ಗಜಲ್
ಗಜಲ್ ಪ್ರಭಾವತಿ ಎಸ್ ದೇಸಾಯಿ ಪ್ರೀತಿ ಧಿಕ್ಕರಿಸಿದವನಿಗಾಗಿ ನೆನೆಯುತ್ತಿರುವೆ ನಾನೇಕೆ ಹೀಗೆಒಂದು ನುಡಿ ಆಡದವನಿಗಾಗಿ ಕೂಗುತ್ತಿರುವೆ ನಾನೇಕೆ ಹೀಗೆ ಬರುವನೆಂದು ಪಾರಿಜಾತ ಹೂಗಳನ್ನು ಹಾಸಿದ್ದೆ ಹಾದಿಗುಂಟಒಳಗೆ ಹೆಜ್ಜೆ ಇಡದವನಿಗಾಗಿ ಕಾಯುತ್ತಿರುವೆ ನಾನೇಕೆ ಹೀಗೆ ಹೊಂಗೆ ಮರದಲ್ಲಿ ದುಂಬಿಗಳ ಚಲ್ಲಾಟ ಕಂಡು ಉದ್ವೇಗಗೊಂಡೆಇರುಳೆಲ್ಲಾ ಅವನಿಗಾಗಿ ಕನವರಿಸುತ್ತಿರುವೆ ನಾನೇಕೆ ಹೀಗೆ ಹಂದರದ ಬಳ್ಳಿಯಲಿ ತುಂಬಿ ನಲಿಯುತಿದೆ ಸಿಹಿ ಬಂಡು ಹೀರುತ್ತಾತುಟಿಗೆ ಮಧು ಹಚ್ಚದವನಿಗಾಗಿ ಭಜಿಸುತ್ತಿರುವೆ ನಾನೇಕೆ ಹೀಗೆ ಒಂಟಿ ಕೋಗಿಲೆ ವಸಂತಾಗಮಕೆ ಸಂತಸದಲಿ ಹಾಡುತಿದೆ” ಪ್ರಭೆ “ಮಿಡಿಯದ ಹೃದಯ ಮಿಲನಕ್ಕಾಗಿ ಬಯಸುತ್ತಿರುವೆ ನಾನೇಕೆ ಹೀಗೆ *************************************









