ಬೆಳಗಿನ ವಾಕ್ ನಲ್ಲಿ
ಬೆಳಗಿನ ವಾಕ್ ನಲ್ಲಿ
ಲಲಿತ ಪ್ರಬಂಧ
ಸಮತಾ ಆರ್
ಇಂತಹ ಎಷ್ಟೋ ಘಟನೆಗಳಿಗೆ ಕುಮಾರ ಹೆಗಡೆ ಕಾರಣನಾದರೂ ಅವನು ಉದ್ದೇಶಪೂರ್ವಕವಾಗಿ ಹೀಗೆ ಮಾಡುವುದಿಲ್ಲ. ಅವನ ಮಟ್ಟಿಗೆ ಎಲ್ಲರಿಂದಲೂ ಪ್ರೀತಿ ಪಡೆಯಬೇಕು ಎನ್ನುವ ಆಸಕ್ತಿ. ಆದ್ದರಿಂದಲೇ ಎಲ್ಲರಿಗೂ ಅವನಲ್ಲಿ ವಿಶ್ವಾಸ. ಎಲ್ಲರಿಗೂ ಅವನ ಮಧ್ಯಸ್ತಿಕೆ ಬೇಕೇ ಬೇಕು. ಊರಿನಲ್ಲಿ ಯಾವ ಪಂಚಾಯ್ತಿಯಾದರೂ ಕುಮಾರ ಹೆಗಡೆಗೆ ಕರೆ ಹೋಗುತ್ತದೆ
ವಸುಂಧರಾ ಕದಲೂರು ಬರೆಯುತ್ತಾರೆ
ಒಟ್ಟಿನಲ್ಲಿ ಹೊಟ್ಟೆ ತುಂಬಿದ ಮಗು ಒಂದಷ್ಟು ಹೊತ್ತು ತರಲೆ ಮಾಡದೇ ಆಡಿಕೊಂಡೋ, ಮಲಗಿಕೊಂಡೋ ಇದ್ದರೆ ಅಮ್ಮನಿಗೆ ಸಿಗುವ ನಿರಾಳತೆ ಇದೆಯಲ್ಲಾ ಅದಕ್ಕೆ ಬೆಲೆ ಕಟ್ಟಲಾಗದು.
ಪ್ರಬಂಧ ಒಳ್ಳೆಯದು ಬಾಡದ ಹೂವಿನಂತೆ ನಗುತಿರಲಿ ಜಯಶ್ರೀ.ಜೆ. ಅಬ್ಬಿಗೇರಿ ಇಸ್ಲಾಂ ಧರ್ಮದ ಪ್ರಖ್ಯಾತ ಗುರು ‘ಸಾದಿ’ ಸಣ್ಣವರಿದ್ದಾಗ ತನ್ನ ತಂದೆಯೊಂದಿಗೆ ಮಸೀದಿಗೆ ಹೋಗಿದ್ದರು. ತಂದೆ ಮಕ್ಕಳು ಮಸೀದಿಯ ಮೇಲ್ವಿಚಾರಣೆ ನೋಡಿಕೊಳ್ಳಬೇಕಿತ್ತು. ಅಲ್ಲಿ ಪ್ರಾರ್ಥನೆಗೆ ಬಂದವರೆಲ್ಲ ನಿದ್ದೆಗೆ ಜಾರಿದ್ದರು. ಅದನ್ನು ಕಂಡ ಸಾದಿಗೆ ಆಶ್ಚರ್ಯವಾಯಿತು. ಆತ ತಂದೆಗೆ ತಿಳಿಸಿದ. ‘ನಮ್ಮಿಬ್ಬರನ್ನು ಬಿಟ್ಟು ಬಾಕಿಯವರೆಲ್ಲ ಮಲಗಿ ಬಿಟ್ಟಿದ್ದಾರೆ. ಆತನ ತಂದೆಗೆ ಕೋಪ ಬಂದಿತು.’ನಿನ್ನ ಕೆಲಸ ನೀನು ಮಾಡು. ಬೇರೆಯವರು ಏನು ಮಾಡುತ್ತಿದ್ದಾರೆಂದು ನೋಡುವುದು ನಿನ್ನ ಕೆಲಸವಲ್ಲ. ‘ಬೇರೆಯವರಲ್ಲಿ ತಪ್ಪು ಕಂಡು ಹಿಡಿಯುವುದರಿಂದ ಯಾವ ಪ್ರಯೋಜನವೂ ಇಲ್ಲ. ಅದರ ಬದಲು ನಿನ್ನಲ್ಲಿರುವ ತಪ್ಪುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊ. ಬೇರೆಯವರಲ್ಲಿ ಹಲವು ತಪ್ಪುಗಳಿದ್ದು ಒಂದೇ ಒಂದು ಒಳ್ಳೆಯ ಗುಣವಿದ್ದರೂ ಅದರ ಮೇಲೆ ನಿನ್ನ ಗಮನವಿಡು.ಒಳ್ಳೆಯದರತ್ತ ಗಮನ ಹರಿಸುವುದರಿಂದ ಒಳ್ಳೆಯದೇ ಆಗುತ್ತದೆ.’ ಎಂದರು. ಸಂಪೂರ್ಣವಾಗಿ ಒಳ್ಳೆಯ ಗುಣಗಳು ತುಂಬಿರುವ ವ್ಯಕ್ತಿ ಸಿಗುವುದು ದುರ್ಲಭ. ಹಾಗಂತ ಸಂಪೂರ್ಣ ಕೆಟ್ಟ ಗುಣಗಳಿರುವ ವ್ಯಕ್ತಿ ಸಿಗುವುದು ಸುಲಭ ಅಂತಿಲ್ಲ. ಹಾಗಿದ್ದರೆ ಪ್ರತಿಯೊಬ್ಬರಲ್ಲೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ಇದ್ದೇ ಇರುತ್ತವೆ ಅನ್ನುವುದು ಸೂರ್ಯನಷ್ಟೇ ಸ್ಪಷ್ಟ. ಈ ಸಂಗತಿಯನ್ನು ಇನ್ನಷ್ಟು ಸರಳವಾಗಿ ಹೇಳುವುದಾದರೆ ಪ್ರತಿಯೊಬ್ಬ ವ್ಯಕ್ತಿ ಒಳ್ಳೆಯ ಮತ್ತು ಕೆಟ್ಟ ಗುಣಗಳ ಒಟ್ಟು ಮೊತ್ತ. ಹಾಗಾದರೆ ಒಳ್ಳೆಯ ಮತ್ತು ಕೆಟ್ಟ ವ್ಯಕ್ತಿ ಅಂತ ಹೇಗೆ ಗುರುತಿಸುತ್ತೇವೆ? ಯಾರಲ್ಲಿ ಒಳ್ಳೆಯ ಗುಣಗಳು ಹೆಚ್ಚಿವೆಯೋ ಅವರು ಒಳ್ಳೆಯವರು. ಹಾಗೆಯೇ ಕೆಟ್ಟ ಗುಣಗಳ ಪ್ರಮಾಣ ಹೆಚ್ಚಿದ್ದವರು ಕೆಟ್ಟವರು ಎಂದು ನಿರ್ಧರಿಸಲಾಗುತ್ತದೆ. ಉತ್ತಮವಾದುದನ್ನು ನಿರೀಕ್ಷಿಸಿದರೆ ಅದನ್ನು ಪಡೆಯಬಹುದು. ಇತರರಲ್ಲಿ ಒಳ್ಳೆಯ ಗುಣಗಳನ್ನು ಮಾತ್ರ ಕಾಣುತ್ತಿದ್ದರೆ ಇಡೀ ಜಗತ್ತೇ ಒಳ್ಳೆಯದಾಗಿ ಕಾಣಿಸುವುದು. ಒಳಿತು ಕೆಡುಕುಗಳಿಗಿಂತ ನೋಡುವ ದೃಷ್ಟಿ ಒಳ್ಳೆಯದಾಗಿರಬೇಕು. ಸಾಕಷ್ಟು ಕೆಡುಕುಗಳ ಮಧ್ಯೆಯೂ ಒಳ್ಳೆಯದನ್ನು ಹುಡುಕುವುದೇ ಒಳ್ಳೆಯತನ.ಮುಳ್ಳುಗಳ ನಡುವೆ ಅರಳಿ ನಿಂತ ಗುಲಾಬಿಯತ್ತ ಗಮನಿಸಬೇಕೇ ಹೊರತು ಮುಳ್ಳುಗಳೆಡೆಯಲ್ಲ.ಕಮಲದತ್ತ ದೃಷ್ಟಿ ನೆಡಬೇಕೇ ಹೊರತು ಕೆಸರಿನತ್ತ ಅಲ್ಲ. ತೊಂದರೆ ಮಧ್ಯದಲ್ಲಿ ಹೇಗೆ ಅವಕಾಶಗಳು ಅವಿತುಕೊಂಡಿರುತ್ತದೆಯೋ ಹಾಗೆಯೇ ಕೆಟ್ಟದರ ನಡುವೆಯೂ ಒಳ್ಳೆಯದು ಅಡಗಿರುತ್ತದೆ. ಅದನ್ನು ಹೆಕ್ಕಿ ತೆಗೆದು ಬೆಳೆಸುವುದೇ ಜಾಣತನ. ಯಾವುದರ ಬಗೆಗೆ ಮನಸ್ಸನ್ನು ಕೇಂದ್ರೀಕರಿಸುತ್ತೇವೆಯೋ ಅದನ್ನೇ ದಕ್ಕಿಸಿಕೊಳ್ಳುತ್ತೇವೆ. ಗಮನವನ್ನು ಸದಾ ಒಳ್ಳೆಯ ಗುಣಗಳತ್ತ ಹರಿಸಬೇಕು. ಯಾಂತ್ರಿಕವಾಗಿ ದಿನವನ್ನು ದೂಡುತ್ತಿದ್ದರೆ ಒಳಿತು ಕೆಡುಕುಗಳ ಫರಕು ಗೊತ್ತಾದರೂ ಬದಲಾಗುವುದು ವಿರಳ. ನಮ್ಮ ಅಭ್ಯಾಸಗಳು ನಮ್ಮನ್ನು ಇತರರಿಂದ ಬೇರೆಯಾಗಿಸುತ್ತವೆ. ಒಳಿತನ್ನು ಹುಡುಕುವುದು ಒಂದು ಒಳ್ಳೆಯ ಅಭ್ಯಾಸ. ಒಳ್ಳೆಯದು ಮಹತ್ತರವಾದ ಸ್ಪೂರ್ತಿ ನೀಡುತ್ತದೆ. ಚೈತನ್ಯವನ್ನು ತುಂಬುತ್ತದೆ. ಒಳ್ಳೆಯದನ್ನು ಗಂಭೀರವಾಗಿ ಪರಿಗಣಿಸಬೇಕು. ಅದನ್ನು ಮೆಚ್ಚಬೇಕು. ನೀರೆರದು ಪೋಷಿಸಬೇಕು. ನಿರ್ಲಕ್ಷಿಸಿದರೆ ಒಣಗಿದ ಬಳ್ಳಿಯಂತಾಗುತ್ತದೆ.ಕೆಟ್ಟದ್ದನ್ನು ಸಾಕುವುದೆಂದರೆ ಫಲ ಕೊಡದ ಮುತ್ತುಗದ ಗಿಡಕ್ಕೆ ಹತ್ತಾರು ವರ್ಷ ಪೂಜಿಸಿದಂತೆ. ಯಾವುದೇ ಪ್ರಯೋಜನವಿಲ್ಲ. ನಿರಾಸೆಯ ಹೊರತು ಮತ್ತೇನೂ ಲಭಿಸದು. ಒಳ್ಳೆಯ ಗುಣಗಳನ್ನು ಪೋಷಿಸದಿದ್ದರೆ ಪ್ರೋತ್ಸಾಹಿಸದಿದ್ದರೆ ಒಳ್ಳೆಯವರು ನಿರಾಶರಾಗಬಹುದು. ‘ಎಷ್ಟು ಒಳ್ಳೆಯವರಾಗಿದ್ದರೂ ಅಷ್ಟೇ ಇದೆ. ಯಾವುದೇ ಲಾಭವಿಲ್ಲ. ಮತ್ತಷ್ಟು ನೋವನ್ನು ಅನುಭವಿಸುವುದು ಯಾರಿಗೆ ಬೇಕಿದೆಯೆಂದು ನೊಂದ ಮನಸ್ಸು ಕೆಟ್ಟದ್ದರತ್ತ ವಾಲುತ್ತದೆ.’ ಅಂದರೆ ಕೆಟ್ಟವರು ಮೂಲತಃ ಕೆಟ್ಟವರಲ್ಲ. ಅವರು ಪರಿಸ್ಥಿತಿಯ ಕೂಸಾಗಿ ಕೆಟ್ಟವರಾಗಿರುತ್ತಾರೆ. ಬೇಕಂತಲೇ ಅಪರಾಧಗಳ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಯಾರಿಗೂ ಬೇಕಾಗಿರುವುದಿಲ್ಲ. ಒಳ್ಳೆಯದನ್ನು ಅಲ್ಲಗಳೆಯುವುದು ತುಚ್ಛವಾಗಿ ಕಾಣುವುದು ತಪ್ಪು. ಹಣ ಅಧಿಕಾರ ಅಂತಸ್ತಿನಿಂದ ಒಣ ಪ್ರತಿಷ್ಟೆಯಿಂದ ಪಡೆದ ಸುಳ್ಳು ಒಳ್ಳೆಯತನದ ಬಿರುದು ದೀಪದ ಬೆಳಕಿನಂತೆ ಎಣ್ಣೆ ಇರುವವರೆಗೆ ಮಾತ್ರ ಇರುತ್ತದೆ.