ಬಂಡಾರ ಬಳೆದ ಹಣಿ
ಕವಿತೆ ಬಂಡಾರ ಬಳೆದ ಹಣಿ ಡಾ.ಸುಜಾತಾ ಸಿ. ಬಂಡಾರ ಬಳೆದ ಹಣಿಬಾಯಿತುಂಬ ಎಲೆ ಅಡಿಕೆಜೋತು ಬಿದ್ದ ಗುಳಿ ಕೆನ್ಯೆಜಿಡ್ಡು ಗಟ್ಟಿದ ಜಟಾಧರಿಕೈ ತುಂಬಾ ಹಸಿರ ಬಳಿಎದೆ ತುಂಬಾ ಕವಡೆ ಸರಮೈ ತುಂಬಾ ಹಸಿರುಟ್ಟುಪಡಲಗಿ ಹಿಡಿದುಓಣಿ ಓಣಿ ತಿರುಗುವಳುಜೋಗತಿ ಎಂದು ಹೆಸರಿಟ್ಟುಕೂಗುವರೆಲ್ಲರೂಕತ್ತಲೆಯ ಬದುಕಲ್ಲಿಸದಾ ಬುಡ್ಡಿ ಚಿಮಣದಬೆಳಕಾಗಿಸಿ ಹಂಬಲಿಸಿಸೂರ್ಯನ ಬೆಳಕಿಗೆಜೋಗಕ್ಕೆ ಜೊಗತಿಊಧೋ ಉಧೋ ಎಂದುಹೋರಟಳು ಮಕ್ಕಳ ಸಲುವಲೆಂದುಕಂಡ ಕಣ್ಣು ಉರಿ ಕೆಂಡವಾಗಿಗೈಯ್ಯಾಳಿ ಎಂದುಕೊಟ್ಟುಬಿಟ್ಟರು ಪಟ್ಟವಒಣ ರೊಟ್ಟಿ ಜೊಳಕೆಕೈ ಚಾಚಿ ಜೋಳಿಗೆ ಬಾಯಿತೆರೆದಾಗ ಮೂಗು ಮುರಿಯುತ್ತಲೇಒಳಹೋದ ಹೆಣ್ಣುವಟಗುಟ್ಟಿ ತಂದಾಕಿದಹಳಸಲು ಜೊಳಿಗೆ ಬಟ್ಟೆಅವಳ ಅಂಗಳದ ತುಂಬೆಲ್ಲಹನಿಯ ರಂಗವಲ್ಲಿ ಚೆಲ್ಲಿಮುಂದೆ ನಡೆದಾಗಬೊಗಸೆಯೊಡ್ಡಿ ನೀರುಕುಡಿದು ದಾಹ ತೀರದಿರಲುಮುಂದಿನ ಮನೆಯ ಪಯಣಒಂದು ಕಾಸು ಎಸೆದುಒಳ ಹೊದ ತಾಯಿದುರ್ಗುಟ್ಟಿ ನೊಡಿದರುಹರಸಿ ಮುಗುಳು ನಗೆ ನಕ್ಕುದಾರಿ ಸಾಗಿಸಿ ಜನಸಂದಣಿಕಡೆಗೆ ಕಾಲ ಎಳೆಯುತ್ತಾವಿಶ್ರಮಿಸಲು ಬೇವಿನ ಮರದಆಶ್ರಯ ಪಡೆದು ಕುಳಿತಿರಲುಬಡಕಲು ದೇಹದಮುಖ ಬಾಡಿದ ನನ್ನಂತೆಇರುವ ಹಸಿದ ಹೊಟ್ಟೆಗೆಅನ್ನ ಕೇಳಿರಲುಜೊಳಿಗೆ ಒಳಗಡೆಒಣ ರೊಟ್ಟಿ ಕುಟುಕಲುಒಡಲ ಹಸಿವಿಗೆ ಆಸರೆಯಾ ಮಾಡಿಎದ್ದು ನಡೆದಳುಬೇವಿನ ಎಸಳುಬಿಸಿಲೊದ್ದು ತಣ್ಣಗಿರಲಿನಿನ್ನ ಕುಡಿ ಬಳ್ಳಿ ಎಂದುಹರಸಿದಂತಾಗಿಮನೆಯ ಕಡೆಗೆ ಹೆಜ್ಜೆ ಇಡಲುಗುಡಿಸಲ ತುಂಬೆಲ್ಲಾ ಕಣ್ಣಾಗಿಕಾವಲಾಗಿ ಕಾಯತಲಿರುವಚಿಕ್ಕಮಕ್ಕಳು ಬಂದುಎದೆಗವಚಿ ಕೊಂಡಾಗಬಿಸಿಲ ಝಳಕೊಒಳ ಬೆಗುದಿಗೊಒತ್ತರಿಸಿ ಬಂದ ಕಣ್ಣ ಹನಿಯಉಪ್ಪುಂಡು ಬಿಕ್ಕಿ ಬಿಕ್ಕಿಅತ್ತಾಗ ಸಂಜೆಯ ಕಿರಣಮುಸುಕ್ಕೊದ್ದು ಮಲಗಿದಾಗಗೋಧುಳಿ ಕೆಮ್ಮಣ್ಣುಮುಖ ಮೊತಿ ಮುಚ್ಚಿಅಳುವೆಲ್ಲ ನುಂಗಿಮತ್ತೇ ಹಣಿಗೆ ಸಿಂಗರಿಸಿದಳುಬಂಡಾರವ ಬಳಿದ ಬಂಗಾರದ ತಾಯಿ









