ಕಾವ್ಯಯಾನ
ಮೌನ ಪ್ರತಿಭಾ ಹಳಿಂಗಳಿ ನಾ ಹೊದ್ದಿರುವೆ ಮೌನದ ಕಂಬಳಿಯನು ಉಸಿರು ಕಟ್ಟಿದಂತಿದೆ ಒಳಗೊಳಗೆ ಜೋರಾಗಿ ಕಿರುಚಬೇಕೆಂದಿರುವೆ ಸರಿಪಡಿಸಿಕೊಳ್ಳುತ ಗಂಟಲನ್ನು. ಒಳಗೂ,ಹೊರಗೂ ತಾಕಲಾಟ ತರತರನಾದ ಭಾವಗಳ ಎರಿಳಿತ ಮನದ ಕದ ತಟ್ಟುತಿರಲು. ಅತ್ತು ಸುಮ್ಮನಾಗುವೆ ಒಮ್ಮೆ ಜಗದ ಆಗು,ಹೋಗುಗಳಲ್ಲಿ ಮಂಡಿ ಉರಿ ಕುಳಿತಿರಲೂ ಬಂದು ನನ್ನ ಮುಂದೆ. ಶಬ್ದವೂ ನಿಲುಕುತ್ತಿಲ್ಲ ತಲೆಯೆತ್ತಿ ನೋಡಬೇಕೆನಿಸಿತು ಒಮ್ಮೆ. ನೋಡಲಾರೆನು ಎಂದುಸುರಿತು ಹುದುಗಿಸುತ ತಲೆ ಕಂಬಳಿಯೊಳಗೆ ಮರೆಯಲಾರದೆ ಮೌನ *********









