ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ಸಹದೇವ ಯರಗೊಪ್ಪ ಬದುಕಿಗೆ ಅರ್ಥ ಕಲ್ಪಿಸಲು ಉಲಿದೆ ನೀ ಬರಲೇ ಇಲ್ಲ ಒಲವಿಗೆ ಬಲವ ತುಂಬಲು ಕೂಗಿದೆ ನೀ ಬರಲೇ ಇಲ್ಲ ಬೆವರಿನ ಅಂಬಲಿ ಉಂಡು ಒಡಲ ಹಂಬಲ ತಣಿಸುವೆ ಬಾ ಪ್ರೇಮದ ಎಲ್ಲೆ ಮೀರಲು ಗೋಗರೆದೆ ನೀ ಬರಲೇ ಇಲ್ಲ ಇರುಳ ಕಾಲುದಾರಿ ಕತ್ತಲು ಮೆತ್ತಿ ಮೈ ಮುರಿಯುತಿದೆ ಭಾವನೆಗಳ ಬೆಳಕಲಿ ಒಂದಾಗಲು ಕರೆದೆ ನೀ ಬರಲೇ ಇಲ್ಲ ಮದಿರೆಯಲಿ ಅಧರ ಕಳಚಿ ನೂರು ನವಿಲು ಕುಣಿದಂತಾಗಿದೆ ಭಾರವಾದ ತನು ಹಗುರುಗೊಳಿಸಲು ಕೈ ಚಾಚಿದೆ ನೀ ಬರಲೇ ಇಲ್ಲ ನೇಸರ ಮಗ್ಗಲು ಬದಲಿಸುವ ಮುನ್ನ ಮರಳಿ ಬರುವ ನೀರಿಕ್ಷೆ ಇತ್ತು ಪಾದ ಮುತ್ತಿಕ್ಕಿದ ಎದೆಯ ಹೊಸ್ತಿಲು ಕಾಯುತಿದೆ ನೀ ಬರಲೇ ಇಲ್ಲ ಸಾಚಿಯ ಆ ದಿನಗಳ ನೆನಪು ಕುಡಿದು ತೂರಾಡುತಿವೆ ತುಟಿಯ ಮೊಗ್ಗಿಗೆ ಮಧು ಸವರಲು ಕಾದೆ ನೀ ಬರಲೇ ಇಲ್ಲ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಈರಪ್ಪ ಬಿಜಲಿ ಕಗ್ಗೊಲೆಯಾದ ಕನಸುಗಳನು ಗಂಟುಕಟ್ಟಿ ಹೊತ್ತುಕೊಂಡು ನಡೆದಿದ್ದೇವೆ ಹತ್ಯೆಯಾದ ಮನಸುಗಳನು ವಸ್ತ್ರದಲಿ ಸುತ್ತಿಕೊಂಡು ನಡೆದಿದ್ದೇವೆ ।। ವಿಧಿಯಾಟಕೆ ಬದುಕು ಬಲಿಯಾಗಿ ಕೊನೆಯಾದಂತೆ ಕಾಣುತಿದೆ ಬೂಟಾಟಿಕೆ ಮಾತಿಗೆ ಮರುಳಾಗಿ ಬಾಳಬಂಡಿ ಹತ್ತಿಕೊಂಡು ನಡೆದಿದ್ದೇವೆ ।। ಶ್ರಮಿಕರು ಸತ್ತರು ನೆತ್ತರು ಬೀದಿಬೀದಿಗೆಲ್ಲ ನದಿಯಾಗಿ ಹರಿದಿದೆ ಧನಿಕರು ಮೂಗಿಗೆ ಸವರಿದ ತುಪ್ಪವನು ಮೆತ್ತಿಕೊಂಡು ನಡೆದಿದ್ದೇವೆ ।। ಹೊತ್ತೊತ್ತಿಗೂ ಅನ್ನಆಹಾರ ನೀರಿಲ್ಲದೇ ಕ್ಷಣಕ್ಷಣವು ಬಳಲಿದೇವು ಉಸಿರಳಿವ ಮುನ್ನ ಗೂಡುನೆನೆದು ಮನೆ ಸೇರುವಾಸೆ ಕಟ್ಟಿಕೊಂಡು ನಡೆದಿದ್ದೇವೆ।। ಬೆಂದುಬೆಂಡಾದ ಜೀವಿಗಳ ಮೊಗದಲಿ ಬಿಜಲಿ ಮಿನುಗಿ ಒಳಿತಾಗಲಿ ನಡುನೀರಲಿ ನಿಂತವರು ದಡಸೇರಲು ಮುತ್ತಿಕೊಂಡು ನಡೆದಿದ್ದೇವೆ *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

