ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಾಯ್ಕುಗಳು

ಕವಿತೆ ಹಾಯ್ಕುಗಳು ಭಾರತಿ ರವೀಂದ್ರ 1) ಲಾಸ್ಯ ಬುವಿ ಮೊಗದಿಚಿಗುರೊಡೆದ ಲಾಸ್ಯಮೇಘ ಮಿಂಚಲು. 2) ಸಾಕ್ಷಿ ಕಣ್ಣಂಚು ಹನಿ :ಬಿಕ್ಕಲು, ಬಿಟ್ಟು ಹೋದನೆನಪು ಸಾಕ್ಷಿ. 3) ಸತ್ಯ ಕತ್ತಲು ಭ್ರಮೆಸುಳ್ಳಿನ ಕನ್ನಡಿಗೆಬೆಳಕು ಸತ್ಯ. 4) ಮಲ್ಲಿಗೆ ಮಾತು ಮಲ್ಲಿಗೆಸುಗಂಧದ ಸೊಗಸುನುಡಿ ಸಂಗೀತ 5) ಸೋನೆ ನೆನಪು ಸೋನೆ:ಕಣ್ಣು ಹಸಿ ಯಾಗಿಸಿಹೃದಯ ಒದ್ದೆ. *************************

ಹಾಯ್ಕುಗಳು Read Post »

ಕಾವ್ಯಯಾನ

ಯಾರು ಬಂದರು

ಕವಿತೆ ಯಾರು ಬಂದರು ಡಾಲಿ ವಿಜಯ ಕುಮಾರ್.ಕೆ.ವಿ. ಯಾರು ಬಂದರು ಸಖಿಯೇಎಲ್ಲಿ ಹೋದರು…. ಬೆಳ್ಳಿ ಬೆಳಕು ಬರುವ ಮುನ್ನಮಲ್ಲೆ ಮುಡಿಸ ಬಂದರು.ರಾಶಿ ಹಿಮದ ತಂಪು ಸುರಿದುಮುತ್ತ ಎರಚಿ‌ ಹೋದರು. ಪಚ್ಚೆ ಹಸಿರ ಸೀರೆಯುಡಿಸಿಬೆಟ್ಟಬಯಲೆ ಕುಚ್ಚವೂಶರಧಿಯಗಲ ಸೆರಗ ಹೊದಿಸಿಮೈಯಮುಚ್ಚಿ ಹೋದರು. ಅಡವಿಯೊಳಗೆ ತೊಟ್ಟಿಲಿಟ್ಟುಒಲವ ತೂಗ ಬಂದರು.ನಭದ ನೂಲು ಇಳೆಗೆ ಇಳಿಸಿನಲ್ಲೆ ಮುಟ್ಟಿ ಹೋದರು. ಅಲ್ಲಿ ಯಾರೋ ಕಂಡ ಹಾಗೆಕರಗಿ ನದಿಯ ತಂದರು.ಇಲ್ಲಿ ಯಾರೋ ಕೂಗಿದಾಗೆಜಲಧಿಯೊಳಗೆ ಹೋದರು. ಬಿದಿರಕೊಳಲ ಶ್ಯಾಮನೇನೆರಾಧೆ ನಿದಿರೆ ಕದ್ದವ.ಗರಿಯ ಮುಡಿದ ಗೊಲ್ಲನೇನೆನಿನ್ನ ಕಂಡು ಹೋದವ… ***************************************************

ಯಾರು ಬಂದರು Read Post »

ಕಾವ್ಯಯಾನ

ಅಭಿವ್ಯಕ್ತ

ಕವಿತೆ ಅಭಿವ್ಯಕ್ತ ವೀಣಾ ರಮೇಶ್ ನೀನು ಅನುಭವನಾನು ಅನುಭಾವವಾಗಿನೀನು ವ್ಯಕ್ತ,ನಾನು ಅಭಿವ್ಯಕ್ತವಾಗಿನನ್ನ ಏಕಾಂತದಲ್ಲೂನೀ ಕಾಂತವಾಗಿ ಮಾತು ಬೆತ್ತಲೆಯಾಗಿಮೌನ ಕತ್ತಲೆಯ ಪ್ರತಿಶೂನ್ಯದಲ್ಲೂ ನನ್ನಾವರಿಸಿಮೌನ ಬಗೆದುದಿಗಂತ ದೆತ್ತರಕ್ಕೂಸವಿ ಮಾತಿನ ಮೆಟ್ಟಿಲಾಗಿರುವೆ ಬಿರುಬಿಸಿಲoತೆ ವಿರಹದನಿನ್ನುಸಿರು ಸುಟ್ಟರೂಮಳೆಯಾಗಿ ನಾನು ಇನ್ನಷ್ಟೂ ಸುರಿದುಒಂದಿಷ್ಟು ನನ್ನುಸಿರು ಸೇರಿಸಿ ಕವಿದ ಮೋಡ ದೊಳಗೆ..ನನ್ನ ಮುಚ್ಚಿದರೂಹಾಲುನಗುವಿಗೂ ಬಿಳಿಮುಗಿಲು ಮೆಚ್ಚಿದರೂ,ತಿಂಗಳ ಬೆಳಕುವಿರಮಿಸದಂತೆ ಚಂದ್ರಮನಂತೆ ನಿನ್ನ ಇಡಿಯಾಗಿತುಂಬಿ ಕೊಳ್ಳುವೆ ನಿನ್ನೊಲುಮೆಗೆ ಆಲಾಪವಾಗಿಅಧೀತ ಪ್ರೀತಿಗೆ ಅನುರಾಗವಾಗಿನಾ ರಾಗವಾಗಿಅತೀತವಾಗಿರುವೆ *********************************

