ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಮುಟ್ಟು .. ಮುಟ್ಟು.. ಮುಟ್ಟು..

ವಿಶೇಷ ಲೇಖನ ಮುಟ್ಟು .. ಮುಟ್ಟು.. ಮುಟ್ಟು.. ಚಂದ್ರಪ್ರಭ ನಮ್ಮ ಬಾಲ್ಯ ಕಾಲಕ್ಕಿಂತ ಈಗ ಸ್ವಲ್ಪ ಮಟ್ಟಿಗೆ ಧೋರಣೆಗಳು ಬದಲಾಯಿಸಿದಂತೆ ತೋರುವುದಿದೆ. ಆಗ ಅದನ್ನು ಕುರಿತು ಹೆಣ್ಮಕ್ಕಳು ತಮ್ಮ ತಮ್ಮಲ್ಲಿಯೂ ಮುಕ್ತವಾಗಿ ಮಾತನಾಡಲು ಹಿಂಜರಿಕೆಯಿತ್ತು. ಆಗ ಆ ಸಂಗತಿ ಮಕ್ಕಳು, ಇತರರ ತಿಳಿವಳಿಕೆಗೆ ಬರುವ ಸಂಭವನೀಯತೆ ಇದ್ದುದು ತೀರ ಕಡಿಮೆ. ತರಗತಿಯಲ್ಲಿ ಅಂಡಾಣು, ವೀರ್ಯಾಣು, ಗರ್ಭಧಾರಣೆ, ಋತುಚಕ್ರಗಳ ಕುರಿತು ಇದ್ದ ಅಧ್ಯಾಯವನ್ನು ಮಕ್ಕಳೆದುರು ಪಾಠ ಮಾಡಲು ಶಿಕ್ಷಕಿಯರೇ ಹಿಂದೇಟು ಹಾಕುತ್ತಿದ್ದುದನ್ನು ನಾನು ಹತ್ತಿರದಿಂದ ನೋಡಿರುವೆ. ಅದೊಂದು ನಿಸರ್ಗ ಸಹಜ ಕ್ರಿಯೆ, ಮನುಕುಲದ ಉಳಿವು, ಬೆಳವಣಿಗೆಯ ಮೂಲ ಸ್ರೋತ ಎಂಬ ಅದ್ಬುತ ಸತ್ಯವನ್ನು ಮಕ್ಕಳೆದುರು ಅನಾವರಣ ಮಾಡಲು ಇರುವ ಒಂದು ಸದವಕಾಶ ಅದು. ಅಂಥದೊಂದು ಅಧ್ಯಾಯ ಗೌಣವಾಗಿ ಬಿಡುವುದು ನಿಜಕ್ಕೂ ವಿಷಾದನೀಯ. ನನ್ನೂರು ಬನಹಟ್ಟಿ ನೇಕಾರರ ಬೀಡು. ಲಿಂಗ, ಜಾತಿ, ಮತ, ಪಂಥ ಮರೆತು ಎಲ್ಲ ಜೀವಗಳೂ ನೇಕಾರಿಕೆಯನ್ನು ವೃತ್ತಿ ಮಾಡಿಕೊಂಡ ಜನರು ನನ್ನವರು. ದಿನ ಬೆಳಗಾಗುವುದು, ಸಂಜೆಗತ್ತಲು ಕವಿಯುವುದು ನೂಲೆಳೆಯೊಂದಿಗೇ. ಅಲ್ಲಲ್ಲಿ ಕೆಲವರು ನೌಕರದಾರರು ಸಹ ಕಾಣಸಿಗುತ್ತಾರೆ. ತೀರ ಚಿಕ್ಕವಳಿದ್ದಾಗ ನನ್ನವ್ವ ಮುಟ್ಟಿನ ದಿನಗಳಲ್ಲಿ ತಲೆ ಮೇಲೆ ನೀರು ಹಾಕಿಸಿಕೊಂಡು ಕೆಲಸದಲ್ಲಿ ತೊಡಗುತ್ತಿದ್ದುದನ್ನು ನೋಡುತ್ತಿದ್ದರೂ ಅದೇಕೆ ಹಾಗೆ ಅಂತ ತಿಳಿದೇ ಇರಲಿಲ್ಲ. ಅವ್ವ ನನಗೆ ನೀರು ಹಾಕುವಂತೆ ಆಗುವವರೆಗೂ ಹೊತ್ತಲ್ಲದ ಹೊತ್ತಿನಲ್ಲಿ ಅಜ್ಜಿ ಅವ್ವನಿಗೆ ನೀರು ಹಾಕುವುದೇಕೆ ಎಂಬುದು ವಿಸ್ಮಯದ ಸಂಗತಿಯಾಗೇ ಉಳಿದಿತ್ತು! ಈ ದಿನದ ವರೆಗೂ ಆ ದಿನಗಳಲ್ಲಿ ಮೂಲೆ ಹಿಡಿದು ಕೂತವರನ್ನು ನಾ ಕಂಡಿಲ್ಲ. ಕೆಲವು ಸಮುದಾಯದವರು ಅದನ್ನು ಪಾಲಿಸುತ್ತಾರೆ ಎಂದು ಕೇಳಿ ಮಾತ್ರ ಗೊತ್ತು. ನೇಕಾರಿಕೆ ಪ್ರತಿ ದಿನದ ಪ್ರತಿ ಕ್ಷಣದ ದುಡಿಮೆ ಬಯಸುವ ಕಾಯಕ. ಮುಟ್ಟು ಕಾಣಿಸಿಕೊಂಡ ಕೂಡಲೇ ತಲೆ ಮೇಲೆ ನೀರು ಹಾಕಿಕೊಂಡು ಕೆಲಸಕ್ಕೆ ತೊಡಗುವುದು ಇವರಿಗೆ ಅನಿವಾರ್ಯ. ಮೂರು-ನಾಲ್ಕನೇ ದಿನ ಮತ್ತೊಮ್ಮೆ ನೀರು ಹಾಕಿಕೊಂಡರೆ “ಶುದ್ಧ” ಆದ ಹಾಗೆ. ಆ ದಿನಗಳಲ್ಲಿ ದೇವರ ಪೂಜೆ, ನೈವೇದ್ಯ ಇತ್ಯಾದಿಗಳಿಂದ ದೂರ ಉಳಿಯುವುದೇ  ಅವರು ಪಾಲಿಸುವ ‘ಮಡಿ’. ಅವರೇ ಹೇಳುವ ಕೆಲವು ಖಡಕ್ ದೇವರುಗಳ ವಿಶೇಷ ಆಚರಣೆ, ಜಾತ್ರೆಗಳ ಸಂದರ್ಭದಲ್ಲೂ ಅವರು ಅದರಿಂದ ದೂರ. ಇದು ಅವರು ಪಾಲಿಸುವ ಮಡಿಯ ಒಂದು ಭಾಗ. ಆರನೇ ತರಗತಿ ಕಳೆದ ನಂತರದ ರಜೆಯಲ್ಲಿ ನಾನು ಋತುಮತಿಯಾದ ನೆನಪು. ಆಗೆಲ್ಲ ಮೊದಲ ಋತುವನ್ನು ಸಂಭ್ರಮಿಸುವುದು ಜನಗಳಿಗೆ ಪ್ರಿಯವಾದ ಸಂಗತಿ. ೫ ದಿನ, ೯ದಿನ, ೧೧ ದಿನ ಹೀಗೆ ಹುಡುಗಿಯನ್ನು ಮಂಟಪದಲ್ಲಿ ಕೂರಿಸಿ ಸೋಬಾನೆ ಪದ ಹಾಡುವುದು. ದಿನಕ್ಕೊಂದು ರೀತಿಯ ಅಲಂಕಾರ ಮಾಡುವುದು.. ಆಕೆಗೆ ಬಗೆ ಬಗೆ ಊಟ, ಪೌಷ್ಟಿಕ ಆಹಾರ ತಿನ್ನಿಸುವುದು. ‘ಸಾಲಿಗಿ ಹೋಗೂ ಹುಡುಗಿ.. ಕುಂಡ್ಸೂದು ಏನೂ ಬ್ಯಾಡ’ ಅಂತ ನನ್ನಜ್ಜಿ ಫರ್ಮಾನು ಹೊರಡಿಸುದಳು. ಜನಗಳಿಗೆ ಗೊತ್ತಾದರೆ ಅಡುಗೆ ತಂದು ಕೊಟ್ಟು ಕಾರ್ಯ ಮಾಡುವುದು ಅನಿವಾರ್ಯ ಆದೀತೆಂದು ಗುಟ್ಟಾಗಿ ನನ್ನ ಒಳ ಮನೆಯಲ್ಲೇ ಇರಿಸಿದ ನೆನಪು. ಅವ್ವ ನನಗೆ ಸ್ರಾವದ ದಿನಗಳಲ್ಲಿ ಬಟ್ಟೆ ಉಪಯೋಗಿಸುವುದು ಹೇಗೆ ಅಂತ ಹೇಳಿ ಕೊಟ್ಟಳು. ಆದರೆ ಅದನ್ನೆಲ್ಲ ತೊಳೆದು ಸ್ವಚ್ಛ ಮಾಡುವುದು.. ಗುಟ್ಟಾಗಿ ಮುಟ್ಟಿನ ಬಟ್ಟೆ ಒಣಗಿಸಿಕೊಳ್ಳುವುದು ಎಲ್ಲ ಬೇಡದ ಸಂಗತಿಗಳಾಗಿದ್ದವು. ಒಬ್ಬೊಬ್ಬರಾಗಿ ಗೆಳತಿಯರು “ದೊಡ್ಡವ”ರಾಗ ತೊಡಗಿದರು. ಆದರೂ ನಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದುದು ಕಡಿಮೆ. ನಮ್ಮೂರಲ್ಲಿ ಆಗ ಇದ್ದುದು ಕೆಲವೇ ಕೆಲವು ಔಷಧಿ ಅಂಗಡಿ. ಶೋಕೇಸಿನಲ್ಲಿಟ್ಟ ವಸ್ತುಗಳನ್ನು ನೋಡುವುದೆಂದರೆ ನಮಗೆ ಖುಷಿ. ಅದೊಂದು ದಿನ ಸ್ನಾನದ ಸೋಪಿನ ಮಾದರಿಯಲ್ಲಿ ಸುತ್ತಿಟ್ಟ ಪ್ಯಾಕೆಟ್ ಒಂದನ್ನು ನಾನೂ ತಮ್ಮನೂ ಕುತೂಹಲದಿಂದ ನೋಡ ತೊಡಗಿದೆವು. ಅಷ್ಟು ದೊಡ್ಡ ಸಾಬೂನು ಇರುವುದೇ? ಅಂತ ಅಚ್ಚರಿ. ಕೊನೆಗೆ ಅದೇನೆಂದು ಅಂಗಡಿಯವರನ್ನೇ ಕೇಳಿದೆವು. ‘ನಿಮಗ ಗೊತ್ತಾಗೂದಿಲ್ಲ ಹೋಗರಿ’ ಅಂತ ಗದರಿ ಕಳಿಸಿ ಬಿಟ್ಟರು ಅವರು. ‘ಸುಧಾ’ ಆ ಕಾಲದ ಜನಪ್ರಿಯ ವಾರ ಪತ್ರಿಕೆ. ಅದರಲ್ಲಿ ವಸುಮತಿ ಉಡುಪ, ಅನುಪಮಾ ನಿರಂಜನ ಮೊದಲಾದವರ ಸ್ತ್ರೀ ಆರೋಗ್ಯ ಕುರಿತು ಲೇಖನಗಳು. ಮುಟ್ಟಿನ ದಿನಗಳಲ್ಲಿ ಅನುಸರಿಸಬೇಕಾದ ಸಂಗತಿಗಳ ಬಗ್ಗೆ ಕೊಟ್ಟ ಮಾಹಿತಿಯಲ್ಲಿ ಸ್ಯಾನಿಟರಿ ಪ್ಯಾಡ್ ಬಳಕೆ ಕುರಿತು ವಿವರ ಓದಿದ ನಂತರವಷ್ಟೇ ಅದೆಲ್ಲ ಅರ್ಥ ಆಗಿದ್ದು. ಹಾಗಿದ್ದೂ ದುಡ್ಡು ಕೊಟ್ಟು ಅದನ್ನು ಖರೀದಿಸುವ ಅವಕಾಶ ಇರಲಿಲ್ಲ. ಹೈಸ್ಕೂಲು ಮುಗಿಸಿ ಕಾಲೇಜಿಗೆ ಸೇರುವಾಗ ಅವರಿವರು ಕೊಟ್ಟ ಹತ್ತಿಪ್ಪತ್ತು ರೂಪಾಯಿಗಳನ್ನು ಉಳಿತಾಯ ಮಾಡಿ ಅದರಿಂದ ಸ್ಯಾನಿಟರಿ ಪ್ಯಾಡ್ ಕೊಳ್ಳಲು ಆರಂಭಿಸಿದೆ. ಬಳಸಿದ ಮೇಲೆ ಒಪ್ಪವಾಗಿ ಸುತ್ತಿ ಅದನ್ನು ಕಸದ ಡಬ್ಬಿಗೆ ಎಸೆಯುವುದು ಅಭ್ಯಾಸ ಆಯ್ತು. ಅಂಗಡಿಗೆ ಹೋಗಿ ಪ್ಯಾಡ್ ಕೇಳಿದರೆ ಸಾಕು, ಅಂಗಡಿಯಾತ ಗುಟ್ಟಾಗಿ ಅದನ್ನು ಕಾಗದದ ಹಾಳೆಯಲ್ಲಿ ಸುತ್ತಿಯೊ ಕಪ್ಪು ಬಣ್ಣದ ಪ್ಲಾಸ್ಟಿಕ್ ಹಾಳೆಯಲ್ಲಿ ಇರಿಸಿಯೊ ಕೊಡುವುದು ಈಗಲೂ ಕಾಣುವ ವಿದ್ಯಮಾನ. ತೀವ್ರ ಹೊಟ್ಟೆ ನೋವು ಕಾಡಿದಾಗ ವೈದ್ಯರ ಬಳಿ ಹೋಗಿ ಮಾತ್ರೆ ತರುವುದಿತ್ತು. ಬಟ್ಟೆ, ಪ್ಯಾಡ್ ಯಾವುದೇ ಆಗಿರಲಿ ಸ್ರಾವವುಂಡು ಒಣಗಿ ತೊಡೆಯ ಸಂದುಗಳಲ್ಲಿ ಉಂಟು ಮಾಡುತ್ತಿದ್ದ ಗಾಯಗಳದೇ ಒಂದು ಸಮಸ್ಯೆ. ಅದನ್ನು ನಿವಾರಿಸಲು ವೈದ್ಯರಲ್ಲಿಗೆ ತೆರಳಿ ಮುಲಾಮು ತರುವುದು. ಈ ತಿಂಗಳ ಗಾಯ, ನೋವು ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿ ಮುಂದಿನ ತಿಂಗಳ ಋತು ಹಾಜರ್!! ಇದರೊಂದಿಗೆ ಅವ್ವ, ಅಜ್ಜಿ ಹಾಕುತ್ತಿದ್ದ ಅಲ್ಲಿ ಬರಬೇಡ, ಇಲ್ಲಿ ಬರಬೇಡ.. ಅದನ್ನು ಮಾಡಬೇಡ, ಇದನ್ನು ಮಾಡಬೇಡ ಇವೆಲ್ಲ ಕಿರಿಕಿರಿ ತಾಳಬೇಕಿತ್ತು. ಮದುವೆ, ವೃತ್ತಿ, ತಾಯ್ತನಗಳ ಮೂಲಕ ಹಾದು ಬರುವಾಗ ಅವ್ವ ನಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಳ್ಳತೊಡಗಿದಳು. ಮುಟ್ಟು ಕಾಣಿಸಿಕೊಂಡ ತಕ್ಷಣ ತಲೆ ಸ್ನಾನ ಮಾಡಬೇಕಿರಲಿಲ್ಲ. ದೇವರು, ನೇಮಗಳ ವಿಷಯದಲ್ಲಿಯೂ ಅವಳು ಆಕ್ಷೇಪಿಸುವುದನ್ನು ನಿಲ್ಲಿಸಿದಳು. ಆದರೂ ನಮ್ಮಲ್ಲಿ ಮೊದಲಿನ ಭಯ ಹಾಗೇ ಉಳಿದಿತ್ತು. ಮುಟ್ಟು ನಿಲುಗಡೆಯ ಹೊಸ್ತಿಲಲ್ಲಿರುವ ಈ ಹೊತ್ತು ಮುಟ್ಟಿನ ಬಟ್ಟಲುಗಳ ಬಳಕೆ ವ್ಯಾಪಕವಾಗಿ ಕೇಳಿ ಬರುತ್ತಿದೆ. ಅರವತ್ತರ ದಶಕದಲ್ಲಿಯೇ ಶೋಧಿಸಲ್ಪಟ್ಟ ಮುಟ್ಟಿನ ಬಟ್ಟಲು ಮಾರುಕಟ್ಟೆಗೆ ಬರದಿರುವಂತೆ ತಡೆಯುವ ಹಿಂದೆ ಸ್ಯಾನಿಟರಿ ಪ್ಯಾಡ್ ಮಾರಾಟ ಮಾಡುವ ಕಂಪನಿಗಳ ಕೈವಾಡ ಇತ್ತೆಂಬುದನ್ನು ಪತ್ರಿಕೆಗಳು ವರದಿ ಮಾಡುವುದನ್ನು ಓದುವಾಗ ಆಘಾತವಾಗುತ್ತದೆ. ಮಣ್ಣಿನಲ್ಲಿ ಕರಗದ, ನಾಶವಾಗದ, ನೂರಾರು ವರ್ಷಗಳ ವರೆಗೆ ಇದ್ದ ಸ್ಥಿತಿಯಲ್ಲಿಯೇ ಉಳಿಯುವ, ಕ್ರಿಮಿಗಳ ಉತ್ಪಾದನೆಗೆ ಆಕರವಾದ ಅದೆಷ್ಟು ಪ್ಯಾಡ್ ಗಳನ್ನು ವರ್ಷಗಟ್ಟಲೇ ನಾವು ಎಸೆಯುತ್ತಲೇ ಬಂದಿದ್ದೇವೆ ಎಂದು ಊಹಿಸಲೂ ಭಯವಾಗುವದು. ಹೆಂಗಳೆಯರ ಸೌಕರ್ಯ, ಪರಿಸರ ಕಾಳಜಿ ಯಾವುದೂ ಇಲ್ಲದ ಕಂಪನಿಗಳಿಗೆ ತಮ್ಮ ಹಿತಾಸಕ್ತಿಗಳೇ ಮುಖ್ಯ ಆಗುವುದು ಆಗಲೂ ಇತ್ತು.. ಈಗಲೂ ಇದೆ.. ಮುಂದೆಯೂ ಇದ್ದರೆ ಅಚ್ಚರಿಯಿಲ್ಲ. ಮುಟ್ಟಿನ ಕುರಿತು ಮುಕ್ತವಾಗಿ ಮಾತನಾಡಲು ಹಿಂಜರಿಯದ ವಾತಾವರಣ ಇನ್ನೂ ನಿರ್ಮಾಣ ಆಗಿಲ್ಲ. ಅದು ಸಾಧ್ಯ ಆಗಬೇಕು. ಹಾಗಾಗುವುದು ಆರೋಗ್ಯವಂತ ಸಮಾಜದ ಲಕ್ಷಣ. ನಮ್ಮ ಮಕ್ಕಳಿಗೆ ಗಂಡು ಹೆಣ್ಣು ಭೇದವಿಲ್ಲದೆ ಇಬ್ಬರಿಗೂ ಈ ಕುರಿತ ವಾಸ್ತವಾಂಶಗಳ ಅರಿವಾಗಬೇಕು. ಅದು ಪರಸ್ಪರರ ಕುರಿತ ಮಾನವೀಯ ನಿಲುವು ವೃದ್ಧಿಸಲು ಸಹಕಾರಿ. ಮುಟ್ಟಿನ ಬಟ್ಟಲು ಬಳಕೆ ವ್ಯಾಪಕ ಆಗಬೇಕು. ಒಣ ಅನುಕಂಪ, ಸಹಾನುಭೂತಿಗೆ ಬದಲಾಗಿ ಅವಳ ‘ಆ ದಿನಗಳ’ಲ್ಲಿ ಆಕೆಗೆ ಇತರರ ಸಹಕಾರ, ಸಾಂತ್ವನ ಸಿಗುವಂತಾಗಬೇಕು. ಎಲ್ಲ ಹೆಣ್ಣು ಜೀವಗಳಲ್ಲಿ ನನ್ನದೊಂದು ವಿನೀತ ಪ್ರಾರ್ಥನೆ.. ಮುಟ್ಟು ಕುರಿತು ನಿಮ್ಮ ಅನುಭವವನ್ನು ಮುಕ್ತವಾಗಿ ಹಂಚಿಕೊಳ್ಳಲು ಆರಂಭಿಸಿ. ಒಂದು ಅಭಿಯಾನದ ರೀತಿಯಲ್ಲಿ ಅದು ಸಾಗಲಿ. ಅದರಿಂದ ಪುರುಷ ಜಗತ್ತಿನೆದುರು ಹೊಸತೊಂದು ಲೋಕದ ಅನಾವರಣವಾಗಲಿ. ಮಿಡಿಯುವ ಮನಗಳು ಮಿಡಿದಾವು ************************************

