ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ದೀಪದ ನುಡಿ

ಅಂಕಣ ಬರಹ ಬೆಳೆದು ದೊಡ್ಡವರಾಗುವುದೆಂದರೆ ಬೆಳೆದು ದೊಡ್ಡವರಾಗುವುದೆಂದರೆ ಪ್ರಜ್ಞೆ ಮತ್ತು ಸೂಕ್ಷ್ಮತೆಗಳನ್ನು ಕಳೆದುಕೊಳ್ಳುವುದಲ್ಲ.ಹದಿಹರೆಯದಲ್ಲಿ ಮಕ್ಕಳು ಬೆಳೆಸಿಕೊಳ್ಳುವ ಮನೋಧೋರಣೆಯನ್ನ ನಂತರ ಬದಲಿಸುವುದು ಬಹಳ ಕಷ್ಟ. ಇದೇ ಕಾರಣಕ್ಕೆ ಹದಿಹರೆಯದ ಮಕ್ಕಳ ತಾಯ್ತಂದೆಯರು ಬಹಳ ವ್ಯಥಿತರಾಗುವುದು.ಮಕ್ಕಳು ಹೇಳುವ ಒಂದು ಸಣ್ಣ ಸುಳ್ಳು , ಅವರು ತೋರುವ ಒಂದು ಸಣ್ಣ ನಿರ್ಲಕ್ಷ್ಯ ತಂದೆ ತಾಯಿಗೆ ಬಹಳ ನೋವನ್ನುಂಟುಮಾಡುತ್ತದೆ. ಮಕ್ಕಳೇ ಅವರ ಜಗತ್ತು.ಮಕ್ಕಳಿಗಾಗೇ ಬದುಕು ಸವೆಸುವ ತಾಯ್ತಂದೆಯರನ್ನ ಮಕ್ಕಳು ಅರ್ಥ ಮಾಡಿಕೊಳ್ಳುವಲ್ಲಿ ಬಹಳಷ್ಟು ಸಲ ಎಲ್ಲೋ ಸೋಲುತ್ತಾರೆ. ಹಾಗೊಮ್ಮೆ ಅರ್ಥ ಮಾಡಿಕೊಂಡರೂ ಕಾಲ ಮಿಂಚಿ ಹೋಗಿರುತ್ತದೆ. ಆ ಮಕ್ಕಳು ಮುಂದೆ ತಾಯಿಯ ಅಥವಾ ತಂದೆಯ ಪಾತ್ರ ಧರಿಸಿದಾಗ ಹಳೆಯದೆಲ್ಲ ನೆನಪಾಗಿ ತೀವ್ರ ಪಶ್ಚಾತ್ತಾಪ ಪಡುತ್ತಾರೆ. ನಮ್ಮ ಮಕ್ಕಳು ಎಂದೂ ಕೆಟ್ಟ ಹಾದಿ ಹಿಡಿಯಲಾರರು ಎಂಬ ನಂಬಿಕೆಯಿಂದಲೇ ತಾಯ್ತಂದೆಯರು ಮಕ್ಕಳಿಗೆ ಸ್ವಾತಂತ್ರ್ಯ ನೀಡುವುದು. ಮಕ್ಕಳ ಯಾವುದೋ ಒಂದು ನಡೆಯಿಂದ ಈ ನಂಬಿಕೆಗೆ ಘಾಸಿಯಾದರೂ ಮತ್ತೆ ಅದನ್ನು ಗಳಿಸಲು ಸಾಧ್ಯವೇ ಇಲ್ಲ.     ಹದಿಹರೆಯದ ಮಕ್ಕಳ ದೃಷ್ಟಿಯಲ್ಲಿ ತಂದೆ ತಾಯಿಯರೆಂದರೆ ಸದಾ ತಮ್ಮ ಬಗ್ಗೆ ಪತ್ತೇದಾರಿ ಕೆಲಸ ಮಾಡುವವರು, ಅನುಮಾನಪಡುವವರು…ಸದಾ ಬೆನ್ನ ಹಿಂದೆ ಹಿಂಬಾಲಿಸುವವರು…ಸದಾ ತಮ್ಮ ಮೊಬೈಲ್ , ನೋಟ್ ಬುಕ್ ಗಳನ್ನ ಕಪಾಟು ,ಚೀಲಗಳನ್ನ ಹುಡುಕುವ ಪತ್ತೇದಾರರು..ನಾನು ದೊಡ್ಡವನಾದರೂ ನನ್ನ ಮೇಲೆ ನಂಬಿಕೆಯಿಲ್ಲ  , ಪ್ರೈವೆಸಿ ಕೊಡುವುದಿಲ್ಲ ಎನ್ನುವುದು ಬಹಳ ಮಕ್ಕಳ ದೂರು .ಆದರೆ ಇಲ್ಲಿ ತಾಯ್ತಂದೆಯರು ನಿಜಕ್ಕೂ ತಮ್ಮ ಮಕ್ಕಳ ಬಗೆಗಿನ ಕಾಳಜಿಯಿಂದ ಇಷ್ಟೆಲ್ಲಾ ಮಾಡುತ್ತಾರೆಯೇ ಹೊರತು ಅಪನಂಬಿಕೆಯಿಂದಲಲ್ಲ ಎನ್ನುವುದು ಆ ಬೆಳೆದ ಮಕ್ಕಳಿಗೆ ಅರ್ಥವಾಗುವುದೇ ಇಲ್ಲ.        ತಮ್ಮ ಮಕ್ಕಳ ನಡೆನುಡಿಯಲ್ಲಾಗುವ ಸೂಕ್ಷ್ಮ ಬದಲಾವಣೆಗಳೂ ತಾಯ್ತಂದೆಯರ ಹೃದಯಕ್ಕೆ ಕೂಡಲೇ ಪತ್ತೆಯಾಗಿಬಿಡುತ್ತದೆ.ಒಂದಾನೊಂದು ಕಾಲದಲ್ಲಿ ಅವರೂ ಮಕ್ಕಳೇ ಆಗಿದ್ದವರಲ್ಲವೆ!! ಈ ಆಧುನಿಕ ,ಡಿಜಿಟಲ್ ಯುಗದಲ್ಲಿ  ಎಲ್ಲರೂ ಅವರವರದೇ  ಆದ ಲ್ಯಾಪ್ ಟಾಪ್, ಮೊಬೈಲ್ ಗಳ ಹಿಡಿದು ಕೆಲಸ , ಆನ್ ಲೈನ್ ಕಲಿಕೆ , ಸೋಷಿಯಲ್ ಮೀಡಿಯಾ ಎಂದು ಮುಳುಗಿ ಹೋಗಿರುವಾಗ ಮಕ್ಕಳ ಬಗ್ಗೆ ಕಾಳಜಿ ಹೊಂದಿರುವ ಪೋಷಕರು ನಿಜಕ್ಕೂ ಆತಂಕಕ್ಕೆ ಒಳಗಾಗುತ್ತಾರೆ. ಬದುಕು ನಿಜಕ್ಕೂ  ಅಷ್ಟು ಸಲೀಸಲ್ಲ…ಹದಿಹರೆಯಕ್ಕೆ ಬಂದರೂ ಸಹಾ ಮಕ್ಕಳು ಈ ಜಗತ್ತಿಗೆ , ಈ ಬದುಕಿನ ಅನುಭವಗಳಿಗೆ ಅಪರಿಚಿತರೇ!!             ಅಪ್ಪ-ಅಮ್ಮದಿರ ಬಗ್ಗೆ ಇದಕ್ಕಾಗಿ ಅಸಮಾಧಾನಗೊಳ್ಳದೆ ನಿನಗೇನು ಗೊತ್ತು  ಈ ಜನರೇಷನ್ ಎಂದು ಹೀಯಾಳಿಸದೆ ಮಕ್ಕಳು ತಮ್ಮ ತಾಯ್ತಂದೆಯರ ವಯಸ್ಸು ,ಅನುಭವಗಳನ್ನ ಗೌರವಿಸಬೇಕಿದೆ. ತಾಯ್ತಂದೆಯರೇ ಬದುಕಲ್ಲ ..ಆದರೆ ತಾಯಗತಂದೆಯರು ಬದುಕಿನ ಬಹುಮುಖ್ಯ ಭಾಗ ಎಂಬುದನ್ನು ಮಕ್ಕಳು ಅರಿಯಬೇಕಿದೆ. ಒಂದೆಡೆ ಕುದಿರಕ್ತದ ವಯಸ್ಸು ಇನ್ನೊಂದೆಡೆ ಸ್ನೇಹಿತರು ಇವೆರಡರ ನಡುವೆ ಅಪ್ಪ ಅಮ್ಮದಿರಿಗೂ ಸಮಯ ಕೊಡುವ ,ಗೌರವ ಕೊಡುವ ಮನೋಭಾವವನ್ನು ಮಕ್ಕಳು ಬೆಳೆಸಿಕೊಳ್ಳಬೇಕಿದೆ. ಅಪ್ಪ ಅಮ್ಮದಿರು ಮಕ್ಕಳಿಗೆ ಸ್ನೇಹಿತರೂ ಆಗಬಲ್ಲರೂ ಪೋಷಕರೂ ಆಗಬಲ್ಲರು .ಆದರೆ ಸ್ನೇಹಿತರೆಂದಿಗೂ ಅಪ್ಪ ಅಮ್ಮನ ಸ್ಥಾನ ತುಂಬಲು ಸಾಧ್ಯವೇ ಇಲ್ಲ.               ತಾಯ್ತಂದೆಯರಿಂದ ಮುಚ್ಚಿಟ್ಟ ವಿಷಯಗಳು , ಹೇಳಿದ ಸುಳ್ಳುಗಳು ಎಂದಿಗೂ ಮಕ್ಕಳನ್ನು ರಕ್ಷಿಸುವುದಿಲ್ಲ. ಹೀಗೆ ಮಾಡುವುದರ ಮೂಲಕ ಮಕ್ಕಳು ಕೇವಲ ತಮ್ಮ  ತಾಯ್ತಂದೆಯರಿಗೆ ಮೋಸ ಮಾಡುವುದಲ್ಲ ತಮಗೆ ತಾವೇ ಮೋಸ ಮಾಡಿಕೊಳ್ಳುತ್ತಿದ್ದೇವೆಂದು ಅರಿವಾಗುವ ಹೊತ್ತಿಗೆ ಬಹಳ ತಡವಾಗಿಬಿಟ್ಟಿರುತ್ತದೆ.ಮಕ್ಕಳು  ಬೆಳೆದಂತೆಯೇ ತಾಯ್ತಂದೆಯರೂ ಬೆಳೆಯುತ್ತಾರೆಂಬುದನ್ನು ಮಕ್ಕಳು ಮರೆಯಬಾರದು. ವಯಸ್ಸು ಹೆಚ್ಚುತ್ತಿದ್ದಂತೆ ಆ ತಾಯ್ತಂದೆಯರ ಹೃದಯ ಬಯಸುವುದು ಮಕ್ಕಳ ಪ್ರೀತಿಯನ್ನು ಕಾಳಜಿಯನ್ನು. ಮಕ್ಕಳನ್ನು ಬೆಳೆಸುವುದು ನಮ್ಮ ಕರ್ತವ್ಯ ಅವರಿಂದ ಏನನ್ನೂ ಬಯಸಬಾರದು ,ನಿರೀಕ್ಷಿಸಬಾರದು  ಎಂದು ಎಷ್ಟೇ ಹೇಳಿಕೊಂಡರೂ ಆ ಜೀವಗಳು ಮಕ್ಕಳಿಗಾಗಿಯೇ ಬದುಕು ಸವೆಸಿ ಜೀವನದ ಸಂಧ್ಯೆಯಲ್ಲಿ ನಿಂತಾಗ ಬೇರಾವ ವಸ್ತು, ಹಣದ ನಿರೀಕ್ಷೆ ಅವರಿಗಿರುವುದಿಲ್ಲ. ಮಕ್ಕಳ ಪ್ರೀತಿ ಮತ್ತು ಸಾನಿಧ್ಯ ಎರಡೇ ಅವರ ನಿರೀಕ್ಷೆಗಳು!.                 