ನಿಜವಾದ ಒಳ್ಳೆಯತನಕ್ಕೆ ಸಿಗುವ ಗೌರವ ಸೂರ್ಯನಂತೆ ಸೃಷ್ಟಿ ಇರುವವರೆಗೆ ಬೆಳಗುತ್ತದೆ. ಒಳ್ಳೆಯ ಸಮಾಜ ಕಟ್ಟಬೇಕೆಂದರೆ ಪ್ರತಿಯೊಬ್ಬ ವ್ಯಕ್ತಿಯೂ ಮೊದಲು ಅನ್ಯರ ಒಳಿತಿಗಾಗಿ, ನಂತರ ತನ್ನ ಒಳಿತಿಗಾಗಿ ದುಡಿಯುವ ಮನೋಭಾವ ಹೊಂದಿರಬೇಕು. ಯೋಚನೆಗಳು ಕಾರ್ಯಗಳು ಒಳ್ಳೆದಾದರೆ ಬದುಕು ಒಳ್ಳೆಯದಾಗುತ್ತದೆ. ಒಳ್ಳೆಯದನ್ನು ಗುರುತಿಸೋಣ ಒಳ್ಳೆಯದನ್ನು ಬೆಳೆಸೋಣ. ಒಳ್ಳೆಯ ಗುಣಗಳು ಮತ್ತೆ ಮತ್ತೆ ಚಿಗುರೊಡೆಯಲು ಪ್ರೋತ್ಸಾಹಿಸೋಣ. ಉದುರಿ ಹೋದ ಹೂಗಳು ತಮ್ಮ ಸುವಾಸನೆಯನ್ನು ಚೆಲ್ಲುತ್ತವೆ. ಒಳ್ಳೆಯ ಪುಸ್ತಕಗಳು ಒಳ್ಳೆಯ ವ್ಯಕ್ತಿಗಳು ಒಳ್ಳೆಯತನ ಕೂಡಲೇ ಅರ್ಥವಾಗುವುದಿಲ್ಲ. ಪುಸ್ತಕವನ್ನು ಮತ್ತೆ ಮತ್ತೆ ಓದಿದಾಗ ಮಾತ್ರ ಅದರ ಸತ್ಯ ಅರಿವಾಗುವುದು. ಹಾಗೆಯೇ ವ್ಯಕ್ತಿಗಳ ಮನಸ್ಸನ್ನು ಸ್ವಚ್ಛ ಮನಸ್ಸಿನಿಂದ ಅರಿಯಲು ಪ್ರಯತ್ನಿಸಿದರೆ ಮಾತ್ರ ಒಳ್ಳೆಯತನ ತಿಳಿಯುವುದು.ಸಾಕಷ್ಟು ಒಳ್ಳೆಯ ಗುಣಗಳು ಇರುವವರು ಸಿಗುವರು ಎಂದು ಕಾಯುವುದು ಬೇಡ. ಸಿಕ್ಕ ಜನರಲ್ಲಿಯೇ ಒಳ್ಳೆಯ ಗುಣಗಳನ್ನು ಗುರುತಿಸಿ ಪೋಷಿಸೋಣ. ಆಗ ಒಳ್ಳೆಯದು ಬಾಡದ ಹೂವಿನಂತೆ ನಗುತ್ತಿರುತ್ತದೆ. ============================================================= .
ಒಳ್ಳೆಯದು ಬಾಡದ ಹೂವಿನಂತೆ ನಗುತಿರಲಿ Read Post »
ನಮ್ಮ ಫ್ಲಾಟಿನ ಮನೆ; ನೆಲದ ಸ್ಪರ್ಶ ಮಣ್ಣ ಘಮ, ಮರಗಳ ಸ್ನೇಹ, ಬೆಕ್ಕು ನಾಯಿಗಳ ಸಾನಿಧ್ಯ ಇಲ್ಲದ ನೆಲೆಯಾದರೂ ಇಲ್ಲಿಯೂ ಜೀವಮಿಡಿತದ ಸದ್ದಿದೆ. ಮರಗಿಡಗಳ, ತಂಗಾಳಿಯ ಸ್ಪರ್ಶವಿದೆ, ವಿಧ ವಿಧ ಹಕ್ಕಿ ಹಾಡಿನ ನಿನಾದವಿದೆ.
ಲಲಿತ ಪ್ರಬಂಧ ಸಲಾಮನ ಗಾಡಿಯೂ… ಸಂಕ್ರಾಂತಿ ಹಬ್ಬವೂ… ಟಿ.ಎಸ್.ಶ್ರವಣಕುಮಾರಿ ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ’ ಎಂದು ಹೇಳುವಂತೆ ‘ಸಲಾಂ ಸಾಬಿಗೂ ಸಂಕ್ರಾಂತಿಗೂ ಏನು ಸಂಬಂಧ’ ಎಂದು ಹುಬ್ಬೇರಿಸುತ್ತೀರೇನೋ! ಪ್ರತಿ ಸಂಕ್ರಾಂತಿಗೂ ಸಲಾಮನನ್ನು ನೆನಸಿಕೊಳ್ಳದೆ ನನಗೆ ಸಂಕ್ರಾಂತಿ ಹಬ್ಬ ಆಗುವುದೇ ಇಲ್ಲ. ಈಗೊಂದೈವತ್ತು ವರ್ಷಗಳ ಹಿಂದೆ ಜನಸಾಮಾನ್ಯರಿಗೆ ಶಿವಮೊಗ್ಗದಲ್ಲಿ ಸಂಚಾರಕ್ಕೆ ಇದ್ದದ್ದು ಎರಡೇ ರೀತಿ. ಮೊದಲನೆಯದು ನಟರಾಜ ಸರ್ವೀಸ್ ಅಂದರೆ ಕಾಲ್ನಡಿಗೆಯಲ್ಲಿ ಹೋಗುವುದು; ಇನ್ನೊಂದು ಕುದುರೆ ಗಾಡಿ. ಕಾರೆನ್ನುವುದು ಅತಿ ಶ್ರೀಮಂತರ ಸೊತ್ತು ಬಿಡಿ; ನಮದಲ್ಲ. ಊರಲ್ಲಿ ಎಷ್ಟು ಕಾರಿದ್ದವೆಂದರೆ ಓಡಾಡುತ್ತಿದ್ದ ಕಾರು ಇಂತವರದೇ ಎಂದು ಹೇಳುವಷ್ಟು! ಸೈಕಲ್ಲುಗಳು ಸ್ಕೂಟರಿನ ಸ್ಥಾನಮಾನವನ್ನು ಪಡೆದಿದ್ದವು. ಅಲ್ಲಿಲ್ಲಿ ಸುವೇಗಾದಂತಹ ಮೊಪೆಡ್ ಗಳು ‘ನಾವೂ ಇದ್ದೀವಿ’ ಎಂದು ಮುಖದೋರುತ್ತಿದ್ದವು. ಇಷ್ಟೆಲ್ಲಾ ಪರಟಾವಣೆ ಏತಕ್ಕೆಂದರೆ ನಾವೆಲ್ಲಾ ನಟರಾಜ ಸರ್ವೀಸಿನವರೇ ಆದರೂ, ನಮ್ಮಮ್ಮ ಮಾತ್ರ ಎಲ್ಲಿಗೆ ಹೋಗುವಾಗಲೂ ಅವರಿಗೆ ಕುದುರೆಗಾಡಿಯೇ ಬೇಕಿತ್ತು. ನಾವ್ಯಾರಾದರೂ ಅಮೀರ್ ಅಹ್ಮದ್ ಸರ್ಕಲ್ಲಿನವರೆಗೆ ಹೋಗಿ ತಂದು ಕೊಡಬೇಕಿತ್ತು. ಅಲ್ಲಿ ನಿಲ್ಲುತ್ತಿದ್ದ ಗಾಡಿಗಳಲ್ಲಿ ಮೊದಲ ಆಯ್ಕೆ ಸಲಾಮನ ಗಾಡಿ… ಕುದುರೆಯೆಂದರೆ ಸದಾ ಕಣ್ಮುಂದೆ ಬರುವ ಮಿರುಗುತ್ತಿದ್ದ ಕಂದು ಬಣ್ಣದ ಕುದುರೆ; ಹಸಿರು ಬಣ್ಣದ ಗಾಡಿಗೆ ಕೆಂಪಂಚಿನ ಮೇಲೆ ಚಿತ್ತಾರದ ಹೂಗಳು; ಗಾಡಿಯೊಳಗೆ ಹುಲ್ಲಿನ ಮೇಲೆ ಹಾಸಿದ್ದ ಗೋಣಿ ತಾಟು; ಅದರ ಮೇಲೊಂದು ಪುಟ್ಟ ಜಮಖಾನ ನಮ್ಮ ಸಲಾಮನ ರಥ. ಸಲಾಂ ನಮ್ಮಮ್ಮನ ಪರಮ ಶಿಷ್ಯರಲ್ಲೊಬ್ಬನಾಗಿದ್ದ. ಸರಿ; ಈಗ ನಮ್ಮ ಸಂಕ್ರಾಂತಿಗೆ ಮತ್ತೆ ಬರೋಣ. ಎಳ್ಳು, ಸಕ್ಕರೆ ಅಚ್ಚನ್ನು ತಯಾರಿಸಿಕೊಂಡಾದ ಮೇಲೆ ಮತ್ತೆ ಸಲಾಮನ ಗಾಡಿಯ ವಿಷಯಕ್ಕೆ ಬರೋಣ. ಹೆಂಗಸರಿಗಂತೂ ಈ ಹಬ್ಬ ಬಂದರೆ ಅದೆಷ್ಟು ಸಂಭ್ರಮವೋ.. ಹೊಸವರ್ಷ ಆರಂಭವಾಗುವಾಗಲೆ ಮನೆಗೆ ತರುವ ತಿಂಗಳ ದಿನಸಿ ಸಾಮಾನಿನ ಪಟ್ಟಿಯಲ್ಲಿ ಸಕ್ಕರೆ, ಬೆಲ್ಲ, ಹುರಿಗಡಲೆ, ಕಡಲೇ ಬೀಜ, ಕೊಬ್ಬರಿ ಮತ್ತು ಎಳ್ಳು ತಮ್ಮ ಹೆಸರನ್ನು ಬರೆಸಿಕೊಂಡು ಬಿಡುತ್ತಿದ್ದವು. ಜನವರಿ ಹದಿನಾಲ್ಕರಂದು ಇಲ್ಲವೇ ಹದಿನೈದರಂದು ಬರುವ ಸಂಕ್ರಾತಿ ಹಬ್ಬಕ್ಕೆ ಎರಡು ವಾರ ಮೊದಲೇ ಭರದಿಂದ ಸಿದ್ಧತೆಗಳು ಆರಂಭವಾಗುತ್ತಿದ್ದವು. ಆಗೆಲ್ಲಾ ಈಗಿನಷ್ಟು ಬೆಳ್ಳಗಿರುವ ಬೆಲ್ಲ ಸಿಗುತ್ತಿರಲಿಲ್ಲ. ಇರುವುದರಲ್ಲಿ ಬೆಳ್ಳಗಿರುವ ಬೆಲ್ಲವನ್ನು ಹುಡುಕಿಕೊಂಡು ಹೋಗಿ ತರಬೇಕಿತ್ತು. ಹೆಚ್ಚುವುದಕ್ಕೆ ಅಚ್ಚು ಬೆಲ್ಲವೇ ಸರಿ; ಹಿಡಿತಕ್ಕೂ ಸಿಗುತ್ತಿತ್ತು; ಹೆಚ್ಚು ಪುಡಿಯೂ ಆಗುತ್ತಿರಲಿಲ್ಲ. ಕೆಲವರು ಬೆಳ್ಳಗೆ ಕಾಣಬೇಕೆಂದು (ಅಥವಾ ಆ ರುಚಿಯೇ ಅವರಿಗೆ ಇಷ್ಟವಾಗುತ್ತಿತ್ತೇನೋ) ಬೆಲ್ಲದ ಬದಲು ಸಕ್ಕರೆಯ ಪಾಕವನ್ನು ತಟ್ಟೆಗೆ ಹೊಯ್ದು, ಕತ್ತರಿಸಿ ಎಳ್ಳಿನ ಮಿಶ್ರಣಕ್ಕೆ ಬೆರಸುತ್ತಿದ್ದರು. ಕೊಬ್ಬರಿ ವಿಪರೀತ ಗಟ್ಟಿ ಇರಬಾರದು; ಹೆಚ್ಚಲು ಅನುವಾಗುವಂತೆ ಸ್ವಲ್ಪ ಮೆತ್ತಗಿರಬೇಕು; ಬೆಳ್ಳಗಿರಬೇಕು; ಮುಗ್ಗುಲು ವಾಸನೆಯಾಗಲೀ, ಕೆಂಬಣ್ಣವಾಗಲೀ ಸಂಪೂರ್ಣವಾಗಿ ವರ್ಜ್ಯ. ಹೆಚ್ಚಿದ ನಂತರ ಬೆಲ್ಲ, ಕೊಬ್ಬರಿ ಎರಡೂ ಗರಿಗರಿಯಾಗುವ ಹಾಗೆ ಐದಾರು ದಿನ ಬಿಸಿಲಲ್ಲಿ ಒಣಗಬೇಕು. ಕಡಲೇ ಬೀಜವನ್ನು ಹುರಿಯುವುದೂ ಒಂದು ನಾಜೂಕಿನ ವಿಷಯವೇ. ಮಂದ ಉರಿಯಲ್ಲಿ ಬಿಡದೇ ಕೈಯಾಡುತ್ತಾ ಹುರಿಯಬೇಕು. ಇಲ್ಲವಾದರೆ ಸೀಯುವ ಕಾಳುಗಳು ಅಧಿಕ. ಸೀಯದಂತೆ ಕಾಪಾಡಲು ಕೆಲವರು ಮರಳನ್ನು ಚೆನ್ನಾಗಿ ತೊಳೆದು ಒಣಗಿಸಿಕೊಂಡು ಅದರ ಜೊತೆಯಲ್ಲಿ ಕಡಲೇಬೀಜವನ್ನು ಹಾಕಿ ಹುರಿದು ಜರಡಿಯಾಡಿ ತೆಗೆದುಕೊಳ್ಳುತ್ತಿದ್ದರು. ಈ ರೀತಿ ಹುರಿದದ್ದು ಒಂದೇ ಸಮನಾಗಿ ಹದವಾಗಿ ಬಾದಾಮಿಯ ಬಣ್ಣಕ್ಕೆ ಬರುತ್ತಿತ್ತು; ರುಚಿಯೂ ಉತ್ಕೃಷ್ಟವಾಗಿರುತ್ತಿತ್ತು. ನಮ್ಮ ಮನೆಯ ಬಳಿಯಿದ್ದ ಅಯ್ಯಂಗಾರರ ಮನೆಯಲ್ಲಿ ಕಾಫಿ ಬೀಜ ಹುರಿಯುವ ಒಲೆ ಇತ್ತು. ಒಂದು ಇಜ್ಜಿಲು ಒಲೆಯ ಮೇಲೆ ಅಡ್ಡಡ್ಡವಾಗಿ ಸಿಲೆಂಡರಿನಾಕಾರದ ಒಂದು ಮುಚ್ಚುಳವಿರುವ, ಹಿಡಿಕೆಯಿರುವ ಡಬ್ಬಿ; ಅದು ಒಲೆಯ ಕೆಂಡದ ಮೇಲೆ ಒಂದು ಅಂತರದಲ್ಲಿ ಕೂರುವಂತ ವ್ಯವಸ್ಥೆ. ಅದರೊಳಗೆ ಕಡಲೆಬೀಜವನ್ನು ತುಂಬಿ ಒಲೆಯ ಮೇಲಿಟ್ಟು ಹಿಡಿಕೆಯನ್ನು ತಿರುಗಿಸುತ್ತಿದ್ದರೆ ಆ ಡಬ್ಬಿ ಸುತ್ತುತ್ತಾ ಒಂದೇ ಹದದಲ್ಲಿ ಶಾಖವನ್ನು ಪಡೆದುಕೊಂಡು ಹದವಾಗಿ ಹುರಿದುಕೊಳ್ಳುತ್ತಿತ್ತು. ಇಂತಹ ಯಾವುದಾದರೂ ಒಂದು ರೀತಿಯಲ್ಲಿ ಕಡಲೇಕಾಯನ್ನು ಹುರಿದ ನಂತರ ಅದನ್ನು ಶುಭ್ರವಾದ ಒಂದು ಗೋಣಿ ಚೀಲದ ಮೇಲೆ ಹರಡಿಕೊಂಡು, ಅದರ ಮೇಲೆ ಮರದ ಮಣೆಯನ್ನು ಇಟ್ಟು ಉಜ್ಜಿದರೆ ಕಾಳುಗಳು ಸಿಪ್ಪೆಯನ್ನು ಬಿಟ್ಟುಕೊಂಡು ಬೇಳೆಗಳಾಗಿ ಒಡೆದುಕೊಳ್ಳುತ್ತಿದ್ದವು. ಆಮೇಲೆ ಅದನ್ನು ಮರದಲ್ಲಿ ಕೇರಿ, ಸಿಪ್ಪೆಯನ್ನೂ ನೂಕನ್ನೂ ತೆಗೆದು ಕೆಟ್ಟುಹೋದ, ಚೂರುಚೂರಾದ, ಸೀದುಹೋದ ಕಾಳುಗಳನ್ನೆಲ್ಲಾ ಆರಿಸಿ ತೆಗೆದು ಹಸನು ಮಾಡಬೇಕಿತ್ತು. ಈ ಕೆಲಸಕ್ಕೆ ನಾವು ಮಕ್ಕಳೆಲ್ಲಾ ಅತ್ಯಂತ ಉತ್ಸುಕರಾಗಿ ಸಹಾಯ ಮಾಡುತ್ತಿದ್ದೆವು. ಒಡೆದ, ಸ್ವಲ್ಪ ಸೀದ ಕಾಳುಗಳೆಲ್ಲಾ ನಮ್ಮ ಹೊಟ್ಟೆಗೇ ತಾನೆ! ಹಾಗಾಗಿ ಅಲ್ಪ ಸ್ವಲ್ಪ ಮುಕ್ಕಾದ ಕಾಳುಗಳಿಗೂ ಎಳ್ಳಿನೊಂದಿಗೆ ಬೆರೆಯುವ ಸೌಭಾಗ್ಯವಿರುತ್ತಿರಲಿಲ್ಲ. ಹುರಿಗಡಲೆಯಾದರೂ ಅಷ್ಟೇ ಹುರಿಯುವ ಕೆಲಸವೊಂದು ಇರುತ್ತಿರಲಿಲ್ಲ. ಹೀಗೆ ಆರಿಸುವಾಗ ಇನ್ನೂ ಸಿಪ್ಪೆಯಿಟ್ಟುಕೊಂಡ ಕಾಳುಗಳು, ಒಡೆದವು, ಕಡೆಗೆ ಸ್ವಲ್ಪ ಸೀಳಿಕೊಂಡವು ಕೂಡಾ ನಮ್ಮ ನೈವೇದ್ಯಕ್ಕೇ! ಆರಿಸುವಾಗ ಎಂಜಲು ಮಾಡಿಕೊಂಡು ತಿನ್ನಬಾರದು; ಎಲ್ಲವನ್ನೂ ಒಂದು