಿಗೆ “ಅಡಿಗೆ ಮಾಡಿ” ಅಂತ ಹೇಳಕ್ಕಾಗುತ್ತಾ? ಆದರೆ ಬರೀ ಸಾರನ್ನ, ಮೊಸರನ್ನದಿಂದ ಆರಂಭವಾದದ್ದು ಪುಳಿಯೋಗರೆ, ವಾಂಗೀಭಾತು, ಚಿತ್ರ‍್ರಾನ್ನ, ಹಪ್ಪಳ, ಪಕೋಡ ಎಂದು ಬೆಳೆಯುತ್ತಲೇ ಹೋಯಿತು. ‘ಬೇಡ ಎನ್ನಲಾರದ ಸ್ಥಿತಿಯಲ್ಲಿ ನಾನಿದ್ದೆನಲ್ಲ….ಎಲ್ಲವನ್ನೂ ಅಣ್ಣಯ್ಯನಿಗೊಪ್ಪಿಸಿ…. ಮೋಹನ ಮಾವ ಸೂಕ್ಷö್ಮವಾಗಿ “ಬೇಡ ಗೋಪಿ, ಖರ್ಚು ವಿಪರೀತ ಬರುತ್ತೆ. ಕೂತು ಉಣ್ಣುವವರಿಗೇನು? ಬಂದವರೂ ಮನೆಯವರೇ. ಅಡಿಗೆ ಮಾಡ್ತಾರೆ ಬಿಡು” ಎಂದಾಗ “ಛೆ”ಎನ್ನುತ್ತ ತಲೆ ಕೊಡವಿದ್ದೆ. ಅಮ್ಮನ ಹಿರಿಯಕ್ಕ “ನಾನು ಮಾಡುತ್ತೇನೆ” ಎಂದು ಹೊರಟವಳನ್ನೂ ಸುಮ್ಮನಾಗಿಸಿದ್ದಾಯಿತು. ಮುಂದೆ ಮೋಹನ ಮಾವ ಮಾತಾಡಲೇ ಇಲ್ಲ.”ಇಂಥ ಸಮಯದಲ್ಲಿ ದುಡ್ಡಿನ ಮುಖ ನೋಡೋಕಾಗುತ್ತಾ?” ಎಂದು ಯಾರೋ ಹೇಳಿದ್ದನ್ನು ಅನುಮೋದಿಸಿದ್ದೆ. ಒಂಬತ್ತನೇ ದಿನದಿಂದ ಕರ್ಮಗಳು ಆರಂಭವಾದವು. ಅಣ್ಣಯ್ಯ ಎಲ್ಲಿ ಹೇಗಂತಾನೋ ಹಾಗೆ. ಹತ್ತನೇ ದಿನ `ಮಲ್ಲೇಶ್ವರಂ’ನ ವೈದಿಕ ಸಭೆಯಲ್ಲಿ ಧರ್ಮೋದಕ ಬಿಟ್ಟು ಐವತ್ತು ಜನ ಊಟ ಮಾಡಿ ಬಂದೆವು. ಕಾಯಿಪಿಂಡ ಏನೂ ತೊಂದರೆ ಇಲ್ಲದೆ ಆಗಿತ್ತು. ಅವರಿಗೇನು ಆಸೆಯಿತ್ತೋ, ಇಲ್ಲವೋ ಬ್ರಹ್ಮನೇ ಬಲ್ಲ. “ಎಷ್ಟಾಯಿತು ಅಣ್ಣಯ್ಯ?” ಎಂದು ಕೇಳಿದ್ದೇ ತಡ “ನೀನು….ಒಂಚೂರೂ ಚಿಂತೆ ಮಾಡ್ಬೇಡ ಮಹಾರಾಯ. ಒಂದು ದಮ್ಮಡೀನೂ ಬಿಚ್ಚಬೇಡ. ನಾನೆಲ್ಲ ನೋಡ್ಕೋತೇನೆ. ಆಮೇಲೆ ಎಷ್ಟೂಂತ ಹೇಳಿ ಲೆಕ್ಕ ಕೊಡ್ತೀನಿ.”ಎಂದ. ಸುಧಾ “ನಿಮ್ಮಂತವರು ಸಿಕ್ಕದ್ದು ನಮ್ಮ ಪುಣ್ಯ” ಎನ್ನುತ್ತ ಹನಿಗಂಗಳಾಗಿದ್ದಳು. ಹನ್ನೆರಡನೇ ದಿನ ಎಲ್ಲ ಸಾಂಗವಾಗಿ ನಡೆಯಿತು. ಕಾಮಾಕ್ಷತ್ತೆಯ ನಿರ್ದೇಶನದಂತೆ ಪೂರ್ವ ಪಂಕ್ತಿಗೆ ಊಟಕ್ಕೆ ಕುಳಿತ ಮೂವರು ಬ್ರಾಹ್ಮಣರಿಗೆ ಬೆಳ್ಳಿ ದೀಪ, ಚೊಂಬು, ಲೋಟ ನೀಡಲಾಯಿತು. ಖರೀದಿಯೆಲ್ಲ ಅಣ್ಣಯ್ಯನದೇ. ಉಳಿದ ಬ್ರಾಹ್ಮಣರಿಗೆ ಪಂಚೆ, ಉತ್ತರೀಯ ಜೊತೆಗೆ ದಕ್ಷಿಣೆ. “ನಿಮ್ಮ ತಂದೆ, ತಾಯಿ ಬಂದು ಕುಳಿತಿದ್ದಾರೆ. ಅವರಿಗೆ ಆಸನ ಕೊಡಿ. ಅರ್ಘ್ಯ, ಪಾದ್ಯ ಕೊಡಿ. ಹಾರ ಹಾಕಿ. ಹೊಸ ವಸ್ತç ಕೊಡಿ. ಗಾಳಿ ಹಾಕಿ, ಸೇವೆ ಮಾಡಿ.”ಎಂದು ಹೇಳುತ್ತ ಹೋದಂತೆ ನಾನು ಮಾಡುತ್ತ ಹೋದೆ. “ಜಗನ್ನಾಥ ನಾಮೇಣ…..ವಸು ರೂಪೇಣ….”ಎಂದು ಹೇಳುತ್ತಿದ್ದಂತೆ ಮತ್ತೆ ಮತ್ತೆ ಕಣ್ಣು ತುಂಬುತ್ತಿದ್ದವು. ಅಣ್ಣಯ್ಯ ಮನೆಯಲ್ಲೇ ಮಡಿಯಲ್ಲಿ ಅಡಿಗೆ ಮಾಡಿಸಿ ಬಡಿಸಲು ಸುಧಾಳನ್ನೂ, ದೊಡ್ಡಮ್ಮನನ್ನೂ, ಕರೆದಿದ್ದ. ಏನೇನೋ ಪಕ್ವಾನ್ನಗಳು. ಭಟ್ಟರಿಗೆ ದಕ್ಷಿಣೆಗಳನ್ನೂ ಅವನೇ ನನ್ನ ಕೈಯಿಂದ ಕೊಡಿಸಿದ. ಅಮ್ಮನ ಸ್ಥಾನಕ್ಕೆ ಕುಳಿತ ಮುತ್ತತೈದೆಗೆ ಸೀರೆ ಸಹಿತ ಮೊರದ ಬಾಗಿನ ನೀಡಲಾಯಿತು. ನೂರು ಜನರ ಊಟವಾಗಿತ್ತು. ಮರುದಿನ ವೈಕುಂಠ ಸಮಾರಾಧನೆಗೆ ಇನ್ನೂ ಜನ ಹೆಚ್ಚಾಗಿದ್ದರು. ನೆರೆ ಕೆರೆಯವರೂ ಸೇರಿದ್ದರು. ಮುತ್ತೈದೆಗೆ ಸಂತೃಪ್ತಿಯಾಗಲೆಂಂದು ಕಾಮಾಕ್ಷತ್ತೆಯ ಸಲಹೆಯಂತೆ ಹನ್ನೆರೆಡು ಜೊತೆ ಅರಿಸಿಣ ಕುಂಕುಮದ ಬಟ್ಟಲುಗಳು, ಬಂದ ನೆಂಟರಿಷ್ಟರಿಗೆಲ್ಲ ಸೀರೆ ಅಣ್ಣಯ್ಯನೇ ತಂದಿದ್ದ. ನೆಂಟರೆಲ್ಲ ನಾಮುಂದು, ತಾಮುಂದು ಎಂದು ಬಣ್ಣಗಳನ್ನಾರಿಸಿದರು. ಬಂದ ಹೆಂಗಳೆಯರಿಗೆಲ್ಲ ಕವರಿನಲ್ಲಿ ಪ್ರಸಾದದ ರವೆಯುಂಡೆ,ಬಳೆ, ರವಿಕೆ ಬಟ್ಟೆ ನೀಡಲಾಯಿತು. ಯಥಾಶಕ್ತಿ ಸುವರ್ಣದಾನ, ಬೆಳ್ಳಿ, ಗೋದಾನ, ಭೂದಾನ, ಶಯ್ಯಾದಾನ, ದೀಪದಾನ, ಉದಕ ಕುಂಭ, ಚಪ್ಪಲಿ, ಛತ್ರಿ, ಪುಸ್ತಕ, ರುದ್ರಾಕ್ಷಿ ಮಣಿ, ವಸನ ಇತ್ಯಾದಿಗಳನ್ನೆಲ್ಲ ಅತ್ತೆ, ದೊಡ್ಡಮ್ಮನ ನಿರ್ದೇಶನದಂತೆ ಕೊಟ್ಟು ಕೃತಾರ್ಥನಾದೆ. ಎಲ್ಲರ ಬಾಯಲ್ಲಿ “ಮಗ ಇದ್ದರೆ ಹೀಗಿರಬೇಕು. ಎಲ್ಲ ಸಾಂಗ, ಸಾಂಪ್ರತವಾಗಿ ಮಾಡ್ದ. ಪುಣ್ಯಾತ್ಮರಿಬ್ಬರೂ ಉತ್ತಮ ಲೋಕ ಸೇರಿದ್ರು.”