ಸದಾ ಅಪ್ಪ ಅಮ್ಮದಿರ ಜೊತೆ ಮಕ್ಕಳು ಇರಲಾಗದು ರೆಕ್ಕೆ ಬಂದ ಹಕ್ಕಿಗಳು ಗೂಡು ತೊರೆದು ಹಾರಲೇ ಬೇಕು .ಅದೇ ಪ್ರಕೃತಿನಿಯಮ.ಆದರೆ ಹಾಗೆ ಹಾರಿ ಹೋದರೂ ಆಗಾಗ್ಗೆ ಮರಳಿ ಗೂಡಿಗೆ ಬಂದು ಕಾಳಜಿ ತೋರುವುದು ಮಾನವನ ಬದುಕಿನ ನಿಯಮವಾಗಬೇಕು.                 ಎಷ್ಟೋ ಬಾರಿ  ಮಕ್ಕಳು ನಾನೇನು ಹುಟ್ಟಿಸು ಎಂದು ಕೇಳಿದ್ದೆನಾ ಎಂದು ಅಪ್ಪ ಅಮ್ಮನನ್ನು ಕೇಳುವುದೂ ಇದೆ. ಈ ಇಂಥ ಮಾತುಗಳಿಂದ ಆ ಹಿರಿಜೀವಗಳಿಗಾಗುವ ಆಘಾತ ಆ ಮಕ್ಕಳಿಗೆ ಅರ್ಥವಾಗಬೇಕಾದರೆ ಅವರೂ ಅಪ್ಪ ಅಮ್ಮದಿರಾಗಬೇಕು!!!ಆದರೆ ಬಹಳಷ್ಟು ಸಂದರ್ಭಗಳಲ್ಲಿ ಅಪ್ಪ ಅಮ್ಮನ ಮನ ನೋಯಿಸಿದ ಮಕ್ಕಳು ನಂತರ ಅರಿತು ಪಶ್ಚಾತ್ತಾಪ ಪಡುವ ಹೊತ್ತಿಗೆ ಅಲ್ಲೇನೂ ಉಳಿದಿರುವುದಿಲ್ಲ..ಗೋಡೆಗಂಟಿದ ಅಪ್ಪ ಅಮ್ಮನ  ಮೂಕ ಭಾವ ಚಿತ್ರಗಳ ಬಿಟ್ಟು!!                 ಬರಿದೆ ಪಶ್ಚಾತ್ತಾಪದಿಂದ ಪ್ರಯೋಜನವಿಲ್ಲ.ಹಿರಿಮರಗಳು ಉರುಳಿದ ಜಾಗದಲ್ಲಿ  ಕುಡಿಸಸಿಯಲ್ಲದೇ ಮತ್ತೊಮ್ಮೆ ಏಕಾಏಕಿ ಹಿರಿಯ ಮರವೊಂದು ಮೂಡದು.ಇಂದಿನ  ಬಹುತೇಕ ಮಕ್ಕಳಿಗೆ ಡಿಜಿಟಲ್ ಪ್ರಪಂಚ ಗೊತ್ತಿದೆ, ಸೋಷಿಯಲ್ ಮೀಡಿಯಾ ಗೊತ್ತಿದೆ, ಗೂಗಲ್ ಸರ್ಚ್ ಗೊತ್ತಿದೆಯೆ ವಿನಃ ಬದುಕಿನ ಭಾಷ್ಯ ಗೊತ್ತಿಲ್ಲ.ನಮ್ಮಿಷ್ಟದಂತೆ ಬದುಕುವುದೇ ಬದುಕು ಎನ್ನುವ ಕುರುಡು ಅಹಂ ಅವರನ್ನು ಹಾದಿ ತಪ್ಪಿಸುತ್ತಿದ್ದರೂ ಅದೇ ಸರಿಯಾದ ಹಾದಿ ಎಂದು ಭ್ರಮೆಯಲ್ಲಿ ನಡೆಯುತ್ತಿರುತ್ತಾರೆ. ದುರಂತವೆಂದರೆ ಗೂಗಲ್ ಗಿಂತ ಹೆಚ್ಚಿನ ಜ್ಞಾನ ಇಲ್ಲದ ಅಪ್ಪ ಅಮ್ಮ ಬದುಕಿನ ಅನುಭವಗಳನ್ನು ಬೊಗಸೆ ಬೊಗಸೆ ಮೊಗೆದು ಕುಡಿದಿದ್ದಾರೆ ,ಒಮ್ಮೆ ಕೈ ಚಾಚಿದರೆ ತಮ್ಮ ಬೊಗಸೆಗೂ ಅದನ್ನ ಧಾರೆಯೆರೆಯಲು ಕಾತರರಾಗಿದ್ದಾರೆಂಬ ಸತ್ಯ ಬಹಳಷ್ಟು ಮಕ್ಕಳಿಗೆ ಗೊತ್ತೇ ಆಗದು.                  ಬಹಳ ಹಿಂದೆ ಸಹೋದ್ಯೋಗಿಯೊಬ್ಬರು ಹೇಳಿದ ಮಾತು ನೆನಪಾಗುತ್ತಿದೆ.”ಮಕ್ಕಳನ್ನ ದೊಡ್ಡ ಓದು ಓದಿಸಬಾರದು…ವಿದೇಶ ಸೇರಿ ಕೊನೆಗಾಲದಲ್ಲಿ  ನೋಡಲೂ ಬಾರದ ಸ್ಥಿತಿ ಬರೋದೇ ಬೇಡ..ಸುಮ್ನೆ ನಮ್ಮಂತೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಹತ್ತಿರವೇ ಇರಲಿ ”  ಸದಾ ಮಕ್ಕಳ ಏಳಿಗೆಯನ್ನೇ ಬಯಸುವ ಅದಕ್ಕಾಗಿ ಜೀವ ತೆರಲೂ ಸಿದ್ಧವಿರಬೇಕಾದ ತಂದೆಯೊಬ್ಬ ಹೀಗೆ ಹೇಳಿ ತಾಯಿ ಅದಕ್ಕೆ ಹೂಗುಟ್ಟುವ ಪರಿಸ್ಥಿತಿ  ಬಂದಿದೆಯೆಂದರೆ ನಾವಿರುವುದು ಎಂಥಹಾ ದುರಂತದ ಕಾಲದಲ್ಲಿ ಎಂದು ಖೇದವಾಗುತ್ತದೆ. ಆ ತಂದೆ ಹೀಗೆನ್ನಬೇಕಾದರೆ ಸುತ್ತ ಮುತ್ತ ನಡೆವ ಅದೆಷ್ಟು ಘಟನೆಗಳನ್ನ ನೋಡಿ ಆ ಮನಸ್ಸು ರೋಸಿಹೋಗಿರಬೇಕು!!              ನಮ್ಮ ಕಾಲ ಬೇರೆ ನಿಮ್ಮ ಕಾಲ ಬೇರೆ ..ಅದೆಲ್ಲ ಈಗ ಮೂರು ಕಾಸಿಗೂ ಬಾರದು ಎಂದು ಹಿರಿಯರ ಹಿತವಚನಗಳ ಮೂಲೆಗೊತ್ತುವ ಮಕ್ಕಳಿಗೆ  ಅಪ್ಪ ಅಮ್ಮನೆಂದರೆ ಶತಮಾನ ಹಳೆಯ ಧೂಳು ತುಂಬಿಕೊಂಡ ಮೂಟೆಗಳು!!  ದುರಂತವೆಂದರೆ ಇದೇ ಮಕ್ಕಳಿಗೆ ಮುಂದೊಂದು  ದಿನ ಅವರ ಮಕ್ಕಳಿಂದಲೂ ಇಂತಹುದೇ  ಕಟು ಅನುಭವ ಕಾದಿದೆಯೆನ್ನುವ ಅರಿವೂ ಇಲ್ಲದಿರುವುದು.              ದೀಪ ತಾನು ಬೆಳಗಿದರಷ್ಟೆ ಮತ್ತೊಂದು ದೀಪವನ್ನು ಬೆಳಗಿಸಬಲ್ಲುದು. ತಾಯ್ತಂದೆಯರ ಬಗ್ಗೆ ಅಕ್ಕರೆ, ಗೌರವ ಹೊಂದಿರುವ ಮತ್ತು ಅದನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುವ ಮಕ್ಕಳಷ್ಟೇ ಭವಿಷ್ಯದಲ್ಲಿ ತಮ್ಮ ಮಕ್ಕಳಿಗೂ ಅದನ್ನು ಕಲಿಸಲು ಸಾಧ್ಯವಾಗುವುದು.       ಎಲ್ಲರೂ ಶ್ರವಣಕುಮಾರನಾಗಲಿ, ಶ್ರೀರಾಮನಾಗಲೀ ,ಭಕ್ತಪುಂಡಲೀಕನಂತಾಗಲೀ ತಾಯ್ತಂದೆಯರ ಸೇವೆ ಮಾಡಲು ಸಾಧ್ಯವಿಲ್ಲ ನಿಜ. ಆದರೆ ಸದಾ ತಾನು ನಿನ್ನೊಂದಿಗಿರುವೆ ಎಂಬ ಸಂತಸದಾಯಕ ಭಾವವನ್ನು  ಹೆತ್ತವರಲ್ಲಿ ಉಂಟುಮಾಡಲು  ಸೋಲಬಾರದು.                 ಮಕ್ಕಳೆಲ್ಲ ತಮ್ಮ ತಾಯ್ತಂದೆಯರ ಪಾಲಿನ ದೀಪವಾಗಲಿ .ಭವಿಷ್ಯದಲ್ಲಿ ಹೊಸ ದೀಪಗಳ ಹಚ್ಚುವ ಬೆಳಗುವ ಹಣತೆಗಳಾಗಲಿ.ಸಾಲು ದೀಪಗಳು ಬೆಳಗಿ ಸುತ್ತಮುತ್ತಲಿರುವ ಕತ್ತಲೆಯ ಮಣಿಸುವಂತಾಗಲಿ.      ತುಷ್ಟಯಾಂ ಮಾತರಿ ಶಿವೆ ತುಷ್ಟೇ ಪಿತರೀ ಪಾರ್ವತಿ | ತವ ಪ್ರೀತಿರ್ಭವೇದೇವಿ ಪರಬ್ರಹ್ಮ ಪ್ರಸೀದತಿ || ******************************************* ಶುಭಾ ಎ.ಆರ್  (ದೇವಯಾನಿ) ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ   