ತಟ್ಟೆಗೋ, ಬಟ್ಟಲಿಗೋ ಹಾಕಿಕೊಂಡು ನಂತರ ತಿನ್ನಬಹುದು ಎನ್ನುವ ಅಮ್ಮನ ನಿಬಂಧನೆಗೆ, ಯಾವ ಪ್ರತಿರೋಧವೂ ಇಲ್ಲದೆ ಒಪ್ಪಿಕೊಂಡು ನಮಗೆ ಸಾಕೆನಿಸುವಷ್ಟು ಸರಕು ಸಿಕ್ಕ ತಕ್ಷಣ ಕೆಲಸ ಸಾಕಾಯಿತೆಂದು ಎದ್ದೋಡುತ್ತಿದ್ದೆವು. ಎಷ್ಟನ್ನು ಮಾಡಿಕೊಟ್ಟಿದ್ದರೆ ಅಷ್ಟೇ ಅಮ್ಮನ ಪುಣ್ಯ! ಎಳ್ಳನ್ನು ಶುದ್ಧಮಾಡುವುದೂ ಎರಡು ದಿನದ ಕೆಲಸವೇ. ಹಿಂದಿನ ದಿನವೇ ಎಳ್ಳನ್ನು ನೀರಿನಲ್ಲಿ ನೆನೆಯಿಟ್ಟು, ಮಾರನೆಯ ದಿನ ಬೆಳಗಿನ ಕೆಲಸವನ್ನೆಲ್ಲ ಮುಗಿಸಿಕೊಂಡು ಒಂದು ಶುಭ್ರವಾದ ಗೋಣಿಯ ಮೇಲೆ ನೆಂದ ಎಳ್ಳನ್ನು ಸ್ವಲ್ಪ ಸ್ವಲ್ಪವನ್ನೇ ಹಾಕಿಕೊಳ್ಳುತ್ತಾ ಅದು ಬೆಳ್ಳಗಾಗುವ ತನಕ ಉಜ್ಜುತ್ತಿದ್ದರು. ಎಳ್ಳು ಎಷ್ಟು ಬೆಳ್ಳಗಾಗಿದೆ ಎನ್ನುವುದರ ಮೇಲೆ ಉಜ್ಜುವವರ ಕಲಾನೈಪುಣ್ಯ ನಿರ್ಧಾರವಾಗುತ್ತಿತ್ತು. ಎಷ್ಟೋ ಜನರು ಕರಿಎಳ್ಳನ್ನು ಉಜ್ಜಿ ಬೆಳ್ಳಗೆ ಮಾಡಿರುವುದನ್ನೂ ನೋಡಿದ್ದೇನೆ. ಹೀಗೆ ಉಜ್ಜಿದ ಎಳ್ಳಿನ ಸಿಪ್ಪೆಯನ್ನೆಲ್ಲಾ ಕೇರಿ ಆರಿಸಿ ನಂತರ ಮಂದ ಉರಿಯ ಮೇಲೆ ಬಾಣಲೆಯ ಮೇಲೆ ಸ್ವಲ್ಪ ಸ್ವಲ್ಪವನ್ನೇ ಹಾಕಿಕೊಂಡು, ಹೊಸ ಪೊರಕೆ ಕಡ್ಡಿಯನ್ನು ಮಧ್ಯಭಾಗಕ್ಕೆ ಕಟ್ಟಿಕೊಂಡು, ಕಡ್ಡಿಯ ಕಡೆಯ ಭಾಗದಿಂದ ಅದನ್ನು ಘಮ್ಮೆನ್ನುವ ಹಾಗೆ, ಹದವಾಗಿ ಹುರಿಯುತ್ತಿದ್ದರು. ಹೀಗೆ ವಾರ, ಹತ್ತು ದಿನದ ಶ್ರಮದ ನಂತರ ಸಂಕ್ರಾಂತಿ ಎಳ್ಳು ತಯಾರಾಗುತ್ತಿತ್ತು. ಯಾರ ಮನೆಯ ಎಳ್ಳು ಬಂದರೂ ಅದರ ಬಣ್ಣ, ರುಚಿ, ವಾಸನೆಗಳ ಮೌಲ್ಯಮಾಪನವಾಗಿ ಅವರ ಪರಿಶ್ರಮವು ವಿಮರ್ಶೆಗೆ ಒಳಗಾಗುತ್ತಿತ್ತು! ಪೂರ್ತಿ ತಯಾರಾಗಿರುವ ಮಿಶ್ರಣ, ಇಲ್ಲವೇ ಅಭಿರುಚಿಗೆ ತಕ್ಕಂತೆ ಬೆರೆಸಿಕೊಳ್ಳಲು ಸಿದ್ಧಪಡಿಸಿದ ವಸ್ತುಗಳು ಸಿಗುತ್ತಿರುವ ಈ ದಿನಗಳಲ್ಲಿ ಅಂದಿನ ಕಷ್ಟವೂ ಇಲ್ಲ; ಸಂಭ್ರಮವೂ ಇಲ್ಲ ಬಿಡಿ. ಇನ್ನು ಸಕ್ಕರೆ ಅಚ್ಚನ್ನ ತಯಾರಿಸುವುದಂತೂ ಒಂದು ದೊಡ್ಡ ಕಲೆಯೇ. ಪರಿಶ್ರಮವೂ ಬಹಳ. ಹಳಕುಹಳಕಾದ ಸಕ್ಕರೆಯನ್ನು ಅದು ಮುಳುಗುವಷ್ಟೇ ನೀರಿನಲ್ಲಿ ನೆನೆಯಿಟ್ಟು ನಂತರ ಅದನ್ನು ಕುದಿಸಿ, ಕುದಿಯುತ್ತಿರುವಾಗ ಒಮ್ಮೆ ಹಾಲು ಹಾಕಿ ಅದನ್ನು ಬೆಳ್ಳಗಿರುವ ಪಂಚೆಯ ಬಟ್ಟೆಯಲ್ಲಿ ಶೋಧಿಸಿಕೊಂಡು, ನಂತರ ಇನ್ನೊಮ್ಮೆ ಮೊಸರು ಹಾಕಿ ಕುದಿಸಿ ಶೋಧಿಸಿದ ಮೇಲೆ ಪಾಕ ಎಷ್ಟು ಬೆಳ್ಳಗಾಯಿತೆಂಬುದರ ಮೇಲೆ ಇನ್ನೊಮ್ಮೆ ಕುದಿಸಿ ಶುಚಿಮಾಡಬೇಕೇ ಎನ್ನುವುದು ನಿರ್ಧಾರವಾಗುತ್ತಿತ್ತು. ಅಟ್ಟದ ಮೇಲಿಟ್ಟಿದ್ದ ಮರದ ಅಚ್ಚುಗಳನ್ನು ಹಿಂದಿನ ದಿನವೇ ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಯಲು ಬಿಡುತ್ತಿದ್ದರು. ಇನ್ನು ಅಚ್ಚು ಹಾಕುವ ಕಾರ್ಯಕ್ರಮಕ್ಕಂತೂ ಕನಿಷ್ಟ ಇಬ್ಬರಾದರೂ ಬೇಕೇ ಬೇಕು. ನಾಲ್ಕೈದು ಜನ ಸೇರಿದರೆ ಕೆಲಸ ಸುಲುಭ. ಹಾಗಾಗಿ ಅಕ್ಕಪಕ್ಕದವರೆಲ್ಲಾ ಸೇರಿಕೊಂಡು ಸಂತೋಷವಾಗಿ, ಸಹಕಾರಿ ಮನೋಭಾವದಿಂದ ಮಾಡುತ್ತಿದ್ದುದೇ ಹೆಚ್ಚು. ಶುದ್ಧವಾದ ಪಾಕವನ್ನು ಒಂದೋ ಎರಡೋ ಸೌಟನ್ನು ಒಂದು ತಪ್ಪ ತಳದ ಪಾತ್ರೆಗೆ ಹಾಕಿಕೊಂಡು ಪುಟ್ಟ ಇಜ್ಜಿಲ ಒಲೆಯ ಮೇಲೋ, ಇಲ್ಲವೇ ಬತ್ತಿಯ ಸೀಮೆಣ್ಣೆಯ ಸ್ಟೌವ್ ಮೇಲೋ ಬಿಸಿ ಮಾಡುತ್ತಾ, ಆಗಾಗ ಪಾಕದ ಹದ ನೋಡುತ್ತಾ, ಪಾಕ ಸೌಟಿನಿಂದ ಪಾತ್ರೆಯವರೆಗೆ ಒಂದು ನೂಲಿನಂತೆ ನಿಂತರೆ ಅದು ಪಾಕದ ಸರಿಯಾದ ಹದ. ತಕ್ಷಣ ಅದನ್ನು ಕಂಚಿನ ಬೋಗುಣಿಗೆ ಸುರಿದುಕೊಂಡು ಸಿದ್ಧಮಾಡಿಟ್ಟುಕೊಂಡಿದ್ದ ಇನ್ನೊಂದು ಒಬ್ಬೆ ಪಾಕವನ್ನು ಒಲೆಯ ಮೇಲಿಟ್ಟು, ಬೋಗುಣಿಯಲ್ಲಿದ್ದ ಪಾಕವನ್ನು ಸೌಟಿನಿಂದ ತಿಕ್ಕುತ್ತಾ ಅದು ಮಂದ ಬಿಳಿಛಾಯೆಗೆ ತಿರುಗಿದೊಡನೆ, ನೀರಿನಿಂದ ಹೊರತೆಗೆದು ಮಲ್ ಪಂಚೆಯ ಬಟ್ಟೆಯಲ್ಲಿ ಒರೆಸಿ ಜೋಡಿಸಿ ದಾರ ಕಟ್ಟಿಯೋ, ರಬ್ಬರ್ ಬ್ಯಾಂಡ್ ಹಾಕಿಕೊಂಡೋ ತಯಾರಾಗಿ ಮಣೆಯ ಮೇಲೆ ಕುಳಿತಿರುತ್ತಿದ್ದ ಅಚ್ಚಿನ ಬಾಯಿಗೆ ನಾಜೂಕಾಗಿ ಸುತ್ತಲೂ ಚೆಲ್ಲದಂತೆ, ಹಾಗೆ ಸುರಿಯುವಾಗ ಪಾಕ ಪೂರ್ತಿಯಾಗಿ ಒಳಸೇರುವಂತೆ ಕುಟ್ಟಿ ಕುಟ್ಟಿ ಅದು ತುಂಬುವಷ್ಟು ಪಾಕವನ್ನು ತುಂಬಿಸುವುದು ಜಾಣತನದ ಕಲೆಯೇ. ಅದು ಒಣಗಿದ ಮೇಲೆ ಮೇಲಿನ ಹೆಚ್ಚಿನ ಭಾಗವನ್ನು ಹೆರೆದು, ಅದರ ಕಟ್ಟನ್ನು ಬಿಚ್ಚಿ ನಾಜೂಕಾಗಿ ಹಿಡಿದುಕೊಂಡು, ಎಚ್ಚರಿಕೆಯಿಂದ ಅಚ್ಚಿನಿಂದ ಬಿಡಿಸಿ ತಟ್ಟೆಯ ಮೇಲಿರಿಸಿದರೆ ಅಲ್ಲಿಗೆ ಅದರ ಕೆಲಸ ಸಂಪೂರ್ಣ. ಕೆಲವೊಮ್ಮೆ ಕೋಳಿಯ ಕಾಲೋ, ಬಸವನ ಮೂತಿಯೋ, ಮೀನಿನ ಬಾಲವೋ ಮುರಿದು ಕೈಗೆ ಬರುತ್ತಿತ್ತು. ಆಗ ತಕ್ಷಣವೇ ತಿಕ್ಕುತ್ತಿದ್ದ ಬಿಸಿ ಪಾಕದಲ್ಲಿ ಅದರ ಅಂಟಿಕೊಳ್ಳಬೇಕಿರುವ ಭಾಗವನ್ನು ಸ್ವಲ್ಪ ಅದ್ದಿ ಇನ್ನೊಂದು ಭಾಗಕ್ಕೆ ಅಂಟಿಸಿ, ಹಾಗೆಯೇ ಇಟ್ಟುಕೊಂಡಿದ್ದು, ಸ್ವಲ್ಪ ಅಂಟಿಕೊಂಡ ನಂತರ ತಟ್ಟೆಯ ಮೇಲೆ ಕೆಲಕಾಲ ಮಲಗಿಸಿದರೆ ಶಸ್ತ್ರಕ್ರಿಯೆಯಾದ ರೋಗಿ ಆರೋಗ್ಯವಂತನಾಗಿ ಏಳುವಂತೆ, ಸ್ವಲ್ಪ ಕಾಲದ ನಂತರ ಎದ್ದು ನಿಲ್ಲಲು ಶಕ್ತವಾಗುತ್ತಿದ್ದವು. ಈ ಶಸ್ತ್ರಕ್ರಿಯೆ ವಿಫಲವಾದರೆ ಕೋಳಿ, ಮೀನು, ಮಂಟಪ, ಜಿಂಕೆಗಳೆಲ್ಲಾ ಸುತ್ತಲೂ ಬಕಗಳಂತೆ ಕಾಯುತ್ತಿದ್ದ ಮಕ್ಕಳ ಬಾಯಿ ಪಾಲಾಗುತ್ತಿದ್ದವು! ಮಣೆಯ ಮೇಲೆ ಅಲ್ಪ ಸ್ವಲ್ಪ ಚೆಲ್ಲಿದ್ದ ಪಾಕ ಮತ್ತು ಮಕ್ಕಳ ಬಾಯಿಗೆ ಬೀಳದೆ ಉಳಿದುಕೊಂಡಿದ್ದ ತುಂಡುಗಳು ಬಣ್ಣವನ್ನು