ಎಂಬ ಹೊಗಳಿಕೆ ಕೇಳಿ ಉಬ್ಬಿದೆ. ಬಂದವರೆಲ್ಲ ಅಮ್ಮ, ಅಪ್ಪನ ಗುಣಗಳನ್ನು ಹೊಗಳುತ್ತ ತೃಪ್ತರಾದರು. ನನ್ನ ಮಾವ ಆಗಲೇ ಹತ್ತಿರ ಬಂದು “ಇಷ್ಟು ವೈಭವ ಬೇಕಿರಲಿಲ್ಲ ಅನ್ಸುತ್ತೆ. ನಿಮ್ಮ ತಂದೆ, ತಾಯಿ ಬಹಳ ಸರಳ ಮನುಷ್ಯರು.” ಎಂದಾಗ ಸುಧಾಳ ತಾಯಿ “ಎಲ್ಲಾ ಮಾಡ್ಬೇಕಾದ ಶಾಸ್ತçಗಳೇ. ಸುಮ್ನಿರಿ” ಎಂದವರ ಬಾಯಿ ಮುಚ್ಚಿಸಿದರು. ಕಾಮಾಕ್ಷತ್ತೆ”ಇವರಪ್ಪ ನಮ್ಮಪ್ಪನ ತಿಥೀನೆ ಸರಿಯಾಗಿ ಮಾಡ್ಲಿಲ್ಲ. ಲೆಕ್ಕ ಹಾಕಿದ್ದೂ ಹಾಕಿದ್ದೆ. ಏನ್ ಕೇಳಿದ್ರೂ `ಇದ್ದಾಗ ಚೆನ್ನಾಗಿ ನೋಡ್ಕೊಂಡು ಬೇಕಾದಷ್ಟು ಸೇವೆ ಮಾಡಿದೀನಿ ಬಿಡು.’ ಅಂತ ನನ್ನ ಬಾಯಿ ಬಡಿದ. ಸದ್ಯ! ಮಗ ಹಾಗ್ಮಾಡ್ದೆ ನನ್ಮಾತು ಕೇಳಿ ಎಲ್ಲ ಸಾಂಗವಾಗಿ ಮಾಡ್ದ.”ಎಂದಾಗ ನನಗೆ ಜಿಪುಣನೆಂಬ ಬಿರುದು ಕೊಡಲಿಲ್ಲವಲ್ಲ ಎಂದು ಉಬ್ಬಿದ ಮನ ಅಪ್ಪನ ತೆಗಳಿಕೆ ಕೇಳಿ ನೊಂದಿತು. ಮೈಲಿಗೆ ಬಿಡಿಸಿದ ಎಲ್ಲರನ್ನೂ ಕಂಬನಿ
ಬಡಕಲು ಶರೀರ ಮುಗ್ದ ನಡೆಯ ಅವರನ್ನ ದೊಡ್ಡಕ್ಕಾ ಅಂತಾನೇ ಕರೆಯಲು ಶುರು ಮಾಡಿದಳು ಕಾವ್ಯ. ಆಗೊಮ್ಮೆ ಈಗೊಮ್ಮೆ ಪ್ರೀತಿಯಿಂದ ‘ಪ್ರೇಮಕ್ಕ’ ಅಂತ ಹೆಸರಿಡಿದು ಕೂಗುತ್ತಿದ್ದಳು . ರಂಗೋಲಿ ಯಾವ ದಿಕ್ಕಿಗೆ ಹಾಕಬೇಕು, ದೇವರಪೂಜೆ, ಉಪವಾಸ ವೃತ ಕಲಿಸಿದವರೇ ಪ್ರೇಮಕ್ಕಾ.ಬರಬರುತ್ತ ಕಾವ್ಯಳೊಂದಿಗೆ ತುಂಬಾ ಆತ್ಮೀಯರಾಗಿ ಬಿಟ್ಟರು.ವಾರದಲ್ಲಿ
ಸ್ನೇಹ
ವಾರದ ಕಥೆ ಸ್ನೇಹ ಜ್ಯೋತಿ ಡಿ ಭೊಮ್ಮಾ ಮದುವೆಯಾಗಿ ಮುವತೈದು ವಸಂತಗಳನ್ನು ಜೊತೆಯಲ್ಲಿ ಕಳೆದ ನಿರ್ಮಲಾ ಮತ್ತು ಮೂರ್ತಿ ದಂಪತಿಗಳಿಗೆ ಈಗ ಬದುಕಿನ ಎಲ್ಲಾ ಜವಾಬ್ದಾರಿ ಮುಗಿಸಿ ನಿರಮ್ಮಳವಾಗಿ ಬದುಕು ಸಾಗಿಸುವ ಸಮಯ.ಮಗನ ಮತ್ತು ಮಗಳ ಮದುವೆ ಮಾಡಿ ಅವರನ್ನು ಒಂದು ದಡಕ್ಕೆಸೇರಿಸಬೇಕಾದರೆ ಜೀವನದ ಸಮಯವೆಲ್ಲ ಮುಡುಪಾಗಿಡಬೇಕಾಯಿತು. ಈಗ ನಿವೃತ್ತಿ ಜೀವನ ನಡೆಸುತ್ತಿರುವ ಅವರಿಗೆ ಎಲ್ಲವೂ ಒಮ್ಮೆಲೆ ಖಾಲಿಯಾದ ಅನುಭವ,ಯಾವದರಲ್ಲೂ ಉತ್ಸಾಹವಿಲ್ಲ.ಇಷ್ಟು ದಿನ ನೌಕರಿ ಹಣಗಳಿಕೆ ಪ್ರತಿಷ್ಠೆ ಮಕ್ಕಳ ವಿದ್ಯಾಭ್ಯಾಸ ಮದುವೆಗಳ ಜವಾಬ್ದಾರಿಗಳೆಲ್ಲ ಒಂದೋಂದಾಗಿ ಮುಗಿಯುತ್ತಿದ್ದಂತೆ ಜೀವನದಲ್ಲಿ ನಿರಾಶೆ ಕಾಡತೊಡಗಿತು.ಸಮಕಾಲಿನ ಗೆಳೆಯರಿದ್ದರು ಎಲ್ಲರೂ ಸಮಯ ಮತ್ತು ವಯಸ್ಸಿನ ಹೊಡೆತಕ್ಕೆ ಸಿಲುಕಿದವರೆ ಹೆಚ್ಚು ಕಡಿಮೆ ಎಲ್ಲರ ಪರಿಸ್ಥಿತಿಯು ಇದೆ. ಆದರೆ ನಿರ್ಮಲಾರ ವಿಷಯ ಹಾಗಲ್ಲ ಅವಳು ಯಾವಾಗಲೂ ಚೈತನ್ಯದ ಚಿಲುಮೆಯೆ.ಮಕ್ಕಳು ದೂರ ಇದ್ದರೂ ಕೊರಗದೆ ತನಗಾಗೆ ದೊರೆತ ಸಮಯವನ್ನು ಆನಂದದಿಂದ ಕಳೆಯುವರು.ಇಬ್ಬರೆ ಇರುವ ಮನೆಯಲ್ಲೂ ಕೆಲಸಗಳಿಗೆನು ಕೊರತೆಯೆ ,ಕಸ ಮುಸುರೆ ಪೂಜೆ ಹಬ್ಬಗಳು ವ್ರತ ,ಕಾಲೋನಿಯ ಗೆಳತಿಯರೊಂದಿಗೆ ಕಿಇಟಿ ಪಾರ್ಟಿ ಗಳಲ್ಲೆ ಕಾಲದ ಪರಿವಿಲ್ಲದೆ ಬದುಕುವವರು.ಅವರದು ಉತ್ಸಾಹ ಭರಿತ ಜೀವನ.ಚೈತನ್ಯದ ಇನ್ನೊಂದು ಹೆಸರೆ ಹೆಣ್ಣಲ್ಲವೆ.ಇತ್ತೀಚೆಗೆ ಪತಿ ಮಂಕಾಗುತ್ತಿರುವದನ್ನ ಗಮನಿಸಿದ ನಿರ್ಮಲಾ ,ಅವರನ್ನೂ ಚೇತೋಹಾರಿಯನ್ನಾಗಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಲೆ ಇದ್ದರು .