ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಸೂಚನೆ

ಪ್ರಿಯರೆ, ನಮಸ್ಕಾರಗಳು.ಹೊಸ ವರ್ಷದಿಂದ (2020)ಸಂಗಾತಿ ಪತ್ರಿಕೆಯನ್ನು  ಪ್ರತಿ ಬುದವಾರ ಪ್ರಕಟಿಸಲಾಗುವುದು. ಆರಂಭದ ದಿನಗಳ ಅನಿಶ್ಚಿತತೆ ಈಗ ಮುಗಿದಿದ್ದು, ವಿಶೇಷ ಮತ್ತು ಅನಿವಾರ್ಯ ಸಂದರ್ಭ ಹೊರತು ಪಡಿಸಿದಂತೆ, ವಾರಕ್ಕೊಮ್ಮೆ ಪ್ರಕಟಿಸುವ ನಿರ್ದಾರ ಕೈಗೊಳ್ಳಲಾಗಿದೆ. ಪ್ರತಿ ಗುರುವಾರದಿಂದ ಮುಂಗಳವಾರದವರೆಗು ನಮಗೆ ತಲುಪಿದ ಬರಹಗಳನ್ನು ಬುದವಾರ  ಮುಂಜಾನೆ ಪ್ರಕಟಿಸಲಾಗುವುದು-ಅಂಕಣಗಳಿಗು ಇದು ಅನ್ವಯಿಸಲಿದೆ. ಎಂದಿನಂತೆ ಬರಹಗಾರರು ಮತ್ತು ಓದುಗರು ಸಹಕರಿಸಬೇಕಾಗಿ ಕೋರುತ್ತೇವೆ,ಸಂಪಾದಕರು. ಸಂಗಾತಿ ಪತ್ರಿಕೆ

ಸೂಚನೆ Read Post »

ನಿಮ್ಮೊಂದಿಗೆ

ನಿಮ್ಮೊಂದಿಗೆ

ಸಂಗಾತಿ (ಸಾಹಿತ್ಯದ ಅಂತರ್ಜಾಲ ಬ್ಲಾಗ್) ಶುರು ಮಾಡಿ ಎರಡು ತಿಂಗಳು-ಇವತ್ತಿಗೆ ಅರವತ್ತಾರು ದಿನಗಳಾದವು. ಅಂದಾಜು 40ರಿಂದ 50 ಲೇಖಕರ ಸುಮಾರು238 ಬರಹಗಳನ್ನು ಪ್ರಕಟಿಸಲಾಗಿದೆ. 16 ಸಾವಿರ ಜನ ಈ ದಿನದವರೆಗು ಪತ್ರಿಕೆಯ ಸೈಟಿಗೆ ಬೇಟಿ ನೀಡಿದ್ದಾರೆ. ಪತ್ರಿಕೆಯ ಉದ್ದೇಶ ಈಡೇರುತ್ತಿದೆಯಾ ಇನ್ನೂ ನನಗೆ ಅರ್ಥವಾಗಿಲ್ಲ.ಪತ್ರಿಕೆಯ ಗುಣಮಟ್ಟದ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕಿದೆ, ಕೆಲವು ಹಿರಿಯ ಬರಹಗಾರರ ಜೊತೆ ಹಲವು ಹೊಸಬರಹಗಾರರೂ ಬರೆಯುತ್ತಿರುವುದರಿಂದ ಪ್ರಕಟವಾದದ್ದೆಲ್ಲ ಶ್ರೇಷ್ಠವೆಂದೊ ಇಲ್ಲ ಕಳಪೆಯೆಂದು ಜನರಲೈಸ್ ಮಾಡಿ ಬಿಡಲಾಗುವುದಿಲ್ಲ. ಇನ್ನು ಈಗಾಗಲೇಬರೆದು ಹೆಸರು ಮಾಡಿರುವ ಬರಹಗಾರರಿಗೆಹೊಸ ಪತ್ರಿಕೆಯೊಂದಕ್ಕೆ ಬರೆಯುವ ಮನಸಿದ್ದಂತಿಲ್ಲ, ಅವರದೇನಿದ್ದರೂ ಈಗಾಗಲೇ ಎಸ್ಟಾಬ್ಲಿಶ್ ಆಗಿರುವ ಜನಪ್ರಿಯ ಪತ್ರಿಕೆಗಳಿಗೆ ಮಾತ್ರ ಬರೆಯುವ ಉದ್ದೇಶವಿದ್ದಂತಿದೆ. ಹಿರಿಯ ಬರಹಗಾರರ ಶ್ರೇಷ್ಠತೆಯ ವ್ಯಸನಕ್ಕೆಮದ್ದಿಲ್ಲ. ಆದರೆ ತಾವು ಬರೆಯದೇ ದೂರ ಉಳಿದು,ಸಂಗಾತಿಯ ಗುಣಮಟ್ಟದ ಬಗ್ಗೆ ಟೀಕಿಸುವುದನ್ನು ನಾನು ಒಪ್ಪುವುದಿಲ್ಲ.ಸೋ ನಿಮ್ಮ ಗುಣಮಟ್ಟವಿಲ್ಲ ಎನ್ನುವ ಟೀಕೆಗಳಿಗೆ ಉತ್ತರ ಕೊಡುತ್ತ ಕೂರಲು ನಾನು ಸಿದ್ದನಿಲ್ಲ…. ಕೋಳಿ ಕೂಗದೆಯೂ ಬೆಳಗಾಗುವುದು ಎನ್ನುವುದನ್ನು ಯಾರೂ ಮರೆಯಬಾರದು… ಇದುವರೆಗು ಸಂಗಾತಿಗೆ ಬರೆದವರಿಗು ಓದಿದವರಿಗು ನಾನು ಋಣಿ ಬರಲಿರುವ ಹೊಸ ವರ್ಷದಲ್ಲಿ ಮತ್ತಷ್ಟು ಬದಲಾವಣೆಗಳೊಂದಿಗೆ ಸಂಗಾತಿ ಹೊರಬರಲಿದೆ

ನಿಮ್ಮೊಂದಿಗೆ Read Post »

ನಿಮ್ಮೊಂದಿಗೆ

ಜನರನ್ನು ತಲುಪುವ ಮಾರ್ಗ

ಕು.ಸ.ಮಧುಸೂದನ ರಂಗೇನಹಳ್ಳಿ ಸಾಹಿತ್ಯಕ ಪತ್ರಿಕೆಗಳ್ಯಾಕೆ ಜನರನ್ನುತಲುಪುತ್ತಿಲ್ಲ ಮತ್ತು  ದೀರ್ಘಕಾಲ ಬದುಕುತ್ತಿಲ್ಲ?ನನಗನಿಸಿದ್ದು- ನನ್ನ ಮುಂದೆ ಕೆಲವು ಸಾಹಿತ್ಯಕ ಪತ್ರಿಕೆಗಳಿವೆ. ಬಹುತೇಕ ಅವೆಲ್ಲವೂ ಪ್ರಗತಿಪರ ಲೇಖಕರೆನಿಸಿಕೊಂಡವರ ಬರಹಗಳಿಂದಲೇ ತುಂಬಿವೆ. ಹೆಚ್ಚೂಕಡಿಮೆ ಅವವೇ  ಲೇಖಕರೇ ಎನ್ನ ಬಹುದು.ಒಂದಿಷ್ಟಾದರು ಸಾಹಿತ್ಯ ಬಲ್ಲವರಿಗೇನೆ ಅರ್ಥವಾಗದಂತಹ    ಕಠಿಣವಾದ ತೀರಾ ಗಂಭೀರವಾದ ವೈಚಾರಿಕ ಬರಹಗಳು ಅವುಗಳಲ್ಲಿವೆ.ಹಾಗೆ ನೋಡುತ್ತಾ ಹೋದರೆ   ಆ ಸಾಹಿತ್ಯ ಪತ್ರಿಕೆಗಳು ಬರಹಗಾರರು ಮತ್ತವರ ಹಿಂಬಾಲಕರುಗಳ ನಡುವೆಯೇ ಪ್ರಸಾರಗೊಳ್ಳುತ್ತಿವೆ ಎನ್ನ ಬಹುದು. ಸಾಹಿತ್ಯಕ ವಲಯದ ಆಚೆ ಇರುವ ಸಾಮಾನ್ಯ ಓದುಗರನ್ನುಅವು ತಲುಪಿಲ್ಲ ಮತ್ತುತಲುಪಲು ಸಾದ್ಯವೂ ಇಲ್ಲ. ಯಾಕೆಂದರೆ ಸಾಮಾನ್ಯ ಓದುಗನೊಬ್ಬನಿಗೆ ನೇರವಾಗಿ ತಲುಪಬಲ್ಲಂತಹ  ಬರಹಗಳು ಅವುಗಳಲ್ಲಿ ಕಾಣಬರುವುದಿಲ್ಲ. ಹಾಗೆ ಗಂಬೀರವಾಗಿ ಬರೆಯುವುದೇ ತಮ್ಮ ಪ್ರತಿಭೆಯ ಅನಾವರಣ ಎನ್ನುವಂತಹ  ಭಾವನೆ ಬಹಳಷ್ಟು ಲೇಖಕರಿಗೆ ಇರುವಂತೆ ಕಾಣುತ್ತಿದೆ.  ಹೀಗಿರುವಾಗ ಸಾಹಿತ್ಯಕ ಪತ್ರಿಕೆಗಳು ಹೇಗೆ ಬದುಕಲು ಸಾದ್ಯ? ಸಾಹಿತ್ಯಕ ಪತ್ರಿಕೆಗಳನ್ನೂ ಸರಳವಾಗಿ, ಗಂಬೀರ ವಿಷಯವನ್ನೂ ಜನರನ್ನು ತಲುಪುವಭಾಷೆಯಲ್ಲಿ ತರದ ಹೊರತು ಯಾವ ಸಾಹಿತ್ಯ ಪತ್ರಿಕೆಯೂ ಬಹಳ ಕಾಲ ಬದುಕಲುಸಾದ್ಯವಿಲ್ಲ. ಅದರಪರಿಣಾಮವಾಗಿ ಪ್ರಗತಿಪರ ವಿಚಾರಧಾರೆಗಳು,ಕೋಮುವಾದ ಮತ್ತು ಬಂಡವಾಳಶಾಹಿ ಶಕ್ತಿಗಳಕುರೂಪಿ ಮುಖಗಳ ಪರಿಚಯ ಜನಸಾಮಾನ್ಯರಿಗೆಆಗುತ್ತಿಲ್ಲ. ಹೀಗಾಗಿಯೇ  ನಮ್ಮ ಹೋರಾಟಗಳು ಬಹುಜನರನ್ನುತಲುಪುತ್ತಿಲ್ಲಇನ್ನಾದರುನಮ್ಮ ಸಾಹಿತ್ಯ ಪತ್ರಿಕೆಗಳ ಲೇಖಕರು ತಮ್ಮ ನುಡಿಕಟ್ಟನ್ನು ಬಲಾಯಿಸಿಕೊಳ್ಳಬೇಕು.  ಸರಳವಾಗಿ ಜನರನ್ನು ತಲುಪುವಂತೆ ಬರೆಯುವುದೇ ಮಹಾಪರಾಧವೆಂದು ನಂಬಿಕೊಂಡಿರುವ ನಮ್ಮ  ಸಾಹಿತಿಗಳು ಸಹ ತಮ್ಮ ವಿಚಾರಸಂಕೀರ್ಣಗಳ, ವಿಶ್ವ ವಿದ್ಯಾನಿಲಯಗಳ ಗಾಂಭೀರ್ಯಭರಿತ ಶಬ್ದಗಳ ಹಂಗಿನಿಂದ ಹೊರಬಂದು  ಸಾಮಾನ್ಯರನ್ನು ತಲುಪಲು ಪ್ರಯತ್ನಿಸಬೇಕುಇಲ್ಲ ಜನರ  ಬಾಯಲ್ಲಿ ನಮ್ಮ ಹೆಸರು ಬಂದು ಪ್ರಚಾರ ಸಿಕ್ಕರೆ ಸಾಕು ನಮ್ಮ ಬರಹಗಳನ್ನು ಅವರು ಓದದೇ ಹೋದರೂ ನಡೆಯುತ್ತದೆ ಎಂದವರು ಬಾವಿಸಿದ್ದರೆ ನನ್ನದೇನೂ ತಕರಾರೇನಿಲ್ಲ.  ಅದೇ ನೀವು ಬಲಪಂಥೀಯ ವಿಚಾರಧಾರೆಯ ಪತ್ರಿಕೆಗಳನ್ನು  ಮತ್ತು ಪುಸ್ತಕಗಳತ್ತ ಗಮನಹರಿಸಿನೋಡಿ:   ಜನಸಾಮಾನ್ಯರಿಗೆ ಅರ್ಥವಾಗುವ ಬಾಷೆಯಲ್ಲಿ ತಮಗೇಒಗ್ಗುವ ಲೇಖಕರಿಂದ ಬರೆಸಿ ಅತ್ಯಂತಕಡಿಮೆ ಬೆಲೆಯಲ್ಲಿ ಪತ್ರಿಕೆ ಪುಸ್ತಕಗಳನ್ನು ಅವರು ಹೊರ ತರುತ್ತಿದ್ದಾರೆ. ಐದು ಹತ್ತುರೂಪಾಯಿಗಳಕಿರು ಹೊತ್ತಿಗೆಗಳನ್ನು ಮಾಡಿತಮ್ಮ ವಿಚಾರಧಾರೆಯನ್ನು ಜನರಿಗೆ ಸರಳವಾಗಿ ಅರ್ಥವಾಗುವ ಭಾಷೆಯಲ್ಲಿ ತಲುಪಿಸುತ್ತಿದ್ದಾರೆ ಹೀಗಾಗಿಯೇ ಬಲಪಂಥೀಯ ವಿಚಾರದಾರೆಗಳು ಜನಸಾಮಾನ್ಯರನ್ನು ವೇಗವಾಗಿ ತಲುಪಿ ,ಅವರು ಅದನ್ನೇ ಸತ್ಯವೆಂದು ನಂಬಿಕೊಂಡಿದ್ದಾರೆ.  ಇದರ  ನಡುವೆ ನಾವುಪ್ರಗತಿಪರ ವಿಷಯಗಳನ್ನು ಗಂಬೀರವಾಗಿ ಅವರಿಗೆ ಅರ್ಥವಾಗದ ಬಾಷೆಯಲ್ಲಿ ಹೇಳಿದರೆ ಅವರಿಗೆ ಸತ್ಯ ಸುಳ್ಳಿನ ನಡುವೆ  ವ್ಯತ್ಯಾಸಹೇಗೆ ತಿಳಿಯುತ್ತದೆ. ಹಾಗಾಗಿಯೇ ನಮ್ಮ    ವಿಚಾರಗಳೇನಿದ್ದರೂ ಸೆಮಿನಾರುಗಳಲ್ಲಿ ಕಮ್ಮಟಗಳಲ್ಲಿಯೇ ಕೊಳೆತು ಹೋಗುತ್ತಿವೆ. ಇದರಬಗ್ಗೆ ನಮ್ಮ ವಿಚಾರವಂತರು ಯೋಚಿಸಬೇಕಿದೆ ಕು.ಸ.ಮಧುಸೂದನ ರಂಗೇನಹಳ್ಳಿ

ಜನರನ್ನು ತಲುಪುವ ಮಾರ್ಗ Read Post »

ನಿಮ್ಮೊಂದಿಗೆ

ನಿಮ್ಮೊಂದಿಗೆ ಮಕ್ಕಳ ಬಗ್ಗೆ ಎರಡು ಮಾತು

ಇವತ್ತು ನವೆಂಬರ್ ಹದಿನಾಲ್ಕು ಮಕ್ಕಳದಿನಾಚರಣೆ. ಯಾರ ನೆನಪಿನಲ್ಲಿ  ಆಚರಿಸುತ್ತಿದ್ದೇವೆ ಅನ್ನುವುದಕ್ಕಿಂತ, ಹೇಗೆ ಮತ್ತು ಯಾವ ಉದ್ದೇಶಗಳನ್ನು ಇಟ್ಟುಕೊಂಡು ಆಚರಿಸುತ್ತಿದ್ದೇವೆಂಬುದು ಮಾತ್ರ ನಮಗೆ ಮುಖ್ಯವಾಗಬೇಕಿದೆ. ಮಕ್ಕಳ ದಿನದಂದು ಮಕ್ಕಳಿಂದ ನೃತ್ಯ ಮಾಡಿಸಿ, ಆಟ  ಆಡಿಸಿ, ಸಿಹಿ ಹಂಚಿ ಮಕ್ಕಳ ಬಗ್ಗೆ ಉದ್ದನೆಯ ಬಾಷಣಗಳನ್ನು ಬಿಗಿಯುವಷ್ಟಕ್ಕೆ ಈ ಆಚರಣೆಯನ್ನು ಮುಗಿಸಲಾಗುತ್ತಿದೆ. ಆದರೆ  ಮಕ್ಕಳದಿನದಂದು ಮಾತ್ರವಲ್ಲದೆ ಪ್ರತಿನಿತ್ಯವು ನಮಗೆ ಮಕ್ಕಳ ಬಗ್ಗೆ ಕಾಳಜಿ-ಪ್ರೀತಿಯಿರಬೇಕು. ಯಾಕೆಂದರೆ ಯಾವುದೇ ನಾಡಿನ ಭವಿಷ್ಯ ನಿಂತಿರುವುದು ಆ ನಾಡಿನ ಮಕ್ಕಳು ಹೇಗೆ ಪಾಲಿಸಲ್ಪಡುತ್ತಿದ್ದಾರೆ-ಬೆಳೆಸಲ್ಪಡುತ್ತಿದ್ದಾರೆ  ಎನ್ನುವುದರ ಮೇಲೆ. ಹಾಗಾಗಿ ನಾವು ಪ್ರತಿ ಮಗುವಿನ ಹಕ್ಕನ್ನು ಗೌರವಿಸುತ್ತ, ಅದರ ಹಕ್ಕನ್ನು ರಕ್ಷಿಸಬೇಕು, ಇದು ದೊಡ್ಡವರಾದ ನಮ್ಮ ಕರ್ತವ್ಯವೂ ಹೌದು.ಪೌಷ್ಠಿಕ  ಆಹಾರ, ಬದುಕನ್ನುಅರ್ಥ ಮಾಡಿಸುವ  ಮಾನವೀಯ ಶಿಕ್ಷಣ  ಪ್ರತಿ ಮಗುವಿನ ಹಕ್ಕು ಈ ಹಕ್ಕುಗಳನ್ನು ಸಂರಕ್ಷಿಸಬೇಕಾಗಿರುವುದು, ನಾನುಮೊದಲೇ ಹೇಳಿದಂತೆ   ನಮ್ಮೆಲ್ಲರಕರ್ತವ್ಯ! ಆದರೆ ಒಂದು ನಾಗರೀಕ ಸಮಾಜವಾಗಿಮಕ್ಕಳ ಈ ಹಕ್ಕುಗಳನ್ನು ಕಾಪಾಡುತ್ತಿದ್ದೇವೆಯೇ ಎನ್ನುವ ಪ್ರಶ್ನೆ ಕೇಳಿಕೊಂಡರೆ ಸಿಗುವ ಉತ್ತರ ಮಾತ್ರ ನಿರಾಶಾದಾಯಕ. ಇದುವರೆಗು ಈನಾಡಿನಲ್ಲಿನಡೆದ ಯಾವುದೇ ಸಾರ್ವತ್ರಿಕ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳಲ್ಲಿ ಮಕ್ಕಳ ಹಕ್ಕುಗಳಬಗ್ಗೆ ಪ್ರಸ್ತಾಪವೇ ಆಗಿಲ್ಲವೆಂಬುದು ಮಕ್ಕಳನ್ನುನಾವೆಷ್ಟು ನಿರ್ಲಕ್ಷಿಸುತ್ತಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇನ್ನಾದರೂ ನಾವು ನಮ್ಮ ಮಕ್ಕಳ ಹಕ್ಕುಗಳನ್ನುಗೌರವಿಸುತ್ತ, ಭವಿತವ್ಯದಲ್ಲಿ ಅವರ ಹಕ್ಕುಗಳನ್ನುಸಂರಕ್ಷಿಸಲು ಹೆಜ್ಜೆಇಡೋಣ. ಕೊನೆಯದಾಗಿ: ಈ ಭೂಮಿಯಲ್ಲಿ ಹುಟ್ಟುವ ಪ್ರತಿ ಮಗುವಿಗೂ,ಸೂಕ್ತ ಆಹಾರ, ಆಶ್ರಯ, ಆರೋಗ್ಯ, ಶಿಕ್ಷಣ, ಪ್ರೀತಿ,ಮಮತೆ ದೊರಕಲೆಂದುಹಾರೈಸುತ್ತೇನೆ. ನಿಮ್ಮಸಂಗಾತಿ, ಕು.ಸ.ಮಧುಸೂದನ ರಂಗೇನಹಳ್ಳಿ

