ಕನಸುಗಳ ದೊಂಬರಾಟ
ಕವಿತೆ ಕನಸುಗಳ ದೊಂಬರಾಟ ಸುಮನಸ್ವಿನಿ. ಎಂ ನೀ ಮರಳುವೆಯೆಂಬಪವಾಡವೊಂದು ಘಟಿಸಿಯೇತೀರುತ್ತದೆಂದು ನನ್ನ ನಂಬಿಸಲುಹರಸಾಹಸ ಪಡುವಕನಸುಗಳ ದೊಂಬರಾಟಕ್ಕೆನಕ್ಕುಬಿಡುತ್ತೇನೆ ಈಗೀಗ..ಹೊರಳಿ ನೋಡಿದರೂ ಸಹಕಾಣದಷ್ಟು ದೂರದಲ್ಲಿ ನೀನನ್ನಿರಿಸಿಬಿಟ್ಟಿರುವುದರಿಂದ! ದಿನಕ್ಕೆರಡು ಬಾರಿಯಾದರೂಕಣ್ತುಂಬಿ ತುಳುಕಿ ಉರುಳಿಹೋಗಲು ನಿನ್ನ ನೆನಪುಗಳುನನ್ನೊಂದಿಗೆ ಜಿದ್ದಿಗೆ ಬೀಳುತ್ತವೆ..ಎದೆಯೊಳಗೆ ಹನಿಯೊಡೆದುಹರಡಿಕೊಂಡಂತೆಲ್ಲಾ ಜಾಗಸಾಲದಾದಾಗ, ಪಾಪ!ಅಮಾಯಕ ನೆನಪುಗಳುತಾನೇ ಏನು ಮಾಡಿಯಾವು? ಏಳುಸಮುದ್ರಗಳಾಚೆಗಿನಏಳುಸುತ್ತಿನ ಏಕಾಂತ ಕೋಟೆಯತುತ್ತತುದಿಯ ಕೋಣೆಗೂ ನುಗ್ಗಿ‘ರಾಜ’ಕುಮಾರನೊಬ್ಬ ಬರುತ್ತಾನೆಂಬನಿರೀಕ್ಷೆಯ ಅದಮ್ಯ ನಂಬಿಕೆಗೆಬೆರಗಾಗುತ್ತೇನೆ ಬಹಳವೇ,ಮುಗಿದ ದಾರಿಯ ಕಡೆಯಲ್ಲೊಂದುಹೊಸ ತಿರುವು ಸೃಷ್ಟಿಯಾಗುವಭ್ರಮೆಯ ‘ಬಗೆ’ಗೆ ಸೋಜಿಗಪಡುತ್ತಾ! *************************************









