ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ಸುಜಾತಾ ರವೀಶ್ ಏಕೋ ತಿಳಿಯೆ  ವಿಷಾದದಲೆಗಳಲಿ ಮುಳುಗಿಬಿಟ್ದಿದೆ ಕವಿತೆ  ಏನೋ ಅರಿಯೆ ಅಂತರಂಗದಾಳದಲಿ ಹುದುಗಿಬಿಟ್ಠಿದೆಕವಿತೆ  ಸ್ಪರ್ಧೆಗಳ ಪ್ರವಾಹದ ಹುಚ್ಚುಹೊಳೆಯಲಿ ಕೊಚ್ಚಿಹೋಯ್ತೇಕೆ ಕವಿತೆ ? ಪರಸ್ಪರ ಪ್ರಶಂಸೆ ಮೆಚ್ಚುವಬ್ಬರದಲಿ ಮುಚ್ಚಿಬಿಟ್ಟಿದೆ ಕವಿತೆ  ಮನದಾಳದ ಭಾವಾಭಿವ್ಯಕ್ತಿ ಎಂಬುದೇ ಮರೆಸಿಬಿಟ್ಟಿದೆ ಕವಿತೆ  ಸವಾಲುಗಳ ಎದುರಿಸುತ ಯಶವನೇ ಮೆರೆಸಿಬಿಟ್ಟಿದೆ ಕವಿತೆ  ಪರರ  ನಿರ್ಣಯಗಳೆಂಬ ರಾಜಕೀಯದಲಿ ಸೋತುಬಿಟ್ದಿದೆ ಕವಿತೆ  ಪಕ್ಷಪಾತಗಳ ಸ್ಮಶಾನದಲಿ ಹೂತು ಹೋಗಿಬಿಟ್ಟಿದೆ ಕವಿತೆ ವಿಜಯವ ಅರಸುತಲಿ ಬಂಧನಗಳ ಮೀರಿಬಿಟ್ಟಿದೆ ಕವಿತೆ  ಸುಜಿಹೃದಯವ ಉರಿಸುತಲಿ ಚೈತನ್ಯ ಹೀರಿಬಿಟ್ಟಿದೆ ಕವಿತೆ ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಆಯುಧಕ್ಕಿಂತ ಹರಿತ ರಾಜು ದರ್ಗಾದವರ ಮೊನ್ನೆತಾನೆ ಗೊತ್ತಾಯ್ತು ಕವಿತೆಗಳು ಆಯುಧಕ್ಕಿಂತ ಹರಿತವೆಂದು! ಸಮಾಜಕ್ಕೆ ಅಪಾಯಕಾರಿಯೆಂದೀಗ ಘೋಷಿಸಿ ಜೈಲಿಗಟ್ಟಿದ್ದಾರೆ ಕವಿತೆಗಳನ್ನು ಬರೆದವನ. ಕವಿ ಸಿಕ್ಕಿರಬಹುದು ಆದರೆ ಆ ಕವಿತೆ ಅದೆಲ್ಲಿಯವರೆಗೂ ತಲುಪಿದಿಯೋ? ನಿಮ್ಮಲ್ಲಿಯೂ ಅಂತ ಕವಿತೆಯಿದ್ದರೆ ಪಸರಿಸಬೇಡಿ. ಸುಟ್ಟುಬಿಡಿ…! ಅವರಿಗೂ ಬೇಕಾಗಿದ್ದು ಅದೇ..!! ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಸುಜಾತಾ ಲಕ್ಮನೆ ಧುಮ್ಮಿಕ್ಕಿ ಇಳಿದು ಬಾ ಜಲಧಾರೆಯಂತೆ ಕರೆವೆ ನನ್ನೊಳಗೆ ಒತ್ತಾಸೆಯಾಗಿ ನಿಲ್ಲು ಬಾ ನದಿ ದಂಡೆಗಳಂತೆ ಹರಿವೆ ನಿನ್ನೊಳಗೆ ನನ್ನ ನೆರಿಗೆ ನೆರಿಗೆಯೊಳಗೂ ಹುದುಗಿ ಹೀಗೆ ಕಾಡುವುದೇಕೆ ಚಿತ್ತಾರದಂಚಿನ ಸೆರಗಾಗಿ ಬೀಸಿ ಬಾ ತೊನೆವೆ ತೆಕ್ಕೆಯೊಳಗೆ ಮುಸ್ಸಂಜೆ ಮಾಧುರ್ಯ ಮಗುಚಿ ಬಿದ್ದಿದೆ ಇಲ್ಲಿ ನೀನಿಲ್ಲದೆ ಸಂಪ್ರೀತಿ ಕೊಡವ ಹೊತ್ತು ಬಾ ಮಧು ಸುರಿವೆ ಒಳಗೊಳಗೆ ಸುರಚಾಪದಲ್ಲೇನಿಹುದು ಬಿಡು ಅಂಥ ಬಣ್ಣ ಬಣ್ಣದ ಆಟೋಪ ರಂಗಿನೋಕುಳಿಯ ಎರಚಿ ಬಾ ಆಡೋಣವೆ ಕಣ್ ಕಣ್ಣೊಳಗೆ ಜೀವ ಸೊಬಗನ್ನೆಲ್ಲ ಒಂದೇ ಗುಕ್ಕಿನಲ್ಲಿ ಸೂರೆಗೊಂಡರೆ ಸಾಕೆ ಗುಟುಕು ಗುಟುಕಾಗಿ ಹೀರು ಬಾ ಉಸಿರಾಗುವೆ ಎದೆಯೊಳಗೆ ಪ್ರೀತಿಗೊಂದಿಷ್ಟು ಬದ್ಧತೆಯ ಬೆರೆಸಿ ಸಂತಸದಿ ಸಾಗೋಣ ಮುಂದೆ ಮೌನದಲೂ ಮಾತಾಗಿ ಮತ್ತೇರಿ ಬಾ ಮುತ್ತಾಗುವೆ ಮನದೊಳಗೆ “ಸುಜೂ” ಳ ಪರಮ ಸುಖದ ಕನಸ ಪರಿಯ ಬಣ್ಣಿಸಲೆಂತು ಹೇಳು ಪರಿ ಪರಿಯಲಿ ಬಯಸಿ ಒಲಿದೊಲಿದು ಬಾ ಪಲ್ಲವಿಸುವೆ ಬಾಳೊಳಗೆ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹಮ್ಮು ಬಿ.ಎಸ್.ಶ್ರೀನಿವಾಸ್ ಬಲ್ಲವನೆಂಬ ಭ್ರಾಮಕ ಹಮ್ಮು ತಲೆತಿರುಗಿಸುವ ಅಮಲು ಏನೂ ಅರಿಯದ ಪಾಮರನ ಪ್ರಾಮಾಣಿಕ ಅಳಲು ಅಮಾಯಕತ್ವವೆ ಮೇಲು ಅಗ್ಗದ ಉಪದೇಶಕ್ಕಿಂತ ನಡೆದು ತೋರಿಪುದು ಮೇಲು ನಿಜಸಾಧಕರಿಗೆ ಸವಾಲು ಸಲ್ಲದು, ನಾ ಕಂಡಿದ್ದೇ ಸತ್ಯವೆಂಬುದು ಅಹಮಿಕೆ ಡೌಲು ಬಲ್ಲವರು ಹೇಳುವರು ಸತ್ಯ ಒಂದೇ ಆದರೂ ಧೃಷ್ಟಿಕೋನ ನೂರಾರು ಹಿಮಾಲಯದ ಶಿಖರಕ್ಕೂ ಏರುವ ದಾರಿ ಹಲವಾರು ಮಾತಿನೀಟಿಯಲಿ ಪರರ ಘಾತಿಸುತ ಸಮನಾರಿಲ್ಲ ಎನಗೆಂದು ಬಿಂಕದಿ ಮೆರೆದು ಬೀಗಿದರೆ ಮೆಚ್ಚುವನೆ ಪರಮಾತ್ಮನು ಮೇಲೇರಿದರೆ ಕೆಳಗಿನದು ಕುಬ್ಜವಾಗುವುದು ಸಹಜ ಕೆಳಗಿರುವವರ ಕೈಹಿಡಿದು ಧನ್ಯತೆ ಪಡೆವವ ನಿಜ ಮನುಜ *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಸಮಬಾಳು ಸಹಬಾಳ್ವೆ ಸಮತೆಯ ರೀತಿ ಗಣತಂತ್ರ ವೆಂದರೆ ಶಾಂತಿ ಸಹಿಷ್ಣುತೆ ಸಹನೆ ಪ್ರೀತಿ ಗಣತಂತ್ರವೆಂದರೆ ಪಾರತಂತ್ರ್ಯದ ಕತ್ತಲು ಅಳಿದರಷ್ಟೇ ಸಾಕೇ ಸ್ವಯಮಾಡಳಿತ-ಸಂವಿಧಾನದ ಕ್ರಾಂತಿ ಗಣತಂತ್ರವೆಂದರೆ ಎಷ್ಟೊಂದು ವೇಷ ಭಾಷೆ ಸಂಸ್ಕೃತಿ ವೈವಿಧ್ಯಗಳು ಎಲ್ಲರೆದೆ ಹೂಗಳನು ಪೋಣಿಸುವ ನೀತಿ ಗಣತಂತ್ರವೆಂದರೆ ಸಮಾನ ಆಶೋತ್ತರಗಳು ಸುರಾಜ್ಯದ ಕನಸು ಎಲ್ಲರ ಮುಗಿಲುಗಳ ವಿಸ್ತರಿಸುವ ಪ್ರಣತಿ ಗಣತಂತ್ರವೆಂದರೆ ಹೊರಗಿನ ಶತ್ರುಗಳ ಜೊತೆಗೆ ಒಳಗಿನ ವಿಕೃತಿಗಳು ಹುಸಿಗಳ ಮೀರುವ ನಿಜ ಬದುಕಿನ ಕಾಂತಿ ಗಣತಂತ್ರವೆಂದರೆ ನಮ್ಮ ರಾಷ್ಟ್ರ ನಮ್ಮ ಜೀವ ಭಾವ ಸದಾ ಜಾಗೃತ ಎಲ್ಲ ಸ್ವರಗಳನು ಬೆಸೆಯುವ ಸಮಶ್ರುತಿ ಗಣತಂತ್ರವೆಂದರೆ *************** ಡಾ.ಗೋವಿಂದ ಹೆಗಡ ೆ