ಮುಟ್ಟು .. ಮುಟ್ಟು.. ಮುಟ್ಟು.. Read Post »

ಅಂಕಣ ಸಂಗಾತಿ, ಕಾಲಾ ಪಾನಿ, ನಿಮ್ಮೊಂದಿಗೆ

ಅಂಕಣ ಬರಹ

ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ

ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ

ಸರಣಿಬರಹ………..

ಅದ್ಯಾಯ—ಒಂದು

Read Post »

ನಿಮ್ಮೊಂದಿಗೆ

ಮನದ ಪುಟದಲಿ ಮುದ್ರೆಯೊತ್ತಿದ ಕಾದಂಬರಿ.

ಕಳೆದ ಎರಡು ,ಮೂರು ವರ್ಷಗಳಿಂದ ಕೊಡಗು ಮಹಾಮಳೆಯಿಂದ ತತ್ತರಿಸಿ ಎದುರಿಸಿದ ಜೀವಭಯವನ್ನೂ,ಕರಾಳ ದಿನಗಳನ್ನೂ ಕಾದಂಬರಿಯೊಳಗೆ ಹಿಡಿದಿಟ್ಟಿರುವುದು ನಿಜಕ್ಕೂ ವರ್ತಮಾನಕ್ಕೆ ಹಿಡಿದ ಕನ್ನಡಿ.

ಮನದ ಪುಟದಲಿ ಮುದ್ರೆಯೊತ್ತಿದ ಕಾದಂಬರಿ. Read Post »

ನಿಮ್ಮೊಂದಿಗೆ

ಭಾವ ಭುವನ

ಕವಿತೆ ಭಾವ ಭುವನ ಕಲಾ ಭಾಗ್ವತ್ ಕಾದ ನೆಲದ ಮೌನಮಡುಗಟ್ಟಿ ಮಳೆ ಸುರಿವಾಗಹೊಳಹು ಕೊಟ್ಟು ಹಾಯುವ ಮಿಂಚಿಗೆಒಮ್ಮೆ ನಿಂತು ಏನೆಂದು ಕೇಳಬಾರದೆ? ಹರಿವ ನದಿಯೊಡನೆ ಸೇರಿದ ಹನಿ ಮುತ್ತುಅಲೆ ಅಲೆಯಾಗಿ…ಹರಿವ ಮುಸ್ಸಂಜೆಗೆಮೆರುಗು ನೀಡಿ ಜಾರುವ ರಂಗಿಗೆಒಮ್ಮೆ ನಿಂತು ಪಿಸುಮಾತ ಆಲಿಸಬಾರದೇ? ಮೌನ ಮಥಿಸಿ ಪಕ್ವವಾಗಿದೆ ಈಗಮತ್ತೆಲ್ಲವೂ ಮುಚ್ಚಿಕೊಂಡಿದೆಶಿಶಿರದ ಇರುಳಿನಲಿ…ತಣ್ಣನೆ ಬಿಚ್ಚಿದೆ ಮನ ಮಾತ್ರಮುಂಜಾವು ಎಂದಿಗಿಂತಲೂ ಆರ್ದೃಬೆಚ್ಚಗೆ ಸಿಹಿಯ ಸವಿ ದೂರದಲ್ಲೇ ನಿಂತುಕಡಲ ತೆರೆಗಳ ಸೆಳೆವಾಗಹೊಳೆವ ಮುಖದಲ್ಲಿ ಅರಳುವಕನಸುಗಳು ನನಗಷ್ಟೇ ಸೀಮಿತವೀಗಬಿಗುಮಾನವೆನಗೆ ಇದಕ್ಕೆಲ್ಲ ಉತ್ತರವಹುಡುಕಲಾಗದು ನನಗೆಹುದುಗಿರುವ ಮಾತುಗಳುಸುಲಭದಲಿ ಅರ್ಥಕ್ಕೆ ದಕ್ಕದಂತೇ.. ತುದಿ ಮೊದಲಿಲ್ಲದ ಎಷ್ಟೋ ಪ್ರಶ್ನೆಗಳಕಣ್ಣಿನಾಳದಲಿ ಇಳಿದು ತಿಳಿದುಕೊಟ್ಟ ಮುಗುಳು ನಗುವಿನ ಉತ್ತರಅರ್ಥವಾಗಿದೆ ನನಗೆ ಮಾತ್ರಮಾತಾಗಿ ಬರದಿರುವುದನೆಲ್ಲಕವಿತೆಯಾಗಿ ಬರೆಯಲೇ…?ನಿನಗೆ ಮಾತ್ರ. *****************************************************

ಭಾವ ಭುವನ Read Post »

ನಿಮ್ಮೊಂದಿಗೆ

ಕಸಾಪ ಅದ್ಯಕ್ಷಸ್ಥಾನದ ಅಭ್ಯರ್ಥಿಗಳಿಗಷ್ಟು ಪ್ರಶ್ನೆಗಳು!

