ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಭಾರತಿ ಅಶೋಕ್‌ “ಶಿಲುಬೆಗೇರಿಸುವ ಕಾಲ”

ಕಾವ್ಯ ಸಂಗಾತಿ ಭಾರತಿ ಅಶೋಕ್‌ “ಶಿಲುಬೆಗೇರಿಸುವ ಕಾಲ” ಅವಳುದಿನವೂ ಶಿಲುವೆಗೇರುತ್ತಾಳೆಸಂಸಾರ ಬಂಡಿಯ ನೊಗವ ಕತ್ತಿಗೆಬಿಗಿದುಕೊಂಡು. ಕತ್ತು ಬಗ್ಗಿಸಿಒಮ್ಮೆ ದೀರ್ಘ ಉಸಿರೆಳೆದು ಸುಧಾರಿಸಿಕೊಳ್ಳಲಾಗದಭಾರ ಹೊತ್ತು ಎಳೆಯುತ್ತಲೇ ಇದ್ದಾಳೆ ಬಂಡಿಯ ಅವಳಿಗೆಮೈ ತುಂಬಾ ಕೈಗಳು, ಕೈಗೊಂದರಂತೆ ಜವಬ್ಧಾರಿಯಮೊಳೆ ಹೊಡೆಯಲಾಗಿದೆ ಅದಕವಳ ತಕರಾರಿಲ್ಲ ಶತಮಾನಗಳಿಂದಅವಳ ದೇಹ ಮನಸ್ಸುಗಳ ಮೇಲೆಕ್ರೌರ್ಯ ಮೆರೆದವರನವಳು ಶಿಲುಬೆಗೇರಿಸುವಕಾಲ ಈಗ ಸನ್ನಿಹಿತವಾಗಿದೆ. ಭಾರತಿ ಅಶೋಕ್

ಭಾರತಿ ಅಶೋಕ್‌ “ಶಿಲುಬೆಗೇರಿಸುವ ಕಾಲ” Read Post »

ಕಾವ್ಯಯಾನ

ಪರವಿನ ಬಾನು ಯಲಿಗಾರ ಅವರ “ನಾರಿ”

ಕಾವ್ಯ ಸಂಗಾತಿ ಪರವಿನ ಬಾನು ಯಲಿಗಾರ “ನಾರಿ” ನೀನೇಷ್ಟುಸಾಧಿಸಿದರೆನು ,ತಪ್ಪುತ್ತಿಲ್ಲವಲ್ಲ  ನಿನ್ನ ಮೇಲಿನ ದೌರ್ಜನ್ಯ . ನೀನೇಷ್ಟು ಓದಿದರೆನು , ನಿನ್ನ ಪಾಲಿನನ್ಯಾಯಕ್ಕಗಿ ನಿ ಹೋರಾಡುವುದು ತಪ್ಪಲಿಲ್ಲ. ನೀನ್ಯಾವ  ಅಧಿಕಾರ ಪಡೆದರೇನು ,ನಿನಗೇ ರಕ್ಷಣೆ ಇನ್ನೂ ಸಿಕ್ಕಿಲ್ಲ . ನೀನೆಷ್ಟು ಹಕ್ಕಿನ ಪಾಠ ಮಾಡಿದರೇನು ,ನಿನ್ನ ಮನೆಯಲ್ಲೇ ನಿನ್ನ ಹಕ್ಕು ಗೌಣ . ನಿನಗೆಷ್ಟು ಪದವಿ ಪುರಸ್ಕಾರ ದಕ್ಕಿದರೇನು ,ನಿನಾಗಿರುವೆ ಮತ್ತೊಬ್ಬರ ಅಡಿಯಾಳು . ನೀ ಛಾಪು ಮೂಡಿಸಿದರೆನು ,ಅನ್ಯ ಗೃಹದಲ್ಲಿ ಕಾಲೂರಿ ,ನಿನಗೇ  ನೆಲೆ ಇಲ್ಲ  , ನೀ ಇರುವಲ್ಲಿ . ನೀನಾಗಿರುವೆ ಯಾವಾಗಲೂ ದ್ವಿತೀಯಳು ,ಆದರೆ  , ಆದ್ವಿತೀಯಳಾಗುವ ದಿನ ಬಂದೆ ಬರುವುದು ,  ಒಂದು ದಿನ ….. ——————— ಪರವೀನ ಬಾನು ಯಲಿಗಾರ

ಪರವಿನ ಬಾನು ಯಲಿಗಾರ ಅವರ “ನಾರಿ” Read Post »

ಕಾವ್ಯಯಾನ

ಸತೀಶ್ ಬಿಳಿಯೂರು “ನನ್ನೊಲವಿನ ಪಯಣ”

ಕಾವ್ಯ ಸಂಗಾತಿ ಸತೀಶ್ ಬಿಳಿಯೂರು “ನನ್ನೊಲವಿನ ಪಯಣ” ಸನಿಹ ಬಾ ಮೌನವೆಲ್ಲ ತೊರೆದುಭಾವಗಳ ಪಥವನ್ನು ತುಳಿದುಒಲವಲ್ಲಿ ನಗುವನ್ನು ಕರೆದುಒಡಲನ್ನು ಸೇರು ಬಂಧ ಬೆಸೆದು ಬದುಕೊಳಗೆ ನೀನಿರಬೇಕು ಒಲವೆಹೃದಯದ ಕದ ತಟ್ಟು ಬೇಗ ಚೆಲುವೆತವಕಿಸುತಿಹುದು ಈ ನನ್ನ ಮನವೆಬಾಗಿಲಲ್ಲಿ ಕಾದು ನಿಂತಿಹೆನು ನೀ ನನ್ನ ಜಗವೆ ಕಣ್ಣ ಅಪ್ಪುವ ಕನಸುಗಳು ಬಳಿಯಿರಲುಆಸೆ ಬಯಕೆ ನಿತ್ಯ ಜೊತೆಯಿರಲುಇನ್ನೂ ಎಷ್ಟು ದಿನ ನೀನೊಂದು ತೀರದೇವರೇ ಗೀಚಿದ ಸಂಬಂಧವೇ ಸುಮಧುರ ನಮ್ಮಿಬ್ಬರ ಬಾಳ ಪಯಣ ಹೊರಡಲಿಸಂತೋಷ ತುಂಬಿರೋ ದಾರಿಯಲಿನನಸಿನ ರಥ ಮುಂದೆ ಮುಂದೆ ಸಾಗಲಿಎಡವದಿರುವ ಜೀವನದ ಪಥದಲಿ ಸತೀಶ್ ಬಿಳಿಯೂರು

ಸತೀಶ್ ಬಿಳಿಯೂರು “ನನ್ನೊಲವಿನ ಪಯಣ” Read Post »

ಕಾವ್ಯಯಾನ

ಪೂರ್ಣಿಮಾ ಸಾಲೆತ್ತೂರು ಅವರಕವಿತೆ ” ದೀಪ”

ಕಾವ್ಯ ಸಂಗಾತಿ ಪೂರ್ಣಿಮಾ ಸಾಲೆತ್ತೂರು ” ದೀಪ”  ಹಬ್ಬದಲಿ ಹಚ್ಚೋಣ ಸಾಲು ದೀಪವ ಕವಿದ ಕತ್ತಲೆಯ ಓಡಿಸುವ ಜಗದ ರೂಪವ ದ್ವೇಷ ಅಸೂಯೆಯ ಉರಿಸುತ ತೋರಿಸೋಣ ಸಹಸ್ಪಂದನದ ಸಹಮತ  ಆಗಲಿ ನಿರಾಸೆಯ ಬಾಳಿಗೆ ಆಶಾದೀಪ ಬೆಳಗಿಸೋಣ ಬಾಳಲಿ ಸದ್ಗುಣಗಳ ಹೊಳಪ ಬಾಳ ಬಾಂದಳದಿ ಬೆಸೆಯಲಿ ಸೌಹಾರ್ದ ಭಾವ ಹೆಗಲಿಗೆ ಹೆಗಲು ಕೊಟ್ಟು ಮರೆಯೋಣ ನೋವ  ಅಜ್ಞಾನದ ಕತ್ತಲು ಕಳೆಯಲಿ ಮನದ ಕೊಳೆಯು ತೊಳೆದು ಹೋಗಲಿ ದೀಪವಾಗಿ ಹೊಳೆವ ಬೆಳಕಿನ ರೂಪ ಪ್ರತಿದಿನ ಹಚ್ಚೋಣ ನಂದಾದೀಪ ಪೂರ್ಣಿಮಾ ಸಾಲೆತ್ತೂರು