ನಿಮ್ಮೊಂದಿಗೆ ಮಕ್ಕಳ ಬಗ್ಗೆ ಎರಡು ಮಾತು Read Post »

ನಿಮ್ಮೊಂದಿಗೆ

ಸಂಪಾದಕರ ಮಾತು

ಕು.ಸ.ಮಧುಸೂದನರಂಗೇನಹಳ್ಳಿ           ಮೊದಲಿಗೆ ನಿಮಗೆಲ್ಲ ಬೆಳಕಿನಹಬ್ಬದ ಶುಭಾಶಯಗಳು.  ಅನಗತ್ಯ  ಖರ್ಚು ಮತ್ತು ಅಪಾಯವನ್ನು ಮೈಮೇಲೇಳೆದುಕೊಳ್ಳದೆ, ಸರಳವಾಗಿ,ಅನ್ಯರಿಗೆ ತೊಂದರೆ ಕೊಡದ ರೀತಿಯಲ್ಲಿ ಹಬ್ಬ ಆಚರಿಸಿ. ಹಬ್ಬದಂದು ಹಚ್ಚುವ ದೀಪದ ಬೆಳಕು ಮನದೊಳಗಿನ ಕತ್ತಲೆಯನ್ನೂ ಕಳೆಯುವಂತಿರ ಬೇಕು.ಆಗಲೇ ಹಬ್ಬಕ್ಕೆ ಸಾರ್ಥಕತೆ ಬರುವುದು    ಇನ್ನು ‘ಸಂಗಾತಿ’ಬಗ್ಗೆ ಏನು ಹೇಳಲಿ?ನಗರದ ಸಾಹಿತ್ಯಕ್ಷೇತ್ರದ ಕಣ್ಣು ಕುಕ್ಕುವ ಬೆಳಕಿನಿಂದ ಬಹುದೂರದಲ್ಲಿರುವ ಹಳ್ಳಿಯೊಂದರಿಂದ ಹೊರಬರುತ್ತಿರುವ  ಪತ್ರಿಕೆಗೆ ನೀವು ತೋರಿಸುತ್ತಿರುವ ಪ್ರೀತಿ ದೊಡ್ಡದೇ ಸರಿ. ಪತ್ರಿಕೆಯ ಬಗ್ಗೆ ಹಲವರ ಮೆಚ್ಚುಗೆಯಜೊತೆಗೆ ಕೆಲವು ದೂರುಗಳೂ ಇವೆ. ಅವನ್ನೂ ನಿಮ್ಮ ಬಳಿ ಹಂಚಿಕೊಳ್ಳಲು ಬಯಸುತ್ತೇನೆ:  ಮೊದಲನೆಯದಾಗಿ ಕವಿತೆಗಳು ಹೆಚ್ಚಾದವು ಎಂಬುದು. ನಿಜ, ನನಗು ಹಾಗನಿಸಿತು. ಅದರೆನು ಮಾಡಲಿ?  ಪತ್ರಿಕೆಗೆ ಹೆಚ್ಚುಜನ ಕವಿತೆಗಳನ್ನೇ ಕಳಿಸುತ್ತಿದ್ದಾರೆ.  ಎರಡನೆಯದು, ವೈಚಾರಿಕ ಲೇಖನಗಳು ಇಲ್ಲವೇಇಲ್ಲ ಎನ್ನುವಷ್ಟು ಕಡಿಮೆಯಾಗಿವೆ. ಪ್ರಕಟಿಸಲು ನಮ್ಮದೇನು ತಕರಾರಿಲ್ಲ ಆದರೆ ಬರೆಯುವವರು ಯಾರು? ಪ್ರಖ್ಯಾತನಾಮರು ಈಗಾಗಲೇ ಹೆಸರು ಮಾಡಿರುವ ಪತ್ರಿಕೆಗಳಿಗೆ ಮಾತ್ರ ಬರೆಯಬೇಕೆಂದುಕೊಂಡಂತಿದೆ.. ಆದರೆ ನನ್ನ ಪ್ರಯತ್ನ ಕೈ ಬಿಟ್ಟಲ್ಲ,ಆದಷ್ಟೂ ಹಿರಿಯ ಬರಹಗಾರರನ್ನು ನಾನೇ ವೈಯುಕ್ತಿಕವಾಗಿ ಸಂಪರ್ಕಿಸಿ ಬರೆಯಲು ಕೋರುತ್ತಿದ್ದೇನೆ.  ಇರಲಿ ಪ್ರತಿ ಹೊಸ ಪ್ರಯತ್ನದ ಹಿಂದೆಯೂ ಇಂತಹ ಕೊರತೆಗಳಿರುತ್ತವೆ.ಈ ಕೊರತೆಗಳನ್ನು ಮೀರಿಯೂ’ಸಂಗಾತಿ’ ಸಾಹಿತ್ಯಪಯಣ ಸಾಗುತ್ತಲೆ ಇರುತ್ತದೆ.ಈಪಯಣದಲ್ಲಿ  ನೀವು ನಮ್ಮ ಜೊತೆಗಿರುತ್ತೀರೆಂದು ನಂಬಿಕೊಂಡಿದ್ದೇನೆ

ಸಂಪಾದಕರ ಮಾತು Read Post »

