ಕಾವ್ಯಯಾನ
ಅಪ್ಪಣ್ಣನಿಗೊಂದು ಮನವಿ ಎ.ಎಸ್. ಮಕಾನದಾರ ಗದಗ ಅಪ್ಪಣ್ಣ ಎಷ್ಟೊಂದು ಕತ್ತಿಗಳು ಸೇರಿಕೊಂಡಿವೆ ನಿನ್ನ ಹಸಬಿಯೊಳು ಆ ಕತ್ತಿಗಳೇ ಮಾಡಿದ ಕ್ಷೌರ ಹೇಗೆ ಸೂಚಿಸಿ ಬಿಡುತ್ತವೆ. ಆ ಚಾಂದ ದಾಡಿ ಮುಸ್ಲಿಮನದೆಂದು ಆ ಜುಟ್ಟು ಬ್ರಾಹ್ಮಣನನದೆಂದು ಆ ಕೆಳದಾಡಿ ಸಿಖ್ಖನದೆಂದು ಆ ಫ್ರೆಂಚ್ ದಾಡಿ ಕ್ರಿಶ್ಚಿಯನನದೆಂದು ಮೀಸೆ ಬಿಟ್ಟರೊಂದು ಜಾತಿ ಕೇಶ ಬಿಟ್ಟರೊಂದು ಜಾತಿ ಮುಡಿ ಕಟ್ಟಿ ದಾಡಿ ಬಿಟ್ಟರೊಂದು ಜಾತಿ ಎಲ್ಲವನು ಬೋಳಿಸಿಟ್ಟು ಹೊಸದೊಂದು ವ್ಯವಸ್ಥೆ ನಿರ್ಮಿಸಬಾರದಿತ್ತೇ ಅಪ್ಪಣ್ಣ ನೀನು ಅಣ್ಣ ಅಕ್ಕ ಅಲ್ಲಮರೊಂದಿಗೆ ಅನುಭವ ಮಂಟಪದ ಚುಕ್ಕಾಣಿಯಾಗಿದ್ದಿ ಯಾಕಣ್ಣ ಈ ವ್ಯವಸ್ಥೆಗೆ ಕಡಿವಾಣ ಹಾಕದೆ ಸುಮ್ಮನಾದೆ ಗಂಡಲ್ಲದೆ-ಹೆಣ್ಣಲ್ಲದೆ ಒಳಗಿರುವ ಆತ್ಮಕ್ಕೆ ಅನುಭವ ಮಂಟಪದಲಿ ಅಂತರಂಗ ಶುದ್ಧಿ ಮಾಡಿದ ನೀನೇ ಬಹಿರಂಗ ಶುದ್ಧಿಗಾಗಿ ಮಾಡಿದ ಈ ಕ್ಷೌರದಿಂದ ಅದ್ಹೇಗೆ ಅಶಾಂತಿ ತಾಂಡವವಾಡುತ್ತಿದೆ ? ಅಪ್ಪಣ್ಣ ನಿನಗೆ ನೆನಪಾಗಲಿಲ್ಲವೇ ಶೂನ್ಯನಾದ ಅಣ್ಣ ಬೆತ್ತಲಾದ ಅಕ್ಕ ಜಗದ ಕೊಳೆ ತೊಳೆಯುವ ಮಾಚಿದೇವ ತನ್ನ ಚರ್ಮವನೇ ಕತ್ತರಿಸಿ ಚಡಾವು ಮಾಡಿದ ಹರಳಯ್ಯ ಕಲ್ಯಾಣಮ್ಮ ಯುದ್ಧಕ್ಕೆ ವಿದಾಯವಿತ್ತ ಅಶೋಕ ಬುದ್ಧನಾದ ಸಿದ್ಧ ಅಂತೆಯೇ ಎಸೆದು ಬಿಡಲು ಹೇಳು ಎಲ್ಲ ಸಹೋದರರಿಗೆ ಈ ಜಾತಿ ಸೂಚಕ ಕತ್ತಿಗಳನು…….. ********