ಯೌವನದಲ್ಲಿ ಅವರ ರಸಿಕತೆಯ ಅನುಭವವಿದ್ದ ನಿರ್ಮಲಾಗೆ ಪತಿ ಈಗ ಮಂಕಾಗಿರುವದು ಸಹಿಸಲಾಗುತ್ತಿಲ್ಲ. ಒಂದು ದಿನ ಬೆಳಗಿನ ವಾಯುವಿಹಾರ ಮುಗಿಸಿ ಮನೆಗೆ ಬಂದ ದಂಪತಿಗಳಿಗೆ ಮೂರ್ತಿಯ ಮೊಬೈಲ್ ಕರೆ ಬರಮಾಡಿಕೊಂಡಿತು.ಒಳಗಿನ ಫೋನ್ ತಂದು ಪತಿಗೆ ಕೊಟ್ಟ ನಿರ್ಮಾಲರು ಒಳಗಿನ ಉಳಿದ ಕೆಲಸಗಳ ಕಡೆ ಗಮನ ಹರಿಸಿದರು.ಮೊಬೈಲ್ ಮೇಲಿನ ಅನ್ ನೋನ್ ನಂಬರ್ ನೋಡಿ ಹಲೋ ಎಂದ ಮೂರ್ತಿಯವರಿಗೆ ಆ ಕಡೆಯಿಂದ ಹಲೋ ಎಂಬ ಹೆಣ್ಣಿನ ದನಿ ಕೇಳಿಸಿತು. ಗುರುತು ಸಿಗದೆ ಯಾರು..! ಎಂಬ ದನಿಗೆ ಆ ಕಡೆಯಿಂದ ಮೌನವೆ ಉತ್ತರವಾಯಿತು.ಕೇಳಿಸಲಿಕ್ಕಿಲ್ಲ ಎಂದು ಮೂರ್ತಿ ಯವರು ಯಾರು ಎಂದು ಜೋರಾಗಿ ಕೇಳಿದರು. ನಾನು ರೇವತಿ. ಯಾರು ಎಂಬುದು ನೆನಪಿಗೆ ಬಾರದೆ ಮೂರ್ತಿ ಕ್ಷಣಕಾಲ ಮೌನವಾದರು.ಮತ್ತೆ ಅತ್ತಲಿಂದ ದ್ವನಿ ,ನೆನಪಾಗಲಿಲ್ಲವೆ..ಇಲ್ವಲ್ಲ , ಆ ಹೆಸರಿನವರಾರು ನೆನಪಿಗೆ ಬರುತ್ತಿಲ್ಲ ಎಂಬ ಮೂರ್ತಿ ಯ ಉತ್ತರಕ್ಕೆ ಅತ್ತಲಿಂದ ನಿಟ್ಟುಸಿರೆ ದ್ವನಿಯಾಯುತು.ಸ್ನೇಹ ಚಿರಾಯು ಅಲ್ವೆ ,ಮರೆಯುವದುಂಟೆ ಎಂಬ ದ್ವನಿಯಲ್ಲಿನ ಆರ್ದ್ರತೆ ಗುರುತಿಸಿದ ಮೂರ್ತಿಯವರು ಆಶ್ಚರ್ಯ ಸಂತೋಷದಿಂದ ರೇವತಿನಾ ..ಎಂಬ ಉದ್ಗಾರ ತೆಗೆದರು. ತಮ್ಮ ಕಾಲೇಜಿನ ದಿನಗಳ ಸಹಪಾಠಿ.ಇಬ್ಬರು ಒಂದೇ ಕಾಲೇಜಿನಲ್ಲಿ ಓದಿದವರು , ಆಕರ್ಷಣೆ ಯು ಪ್ರೇಮವೆಂದೆ ನಂಬುವ ವಯಸ್ಸದು.ಇಬ್ಬರ ಮದ್ಯ ಒಂದು ಆತ್ಮೀಯ ಬಾಂದ್ಯವ್ಯ ಬೆಸೆದಿರುವದು ಇಬ್ಬರು ಅರಿತಿದ್ದರು.ತಮ್ಮ ತಮ್ಮ ಮನೆಯ ಕಟ್ಟುಪಾಡುಗಳ ಅರಿವಿದ್ದ ಇಬ್ಬರೂ ಯಾವದೇ ರೀತಿಯಲ್ಲಿ ಮುಂದುವರೆಯುವ ಧೈರ್ಯ ಮಾಡದೆ ಒಂದು ಮಧುರ ಸ್ನೇಹ ಬಾಂದವ್ಯ ಮುಂದುವರೆಸಿಕೊಂಡು ಹೋಗಿದ್ದರು.ಮನಸ್ಸುಗಳು ಒಂದಾಗಿದ್ದರು ಕುಟುಂಬದ ತೀರ್ಮಾನ ಮೀರುವ ಧೈರ್ಯ ಇಬ್ಬರಿಗೂ ಇರಲಿಲ್ಲ. ಕಾಲೇಜಿನ ದಿನಗಳು ಮುಗಿದು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಕೆಲಸ ಹುಡುಕಿಕೊಂಡು ಮನೆಯವರು ನಿರ್ದರಿಸಿದವರೊಡನೆ ಮದುವೆಯಾಗಿ ತಮ್ಮ ತಮ್ಮ ಜವಾಬ್ದಾರಿಗಳಿಗೆ ಹೆಗಲು ಕೊಟ್ಟರು.ಜೀವನದ ಜಂಜಡಗಳಲ್ಲಿ ಹಿಂದಿನ ಮಧುರ ಸ್ನೇಹದ ನೆನಪು ಕ್ರಮೇಣವಾಗಿ ಮಾಸಿತ್ತು. ಇಷ್ಟು ವರ್ಷಗಳ ನಂತರ ಹೀಗೆ ಹಠಾತ್ ಅಗಿ ರೇವತಿಯ ಕರೆ ಮೂರ್ತಿಯವರಲ್ಲಿ ಒಂದು ಪುಳುಕ ಮೂಡಿಸದೆ ಇರಲಿಲ್ಲ.ಇಬ್ಬರು ಮಾತಾಡಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಭೆಟಿಯಾಗುವ ತಿರ್ಮಾನದಿಂದ ಪೋನ್ ಡಿಸ್ ಕನೆಕ್ಟ್ ಮಾಡಿದ್ದರು. ಪತಿಗಾಗಿ ಕಾಫಿ ತಂದ ನಿರ್ಮಲಾ ಗಂಡನ ನಗುಮೊಗ ನೋಡಿ ಯಾರೆಂದು ಕೇಳಲು ,ಮೂರ್ತ ಯವರು ತಮ್ಮ ಸಹಪಾಠಿ ರೇವತಿ ಮತ್ತು ಅವಳ ಪ್ರತಿ ಆವಾಗ ತಮಗಿದ್ದ ಆಕರ್ಷಣೆ ಮತ್ತು ಎರಡು ಕುಟುಂಬಗಳ ಸಂಪದ್ರಾಯಗಳ ಬಗ್ಗೆ ಬಹಳ ಹೊತ್ತು ಮಾತಾಡಿದರು.ತಾವು ಭೆಟಿಯಾಗುವ ವಿಷಯವು ತಿಳಿಸದೆ ಇರಲಿಲ್ಲ. ಜಡತ್ವ ಕಳೆದು ಪತಿಯಲ್ಲಿ ಮೂಡಿದ ಉತ್ಸಾಹ ಕಂಡು ಬೆರಗಾದ ನಿರ್ಮಲಾ ಪತಿಯ ಸಂತೋಷದಲ್ಲಿ ತಾವು ಭಾಗಿಯಾಗುತ್ತ ಕೀಟಲೆ ಮಾಡದೆ ಇರಲಿಲ್ಲ.ಪತಿಯನ್ನು ಎಂದೂ ಅನುಮಾನದ ದೃಷ್ಟಿಯಿಂದ ನೋಡಿದ್ದೆ ಇಲ್ಲ.ಪ್ರೀತಿಯ ಭದ್ರ ಬುನಾದಿಯೆ ನಂಬಿಕೆಯಲ್ಲವೆ..ಆ ನಂಬಿಕೆಯೆ ಅವರಿಬ್ಬರ ಅನ್ಯೋನ್ಯತೆ ಗೆ ಕಾರಣ. ಮನೆಯಿಂದ ಸ್ವಲ್ಪ ದೂರವಿರುವ ಒಂದು ರೆಸ್ಟೋರೆಂಟ್ ನಲ್ಲಿ ಕಾಯುತ್ತ ಕುಳಿತರು ಮೂರ್ತಿ ಯವರು.