ನಿಮ್ಮೊಂದಿಗೆ

ಸಂಪಾದಕೀಯ

ಗೆಳೆಯರೆ, ಸಂಗಾತಿ ಪತ್ರಿಕೆಯನ್ನು ಕೇವಲ ರಂಜನೆಗಾಗಿ ರೂಪಿಸಿಲ್ಲ-ಜೊತೆಗೆ ಕೇವಲ ಕತೆ-ಕತೆಗಳಿಗೆ ಮಾತ್ರ ಮೀಸಲಿರಿಸಿಯೂ ಇಲ್ಲ.ಪತ್ರಿಕೆಯಲ್ಲಿ ಪ್ರಖರವಾದ ವೈಚಾರಿಕ ಲೇಖನಗಳನ್ನು,ಸಮಕಾಲೀನ ಸಮಸ್ಯೆಗಳ ಬಗ್ಗೆ ವಸ್ತುನಿಷ್ಠ ವಿಮರ್ಶಾತ್ಮಕ, ಬರಹಗಳನ್ನು ಪ್ರಕಟಿಸಬೇಕೆಂಬುದು ನಮ್ಮಬಯಕೆ. ಈ ವಿಷಯಗಳಬಗ್ಗೆ ಬರೆಯುವವರು ಸಾಕಷ್ಟು ಜನ ಲೇಖಕರಿದ್ದರೂ ಅವರಿನ್ನೂ ನಮ್ಮ ಪತ್ರಿಕೆಗೆ ಬರೆಯುವ ಮನಸ್ಸು ಮಾಡಿಲ್ಲ. ಬಹುಶ: ಪತ್ರಿಕೆಯ ನಡೆಯನ್ನು ಕಾದುನೋಡುವ ಉದ್ದೇಶವಿದ್ದರೂ ಇರಬಹುದೇನೊ. ಈ ದಿಸೆಯಲ್ಲಿ ಬಹಳಷ್ಟು ಲೇಖಕರನ್ನು ಈಗಾಗಲೇ ಸಂಪರ್ಕಿಸಿ ಬರೆಯಲು ಕೋರಿದ್ದೇನೆ.ಜನಪ್ರಿಯತೆಗಾಗಿ ಸಂಗಾತಿ ತನ್ನಗುಣಮಟ್ಟ ಮತ್ತು ಸ್ವಂತಿಕೆಯನ್ನುಯಾವತ್ತಿಗೂ ಬಿಟ್ಟು ಕೊಡುವುದಿಲ್ಲೆಂದು ಈ ಮೂಲಕ ತಮಗೆ ಮನವರಿಕೆ ಮಾಡಿಕೊಡುತ್ತಿದ್ದೇನೆ. ಅದಕ್ಕೆ ತಕ್ಕಂತೆ ಹಿರಿಯ ಬರಹಗಾರರುಸಹ ನಮಗೆ ಬರೆಯುತ್ತಾರೆಂದು ಆಶಿಸುತ್ತೇನೆ ಕು.ಸ.ಮಧುಸೂದನರಂಗೇನಹಳ್ಳಿ

ಸಂಪಾದಕೀಯ Read Post »

ನಿಮ್ಮೊಂದಿಗೆ

ಕಾವ್ಯಯಾನ

ದಾರಿಯುದ್ದಕ್ಕೂ…… ಮುಗಿಲಕಾವ್ಯ ನೀ ಬರುವ ದಾರಿ ಉದ್ದಕ್ಕೂ ಒಲವಿನ ಹೂ ಹಾಸಿ ಗರಿಗೆದರಿದ ನನ್ನೊಳಗಿನ ಹೃದಯದ ಭಾವಗಳನ್ನು,,, ಒಪ್ಪವಾಗಿ ಜೋಡಿಸಿಕೊಳ್ಳುತ್ತಾ ಕಣ್ಣು ಕೀಲಿಸುತ್ತೇನೆ,, ಹಾದಿಯೂ ಒಮ್ಮೊಮ್ಮೆ ಸಿಟ್ಟಿಗೇಳುತ್ತದೆ ಅಲ್ಲಲ್ಲ ಕರುಬುತ್ತದೆ ನಿನ್ನ ಮೇಲಿನ ನನ್ನೊಲವಿನ ಕಂಡು ಇದರ ಮತ್ಸರ ಎಷ್ಟಿದೆ ಗೊತ್ತಾ? ಬೇಕೆಂತಲೇ ಭಾರವಾಗಿ ದೂರವಾಗಿ ಕ್ಷಣಗಳನ್ನು ಯುಗಗಳಾಗಿ ಮಾಡುತ್ತಾ,,, ಮತ್ತಷ್ಟು ನನ್ನ ಕಾಯಿಸಲು ಶುರುವಿಟ್ಟುಕೊಳ್ಳುತ್ತದೆ ಮೊದಮೊದಲಿಗೆ ನಾನು ಜಿದ್ದಿಗಿಳಿಯುತ್ತೇನೆ ಸೋಲಲಾರೆ ಎಂದೂ ನಿನ್ನ ಕಾಣುವ ತವಕ ಮೂಡಿದಂತೆಲ್ಲಾ ನಾನೇ ನಾನಾಗಿ ಸೋತುಬಿಡುತ್ತೇನೆ; ನಿನ್ನ ಸಂಧಿಸುವ ಗಳಿಗೆಯ ಮುಂದೆ ,,ನನ್ನ ಜಿದ್ದು ಮಂಡಿಯೂರಿ ಬಿಡುತ್ತದೆ,, ನಿನಗೋಸ್ಕರ ತಾನೇ ಎಂಬ ಭಾವ ಮೂಡಿ ಮನ ಸಮಾಧಾನಿಸಿಕೊಂಡು; ದಾರಿ ಉದ್ದಕ್ಕೂಕಣ್ಣು ಕೀಲಿಸುತ್ತದೆ ನೀನು ಈ ಹಾದಿಯಿಂದ ಎಂದೋ ಕವಲೊಡೆದು ಬಹುದೂರ ಸಾಗಿದ್ದರೂ ಮತ್ತೆ ದಾರಿಯಲಿ ಒಲವಿನ ಹೂ ಹಾಸಿ ಪ್ರೀತಿಸುವುದಷ್ಟೆ ಗೊತ್ತಿರುವ ಈ ಮನಸ್ಸು,,,, ದಾರಿ ಉದ್ದಕೂ ಕಣ್ಣುಕೀಲಿಸುತ್ತದೆ. ===========

ಕಾವ್ಯಯಾನ Read Post »

