ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಕಾಫಿಯಾನ ಗಜಲ್

ಕಾಫಿಯಾನ ಗಜಲ್ ಅಮೃತ ಎಂ ಡಿ ಅಪ್ಯಾಯಮಾನ ಒಲವ ಹಂಚುವ ಸರದಿ ನನ್ನದುಅಭೂತಪೂರ್ವ ಸಾನಿಧ್ಯ ನೀಡುವ ಗುಣ ನಿನ್ನದು ತುಸು ತುಂಟಾಟವ ಮರೆಮಾಚು ಲಜ್ಜೆ ಆವರಿಸುತ್ತದೆನಡುವಿನ ಒನಪಿನಲ್ಲಿ ಕಾಡಿಸುವುದ ಯಾರು ಕಲಿಸಿದ್ದು.? ಅಧರದಲ್ಲಿ ಏನು ಮಧು ಬಟ್ಟಲು ಅಡಗಿ ಕುಳಿತಿದ್ಯ..?ಚುಂಬಿಸುವ ಪರಿಗೆ ಮೊಗವೆಲ್ಲ ಕೆಂಪೇರಿ ನಲಿಯುವುದು ಶರಾಬಿನ ರಸವ ಹೀರಿದಂತೆ ಒಷ್ಠದಲ್ಲಿಯೂ ಇರುವುದ..?ಪಾಪ ಮೊಗ್ಗಿನಂತೆ ಮೃದು ಆಕೆ, ಸೊರಗಿ ಬಿಟ್ಟಾದು. ಅಮ್ಮು ಈ ಹೈದನ್ಯಾಕೋ ಬಿಡುಗಡೆ ನೀಡುವಂತಿಲ್ಲಮನವು ಅವನ ಆಲಿಂಗನದಲ್ಲಿ ನಕ್ಕು ಕುಣಿಯುವುದು.. ****************************************************

ಕಾಫಿಯಾನ ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಸಿದ್ಧರಾಮ ಕೂಡ್ಲಿಗಿ ಎದೆಯೊಳಗೆ ನೂರು ಮುಳ್ಳುಗಳಿದ್ದರು ಮೊಗದಲ್ಲಿ ನಗೆಹೂ ಸುರಿದವಳು ನೀನಲ್ಲವೆ ಮನದೊಳಗೆ ನೂರು ಕಂಬನಿಗಳಿದ್ದರೂ ಕಣ್ಣಲ್ಲಿ ಬೆಳದಿಂಗಳ ಚೆಲ್ಲಿದವಳು ನೀನಲ್ಲವೆ ಏನೊಂದನೂ ಬಯಸದೆ ಬಂಡೆಗಲ್ಲಿನಲೂ ಬದುಕುವ ಛಲ ಹೊತ್ತು ಹಬ್ಬುತ್ತ ನಡೆದೆ ನಿಂತ ನೆಲದೊಳಗೆ ಬೇರಿಳಿಸುತ್ತಲೇ ಬೆಳಕಿನ ಪಥದಲ್ಲಿ ಹೆಜ್ಜೆ ಊರಿದವಳು ನೀನಲ್ಲವೆ ಸಾಗರದಷ್ಟು ಪ್ರೀತಿಯಿದ್ದರೂ ಭೋರ್ಗರೆಯುವುದನೇ ಮರೆತು ಹೊಯ್ದಾಡುತಲಿದ್ದೆ ಮುತ್ತು ರತ್ನ ಹವಳಗಳ ಒಡಲಲಿ ಹೊತ್ತು ಜಲಧಿಯ ಮುಸುಕ ಹೊದ್ದವಳು ನೀನಲ್ಲವೆ ಸುಂದರತೆ ಎಂಬುದೂ ಸೋತು ನಿನ್ನೆದುರು ಮಂಡಿಯೂರಿ ತನ್ನಸ್ತಿತ್ವಕೇ ನರಳಾಡಿತು ಆಗಸದಷ್ಟು ಚೆಲುವಿನ ಅರಿತಷ್ಟೂ ಆಳದ ವಿಸ್ಮಯ ಭಾವಗಳ ಪಡೆದವಳು ನೀನಲ್ಲವೆ ಸಿದ್ಧನಿಗೆ ಪ್ರೇಮದ ಹೃದಯವಾದರೂ ಎಲ್ಲಿತ್ತು ಅದು ಖಾಲಿ ಮಧುಬಟ್ಟಲಾಗಿತ್ತು ಒಲವೆಂಬ ಮತ್ತನೇರಿಸಿ ಪ್ರತಿ ಕನಸಿನಲೂ ನೂರು ನವಿಲುಗಳ ಕುಣಿಸಿದವಳು ನೀನಲ್ಲವೆ ***********************************************

ಗಜಲ್ Read Post »

ಕಾವ್ಯಯಾನ

ಯಾವುದೀ ನಕ್ಷತ್ರ?

ಕವಿತೆ ಯಾವುದೀ ನಕ್ಷತ್ರ? ಮಾಲತಿ ಶಶಿಧರ್ ಕವಿಗೆ ಏಕಾಂತ ಸಿಕ್ಕರೆ ಸಾಕುಚಂದ್ರ ನೇರವಾಗಿ ಎದೆಗೆನೆಗೆದುಬಿಡುವನುನನ್ನ ಏಕಾಂತದ ಅಂಗಳಕೆನಕ್ಷತ್ರವೊಂದು ಜಾರಿಬಿದ್ದಿದೆಇಂದ್ರಲೋಕದ ಸ್ವತ್ತೋಇಲ್ಲ ಚಂದ್ರನ ಅಣುಕಿಸಲು ಬಂತೋ?? ದಾಹದಾಳವ ಅರಿತುಎದೆಯ ಬಗೆದು ನೀರು ತೆಗೆದುತಣಿಸುತ್ತದೆಮುತ್ತು ರತ್ನಗಳ ಕಣ್ಣಂಚಲ್ಲೆಸುರಿಸುತ್ತದೆಈ ನಕ್ಷತ್ರದ್ದು ಇಲ್ಲೇ ಬಿಡಾರಬಿಡುವ ಹುನ್ನಾರೋ ಇಲ್ಲನನ್ನೇ ಎಳೆದೊಯ್ಯುವತಕರಾರೋ ಕಾಣೆ ಈ ನಕ್ಷತ್ರ ಅವರಿಬ್ಬರಂತಲ್ಲಒಬ್ಬ ತಿಂಗಳಿಗೊಮ್ಮೆ ಬಂದರೆಇನ್ನೊಬ್ಬ ತಾಸುಗಟ್ಟಲೆ ಹರಟಿಅಲ್ಲೆಲ್ಲೋ ಪಶ್ಚಿಮ ದಿಕ್ಕಿನಗುಡ್ಡದಡಿ ತಲೆ ಮರೆಸಿಕೊಳ್ಳುವ ನೆಟ್ಟಗೆ ಎದೆಗೆಹೂಡಿದ ಬಾಣಈ ನಕ್ಷತ್ರಜಲದವಶೇಷಗಳಚಿಲುಮೆ ಜಿನುಗುತ್ತದೆ ಜನ್ಮಾಂತರದ ವಿರಹ, ಕಾತರಕಾದ ವೇದನೆ ಯಾತನೆಕತ್ತಲರೆಕ್ಷಣದಲ್ಲಿ ಓಡಿಸಲುಬಂತೇನೋ ಈ ಗಂಡು ನಕ್ಷತ್ರ.. ***************************

ಯಾವುದೀ ನಕ್ಷತ್ರ? Read Post »

ಕಾವ್ಯಯಾನ

ಆತ್ಮಸಾಕ್ಷಿ

ಕವಿತೆ ಆತ್ಮಸಾಕ್ಷಿ ಪಂ. ರವಿಕಿರಣ ಮಣಿಪಾಲ. ಆತ್ಮಸಾಕ್ಷಿಯಲೇಖನಿಯನ್ನುಭೋಗದ ಮಸಿಯಲ್ಲದ್ದಿಇತಿಹಾಸ ಪುಸ್ತಕಬರೆಯುವುದುದುಸ್ತರ ಹಾಗಾಗಿಯೆಇತಿಹಾಸ ಪುಸ್ತಕತುಂಬಕಣ್ಣೀರ ನದಿಗಳುರಕ್ತದ ಕಾಲುವೆಗಳುನಿಟ್ಟುಸಿರ ಚಂಡಮಾರುತಗಳುಬೆಂದೊಡಲ ಹಸಿವಿನ ಜ್ವಾಲಾಮುಖಿಗಳುಉರುಳುರುಳಿ ಹೊರಳಿದಕೆಂಪುಸಿಂಹಾಸನಗಳುಭೂಕಂಪಗಳು ***

ಆತ್ಮಸಾಕ್ಷಿ Read Post »