ಪೂರ್ಣಿಮಾ ಸಾಲೆತ್ತೂರು ಅವರಕವಿತೆ ” ದೀಪ” Read Post »

ಕಾವ್ಯಯಾನ

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಗಜಲ್ (ಮಧುಸೂದನ್ ಸರ್ ಅವರ “ಖಾಲಿ ಮಾತಿನ ಜೋಳಿಗೆ” ಸಾಲಿನಿಂದ ಪ್ರೇರಿತ)ಭಾವನೆಗಳಿಲ್ಲದ ಮಾತಿನ ಜೋಳಿಗೆಜೊಳ್ಳಾದ ನಿನ್ನ ಮನಸಿನ ಜೋಳಿಗೆ ಪ್ರೀತಿಯೂ ನೀಡದ ಬಡತನ ನಿನಗೆಕರಗದೆದೆಯು ಕಡುಗಪ್ಪಿನ ಜೋಳಿಗೆ ಸಿರಿತನವಿಲ್ಲದ ಮನೆಗೆ ನೀ ಒಡೆಯನಗುವೂ ನೀಡದ ನಿನ್ನೆನಪಿನ ಜೋಳಿಗೆ ಅದೆಂತಹ ಬರಡು ಭೂಮಿ ನೀನುತೃಷೆಗೂ ಬರಗಾಲ ನಿನ್ನಿಲುವಿನ ಜೋಳಿಗೆ  ಬಾಳು ಬರಿದಾಗಿಸಿಕೊಂಡಳು ನಿನಗಾಗಿ ವಾಣಿಆದರೂ ಜಿನುಗದ ನಿನ್ನೊಲವಿನ ಜೋಳಿಗೆ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ಸುಮಾ ಗಾಜರೆ ಅವರ ಕವಿತೆ “ತಿಳಿಯಬೇಕಿದೆ  ಇನ್ನೂನು!”

ಕಾವ್ಯ ಸಂಗಾತಿ ಸುಮಾ ಗಾಜರೆ “ತಿಳಿಯಬೇಕಿದೆ  ಇನ್ನೂನು!”     ಹೇಳಬೇಕಿದೆ ಮನಕೆ ಇನ್ನೇನೋ ತಿಳಿಯಬೇಕಿದೆ ನನಗೆ ಇನ್ನೂನು ll ಕಾಪಿಟ್ಟ ಕನಸುಗಳಲಿಕರಗಿ ಹೋಗುವ ಮುನ್ನಬರುವ ನಾಳೆಗಳಲಿಕಳೆದು ಜಾರುವ ಮುನ್ನಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll ಉಸಿರಿಗೆ ಹಸಿರಾಗಿಹಚ್ಚ ಹಸಿರಾಗುವಂತೆಜೀವಕ್ಕೆ ಸೆಲೆಯಾಗಿಒಲವ ಒರತೆಯಂತೆಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll ಎಲ್ಲ ಇಲ್ಲಗಳ ಸರಿಸಿಇರುವುದನ್ನೇ ಸಂಭ್ರಮಿಸಿನೋವು ನೀಗಿಸಿ ನಲಿವ ಸುರಿಸಿಅಡಿಗಡಿಗು ದುಡಿವ ಮನಗಳಿಗೆಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll ಬೇಕುಗಳ ಬೆನ್ನೇರಿ ಭ್ರಮೆಯಲಿಬಂಧಿಯಾಗಿ ಇರುವನ್ನೆ ಮರೆತುನೆಮ್ಮದಿಗಾಗಿ ನಗುವ ತೊರೆದುಹೆಜ್ಜೆಗುರುತು ಹುಡುಕುವ ಹೃದಯಗಳಿಗೆಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll ಆಂತರ್ಯವರಿತ ಮನಕೆ ಗೊತ್ತುಪ್ರೀತಿಯೊಂದು ಹವಳದಾ ಮುತ್ತುಹೊಕ್ಕು ತಿಳಿದವರಿಗಷ್ಟೇ ಸಿಕ್ಕೀತುಒಲವೆಂದು ಪೂಜಿಸಿದವರಿಗದು ದಕ್ಕೀತುಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll      ಸುಮಾ ಗಾಜರೆ     

