ನೆನಪುಗಳು:
ಕವಿತೆ ನೆನಪುಗಳು: ಡಾ. ಅರಕಲಗೂಡು ನೀಲಕಂಠ ಮೂರ್ತಿ 1.ನೆನಪುಗಳೇ ಹಾಗೆ —ಒಮ್ಮೆ ಚುಚ್ಚುಸೂಜಿಗಳುಒಮ್ಮೆ ಚಕ್ಕಳಗುಳಿ ಬೆರಳುಗಳುಮತ್ತೊಮ್ಮೆ ಮುಗುಳುನಗೆಯ ಜೋಕುಗಳುಇನ್ನೊಮ್ಮೆ ಕಣ್ಣ ಬಸಿಯುವ ಹಳೆಯ ಹೊಗೆಯ ಅಲೆಗಳು…ಮತ್ತುಪಿಸುಮಾತಲಿ ಮುಲುಗುವಒಲವಿನ ಬಿಸಿ ಬಂಧುರ ಬಂಧನಗಳು…! 2.ನೆನಪುಗಳು —ಪ್ರಪ್ರಥಮ ಮಳೆಗೆ ವಟಗುಟ್ಟುವಕೊರಕಲ ಕಪ್ಪೆಗಳು;ಹರೆಯದ ಹುತ್ತದಲಿ ಭುಸುಗುಟ್ಟುಮತ್ತೆಲ್ಲೋ ಹರಿದು ಮರೆಯಾದಹಾವಿನ ಪೊರೆಗಳು…!ನೆನಪುಗಳು ಏಕಾಂತದಲಿ ಕಳಚುತ್ತವೆದಿರಿಸು ಒಂದೊಂದಾಗಿ,ಎಂದೋ ಹಂಬಲಿಸಿದ ಬಿಸಿಯಬೆಂಕಿಯಾಗಿ… 3.ನೆನಪುಗಳು —ಕಳೆದುಹೋದ ಕೋಲ್ಮಿಂಚಿನ ಹಸಿರ ಚಿಗುರುಈ ಋತು ಒಣಗಿ ಉದುರುವ ತರಗು…ಸಗಣಿ ಗೋಡೆಗೆಸೆವುದು ಬೆರಣಿಗಾಗಿ,ಆ ಬೆರಣಿಯುರಿದು ಬೆಂಕಿ…ಅಷ್ಟೆ! ಎಂಥ ಸುಕೃತವೋ ಏನೋ —ನೆನಪಿನ ಆಯಸ್ಸು ನಮ್ಮಷ್ಟೆಅಥವಾ…ಇನ್ನೂ ಕಮ್ಮಿ…! ****************************