ಕಾವ್ಯಯಾನ

ಶಾವಾತ್ಮ ಪದಗಳು

ಕವಿತೆ ಮಡಿಕೆಯಡಿಯ ಬೆಳಕು ಶಾಂತಿವಾಸು ಮಡಚಿಡು ಮಡಿಕೆಯಾಗಿ…ಅಣುವು ಕೂಡಾ ಅನುವಾಗೆರಗಿದ ಅನುಭವವ ನಾಳೆಗಾಗಿ…. ಮಡಚಿಡು ಸಂತಸದಿಂದ…ಕದಡಿದ ನಿನ್ನ ಮನದ ಕತ್ತಲೆಯೊಳು, ರವಿ ಸಂಚಯಿಸಿದ್ದನ್ನು ಜತನದಿಂದ…. ಮಡಚಿಡು ಇಂದಿನ ನಿರಾಶೆಯ…ಇರಲದರಲಿ, ದುಃಖ ಅಲ್ಪಾಯುವೆಂದು ಸಾರುವ ಸಂದೇಶದ ಸದಾಶಯ… ಮಡಚಿಡು ಸೋಲುಗಳ ಸರಮಾಲೆ…ತೆರೆದು ನೋಡಲದುವೇ ಏಣಿ ಗೆಲುವಿಗೆ, ಗಟ್ಟಿಹೆಜ್ಜೆ ಇಟ್ಟು ಏರಲು ಮೇಲೆ ಮೇಲೆ… ಮಡಚಿಡು ಈಜಿ ಗೆದ್ದ ಜಯವನ್ನು …ವಿಧಿಯಾಟದ ದಾಳವಾಗುರುಳುವಾಗ ನೀನೇ ಅರಿಯಲು ನಿನ್ನಿರಿಮೆಯನ್ನು.. ಮಡಚಿಡು ಅಡಿಯಲ್ಲಿ ಸೋಲುಗಳ, ಸದಾ ಸುಳಿದಾಡಿ ಸೊಲ್ಲೆತ್ತದಂತೆ…ಎಲ್ಲಕ್ಕಿಂತ ಮೇಲೆ ಮಡಚಿಡು, ಸೋಲನ್ನು ಗೆದ್ದ ಖುಷಿಯ ಒಂದೊಮ್ಮೆ ಕಾಣಲು, ನಿನ್ನದೇ ಮನದ ಕತ್ತಲೊಳಿಣುಕುವ ಬೆಳಕು ಆರದಂತೆ… ********

ಶಾವಾತ್ಮ ಪದಗಳು Read Post »

ಕಾವ್ಯಯಾನ

ಪತ್ರ

ಕವಿತೆ ಪತ್ರ ಅಕ್ಷತಾ‌ ಜಗದೀಶ. ನೋಡ ನೋಡುತ್ತಲೇ ಮರೆಯಾಯಿತುತಿಂಗಳಿಗೊಮ್ಮೆ ಬರುತ್ತಿದ್ದ ಪತ್ರಲೇಖನಿ ಹಿಡಿದುಮಧುರ ಬಾಂಧವ್ಯ ನೆನೆದುಅಕ್ಷರ ಮಾಲೆಯೊಳುಸಂಬಂಧ ಪೋಣಿಸಿ ಬರೆದುಹತ್ತಿರ ಬೆಸೆಯುತ್ತಿದ್ದ ಪತ್ರಈಗ ಕೇವಲ ನೆನಪು ಮಾತ್ರ! ನೋವು ನಲಿವಿನಲ್ಲಿ ಜೋತೆಯಾಗಿದ್ದಪತ್ರ…ಬಂಧುಗಳೊಡನೆ ಬಾಂಧವ್ಯ ಬೆಸೆಯಲುಸೇತುವೆಯಾಗಿದ್ದ ಪತ್ರ..ಅಗಾಧವಾದ ಮಾತುಗಳನುಮಿತಗೊಳಿಸಿ ವ್ಯಕ್ತಪಡಿಸುತ್ತಿದ್ದಪತ್ರ..ಈಗ ಕೇವಲ ನೆನಪು ಮಾತ್ರ! ಎಷ್ಟೇ ಆಧುನಿಕತೆಯ ಉಪಕರಣಬಂದರುಪತ್ರಕ್ಕೆ ಸರಿಸಮನಾಗಿ‌ ನಿಲ್ಲಲಾರರುನೆನಪುಗಳಲಿ ನೆನೆಪಾಗಿನೆನಪನ್ನೇ‌ ನೆನಪಿಸುವ ಪತ್ರಈಗ‌ ಕೇವಲ‌‌ ನೆನಪು ಮಾತ್ರ… ************************