ದೂರದಲ್ಲಿ ಒಂದು ಸ್ತ್ರೀ ಆಕ್ರತಿ ನಿಧಾನವಾಗಿ ಬರುತ್ತಿರುವದು ಕಾಣಿಸಿತು. ಅವಳು ಅದೆ ರೆಸ್ಟೋರೆಂಟ್ ಗೆ ಬಂದು ಆ ಕಡೆ ಈ ಕಡೆ ನೋಡುವ ನೋಟದಿಂದ ಅವಳೆ ರೇವತಿ ಎಂದರಿತ ಮೂರ್ತಿ ಅವಳನ್ನು ಸಮೀಪಿಸಿದರು. ಎನು! ಇಷ್ಟು ದಪ್ಪ ಆಗಿದ್ದಿಯಾ.ಗುರುತೆ ಸಿಗಲಿಲ್ಲ ಎಂದರು ,ಮುಖದ ತುಂಬಾ ನಗು ತುಂಬಿಕೊಂಡು. ನೀನೆನು ಕಡಿಮೆಯೆ..ಮೂರು ಸುತ್ತು ದಪ್ಪಗಾಗಿದ್ದಿಯಾ..ಆಗದೆ ಎನು ಬಿಸಿ ಬಿಸಿ ಮಾಡಿ ಹಾಕುವ ಹೆಂಡತಿ ಇರುವಾಗ ,ಎಂಬ ಮಾತಿಗೆ ಇಬ್ಬರೂ ಮನದುಂಬಿ ನಕ್ಕರು. ಇಷ್ಟು ವರ್ಷಗಳ ನಂತರ ಅದೇಗೆ ನೆನಪು ಬಂತು ಎಂಬ ಮೂರ್ತಿ ಯ ಮಾತಿಗೆ ,ಮನಸ್ಸು ಮುದಗೊಳಿಸುವ ನೆನಪುಗಳು ಬೆಚ್ಚಗೆ ಎದೆಯಲ್ಲಿ ಕಾಪಿಟ್ಟುಕೊಂಡರೆ ಮಾತ್ರ ಜೀವನ ಹಗುರ. ಎಂದಳು ರೇವತಿ. ನಂತರದ ಮಾತುಕತೆಯಲ್ಲ ಅವಳ ಗಂಡ ಮಕ್ಕಳು ಮನೆ ಎಡೆಗೆ ಹೊರಟಿತು.ಮಕ್ಕಳು ದೊಡ್ಡವರಾಗಿ ಬೇರೆ ದೇಶಗಳಲ್ಲಿ ತಮ್ಮ ನೆಲೆ ಕಂಡುಕೊಂಡ ಮೇಲೆ ತಂದೆ ತಾಯಿಗಳಿಗೆ ಒಂಟಿತನವಲ್ಲದೆ ಮತ್ತೆನು ಕಾಡಲು ಸಾದ್ಯ..ಜೀವನದ ಜಂಜಡಗಳೆಲ್ಲ ಮುಗಿದು ಮೂರ್ತಿ ಯವರು ಅನುಭವಿಸಿದ ಶೂನ್ಯವನ್ನೆ ರೇವತಿಯು ಅನುಭವಿಸಿರುವಳು.ಮೊದಲಿನಿಂದಲೂ ಯಾರೋಂದಿಗೂ ಬೆರೆಯದ ಎಕಾಂತ ಪ್ರೀಯಳವಳು. ಪತಿ ತನ್ನ ಸ್ನೇಹಿತರ ವಲಯದಲ್ಲಿ ಪಾರ್ಟಿ ಟೂರ್ ಗಳಲ್ಲಿ ನಿವ್ರತ್ತಿ ಜೀವನ ಎಂಜಾಯ್ ಮಾಡುವವರು. ಹೀಗಾಗಿ ರೇವತಿ ತನ್ನ ವಲಯದಲ್ಲಿ ಎಕಾಂಗಿಯಾಗಿದ್ದಳು. ಪ್ರತಿಯೊಬ್ಬ ವ್ಯಕ್ತಿಯೂ ಬದುಕಿನ ಜವಾಬ್ದಾರಿಗಳು ಯಾವಾಗ ಮುಗಿಯುವವೊ ಎಂದು ಹಂಬಲಿಸುವನು.ಮುಗಿದ ಮೇಲೆ ಮತ್ತದೆ ಶೂನ್ಯ. ನಮ್ಮ ಅವಶ್ಯಕತೆ ಯಾರಿಗೂ ಇಲ್ಲ ಎಂಬ ಕೊರಗು.ಇಳಿವಯಸ್ಸಿನಲ್ಲಿ ಗಂಡ ಹೆಂಡತಿಗೆ ಹೆಂಡತಿ ಗಂಡನಿಗೆ ಅನಿವಾರ್ಯ. ಯಾರೆ ಒಬ್ಬರು ಮುಂದಾದರೂ ಮತ್ತದದೇ ಒಂಟಿತನ.ಮತ್ತು ಮಕ್ಕಳು ಸೊಸೆಯಂದಿರೊಡನೆ ಹೊಂದಾಣಿಕೆ ಬದುಕು.ಜೀವನ ಇಷ್ಟೆ. ಪ್ರತಿಯೊಬ್ಬರೂ ಜೀವನದ ಒಂದಿಲ್ಲೊಂದು ಕಾಲಘಟ್ಟದಲ್ಲಿ ಒಂಟಿತನ ಅನುಭವಿಸುವವರೆ.ಕಳೆದ ಸವಿ ನೆನಪುಗಳು ಮಾತ್ರ ಎಂದುಗೂ ಅಮರ. ಮೂರ್ತಿ ತಮಗರಿವಿಲ್ಲದೆ ಹಿತವಾಗಿ ರೇವತಿಯ ಕೈ ಅದುಮಿದರು.ಸ್ನೇಹದ ಅಭಯ ಹಸ್ತ ಚಾಚುತ್ತ ,ಸವೆಸಬೇಕಾದ ದಾರಿ ಎಲ್ಲಿವರೆಗಿದೆಯೋ ಯಾರಿಗೆ ಗೊತ್ತು.ಬದುಕು ಇರುವವರೆಗೂ ಜಡವಾಗಿ ಬದುಕದೆ ಉತ್ಸಾಹ ಭರಿತವಾಗಿ ಬದುಕೋಣ ಎಂದರು.ಮಂಕು ಸರಿದು ರೇವತಿಯ ಕಣ್ಣಲ್ಲೂ ಹೊಸ ಮಿಂಚು ಮೂಡಿತು.ಮರೆಯಾದ ಸ್ನೇಹ ಮತ್ತೆ ದೊರಕಿದ್ದಕ್ಕೆ ಮನ ಹಗುರವಾಯಿತು.ತನ್ನ ಭಾವನೆಯೊಂದಿಗೆ ಬೆಸೆದಿರುವ ಒಂದು ಜೀವವೂ ತನ್ನಂತೆ ನಿಷ್ಕಲ್ಮಷ ಸ್ನೇಹ ಬಯಸುತ್ತದೆ ಎಂದು ತಿಳಿದು ಮನ ಹಗುರಾಯಿತು. ಅವರು ಎಷ್ಟೋ ಹೊತ್ತು ತಮ್ಮ ಸಂಸಾರದ ಮಾರಾಡಿದರು.ಮೂವತೈದು ವರ್ಷ ಹಿಂದೆ ಹೋಗಿ ಮತ್ತೊಮ್ಮೆ ಕಾಲೇಜಿನ ಸಹಪಾಠಿಗಳಾದರು.ಅಷ್ಟರಲ್ಲಿ ರೇವತಿಯ ಮೊಬೈಲ್ ರಿಂಗಾಯಿತು.ಸ್ಕ್ರೀನ್ ಮೇಲಿನ ಪತಿಯ ಹೆಸರು ನೋಡಿ ಮುಗುಳು ನಗುತ್ತ ,ಇವತ್ತು ನನಗೆ ಬರುವದು ಹೊತ್ತಾಗುತ್ತೆ ,ನೀವು ಊಟ ಮಾಡಿಬಿಡಿ.ಕಾಲೇಜಿನ ಗೆಳೆಯರೊಬ್ಬರು ಸಿಕ್ಕಿದ್ದಾರೆ ಬಹಳ ಮಾಡುವದಿದೆ ಎಂದಳು ನಗುತ್ತ.ಆ ಕಡೆಯಿಂದ ಮಾತುಗಳು ಮುಗಿದ ಮೇಲಾದರೂ ನನ್ನ ನೆನಪಿಸಿಕೋ ನಿನಗಾಗೆ ಕಾಯುತ್ತಿರುವ ಅನಾಥ ಒಬ್ಬನಿದ್ದಾನೆಂದು ಎಂದರು ನಗು ಬೆರೆತ ದನಿಯಲ್ಲಿ. ಸ್ನೇಹದ ಕಡಲು ಮತ್ತೆ ಹರಿಯಿತು.ಜಡತ್ವದ ಬದುಕಲ್ಲಿ ಉತ್ಸಾಹ ಮೂಡಿತು. *********************************************
ಅವಳ ಬದುಕಿನ ಪುಟಗಳಲ್ಲೊಂದು ಇಣುಕು…