Read Post »

ಅಂಕಣ ಸಂಗಾತಿ, ದೀಪದ ನುಡಿ

ಅಂಕಣ ಬರಹ ಕಾಲೆಳೆವ ಕೈಗಳೇ ಮೆಟ್ಟಿಲಾಗಲಿ     ಸಾಮಾನ್ಯವಾಗಿ ಕಾಲೆಳುವುದು ಅಥಬಾ ಲೆಗ್ ಪುಲ್ಲಿಂಗ್ ಎಂದರೆ ಕೀಟಲೆ ಮಾಡುವುದು ಅಥವಾ ಇಲ್ಲದ್ದನ್ನು ಇದೆ ಎಂದು ತಮಾಷೆಗಾಗಿ ನಂಬಿಸುವುದು ಎಂದರ್ಥವಿದೆ. ಆದರೆ ಇಲ್ಲಿ ಕಾಲೆಳುವುದೆಂದರೆ ಹಗುರ ಅರ್ಥದಲ್ಲಿ ಇಲ್ಲ. ಮುನ್ನಡೆವವನ ದಾರಿಗೆ ಅಡ್ಡ ಹಾಕುವುದಿ ಎಂಬರ್ಥದಲ್ಲಿ ಬಳಸಲಾಗಿದೆ. ಬಹಳ ಹಿಂದೆ ಕೇಳಿದ್ದ ಕಥೆಯೊಂದು ನೆನಪಾಗುತ್ತಿದೆ. ಒಂದು ಕಾಡಿನಲ್ಲಿ ಒಂದು ಬಾವಿ. ಆ ಬಾವಿಯಲ್ಲಿ ನೂರಾರು ಕಪ್ಪೆಗಳು. ಬಾವಿಯನ್ನೇ ಪ್ರಪಂಚವೆಂದುಕೊಂಡು ನೆಮ್ಮದಿಯಿಂದಿದ್ದವು. ಒಮ್ಮೆ ಅಲ್ಲಿದ್ದ ಒಂದು  ಕಪ್ಪೆಗೆ ಯಾಕೋ ಆ ಬಾವಿಯ ಜಗತ್ತು ಬೇಸರವೆನಿಸಿ ಒಂದು ಬಾರಿಯಾದರೂ ಹೊರಗೆ ಹೋಗಿ ನೋಡಬೇಕೆನಿಸಿತಂತೆ. ಸರಿ ಅದಕ್ಕಾಗಿ ಇನ್ನಿಲ್ಲದ ಪ್ರಯತ್ನ ಮಾಡತೊಡಗಿತು. ಇಷ್ಟಿಷ್ಟೇ ಎತ್ತರಕ್ಕೆ ಜಿಗಿಯುತ್ತ ಜಿಗಿಯುತ್ತಾ ಹೊರಗೆ ಹಾರಲು ಅಭ್ಯಾಸ ಮಾಡಿಕೊಳ್ಳತೊಡಗಿತು. ಉಳಿದ ಕಪ್ಪೆಗಳು ಮೊದ ಮೊದಲು ಆಶ್ಚರ್ಯದಿಂದ ಅದನ್ನೇ ಗಮನಿಸುತ್ತಿದ್ದವು ನಂತರ ತಾವೂ ಹಾರಲು ಪ್ರಯತ್ನ ಮಾಡತೊಡಗಿದವಂತೆ. ಆದರೆ ಯಾವಾಗ ಅವುಗಳಿಗೆ ಆ ಕಪ್ಪೆ ಬಾವಿಯಿಂದ ಹೊರಗೆ ಹೋಗಲು ಪ್ರಯತ್ನ ಮಾಡುತ್ತಿದೆಯೆಂದು ತಿಳಿಯಿತೋ ಆ ಕ್ಷಣದಿಂದಲೇ ಆ ಕಪ್ಪೆ ಮೇಲೆ  ಜಿಗಿಯಲು ಹೋದರೆ ಅದರ ಕಾಲೆಳೆದು ಕೆಳಗೆ ಬೀಳಿಸತೊಡಗಿದವು. ಪ್ರತೀ ಬಾರಿ ಆ ಕಪ್ಪೆ ಮೇಲೆ ಜಿಗಿಯಲು ಪ್ರಯತ್ನಿಸುವುದು, ಪ್ರತೀ ಬಾರಿ ಉಳಿದ ಕಪ್ಪೆಗಳು ಅದರ ಕಾಲೆಳೆದು ಕೆಳಗೆ ಬೀಳಿಸುವುದು…ಕೊನೆಗೂ ಆ ಕಪ್ಪೆಗೆ ಬಾವಿಯಿಂದ ಹೊರಬರಲಾಗದೆ ಅದು ಕೊನೆಯವರೆಗೂ ಕೂಪ ಮಂಡೂಕವೇ ಆಗಿ ಜೀವನ ಸವೆಸಬೇಕಾಯಿತಂತೆ…        ಇದು ಈ ಕಥೆಯ ಹಳೆಯ ವರ್ಷನ್ ..ಹೊಸ ವರ್ಷನ್ ನಲ್ಲಿ ಆ ಕಪ್ಪೆ  ತನ್ನ ಕಾಲೆಳೆವ ಇತರ ಕಪ್ಪೆಗಳ  ಕೈಗಳ ಮೇಲೆ ಬೆನ್ನ ಮೇಲೆ ಜಿಗಿ ಜಿಗಿದು ಆ ಬಾವಿಯಿಂದ ಹೊರಜಿಗಿದು ವಿಶಾಲ ಜಗತ್ತಿಗೆ ಬಂದಿತಂತೆ..               ಕಾಲೆಳೆಯುವುದೂ ,ಕಾಲೆಳೆಸಿಕೊಳ್ಳುವುದೂ ಬರೀ ಮನುಷ್ಯವರ್ಗಕ್ಕಷ್ಟೇ ಸೀಮಿತವಾಗಿಲ್ಲ ಎನ್ನುವುದನ್ನ ಹೇಳುವ ಈ ಕಥೆ ಕಾಲೆವ ಕೈಗಳ ಬಗ್ಗೆ ಎಚ್ಚರಿಕೆಯನ್ನೂ ಕೊಡುತ್ತದೆ. ಏನಾದರೂ ಹೊಸತನ್ನು ಆಲೋಚಿಸುವ , ಮಾಡ ಬಯಸುವ ವ್ಯಕ್ತಿಗೆ ಸುತ್ತಮುತ್ತಲ ಜನರಿಂದ ಪ್ರೋತ್ಸಾಹ ಎಷ್ಟು ಸಿಗುತ್ತದೋ ಅದರ ಎರಡರಷ್ಟು ಕುಹಕ, ಕೊಂಕುಗಳೂ ,ಅಡ್ಡಿ ಆತಂಕಗಳೂ ಎದುರಾಗುತ್ತವೆ. ಮಾತೆ ಸಾವಿತ್ರಿ ಬಾಯಿ ಫುಲೆಯವರು ಅಕ್ಷರ ಕಲಿತು ಇನ್ನಿತರ ಮಹಿಳೆಯರಿಗೆ ಅಕ್ಷರ ಕಲಿಸಲು ಹೋದಾಗ ಅವರದೇ ಸುತ್ತಮುತ್ತಲಿದ್ದ ಜನರು ಹೇಗೆಲ್ಲಾ ಅವರ ಹಾದಿಯಲ್ಲಿ ತಡೆಯಾದರು .ಹೇಗೆ ಆ ಮಾತೆ ಎಲ್ಲವನ್ನೂ ಎದುರಿಸಿ ತನ್ನ ಗುರಿ ತಲುಪಿದರು ಎನ್ನುವುದು ಜಗತ್ತಿಗೆ ಗೊತ್ತಿರುವ ಸಂಗತಿ.           ನಾವು ಕೆಲಸ ಮಾಡುವ ಸ್ಥಳವನ್ನೇ ತೆಗೆದುಕೊಳ್ಳೋಣ . ನಮಗೊಪ್ಪಿಸಿದ ಕೆಲಸವನ್ನು ಹೊಸರೀತಿಯಲ್ಲಿ ಮಾಡಲು ಹೋದಾಗ ಓ.ಇವರೇನು ಮಹಾ ಮಾಡುವುದು ನಾವು ಮಾಡದ್ದನ್ನ ಎನ್ನುತ್ತಲೇ   ನಿಮಗಿಲ್ಲಿನ ಸಂಗತಿ ಗೊತ್ತಿಲ್ಲ ಬಿಡಿ ..ನಾವು ನಿಮಗಿಂತ ಹಳಬರು ಇದೆಲ್ಲಾ ಮಾಡಿ ಕೈ ಬಿಟ್ಟಾಯಿತು..ಸುಮ್ಮನೇ ಯಾಕೆ ಕಷ್ಟಪಡುತ್ತೀರಿ..ನಮ್ಮಂತಿರಿ ಎನ್ನುವ  ಉಚಿತ ಉಪದೇಶದ ಜೊತೆಗೇ ತಮ್ಮಲ್ಲಿನ ಅಸಹನೆ , ಅಸಡ್ಡೆಗಳಿಂದ ಕಾಲೆಳೆಯತೊಡಗುವುದು ತೀರಾ ಸಹಜವಾಗಿಬಿಟ್ಟಿದೆ.            