ಸುಮಾ ಗಾಜರೆ ಅವರ ಕವಿತೆ “ತಿಳಿಯಬೇಕಿದೆ  ಇನ್ನೂನು!” Read Post »

ಕಾವ್ಯಯಾನ

ರಾಶೇ ಬೆಂಗಳೂರು-“ಹಕ್ಕಿ ಹಾಡುತಿದೆ”

ಕಾವ್ಯ ಸಂಗಾತಿ ರಾಶೇ ಬೆಂಗಳೂರು- “ಹಕ್ಕಿ ಹಾಡುತಿದೆ” ಅದೇನು ಜಾನಪದವೋಗೀಗಿ ಪದಗಳ ಪುಂಜವೋಸರ್ವಜ್ಞನ ತತ್ವ ಪದವೋನಾ ಹಕ್ಕಿ ಹಾಡುತಿರುವೆ.. ಅಲ್ಲೊಂದು ಗ್ರಾಸವಿದೆಸುಜ್ಞಾನದ ಸೋಜಿಗವಿದೆಅಜ್ಞಾನದ ವಿಷಾದವಿದೆ ಆದರು ನಾ  ಹಾಡುತಿರುವೆ.. ನನ್ನ ಮೇಲೆ ದ್ವೇಷವಿದೆಮನುಜ ಸ್ವಾರ್ಥಕ್ಕೆ ಕೋಪವಿದೆನನ್ನ ಗೂಡ ರಕ್ಷಿಸಕೊಳ್ಳಬೇಕಿದೆಆದರು ಹಾಡಲೇನಿದೆ.. ಆಶ್ರಯಕಾಗಿ ಅಲೆವ ಗುಬ್ಬಿ ನಾಸ್ವಾರ್ಥವಿಲ್ಲದ ಜೀವ ನಾಭುವಿ ಮೇಲಿನ ಸಣ್ಣ ಹನಿ ನಾಆದರೂ ಹಾಡುತಲೇ ಇರುವೆ.. ————- ರಾಶೇಬೆಂಗಳೂರು

ರಾಶೇ ಬೆಂಗಳೂರು-“ಹಕ್ಕಿ ಹಾಡುತಿದೆ” Read Post »

ಕಾವ್ಯಯಾನ, ಗಝಲ್

ಸುಧಾ ಪಾಟೀಲ್‌ ಅವರ ಗಜಲ್

ಕಾವ್ಯ ಸಂಗಾತಿ ಸುಧಾ ಪಾಟೀಲ್‌ ಗಜಲ್ ಬದಲಾವಣೆಯ ದಾರಿಯನ್ನು ಹುಡುಕಾಡಿದೆ ನಾನುನನ್ನಲ್ಲಿನ  ಬೆಳಕನ್ನು ಹುಡುಕಾಡಿದೆ ನಾನು ಯಶಸ್ಸು  ಸಿಗುವುದು ಅಷ್ಟು ಸುಲಭವಲ್ಲ  ನೋಡು ಅವಿರತವಾಗಿ ಶ್ರದ್ಧೆಯ  ಏಣಿಯನ್ನು ಹುಡುಕಾಡಿದೆ ನಾನು ಏರಿಳಿತಗಳ ಜೀವನದಲ್ಲಿ  ನೆಮ್ಮದಿಯ  ಅರಸಿದೆಭಾವ ಭಕ್ತಿಯ ನೆಲೆಯನ್ನು ಹುಡುಕಾಡಿದೆ ನಾನು ಗೊತ್ತಿದ್ದೂ  ತಪ್ಪು ಮಾಡುವವವರ  ಕಂಡು ಮರುಗಿದೆನನ್ನಲ್ಲಿನ ಅವಗುಣಗಳ ಸುಧಾರಿಸುವ ಮಾರ್ಗವನ್ನು ಹುಡುಕಾಡಿದೆ ನಾನು ಭಾವಗಳ ಜೊತೆ ಈಜುವುದ ತೊರೆದೆಸುಧೆಯ ಅಸ್ತಿತ್ವದ ಗಟ್ಟಿತನವನ್ನು  ಹುಡುಕಾಡಿದೆ ನಾನು ———-ಸುಧಾ  ಪಾಟೀಲ