ವಾರದ ಕಥೆ ಅವಳ ಬದುಕಿನ ಪುಟಗಳಲ್ಲೊಂದು ಇಣುಕು… ಟಿ.ಎಸ್.ಶ್ರವಣಕುಮಾರಿ ಆರನೆಯ ನಂಬರಿನ ಡಬಲ್ ಡೆಕರ್ ಬಸ್ ಹೊರಡುತ್ತಿದ್ದುದು ಜಯನಗರ ನಾಲ್ಕನೇ ಬ್ಲಾಕಿನ ಬಸ್ ಸ್ಟಾಪಿನಿಂದ. 9.30ಕ್ಕೆ ನಿಲ್ದಾಣಕ್ಕೆ ಬರುವ ಬಸ್ಸು 9.40ಕ್ಕೆ ಸರಿಯಾಗಿ ಅಲ್ಲಿಂದ ಹೊರಟು ಶಿವಾಜಿನಗರಕ್ಕೆ ಹೋಗುತ್ತಿದ್ದ ಆ ಬಸ್ಸಿಗೆ ವೀಣಾ ದಿನನಿತ್ಯದ ಪಯಣಿಗಳು. ಸ್ಟ್ಯಾಂಡಿಗ್ ಸೀಟಿನ ಕಚಿಪಿಚಿ ಇರುವುದಿಲ್ಲವಾದ್ದರಿಂದ ಅವಳಿಗೆ ಮಹಡಿಯೇ ಹಿತವೆನ್ನಿಸುತ್ತಿತ್ತು. ಬಸ್ ಹತ್ತಿದ ತಕ್ಷಣ ಮಹಡಿಯನ್ನೇರಿ ಮುಂದಿನಿಂದ ಎಡಭಾಗದ ಮೂರನೆಯ ಸೀಟಿನ ಕಿಟಕಿಯ ಬಳಿ ಖಾಯಮ್ಮಾಗಿ ಕುಳಿತು ಟಿಕೇಟು ಪಡೆದುಕೊಂಡ ತಕ್ಷಣವೇ, ತನ್ನ ಬ್ಯಾಗಿನಲ್ಲಿದ್ದ ಯಾವುದಾದರೊಂದು ಪುಸ್ತಕವನ್ನು ತೆರೆದು ಕುಳಿತರೆ ಮುಂದಿನ ಅರ್ಧ ಗಂಟೆ ಅದರಲ್ಲೇ ಮುಳುಗಿರುತ್ತಿದ್ದಳು. ಮತ್ತೆ ಇಹಕ್ಕೆ ಮರಳುತ್ತಿದ್ದುದು ಕ್ಯಾಶ್ ಫಾರ್ಮಸಿ ಸ್ಟಾಪಿಗೆ ಬಂದಾಗಲೇ. ಅವಳು ಉದ್ಯೋಗ ಮಾಡುತ್ತಿದ್ದದ್ದು ಸ್ಟೇಟ್ ಬ್ಯಾಂಕಿನಲ್ಲಿ. ಹಾಗಾಗಿ ಅಲ್ಲೆದ್ದು ಮಹಡಿಯಿಳಿದು ಮುಂದಿನ ಸ್ಟಾಪಿನಲ್ಲಿಳಿಯಲು ಅನುವಾಗುತ್ತಿದ್ದಳು. ಇಷ್ಟೆಲ್ಲಾ ವಿವರ ಏಕೆ ಹೇಳುತ್ತಿದ್ದೀನೆಂದರೆ ಅವಳಷ್ಟೇ ಖರಾರುವಾಕ್ಕಾಗಿ ಮಹಡಿಯಲ್ಲಿ ಮುಂದಿನಿಂದ ಬಲಬಾಗದ ಮೊದಲನೆಯ ಸೀಟಿನಲ್ಲಿ ಕಿಟಕಿಯ ಪಕ್ಕವನ್ನು ಕಾಯ್ದಿರಿಸಿಕೊಂಡು ಸುಮಾರು ಇಪ್ಪತ್ತೇಳು, ಇಪ್ಪತ್ತೆಂಟು ವರ್ಷದ ಒಬ್ಬಾಕೆ ಕುಳಿತಿರುತ್ತಿದ್ದಳು. ಉದ್ಯೋಗಸ್ಥೆಯಾದರೂ ನಾಗರೀಕತೆ ಅವಳನ್ನು ತಬ್ಬಿದಂತೆ ಕಾಣುತ್ತಿರಲಿಲ್ಲ. ಹಳೆಯ ಕಾಲದವರಂತೆ ಅಂಚು ಸೆರಗಿನ ಸೀರೆಯನ್ನುಟ್ಟು, ಮೈತುಂಬಾ ಸೆರಗನ್ನು ಹೊದ್ದು, ಹಣೆಗೆ ಪುಡಿ ಕುಂಕುಮ, ಅರಿಶಿನ ಬಳಿದ ಕೆನ್ನೆ, ಮುಡಿಯಲ್ಲಿರುತ್ತಿದ್ದ ಹೂವು, ಗಂಭೀರ ವದನದಿಂದ ಅವಳು ತನ್ನ ವಯಸ್ಸಿಗಿಂತ ಹಿರಿಯಳಂತೆ ಕಾಣುತ್ತಿದ್ದಳು. ಯಾರು ಮಹಡಿ ಹತ್ತಿದ ಸದ್ದಾದರೂ ತಿರುಗಿ ನೋಡುತ್ತಿದ್ದ ಅವಳ ಕಣ್ಣುಗಳನ್ನು ವೀಣಾ ದಿನವೂ ಸಂಧಿಸುತ್ತಿದ್ದರೂ, ಅವಳಿಂದ ಸ್ನೇಹ ಸೂಸುವ ಪ್ರತಿನಗೆಯಿರುತ್ತಿರಲಿಲ್ಲ. ಅವಳು ಕಾಯುತ್ತಿದ್ದದ್ದು ಅವನೊಬ್ಬನಿಗಾಗಿ… ಅವನಿಗಾಗಿ ಮಾತ್ರಾ… ಅವನು ಗಂಡನೆಂದು ಅನ್ನಿಸುತ್ತಿರಲಿಲ್ಲ. ಗಂಡನಾಗಿದ್ದರೆ ಒಟ್ಟಿಗೇ ಬರುತ್ತಿದ್ದರಲ್ಲ! ಅವನು ಬರುವವರೆಗೂ ಘಳಿಗೆಘಳಿಗೆಗೂ ತಿರುತಿರುಗಿ ನೋಡುತ್ತಾ, ಅವನನ್ನು ಕಂಡ ತಕ್ಷಣ ಅವಳ ದುಂಡನೆಯ ಮುಖ ಹಿಗ್ಗಿನಿಂದ ಉಬ್ಬಿ, ಅರಿಶಿನ ಬೆರೆತ ಕೆನ್ನೆಗೆ ಒಂದಿಷ್ಟು ಕುಂಕುಮವೂ ಸವರಿದಂತೆ ಕೆಂಪಾಗಿ, ಪಕ್ಕಕ್ಕೆ ಸರಿದು ತನ್ನ ಜಾಗವನ್ನು ಅವನಿಗೆ ಬಿಟ್ಟುಕೊಟ್ಟು ಕಿಟಕಿಯ ಪಕ್ಕಕ್ಕೆ ಸರಿಯುತ್ತಿದ್ದಳು. ತಕ್ಷಣವೇ ಅವರಿಬ್ಬರದೂ ಅದೇನು ನಗು, ಹರಟೆ… ಅವಳನ್ನು ನೋಡಿದರೆ ಅವಳಿಷ್ಟು ನಗಬಹುದೆಂದಾಗಲೀ, ಮಾತನಾಡಬಹುದೆಂದಾಗಲೀ ಅನ್ನಿಸುತ್ತಲೇ ಇರಲಿಲ್ಲ. ವೀಣಾ ಇಳಿಯುವವರೆಗೂ ಅವರಿಬ್ಬರೂ ಹೆಚ್ಚುಕಡಿಮೆ ಅದೇ ಲೋಕದಲ್ಲೇ ಇರುತ್ತಿದ್ದರು. ಪ್ರಾಯಶಃ ಇಬ್ಬರದೂ ಶಿವಾಜಿನಗರದ ಬಸ್ ನಿಲ್ದಾಣವಿರಬೇಕೇನೋ… ಅಥವಾ ಎಂ.ಜಿ.