ಸಂಪಾದಕೀಯ ಕಸಾಪ ಅದ್ಯಕ್ಷಸ್ಥಾನದ ಅಭ್ಯರ್ಥಿಗಳಿಗಷ್ಟು ಪ್ರಶ್ನೆಗಳು! ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಸ್ಥಾನದ  ಅಭ್ಯರ್ಥಿಗ ಳಿಗೊಂದಿಷ್ಟು ಪ್ರಶ್ನೆಗಳು!              ಇನ್ನು ಕೆಲವೆ ತಿಂಗಳುಗಳಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ  ಅದ್ಯಕ್ಷ ಸ್ಥಾನಕ್ಕೆ ತಾವುಗಳು ಆಕಾಂಕ್ಷಿಗಳಾಗಿದ್ದು, ಖಾಸಗಿಯಾಗಿ ತಮ್ಮ ಆಪ್ತವಲಯದ ಮೂಲಕ ಸದ್ದಿರದೆ ಪ್ರಚಾರ ಕಾರ್ಯವನ್ನೂ ಶುರು ಮಾಡಿರುತ್ತೀರಿ. ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ  ಈ ನೆಲದಲ್ಲಿ ಇಂತಹ ಆಕಾಂಕ್ಷೆಗಳು- ಸಂಬಂಧಿಸಿದ ಪೂರ್ವ ಸಿದ್ದತೆಗಳು ಸಹಜವೇ ಸರಿ! ಈ ಬಗ್ಗೆ ನಮ್ಮ ತಕರಾರೆನಿಲ್ಲ. ಆದರೆ ಹಲವು ವರ್ಷಗಳಿಂದ ಈ ಚುನಾವಣೆಗಳು ಹೇಗೆ ನಡೆಯುತ್ತವೆ ಅಥವಾ ನಡೆಸಲ್ಪಡುತ್ತವೆ ಎಂಬುದನ್ನು ಕಂಡಿರುವ ನಮ್ಮಲ್ಲಿ ಕೆಲವು ಪ್ರಶ್ನೆಗಳು ಹುಟ್ಟಿದ್ದು ತಾವು ಸದರಿ ಪ್ರಶ್ನೆಗಳಿಗೆ ಉತ್ತರಿಸುತ್ತೀರೆಂದು ನಂಬುತ್ತೇನೆ.ಕಸಾಪದ ಮತದಾರನಾಗಿ ಈ ಪ್ರಶ್ನೆಗಳನ್ನು ಕೇಳುವುದು ನಮ್ಮ ಹಕ್ಕಾಗಿದ್ದು-ಉತ್ತರಿಸುವುದು ನಿಮ್ಮ ಕರ್ತವ್ಯವೆಂದು ನಾನಂತೂ ನಂಬಿದ್ದೇನೆ 1.ಸಾಹಿತ್ಯ ಪರಿಷತ್ತಿನ ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳು ವೆಚ್ಚ ಮಾಡುವ ಹಣದ ಮಿತಿಯೇನಾದರು ಇದೆಯೇ? 2.ಹೋಗಲಿ ನಾಮಪತ್ರ ಹಾಕುವ ಮುಂಚೆ ರಾಜಕಾರಣಿಗಳಂತೆ ತಮ್ಮ  ಸ್ಥಿರ-ಚರಾಸ್ತಿಗಳನ್ನು ತಾವುಗಳು ಘೋಷಿಸಿಕೊಳ್ಳಬೇಕೆಂಬ ನಿಯಮವಿದೆಯೇ? 3. ಹಾಗೊಂದು ನಿಯಮವಿರದಿದ್ದ ಪಕ್ಷದಲ್ಲಿ ತಾವು ಸ್ವಯಂಪ್ರೇರಿತರಾಗಿ ಘೋಷಿಸುವ ಮೂಲಕ  ಪಾರದರ್ಶಕತೆ ಮರೆಯಲು ಸಿದ್ದರಿದ್ದೀರಾ? 4. ಗೆದ್ದಮೇಲೆ ಲೋಕಾಯುಕ್ತಕ್ಕೂ ಆಸ್ತಿವಿವರ ಸಲ್ಲಿಸಬೇಕೇ? 5.ಇವ್ಯಾವು ಇಲ್ಲವೆಂದಾದರೆ ತಾವುಗಳು ಈ ವಿಚಾರದಲ್ಲಿ ಯಾರಿಗೆ ಹೊಣೆಗಾರರಾಗಿರುತ್ತೀರಿ? 6.ಇನ್ನು ಮತದಾರರ ಸಂಖ್ಯೆ ಕನಿಷ್ಠ ಒಂದು ಲಕ್ಷವಿದೆ ಎಂದುಕೊಂಡರೂ,ನೀವು ಅವರಿಗೆ ಪತ್ರ ಬರೆಯಲೇ ಸುಮಾರು ೫ ಲಕ್ಷ ರೂಪಾಯಿ ಬೇಕಾಗುತ್ತದೆ. ಅಷ್ಟು ಹಣವನ್ನು ಎಲ್ಲಿಂದ ತರುತ್ತೀರಿ? 7. ಪ್ರತಿತಾಲೂಕಿಗೂ ನಿಮ್ಮ ಕಾರಲ್ಲಿ ಬೇಟಿಕೊಡುವುದೇ ಆದಲ್ಲಿ ಕನಿಷ್ಠ  ಹತ್ತರಿಂದ ಹದಿನೈದು ಲಕ್ಷ ರೂಪಾಯಿ ಬೇಕಾಗುತ್ತದೆ. ಈ ದುಡ್ಡಿಗೇನು ಮಾಡುತ್ತೀರಿ? 8.ಹೋಗಲಿ ಚುನಾವಣೆ ಖರ್ಚಿಗೆಂದು ನೀವುಗಳೇನಾದರು ಪಾರ್ಟಿಫಂಡ್ ರೀತಿಯಲ್ಲಿ ಹಣ ಸಂಗ್ರಹಿಸುತ್ತೀರಾ? 9.ಹಾಗೆ ಸಂಗ್ರಹಿಸಿದರೆ ಕೊಟ್ಟವರ ಹೆಸರುಗಳನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತೀರಾ? 10.ಯಾವುದಾದರು ರಾಜಕೀಯ ಪಕ್ಷಗಳ ಬೆಂಬಲ ನಿಮಗೆ ಇದೆಯಾ? ಇದ್ದರೆ ಯಾವ ಪಕ್ಷ (ಯಾವ ಕಾರಣ) ವಿವರಿಸುತ್ತೀರಾ? 11.ಚುನಾವಣಾ ಪ್ರಚಾರದ ಸಮಯದಲ್ಲಿ ಯಾವುದೇ ಜಾತಿ-ಧರ್ಮದ ಮಠ,ಮಂದಿರ,ಮಸೀಧಿ, ಚರ್ಚುಗಳಿಗೆ  ಹೋಗಿ ಜಾತಿ ಧರ್ಮದ ಹೆಸರಿನಲ್ಲಿ ಮತ ಕೇಳುವುದಿಲ್ಲವೆಂದು ಬಹಿರಂಗವಾಗಿ ಹೇಳಲು ನಿಮಗೆ ಸಾದ್ಯವಿದೆಯೆ? 12.ಇಷ್ಟು ವರ್ಷಗಳ ಕಾಲ ಪುರುಷ ಪುಂಗವರೇ ಕಸಾಪದ ಅದ್ಯಕ್ಷರಾಗಿದ್ದು ಸಾಕು, ಈಗಲಾದರು ಮಹಿಳೆಯೊಬ್ಬರು ಆ ಸ್ಥಾನಕ್ಕೇರಲೆಂದು ನಿಮಗೀವರೆಗೂ ಅನಿಸಲಿಲ್ಲವಾ?ಅನಿಸಿದ್ದರೆ ಈ ದಿಸೆಯಲ್ಲಿ ನೀವೇನಾದರು ದನಿಯೆತ್ತಿದ್ದೀರಾ? 13. ಇಷ್ಟೆಲ್ಲಾ ಖರ್ಚು ಮಾಡಿ ಗೆದ್ದ ಮೇಲೆ ಕಳೆದುಕೊಂಡ ಹಣವನ್ನು ಮರಳಿ ಗಳಿಸಲು ಏನೆಲ್ಲಾ ಮಾಡುತ್ತೀರಿ?  ಕೊನೆಯ ಪ್ರಶ್ನೆಗೆ ಕ್ಷಮೆಯಿರಲಿ: ಯಾಕೆಂದರೆ ನೀವು ಚುನಾವಣೆಗೆ ಖರ್ಚು ಮಾಡುತ್ತಿರುವು ಕಡಲೆಬೀಜಗಳಲ್ಲ ಲಕ್ಷಲಕ್ಷ ರೂಪಾಯಿಗಳು! ಉತ್ತರ ಕೊಡಲೇ ಬೇಕೆಂಬ ಕಡ್ಡಾಯವೇನಿಲ್ಲ.  ಇಂತಹ ಪ್ರಶ್ನೆಗಳನ್ನು ರಾಜಕಾರಣಿಗಳಿಗೆ ಕೇಳಿಕೇಳಿ ನಮಗೆ ಅಭ್ಯಾಸವಾಗಿ ಹೋಗಿದೆ……..ಆದರೆ ಕನ್ನಡ ಸಾಹಿತ್ಯ ಪರಿಷತ್ತಿನಂತಹ  ಸಂಸ್ಥೆಗೆ ಕಾಲಿಡಲು ಹೊರಟಿರುವ ತಮಗೆ  ಈ ಪ್ರಸ್ನೆಗಳ ಹಿಂದಿರುವ ಕಾಳಜಿಯನ್ನು ಅರ್ಥ ಮಾಡಕೊಳ್ಳುವ ಸೂಕ್ಷ್ಮತೆ ಇದೆಯೆಂದು ನಾವಂತೂ ನಂಬಿದ್ದೇವೆ ಇವೆಲ್ಲದರ ನಡುವೆಯೂ ಕನ್ನಡದ ಸೇವೆ ಮಾಡುವ  ತಮ್ಮ  ಉದ್ದೇಶಕ್ಕೆ ಶರಣು-ಶರಣು! ತಮ್ಮ ವಿಶ್ವಾಸಿಯಾದ ಕಸಾಪ ಮತದಾರ ******************************************** ಕು.ಸ.ಮಧುಸೂದನರಂಗೇನಹಳ್ಳಿ

ಕಸಾಪ ಅದ್ಯಕ್ಷಸ್ಥಾನದ ಅಭ್ಯರ್ಥಿಗಳಿಗಷ್ಟು ಪ್ರಶ್ನೆಗಳು! Read Post »

ನಿಮ್ಮೊಂದಿಗೆ

ಕೊರೆವ ನಡುಕವಂತೆ!

