ಮುಟ್ಟಿನ ರಜೆ ಅಗತ್ಯವಿದೆ-ವಿಶೇಷ ಲೇಖನ
ವಿಶೇಷ ಲೇಖನ ಮುಟ್ಟಿನ ರಜೆ ಅಗತ್ಯವಿದೆ ಸವಿತಾ ಮುದ್ಗಲ್ ಮುಟ್ಟು (ಋತುಕಾಲ, ರಜಸ್ಸು) ಎಂದರೆ ಗರ್ಭಾಶಯದ ಒಳಪದರದಿಂದ ಯೋನಿಯ ಮೂಲಕ (ಮೆನ್ಸೀಸ್ ಎಂದು ಕರೆಯಲ್ಪಡುವ) ರಕ್ತ ಮತ್ತು ಲೋಳೆ ಅಂಗಾಂಶದ ನಿಯಮಿತ ಸ್ರಾವ. ಸಾಮಾನ್ಯವಾಗಿ ಮೊದಲ ಋತುಕಾಲವು ಹನ್ನೆರಡು ಮತ್ತು ಹದಿನೈದು ವಯಸ್ಸಿನ ನಡುವೆ ಆರಂಭವಾಗುತ್ತದೆ, ಮತ್ತು ಕಾಲದ ಈ ಬಿಂದುವನ್ನು ಋತುಸ್ರಾವಾರಂಭ ಎಂದು ಕರೆಯಲಾಗುತ್ತದೆ. ಇದೊಂದು ಮಹಿಳೆಯರ ಪಾಲಿಗೆ ಬ್ರಹ್ಮನಿಂದ ಶಾಪವಾಗಿ ಪಡೆದು, ಜೀವನಕ್ಕೆ ಹೆಣ್ಣು ಎಂದು ಗುರುತಿಸಲು, ತಾಯ್ತಾನಕೆ ಇದೇ ಮೂಲ ವರವಾದರೂ ಹೆಣ್ಣು ಮಕ್ಕಳಿಗೆ ತಿಂಗಳಿಗೊಮ್ಮೆ ಮತ್ತೆ ಶಾಪದ ರೀತಿಯಲ್ಲಿ ಕಾಡುತ್ತದೆ. ಮಹಿಳೆಯರು ಐದು ದಿನ ನರಕ ಯಾತನೆ ಅನುಭವಿಸುವರು.ಇನ್ನೂ ಶಾಲಾ ಮಕ್ಕಳಿಗೆ ಅತೀವ ತೊಂದರೆ ಈ ಮುಟ್ಟಿನಿಂದ ಜೊತೆಗೆ ಹೊಟ್ಟೆ ನೋವು, ಮೈ ಕೈ ನೋವು, ತಲೆ ನೋವು, ಸಿಟ್ಟು ಬರುವುದು ಈ ದಿನದಲ್ಲಿ ಕಂಡು ಬರುತ್ತೆ. ಇಂತಹ ಸಮಯದಲಿ ದೇಹಕ್ಕೆ ಸ್ವಲ್ಪ ವಿಶ್ರಾಂತಿ ಅವಶ್ಯಕತೆ ಇರುತ್ತದೆ. ನಮ್ಮ ಈ ಬಿಸಿಲನಾಡು ಉತ್ತರಕರ್ನಾಟಕದಲ್ಲಿ ಮಕ್ಕಳು ಬೇಗನೆ ಮೈನೆರೆಯುವುದು ಸಾಮಾನ್ಯವಾದರೂ, ಮೊದಲ ಋತುಕಾಲವು ಹನ್ನೆರೆಡು ಮತ್ತು ಹದಿನೈದು ವಯಸ್ಸಿನ ನಡುವೆ ಆರಂಭವಾಗುತ್ತದೆ. ಇದೇ ಕಾರಣದಿಂದ ಮೊದಲಿನ ಕಾಲದಲ್ಲಿ ಬಾಲ್ಯ ವಿವಾಹ ಆಗುವುದಕ್ಕೆ ಒಂದು ಕಾರಣವೂ ಹೌದು. “ಮುಟ್ಟು ಆದವರನ್ನು ಮುಟ್ಟದೆ ಹೊಲಸೆಂದು, ಮುಟ್ಟಿನಲ್ಲೇ ತಮ್ಮ ಜನನವೆಂಬುದು ಮರೆತು, ಇದನ್ನು ಕೀಳಾಗಿ ನೋಡುವ ಮನಸ್ಥಿತಿ ಮುಂಚೆ ಇಂದಲೂ ಇದೇ ಮತ್ತು ತಂತ್ರಜ್ಞಾನದಲ್ಲಿ ನಾವೆಲ್ಲಾ ಮುಂದು ಎಂದು ತೋರಿಸಿಕೊಳ್ಳುವರಿಗೆ ಇದೊಂದು ಕೀಳಾಗಿ ನೋಡುವ ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಅರಿತುಕೊಳ್ಳುವ ಜಾಣ್ಮೆತನ ಬರಬೇಕು. ಕೇಂದ್ರ /ರಾಜ್ಯ ಸರಕಾರ ಏಕೆ ಸ್ಪಂದಿಸುತ್ತಿಲ್ಲ?? ಮಹಿಳೆಯರಿಗೆ ನಾಲ್ಕು ದಿನಗಳು ಮಾತ್ರ ಮುಟ್ಟಿನ ರಜೆಯನ್ನು ಆಕೆಯ ಆರೋಗ್ಯಕರವಾದ ಕೆಲಸದ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ರಜೆ ನೀಡಬೇಕೆಂದು ಕೋರಿದ ಖಾಸಗಿ ಮಸೂದೆಯನ್ನು 2017ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿದೆ.ಆದ್ರೆ ಯಾವುದೇ ನಿರ್ಧಾರ ಕೇಂದ್ರ ಸರ್ಕಾರವು ಕೈಗೊಂಡಿಲ್ಲ. ಮಹಿಳಾ ಉದ್ಯೋಗಿಗಳಿಗೆ ರಜೆಗಾಗಿ ಸಲ್ಲಿಸಿದ ಅರ್ಜಿಯನ್ನು ಆದ್ಯತೆಯಾಗಿ ಪರಿಗಣಿಸುವಂತೆ ದೆಹಲಿ ಹೈಕೋರ್ಟ್ 2020ರಲ್ಲಿ ಕೇಂದ್ರ ಸರ್ಕಾರ ಮತ್ತು ಇತರ ಸರ್ಕಾರಿಗಳಿಗೆ ನಿರ್ದೇಶನ ನೀಡಿದರು ಏನು ಪ್ರಯೋಜನವಾಗಿಲ್ಲ. ನಮ್ಮ ಮಹಿಳಾ ಸಂಸದರು ಇದಕ್ಕಾಗಿ ಸಂಸತ್ತಿನಲ್ಲಿ ವಿಚಾರ ಮಂದಿಸಬೇಕು. ನಮ್ಮ ಸರಕಾರಗಳು ಮಹಿಳಾ ಪರವಾದ ಸೂಕ್ಷ್ಮ ಸಂವೇದನೆಯನ್ನು ಪ್ರದರ್ಶಿಸಿ, ಸಣ್ಣ ಸಣ್ಣ ಬೇಡಿಕೆಗಳನ್ನು ಆದ್ಯತೆಯಾಗಿ ಪರಿಗಣಿಸಬೇಕು. ಮುಟ್ಟಿನ ಬಗ್ಗೆ ಇಂದಿಗೂ ಮೌಢ್ಯತನ ತೋರಿಸುವರು ಹಲವು ಮನೆಗಳಲ್ಲಿ ಮುಟ್ಟಾದರೆ ಪೂಜೆ ಮಾಡುವಂತಿಲ್ಲ, ದೇವಸ್ಥಾನಕ್ಕೆ ಹೋಗುವಂತಿಲ್ಲ, ಅಡಿಗೆ ಮನೆಗೆ ಪ್ರವೇಶವಿಲ್ಲ, ಬೇಸಿಗೆಯಲ್ಲಿ ಉಪ್ಪಿನಕಾಯಿ ಹಾಕೋದು ಜಾಸ್ತಿ ಇದನ್ನು ಒಂದು ವೇಳೆ ಇವರ ನೆರಳು ಬಿದ್ರು ಸಹ ಕೆಟ್ಟು ಹೋಗುತ್ತೆ ಅನ್ನೋದು. ಗಿಡಗಳನ್ನು ಆ ಸಮಯದಲಿ ಮುಟ್ಟಿದರೆ ಒಣಗಿ ಹೋಗುತ್ತೆ ಅಂತ ನಂಬಿಕೆ ಇಟ್ಟ ಜನರು ನಮ್ಮೊಂದಿಗೆ ಇದ್ದಾರೆ. ಶಾಲಾ ಶಿಕ್ಷಕನು ತನ್ನ ಶಾಲೆಯಲ್ಲಿ ಹಾಕಿದ ಎಲ್ಲಾ ಗಿಡಗಳು ಒಣಗಳು ಇದೇ ಕಾರಣ ಎಂದಿದ್ದಕ್ಕೆ ಬುಡಕಟ್ಟು ಜನಾಂಗದ ಶಾಲಾ ಹುಡುಗಿ ದೂರು ಕೊಟ್ಟಿದ್ದಳು. ದೇವಸ್ಥಾನಕ್ಕೆ ಹೋದರೆ ಅಪಚಾರ ಆಗುತ್ತೆ ಅನ್ನುವ ವಾದ ವಿವಾದ ಶುರುವಾಗುತ್ತದೆ. ಮುಟ್ಟು ನಿಂತಾಗ ಮಹಿಳೆಯರಿಗೆ ದೈಹಿಕ ಹಾಗು ಮಾನಸಿಕ ಬದಲಾವಣೆ ಸಹ ಆಗುತ್ತೆ. ಒಟ್ಟಿನಲ್ಲಿ ಹೇಳಬೇಕೆಂದರೆ ಮಹಿಳೆಯರಿಗೆ ತಿಂಗಳಿಗೆ ಮುಟ್ಟಿನ ರಜೆ ಸಿಗಬೇಕು. ನಮ್ಮ ಭಾರತದ ದೇಶವು ಹೆಣ್ಣಿಗೆ ದೇವತೆ ಎಂದು ಹೊಗಳುವ ಬದಲು ಈ ಹೆಣ್ಣಿನ ಜೀವನದ ನಿತ್ಯ ನೋವಿಗೆ ಸ್ಪಂದನೆ ಕೊಡಿ.
ಮುಟ್ಟಿನ ರಜೆ ಅಗತ್ಯವಿದೆ-ವಿಶೇಷ ಲೇಖನ Read Post »