ನಿಮ್ಮೊಂದಿಗೆ

ಅನುವಾದ

ಮೂರು ಅನುವಾದಿತ ಗಜಲುಗಳು. ಉತ್ತಮ ಯಲಿಗಾರ ಗಜಲ್-ಒಂದು ಹೆಜ್ಜೆ ಶಬ್ದವೊಂದು ಕೇಳಿಸಿದರೆ ಅನಿಸುವದು ನೀನೆಂದು ನೆರಳೊಂದು ಬಳಿ ಸುಳಿದರೆ ಅನಿಸುವದು ನೀನೆಂದು ಹೂದೋಟದಲಿ ರೆಂಬೆಯೊಂದನು ಮುಟ್ಟಲು ನಾಚಿ ನಲಿದಾಡಿದರೆ ಅನಿಸುವದು ನೀನೆಂದು ಚಂದನದಿ ಸುವಾಸಿತ ಮದಭರಿತ ಗಾಳಿಯು ಅನಂದದಿ ಮೈಸೋಕಲು ಅನಿಸುವದು ನೀನೆಂದು ತಾರೆಗಳ ಮಿನುಗುವ ಹೊದಿಕೆ ಹೊದ್ದುಕೊಂಡು ನದಿಯೊಂದು ಹರಿದಾಡಿದರೆ ಅನಿಸುವದು ನೀನೆಂದು ಸರಿರಾತ್ರಿಯಲಿ ಬಂದು ಒಂದು ಹೊನ್ನ ರಶ್ಮಿ ನನ್ನೊಂದಿಗೆ ಉರುಳಾಡಿದರೆ ಅನಿಸುವದು ನೀನೆಂದು. ಮೂಲ: ಜಾನ್ ನಿಸ್ಸಾರ್ ಅಖತರ್ (ಉರ್ದು) ============================== ಗಜಲ್ -2 ದ್ವೇಷವೇ ಇರಲಿ, ಮನ ನೋಯಿಸಲಾದರೂ ಬಾ ಬಾ ಮತ್ತೆ ನನ್ನ ತೊರೆದು ಹೋಗಲಾದರೂ ಬಾ  ಇರಲಿ ಚೂರು ಭರವಸೆ ನನ್ನ ಹೆಮ್ಮೆಯ ಒಲವ ಮೇಲೆ ನನ್ನ ಮನವೊಲಿಸಲು ನೀ ಒಮ್ಮೆಯಾದರೂ ಬಾ ಮೊದಲಿನಂತಿಲ್ಲ ನಿಜ ನನ್ನ ನಿನ್ನ ಬಾಂಧವ್ಯ ಜಗದ ನಿಯಮವನ್ನೇ ಪಾಲಿಸಲಾದರೂ ಬಾ ವರ್ಷಗಳಿಂದ ವಂಚಿತ ನಾನು ಅಳುವಿನ ಆಹ್ಲಾದದಿಂದ ನನ್ನನು ಈ ಹೊತ್ತು ಅಳಿಸಲಾದರೂ ಬಾ ಯಾರ್ಯಾರಿಗೆ ವಿವರಿಸಲಿ ನೀ ಹೋದ ಕಾರಣ ನನ್ನ ಮೇಲೆ ಕೋಪವಿರಲು ಜಗಕಾಗಿಯಾದರೂ ಬಾ ಈ ಹುಚ್ಚು ಮನಸಿಗಿದೆ ಇನ್ನೂ ನಿನ್ನಿಂದ ಆಕಾಂಕ್ಷೆ ಆ ಅಂತಿಮ ಆಶಾದೀಪವನ್ನು ನಂದಿಸಲಾದರೂ ಬಾ. ಮೂಲ: ಅಹ್ಮದ್ ಫರಾಜ್ (ಉರ್ದು) ========================================= ಗಜಲ್ -3 ನೋವುಗಳೆಲ್ಲ ಹೀಗೆ ಒಳಗೊಳಗೇ ಚುಚ್ಚುವದಿಲ್ಲ ಹೃದಯದ ನೋವು ಇದು,  ವ್ಯರ್ಥವಾಗುವದಿಲ್ಲ ಯಾವ ಸ್ನೇಹಿತನೂ ಇಲ್ಲ, ರಹಸ್ಯ ಹಂಚಿಕೊಂಡವನಿಲ್ಲ ಹೃದಯವೊಂದಿತ್ತು ನನ್ನದು, ಅದೂ ದಯೆ ತೋರುವದಿಲ್ಲ ನನ್ನ ಆತ್ಮದ ನಿಜಾಂಶ , ನನ್ನ ಅಶ್ರುಗಳನು ಕೇಳು ನನ್ನ ತೋರಿಕೆಯ ನಗು,  ನನ್ನ ನಿಜಾನುವಾದವಲ್ಲ ಆ ಕೂದಲನ್ನು ಕೂಗು , ಆ ನಯನವನ್ನು ಕೋರು ತುಂಬಾ ಬಿಸಿಲು ಇಲ್ಲಿ, ಯಾವ ಸೂರು ಇಲ್ಲ ಈ ಕಲ್ಲುಗಳ ಮೇಲೆ ನಡೆದು ಬರುವದಾದರೆ ಹೊರಡು ನನ್ನ ಮನೆಯ ದಾರಿಯಲ್ಲಿ ಅಕಾಶಗಂಗೆ ಇಲ್ಲ ಮೂಲ : ಮುಸ್ತಫಾ ಜೈದಿ ================================== ಕವಿ ಪರಿಚಯ: ಉತ್ತಮ ಯಲಿಗಾರ ಬೆಳಗಾವಿಯಲ್ಲಿ ಹುಟ್ಟಿ ಅಲ್ಲೇ ಎಂಜಿನಿಯರಿಂಗ್ ವರೆಗೆ ಶಿಕ್ಷಣ ಪಡೆದು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿ BSNL ನಲ್ಲಿ ಉಪಮಂಡಲ ಅಭಿಯಾತರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಕನ್ನಡ, ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಹವ್ಯಾಸಿಯಾಗಿ ಕೆಲಸ ಮಾಡುತ್ತಿದ್ದು ಮೂರೂ ಭಾಷೆಯಲ್ಲಿ ಕವನ ಸಂಕಲನ ಹೊರತರುವ ಕನಸು ಹೊತ್ತಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕವನ ಹಂಚಿಕೊಳ್ಳುವ ಇವರಿಗೆ ಉರ್ದುವಿನ ಪ್ರಸಿದ್ಧ ಗಜಲ್ ಗಳನ್ನು ಕನ್ನಡಕ್ಕೆ ತರುವ ಹಂಬಲ. ವಿವಿಧ ವೇದಿಕೆಗಳಲ್ಲಿ (ಕಹಳೆ, ಯುವರಕೋಟ್, ರಾಸ್ಯಮ್ ಇತ್ಯಾದಿ) ವಿಭಿನ್ನ ಶೈಲಿಯಲ್ಲಿ ಕವನವಾಚನ ಮಾಡುವದು ಇವರ ಹವ್ಯಾಸ.

ಅನುವಾದ Read Post »

ನಿಮ್ಮೊಂದಿಗೆ

ಅನುವಾದ

ಹಿಂದಿ ಮೂಲ:    ಅದ್ನಾನ್ ಕಾಫೀಲ್ ದರ್ವೇಶ್ ಪರಿಚಯ: ಕವಿ ಅದ್ನಾನ್ ಕಾಫೀಲ್ ದರ್ವೇಶ್ ಉತ್ತರ ಪ್ರದೇಶದ ಬಾಲಿಯಾದವರು. ಪ್ರಸ್ತುತ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಸಂಶೋಧಕರು. ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಬರೆಯುತ್ತಾರೆ. ಹಿಂದಿಯ ಪ್ರಖ್ಯಾತ ಪತ್ರಿಕೆಗಳಲ್ಲಿ ಅವರ ಕವನಗಳು ಬೆಳಕು ಕಂಡಿವೆ. ಅವರು ಅನುವಾದದಲ್ಲಿಯೂ ತೊಡಗಿಕೊಂಡಿದ್ದಾರೆ. ಅವರ ಕಾವ್ಯಕ್ಕೆ ಈಗಾಗಲೇ ಮೂರು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಕನ್ನಡಕ್ಕೆ: ಕಮಲಾಕರ ಕಡವೆ ಪರಿಚಯ: ಕಮಲಾಕರ ಕಡವೆ, ಮೂಲತಃ ಉತ್ತರಕನ್ನಡದ ಶಿರಸಿಯ ಕಡವೆ ಗ್ರಾಮದವರು, ಈಗ ಮಹಾರಾಷ್ಟ್ರದ ಅಹಮದನಗರದಲ್ಲಿ ಕಾಲೇಜು ಪ್ರಾಧ್ಯಾಪಕರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ ಭಾಷೆಗಳಲ್ಲಿ ಬರವಣಿಗೆ, ಅನುವಾದ ನಡೆಸುವ ಅವರು ಇವರೆಗೆ ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ: ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ), ಮುಗಿಯದ ಮಧ್ಯಾಹ್ನ (ಅಕ್ಷರ, 2010). ಮತ್ತು, “ಜಗದ ಜತೆ ಮಾತುಕತೆ” (ಅಕ್ಷರ, 2017). ಮರಾಠಿ ದಲಿತ ಕಾವ್ಯದ ರೂವಾರಿ ಮತ್ತು ದಲಿತ ಪ್ಯಾಂಥರ್ಸ್ ಜನಕ ನಾಮದೇವ್ ಧಸಾಲ್ ಅವರ ಕವನಗಳನ್ನು ಅನುವಾದಿಸಿ “ನಾಮದೇವ್ ಧಸಾಲ್ ವಾಚಿಕೆ” ಪ್ರಕಟಿಸಿದ್ದಾರೆ (ಕುವೆಂಪು ಭಾಷಾ ಭಾರತಿ, 2018). ಕನ್ನಡದ ಸಮಕಾಲೀನ ಕಾವ್ಯದ ಇಂಗ್ಲೀಷ ಅನುವಾದಗಳ ಪುಸ್ತಕವೊಂದರ ತಯಾರಿಯಲ್ಲಿ ಇದ್ದಾರೆ. ಸಾವಿಗೀಡಾದ ಕವಿ ದುಃಖ ಯಾವಾಗ ನನ್ನ ಅಂತರಂಗದ ಸಂದುಗೊಂದುಗೊಳಗಿಂದೆಲ್ಲ ಜಿನುಗುತ್ತಿತ್ತೋ ನಾನು ಹುಚ್ಚನಂತೆ ತಲೆ ಚಚ್ಚಿಕೊಳ್ಳುತ್ತಿದ್ದೆ ಕನಸಿನಲ್ಲೂ ಎಲ್ಲೆಲ್ಲೋ ಓಡುತ್ತಿದ್ದೆ ಆಗಾಗ ಅಲ್ಲಿಲ್ಲಿ ಬೀಳುತ್ತಿದ್ದೆ ಕಗ್ಗತ್ತಲ ದ್ವೀಪದ ಕಿನಾರೆಯಲ್ಲಿ ನಿಂತು ನರಳುತ್ತಿದ್ದೆ ಗೊತ್ತಿತ್ತು ನನಗೆ ನನ್ನ ಈ ನರಕದ ಅಂತ ನಿನಗೆ ತಿಳಿಯ ಬೇಕಿರುವುದು ಇದು ಮಾತ್ರ: ನಾನೊಬ್ಬ ಕವಿ ಮತ್ತು ಕಾವ್ಯದ ಅನಂತ ಏಕಾಂತದಲ್ಲಿ ಸಾವಿಗೀಡಾಗಿದ್ದೆ ========================= ನಗುತಿರುವೆ ನಾನೀಗ ದೂರು ಇನಿತಿಲ್ಲ ನೋಡು ನಿನ್ನ ಮೇಲೆ ಕೋಪವೂ ಇನಿತಿಲ್ಲ ನಿಷ್ಠೆಯೂ ಇಲ್ಲ, ನೇಮವೂ ಉಳಿದಿಲ್ಲ ಈಗ ನಿನ್ನಿಂದಾಗಿ ಶಿಕ್ಷೆಯೂ ಇನಿತಿಲ್ಲ ಅವಳು ನನ್ನ ಜೊತೆಗೀಗ ಇಲ್ಲವೇನೋ ಹೌದು ನಿಜವೆಂದರೆ ನಮ್ಮ ನಡುವೆ ದೂರವೂ ಇನಿತಿಲ್ಲ ಸೊರಗಿ ಹೋದೆ ಉಸಿರೇ ನಿಂತಂತೆ ಅವಳ ಪವಾಡವೇ! ನನ್ನ ಚಲನೆಯೂ ಇನಿತಿಲ್ಲ ಎರಡೂ ಬದಿ ಶವವೊಂದು ಬಿದ್ದಿದೆ ಉಸಿರು ನಿಂತ ಗುರುತೂ ಇನಿತಿಲ್ಲ ತಲೆ ಚಚ್ಚಿ ಕೊಳುವ ದಿನಗಳು ಕಳೆದವು ದರವೇಶನಿಗೆ ದೇವದಯೆಯೂ ಇನಿತಿಲ್ಲ. ============================== ಕಮಲಾಕರ ಕಡವೆ

ಅನುವಾದ Read Post »