ಕಾವ್ಯಯಾನ Read Post »

ಕಾವ್ಯಯಾನ

ಗಝಲ್ ಸಂಗಾತಿ

ಗಝಲ್ ಡಾ.ಗೋವಿಂದ ಹೆಗಡೆ ನಿನ್ನ ಕಣ್ಣೋಟ ತಾಕಿ ಇಲ್ಲಿ ಬೆಳಕು ಹರಿದಿದೆ ನಿನ್ನ ಕರಸ್ಪರ್ಶದಲ್ಲಿ ಪುಲಕ ಹೊನಲಾಗಿದೆ ಮಿಂಚು ಗೂಳಿ ಮೈಯನಿಡೀ ಉತ್ತು ಬಿತ್ತಿದೆ ಫಸಲು ಹೇಗಿರಬಹುದು ಕಾತರ ಕುಡಿಯಾಗಿದೆ ಎಂತಹ ಕರಿ ದುಗುಡ ಮಡುವಾಗಿತ್ತಿಲ್ಲಿ ನಿನ್ನ ಕೈ ಸೋಕಿದ್ದೇ ತಡ ಎಲ್ಲ ಬದಲಾಗಿದೆ ಸುಧೆಯನುಂಡವರು ಮಾತ್ರ ಅಮರರೇನು ನೀನು ತಂದ ಅನುರಾಗಕ್ಕೆ ಸಾವೆಲ್ಲಿದೆ ಹಿಗ್ಗನ್ನು ಬಿತ್ತಿ ಸುಗ್ಗಿ ಮಾಡುವ ರೀತಿ ನಿನ್ನದೇ ಸೌದಾಮಿನಿ ನೀನು ಈಗ ಕಣಜ ತುಂಬಿದೆ ************