ಹೆಣ್ಣು ಬಹುಶಃ ಮೊದಲ ಬಾರಿ ಮನೆಯಿಂದ ಹೊರ ಹೆಜ್ಜೆ ಇಟ್ಟಾಗಲೂ ಅದೆಷ್ಟೋ ಕೈಗಳು ಆಕೆಯ ಕಾಲೆಳೆಯಲು ಅಷ್ಟೇ ಏಕೆ ಕಾಲು ಮುರಿಯಲೂ ಪ್ರಯತ್ನಿಸಿರಲಿಕ್ಕಿಲ್ಲ ! ಅಕ್ಕ, ಭಕ್ತೆ ಮೀರಾ ಇವರೆಲ್ಲಾ ಕಾಲೆಳೆವವರ ನಿರ್ಲಕ್ಷಿಸಿ ಹೊರಟಾಗಲೇ ತಮ್ಮ ಗಮ್ಯ ಸೇರಲಾಗಿದ್ದು.               ಕಾಲೆಳೆವ ಕೈಗಳಿಗೆ ಶರಣಾದರೆ ಅಲ್ಲಿಗೆ ನಮ್ಮ ಪಯಣ ಮುಗಿದಂತೆಯೇ ಸರಿ. ಸಾಗುವ ಹಾದಿ ಸರಿಯಿದೆ ,ಅದರಿಂದ ಯಾರಿಗೂ ತೊಂದರೆ ಆಗಲಾರದ ದೃಢ ವಿಶ್ವಾಸವಿದ್ದಲ್ಲಿ ಯಾವ ಕೈಗಳಿಗೂ ಅದನ್ನು ತಡೆಯಲು ಸಾಧ್ಯವಿಲ್ಲ.     ಮುನ್ನಡೆವವರ ಕಾಲೆಳೆವುದರಲ್ಲಿ , ಬೀಳಿಸಿ ಬಿದ್ದಾಗ ನೋಡಿ ನಗುವುದರಲ್ಲಿ ಹೆಚ್ಚುಗಾರಿಕೆಯೇನಿಲ್ಲ. ಆದರೆ ಮುನ್ನಡೆವವನಿಗೆ ಈ ಕೈಗಳು ಬಂಧನವಾಗಬಾರದು. ಬದಲಿಗೆ ಪ್ರೇರಣೆಯಾಗಬೇಕು. ಮುನ್ನುಗ್ಗುವ ಛಲ ಮೂಡಿಸಬೇಕು.ಕಾಲೆವ ಕೈಗಳಿಗೆ ,ಮನಸುಗಳಿಗೆ ಆಯಾಸವಾಗಿ ಹಾಗೇ ಪಕ್ಕಕ್ಕೆ ಒರಗುವಂತಾಗಬೇಕು..  ಹಾಗಾಗಿಯೇ…        ಅವರಿವರ ಕಾಲೆಳೆದು ಮೇಲೇರುವುದ ತಡೆದು ಬೀಗುವುದು ತರವಲ್ಲವಯ್ಯ ಕಾಲೆಳೆವಕೈಯನೇ ಮೆಟ್ಟಿಲಾಗಿಸಿ ಮೇಲೇರುವರಿಹರು ಕಾಲೆಳೆದವನೀನುಕೂಪದಲೆಕೊಳೆವೆ ನೋಡಯ್ಯ                 ಎನ್ನುವಂತೆ ಕಾಲೆಳೆವ ಕೈಗಳನ್ನೇ ಮೇಲೇರುವ ಮೆಟ್ಟಿಲಾಗಿಸಿಕೊಳ್ಳುವ ಚಾಕಚಕ್ಯತೆ ನಮಗಿರಬೇಕು.       Obstacles are stepping stones , not stopping stones.               ಕೂಪಮಂಡೂಕಗಳಿಗೆ ಆ ಕೂಪವೇ ಜಗತ್ತು.ತಾವು ಅದರಿಂದಾಚೆಗೆ ಹೋಗಲು ಪ್ರಯತ್ನಿಸುವುದಿಲ್ಲ ಇತರರನ್ನೂ ಹೋಗಲು ಬಿಡುವುದಿಲ್ಲ.  ಹೀನ ಸಂಪ್ರದಾಯಗಳು  ,ಮೂಢನಂಬಿಕೆ , ಅರ್ಥವಿಲ್ಲದ ಕಟ್ಟುಪಾಡುಗಳು ಈ ಸಮಾಜದಲ್ಲಿ ಸದಾ ಇದನ್ನೆಲ್ಲ ಮೀರಿ ಹೋಗುವವರ ಸಹಿಸಲಾಗದೆ ಮತ್ತೆ ಮತ್ತೆ ಕೆಳಗೆಳೆಯುತ್ತಲೇ ಇರುತ್ತವೆ. ಅಸಹನೆ, ಅಸಹನೆ, ಕುಹಕ ,ಮತ್ಸರ, ವಿಕೃತಮನೋಭಾವಗಳೆಂಬ ಕಾಲೆಳೆವ ಕೈಗಳಿಗೆ ಬಲಿಯಾದರೆ ಅಲ್ಲಿಗೆ ಕಥೆ ಮುಗಿದಂತೆಯೇ..        ಅದರಲ್ಲಿಯೂ ಹೆಣ್ಣುಮಕ್ಕಳೇ ಹೆಚ್ಚಾಗಿ ಈ ಕಾಲೆಳೆಯುವಿಕೆಗೆ ಬಲಿಯಾಗುವುದು.ಆದಿ ಕಾಲದಿಂದಲೂ ಅವಳನ್ನು ಸಂಕೋಲೆಗಳಲ್ಲಿ ಕಟ್ಟಿ ಹಾಕಿದ್ದಾಗಿದೆ.ಈಗ ಈ ಆಧುನಿಕ ಜಗತ್ತಿನಲ್ಲಿ ಹೆಣ್ಣುಗಳು ತಮ್ಮ ಬುದ್ಧಿಶಕ್ತಿ , ಚಾಕಚಕ್ಯತೆಗಳನ್ನುಪಯೋಗಿಸಿ ಕೊಂಡು ಎಲ್ಲಾ ಅಡೆತಡೆಗಳನ್ನೂ ಮೀರಿ  ಎಲ್ಲಾ ರಂಗಗಳಲ್ಲಿಯೂ ತಮ್ಮ ಹೆಜ್ಜೆಯೂರುತ್ತಿರುವಂತಹಾ ಸಂದರ್ಭದಲ್ಲಿಯೂ ಸಹಾ ಅವರನ್ನು ಪ್ರೋತ್ಸಾಹಿಸುವವರಂತೆಯೇ  ಹೀಯಾಳಿಸುವ ,ಆತ್ಮ ಸ್ಥೈರ್ಯ ಕುಗ್ಗಿಸುವ ಮನೋಭಾವವನ್ನು ತಮ್ಮ ಮಾತು ಮತ್ತು ಕೃತಿಗಳಲ್ಲಿ ತೋರಿಸುತ್ತಾ ಕಾಲೆಳೆವವರೂ ಇದ್ದಾರೆ.          ಆನೆಯೋ ಸಿಂಹವೋ ತನ್ನ ಹಾದಿಯಲ್ಲಿ ತಾನು ನಡೆಯುತ್ತಿದ್ದರೆ ಅವನ್ನು ತಡೆದು ನಿಲ್ಲಿಸಲು ಸಾಧ್ಯವಿದೆಯೆ? ನಮ್ಮ ನಿಲುವೂ ಅದೇ ಆಗಿದ್ದರೆ ಖಂಡಿತಾ ಕಾಲೆಳೆವ ಕೈಗಳು ಸೋಲುತ್ತವೆ ಮತ್ತು ಸೋಲಲೇ ಬೇಕು.                  ನಮ್ಮ ಹಾದಿಯಲ್ಲಿ ನಾವು ಆತ್ಮವಿಶ್ವಾಸದಿಂದ ಸಾಗೋಣ. ಕಾಲೆಳೆವ ಕೈಗಳ ಸೋಲಿಸೋಣ. ಗೆಲುವಿನ ಹಾದಿಯಲಿ  ಹೆಜ್ಜೆಯಿರಿಸುತ್ತ  ದೃಢತೆಯೆಂಬ ಹಣತೆಯ ಬೆಳಕನ್ನು ಹರಡೋಣ ***********************************                                    ಶುಭಾ ಎ.ಆರ್  (ದೇವಯಾನಿ)  – ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ    