‘ಒಲವ ವಿಜ್ಞಾಪನೆ ವಸುಂಧರಾ ಕದಲೂರು ಹೀಗೆ…ಮಾತು ಮಾತಿಗೂ ಮಾರುತ್ತರ ಬೇಡಎನ್ನವೆಯಲ್ಲಾ ನನ್ನ ಸೋಗೆಮಾತೇ ಆಡದಲೆ ನಾ ನಿನಗೆಅರ್ಥ ಮಾಡಿಸುವುದು ಹೇಗೆ ಚೆಂದದಲಿ  ಮಾತನಾಡದೆಬಿಮ್ಮನೆ ಬಿಗುಮಾನದಲಿನೀ ನಿನ್ನ ಪಾಡಿಗೆ, ನಾ ನನ್ನಷ್ಟಕೆಇರಲೇನು ಸೊಗಸು ಹೇಳು ಮುನಿಸು ಮೋಡ ಕರಗಿಸೋನೆ ಸುರಿದು ಕುದಿ ಮನಸುತಂಪಾಗಿ, ಹಸಿರು ಚಿಗುರಿತೆನೆ ತುಂಬಿ ಬಾಗುದಿರಲೇನು ಚೆಂದ ಮೌನಕ್ಕೂ ಬೇಸರ ಬಂತೀಗಮನಸು ಸೋಲುತಿದೆ ಬಾ ಬೇಗಈ ಬಾಳಿನಾಚೆ ಇನ್ನೇನಿದೆನಾನಿನಗೆ ನೀನನಗೆಂದು ಒಲವಾಗಿದೆ *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಹೇಮಗಂಗಾ ಲೌಕಿಕ ಸುಖಗಳು ತೃಣಸಮಾನವೆಂದು ಹೊರಟವಳು ನೀನು ಎಲ್ಲ ತ್ಯಜಿಸಿ ವೈರಾಗ್ಯವನೇ ಆಭರಣದಂತೆ ಧರಿಸಿದವಳು ನೀನು ಮೋಹಿಸಿದ ಕೌಶಿಕನೊಡನೆ ಬಾಳು ಮುಳ್ಳಿನ ಮಂಚವಾಯಿತು ಅರಮನೆಯ ವೈಭೋಗದತ್ತ ಚಿತ್ತವಿಡದೇ ನಡೆದವಳು ನೀನು ಹಸಿವೆ, ನಿದಿರೆ, ಅಂಜಿಕೆಗಳಾವುವೂ ಕಾಡಲಿಲ್ಲ ನಿನ್ನ ಹೇಗೆ ? ಚೆನ್ನಮಲ್ಲಿಕಾರ್ಜುನನ ಅರಸುತ್ತಾ ಕಾನನದಿ ಅಲೆದವಳು ನೀನು ಅಗಣಿತ ಅನುಭವದ ಮೂಸೆಯಲಿ ಪುಟಕ್ಕಿಟ್ಟ ಚಿನ್ನವಾದೆ ಹೆಣ್ಣೂ ಗಂಡಿಗೆ ಸಮಾನವೆಂಬ ತತ್ವ ಜಗಕೆ ಸಾರಿದವಳು ನೀನು ಆಧ್ಯಾತ್ಮವನಪ್ಪಿ ಮೊದಲಿಗಳಾದೆ ಶಿವಶರಣೆಯರ ಸಾಲಿನಲ್ಲಿ ವಚನಕ್ಷೇತ್ರದ ಹೇಮ ಮುಕುಟಕೆ ರತ್ನವಾದವಳು ನೀನು ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಳೆ ವಸುಂಧರಾ ಕದಲೂರು ಕಿಟಕಿ ಸರಳಾಚೆಸುರಿವ ಮಳೆ ಕಂಡುಮೂಗೇರಿಸುತ್ತೇನೆಮಣ್ಣ ಘಮಲಿಗೆ.. ಬಿದ್ದ ಹನಿಯೆಲ್ಲಾಸಿಮೆಂಟು ರೋಡಿನಲಿಉರುಳಾಡಿ ಕೊಚ್ಚೆಮೋರಿ ಸೇರುವಾಗಎಲ್ಲಿಂದ ಬರಬೇಕುಮಣ್ಣ ವಾಸನೆ.. ಊರ ಮನೆಯಲ್ಲಿಪುಟ್ಟ ತೊರೆಯಾಗಿಮಳೆ ನೀರು ತುಂಬಿಹರಿಯುತ್ತಿದ್ದ ಮೋರಿಗಳುಘಮ್ಮೆನುತ್ತಿದ್ದವು… ಪುಟ್ಟ ಫ್ರಾಕಿನ ಹುಡುಗಿಬಿಟ್ಟ ಕಾಗದದ ದೋಣಿಹೊತ್ತೋಯ್ದು ಮರೆಯಾದನೆನಪೂ ಘಮ್ಮೆಂದಿತು.. ಊರ ಮಳೆ ಕೇರಿ ಮಳೆನೆಲದ ಮಳೆಯಾಗಿತ್ತು.ಹರಿದು ಕಡಲ ಸೇರಿದಟ್ಟ ಮುಗಿಲಾಗಿ ಘಮ್ಮೆಂದಿತು… ಈ ನಗರ ಮಳೆ ಮಾತ್ರಒಂದು ನೆನಪೂ ತುಂಬುವುದಿಲ್ಲ.ಭೋರೆಂದು ಸುರಿದ ಮಳೆಗೆಮಣ್ಣಿಲ್ಲದ ನೆಲವೂ ಇಂಗುವುದಿಲ್ಲಮಣ್ಣಿಲ್ಲದೆ ಘಮಲು ಅಡರುವುದಿಲ್ಲ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಮ್ಮ ಶಿವಲೀಲಾ ಹುಣಸಗಿ ಭುವಿಗೆ ಬಿದ್ದ ದೇಹಕೆ ಸೊಕಿಲ್ಲ ಹನಿ ಕೆಸರು ಅಂಗೈಯಗಲ ಬೆಳೆದ ಮಾಂಸದ ಮುದ್ದೆಗೆ. ನವಮಾಸಗಳ ಜೀವದುಸಿರ ಬಸಿರ ಹೊತ್ತವಳು ತಾಯತನದ ಸುಖವ ಹಂಬಲಿಸಿದವಳು.. ಸಾವುನೋವಿನಲಿ ಮರುಜನ್ಮ ಪಡೆದವಳು.. ತನುವಿನೊಳು ಅಡಗಿದ ತನ್ನಾತ್ಮ ಕಂಡು ನಕ್ಕವಳು. ಎದಗಪ್ಪಿಕೊಂಡು ಅಮೃತವ ಉಣಸಿದವಳು. ಕರುಳ ಬಳ್ಳಿಯ ಕಡಿದು ಮಡಿಲೊಳೆರಗಿದವರೂ ನಸು ನಕ್ಕು ಸೆರಗ ಗಂಟಲಿ ಬಿಗಿದು ಅಂಬೆಗಾಲಿಡಲು ಹೆಜ್ಜೆಯ ಮೂಡಿಸಿದವಳು ಬೇಕು ಬೇಡಗಳ ಕಾಡಿಬೇಡಿ ಪಡೆದವರು ತುತ್ತನುಂಡು ತೊಳತೆಕ್ಕೆಯಲಿ ಮಲಗಿದವರು ತೊದಲು ನುಡಿಯ ತುಂಬ ಆವರಿಸಿದವಳು ‘ಅಮ್ಮಾ’ ಯೆಂದು ಕೂಗಿ ಕರೆದಾಗ ಓಗೊಟ್ಟವಳು ಕರುಳು ಹರಿದರೂ,ಕರುಳ ಕೂಗಿಗೆ ಧ್ವನಿಯಾಗಿ.. ಕಷ್ಟಗಳ ಸರಮಾಲೆಯಲಿ ಸಲುಹಿದವಳು… ಹಸಿದು ಬಂದೊರ ಹಸಿದೊಡಲಿಗೆ ತುತ್ತನಿಟ್ಟವಳು ಮನೆಯ ಅನ್ನಪೂರ್ಣೇಶ್ವರಿಯಾದವಳು. ಅಮ್ಮಾ ನಿನಗೆ ಸರಿಸಾಟಿಯಾರಿಹರು ಜಗದೊಳಗೆ?? ನಿನ್ನೊರತು ಏನೂಂಟು ಈ ಭುವಿಯೊಳಗೆ.? ಏನ್ನ ತಪ್ಪು ಗಳೆಲ್ಲ ನಿನ್ನ ಎದಯೊಳಗೆ ಅಪ್ಪಿರುವೆ. ನಿನ್ನಪ್ಪಿ ಕಾಯ್ವ ಪ್ರೇಮವ ನನ್ನಲ್ಲಿ ಬಿತ್ತಿರುವೆ.. ನಿನ್ನ ದೇಹವಿದು ನಿನಗರ್ಪಿತ ಅನುದಿನವು ಭವದೆಲ್ಲ ಸುಖವು ನಿನ್ನಡಿಗೆ ಸಮರ್ಪಿತವು… **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅವ್ವ ಲಕ್ಷ್ಮಿ ದೊಡಮನಿ ನಮ್ಮನೆ ಮುತ್ತೈದಿಯಾದಾಕಿ ಅವ್ವ ನೀನಂದ್ರ ನನ್ಜೀವ ಅಪ್ಪನ ಅರ್ಧಾಂಗಿಯಾದಾಕಿ ಅವ್ವ ನೀನಂದ್ರ ನನ್ಜೀವ ಚಳಿಗಾಲದಾಗ ಸೂರ್ಯಾನು ವ್ಯಾಳಿ ಮೀರ್ತಾನ ಆದ್ರ ಹೊತ್ತೀಗ ಕೈತುತ್ತಿಡುವಾಕಿ ಅವ್ವ ನೀನಂದ್ರ ನನ್ಜೀವ ನನ್ನ ಚಿಕ್ಕಂದನ್ನ ಚಿನ್ನದ ಚಣಗಳಿಂದ ಹೆಣಿದು ಒಲವು ಸುರಿಸಿದಾಕಿ ಅವ್ವ ನೀನಂದ್ರ ನನ್ಜೀವ ಜೇನುಗೂಡಿನ ಛಾವಣಿ ನಿಸರ್ಗ ಕೋಪಕ ನಡುಗಿದ್ರೇನ ಸೆರಗು ಅಲ್ಲಾಡಿಸದಾಕಿ ಅವ್ವ ನೀನಂದ್ರ ನನ್ಜೀವ ಕಾಡೋ ಒಲಿ,ಉರಿಸೋ ಹೊಗಿ, ಅಳಿಸೋ ಬಡತನವ ಸೋಲಿಸಿ ನಗುವಾಕಿ ಅವ್ವ ನೀನಂದ್ರ ನನ್ಜೀವ ಊಟದ ನಡುವ ಗುಟುಕ ಅಂಬಲಿ ಕುಡಿದಾಂಗ ಸವಿಸವಿ ಮಾತಾಡಾಕಿ ಅವ್ವ ನೀನಂದ್ರ ನನ್ಜೀವ ಅಡುಗಿ ಮಾಡಾಗ ಕತಿ ಹೇಳಿ ಒಳಮನಸ್ಸಿಗ ಕೈಹಾಕಿ ಮೊದಲ ಮೇಷ್ಟಾದಾಕಿ ಅವ್ವ ನೀನಂದ್ರ ನನ್ಜೀವ **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗುಲಾಬಿ ನಕ್ಷತ್ರ ಅಂಜನಾ ಹೆಗಡೆ ಶಾಪಿಂಗ್ ಹೋದಾಗಲೊಮ್ಮೆ ಪರಿಚಯದ ಅಂಗಡಿಯವ ಗುಲಾಬಿ ಬಣ್ಣದ ಚಪ್ಪಲಿ ಹೊರತೆಗೆದ ಬೆಳ್ಳನೆಯ ಪೇಪರಿನೊಳಗೆ ಬೆಚ್ಚಗೆ ಸುತ್ತಿಟ್ಟ ರಾಣಿ ಪಿಂಕ್ ಚಪ್ಪಲಿ! “ಸೈಜ್ ನೋಡಿ ಮೇಡಂ; ನಿಮ್ಮ ಕಾಲಿಗೆ ಹೇಳಿ ಮಾಡಿಸಿದ ಬಣ್ಣ” ಎಂದ ಹಳೆ ಚಪ್ಪಲಿಯ ಕಳಚಿ ಪಾದಗಳನ್ನೊಮ್ಮೆ ಕೈಯಿಂದ ತಡವಿ ಧೂಳು ಕೊಡಹಿ ಅಳೆಯಲು ನಿಂತೆ ಬಣ್ಣ ಗಾತ್ರಗಳ! ಬಳಸಲಾಗದು ಅಳತೆ ದಕ್ಕದೆ ಕುತ್ತಿಗೆಯ ತುಸುಬಾಗಿಸಿ ಬಿಳಿಯ ಸ್ಟ್ರೈಪ್ ಗಳೊಳಗೆ ಬೆರಳುಗಳ ಬಂಧಿಸಿ ದಿಟ್ಟಿಸಿದೆ! ಕನ್ನಡಿಯೊಳಗಿನ ಪಾದಗಳ ಮೇಲೆ ಹೊಳೆದವು ಬಿಡಿಸಿಟ್ಟ ಬಿಳಿ ಹೂಗಳು! ಕೊರೆದಿಟ್ಟ ಪುಟ್ಟಪುಟ್ಟ ಹೃದಯಗಳೊಂದಿಗೆ ಗುಲಾಬಿ ನಕ್ಷತ್ರಗಳು! ಜೊತೆಯಾದವು ಹೆಜ್ಜೆಗಳ ನೋವು ನಲಿವಿಗೆ; ನೇಲ್ ಪಾಲಿಷ್ ಗಳ ಕೂಡಿಟ್ಟ ಕನಸಿಗೆ! ನನ್ನ ನಿದ್ದೆಗೆ ಆಕಳಿಸಿ ಎದ್ದಾಗಲೊಮ್ಮೆ ಮೈಮುರಿದು ಕೂಡಿಕೊಂಡವು ಹಗಲು ರಾತ್ರಿಗಳಿಗೆ ಬಾತ್ ರೂಮು ಬಾಲ್ಕನಿ ಟೆರೆಸು ನಿರ್ಭಯವಾಗಿ ಅಲೆದೆವು “ದೇವರಮನೆಗೆ ಪ್ರವೇಶವಿಲ್ಲ” ಎಂದೆ ಮುನಿಸಿಕೊಂಡವು “ಪ್ಲೀಸ್” ಎಂದು ಪಟಾಯಿಸಿದೆ ಎಲ್ಲ ಸಲೀಸು ಪ್ರೈಸ್ ಟ್ಯಾಗ್ ಇಲ್ಲದ ಪ್ರೀತಿ ಮಾರಿದೆವು; ಖರೀದಿಸಿದೆವು ಮನಸ್ಸೊಂದು ಫ್ಲೀ ಮಾರ್ಕೆಟ್ಟು ಈಗ ಶಾಪಿಂಗ್ ಹೋದಾಗ ಬಟ್ಟೆ ಬ್ಯಾಗು ತರಕಾರಿ ಎಲ್ಲ ತರುತ್ತೇನೆ ಚಪ್ಪಲಿ ಅಂಗಡಿಯವ ಇನ್ಯಾರಿಗೋ ಹೊಸ ಜೊತೆಯ ಪಿಂಕ್ ಚಪ್ಪಲಿಯೊಂದನ್ನು ಮಾರುತ್ತಿರಬಹುದು! ಅದರ ಮೇಲೂ ಇರಬಹುದು ಹೂವು ಹೃದಯ ನಕ್ಷತ್ರಗಳು ******