ಬೆರೆಸಿಕೊಂಡು ಮತ್ತೊಮ್ಮೆ ಜನ್ಮ ತಾಳುತ್ತಿದ್ದವು. ಒಂದೇ ಅಚ್ಚಿನಲ್ಲಿ ಎರಡು ಮೂರು ಬಣ್ಣದ ಪಾಕವನ್ನು ಸುರಿದು ಬಣ್ಣ ಬಣ್ಣವಾದ ಸಕ್ಕರೆಗೊಂಬೆಗಳನ್ನು ಮಾಡುವ ಪ್ರವೀಣರೂ ಇದ್ದರು! ಇದೇ ಸಕ್ಕರೆ ಪಾಕವನ್ನು ಉಪಯೋಗಿಸಿಕೊಂಡು ಬಾಣಲೆಗೆ ಎಳ್ಳನ್ನೋ, ಸೀಮೇ ಅಕ್ಕಿಯನ್ನೋ ಸ್ವಲ್ಪ ಹಾಕಿಕೊಂಡು, ಸ್ವಲ್ಪ ಸ್ವಲ್ಪವಾಗಿ ಅದಕ್ಕೆ ಸಕ್ಕರೆ ಪಾಕವನ್ನು ಹಾಕಿಕೊಳ್ಳುತ್ತಾ ಎಳ್ಳನ್ನು ಹುರಿಯುವ ಹಾಗೆ ನಿಧಾನವಾಗಿ ಹುರಿಯುತ್ತಾ ಕುಸುರೆಳ್ಳನ್ನೂ ಕೆಲವರು ಮಾಡುತ್ತಿದ್ದರು. ಹಾಗೆಯೇ ಇದೇ ಪಾಕವನ್ನು ಚೆನ್ನಾಗಿ ಉಜ್ಜಿ ಬೆಣ್ಣೆಯ ಉಂಡೆಯಂತೆ ಮಾಡಿಕೊಂಡು ಅದರಲ್ಲಿ ಮಣಿಗಳನ್ನು ಮಾಡಿ, ಅದನ್ನು ರಸ್ತು ಗುಂಡಿನೊಡನೆ ಪೋಣಿಸಿ, ಸರವನ್ನು ಮಾಡುತ್ತಿದ್ದರು. ಸಂಜೆ ಅದನ್ನು ಎಳೆಯ ಮಕ್ಕಳ ಕೊರಳಿಗೆ ಹಾಕಿ, ಕಬ್ಬಿನ ತುಂಡು, ಬೋರೆ ಹಣ್ಣು (ಎಲಚಿ ಹಣ್ಣು) ಮತ್ತು ಕಾಸನ್ನು ಸೇರಿನ ತುಂಬಾ ತುಂಬಿಸಿ ಅದನ್ನು ಮಕ್ಕಳ ತಲೆಯ ಮೇಲೆ ಎರೆದು ಆರತಿ ಮಾಡುವ ಪದ್ಧತಿಯೂ ಕೆಲವರಲ್ಲಿ ಇತ್ತು. ಇಡೀ ಸೇರಿಗೆಲ್ಲಾ ಒಂದೆರಡು ರೂಪಾಯಿನಷ್ಟು ಚಿಲ್ಲರೆ ಕಾಸುಗಳಿದ್ದರೂ ಅದು ಬೀಳುವುದೇ ತಡ ಎಲ್ಲರೂ ಅದನ್ನು ಬಾಚಿಕೊಂಡು ಸಂಭ್ರಮಿಸುತ್ತಿದ್ದುದೇ ಒಂದು ಚಂದ! ಈಗ ಮತ್ತೆ ನಮ್ಮ ಸಲಾಮನ ವಿಚಾರಕ್ಕೆ ಬರೋಣ. ಎಳ್ಳು, ಸಕ್ಕರೆ ಅಚ್ಚು ಮಾಡಿದರಷ್ಟೇ ಆಗಲಿಲ್ಲ; ಅದನ್ನು ಮಾಡುವುದೇ ಬಾಳೆಹಣ್ಣು ಮತ್ತು ಕಬ್ಬಿನೊಂದಿಗೆ ಬಂಧು, ಬಳಗ, ನೆಂಟರಿಷ್ಟರು, ಸ್ನೇಹಿತರ ಮನೆಗೆ ಹೋಗಿ ಬೀರುವುದಕ್ಕೆ. ಅಕ್ಕಪಕ್ಕದ ಮನೆಗಳಿಗೇನೋ ಹೋಗಿ ಬೀರಿ ಬರಬಹುದು. ದೂರದೂರದ ಮನೆಗಳಿಗೆ ನಡೆದುಕೊಂಡು ಹೋಗುವುದಾದರೆ ಅದೇ ಸಂಜೆಯಲ್ಲಿ ಎಲ್ಲರ ಮನೆಗೂ ಹೋಗಿ ಪೂರೈಸಲು ಸಾಧ್ಯವಿಲ್ಲ. ಹಾಗಾಗಿ ಆದಿನ ನಮಗೆ ಸಲಾಮನ ಗಾಡಿಯ ರಥಯಾತ್ರೆ! ನಮ್ಮಮ್ಮ ಎಲ್ಲಿಗೆ ಹೋಗಬೇಕಾದರೂ ಹೆಚ್ಚಾಗಿ ಅವನ ಗಾಡಿಯಲ್ಲೇ ಹೋಗುತ್ತಿದ್ದುದರಿಂದ, ಅವನಿಗೆ ನಮ್ಮ ಬಂಧು, ಬಳಗ, ಗುರುತು ಪರಿಚಯದವರೆಲ್ಲರ ಮನೆಯೂ ಗೊತ್ತಿತ್ತು. ಆದಿನ ಮದ್ಯಾನ್ಹ ನಾಲ್ಕು ಗಂಟೆಯ ಒಳಗಾಗಿ ಬರುವಂತೆ ಅಮ್ಮ ಅವನಿಗೆ ಮೊದಲೇ ಹೇಳಿಟ್ಟಿರುತ್ತಿದ್ದರು. ಅಂತೆಯೇ ಅವನು ಬಂದಾಗ ನಮ್ಮನ್ನು ಕರೆದುಕೊಂಡು ಹೋಗಬೇಕಾದ ಒಂದು ಇಪ್ಪತ್ತೈದು, ಮೂವತ್ತು ಮನೆಗಳನ್ನು ಹೇಳುತ್ತಿದ್ದರು. ಆರು ವರ್ಷದ ನಾನು, ನಾಲ್ಕು ವರ್ಷದ ನನ್ನ ತಂಗಿ ಇಬ್ಬರನ್ನೇ
ಸಲಾಮನ ಗಾಡಿಯೂ… ಸಂಕ್ರಾಂತಿ ಹಬ್ಬವೂ Read Post »
You cannot copy content of this page