ಕವಿತೆ ಕೊರೆವ ನಡುಕವಂತೆ! ಸುವಿಧಾ ಹಡಿನಬಾಳ ಅವನ್ಯಾವನೊ ತಲೆಕಟ್ಟ ಸ್ವಾಮಿಯಂತೆಸ್ವಯಂ ಘೋಷಿತ ದೇವ ಮಾನವನಂತೆಬಿತ್ತಿದ ಇವರ ತಲೆಯಲಿ ಮೌಢ್ಯದ ಕಂತೆಕಲಿಯುಗದ ಅಂತ್ಯವಂತೆ ಸತ್ಯ ಯುಗದ ಆರಂಭವಂತೆಅದಕೆ ಮಾಡಬೇಕು ಮಕ್ಕಳ ಬಲಿದಾನವಂತೆ ಮುಠ್ಠಾಳ ತಾಯಿಯಿಂದಲೇ ಕುಡಿಗಳ ಕಗ್ಗೊಲೆಯಂತೆಇದಕೆ ತಂದೆಯ ಮೌನ ಸಾಥ್ ಅಂತೆಹೆಣಗಳ ಬಾಯಲಿ ಕಲಶ ಹೂಡಿದ್ದರಂತೆ!!ಮರುದಿನ ಮಕ್ಕಳ ಮರುಹುಟ್ಟಿಗೆ ಕಾದರಂತೆಮರಣೋತ್ತರ ಪರೀಕ್ಷೆಗೆ ಪ್ರತಿರೋಧವಂತೆ ಆ ತಾಯಿ ಬೇರೆ ಗೋಲ್ಡ್ ಮೆಡಲಿಸ್ಟಂತೆ!!!ಮಕ್ಕಳೂ ಡಿಗ್ರಿ ಮೆಟ್ಡಿಲೇರಿದ್ದವಂತೆಪಕ್ಕಾ ಇವರೆಲ್ಲರ ತಲೆಯೆಂಬುದು ಅಜ್ಞಾನದ ಬೊಂತೆಎತ್ತ ಸಾಗುತ್ತಿದೆ ವಿದ್ಯೆ ವಿಜ್ಞಾನ ಎಂಬ ಚಿಂತೆಕೇಳಿದವರ ಎದೆಯಲಿ ಕೊರೆವ ನಡುಕವಂತೆ!! ***************

ಕೊರೆವ ನಡುಕವಂತೆ! Read Post »

ಕಾವ್ಯಯಾನ, ನಿಮ್ಮೊಂದಿಗೆ

ಮೌನ ಹನಿಗಳು

ಕವಿತೆ ಮೌನ ಹನಿಗಳು ಸುಧಾ ಎನ್.ತೇಲ್ಕರ್ ೧ಹೊಂದಿಕೆಯಿರದ ಭಾವಗಳಲಿಮಾತು ಮದ್ದಳೆ ಬಾರಿಸಿತ್ತುಉಸಿರು ಬಿಗಿ ಹಿಡಿದ ಮೌನಸದ್ದಿಲ್ಲದೆ ಪಟ್ಟು ಬಿಗಿದಿತ್ತು ೨ಮೌನದ ಕಪ್ಪೆ ಚಿಪ್ಪಲ್ಲಿ ಅಡಗಿತ್ತುಮಾತಿನ ಸ್ವಾತಿ ಮುತ್ತುಕಣ್ರೆಪ್ಪೆಯಲಿ ಜಾರದೆ ಕುಳಿತಿತ್ತುಮಡುಗಟ್ಟಿದ ಹನಿ ಮುತ್ತು ೩ಮಾತಿನ ಚೂರಿ ಮೊನಚಿಗೆಹೃದಯ ರಕ್ತ ಒಸರಿತ್ತುನಿಟ್ಟುಸಿರಿನ ಮೌನವೇಗಾಯಕ್ಕೆ ಮುಲಾಮು ಸವರಿತ್ತು ೪ಮಾತು ಕಲಹದ ಹೊನಲಾಗಿಹರಿದಿತ್ತುಮೌನವೇ ಅದರ ರಭಸಕೆಆಣೆಕಟ್ಟು ಹಾಕಿತ್ತು ೫ಬೆಳ್ಳಿ ನುಡಿಗಳುತುಂಬಿದ್ದ ಖಜಾನೆಗೆಹಾಕಿತ್ತು ಚಿನ್ನದಮೌನದ ಬೀಗ ********************

ಮೌನ ಹನಿಗಳು Read Post »