ಗಝಲ್ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಒಲವಿನಾಟ ಮಧುವಸ್ತ್ರದ್ ಕೃಷ್ಣಾ..ಒಲವಿನಾಟವ ಆಡು ಬಾ ಕಾದಿರುವಳು ಬೆಡಗಿ.. ಹೃದಯ ಕಸಿದು ಮನವ ಬೆಸೆದು ಎಲ್ಲಿರುವೆ ನೀ ಅಡಗಿ.. ಕರ್ಪೂರಗೊಂಬೆ ರೂಪಸಿ ರಂಭೆ ಕಾಯುತಿಹಳು ಸೊರಗಿ.. ಸೋಕಿದೊಡೆ ನಿನ್ನ ಪ್ರೇಮಜ್ವಾಲೆ ನೀರಾಗುವಳು ಕರಗಿ.. ಸನಿಹ ನೀನಿರೆ ಮೆಲ್ಲುಸಿರಾಯ್ತು ಪ್ರಣಯ ಕವನ‌.. ಸೂಸಿತು ತಂಗಾಳಿ ಹಾಡುತಲಿ ಒಲವಿನ ಸವಿಗಾನ.. ತರುಲತೆ ತೂಗಿಬಾಗಿ ನೀಡಿಹವು ಪ್ರೇಮ ಸಿಂಚನ‌‌.. ವನದೇವಿ ನಕ್ಕು ಹಾರೈಸಿಹಳು ನಮ್ಮ ಶುಭಮಿಲನ.. ತನುಮನ ಕಾತರದಿ ಕಾದಿಹವು ನಿನ್ನಾಗಮನದ ಕ್ಷಣ.. ಹೊಳೆದಿಹ ಕೆಂದಾವರೆ ಮೊಗಕೆ ಮುತ್ತಿನಾಭರಣ.. ಬಳುಕುವ ದೇಹಸಿರಿಗೆ ನಿನ್ನ ಬಾಹುಗಳಾವರಣ‌.. ನಮ್ಮೀ ಒಲವ ಬಂಧನ ಜನ್ಮ ಜನ್ಮಾಂತರದ ಋಣ.. ********* ಮ

ಕಾವ್ಯಯಾನ Read Post »

ಕಾವ್ಯಯಾನ

ಅನುವಾದ ಸಂಗಾತಿ

“ಗಂಡು ಪ್ರೇಮದಲ್ಲಿದ್ದಾಗ” ಸಿರಿಯನ್ ಕವಿ: ನಿಜಾರ್ ಕಬ್ಬಾನಿ ಕನ್ನಡಕ್ಕೆ:ಕಮಲಾಕರ ಕಡವೆ ಗಂಡಸು ಪ್ರೇಮದಲ್ಲಿದ್ದಾಗಹಳೆಯ ಶಬ್ದಗಳ ಹೇಗೆ ಉಪಯೋಗಿಸಿಯಾನು?ಪ್ರೇಮಿಯ ಅಪೇಕ್ಷೆಯಲ್ಲಿಇರುವ ಹೆಣ್ಣುಭಾಷಾತಜ್ಞರು, ವ್ಯಾಕರಣತಜ್ಞರುಗಳಜೊತೆ ಮಲಗ ಬೇಕೇನು? ನಾನು ಏನೂ ಹೇಳಲಿಲ್ಲನನ್ನ ಪ್ರೀತಿಯ ಹೆಣ್ಣಿಗೆ.ಬದಲಿಗೆ, ಪ್ರೇಮಕ್ಕೆ ಇರುವ ವಿಶೇಷಣಗಳನ್ನುಸೂಟಕೇಸಿನಲ್ಲಿ ತುಂಬಿಕೊಂಡುಎಲ್ಲ ಭಾಷೆಗಳಿಂದ ದೂರ ಓಡಿಹೋದೆ. ಮೂಲ: WHEN A MAN IS IN LOVE” When a man is in lovehow can he use old words?Should a womandesiring her loverlie down withgrammarians and linguists? I said nothingto the woman I lovedbut gatheredlove’s adjectives into a suitcaseand fled from all languages. *********