ಕಾವ್ಯಯಾನ Read Post »

ಕಾವ್ಯಯಾನ

ಮಾತೃ ದೇವೋಭವ

ಮಾತೃ ದೇವೋಭವ ಸಂಮ್ಮೋದ ವಾಡಪ್ಪಿ ದೇವ ಬಿತ್ತಿದ ಇಲ್ಲಿ ಎದ್ದು ನಿಲ್ಲಲೆಂದು ಹಸಿರ ಚಿಗುರೊಡೆದು ಮೇಲೇಳಲೆಂದು ಬಸಿರ ಭೂತಾಯಿಯ ಒಡಲ ಹೊರಬಂದು ಉಸಿರ ಬೆಸೆದು ನಸು ನಗುವ ಬೀರಲೆಂದು ಇದು ಜನುಮ ಅಗೋಚರ ಶಕ್ತಿಯಿಂದ ಅಳುವ ದ್ವನಿಯ ಕೇಳುವ ತವಕದಿಂದ ಹುಟ್ಟು ನವಮಾಸದ ತಪದ ದಾರಿಯಿಂದ ಪಯಣ ಆ ಮಾತೆಯ ಲಾಲಿ ಹಾಡಿನಿಂದ ರತ್ನವಾಗಲಿ ಎನುತ ತೊಟ್ಟಿಲ ತೂಗಿದಾಗ ಮಂದಹಾಸದಿ ದೃಷ್ಟಿ ಬೊಟ್ಟು ಒತ್ತಿದಾಗ ಸುಪಥವ ಹಿಡಿದು ನಡೆಸಲು ಹರಸಾಹಸ ಯಶೋದೆಯ ಪರಿಶ್ರಮವೇ ಅವನ ವಿಕಾಸ ಭವದ ದಾರಿಯಲಿ ತಂದು ನಿಲ್ಲಿಸಿದ ದಾತ ಅವನು ನಿರ್ವಿಕಾರ,ಮಾತೆಯನಿಟ್ಟು ಮಾಡಿದ ಸಾಕಾರ ಎರಡು ಬಿಂದು ನಡುವೆ ಬಹು ಏಳು ಬೀಳು ಚಲಿಸು ಮುಂದೆ, ಒಳಿತು ಮಾಡು, ಅವಳು ಕೊಟ್ಟ ಬಾಳು **********

ಮಾತೃ ದೇವೋಭವ Read Post »

ಕಾವ್ಯಯಾನ

ಕಾವ್ಯಯಾನ

ಕ್ವಾರೆಂಟೈನ್ ಹಾಯ್ಕುಗಳು. ಪ್ರಮೀಳಾ ಎಸ್.ಪಿ. ಕರೊನಾಕ್ಕೆ ಕಾರಣವಂತೆ ಶಾಂಗ್ಲಿ ಮತ್ತವಳ ಬಾವಲಿ ನರಳುತ್ತಿರೋದು ಮಾತ್ರ ಇಟಲಿಯ ಇಲಿ. ಸತ್ತರಂತೆ ಅಮೆರಿಕಾದಲ್ಲಿ ಅಷ್ಟೊಂದು ಜನ. “ಹೊಯ್” ! ಟೀವಿಯಲ್ಲಿ ಮಾರಾಯ… ಎಂದು ಅಡ್ಡಾಡಿದರು ನಮ್ಮೂರ ಜನ . ಸುರರೇ ಕುಡಿಯುತ್ತಿದ್ದರು ಎಂಬ ನೆಪ ಕುಡುಕರದ್ದು ಕೇಳದಿದ್ದರೂ ನೀಡಿದವರು ಹೇಳಲಾರದ ನೆಪ ‘ಗಲ್ಲ’ದ್ದು. ಕಂಠ ಪೂರ್ತಿ ಕುಡಿದು ಅಪ್ಪ ಅಮ್ಮನಾದರು ಬೆತ್ತಲು ಕಣ್ಣು ಬಿಟ್ಟ ಮಗುವಿನ ಮನದಲ್ಲೀಗ ಕತ್ತಲು. ಕೇಳುವರೆಲ್ಲ ತೆರೆಯಲೆಂದು ಅವರವರ ಆದಾಯದ ಬಾಗಿಲು ತೆರೆಯಿರಿ ಎಂದು ಕೇಳುವುದೇ ಇಲ್ಲ ಮಕ್ಕಳು ಶಾಲೆಯ ಬಾಗಿಲು. ***********************

ಕಾವ್ಯಯಾನ Read Post »

You cannot copy content of this page

Scroll to Top