ರೋಡ್ ಸ್ಟಾಪೋ… ವೀಣಾ ವಾಪಸ್ಸಾಗುವಾಗಲೂ ಒಂದೊಂದು ದಿನ ತುಂಬಿದ ಬಸ್ಸಿನಲ್ಲಿ ಸಿಗುತ್ತಿದ್ದ ಅವಳು ಒಂದು ದಿನವೂ ಸಹಪ್ರಯಾಣಿಕರಲ್ಲಿ ವಿನಿಮಯವಾಗಬಹುದಿದ್ದ ಒಂದು ಪರಿಚಿತ ನಗೆಯನ್ನೂ ಬೀರದೆ, ತನ್ನ ಲೋಕದಲ್ಲೇ ಮುಳುಗಿದಂತೆ ಕುಳಿತಿದ್ದು ನಾಲ್ಕನೇ ಬ್ಲಾಕಿನ ಸ್ಟಾಪಿನಲ್ಲಿ ಇಳಿದು ಯಾರನ್ನೂ ನೋಡದೆ ತನ್ನ ಪಾಡಿಗೆ ತಲೆತಗ್ಗಿಸಿಕೊಂಡು ನಡೆದುಬಿಡುತ್ತಿದ್ದಳು. ಇಷ್ಟು ವಿರಾಗಿಯಂತಿರುವ ಇವಳು ಯಾರನ್ನಾದರೂ (ಅವನನ್ನು?) ಅಥವಾ ಇವಳನ್ನು ಯಾರಾದರೂ ಪ್ರೀತಿಸಲು ಸಾಧ್ಯವೇ?! ಹಾಗಾದರೆ ಪ್ರೀತಿಯಲ್ಲಿರುವ ಆಕರ್ಷಣೆ ಇನ್ನೆಂತಹುದು ಎಂದು ಎಷ್ಟೋ ವೇಳೆ ವೀಣಾಳಿಗೆ ಅಚ್ಚರಿಯಾಗುತ್ತಿತ್ತು. ಏಕೆಂದರೆ ವೀಣಾ ಪ್ರೀತಿಸಿದ್ದು ಮದುವೆಯಾದ ಮೇಲೆ ಗಂಡನನ್ನು. ಇಂತಹ ಪ್ರೀತಿ, ಪ್ರೇಮ ಅನುಭವಕ್ಕೆ ಬರುವ ಮೊದಲೇ ಮದುವೆಯಾಗಿತ್ತು ಹಾಗೆಯೇ ಅವಳ ಈ ನಡತೆ ಅವಳಿಗೊಂದು ನಮೂನೆಯ ಕುತೂಹಲವನ್ನು ಹುಟ್ಟಿಸುತ್ತಿತ್ತು. ಒಂದಷ್ಟು ದಿನಗಳ ನಂತರ ವೀಣಾಗೆ ಅದೇ ಬಸ್ಸಿನಲ್ಲಿ ಹೊಸತಾಗಿ ತನ್ನದೇ ಕಾಂಪೌಡಿನ ಬ್ರ್ಯಾಂಚ್ ಆಫೀಸಿಗೆ ವರ್ಗವಾಗಿ ಬಂದ ಮೀರಾಳ ಪರಿಚಯವಾಗಿ ಅಂದಿನಿಂದ ಇಬ್ಬರೂ ಆ ಮೂರನೆಯ ಸೀಟಿನ ಖಾಯಂ ಪ್ರವಾಸಿಗರಾದರು. ಮುಂದಿನ ಸೀಟಿನವಳು ಗೆಳೆಯನಿಗಾಗಿ ಜಾಗ ಕಾದಿರಿಸುತ್ತಿದ್ದಂತೆ ಇವಳೂ ಪಕ್ಕದ ಜಾಗವನ್ನು ಕಾದಿರಿಸಲಾರಂಭಿಸಿದಳು. ಮೀರಾ ಒಳ್ಳೆಯ ಮಾತುಗಾರಳು, ಜೀವನೋತ್ಸಾಹದಿಂದ ಪುಟಿಯುತ್ತಿದ್ದ ಚುರುಕುಗಣ್ಣಿನ ಹುಡುಗಿ. ಒಂದೇ ಕಾಂಪೌಡಿನಲ್ಲಿ ಕೆಲಸ ಮಾಡುತ್ತಿದ್ದರೆಂದ ಮೇಲೆ ಮಾತಿನ ಸರಕಿಗೇನು ಕಡಿಮೆ? ಅವಳಿಗಿನ್ನೂ ಮದುವೆಯಾಗಿರಲಿಲ್ಲ. ಹೀಗಾಗಿ ತನ್ನ ಶಾಖೆಯಲ್ಲಿ ನಡೆಯುತ್ತಿದ್ದ ಹಲವಾರು ಲವ್ ಪ್ರಕರಣಗಳ ಬಗ್ಗೆ ಅವಳಿಗೆ ಏನೋ ಆಕರ್ಷಣೆ. ಅವರ ಚಲನವಲನಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದು ತುಂಬು ಉತ್ಸಾಹದಿಂದ ದಿನಕ್ಕೊಂದು ಕತೆಯನ್ನು ಸ್ವಾರಸ್ಯಕರವಾಗಿ ಹೇಳುತ್ತಿದ್ದಳು. ʻಮದುವೆಯಾದʼ ʻಆಗದಿರುವʼ ಫರಕು ಅವರಿಬ್ಬರ ನಡುವೆ ಹೊರಟುಹೋಗಿ ಅರ್ಧ ಗಂಟೆಯ ಪ್ರಯಾಣವನ್ನು ಇಬ್ಬರೂ ಖುಷಿಯಿಂದ ಕಳೆಯುತ್ತಿದ್ದರು. ಸಂಜೆ ವಾಪಸ್ಸು ಬರುವ ವೇಳೆ ದಿನವೂ ಹೊಂದಾಣಿಕೆಯಾಗದೆ ಮೀರಾ ಒಮ್ಮೊಮ್ಮೆ ಮಾತ್ರಾ ಸಿಗುತ್ತಿದ್ದಳು. ಆದರೆ ಸಂಜೆಯ ಬಸ್ಸಿನಲ್ಲಿ ನಿಲ್ಲಲು ಜಾಗ ಸಿಕ್ಕುವುದೇ ಕಷ್ಟವಾಗಿದ್ದಾಗ ಮಾತಿಗೆ ಜಾಗವೆಲ್ಲಿ? ಅದೇನಿದ್ದರೂ ಬೆಳಗಿನ ಸರಕು! ಒಂದು ದಿನ ಇದ್ದಕ್ಕಿದ್ದ ಹಾಗೆ ಮೀರಾ ವೀಣಾಳ ಗಮನವನ್ನು ಮುಂದಿನ ಸೀಟಿನ ಜೋಡಿಯೆಡೆ ಸೆಳೆದು “ಅವರಿಬ್ಬರನ್ನು ನೋಡಿದ್ರೆ ಆಶ್ಚರ್ಯ ಆಗತ್ತಲ್ವಾ?” ಅಂದಳು “ಬಿತ್ತಾ ನಿನ್ನ ಕಣ್ಣು ಅವರ ಮೇಲೂ?” ಎಂದಳು ವೀಣಾ ನಗುತ್ತಾ. “ನನಗೊಬ್ಬಳಿಗೇ ಏನು, ಈ ಮಹಡಿಗೆ ದಿನವೂ ಹತ್ತಿ ಬರೋ ಎಲ್ಲರ ಕಣ್ಣೂ ಅವರ ಮೇಲೇ ಇರತ್ತೆ. ಇಂಟರೆಸ್ಟಿಂಗ್ ವಿಷ್ಯ ಏನೂಂದ್ರೆ ಬ್ಯಾಂಕಲ್ಲಿ ಅವರವರ ಪಾರ್ಟ್ನರ್‌ಗಳನ್ನ ಖುಷಿ ಪಡ್ಸೋಕೆ ದಿನಕ್ಕೊಂದು ಥರಾ ವೇಷ, ಮೇಕಪ್ಪು ಮಾಡ್ಕೊಂಡು ಬಂದು ಒಬ್ಬರ ಮುಂದೊಬ್ಬರು ಸುಳಿದಾಡಿ, ಕಣ್ಣಲ್ಲೇ ಮುದ್ದಾಡೋದಾದ್ಮೇಲೆ ಅವರ ದಿನ ಶುರುವಾಗತ್ತೆ. ಆದ್ರೆ ಇವಳನ್ನ ನೋಡಿದ್ರೆ ಗೌರಮ್ಮನ ತರಹ ಅವರಮ್ಮಂದೋ, ಅಜ್ಜೀದೋ ಸೀರೆ ಉಟ್ಕೊಂಡು ಉರುಳು ಹಾಕ್ಕೊಳೋ ಹಾಗೆ ಸೆರಗು ಹೊದ್ಗೊಂಡು, ಎಣ್ಣೆ ಮೆತ್ಕೊಂಡು ಬಿಗಿಯಾಗಿ ಜಡೆ ಹಾಕ್ಕೊಂಡು, ಬುಡ್ಡಮ್ಮನ ತರಹ ಮಲ್ಲಿಗೆ ಬಿಡು, ಶಾವಂತಿಗೆ, ಡೇರಾ ಬೇಕಾದ್ರೂ ಮುಡ್ಕೊಂಡು ನಮ್ಮೂರಲ್ಲಿ ಶುಕ್ರವಾರದ ಮುತ್ತೈದೇರು ಅಂತ ಪ್ರತಿ ಮಂಗಳವಾರ, ಶುಕ್ರವಾರ ಸಾಯಂಕಾಲ ದೀಪ ಹಚ್ಚೋ ಹೊತ್ಗೆ ಮನೆಮನೆಗೆ ಬುಟ್ಟಿ ಎತ್ಕೊಂಡು ಕೆಲವು