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ನಿನ್ನ ನೆನಪಿನ ಮೀನು..! ಡಾ.ಜಯಪ್ಪ ಹೊನ್ನಾಳಿ(ಜಯಕವಿ) ನಿನ್ನ ನೆನಪಿನ ಮೀನು ಎಷ್ಟೊಂದು ಬಣ್ಣದಲಿ ಆಡುತಿವೆ ಎದೆಗೊಳದ ತಿಳಿಯಾಳದಲ್ಲಿ..! ಕನಸ ರೆಪ್ಪೆಯ ತೆರೆದು ಕನವರಿಕೆಯಲೆ ನೆರೆದು ಮಳೆಬಿಲ್ಲ ಮಿಂದಂತೆ ಮಧು ಮೇಳದಲ್ಲಿ..! ಹೊಸಿಲ ಚುಂಬಿಸುತಿಹುದು ಹೊಂಬಿಸಿಲಿನೊಡಗೂಡಿ ಹೊಸತೊಂದು ಹಾರೈಕೆ ಹಳೆ ನೋವ ಕೊಂದು..! ನಗುವ ನಂದನದೊಲವು ತಂಗಾಳಿ ತೊಟ್ಟಿಲಲಿ ಪರಿಮಳದಿ ತಾ ತುಂಬಿ ನವ ಭಾವ ತಂದು..! ಬಣಗುಡುವ ಬದುಕಲ್ಲಿ ನೀ ಬಂದು ನಕ್ಕಂದು ಮರಳಿ ಬಂದಿತು ಮನಕೆ ಮತ್ತೆ ಮಲೆನಾಡು..! ಜೀವವಾಯಿತು ಜಿಂಕೆ ರೆಕ್ಕೆ ಬಿಚ್ಚಿತು ನವಿಲು ನಲಿದು ಉಲಿಯಿತು ಕುಕಿಲು ಬಂತು ಹೊಸ ಹಾಡು.. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೆನೆಯುವೆ ಕವಿತೆಯಲಿ ತ್ರಿವೇಣಿ ಜಿ.ಹೆಚ್. ಮಾತು ಮಾತಿಗೂ ಕೋಪ ಮನಸು ಮುನಿದ ರೂಪ.. ಈಗ ಕೇಳು! ರಾಧೆಯ ಮನದಲಿ ಪರಿತಾಪ… ಸರಿಸು ಮೌನವ ಕೊಳಲ ಆಲಾಪದಲಿ. ಆದರೀಗ, ರಾಧೆ ಒಲವ ಹಾಸಿ ನಿನ್ನ ಅರಸಿ ಭಜಿಸಿ ಪೂಜಿಪಳು… ಮರಳಿ ಬಿಡು ಬಿದಿರ ಕೊಳಲು ನುಡಿಸಲು.. ಹುಸಿ ಮುನಿಸು ತಣಿಸಲು ಮಾತು ಮೌನ ಬೆಸೆದು ಒಳಗೆ.. ಶರಣಾಗಲಿ ಮನದೊಳಗೆ. ಮಾಧವ, ಬಾರದೆ ಸರಿಯದಿರು… ಬರೆದು ನೆನೆಯುವೆ ಕವಿತೆಯಲಿ. **********

ಕಾವ್ಯಯಾನ Read Post »

You cannot copy content of this page

Scroll to Top