ಸುಧಾ ಪಾಟೀಲ್‌ ಅವರ ಗಜಲ್ Read Post »

ಕಾವ್ಯಯಾನ

“ಲಂಚದ ತುತ್ತು” ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಕಾವ್ಯ ಸಂಗಾತಿ “ಲಂಚದ ತುತ್ತು” ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಒಬ್ಬ ಬಡವನ ಮನೆ ಮುಂದೆನಾನು-ಕಿರಿ ಕಿರಿ ಮಾಡಿದೆಅವನ ಹಸಿವಿನ ಶಾಪವುಲಂಚದ ರೂಪವುನನ್ನ ಕೈಸೇರಿತು ಯಾರದೋಬೆವರಿನ ಹಣಬೇಕರಿಯ ಮುಂದೆ ಕುಳಿತುಬನ್ನು ತಿನ್ನುತ್ತಿದ್ದೆಹಸಿದ ನಾಯಿಯೊಂದುಜೊಲ್ಲು ಸುರಿಸಿನೋಡುತ್ತಿತ್ತುಒಂದು ತುಂಡು ಬನ್ನು ಎಸೆದೆಗಬಕ್ಕನೆ ನುಂಗಿಬಾಲ ಅಲ್ಲಾಡಿಸಿತುಮತ್ತೊಂದು ತುಣುಕು ಹಾಕಿದೆಅದು-ಚಿರಪರಿಚಿತನಂತೆ ಹತ್ತಿರಬಂದುನನ್ನ ಕಾಲು ಮೂಸಿತುನನಗನಿಸಿತು….ನಾಯಿ ಪ್ರಾಣಿ ಹಸಿದುಮೂಕ ಭಾಷೆಯಲಿಬೇಡುತಿದೆಅದರ ತಪ್ಪಲ್ಲನಾನು ಮಾತ್ರ ಎಲ್ಲವೂಇದ್ದೂಕಸಿದುಕೊಳ್ಳುವಒಬ್ಬ ಭಿಕ್ಷುಕನೆ! ಯಾರಿಂದಲೋ ಪಡೆದೆಅವರ ದುಡಿಮೆಯ  ಹಂಗುಯಾರಿಗೂ ನೀಡದೆಮನೆಗೆ ನಡೆದೆ ಹಿಂದೆ ತಿರುಗಿದೆಅದೇ ನಾಯಿ ಬೆನ್ನ ಹಿಂದೆಎಂತಹ ಕಕ್ಕುಲಾತಿ ಅದಕೆ?ಮತ್ತೆ ಬಾಲ ಅಲ್ಲಾಡಿಸಿತುಮೈಯ ಸವರಿದೆ ಅಂದಿನಿಂದ ಇಂದಿಗೂಎನ್ನ ಮನೆಯ ಕಾಯುತಿದೆತಿಂದ ಒಂದೇ ಅಗುಳಿಗೆತುತ್ತಿನ ಋಣ ತೀರಿಸಲು ಆದರೆ…….?ಈ ನರ ಪ್ರಾಣಿಯಾದ ನಾನುಯಾವ ಋಣವೂತೀರಿಸದೆಮಹಾ ಭಿಕ್ಷುಕ! ಆ ನಾಯಿಗಿರುವ ನಿಯತ್ತು ನನಗಿಲ್ಲಬಿಸಾಡಿದ ಬನ್ನುನನ್ನಲ್ಲದಿದ್ದರೂಅದು ಸಲ್ಲಿಸಿದಕೃತಜ್ಞತೆ ಮಾತ್ರಪರಮ ಸತ್ಯ ಕೊಟ್ಟವನು ಬಡವನಾದರೂಅವನೇ ಸಹೃದಯಿಶ್ರೀಮಂತತಿಂದವನು ನಾನಾದರೂನಾನಿಲ್ಲಿ ಬೇಡಿದವ ಅಯ್ಯೋವಿಪರ್ಯಾಸವೆ……ನಾಯಿಯೇ ಮೇಲುನರನಾಗಿನಾನೇ ಮಹಾ ಬಿಕ್ಷುಕ ————-ಶರಣಪ್ಪ ತಳ್ಳಿ ಕುಪ್ಪಿಗುಡ್ಡ