ಹೆಂಗಸ್ರು ಬರೋವ್ರು… ಒಂಥರಾ ಮರ‍್ಯಾದೆಯಿಂದ ಅಕ್ಕಿ ಬೇಡೋ ರೀತಿ ಅದು, ಅವರ ಜ್ಞಾಪಕ ಬರತ್ತೆ ನೋಡು. ಅವ್ನು ಪರ‍್ವಾಗಿಲ್ಲ ತಕ್ಕಮಟ್ಟಿಗೆ ಬರ‍್ತಾನೆ. ಆದ್ರೆ ಈ ಲವ್ ಹೇಗೇಂತ” ಅಂದಳು. “ಹೌದು ಅವಳಿರೋ ರೀತಿಗೂ, ಈ ಲವ್ವಿನ ರೀತಿಗೂ ಯಾಕೋ ಹೊಂದಾಣಿಕೆಯಾಗಲ್ಲ ಅಂತ ನಂಗೂ ಅನ್ಸತ್ತೆ” ವೀಣಾನೂ ಒಪ್ಪಿಕೊಂಡಳು. “ಅವಳು ಅಲ್ಲಿ ಓರಿಯೆಂಟಲ್ ಬಿಲ್ಡಿಂಗ್ ಪಕ್ಕದ ಕ್ರಾಸಲ್ಲಿ ಒಂದು ಸಣ್ಣ ಸ್ಕೂಲಿದೆ ನೋಡು, ಅಲ್ಲಿ ಟೀಚರ್ ಅನ್ಸತ್ತೆ, ಮೊನ್ನೆ ಕೆ. ಸಿ. ದಾಸ್‌ಗೆ ಹೋಗಿದ್ದಾಗ ಅವ್ಳನ್ನ ಆ ಸ್ಕೂಲಿನ ಕಾಂಪೌಂಡಲ್ಲಿ ಮಕ್ಕಳ ಜೊತೆ ನೋಡ್ದೆ. ಅವ್ನು ಎಲ್.ಐ.ಸಿ. ಆಫೀಸಲ್ಲಿದಾನೆ. ಹೋದ್ವಾರ ನಮ್ಮ ರಂಜನಿ ಮೇಡಂ ಅಲ್ಲಿ ಏನೋ ಕೆಲ್ಸ ಇದೆ, ಸ್ವಲ್ಪ ಜೊತೆಗೆ ಬಾ ಅಂತ ಕರ‍್ಕೊಂಡು ಹೋಗಿದ್ರು. ಡಿಸ್ಪ್ಯಾಚ್ ಸೆಕ್ಷನ್‌ನಲ್ಲಿ ಇದಾನೆ. ಮೇಡಂ ಅವ್ರಿಗೆ ಬೇಕಾಗಿದ್ದ ಲೆಟರ‍್ನ ಅವನತ್ರಾನೆ ಎಂಟರ್ ಮಾಡಿಸ್ಕೊಂಡು ತಂದ್ರು” ಎಂದು ಅವರಿಬ್ಬರ ಉದ್ಯೋಗ ಚರಿತ್ರೆಯನ್ನೂ ಒಂದು ದಿನ ಬಿಚ್ಚಿಟ್ಟಳು ಮೀರಾ. ಮಧ್ಯಾಹ್ನದ ಲಂಚ್ ಅವರ್‌ನಲ್ಲಿ ಆಗೀಗ ಏನೋ ಕೆಲಸದ ಮೇಲೆ ಚರ್ಚ್ ಸ್ಟ್ರೀಟಿನ ಕಡೆಗೆ ಹೋದಾಗ ಅವರಿಬ್ಬರೂ ಪೆಟ್ರೋಲ್ ಬಂಕಿನ ಪಕ್ಕದಲ್ಲಿರುವ ಕುಲ್ಫಿ ಕಾರ್ನರಿನಲ್ಲಿ ಕುಲ್ಫಿಯನ್ನು ಮೆಲ್ಲುತ್ತಿರುವುದನ್ನೋ, ಮೂಲೆಯ ಗಣೇಶ ಭವನದಲ್ಲಿ ಮಸಾಲೆದೋಸೆಯನ್ನು ತಿನ್ನುತ್ತಿರುವುದನ್ನೋ, ಈ ಮೂಲೆಯಲ್ಲಿ ಎಳೆನೀರು ಹೀರುವುದನ್ನೋ, ಬಾಳೆಹಣ್ಣನ್ನು ಗುಳುಂ ಮಾಡುತ್ತಿರುವುದನ್ನೋ ಇಬ್ಬರೂ ಯಾವಾಗಲಾದರೂ ನೋಡಿದ್ದನ್ನು, ಮರೆಯದೆ ಮರುದಿನ ಬೆಳಗ್ಗೆ ಅದನ್ನು ಹಂಚಿಕೊಂಡಿದ್ದರು. ಪ್ರಾಯಶಃ ಮೊದಲ ಸೀಟಿನಲ್ಲೇ ಕುಳಿತಿರುತ್ತಿದ್ದುದರಿಂದ ಇರಬಹುದು, ಬೇರೆಯವರು ತಮ್ಮನ್ನು ಹೀಗೆ ಗಮನಿಸುತ್ತಿರುತ್ತಾರೆ ಅನ್ನುವುದು ಅವರ ಗಮನಕ್ಕೆ ಬಂದಿರಲಿಲ್ಲವೇನೋ… ಪ್ರೀತಿಯಲ್ಲಿ ಮುಳುಗಿರುವವರಿಗೆ ಜಗತ್ತಿನ ಬಗ್ಗೆ ಗಮನವೇಕೆ?! ಪ್ರಿಯ ಓದುಗ, ಇದು ಹೀಗೇ ನಡೆದಿದ್ದರೆ ನಾನು ಈ ಕತೆ ಹೇಳುವ ಅಗತ್ಯವೇ ಇರಲಿಲ್ಲವೇನೋ. ಹೀಗೆ ಏನೋ ಒಂದು ರೀತಿ ವಿಚಿತ್ರವಾಗಿ ನಮಗೆ ಅನ್ನಿಸುತ್ತಿದ್ದರೂ, ಅವರಿಬ್ಬರೂ ಮದುವೆಯಾಗಿ ಸುಖವಾಗಿ ಬಾಳನ್ನು ನಡೆಸಿದರು ಎಂದು ಕತೆ ಮುಗಿಯುತ್ತಿತ್ತಷ್ಟೇ. ಹೀಗೇ ಎಷ್ಟೋ ತಿಂಗಳುಗಳು ಕಳೆದ ಮೇಲೆ ಒಂದಷ್ಟು ದಿನ ಅವರಿಬ್ಬರೂ ಕಾಣಲೇ ಇಲ್ಲ. ದಸರಾ ರಜೆಯಿಂದ ಸ್ಕೂಲಿಲ್ಲವೇನೋ, ಹಾಗೇ ಕಂಡಿಲ್ಲ ಎಂದು ಇಬ್ಬರೂ ಗೆಳತಿಯರೂ ಅಂದುಕೊಂಡರು. ಆದರೆ ಹಬ್ಬ ಮುಗಿದು ವಾರವಾದರೂ ಪತ್ತೆಯಿಲ್ಲ. ʻಏನಾಯಿತು ಈ ಪ್ರೇಮ ಪಕ್ಷಿಗಳಿಗೆ?ʼ ಎಂದು ಇಬ್ಬರೂ ಅಂದುಕೊಳ್ಳುತ್ತಿರುವಾಗಲೇ ಒಂದು ಬೆಳಗ್ಗೆ ಆಕೆ ಮೊದಲ ಸೀಟಿನಲ್ಲಿ ಕಾಣಿಸಿಕೊಂಡಳು. ತಕ್ಷಣ ಮೀರಾ “ಆಹಾ… ಲವ್ ಬರ್ಡ್ಸ್ ಆರ್ ಬ್ಯಾಕ್ ಅಗೇನ್” ಎಂದು ಖುಷಿಪಟ್ಟಳು. ಆದರೆ ಆಕೆ ಯಾಕೋ ತಿರುತಿರುಗಿ ನೋಡುತ್ತಾ ಅವನನ್ನು ಕಾಯುತ್ತಿರಲಿಲ್ಲ. ಬಸ್ ಹೊರಟರೂ ಅವನ ಪತ್ತೆಯಿಲ್ಲ. “ಏನಿದು, ಯಾಕೆ ಬಂದಿಲ್ಲ?” ಎಂದ ಮೀರಾನಿಗೆ “ಅವನಿಗೇನಾದ್ರೂ ಹುಷಾರಿಲ್ಲವೇನೋ. ಅವಳೂ ಸಪ್ಪಗಿದ್ದ ಹಾಗಿದೆ. ಒಂದೆರಡು ಸಲ ಕಣ್ಣೊರೆಸಿಕೊಂಡಳು ಕೂಡಾ, ಕಿಟಕಿಯತ್ತಲೇ ನೋಡುತ್ತಿದ್ದಾಳೆ ನೋಡು” ಅಂದಳು ವೀಣಾ. “ಹಾಗಂತೀಯಾ, ಪಾಪ ಲವ್ ಬ್ರೇಕಾಗಿಲ್ದಿದ್ರೆ ಸಾಕು. ಅವ್ನು ಬೇಗ ಹುಷಾರಾಗಿ ಬರಲಿ” ಎಂದಳು