ಅಧರಂ-ಮಧುರಂ ತುಟಿ ಜೇನು, ಮೊಗ ಜೇನು, ಸಕಲವೂ ಸವಿ ಜೇನು! (ವಲ್ಲಭಾಚಾರ್ಯರ “ಅಧರಂ ಮಧುರಂ” ಕನ್ನಡ ಭಾವಾನುವಾದದ ಪ್ರಯತ್ನ. ಪರಂಪರೆ ಕೂಡ ಹೇಗೆ ಪ್ರಿಯತಮನನ್ನು ಆರಾಧಿಸಿ ಭಜಿಸುತ್ತಿತ್ತು ಎನ್ನುವುದಕ್ಕೊಂದು ಪುರಾವೆ. ) ರಾಮಸ್ವಾಮಿ ಡಿ.ಎಸ್. ತುಟಿ ಜೇನು ಮೊಗ ಜೇನುಕಣ್ಣ ನೋಟವೆ ಜೇನು, ನಗೆ ಜೇನುಎದೆಯೊಳಗೆ ಸುರಿವ ಜೇನು, ನಡಿಗೆಗೆ ಸೋತೆಸವಿಯರಸನೇ ನೀನು, ಸಕಲವೂ ಸಿಹಿ ಜೇನು. ಮಾತಲ್ಲಿ ಜೇನು,ಚರಿತೆ ಚಪ್ಪರಿಸಿದರೆ ಜೇನು,(ಉಟ್ಟ) ಬಟ್ಟೆ ಸವಿ ಜೇನು, ಸಂಕೇತದೊಳಗೆ ಜೇನುನೀನಿತ್ತ ಬರುವುದು ನನ್ನ ಸುತ್ತುವುದಂತೂ ತಿಳಿಜೇನುಸವಿಯರಸನೇ ನೀನು, ಸಕಲವೂ ಸಿಹಿ ಜೇನು. ಕೊಳಲುಲಿಯಲಿ ಜೇನು, ಪಾದಧೂಳಿಯಲಿ ಜೇನುಕೈ ಕಾಲುಗಳಲ್ಲೆಲ್ಲ ಎನಿತು ಸಿಹಿಯುನಾಟ್ಯದಲಿ ಸಿಹಿ ನೀನು, ನಿನ್ನ ಸಖ್ಯವೇ ಸಿಹಿ ಜೇನುಸವಿಯರಸನೇ ನೀನು, ಸಕಲವೂ ಸಿಹಿ ಜೇನು. ಹಾಡಲ್ಲಿ ಮಾಧುರ್ಯ, ಕುಡಿವಲ್ಲಿ ಚಾತುರ್ಯಉಣುವುದು ರಸಗವಳ, ಮಲಗಿದರೆ ತಿಳಿನಿದ್ರೆಕಾಯಕ್ಕೆ ತಕ್ಕ ಪರಿವೇಷ ನಿನ್ನೊಲವುಸವಿಯರಸನೇ ನೀನು, ಸಕಲವೂ ಸಿಹಿ ಜೇನು. ನಿನ್ನ ಕಾರ್ಯಗಳೇಸು, ನಿನ್ನ ಭಾದ್ಯತೆಗಳೇಸುಕಾಯ್ದು ಕೊಲ್ಲುವ ಹಾಗೇ ನೆನಪು ಅಧಿಕನೀನಿತ್ತ ಉಡುಗೊರೆಯು, ನಿನ್ನ ಹೊಳಪಿನ ಹಾಗೆಸವಿಯರಸನೇ ನೀನು, ಸಕಲವೂ ಸಿಹಿ ಜೇನು. ನಿನ್ನ ಕುತ್ತಿಗೆಯ ಸುತ್ತ ನನ್ನ ಬಾಹುವಿನ ಹಾರಯಮುನಾ ತಟದಲೆಗಳಲ್ಲೆಲ್ಲ ಮಧು ರಾಶಿಹರಿವ ನೀರಲ್ಲೂ ಅರಳಿರುವ ಹೂವಲ್ಲೂ ನೀನೆಸವಿಯರಸನೇ ನೀನು, ಸಕಲವೂ ಸಿಹಿ ಜೇನು. ಗೋಪಿಕೆಯರೆಲ್ಲ (ನಿನ್ನ) ಲೀಲೆಗೆ ಮಣಿದುಕೂಡಿದ್ದು ಏನು ಬಿಟ್ಟದ್ದು ಏನುಕಂಡದ್ದು ಏನು, ವಿನೀತನಾಗಿ ಬೇಡಿದ್ದು ಏನುಸವಿಯರಸನೇ ನೀನು, ಸಕಲವೂ ಸಿಹಿ ಜೇನು. ಗೆಳೆಯರೊಡಗೂಡಿ ರಾಸುಗಳನೊಟ್ಟಿದ್ದುಬೆತ್ತ ಬೀಸದೆಯೂ ಜಾನುವಾರು ಹೆಚ್ಚಿದ್ದುಕಾಯುವಿಕೆಗೊಳಗಾಗಿ ಪರಿಪಕ್ವವಾದದ್ದುಸವಿಯರಸನೇ ನೀನು, ಸಕಲವೂ ಸಿಹಿ ಜೇನು. *********************************