ಕದಳಿಯ ಅಕ್ಕ
ಕವಿತೆ ಕದಳಿಯ ಅಕ್ಕ ಜ್ಯೋತಿ ಬಳ್ಳಾರಿ ಶಿವಮೊಗ್ಗ ಜಿಲ್ಲೆಯಉಡುತಡಿಯಲಿ ಹುಟ್ಟಿತು,ಒಂದು ಕನ್ನಡದ ಕಂದಮ್ಮಅವಳಿಂದ ಜಗಕ್ಕೆಲ್ಲಆನಂದ ನೋಡಮ್ಮ. ನಿರ್ಮಲಶೆಟ್ಟಿ ಸುಮತಿದಂಪತಿಗಳ ಅಕ್ಕರೆಯ ಕಂದಮ್ಮ,ಸುರದೃಪಿ ಗುಣವಂತಹೆಮ್ಮೆಯ ಮಗಳಮ್ಮ. ಅಂದದ ಮೈಮಾಟಕ್ಕೆಕೌಶಿಕ ಮಹಾರಾಜನ ವಶವಾದಳು ಕೇಳಮ್ಮ,ಮಾತು ತಪ್ಪಿದ ರಾಜನ ದಿಕ್ಕರಿಸಿಬಿಟ್ಟಳಮ್ಮ. ಅರಮನೆಯ ಭೋಗವತೊರೆದು ಕೇಶಾಂಬರಿಯಾಗಿ ಹೋರಟು ಬಿಟ್ಟಳಮ್ಮ.ಭವ ಬಂಧನವ ತೊರೆದು ಮಲ್ಲಿಕಾರ್ಜುನನ್ನುಕಾಡು ಮೆಡುಗಳಲ್ಲಿ ಹುಡುಕಿದಳಮ್ಮ. ಹಾಡುವ ಕೋಗಿಲೆಗೆಹಕ್ಕಿ ಪಕ್ಷಿಗಳಿಗೆ ಕಂಡಿರಾನನ್ನ ಪತಿನೆಂದು ಕೇಳಿದಳಮ್ಮ. ಕಲ್ಯಾಣದ ಅನುಭವ ಮಂಟಪದಲಿಅಲ್ಲಮಪ್ರಭುವಿನ ಪರೀಕ್ಷೆ ಗೆದ್ದಳಮ್ಮಜ್ಞಾನದ ಗಣಿಯಾಗಿಮಹಾಮನೆಯ ಅಕ್ಕ ಆದಳು ನೋಡಮ್ಮ. ಬಸವಣ್ಣನವರ ಜೊತೆಗೂಡಿಕಟ್ಟಿದಳು ಸಮಾನತೆಯ ಕಲ್ಯಾಣ ನಾಡಮ್ಮ,ವಚನ ಚಳುವಳಿಯಲಿಭಾಗಿಯಾದ ಕನ್ನಡಮ್ಮನಸ್ವಾಭಿಮಾನಿ ಮಗಳಮ್ಮ. ಯೋಗಾಂಗ ತ್ರಿವಿಧಿ ,ನೂರಾರು ವಚನಗಳನ್ನುಚೆನ್ನಮಲ್ಲಿಕಾರ್ಜುನ ಎಂಬಅಂಕಿತನಾಮದಿ ಬರೆದಳಮ್ಮ ಕನ್ನಡದ ಮೊದಲ ಕವಯತ್ರಿಯಾದಳಮ್ಮಅವಳೆ ಅಕ್ಕಮಹಾದೇವಿಯಮ್ಮಜಗದಲಿ ಹುಟ್ಟಿದ ಬಳಿಕಸ್ತುತಿ ನಿಂದನೆ ಬಂದರೆ ಸಮಾಧಾನದಿಂದಿರಬೇಕೆಂದುಜಗಕೆ ಹೇಳಿದಳಮ್ಮ ಶ್ರೀಶೈಲದ ಕದಳಿಯಲಿ,ನಿಜ ಪತಿ ಮಲ್ಲಿಕಾರ್ಜುನನಲ್ಲಿಕೊನೆಗೆ ಐಕ್ಯಳಾದಳಮ್ಮ*****************************************