ನಿಮ್ಮೊಂದಿಗೆ

ನಿಮ್ಮೊಂದಿಗೆ

ನಿಮ್ಮೊಂದಿಗೆ……… ಕು.ಸ.ಮಧುಸೂದನರಂಗೇನಹಳ್ಳಿ ಪ್ರಿಯರೆ,          ‘ಸಂಗಾತಿ’ ಡಿಜಿಟಲ್  ಕನ್ನಡ ಸಾಹಿತ್ಯ ಪತ್ರಿಕೆಯನ್ನು ನಿಮ್ಮ ಮುಂದಿಡಲು ಸಂತೋಷವಾಗುತ್ತಿದೆ.          ಇವತ್ತು ಮುದ್ರಣ ಮಾಧ್ಯಮದಿಂದ ಜನ ದೂರ ಸರಿಯುತ್ತಿದ್ದರೆ, ಅದಕ್ಕೆ ಕಾರಣ ವೇಗ ಹೆಚ್ಚಿಸಿಕೊಳ್ಳುತ್ತಿರುವ ಜನರ ಜೀವನ ಶೈಲಿ ಮತ್ತು ಅಗ್ಗದ ದರದಲ್ಲಿ ದೊರೆಯುತ್ತಿರುವ ಅಂತರ್ಜಾಲ ಸಂಪರ್ಕಗಳು,ಪ್ರತಿಯೊಬ್ಬರ ಕೈಲೂ ಇರುವ ಸ್ಮಾರ್ಟ್ ಪೋನುಗಳೇ ಕಾರಣ. ಇದರ ಜೊತೆಗೆ ದುಬಾರಿಯಾಗುತ್ತಿರುವ ಪುಸ್ತಕಗಳ ಬೆಲೆಯೂ ಒಂದು ಕಾರಣ!      ಮೊದಲಿನ ಹಾಗೆ ಪುಸ್ತಕವೊಂದನ್ನು ಕೈಲಿಹಿಡಿದು  ಕೂತಲ್ಲೇ ಬೇರು ಬಿಟ್ಟು ಓದುವ ಪುರಸೊತ್ತು ಯಾರಿಗೂ ಇಲ್ಲ. ಆದರೆ ತಮ್ಮ ಟ್ಯಾಬು–ಫೋನುಗಳ ಮೂಲಕ,ಪ್ರಯಾಣ ಮಾಡುತ್ತಾ, ಮನೆಗೆಲಸ ಮಾಡುತ್ತಾ, ತಮ್ಮ ವೃತ್ತಿಯಲ್ಲಿತೊಡಗಿಸಿಕೊಂಡಿರುತ್ತಲೆ ಓದುವ ಅಭ್ಯಾಸಕ್ಕೆ ಜನ ಒಗ್ಗಿ ಹೋಗುತ್ತಿದ್ದಾರೆ.       ಇಂತಹ ಸನ್ನಿವೇಶದಲ್ಲಿ ಜನ ಮುದ್ರಿತ ಸಾಹಿತ್ಯವನ್ನೇ ಓದಬೇಕು, ಅದರಲ್ಲಿ ಸಿಗುವ ಓದಿನ ಸುಖವೇ ಬೇರೆ ಎಂಬ ಮಾತೂ ಹಳಹಳಿಕೆಯ ಮಾತು ಕೇಳಿಬರುತ್ತಿದೆಯಾದರೂ, ಜನರ ವೇಗದ ಬದುಕಿನಲ್ಲಿ ಡಿಜಿಟಲ್ ಪತ್ರಿಕೆಗಳು,ಇ–ಪುಸ್ತಕಗಳು ಸೇರಿ ಹೋಗುತ್ತಿವೆ.        ಜನರ ಇಂತಹ ಸಾಹಿತ್ಯದ ಓದಿನ ಅಗತ್ಯಕ್ಕಾಗಿಯೇ ಸಂಗಾತಿ ಪತ್ರಿಕೆಯನ್ನು ರೂಪಿಸಲಾಗಿದೆ. ಇದು ನಮ್ಮ ಮೊದಲ ಪ್ರಯತ್ನವಾಗಿದ್ದು ನಿಮಗಿಷ್ಟವಾಗಬಹುದೆಂದು ನಂಬಿದ್ದೇನೆ. ಈ ಮೊದಲ ಸಂಚಿಕೆಯಲ್ಲಿ ಆಗಿರಬಹುದಾದ ನ್ಯೂನತೆಗಳನ್ನು  ಸರಿಪಡಿಸಿಕೊಂಡು ಮುನ್ನಡೆಯ ಬೇಕೆಂಬ ಅರಿವು ನನಗಿದೆ. ಈನಿಟ್ಟಿನಲ್ಲಿ ನಿಮ್ಮ ಸಲಹೆ ಸಹಕಾರಗಳು ಬೇಕಿವೆ.   ಸಂಗಾತಿಗೆ ಹಿರಿಯರು ಕಿರಿಯರು ಎಂಬ ಬೇಧವಿಲ್ಲ.ಇಲ್ಲಿಎಲ್ಲರ ಬರಹಗಳೂ ಸಮಾನವಾಗಿ ಪ್ರಕಟವಾಗುತ್ತವೆ.  ಆದರೆ ಇಂತಹ ಹೊಸ ಪತ್ರಿಕೆಯಲ್ಲಿ ಬರೆಯುವ ಉಧಾರತೆಯನ್ನು ಪ್ರಸಿದ್ದಬರಹಗಾರರು ತೋರುತ್ತಾರೆಂದು ನಂಬಿಕೊಂಡಿದ್ದೇನೆ. ಈದಿಸೆಯಲ್ಲಿ ಹಿರಿಯ ಬರಹಗಾರರನ್ನು ಸಂಪರ್ಕಿಸಲಾಗುತ್ತಿದೆ…     ರಾಜ್ಯದ ಮಲೆನಾಡಿನ ಮೂಲೆಯ ಹಳ್ಲಿಯೊಂದರಲ್ಲಿ ಕೂತು  ಇಂತಹ ಪತ್ರಿಕೆ ನಡೆಸುವುದು ಕಷ್ಟವೇ ಸರಿ. ದಿನದ ಬಹುತಾಸು ವಿದ್ಯುತ್ ನಿಲುಗಡೆಯಾಗುವ,ಆಗಾಗ ಮೊಬೈಲ್ ಟವರುಗಳು ಕೈ ಕೊಡುವ  ಹಳ್ಲಿಯಲ್ಲಿ ಕೂತು ಪ್ರತಿದಿನ  ಈ   ಬ್ಲಾಗನ್ನು ಅಪ್ ಡೇಟ್ ಮಾಡುವುದು ಕಷ್ಟದ ಕೆಲಸ.  ಹಾಗಾಗಿ ಮೊದಲ ಕೆಲವು  ತಿಂಗಳುಗಳ ಕಾಲ ವಾರದಲ್ಲಿ ಒಂದು ದಿನ ಅಂದರೆ ಪ್ರತಿ  ಶನಿವಾರ ಅಪ್ ಡೇಟ್ ಮಾಡಲಾಗುವುದು…….      ಇದೆಲ್ಲಕ್ಕೂ ಮುಖ್ಯವಾಗಿ ನಿಮ್ಮಲ್ಲಿ ಹೇಳಬೇಕಾಗಿರುವುದು ಕ್ಷಮಿಸಿ, ಕೇಳಬೇಕಾಗಿರುವುದು ಸಹೃದಯ ಓದುಗರಾಗಿ ಸಂಗಾತಿಯನ್ನು ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ. ಸೂಕ್ತ ಸಲಹೆಗಳನ್ನು ನೀಡಿ….     ನೀವುಗಳು ನಮ್ಮ ಜೊತೆಗಿರುತ್ತೀರೆಂಬ ನಂಬಿಕೆಯೇ ನಮ್ಮಿ ಪ್ರಯತ್ನದ ಹಿಂದಿರುವ ಪ್ರೇರಣೆ.

ನಿಮ್ಮೊಂದಿಗೆ Read Post »

You cannot copy content of this page

Scroll to Top