ಮೀರಾ. ಒಪ್ಪಿ ತಲೆಯಾಡಿಸಿದಳು ವೀಣಾ. ಒಂದು ವಾರವಾಯಿತೇನೋ… ಇದೇ ಕತೆ ಮುಂದುವರೆಯಿತು. ಗೆಳತಿಯರಿಬ್ಬರೂ ಪಾಪ ಅವನು ಬೇಗ ಬರಲಿ, ಇವಳ ದುಃಖ ನೋಡಕ್ಕಾಗಲ್ಲ ಎಂದು ದಿನದಿನವೂ ಹಾರೈಸಿದರು. ಅದೊಂದು ದಿನ ಇನ್ನೇನು ಬಸ್ಸು ಹೊರಡುವ ಹೊತ್ತಿಗೆ “ಇಲ್ಲಿ ಸೀಟಿದೆ ಬಾ” ಎನ್ನುತ್ತಾ ಮೆಟ್ಟಿಲನ್ನು ಹತ್ತಿದ ಗಂಡಸಿನ ದನಿ ಕೇಳಿತು. ಪರಿಚಿತವೆನಿಸಿದ ದನಿ ಕೇಳಿದ ತಕ್ಷಣ ಇಬ್ಬರೂ ತಿರುಗಿದರು. ಅದೇ ಅವನೇ! ಮದುವೆಯಾಗಿರಬೇಕು… ಯಾರೋ ತರುಣಿಯ ಕೈಹಿಡಿದುಕೊಂಡು ಹತ್ತಿಬಂದು ಎರಡು ಸೀಟಿನ ಹಿಂದೆ ಖಾಲಿಯಿದ್ದ ಸೀಟಿನಲ್ಲಿ ಕುಳಿತ. ಅವನ ಕತ್ತಿನಲ್ಲಿ ಮಿಂಚುತ್ತಿದ್ದ ಹೊಸ ಚೈನು, ಬೆರಳಲ್ಲಿದ್ದ ಹೊಸ ಚಿನ್ನದುಂಗುರ, ಅವಳ ಕತ್ತಿನಲ್ಲಿದ್ದ ಮಾಂಗಲ್ಯದ ಸರ, ಅಂತೆಯೇ ಬೆಳಗುತ್ತಿದ್ದ ಅವಳ ಮುಖ ಅವನ ಹೊಸ ಕತೆಯನ್ನು ತಾನೇ ಹೇಳಿತು. ಅವರ ಸಲ್ಲಾಪ ಆರಂಭವಾಯಿತು. ವೀಣನಿಗೆ ಕೋಪವುಕ್ಕಿ “ಹೀಗ್ಮಾಡೋಕೆ ಹೇಗ್‌ಮನಸ್ಬರತ್ತೆ? ಆ ಮುಠ್ಠಾಳಂಗೆ ಮುಂದಿನ ಸೀಟಿನಲ್ಲಿ ಅವ್ಳು ಕೂತಿದಾಳೇಂತಾನೂ ಅನ್ನಿಸ್ತಿಲ್ವಲ್ಲ” ಎಂದಳು ಮೆಲುದನಿಯಲ್ಲಿ. “ಪಾಪಿ, ಕಟುಕ ಅವ್ನು” ಮೀರಾನೂ ಜೊತೆಗೂಡಿದಳು. ಯಾವುದೇ ರೀತಿಯಲ್ಲಿ ಅವರಿಬ್ಬರ ಕತೆಯಲ್ಲಿ ಇವರಿಬ್ಬರ ಪಾತ್ರವಿರದಿದ್ದರೂ, ಇಬ್ಬರ ಮನಸ್ಸೂ ವ್ಯಗ್ರವಾಗಿತ್ತು. ಕೆಲವು ದಿನಗಳ ನಂತರ ಆ ಹೆಂಗಸು ಬರುವುದನ್ನೇ ಬಿಟ್ಟಳು… ಇವನು ತನ್ನ ಹೊಸ ಹೆಂಡತಿಯೊಡನೆ ಯಾವಾಗಲಾದರೂ ಬಸ್ಸಿನಲ್ಲಿ ಕಂಡು ಮೀರಾ, ವೀಣಾರಿಗೆ ಅವಳನ್ನು ನೆನಪಿಸುತ್ತಿದ್ದ ಅಷ್ಟೇ. ಇಲ್ಲವಾದರೆ ಇಬ್ಬರಿಗೂ ʻಅವಳʼ ನೆನಪು ಮಾಸಿದೆ. * ಹೀಗೇ ಒಂದೆರಡು ವರ್ಷಗಳೇ ಕಳೆದಿತ್ತೇನೋ. ಮೀರಾಗೂ ಮದುವೆಯಾಗಿ ಅವಳು ಕೃಷ್ಣರಾಜಪುರಕ್ಕೆ ವರ್ಗ ತೆಗೆದುಕೊಂಡಿದ್ದಾಳೆ. ವೀಣಾಗೆ ಫೋನಿನಲ್ಲಿ ಮಾತ್ರಾ ಆಗೀಗ ಸಿಗುತ್ತಾಳೆ. ವೀಣನಿಗೂ ಮಗುವಾಗಿ ಅವಳು ಮೊದಲಿನಂತೆ ಅದೇ ಬಸ್ಸನ್ನು ಹಿಡಿಯುವುದಿಲ್ಲ. ಸಿಕ್ಕಿದ ಬಸ್ ಹಿಡಿದು ಮಗುವನ್ನು ಬೇಬಿ ಸಿಟಿಂಗಿಗೆ ಬಿಟ್ಟು ಅಲ್ಲಿಂದ ಇನ್ನೊಂದು ಬಸ್ಸನ್ನು ಹಿಡಿದು ಆಫೀಸು ತಲಪುತ್ತಾಳೆ. ಇದೇ ದಿನಚರಿಯಲ್ಲಿ ಒಂದು ದಿನ ಅವಳ ಮದುವೆಯ ನಾಲ್ಕನೆಯ ವಾರ್ಷಿಕೋತ್ಸವ ಬಂದು, ಮಗುವಿರುವುದರಿಂದ ದೂರವೆಲ್ಲೂ ಹೋಗದೆ ಘಾಟಿ ಸುಬ್ರಹ್ಮಣ್ಯಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಬಂದರಾಯಿತೆಂದು ಗಂಡ ಹೆಂಡಿರಿಬ್ಬರೂ ಹೋದರು. ಅಂದು ಒಳ್ಳೆಯ ಮದುವೆ ಮುಹೂರ್ತವೇನೋ ದೇವಸ್ಥಾನದಲ್ಲಿ ಮೂರ‍್ನಾಲ್ಕು ಮದುವೆಗಳು ನಡೆಯುತ್ತಿದ್ದು ದೇವಸ್ಥಾನ ಗಿಜಿಗಿಜಿಯೆನ್ನುತ್ತಿತ್ತು. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಹೇಗೋ ದರ್ಶನ ಮುಗಿಸಿಕೊಂಡು ಬಂದು ಮೆಟ್ಟಿಲಿನ ಮೇಲೆ ಸುಧಾರಿಸಿಕೊಳ್ಳಲು ಕುಳಿತರು. ಮದುವೆಯಾದ ಜೋಡಿಗಳು ದೇವಸ್ಥಾನ ಪ್ರದಕ್ಷಿಣೆ ಹಾಕುತ್ತಾ ದೇವರ ದರ್ಶನಕ್ಕೆ ಸಾಗುತ್ತಿದ್ದರು. ಅದರಲ್ಲೊಂದು ಜೋಡಿಯನ್ನು ನೋಡಿದ ತಕ್ಷಣ ವೀಣಾ “ಅರೇ ಅವಳು…” ಎಂದಳು ಜೋರಾಗಿ. “ಅವಳು ಅಂದ್ರೆ ಯಾರು? ನಿಂಗೊತ್ತಾ?” ಗಂಡ ಮಹೇಶ ಕೇಳಿದ. ಉತ್ತರಿಸದೆ ಆ ಜೋಡಿಯನ್ನು ನೋಡುತ್ತಿದ್ದ ವೀಣಾಳ ಕಣ್ಣುಗಳು ತಂತಾನೇ ತುಂಬಿಕೊಂಡವು. ವರ ಖಂಡಿತವಾಗಿ ಐವತ್ತು ವರ್ಷ ದಾಟಿದವನು. ಪೇಟದ ಅಂಚಿನಿಂದ
ಅವಳ ಬದುಕಿನ ಪುಟಗಳಲ್ಲೊಂದು ಇಣುಕು… Read Post »