Read Post »

ಅಂಕಣ ಸಂಗಾತಿ, ದೀಪದ ನುಡಿ

ಅಂಕಣ ಬರಹ ಯಾರಿಗೆ ಯಾರುಂಟು           ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೆ..        ಶುದ್ಧ ವೈರಾಗ್ಯ ಮೂಡಿಸುವ ಈ ದಾಸರ ಪದವನ್ನು  ಬಹುಶಃ ಹಳೆಯ ತಲೆಮಾರಿನವರು ಅದೆಷ್ಟು ಸಲ ಗುಣುಗುಣಿಸಿರಬಹದೋ ಏನೋ..        ನಿಜವೆ ?  ಈ ಪ್ರಪಂಚದಲ್ಲಿ ಯಾರಿಗೂ ಇಲ್ಲವೆ? ಲೌಕಿಕ ವ್ಯಾಪಾರಿಗಳಾದ ನಾವುಗಳು ಕಟ್ಟಿಕೊಂಡ ಸಂಸಾರ , ಕೈಕೊಂಡ ವೃತ್ತಿ , ಗೆಳೆಯರು ,ಬಂಧುಗಳು ಇವರೆಲ್ಲ ಏನೂ ಅಲ್ಲವೆ? ನೀರಿನೊಳಗಿದ್ದರೂ ನೀರನ್ನು ಸೋಕಿಸಿಕೊಳ್ಳದ ಕಮಲಪತ್ರದಂತಹ ಬದುಕು ಸಾಮಾನ್ಯರಿಗೆ ಸಾಧ್ಯವಾಗುತ್ತದಾ? ಈ ಮಾತುಗಳು ,ದಾಸವಾಣಿ ಇವೆಲ್ಲ ಇಂದಿನ ತಂತ್ರಜ್ಞಾನದ ಯುಗದ ಜನತೆಗೆ ಬೇಕೆ?             ನಾವು ಬದುಕುವುದು ಕೇವಲ ನಮಗಾಗಿ ಎಂದರೆ  ತಮ್ಮ ಮಕ್ಕಳಿಗಾಗಿ ..ಮುಂದಿನ ಮೂರು ತಲೆಮಾರುಗಳಿಗಾಗಿ ಆಸ್ತಿ ಸಂಪಾದಿಸುವ ಜನರೆಲ್ಲ ಕೇವಲ ತಮಗಾಗಿಯೇ ಬದುಕಿದ್ದಾರೆಯೆ? ನಾನು ಹೋದರೂ ನನ್ನ ಮಕ್ಕಳು ಸುಖದಿಂದ ಇರಲಿ ಎನ್ನುವ ನಿಜ ಕಾಳಜಿ, ಅಥವಾ ನನ್ನ ಮುಂದಿನ ಹತ್ತು ತಲೆಮಾರಿನವರಿಗೆ ಕಷ್ಟ ಬರಬಾರದು ಎಂಬ ದುರಾಸೆ ಮಿಶ್ರಿತ ಕಾಳಜಿಯಿರುವುದರಿಂದಲೇ ಅಲ್ಲವೆ ಬ್ಯಾಂಕ್ ಡಿಪಾಸಿಟ್ , ಒಡವೆ, ಮನೆ , ಫ್ಲಾಟ್, ಜಮೀನು ಎಂದೆಲ್ಲ ಗಳಿಸುತ್ತಿರುವುದು.          ಇರುವುದೊಂದೇ ಬದುಕು , ಈ ಬದುಕು ನನ್ನದು ಮಾತ್ರಾ  ಇತರರ ಬಗ್ಗೆ ನಾನು ಯೋಚಿಸುವುದಿಲ್ಲ ಎನ್ನುವುದು , ನನ್ನ ಕುಟುಂಬಕ್ಕಾಗಿ ನಾನು ನನ್ನ ಆಸೆಗಳನ್ನು ತ್ಯಾಗ ಮಾಡುವುದಿಲ್ಲ ಎನ್ನುವುದು ಒಂದು ರೀತಿಯಲ್ಲಿ ಸ್ವಾರ್ಥಪರತೆಯಾಗುತ್ತದೆ. ಒಂದು ಕುಟುಂಬ ವ್ಯವಸ್ಥೆಯಲ್ಲಿರುವ ಗಂಡು ಹೆಣ್ಣು ಇಬ್ಬರಿಗೂ ಸಮಾನ ಜವಾಬ್ದಾರಿಗಳಿರುತ್ತವೆ. ಒಂದು ವೇಳೆ ಗಂಡು ತನ್ನ ಜವಾಬ್ದಾರಿ ಮರೆತರೂ ಹೆಣ್ಣು ಆ ಕುಟುಂಬಕ್ಕಾಗಿ ತನ್ನೆಲ್ಲ ಶಕ್ತಿ ಧಾರೆಯೆರೆಯುತ್ತಾಳೆ. ನಾನಿಲ್ಲದಿದ್ದರೂ ಜಗತ್ತು  ಹಾಗೇ ನಡೆಯುತ್ತದೆ.ನಾನಿಲ್ಲವಾದರೂ ನನ್ನ ಪ್ರೀತಿ ಪಾತ್ರರು ಹಾಗೇ ಬದುಕುತ್ತಾರೆ ..ಹಾಗಿದ್ದಾಗ ನಾನೇಕೆ ನನ್ನ ಆಸೆ , ಗುರಿ ಏನೆಲ್ಲ ತ್ಯಾಗ ಮಾಡಬೇಕು ಎಂಬ ಯೋಚನೆಗಳಿರುವವರೂ ನಮ್ಮ ಮಧ್ಯೆ ಇಲ್ಲದಿಲ್ಲ.           ಈ ಭೂಮಿ ನಮಗಾಗಿ ಅದೆಷ್ಟಲ್ಲಾ ಹೂ ,ಹಣ್ಣು ಹಸಿರು ಕೊಟ್ಟು ಆಧಾರವಾಗಿದೆಯಲ್ಲ.ಅದೂ ನನಗೇಕೆ ಬೇಕು ಇವೆಲ್ಲ ..ನನಗಿಷ್ಟ ಬಂದಂತೆ ನಾನಿರುವೆ ಎಂದು ಸುಮ್ಮನಿದ್ದರೆ ನಮ್ಮ ಗತಿ ದೇವರೇ ಗತಿ!        ಇಟ್ಟರೆ ಸಗಣಿಯಾದೆ     ತಟ್ಟಿದರೆ ಉರುಳಾದೆ     ಸುಟ್ಟರೆ ನೊಸಲಿಗೆ ವಿಭೂತಿಯಾದೆ   ಎನ್ನುವ ಮೂಕ ಗೋವು ಸಹಾ ತನ್ನ ಹಾಲೆಲ್ಲಾ ಕೇವಲ ತನ್ನ ಕಂದನಿಗಿರಲಿ ಎಂದೂ ಆಶಿಸಿಲ್ಲ.ಅದಕ್ಕೆ ಇಷ್ಟ ಇರುತ್ತದೋ ಇಲ್ಲವೋ ಆದರೂ ಕರುವಿನ ಪಾಲುಗಿಂತ ಹೆಚ್ಚು ಹಾಲನ್ನು ನಮಗೆ ನೀಡುತ್ತಿದೆ.                ಒಂದು ಮನೆ , ಗಂಡ – ಹೆಂಡತಿ, ಇಬ್ಬರು ಪುಟ್ಟ ಮಕ್ಕಳಿದ್ದರು. ಗಂಡ ಅಸಾಧ್ಯ ಬುದ್ಧಿವಂತ. ಆಗಾಗ  ಜಗಳವಾದಾಗಲೆಲ್ಲ ಹೆಂಡತಿಗೆ  ಹೇಳುತ್ತಿದ್ದ “. ಏನು ಮಾಡ್ಲಿ ಹೇಳು…ಒಂದು ವೇಳೆ ನಾನೇನಾದರೂ ನಿನ್ನ ಮದುವೆಯಾಗಿಲ್ಲದಿದ್ದರೆ ..ಎಲ್ಲೋ ಹೋಗಿ ಏನೋ ಮಾಡಿ…ಏನೋ ಆಗಿರುತ್ತಿದ್ದೆ…ಆದ್ರೆ .ನಿನ್ನ ಮದುವೆಯಾಗಿಬಿಟ್ನೆ??”      ಹೆಂಡತಿಯೂ ಸೋಲುತ್ತಿರಲಿಲ್ಲ..” ನೀನು ಬರೀ ನಿನ್ನ ಬಗ್ಗೆ ಹೇಳ್ತೀಯಲ್ಲ..ನನಗೂ ಒಂದಷ್ಟು ಆಸೆಗಳಿದ್ದವು..ನಿನ್ನ ಮದುವೆಯಾಗಿ ನಾನೂ ಅವಕ್ಕೆಲ್ಲ ಎಳ್ಳು ನೀರು ಬಿಡಲಿಲ್ಲವ …” ಎಂದು ವಾದ ಮಾಡುತ್ತಿದ್ದಳು.      ಗಂಡ – ಹೆಂಡತಿಯರ ಈ ವಾದಗಳನ್ನು ಕೇಳುತ್ತಾ ಮಕ್ಕಳು ಒಳಗೊಳಗೇ ಆತಂಕ ಪಡುತ್ತಿದ್ದವು.ಇವರಿಬ್ಬರೂ ಹೀಗೇ ಜಗಳವಾಡಿಕೊಂಡು ಮನೆ ಬಿಟ್ಟು ಹೋದರೆ ನಮ್ಮ ಗತಿಯೇನು ಎಂದು.             ಗಂಡನಿಗೆ ಅರ್ಥವಾಗದಿದ್ದರೂ ಮಕ್ಕಳ ಈ ಆತಂಕ ಹೆಂಡತಿಗರ್ಥವಾಯಿತು. ನಮ್ಮನ್ನೇ ನಂಬಿರುವ ಈ ಮಕ್ಕಳ ಮನಸ್ಸಿಗೆ ನೋವು ಮಾಡಬಾರದೆಂದು ಗಂಡನಿಗೆ ಅರ್ಥ ಮಾಡಿಸಿದಳು.                 ಒಂದು ಸಂಸಾರ ಎಂದು ಕಟ್ಟಿಕೊಂಡ ಕ್ಷಣದಿಂದಲೇ ನಮ್ಮ ಕೆಲವೊಂದು ಆದ್ಯತೆಗಳು ನಮಗೇ ಅರಿವಿಲ್ಲದಂತೆ ಬದಲಾಗಿ ಬಿಡುತ್ತವೆ. ಬಹಳಷ್ಟು ಸಂದರ್ಭಗಳಲ್ಲಿ ನಾವುಗಳು ನಮ್ಮ ಆಸಕ್ತಿಯ ಕ್ಷೇತ್ರವನ್ನು ಮರೆತೇ ಬಿಡಬೇಕಾಗುತ್ತದೆ. ದುರದೃಷ್ಟವಶಾತ್ ಇದು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರಾ ಅನಿವಾರ್ಯವಾಗಿಬಿಟ್ಟಿದೆ. ಗಂಡು ತನಗನಿಸಿದ್ದನ್ನ ಯಾವಾಗ ಬೇಕಾದರೂ ಸಾಧಿಸುವಷ್ಟು ಸ್ವತಂತ್ರವನ್ನು ಸ್ವಯಂ ತೆಗೆದುಕೊಂಡು ಬಿಟ್ಟಿದ್ದರೆ ಹೆಣ್ಣು ಮನೆ , ಮಕ್ಕಳು ಅವರ ಓದುಬರಹ ,ಆರೋಗ್ಯ ಮನೆಯಲ್ಲಿನ ಹಿರಿಯರ ಆರೈಕೆ ಎಂದು ನೂರಾರು ಜವಾಬ್ದಾರಿಗಳನ್ನ ತನ್ನ ಕೋಮಲಭುಜಗಳ ಮೇಲೆ ಹೊತ್ತು ಇದೇ ನನ್ನ ಬದುಕು ಎಂದುಕೊಂಡು ಹಾದಿ ಸವೆಸುತ್ತಾಳೆ.          ಗಂಡು ಮನೆಯ ಜವಾಬ್ದಾರಿಯನ್ನ ಸಮವಾಗಿ ನಿಭಾಯಿಸಿದ್ದರೆ ಹೆಣ್ಣಿಗೆ ಅದೂ ಏನಾದರೊಂದು ಸಾಧಿಸಬೇಕೆಂಬ ಆಕಾಂಕ್ಷೆಯಿರುವ ಹೆಣ್ಣಿಗೆ ಸಂಸಾರ ಹೊರೆಯೆನಿಸುವುದಿಲ್ಲ. ಮನೆ ಹೊರಗು ಒಳಗುಗಳೆರಡನ್ನೂ ನಿಭಾಯಿಸುವ ಕುಶಲತೆ ಆಕೆಗಿದೆ. ಆದರೆ ಯಾವುದೋ ಒಂದು ಘಳಿಗೆಯಲ್ಲಿ…ಛೇ ..ಇದೆಂತಹ ಬದುಕು ನನ್ನದು ..ನನಗಾಗಿ ನಾನು ಬದುಕದೆ ಈ ಮನೆ ,ಗಂಡ ಮಕ್ಕಳಿಗಾಗಿ ಬದುಕುತ್ತಿದ್ದೇನಲ್ಲ..ಹಾಗಾದರೆ ನನಗಾಗಿ ಬದುಕುವುದಾದರೂ ಯಾವಾಗ ಎನಿಸಿಬಿಟ್ಟರೆ ಅಲ್ಲಿಗೆ ಮುಗಿಯಿತು ಆ ಕುಟುಂಬದ ಸರ್ವನಾಶ !! ಹೆಣ್ಣಿಗೆ ಹೀಗೆಂದೂ ಅನಿಸದಂತೆ ನೋಡಿಕೊಳ್ಳುವ ಗುರುತರ ಹೊಣೆ ಗಂಡುಗಳಿಗಿದೆ.                ಕುಟುಂಬ ಒಂದು ಮಧುರ ಬಂಧ! ಏನೂ ಸರಯಿಲ್ಲದಿದ್ದಾಗ, ತೀರಾ ಹಿಂಸೆಯಾಗುತ್ತಿದ್ದಾಗ ಪರಸ್ಪರರ ಒಪ್ಪಿಗೆ ಮೇರೆಗೆ ಬೇರಾದರೂ ಮಕ್ಕಳ ಜವಾಬ್ದಾರಿ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ.          ನಮ್ಮ ನಮ್ಮ ತಾಯ್ತಂದೆಯರನ್ನೇ ತೆಗೆದುಕೊಳ್ಳೋಣ. ಅವರಲ್ಲಿ ಯಾರಾದರೊಬ್ಬರು ಅಥವಾ ಇಬ್ಬರೂ ನನ್ನ ದಾರಿ ನನಗೆ ನಾನಿಲ್ಲದೆಯೂ ಇವರೆಲ್ಲ ಇದ್ದೇ ಇರುತ್ತಾರೆ ..ನನ್ನ ಆಕಾಂಕ್ಷೆಯೇ ಮುಖ್ಯ ಎಂದು ಹೊರಟು ಬಿಟ್ಟಿದ್ದರೆ ನಾವುಗಳು ಈಗ ಇರುವಂತೆ ಇರಲು ಸಾಧ್ಯವಾಗುತ್ತಿತ್ತೆ? ( ವ್ಯತಿರಿಕ್ತ ಉದಾಹರಣೆಗಳಿವೆ ..ಇಲ್ಲಿ ಮಾತು ಸಾಮಾನ್ಯವಾಗಿ ಕುಟುಂಬದ ಕುರಿತು ಬಂದಿದೆ).                   ನಿಜ , ನಾನಿಲ್ಲದೆಯೂ ಲೋಕ ಇದ್ದೇ ಇರುತ್ತದೆ..ನನ್ನವರೂ ಬದುಕಿ ಬಾಳಿಯೇ ಬಾಳುತ್ತಾರೆ. ಆದರೆ ನಾನಿಲ್ಲದಾಗ ನನ್ನವರನ್ನು ಬದುಕಲು ಸಿದ್ಧ ಮಾಡುವುದಿದೆಯಲ್ಲ..ಅದೇ ನಮ್ಮೆಲ್ಲರ ಹೊಣೆಗಾರಿಕೆ.ನಾನಿಲ್ಲದ ಮೇಲೆ ಮನೆ ಮಾಡುವುದೇಕೆ ಎಂದು ಯಾರಾದರೂ ಯೋಚಿಸಿದ್ದರೆ ಜನಸಾಲದ ಹೊರೆಯಲ್ಲಿ ನಲುಗಿ ಮನೆ ಕಟ್ಟುತ್ತಲೇ ಇರಲಿಲ್ಲ.ಒಂದು ವೇಳೆ ಸಾಲ ತೀರಿಸಿದ ಮರು ದಿನವೇ ಆತ ಸತ್ತರೂ ಅಯ್ಯೋ ನಾನು ಕಟ್ಟಿಸಿದ ಮನೆಯಲ್ಲಿ ಬಹಳ ದಿನ ಬದುಕಲಿಲ್ಲ ಎಂದು ಕೊರಗುತ್ತ ಸಾಯಲಾರ.ಬದಲಾಗಿ ನಾನು ಹೋದರೂ ನನ್ನವರಿಗೊಂದು ನೆಲೆ ಇದೆ ಎಂದು ನೆಮ್ಮದಿಯಿಂದ ಸಾಯುತ್ತಾನೆ.ಆಸ್ತ ಮಾಡದವನು ಮಕ್ಕಳನ್ನು ಚೆನ್ನಾಗಿ ಓದಿಸಿದವನು ನಾನಿಲ್ಲದೆಯೂ ನನ್ನವರು ಬದುಕಲು ಗಟ್ಡಿಗರಾಗಿದ್ದಾರೆ ಎಂದು ನಿರಾಳವಾಗಿ ಸಾಯುತ್ತಾನೆ. ಇದೆಲ್ಲ ಇಲ್ಲದವನೂ ಸಹಾ ನಾನು ಹೋದರೇನು ನನ್ನ ಹೆಂಡತಿ ಮಕ್ಕಳು ನನ್ನಂತೆಯೇ ದಿನಾ ದುಡಿದು ತಿನ್ನುತ್ತಾರೆ ಎಂಬ ಭಾವದಲ್ಲಿ ಸಾಯುತ್ತಾನೆ.                 ಇಲ್ಲಿ ನಾವು ಯಾರೂ ನಮಗಾಗಿ ಬದುಕುವುದಿಲ್ಲ..ಆದರೆ ನಾವೇ ಅಂಟಿಸಿಕೊಂಡ ಬಂಧಗಳಿಗಾಗಿ ಬದುಕುತ್ತೇವೆ.ಹಣ ,ಕೀರ್ತಿ..ಹೀಗೇ ಹತ್ತಾರು  ಕಾರಣಗಳಿಂದ ಕುಟುಂಬದ ಜವಾಬ್ದಾರಿ ತೊರೆದ ಬಹಳಷ್ಟು  ಬದುಕು ಒಂದು ಹಂತದಲ್ಲಿ ಪ್ರಸಿದ್ಧಿಗೆ ಬಂದರೂ ನಂತರ  ಮೂರಾಬಟ್ಟೆಯಾಗಿರುವ ಉದಾಹರಣೆಗಳೂ ನಮ್ಮ ಕಣ್ಣ ಮುಂದಿವೆ.              ಗಂಡಿರಲಿ ಹೆಣ್ಣಿರಲಿ..ಕುಟುಂಬ ವ್ಯವಸ್ಥೆ ಗೆ ಒಳಪಟ್ಟ ಮೇಲೆ ಪರಸ್ಪರರ ಗೌರವಿಸುತ್ತಾ ಮನೆ ಕುಟುಂಬ ಎನ್ನುವುದು ಇಬ್ಬರ ಪಾಲಿಗೂ ಹೊರೆಯಾಗದಂತೆ ನಡೆದುಕೊಳ್ಳುವುದು ತೀರಾ ಅನಿವಾರ್ಯ. ಹೀಗೆ ರಾಜಿಯಾಗಲು ಸಾಧ್ಯವಿಲ್ಲದವರು ಸಂಸಾರ ಕಟ್ಡಿಕೊಳ್ಳುವ ಮುನ್ನ ನೂರು ಬಾರಿ ಯೋಚಿಸಬೇಕಿದೆ.ನಮ್ಮ ಬದುಕನ್ನು ನಾವು ಹಾಳುಗೆಡವಬಹುದು ಆದರೆ ನಮ್ಮನ್ನು ನಂಬಿದವರ ಬದುಕನ್ನು ಹಾಳುಗೆಡವಲು ನಮಗಾವ ಅಧಿಕಾರವೂ ಇರುವುದಿಲ್ಲ..           ನಾವು ಬದುಕುವುದು ಕೇವಲ ನಮಗಾಗಿ ಅಲ್ಲ..ನಮ್ಮವರಿಗಾಗಿಯೂ ಹೌದು..ಅದಕ್ಕಾಗಿ ಒಂದಷ್ಟು ನಮ್ಮ ಆಸೆಗಳನ್ನ  ಹತ್ತಿಕ್ಕಿಕೊಳ್ಳಲೇಬೇಕಾಗುತ್ತದೆ.    ಒಂದು ಹಕ್ಕಿಯೂ ಸಹಾ ತನ್ನ ಮರಿಗಳಿಗೆ ರೆಕ್ಜೆ ಮೂಡಿ ಅವು ಪುರ್ರನೆ ಬಾನಿನಲ್ಲಿ ಹಾರುವ ಸಾಮರ್ಥ್ಯ ಪಡೆವವರೆಗೂ ಕಾಳಜಿಯಿಂದ ಅವುಗಳನ್ನ ಪಾಲಿಸುತ್ತದೆ.              ಹಿಂಡಿನಲ್ಲಿ ವಾಸಿಸುವ ಪ್ರಾಣಿಗಳೂ ತಮ್ಮ ಹಿಂಡಿನಲ್ಲಿ ಯಾವುದಾದರೊಂದು ಪ್ರಾಣಿಸಂಕಷ್ಟಕ್ಕೆ ಸಿಲುಕಿದಾಗ  ಜೀವದ ಹಂಗು ತೊರೆದು ಅದನ್ನು ಕಾಪಾಡಿದ ಉದಾಹರಣೆಗಳೂ ಇವೆ.        ಹೀಗಿರುವಾಗ ನಾವು ಮನುಷ್ಯರು! ಹೇಳಿ ಕೇಳಿ ಸಮಾಜ ಜೀವಿಗಳು..ಕುಟುಂಬ ವ್ಯವಸ್ಥೆಯನ್ನ ಒಪ್ಪಿಕೊಂಡವರು ನನಗಾಗಿ ನಾನು ಬದುಕುತ್ತೇನೆಂದು ಎಲ್ಲ ತೊರೆದು ಅಷ್ಟು ಸುಲಭವಾಗಿ ನಮ್ಮಿಷ್ಟದ ಹಾದಿಯಲ್ಲಿ ಹೋಗಿಬಿಡಲಾಗುತ್ತದೆಯೆ?         ಮಕ್ಕಳು ತಮ್ಮ ಅಪ್ಪ- ಅಮ್ಮದಿರು ಇಲ್ಲವಾದಾಗಲೂ ಅವರ ಬಗ್ಗೆ ಕೃತಜ್ಞತೆಯಿಂದ ಪ್ರೀತಿಯಿಂದ ನೆನೆವಂತೆ ನಮ್ಮ ಬಾಳಿರಬೇಕು.ಇಂದಿನ ಫಾಸ್ಟ್ ಜನರೇಷನ್ ರವರು ಇದನ್ನ ಒಪ್ಪುವರೋ ಇಲ್ಲವೊ ತಿಳಿಯದು. ಎಷ್ಟೆಲ್ಲ ಜವಾಬ್ದಾರಿಯುತವಾಗಿ ಮಕ್ಕಳನ್ನು ಬೆಳೆಸಿದರೂ  ಮುಂದೆ ಆ ಮಕ್ಕಳು  ತಮ್ಮ ತಂದೆ ತಾಯಿಯರನ್ಮು ಹೀನಾಯವಾಗಿ ಕಾಣುವ ,ಅನಾಥಾಶ್ರಮಕ್ಕೆ ತಳ್ಳುವುದೂ ನಡೆಯುತ್ತಲೇ ಇದೆ. ಹಾಗೆಂದು ಎಲ್ಲೋ ಕೆಲವರು ಹೀಗೆ ಮಾಡುತ್ತಾರೆಂದು ಎಲ್ಲಾ  ಅಪ್ಪ – ಅಮ್ಮದಿರು ತಮ್ಮ ಮಕ್ಕಳನ್ನ ಓದಿಸದೆ ಒಳ್ಳೆಯ ಸಂಸ್ಕಾರ ಕೊಡದೆ ಬೆಳೆಸಲು ಇಚ್ಛಿಸುವುದೆಲ್ಲಿಯಾದರೂ ಇದೆಯೆ?                 ನಮ್ಮ ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಶುದ್ಧ ನೀರು ,ಶುದ್ಧ ಭೂಮಿಯನ್ನು ಉಳಿಸೋಣವೆಂದು ಆಶಿಸುವ ನಾವುಗಳು ಅಂತೆಯೇ ಈ ಶುದ್ಧ ಜಗತ್ತಿನಲ್ಲಿ ಎಲ್ಲಾ ರೀತಿಯಿಂದಲೂ ಬದುಕಲು ಅರ್ಹರಾದ ಪೀಳಿಗೆಯನ್ನು ಬೆಳೆಸುವುದೂ ಅಷ್ಟೇ ಮುಖ್ಯ.         ತಾನು ಬಾಡಿ  ಮಣ್ಣ ಸೇರಿ ಹೋಗುತ್ತೇನೆಂದು ಮಲ್ಲಿಗೆ ಪರಿಮಳ ಸೂಸುವುದ ನಿಲ್ಲಿಸುವುದಿಲ್ಲ. ತಾನು  ಹೇಗಿದಗದರೂ ಆರಿ ಕತ್ತಲಾವರಿಸಿಬಿಡುತ್ತದೆಂದು ಒಂದು ಹಣತೆ ಎಣ್ಣೆ ಬತ್ತಿ ಎಲ್ಲಾ ಇದ್ದರೂ ಬೆಳಕು ಕೊಡದೆ  ಸುಮ್ಮನಿರುವುದಿಲ್ಲ.       ಬದುಕೂ ಅಷ್ಟೇ ..ಮಲ್ಲಿಗೆಯಂತಾಗಲಿ, ಉರಿವ ಹಣತೆಯಂತಾಗಲಿ.ಇರುವಷ್ಟು ದಿನ ಸುತ್ತಮುತ್ತ ಪರಿಮಳವನ್ನೂ ,ಬೆಳಕನ್ನೂ ಚೆಲ್ಲುವಂತಾಗಲಿ. ******************************* ಶುಭಾ ಎ.ಆರ್  (ದೇವಯಾನಿ)          ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ                   