“ಲಂಚದ ತುತ್ತು” ಶರಣಪ್ಪ ತಳ್ಳಿ ಕುಪ್ಪಿಗುಡ್ಡ Read Post »

ಕಾವ್ಯಯಾನ

ಸರಸ್ವತಿ ಕೆ ನಾಗರಾಜ್ ಕವಿತೆ “ನಗುವವನು”

ಕಾವ್ಯ ಸಂಗಾತಿ ಸರಸ್ವತಿ ಕೆ ನಾಗರಾಜ್ “ನಗುವವನು” ಮೌನದಲ್ಲೇ ಅನೇಕಯುದ್ಧಗಳನ್ನು ಸೋಲಿಸಿ,ತನ್ನೊಳಗಿನ ಭರವಸೆಯನ್ನು ಕಾಪಾಡಿಕೊಂಡು,ವಿಫಲತೆಯ ನೆರಳಲ್ಲೂಬೆಳಕನ್ನು ಹುಡುಕಿ ನಗುವನ್ನೇಆಯುಧವನ್ನಾಗಿಸಿಕೊಂಡವನು. ಬದುಕು ಎಷ್ಟೇ ಪರೀಕ್ಷಿಸಿದರೂಅವನ ಮನಸ್ಸು ಸೋಲನ್ನು ಒಪ್ಪಲಿಲ್ಲ.ನಗುವಿನ ಹಿಂದೆ ಇರುವ ಸ್ಥೈರ್ಯವೇಅವನ ಅಸ್ತಿತ್ವದ ನಿಜವಾದ ಶಕ್ತಿ. ಪರಿಸ್ಥಿತಿಗಳು ಎಷ್ಟೇಬಿರುಗಾಳಿಯಾಗಿ ಬೀಸಿದರೂಅವನು ತನ್ನ ಆತ್ಮದ ದಿಕ್ಕು ತಪ್ಪಿಸಲಿಲ್ಲ.ಬಿದ್ದ ಜಾಗದಲ್ಲೇ ಪಾಠ ಕಲಿತುಮತ್ತೆ ನಿಂತು ನಡೆಯುವ ಧೈರ್ಯ ಅವನದು.ಅವನ ನಗು ಮೋಸವಲ್ಲ,ಅದು ಬದುಕಿಗೆ ನೀಡಿದ ಸವಾಲು. ನೋವನ್ನೇ ನೆಲೆಯಾಗಿ ಮಾಡಿಕೊಂಡುಆಸೆಯನ್ನು ಅರಳಿಸಿದ ಕಡಲು ಅವನು.ಅಲೆಗಳು ಎಷ್ಟೇ ಅಪ್ಪಳಿಸಿದರೂಆಳದಲ್ಲಿ ಶಾಂತಿಯನ್ನು ಕಾಪಾಡುವವನು. ——— ಸರಸ್ವತಿ ಕೆ ನಾಗರಾಜ್

ಸರಸ್ವತಿ ಕೆ ನಾಗರಾಜ್ ಕವಿತೆ “ನಗುವವನು” Read Post »

You cannot copy content of this page

Scroll to Top