ಇತರೆ, ನಿಮ್ಮೊಂದಿಗೆ

ಅಕ್ಷರದ ಅವ್ವ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ

ಲೇಖನ ಅಕ್ಷರದ ಅವ್ವ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಡಾ.ಸುಜಾತಾ.ಸಿ.                                     “ನೀನು ನಂಗೊAದು ರೊಟ್ಟಿ ಕೊಟ್ರೆ                                     ಒಂದು ದಿವ್ಸ ಹಸಿವನ್ನ ತೀರಿಸ್ದಂಗೆ                                     ರೊಟ್ಟಿಗಳಿಸೋದು ಹೆಂಗೇAತ ಕಲಿಸಿದ್ರೆ                                     ಗಳಿಸೋ ಅವಕಾಶ ಕಿತ್ಕಳೋ ತಂಕ                                     ನನ್ನ ಹಸಿವನ್ನ ತೀರ್ಸಿದಂಗೆ                                     ಅದೇ ನಿನೇನಾದ್ರೂ ವಿದ್ಯೆ ಕಲ್ಸಿ                                     ಒಗ್ಗಟ್ಟಾಗಿ ಹೋರಾಡೋದು ಕಲ್ಸಿದ್ಯಾ?                                     ಏನ್ಬೇಕಾದ್ರೂ ಆಗ್ಲಿ, ಯಾವ ಕಷ್ಟನಾದ್ರೂ ಬರಲಿ                                     ಎಲ್ಲ ಒಟ್ ಸೇರಿ                                     ನಮ್ ದಾರಿ ನಾವು ಹುಡುಕೋದ ಹೇಳಿಕೊಟ್ಟಂಗೆ” ಭಾರತದ ಮೊದಲ ಮಹಿಳಾ ಶಿಕ್ಷಕಿ ಹಾಗೂ ಅಪ್ಪಟ ಸ್ತ್ರೀವಾವಾದ ಚಿಂತಕಿ ಮಾತೆ ಸಾವಿತ್ರಿ ಭಾ ಫುಲೆ ಅವರಿಗೆ ಮಹಿಳೆಯರ ಬಗ್ಗೆ ಇದ್ದ ಕಾಳಜಿ ಮತ್ತು ಪ್ರೇಮ ಅವರ ಬದುಕು ಮತ್ತು ಬರಹದಲ್ಲಿ ಕಾಣಸಿಗುತ್ತದೆ. ಮೇಲಿನ ಕವಿತೆಯನ್ನು ನೋಡಿದರೆ ಮಹಿಳೆಯರಿಗೆ ಬಹಳ ಮುಖ್ಯವಾದುದು ಶಿಕ್ಷಣವೆಂಬುದನ್ನು ಸಾರಿ ಹೇಳುತ್ತದೆ. ಇಂತಹ ತಾಯಿಯನ್ನು ನಾವು ಪದೇ ಪದೇ ನೆನೆಯಬೇಕು ಹಾಗೇ ಅವಳ ಹೆಜ್ಜೆಯಲ್ಲಿಯೇ ನಮ್ಮ ಹೆಜ್ಜೆಗಳನ್ನು ಇಡುವದರಿಂದ ಮಾತ್ರ ಅವಳ ಹೋರಾಟಕ್ಕೆ ಸಾರ್ಥಕತೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಭಾರತೀಯರಿಗೆ ಅದರಲ್ಲೂ ಶೂದ್ರಾತಿಶೂದ್ರ ಬಹುಸಂಖ್ಯಾತರಿಗೆ ಹಾಗೂ ಭಾರತದ ಹೆಣ್ಣು ಮಕ್ಕಳಿಗೆ ವಿದ್ಯೆ ಕಲಿಸಲು ತನ್ನ ಇಡೀ ಜೀವನವನ್ನೇ ಮುಡುಪಾಗಿಟ್ಟು ಅಕ್ಷರ ಬೀಜವನ್ನು ಬಿತ್ತಿ ಕ್ರಾಂತಿಯನ್ನೇ ಹುಟ್ಟು ಹಾಕಿದ ದಿಟ್ಟ ಮಹಿಳೆ ಅವ್ವ ಸಾವಿತ್ರಿ ಬಾಯಿ ಫುಲೆ. ಸಾವಿತ್ರಿ ಬಾಯಿ ಅವರು ಬಡ ರೈತ ಕುಟುಂಬದಲ್ಲಿ ಶಿರವಳ ಹತ್ತಿರವಿರುವ ನಾಯಗಾವ ಎಂಬ ಹಳ್ಳಿಯಲ್ಲಿ ಝಗಡ ಪಾಟೀಲರ ಮಗಳಾಗಿ ೩ ನೇ ಜನೇವರಿ ೧೮೩೧ ರಲ್ಲಿ ಜನಿಸಿದರು. ಸಾವಿತ್ರಿಬಾಯಿ ಅವರಿಗೆ ಎಂಟು ವರುಷವಿರುವಾಗ ಗೋವಿಂದರಾವ್ ಅವರ ಮಗ ಜ್ಯೋತಿ ಬಾ ಫುಲೆ ಅವರಿಗೆ ಹದಿಮೂರು ವರ್ಷ ಇರುವಾಗ ವಿವಾಹ ಮಾಡುತ್ತಾರೆ. ಸಾವಿತ್ರಿಬಾಯಿ ಹುಟ್ಟಿದ ಊರಲ್ಲಿ ಶಿಕ್ಷಣದ ಪರಂಪರೆ ಇರಲಿಲ್ಲ. ಅನಕ್ಷರಸ್ಥಳಾದ ಸಾವಿತ್ರಿಯನ್ನು ಮದುವೆಯಾವ ಜ್ಯೋತಿಭಾ ಅಕ್ಷರ ಕಲಿಸಲು ಒರ್ವ ಶಿಕ್ಷಕನನ್ನು ನೇಮಿಸುತ್ತಾರೆ. ಆ ಶಿಕ್ಷಕರು ಕೇಶವ ಶಿವರಾಮ ಭಾವಳ್ಕರ ಎಂಬುವವರು. ಸಾವಿತ್ರಿಬಾಯಿಯವರಿಗೆ ಕಲಿಸಲು ಒಪ್ಪಿಕೊಂಡು ಅಕ್ಷರದ ಅಭ್ಯಾಸವನ್ನು ಮಾಡಿಸುತ್ತಾರೆ. ಹಾಗೆ ಸಮಯ ಸಿಕ್ಕಾಗ ಜ್ಯೋತಿಬಾಫುಲೆ ಅವರು  ಕೂಡಾ ಪಾಠ ಮಾಡಲು ಅಣಿಯಾಗುತ್ತಿದ್ದರು. ಇದರಿಂದ ಸಾವಿತ್ರಿಬಾಯಿ ಫುಲೆ ಅವರು ಸಂಗಾತಿ ಜ್ಯೋತಿಬಾಫುಲೆ ಅವರ ಹೆಗಲಿಗೆ ಹೆಗಲು ಕೊಟ್ಟು ಕ್ರಾಂತಿಯ ಜ್ಯೋತಿಯನ್ನು ಹಚ್ಚಲು ಕಾರಣವಾಯಿತು. ಸಮಾಜದ ಅನೇಕ ಮೌಢ್ಯಗಳನ್ನು ಶಿಕ್ಷಣದ ಅರಿವಿನ ಮೂಖಾಂತರ ಹೊರದೂಡುವ ಕೆಲಸವನ್ನು ದಂಪತಿಗಳು ಮಾಡಿದರು. ಅಕ್ಷರ ಕಲಿತ ಸಾವಿತ್ರಿಯವರು ಸುಮ್ಮನೆ ಕೂಡುವ ಜಾಯಮಾನದವಳಾಗಿರದೇ ತಮ್ಮ ಮನೆಯನ್ನೇ ಮೊಟ್ಟ ಮೊದಲಿಗೆ ಶಾಲೆಯನ್ನಾಗಿ ಮಾಡಿ ಗಂಡ ಹೆಂಡತಿ ಇಬ್ಬರು ಸೇರಿ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸುತ್ತಾರೆ. ಜ್ಯೋತಿಬಾ ಅವರಿಗೆ ಹಿಂದೂ ಸ್ತ್ರೀಯರಿಗೆ ವಿಮೋಚನೆ ಮಾಡುವದು ಪ್ರಥಮ ಆದ್ಯ ಕರ್ತವ್ಯವೆಂದು ತಿಳಿದು ಎಲ್ಲ ಹೆಣ್ಣು ಮಕ್ಕಳ ಹಾಗೂ ಶೂದ್ರರಿಗೆ ಶಿಕ್ಷಣವನ್ನು ಕೊಡಲು ನಿರ್ಧರಿಸುತ್ತಾರೆ. ಒಂದು ದಿನ ಜ್ಯೋತಿಬಾ ಫುಲೆ ಅವರು ಮಿಸ್ ಫೆರಾರ್ ಅವರು ನಗರದಲ್ಲಿ ಅಮೇರಿಕನ್ ಮಿಷನ್ ನಡೆಸುತ್ತಿದ್ದ ಹೆಣ್ಣು ಮಕ್ಕಳ ಶಾಲೆಗೆ ಭೇಟಿ ನೀಡುತ್ತಾರೆ. ಅಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ವ್ಯವಸ್ಥೆಯನ್ನು ನೋಡಿ ತಾವು ಕೂಡ ಹಾಗೆ ಶಿಕ್ಷಣವನ್ನು ಕೊಡಿಸಬೇಕು ಎಂದು ಅವರನ್ನು ನೋಡಿ ಬಹಳವಾಗಿ ಪ್ರಭಾವಿತರಾಗುತ್ತಾರೆ. ೧೮೪೮ ರಲ್ಲಿ ಕೆಳಜಾತಿಯ ಹೆಣ್ಣು ಮಕ್ಕಳ ಶಾಲೆಯನ್ನು ಪ್ರಾರಂಭಿಸುತ್ತಾರೆ. ಸಂಪ್ರದಾಯವಾದಿಗಳಿಂದ ಈ ಶಾಲೆ ಬಹುಬೇಗ ಮುಚ್ಚಿ ಹೋಗುತ್ತದೆ. ಮರಳಿ ಪ್ರಯತ್ನ ಮಾಡು ಎಂಬಂತೆ ಪುಣಿಯ ಬುಧವಾರ ಪೇಟೆಯಲ್ಲಿರುವ ಬಿಢೆ ಎಂಬುವರ ಮನೆಯಲ್ಲಿ ಶಾಲೆಯನ್ನು ತೆರೆಯುತ್ತಾರೆ. ಅಹಮ್ಮದ ನಗರದ ಮಿಸ್ ಫರಾರ್ ಫಾರ್ಮಲ್ ಸ್ಕೂಲಿಗೆ ಶಿಕ್ಷಕ ತರಬೇತಿ ಪಡೆದುಕೊಳ್ಳಲು ಕಳಿಸುತ್ತಾರೆ. ಅದೇ ಶಾಲೆಯಲ್ಲಿ ಫಾತಿಮಾ ಶೇಕ್ ಎಂಬಾಕೆಯೂ ಕೂಡಾ ಕಲಿಯುತ್ತಿರುತ್ತಾರೆ. ಸಾವಿತ್ರಿಬಾಯಿ ಫುಲೆ ಅವರ ಕನಸಿಗೆ ನೀರೆಯುವಂತೆ ಫಾತಿಮಾಳು ಕೂಡಾ ಶಿಕ್ಷಕ ವೃತ್ತಿಯನ್ನು ಸಾವಿತ್ರಿಬಾಯಿ ಅವರ ಜೊತೆಗೂಡಿ ಕೆಲಸದಲ್ಲಿ ತೊಡಗಿಸಿಕೊಂಡರು. ಸಾವಿತ್ರಿ ಬಾಯಿ ಫುಲೆ ಅವರ ಶಿಕ್ಷಕ ವೃತ್ತಿ ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಶಾಲೆ ಪ್ರಾರಂಭಿಸಿದ ಮೊದಲಲ್ಲಿ ಎಂಟು ಜನ ಹೆಣ್ಣು ಮಕ್ಕಳು ಮಾತ್ರ ಪ್ರವೇಶವನ್ನು ಪಡೆದುಕೊಂಡಿದ್ದರು. ನಂತರದ ದಿನದಲ್ಲಿ ನಲವತ್ತೇಂಟು ಜನರಿಂದ ಶಾಲೆ ಕಂಗೊಳಿಸಹತ್ತಿತ್ತು. ಅದೇ ಶಾಲೆಗೆ ಸಾವಿತ್ರಿಬಾಯಿ ಫುಲೆಯವರನ್ನು ಮುಖ್ಯ ಶಿಕ್ಷಕಿಯನ್ನಾಗಿ ನೇಮಿಸಿಕೊಳ್ಳಲಾಯಿತು. ನಿರಂತರವಾಗಿ ಶಾಲೆಯ ಅಭಿವೃದ್ಧಿಗಾಗಿ ಹಗಲಿರುಳು ದುಡಿದು ಶೈಕಣಿಕವಾಣಿ ಉತ್ತಮ ಪ್ರಗತಿಯನ್ನು ಸಾಧಿಸಲು ಸಫಲತೆಯನ್ನು ಪಡೆಯಿತು. ಆ ಶಾಲೆಗೆ ಬರುವವರೆಲ್ಲರೂ ಕಡು ಬಡತನದಲ್ಲಿ ಇದ್ದ ಹೆಣ್ಣು ಮಕ್ಕಳು.ಶೂದ್ರರು ದಮನಿತರು. ಇತಂಹ ಪರಿಸ್ಥಿತಿಯಲ್ಲಿ ಶಾಲೆಗೆ ದುಡ್ಡು ಖರ್ಚು ಮಾಡುವದು ಹರಸಾಹಸವೇ ಆಗಿತ್ತು. ಅದನ್ನು ಅರಿತ ಫುಲೆ ದಂಪತಿಗಳು ಹೆಣ್ಣು ಮಕ್ಕಳಿಗೆ ಊಟ,ಸಮವಸ್ತç, ಆಟಕ್ಕೆ ಬೇಕಾದ ಸಾಮಿಗ್ರಿಗಳ ವ್ಯವಸ್ಥೆಯನ್ನು ಮಾಡಿದರು. ಅಲ್ಲದೆ ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆದುಕೊಂಡುಬರಲು ಮತ್ತು ಮತ್ತೇ ಮರಳಿ ಮನೆಗೆ ಕಳಿಸಲು ಸರಿಯಾದ ವ್ಯವಸ್ಥೆಯನ್ನು ಮಾಡಿದರು. ಇದರಿಂದ ಅದೆಷ್ಟೋ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕಲಿಯಲು ಸಹಾಯವಾಯಿತು.  ಶೂದ್ರರು ಶಾಲೆಗೆ ಹೋಗಿ ಅಕ್ಷರ ಜ್ಞಾನ ಪಡೆದು ಕೊಳ್ಳುವುದನ್ನು ಸಹಿಸದ ಕೆಲ ಜಾತಿವಾದಿ ಪುಣಿಯ ಬ್ರಾಹ್ಮಣರು ವಿರೋಧಿಸಿದರು. ಜ್ಯೋತಿಬಾ ಫುಲೆ ಅವರಿಗೆ ಬೇದರಿಕೆಗಳನ್ನು ಹಾಕಿದರು ಆದರೆ ಇಂತಹ ಗೊಡ್ಡು ಬೇದರಿಕೆಗೆ ಹೆದರದೆ ತಮ್ಮ ಗುರಿ ಮತ್ತು ಉದ್ದೇಶವನ್ನು ಫುಲೆಯವರು ಬಿಡಲಿಲ್ಲ. ಒಂದು ಕ್ಷಣ ಇಂದಿನ ಪರಿಸ್ಥಿತಿಯಲ್ಲಿ ನಾವು ನೋಡಿದರೆ ಅಂದು ಫುಲೆ ಅವರು ತಾವು ಮಾಡುವ ಕೆಲಸದಿಂದ ಒಂದು ಹೆಜ್ಜೆ ಹಿಂದೆ ಸರಿದಿದ್ದರೆ ಎಲ್ಲ ಹೆಣ್ಣು ಮಕ್ಕಳ ಪರಿಸ್ಥಿತಿ ಏನಾಗುತ್ತಿತ್ತು ಎಂದು ವಿಚಾರಿಸಿದರೆ ಮೈಯೆಲ್ಲ ನಡುಕ ಹುಟ್ಟುತ್ತದೆ. ಪರಿಸ್ಥಿತಿ ತುಂಬಾ ಹದಗೆಟ್ಟು ಕಲಿಸಲು ಬಂದ ಶಿಕ್ಷಕರನ್ನು ಕೂಡಾ ಬೆದರಿಸಿ ಹೆದರಿಸಿ ಅವರನ್ನು ಶಾಲೆಗೆ ಬರದಂತೆ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಾವಿತ್ರಿಬಾಯಿಯವರನ್ನೇ ಮನೆಯಲ್ಲಿಯೇ ಪಾಠ ಮಾಡಲು ನೇಮಿಸಿಕೊಳ್ಳುತ್ತಾರೆ. ಇದನ್ನು ಅರಿತ ಇಡೀ ಪುಣಿ ತಲ್ಲಣಕ್ಕೆ ಇಡಾಗುತ್ತದೆ. ಮಹಿಳೆಯಾದವಳು ಮನೆಯಿಂದ ಹೊರಹೋಗಿ ಶಿಕ್ಷಕಿಯಾಗಿ ಕೆಲಸ ಮಾಡುವುದು ಮಹಾ ಅಪರಾಧವೆಂಬAತೆ ಸಂಪ್ರದಾಯಸ್ಥರೆಲ್ಲರೂ ವಿರೋದ ವ್ಯಕ್ತಪಡಿಸುತ್ತಾರೆ. ಇದು ರಾಷ್ಟಿçÃಯ ಗೌರವಕ್ಕೆ ಮಾಡಿದ ಅಪಮಾನವೆಂದು, ಇಂತಹ ಕೆಲಸ ಅಪವಿತ್ರವೆಂದು ಬ್ರಾಹ್ಮಣರು ಸಾವಿತ್ರಿಬಾಯಿಯವರು ಶಾಲೆಗೆ ಹೋಗುವಾಗ ಅವರ ಮೇಲೆ ಮಣ್ಣು, ಸೆಗಣಿಯನ್ನು ಎಸೆಯುತ್ತಾರೆ ದೃತಿಗೆಡದ ಸಾವಿತ್ರಿಬಾಯಿ ಅವರು “ದೇವರು ನಿಮಗೆ ಒಳ್ಳೆಯದು ಮಾಡಲಿ, ಅವನು ನಿಮ್ಮನ್ನು ಕ್ಷಮಿಸಲಿ, ನನ್ನ ಕರ್ತವ್ಯವನ್ನು ನಾನು ನಿರ್ವಹಿಸುತ್ತಿದ್ದೇನೆ” ಎಂದು ಸಾವಿತ್ರಿಬಾಯಿಯವರು ತಮ್ಮ ಮೇಲೆ ಸೆಗಣಿ ಎಸೆದವರಿಗೆ ಒಳ್ಳೆಯದಾಗಲಿ ಎಂದು ದೇವರನ್ನು ಪ್ರಾರ್ಥಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಾವಿತ್ರಿಬಾಯಿ ಅವರು ಶಾಲೆಗೆ ಹೋಗುವಾಗ ತಮ್ಮ ಕೈಯಲ್ಲಿ ಒಂದು ಸೀರೆಯನ್ನು ಹಿಡಿದುಕೊಂಡು ಹೋಗುತ್ತಿದ್ದರು ಶಾಲೆ ಪ್ರವೇಶಿಸಿದ ನಂತರ ಸೆಗÀಣಿಯ ಸೀರೆಯನ್ನು ಕಳಚಿ ಕೈಯಲ್ಲಿ ತಂದ ಮತ್ತೋಂದು ಸೀರೆಯನ್ನು ಊಡುತ್ತಿದ್ದರು. ಯಾವದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಪತಿಯ ಸಹಾಯದಿಂದ ಕೆಲಸದಲ್ಲಿ ನಿರತರಾಗುತ್ತಾರೆ. ಸಾವಿತ್ರಿಬಾಯಿಯವರು ಸ್ತ್ರೀಯರ ಸುಧಾರಣಿಗಾಗಿ ಜ್ಯೋತಿರಾವರ ಮಾರ್ಗದರ್ಶನದಲ್ಲಿ “ಮಹಿಳಾ ಸೇವಾ ಮಂಡಳ”ವನ್ನು ಸ್ಥಾಪನೆ ಮಾಡುತ್ತಾರೆ. ಪುಣಿಯ ಕಲೆಕ್ಟರ್ ಅವರ ಪತ್ನಿ ಇ.ಸಿ.