ಬೊಗಸೆಯೊಡ್ಡುವ
ಕವಿತೆ ಗೋಪಾಲ ತ್ರಾಸಿ ಅಹೋರಾತ್ರಿಬಾನು ಭುವಿಯ ನಡುವೆ ಚಲನಶೀಲ ಶಿಖರದಂದದಿ ಉದ್ದಾನುದ್ದಕೆರಾಶಿರಾಶಿ ಮೋಡಗಳ ಜಂಬೂಸವಾರಿ,ಕಾರಿರುಳ ದಿಬ್ಬಣಕೆ,ಅಲ್ಲೊಂದು ಇಲ್ಲೊಂದುಅಂಜುತ್ತಂಜುತ್ತ ಇಣುಕುವಮಿಣುಕು ನಕ್ಷತ್ರಗಳು, ಸಾಕ್ಷಿ. ಮೈಭಾರವಿಳಿಸಿಕೊಳ್ಳಲೇನೊ, ತಾನೇತಾನು ಮೈತುಂಬ ಕನ್ನಕೊರೆದುನಸುಕಿನಿಂದಲೆ, ಧಸಧಸ ಸುರಿದುಕೊಂಡಮೋಡ;ರ್ರೊಯ್ಯನೆ ಹೊಯಿಲೆಬ್ಬಿಸುವ ಗಾಳಿಗೌಜು,ಧಡಾಂಧುಡೂಂ, ಛಟ್ ಛಟ್ ಛಟೀಲ್ಗುಡುಗು ಮಿಂಚಿನ ಜುಗಲ್ಬಂಧಿಏರುಮಧ್ಯಾಹ್ನವೇ ಸಂಜೆಗತ್ತಲ ಭ್ರಾಂತಿ;ಹೊರಗೆ. ಆಯಾಸದಿಂದ ಕಿಟಕಿಬಾಗಿಲು ಸಂದಿತೂರಿಸುಯ್ಯನೆ ಒಳಸುಳಿದುಅಪ್ಯಾಯಮಾನವಾಗಿ ಕಚಗುಳಿಯಿಡುವಒದ್ದೆಗಾಳಿಗರಿಗರಿಯಾಗಿ ಮೈಮನಸ್ಸು ಬೆಚ್ಚಗೆಗರಿಗೆದರಬೇಕಿತ್ತು ; ಒಳಗೆ. ಮಾಗಿಯ ಚುಮುಚುಮು ಚಳಿಯ ಜೊತೆ ಅನಾಯಾಸ ಬೆವರಿಳಿಸುವನಿರ್ಜೀವ ಜಡ ಜಂತುಭೂಮ್ಯಾಕಾಶ ಬಾಹು ಚಾಚಿಕೊಳ್ಳುತ್ತಲೆ, ಎಲ್ಲೋ ಕ್ಷಿತಿಜದಂಚಿಂದದಿಢೀರನೆ, ಹೊಸ್ತಿಲಲಿ ಹೊಂಚು ! ಹೊರಟೇ ಹೋಯಿತೆನ್ನಿಬಂದಂತೆ ವೈಶಾಖ, ಪೆಚ್ಚುಮೋರೆ ಹಾಕಿಅಟ್ಟಕ್ಕೇರಿದ ಹರ್ಷೋಲ್ಲಾಸವರ್ಷಾಕಾಲಿಟ್ಟರೂ ಮಿಸುಕಾಡಲಿಲ್ಲರಾಹು ಬಡಿದಂತೆ ಮಂಕು ಸಮಯ ! ರೆಕ್ಕೆ ಪುಕ್ಕ ತೊಯ್ದುಹಿಂಜಿ ಹಿಂಡಿ ಇನ್ನಿಲ್ಲವೆಂಬಂತೆಮುದುಡಿ ಹಿಡಿಯಾದ ತೈನಾತಿ ದಿನಚರಿಪಿಳಿಪಿಳಿಗಣ್ಣು ನಿಸ್ತೇಜ ಪಾಪೆತೆರೆಗಣ್ಣಲಿ ಮೂರ್ಛೆ ಹೋದಮಾನವನಹಮಿಕೆಅಳಿದುಳಿದ ಅಂತ:ಸ್ಥೈರ್ಯಮಂಡಿಯೂರಲೂ ಘನಕಾರಣವಿರಬೇಕು;ಇರಲಂತೆ, ಇರುವಂತೆ. ತೊಯ್ಯಲಾಗದ ಮೃದುಲ ಮನಸ್ಸಿನವಿಭ್ರಾಂತಿನಿಮ್ನೋನ್ನತ ಹಾದಿಗುಂಟ ತಲ್ಲಣಗಳ ಸಂತೈಸುತ್ತಲೇ ಪಾರಾಗಬೇಕಿನ್ನುಸಕಲ ಪೀಡಾವಿನಾಶಕ ವಿಪ್ಲವಕ್ಕೆಗದ್ಗದಿತ ಮೋಡ ತೊಟ್ಟಿಕ್ಕುವ ಆ ಕೊನೇಯಸಂಜೀವಿನಿ ಹನಿಗೆಭೊಗಸೆಯೊಡ್ಡುವ ಆವೊಂದುತಂಪು ಬೆಳಕಿನ ಬೆಳಗಿಗೆ…