ಪತ್ರ Read Post »

ಕಾವ್ಯಯಾನ

ಸಂಕ್ರಾಂತಿ ಬೆೇಕಿದೆ

ಕವಿತೆ ಸಂಕ್ರಾಂತಿ ಬೆೇಕಿದೆ ಹಸಿದು ಉಸಿರು ಹಿಡಿದುಬದುಕುತ ಅಳುವಮಗುವಿಗೆ ಹಾಲುಣಿಸಲುಮಮತೆಯಸಂಕ್ರಾಂತಿ ಬೇಕಿದೆ ಧಾನ್ಯ ಭೊಗಸೆಯಲಿಟ್ಟುಬತ್ತಿದ ಹೊಟ್ಟೆಬಡಬಾಗ್ನಿಯಲಿಬೇಯುವ ಮನುಜಗೆಮಾನವೀಯತೆಯಸಂಕ್ರಾಂತಿ ಬೇಕಿದೆ ಅಕಾಲ ವೃಷ್ಟಿಗೆಎದೆಒಡ್ಡಿ ಕಾಳುಹೆಕ್ಕಲು ಕಣ್ಣೀರಿಕ್ಕುವನೇತ್ರ ಇಂಗಿದಮನುಕುಲಕೆಬೇಕಿದೆ ಸಂಕ್ರಾಂತಿಸಂಕ್ರಾಂತಿ ಬೇಕಿದೆ ನೆಲಕಚ್ಚಿದ ನೆಗಿಲಉಸಿರು ಹಸಿರಾಗಿಸಿಗುಡಿಸಲುಗಳುಗುಡಿಯನುವಹೃದಯತೆಯ ಸಂಕ್ರಾಂತಿಸಂಕ್ರಾಂತಿ ಬೇಕಿದೆ ಖಾದಿ ಖಾಕಿ ಕಾವಿಯತೊಟ್ಟುಕಪಟತೆಯ ಕೈಯಲ್ಲಿಚೀಲ ತುಂಬುವಭಕ್ಷಕರ ಆತ್ಮಸಾಕ್ಷಿಗೆಸಂಕ್ರಾಂತಿ ಬೇಕಿದೆ ಬಾಳುನೀಡುವಭಾಗ್ಯದಾತೆಯಬರಿಮೈಯಾಗಿಸಿರಕ್ತ ಹೀರುವರಾಕ್ಷಸರ ಸಂಹಾರಕ್ಕೆಸಂಕ್ರಾಂತಿ ಬೇಕಿದೆ ಅಪರಿಮಿತ ಬುದ್ಧಿ ಶಕ್ತಿಯಅಡವಿಟ್ಟು ಆಮಿಷಕೆಅಣು ರೇಣು ತೃಣ ಕಾಷ್ಟಗಳುಕ್ಷಣ ಮಾತ್ರದಲಿಭಸ್ಮವೀಯುವಕ್ರೊರತೆಗೆಸಂಕ್ರಾಂತಿ ಬೇಕಿದೆ ಮನದ ವ್ಯಾಪಾರಕೆಮನುಜ ಕುಲವಿಕ್ರಯಿಸುವಅಮಾನುಶತೆಗೆಬೇಕಿದೆ ಸಂಕ್ರಾಂತಿಸಂಕ್ರಾಂತಿ ಬೇಕಿದೆ ಬದುಕ ಬೇರೆನಿಪನೆಲ ಜಲಮರ ಗಿಡ ಪಶು ಪಕ್ಷಿಗಳಕೊಗಿಗೆ ದನಿ ಎನಿಪ ಸಂಕ್ರಾಂತಿಸಂಕ್ರಾಂತಿ ಬೇಕಿದೆ ಮನುಜಕುಲಕೆ ಬೇಕಿದೆಪ್ರೀತಿ ವಾತ್ಸಲ್ಯಮಾನವೀಯತೆಯಸಂಕ್ರಾಂತಿಸಂಕ್ರಾಂತಿ ಬೇಕಿದೆ ********************************************* ಶಾಂತಲಾ ಮಧು

ಸಂಕ್ರಾಂತಿ ಬೆೇಕಿದೆ Read Post »

You cannot copy content of this page

Scroll to Top