ಜೋನ್ಸ ಎಂಬುವರು ಮಹಿಳಾ ಸೇವಾ ಮಂಡಳ ಸಂಸ್ಥೆಯ ಅಧ್ಯಕ್ಷರಾಗುತ್ತಾರೆ. ಮಹಿಳೆಯರನ್ನೆಲ್ಲಾ ಒಟ್ಟು ಗೂಡಿಸಲು ೧೮೫೨ ರಲ್ಲಿ ದೊಡ್ಡ ಪ್ರಮಾಣದ ಎಳ್ಳುಬೆಲ್ಲ ಹಂಚುವ ಕಾರ್ಯಕ್ರಮ ಹಮ್ಮಿಕೊಂಡು ಎಲ್ಲ ಹೆಣ್ಣು ಮಕ್ಕಳಿಗೆ ಕುಂಕುಮವನ್ನು ವಿತರಿಸಿ ಅವರಿಗೆಲ್ಲ ಊಡಿಯನ್ನು ತುಂಬುತ್ತಾರೆ. ೧೮೭೧ ರಲ್ಲಿ ಸ್ತ್ರೀ ವಿಚಾರವತಿ’ ಸಭಾ ಸ್ಥಾಪನೆ ಮಾಡುತ್ತಾರೆ. ಆ ಕಾಲದಲ್ಲಿ ಬ್ರಾಹ್ಮಣ ಸ್ತ್ರೀಯರಿಗೆ ಹೆಚ್ಚಿನ ತೊಂದರೆ ಇತ್ತು. ಅದರಲ್ಲಿ ವಿಧವೆಯರಾದರೆ ಅನೇಕ ಬ್ರಾಹ್ಮಣ ಮನೆತನದ ಮಾವ, ಮೈದುನ ಮುಂತಾದವರು ಅವರ ಮೇಲೆ ಬಲಾತ್ಕಾರ ಮಾಡುತ್ತಿದ್ದರು. ಲೈಂಗಿಕ ಶೋಷಣೆ ಮಾಡುತ್ತಿದ್ದರು. ಇದರ ಪರಿಣಾಮವಾಗಿ ಅವರಿಗೆ ಮಕ್ಕಳಾದರೆ ‘ಬಾಲ ಹತ್ಯೆ’ ಮಾಡುತ್ತಿದ್ದರು. ಇಲ್ಲವೇ ಗರ್ಭವತಿಯಾದರೆ ಸ್ವತಃ ಅವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಇವೆಲ್ಲವನ್ನೂ ತಡೆಗಟ್ಟುವ ಉದ್ದೇಶದಿಂದ ಜ್ಯೋತಿಭಾರವರು ‘ಬಾಲಹತ್ಯಾ ಪ್ರತಿಬಂಧಕ ಗೃಹ’ ಸ್ಥಾಪಿಸಿದರು. ತರುಣ ಬ್ರಾಹ್ಮಣ ವಿಧವೆಯರಿಗೆ ಈ ಗೃಹ ದೊಡ್ಡ ಆಧಾರವಾಗಿತ್ತು. ೧೮೬೩ರಲ್ಲಿ ಸ್ವಂತ ಮನೆಯಲ್ಲಿ ಸ್ಥಾಪಿಸಿದ ಅನಾಥ ಬಾಲಶ್ರಮವನ್ನು ಸಾವಿತ್ರಿಯವರು ೩೫ ಜನರಿಗೆ ಬಾಣಂತನವನ್ನು ಮಾಡಿದರು. ಸವರ್ಣೀಯ ವಿಧವೆಯರು ಅವರ ಸೇವೆ ಮಾಡುವಾಗ ಸಾವಿತ್ರಿಭಾಯಿಯವರಿಗೆ ಅದು ಎಂದು ಕೀಳಾಗಿ ತೋರಲಿಲ್ಲ. ೧೮೭೩ರಲ್ಲಿ ಕಾಶೀಬಾಯಿ ಎಂಬ ಬ್ರಾಹ್ಮಣ ವಿಧವೆಯ ಇಂತಹದೇ ಸಂಬಂಧದಿಂದ ಹುಟ್ಟಿದ ಮಗನನ್ನು ಜ್ಯೋತಿಬಾಪುಲೆ ಮತ್ತು ಸಾವಿತ್ರಿಬಾಯಿಪುಲೆ ದತ್ತು ತೆಗೆದುಕೊಳ್ಳುತ್ತಾರೆ. ಆ ಮಗುವಿಗೆ ಯಶವಂತ ಅಂತಾ ನಾಮಕರಣ ಮಾಡುತ್ತಾರೆ. ಅನನ್ನು ಎಂ.ಬಿ.ಬಿ.ಎಸ್ ಓದಿಸಿ ಡಾಕ್ಟರರನ್ನಾಗಿ ಮಾಡುತ್ತಾರೆ.ಹೀಗೆ ಮಹಿಳೆಯರಿಗಾಗಿ ವಿಧವೆಯರ ಪುನರ್ವಸತಿ, ವಿಧವಾ ಅನಾಥಾಶ್ರಮವನ್ನು ಕೂಡಾ ಸ್ಥಾಪಿಸುತ್ತಾರೆ. ಪುಲೆಯವರು ಸ್ಥಾಪಿಸಿದ್ದ ವಿಧವಾ ಅನಾಥಾಲಯವು ದೇಶದಲ್ಲಿಯೇ ಸ್ಥಾಪಿಸಿದ ಪ್ರಥಮ ಸಾಮಾಜಿಕ ಸಂಸ್ಥೆಯಾಗಿದ್ದಿತು. ೧೮೬೮ರಲ್ಲಿ ತಮ್ಮ ‘ನೀರಿನಬಾವಿ’ಯನ್ನು ಕೆಳಜಾತಿಗಳಿಗೆ ಮುಕ್ತಗೊಳಿಸಿ ಬಿಡುತ್ತಾರೆ. ಇದರಿಂದ ಎಷ್ಟೋ ಕೆಳವರ್ಗದವರಿಗೆ ನೀರು ಸಿಕ್ಕಂತಾಗುತ್ತದೆ. ಶಿಕ್ಷಣ ನೀಡುವ ದಾಹವು ಪುಲೆಯವರು ವಯಸ್ಕ ರೈತರು  ಮತ್ತು ದುಡಿಯುವವರಿಗಾಗಿ ರಾತ್ರಿ ಶಾಲೆಯನ್ನು ಪ್ರಾರಂಭಿಸುವAತೆ ಮಾಡಿತು. ತಮ್ಮ ಮನೆಯಲ್ಲಿ ರಾತ್ರಿ ಶಾಲೆಯನ್ನು ಪ್ರಾರಂಭಿಸಿ ಪ್ರತಿದಿವಸ ೨ ಗಂಟೆಗಳ ಕಾಲ ತಾವು ಮತ್ತು ತಮ್ಮ ಪತ್ನಿ ಸಾವಿತ್ರಿಬಾಯಿ ಪುಲೆಯವರು ‘ಅಶಿಕ್ಷಿತ ವಯಸ್ಕ, ರೈತರರಿಗೆ ಶಿಕ್ಷಣವನ್ನು ನೀಡುತ್ತಿದ್ದರು. ನಿರಂತರ ಹೋರಾಟದಿಂದ ೭೩ ವರ್ಷದ ಮಹಾತ್ಮ ಜ್ಯೋತಿಬಾಪುಲೆಯವರು ಧೀರ್ಘ ಅನಾರೋಗ್ಯದಿಂದ ೧೮೯೦ರಲ್ಲಿ ನವೆಂಬರ್ ೨೮ರಂದು ನಿಧನರಾದರು. ಮಕ್ಕಳಾಗದ ದಂಪತಿಗಳಾಗಿದ್ದರಿAದ ದತ್ತು ಪುತ್ರ ಯಶವಂತನಿಗೆ ಸಂಸ್ಕಾರ ಮಾಡಲು ಕುಟುಂಬದವರು ಒಪ್ಪದೇ ಇದ್ದಾಗ ಸ್ವತಃ ಕೈಯಲ್ಲಿ ದಿವಟಿಯನ್ನು ಹಿಡಿದು ಜ್ಯೋತಿಯವರ ಅಂತ್ಯ ಸಂಸ್ಕಾರ ಮಾಡಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಪುಲೆ. ಹಾಗೇ ಅವರು ತಮ್ಮ ಇಡೀ ಜೀವನದ ಉದ್ದಕ್ಕೂ ಹೆಣ್ಣುಮಕ್ಕಳಿಗಾಗಿ ಮತ್ತು ಅಶ್ಪೃಶ್ಯರಿಗಾಗಿ ಶಾಲೆ ಪ್ರಾರಂಭಿಸಿದರು. ಬಾಲಹತ್ಯಾ ಪ್ರತಿಬಂಧಕ ವಿಧವಾ ಅನಾಥಾಶ್ರಮ, ಕೂಲಿಕಾರ ರೈತರಿಗಾಗಿ ರಾತ್ರಿಶಾಲೆ, ಬಡವರಿಗಾಗಿ ಅನ್ನಛತ್ರಗಳನ್ನು ತೆರೆದರು. ಬ್ರಾಹ್ಮಣ ವಿಧವೆಯರ ತಲೆಬೋಳಿಸುವುದನ್ನು ವಿರೋಧಿಸಿದರು. ದೇವದಾಸಿ ಪದ್ಧತಿ ನಿರ್ಮೂಲನೆ ಮಾಡುವ ಪ್ರಯತ್ನದಲ್ಲಿ ತೋಡಗಿದರು. ಹೀಗೆ ಎಲ್ಲ ರೀತಿಯ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಮೊದಲ ಮಹಿಳೆ ಸಾವಿತ್ರಿಬಾಫುಲೆ ಎಂದರೆ ತಪ್ಪಾಗಲಾರದು. ಒಟ್ಟಾರೆಯಾಗಿ ಸಮಾಜದ ಎಲ್ಲ ಅನಿಷ್ಟಗಳಿಗೂ ಕಾರಣವಾದ ಜಾತಿಪದ್ಧತಿ ಅಳಿಯಬೇಕೆಂದು ಜಾಲ್ತಿಯಲ್ಲಿದ್ದ ಬಹುಪಾಲು ವ್ಯವಸ್ಥೆ ಆಚರಣೆ ನಂಬಿಕೆಗಳಿಗೆ ಸವಾಲೆಸೆದರು. ಶಿಕ್ಷಣ ಎಲ್ಲರ ಹಕ್ಕು ಎಂದು ಸಾರಿ ಶಾಲೆಯನ್ನು ತೆರೆದರು ಪುರೋಹಿತರಿಲ್ಲದೆ ಮದುವೆ ಮಾಡಿಸಿದರು. ಬಹುಪತ್ನಿತ್ವವನ್ನು ವಿರೋಧಿಸಿದರು. ವಿಧವೆಯರ ಮಾನವ ಹಕ್ಕುಗಳ ಎತ್ತಿ ಹಿಡಿದು ಮರು ವಿವಾಹವನ್ನು ಪ್ರತಿಪಾದಿಸಿದರು. ಸತ್ಯಶೋಧಕ ಸಮಾಜ ಕಟ್ಟಿದರು. ತಮಗೆ ತಿಳಿದಂತೆ ಕವಿತೆಗಳನ್ನು ಬರೆದರು. ಎಲ್ಲ ಧರ್ಮಗಳ ಶಾಸ್ತç-ಪುರಾಣ-ಗ್ರಂಥಗಳ ನಿರಾಕರಿಸಿ ಸಾರ್ವಜನಿಕ ಸತ್ಯ ಧರ್ಮ ಪ್ರತಿಪಾದಿಸಿ ಹೊಸ ಹೊಸ ಗ್ರಂಥಗಳನ್ನು ರಚಿಸಿ ಓದುಗರ ಮನಸ್ಸನ್ನು ಸೋರೆಗೊಂಡ ಮಹಾನ್ ಕ್ರಾಂತಿಕಾರಿ ತಾಯಿಯಾಗಿ ನಮಗೆಲ್ಲ ಮಾರ್ಗದಾತೆಯಾದವರು. ಇಂತಹ ಮಾತೆ ಸಾವಿತ್ರಿಬಾಯಿಯವರ ಕಲಿಸಿದ ಪಾಠದ ಪರಿಣಾಮವಾಗಿ ಹದಿನಾಲ್ಕು ವರ್ಷದ ‘ಮುಕ್ತಾ’ ಎಂಬ ಹುಡಗಿ ೧೫ನೇ ಫೆಬ್ರುವರಿ ೧೮೫೫ ರಿಂದ ೯ ಮಾರ್ಚ ೧೮೫೫ ರ ಜ್ಞಾನೋದಯ ಎಂಬ ಪತ್ರಿಕೆಯ ಅಂಕಣದಲ್ಲಿ ‘ಹೊಲೆಯ ಮಾದಿಗರ ದುಖಃಗಳು’ ಎಂಬ ಪ್ರಬಂಧ ಪ್ರಕಟವಾಗುತ್ತದೆ. ಇದೆಲ್ಲದರ ಪರಿಣಾಮವಾಗಿ  ಅವರು ಕಟ್ಟಿದ ಕನಸು ನನಸಾಗಲು ಬಹಳ ಸಮಯ ಹಿಡಿಯುವದಿಲ್ಲ. ೧೮೪೮ ರಿಂದ ೧೮೫೨ರ ಅವಧಿಗೆ ೧೮ ಶಾಲೆಗಳನ್ನು ತೆರೆಯುತ್ತಾರೆ. ಇದರಿಂದ ನಮಗೆಲ್ಲಾ ತಿಳಿದು ಬರುವ

ಅಕ್ಷರದ ಅವ್ವ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ Read Post »

You cannot copy content of this page

Scroll to Top