Read Post »

ಅಂಕಣ ಸಂಗಾತಿ, ದೀಪದ ನುಡಿ

ಅಂಕಣ ಬರಹ ಮೌನದ ಮಾತು… ಇದನ್ನ ಈ ಮುಂಚೆ ಯಾರಾದರೂ ಹೇಳಿರಬಹುದು ..ನನಗೆ ಗೊತ್ತಿಲ್ಲ… ಈ ಕ್ಷಣ ಹೊಳೆದ ಮಾತುಗಳಿವು.     ಬಹಳಷ್ಟು ಸಂದರ್ಭಗಳಲ್ಲಿ ಬಹಳಷ್ಟು ಜನರ ಮೌನವನ್ನು ದೌರ್ಬಲ್ಯ ಎಂದೇ ಪರಿಗಣಿಸಿ ಇನ್ನಷ್ಟು ತುಳಿಯಲು ಸಮಾಜದಲ್ಲಿ , ವ್ಯವಸ್ಥೆಯಲ್ಲಿ ಪ್ರಯತ್ನಗಳು ನಡೆದಿವೆ , ನಡೆಯುತ್ತಲೇ ಇವೆ ..     ಮೌನ ಕಾಯುತ್ತಿರುತ್ತದೆ ..ಒಳಗೊಳಗೇ ಮಾಗುತ್ತಿರುತ್ತದೆ ..ಒಡಕು ಪಾತ್ರಗಳೆಲ್ಲ ಸದ್ದು ಮಾಡಿ ಮಾಡಿ ಸೋತು ಸುಮ್ಮನಾದ ನಂತರ ಮೌನ ಮಾತಾಗುತ್ತದೆ..           ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಬರೇ ಓದಿದರೆ ಸಾಕೆ? ಕೆಲವರು ನುಡಿವುದೇ ವಿಷ ಕಾರಲು ..ನುಡಿದರೆ ವಿಷ ಕಾರಿ ನಂಜಾಗುವಂತಿರಬೇಕು  ಎನ್ನುವುದೇ ಅವರುಗಳ ಜೀವನದ ತತ್ವವಾಗಿರುತ್ತದೇನೋ…         ಎಷ್ಟೇ ವಿಷದ ನಾಲಿಗೆಗಳು ವಿಷವ ಕಕ್ಕಿದರೂ  ಆ ಶಿವನೂ ಅದನ್ನು ಕಂಠದಲ್ಲಿ ಧರಿಸಿ ನೀಲಕಂಠನಾಗಲಿಲ್ಲವೆ ?         ಮಗುವನ್ನು ಮುಂಗುಸಿ ಕೊಂದಿತೆಂದು ತಾಯಿಯೊಬ್ಬಳು ಅಜ್ಞಾನದಲ್ಲಿ ತಾನು ಸಾಲಿದ ನಿಷ್ಠಾವಂತ ಮುಂಗುಸಿಯನ್ನೇ ಹೊಡೆದು ಸಾಯಿಸಿ ಆ ನಂತರ ಆ ಮುಂಗುಸಿ ಹಾವಿನಿಂದ ಮಗುವನ್ನು ರಕ್ಷಿಸಿತೆನ್ನುವ ಸತ್ಯ ತಿಳಿದು ಪಶ್ಚತ್ತಾಪಪಟ್ಟ ಹಾಡು “ ನೋಡಿದ್ದು ಸುಳ್ಳಾಗಬಹುದು ಕೇಳಿದ್ದು ಸುಳ್ಳಾಗಬಹುದು ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು ” ನೆನಪಾಗುತ್ತಿದೆ.           ಕೇವಲ ಹಣ ಸಂಪಾದನೆ , ಗುಲಾಮಗಿರಿತನ , ಸದಾ ಇನ್ನೊಬ್ಬರ ಮರ್ಜಿ ಕಾಯುವ , ಅಧಿಕಾರಿಗಳ  ಬಾಯಿಯಲ್ಲಿ ತಮ್ಮ ಹೆಸರು ಬರುವುದೇ  ತಮ್ಮಪೂರ್ವ ಜನ್ಮದ ಸುಕೃತ ಎಂದು ಭಾವಿಸುವವರು ಅದಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲರು. ಆದರೆ ಅಧಿಕಾರಿಗಳಿಗೆ ಕೇವಲ ಓಲೈಕೆ ಮಾತ್ರಾ ಬೇಕಾಗಿರುತ್ತದೆ ..ಸಮಯ ಬಂದಾಗ ಯಾವಾಗ ಯಾವ ರೀತಿ ತಿರುಗುತ್ತರೋ ಎನ್ನುವ ಸತ್ಯದ ಅರಿವೂ ಇಂತವರಿಗೆ ಇರುವುದಿಲ್ಲ.               ಖಾಲಿ ತಲೆ ಭೂತದ ಆವಾಸ ಸ್ಥಾನ ಎನ್ನುತ್ತಾರೆ ..ಹಾಗೆ ಮಾಡಲು ಕೆಲಸವಿಲ್ಲದವರಿಗೆ ಸದಾ ಇನ್ನೊಬ್ಬರ ನಡೆ ನುಡಿಗಳನ್ನೇ ಗಮನಿಸುತ್ತಿರುವುದು , ಅದನ್ನು ತಮ್ಮಿಷ್ಟಕ್ಕೆ ತಮ್ಮ ಮಟ್ಟಕ್ಕೆ ತಕ್ಕಂತೆ ಅರ್ಥೈಸಿಕೊಂಡು ಅಧಿಕಾರಿಗಳ ಕಿವಿ ಚುಚ್ಚುವುದು ..ಇದೇ ಬದುಕಾಗಿಬಿಟ್ಟಿರುತ್ತದೆ. ಇದು ಕೇವಲ ವೃತ್ತಿಯಲ್ಲಿ ಅಲ್ಲ ಮನೆಗಳಲ್ಲಿಯೂ ಕಾಣುವ ಪ್ರವೃತ್ತಿ!!     ಒಂದು ಮನೆಯಲ್ಲಿ ಹತ್ತು ಜನರಿದ್ದರೆ ಅವರಲ್ಲೇ ಹದಿನೈದು ಗುಂಪುಗಳಿರುತ್ತವೆ. ಸದಾ ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟುತ್ತಾ ಅದರ ಪರಿಣಾಮಗಳನ್ನ ನೋಡಿ ಒಳಗೊಳಗೇ ಖುಷಿ ಪಡುವ ವಿಕೃತ ಮನಸುಗಳಿಗೆ ಆದಾವ ಬೇಲಿಯಿದೆ? ತೂಕವಿಲ್ಲದಾಮಾತುಗಳುಸಾಗರದೆ ತೇಲುವಕಸಕಡ್ಡಿಕೊಳಕಿನಂತೆ ನೋಡಯ್ಯ ತೂಕದಾಮಾತುಗಳುಸಾಗರದಾಳಕಿಳಿದರಷ್ಟೆ ದೊರೆವಮುತ್ತುರತ್ನಹವಳದಂತೆ ಕಾಣಯ್ಯ             ಹಗುರ ಮಾತಿಗೂ ತೂಕದ ಮಾತಿಗೂ ವ್ಯತ್ಯಾಸ ಅರಿಯದವರು ಲೋಕದಲ್ಲಿ ಇರುವವರೆಗೂ  “ಆಚಾರವಿಲ್ಲದ ನಾಲಿಗೆ …ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ …”  ಎಂಬ ದಾಸವಾಣಿ ಮೊಳಗುತ್ತಲೇ ಇರುತ್ತದೆ..ಮತ್ತು ಇದಕ್ಕೆ ಕೊನೆಯೇ ಇಲ್ಲ…            ನಾಲಿಗೆ ಹೊರಳುವ ಮುನ್ನ ಅದಕ್ಕೊಂದಷ್ಟು ಕಡಿವಾಣ ಹಾಕಬೇಕಾದುದು ಮನಸು..ಆದರೆ ಆ ಮನಸು ಯಾವುದೇ ಸಂಸ್ಕಾರಗಳಿಗೆ ಈಡಾಗದೇ ಕಾಡು ಕಾಡಾಗೇ ಬೆಳೆದಿದ್ದರೆ ಅದೂ ನಾಲಿಗೆಯನ್ನು ಮಾತಾಡು ಮಾತಾಡು ಎಂದು ಮುಂದಕ್ಕೆ ಛೂ ಬಿಡುತ್ತಲೇ ಇರುತ್ತದೆ..      ಎದುರಿಗಿರುವ ನಾಲಿಗೆ ಏನಾದರೂ ಹೇಳಲಿ ಅದನ್ನು ಕೇಳುವ ಕಿವಿಯನ್ನೂ ಆ ಕಿವಿ ಹೊತ್ತವರ ಮನಸ್ಸು ತಿವಿದು ಎಚ್ಚರಿಸದಿದ್ದರೆ ಆ ಕಿವಿಗಳು ಹಿತ್ತಾಳೆ ಕಿವಿಗಳಾಗಲು ಬಹಳ ಹೊತ್ತೇನೂ ಬೇಕಾಗಿಲ್ಲ..       ಚಿಕ್ಕಂದಿನಲ್ಲಿ  ಟೇಪ್ ರೆಕಾರ್ಡರ್ ನಲ್ಲಿ     ಕೇಳಿದ  ಶನಿಪ್ರಭಾವ  ಚಿತ್ರಕಥೆ ಕಥೆ ನೆನಪಾಗುತ್ತಿದೆ. ಶನಿಯ ವಕ್ರ ದೃಷ್ಟಿಯ ಪ್ರಭಾವದಿಂದ ಗೋಡೆಯ ಹಂಸೆಗೆ ಜೀವ ಬಂದು ಅಲ್ಲಿದ್ದ ಮುತ್ತಿನ ಹಾರವನ್ನು ಗುಳುಕ್ಕನೇ ನುಂಗಿ ಮತ್ತೆ ನಿರ್ಜೀವ ಹಂಸೆಯಾಗುವುದೂ , ಆ ಮುತ್ತಿನ ಹಾರದ ಕಳ್ಳತನದ ಆಪಾದನೆ ನಿರ್ದೋಷಿಯ ಮೇಲೆ ( ಕಥೆ ಅರೆಬರೆ ಮಾತ್ರಾ ನೆನಪಿದೆ ಬಹುಶಃ ರಾಜಾ ವಿಕ್ರಮಾದಿತ್ಯನಾ ಅಂತ ಅನುಮಾನ ) ಬರುವುದೂ ..ಅದರಿಂದ ಆತ ನಾನಾ  ವಿಧದ ಸಂಕಷ್ಟಗಳಿಗೆ ಈಡಾದರೂ ಸೋಲದೆ ಎಲ್ಲವನ್ನೂ ಎದುರಿಸಿ ಕೊನೆಗೆ ಶನಿಯ ಪ್ರಭಾವ ಇಳಿದ ಮೇಲೆ ಸತ್ಯ ಎಲ್ಲರಿಗೂ ತಿಳಿದ್ದೂ ಆರೋಪ ಹೊರಿಸಿದವರೂ ಅದನ್ನು ನಂಬಿದವರೂ ಪಶ್ಚತ್ತಾಪ ಪಟ್ಟಿದ್ದೂ …       ಎಲ್ಲ ಸನ್ನವೇಶಗಳಲ್ಲಿಯೂ ಪಶ್ಚತ್ತಾಪಕ್ಕೆ ಎಡೆ ಇರುವುದಿಲ್ಲ. ಆರೋಪ ಹೊತ್ತವನು  ಹೇಗೆ ಆರೋಪಿಸಿದವನ ನಂಬಿಕೆ ಕಳೆದುಕೊಂಡಿರುತ್ತಾನೋ ಹಾಗೆಯೇ ಆರೋಪಿಸಿದವನೂ ಸಹಾ ಆರೋಪ ಹೊತ್ತವನ ನಂಬಿಕೆಯನ್ನೂ ಕಳೆದುಕೊಂಡಿರುತ್ತಾನೆ. ನಂಬಿಕೆ ಹೇಗೆ ಪರಸ್ಪರೋ ಅಪನಂಬಿಕೆಯೂ ಸಹಾ ಪರಸ್ಪರ…ಇದು ಅರಿವಾಗುವ ಹೊತ್ತಿಗೆ ಕಾಲ ಮಿಂಚಿರುತ್ತದೆ…              ಬದುಕಲ್ಲೇ ಆಗಲಿ ವೃತ್ತಿಯಲ್ಲೇ ಆಗಲಿ ಒಬ್ಬರು ಇನ್ನೊಬ್ಬರ ವಿರುದ್ಧ ಕಿವಿ ಚುಚ್ಚುವ ಮುನ್ನ ಎಚ್ಚರಿಕೆಯಿರಲಿ..ಅದರಿಂದಾಗಬಹುದಾದ ಗಂಭೀರ ಪರಿಣಾಮಗಳ ಬಗ್ಗೆ ಅರಿವಿರಲಿ. ಹಾಗೇ ಕೇಳುವ ಕಿವಿಗಳೂ  ನಂಬುವ ಮನಸುಗಳೂ ಎಚ್ಚರಿಕೆಯಿಂದಿರಲಿ…ಒಡೆದ ಕನ್ನಡಿಯ ಚೂರುಗಳನ್ನು ಹೇಗೆ ಮತ್ತೆ ಜೋಡಿಸಲಾಗದೋ ಒಡೆದ ನಂಬಿಕೆಗಳನೂ ಮತ್ತೆ ಜೋಡಿಸಲಾಗದು .. ಸರ್ವಜ್ಞನ ನುಡಿಯಂತೆ                 ಮಾತಿನಿಂ ನಗೆ  ನುಡಿಯು               ಮಾತಿನಸರ್ವ ಸಂಪದವು              ಮಾತೇ ಮಾಣಿಕ್ಯ ಆಗಬೇಕೆ ವಿನಃ                 ಮಾತಿನಿಂ ಹಗೆ ಕೊಲೆಯು(ಸರ್ವಜ್ಞ) ಆಗಬಾರದು. ಹಾಗಾಗುವುದೇ  ನಿಜವಾದರೆ ಅಂತಹಾ ಮಾತೇ ಬೇಡ…ಅಂತಹಾ ಮಾತಿಗಿಂತ ಮೌನವೇ ಲೇಸು… ಬಹಳಷ್ಟು ಒಡಕು ಮಾತುಗಳಿಗೆ ಮೌನ ಉತ್ತರಿಸುತ್ತದೆ. ಅದನ್ನು ಆಲಿಸುವ ಸಾಮರ್ಥ್ಯ ಇರಬೇಕಷ್ಟೆ…            ಸಂತ ಶರೀಫರು ಹೇಳುವಂತೆ  ಪರಸತಿ ಪರಧನ ಪರ ನಿಂದನೆಗೆ ಈ ಮನಸ್ಸಿಗೆ ಎಡೆ ಮಾಡಿಕೊಡದೆ ಜಾಗರೂಕರಾಗಿರಬೇಕು.ವಾಕ್ ಸ್ವಾತಂತ್ರ್ಯ ಇದೆ, ಹೊರಳುವ ನಾಲಿಗೆಯೂ ಇದೆ ಎಂದು ಮನಸ್ಸಿಗೆ ತೋಚಿದ್ದನ್ನೆಲ್ಲಾ ಆಡುವುದು ಅಪೇಕ್ಷಣೀಯವಲ್ಲ.ಕೆಲವರಿಗೆ ಸದಾ ಹೇಳಿದಗದನ್ನೇ ಹೇಳುವ ಚಟ! ಎದುರಿಗಿರುವವರ ಮನಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳುವ ಗೋಜಿಗೆ ಹೋಗದೆ ಕಪ್ಪೆಯಂತೆ ವಟವಟಿಸುತ್ತಲೇ ಇರುತ್ತಾರೆ.ಇಂತವರ ಮುಂದೆ ಮಾತಾಡದೆ ಮೌನ ವಹಿಸುವುದೇ ಸರಿಯಾದುದು.ಇಂತಹಾ  ಸಂದರ್ಭಗಳಲ್ಲಿ ಮಾತು ಸೋತು‌ಮೌನ ಗೆಲ್ಲುತ್ತದೆ..   ಪರನಿಂದನೆಗೆ ಸದಾ ಹಾತೊರೆವ ಮನಸುಗಳೂ , ನಾಲಿಗೆಗಳೂ , ಕಿವಿಗಳೂ  ಇದನ್ನ ಅರಿತು ಜಾಗೃತರಾದರೆ ವ್ಯವಸ್ಥೆಯಲ್ಲಿನ ಬಹಳಷ್ಟು ಸಮಸ್ಯೆಗಳನ್ನು ದೂರ ಮಾಡಬಹುದು. ಎಲ್ಲ ಮನಗಳೂ ನೆಮ್ಮದಿಯಿಂದ ಬದುಕಬಹುದು..            ಮೌನ ಮೌ ನ ಎಂದು ಹೇಳಿ ಇಷ್ಟೆಲ್ಲಾ ಮಾತಾಡುವುದಾ ಎಂದು ಮತ್ತೆ ಆರೋಪಿಸದಿರಿ…ಇದು ಒಡಕು ಮಾತಲ್ಲ ..ಮನದ ಮಾತು..ಮೌನದ ಮಾತು…      ಮೌನ ಖಂಡಿತಾ ದೌರ್ಬಲ್ಯದ ಸಂಕೇತವಲ್ಲ… ************************************                   ಶುಭಾ ಎ.ಆರ್  (ದೇವಯಾನಿ) ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ.

Read Post »

ಅಂಕಣ ಸಂಗಾತಿ, ದೀಪದ ನುಡಿ

ದೇವಯಾನಿ ಅವರ ಹೊಸ ಅಂಕಣ-ದೀಪದ ನುಡಿ-ಯ ಮೊದಲ ಕಂತು……
ಕಾಲಕ್ಕಾವ ಹಂಗಿದೆ? ಅದು ನಿರ್ಲಿಪ್ತ..ಯಾರ ಹಂಗಿಗೂ ಒಳಗಾಗದೆ ತನ್ನಷ್ಟಕ್ಕೆ ತಾನು ಓಡುತ್ತಲೇ ಇರುತ್ತದೆ. ಆಗಾಗ ತನ್ನ ಜೋಳಿಗೆಯಿಂದ ಇತಿಹಾಸದ ಪುಟಗಳಲ್ಲಿನ ಚಿತ್ರಗಳನ್ನ ತೋರಿಸುತ್ತಲೇ ಎಲ್ಲರನ್ನೂ ಎಚ್ಚರಿಸುತ್ತಾ ಮುಂದೆ ಸಾಗುತ್ತದೆ

Read Post »

You cannot copy content of this page

Scroll to Top