ಅಭಿವ್ಯಕ್ತ Read Post »

ಕಾವ್ಯಯಾನ

ಗಂಗಾವತಿ

ಕವಿತೆ ಗಂಗಾವತಿ ಜ್ಯೋತಿ ಬಳ್ಳಾರಿ ಗಂಗಾವತಿ ಎಂದರೆ,ಬರೀ ಊರಲ್ಲ,ದೇಶಕ್ಕೆ ಅನ್ನ ನೀಡುವ ನಾಡು,ನಮ್ಮ ಭತ್ತದ ನಾಡು. ಗಂಗಾವತಿ ಎಂದರೆ,ಬರೀ ಇತಿಹಾಸವಲ್ಲ,ರಾಮಾಯಣಕ್ಕೆ ಸಾಕ್ಷಿಯಾದ,ಆಂಜಿನೇಯ ಜನಿಸಿದ ನಾಡು.ಗತ ಇತಿಹಾಸ ಸಾರುವಮೊರೆರ ತಟ್ಟೆಗಳ ಬೀಡು. ಗಂಗಾವತಿ ಬರಿ ಊರಲ್ಲಪರನಾರಿ ಸಹೋದರ,ಗಂಡುಗಲಿ ಕುಮಾರರಾಮ,ಗಂಡು ಮೆಟ್ಟಿದ ನಾಡು,ಆಧ್ಯಾತ್ಮದ ಗುರು ಹೆರೂರುವಿರುಪನಗೌಡರ ಹುಟ್ಟಿದ ಬೀಡು. ಗಂಗಾವತಿ ಎಂದರೆ,ಬರೀ ಹೆಸರಲ್ಲ,ಜನರ ಉಸಿರಲ್ಲೂ,ಆರಾಧ್ಯದೈವ ಚನ್ನಬಸವ ತಾತನ ಪೂಜಿಸುವಬೀಡು.ತಾಯಿ ಗ್ರಾಮದೇವತೆ ದುರ್ಗಾದೇವಿ ಆಶೀರ್ವದಿಸಿದ ಊರು. ಗಂಗಾವತಿ ಎಂದರೆ,ಬರೀ ಪ್ರಾಂತ್ಯವಲ್ಲ,ಕವಿ, ಇತಿಹಾಸಕಾರರ ನೆಲೆಬೀಡು,ಹಾಸ್ಯ ಚಕ್ರವರ್ತಿ ಪ್ರಾಣೇಶ್,ಇತಿಹಾಸ ತಜ್ಞ ಕೋಲ್ಕಾರರ ತವರೂರು. ಗಂಗಾವತಿ ಬರಿ ಊರಲ್ಲ,ವಾನಭಧ್ರೇಶ್ವರ,ಪಂಪಾಸರೋವರ, ವಿಜಯನಗರ ಅರಸರ ಮೂಲ ತಾಣ ಆನೆಗೊಂದಿಯ ಕೋಟೆಯ ನಾಡು. ಗಂಗಾವತಿ ಎಂದರೆ,ಬರೀ ಸಾಧನೆಯಬೀಡಲ್ಲ,ಕಣಕಣದಲ್ಲೂ ಸಂಸ್ಕಾರವನ್ನು,ತೋರುವ ನೆಲವಿದು. ಗಂಗಾವತಿಯ ಒಮ್ಮೆ ನೋಡುಹಚ್ಚ ಹಸುರಿನ ಬಯಲು ಸೀಮೆಯ ಮಲೆನಾಡು,ನದಿ ಗುಡ್ಡ ಬೆಟ್ಟಗಳ ಸೌಂದರ್ಯದ ಸ್ವರ್ಗದ ಬೀಡು. ಗಂಗಾವತಿ ಎಂದರೆ,ಬರೀ ಸೌಹಾರ್ದವಲ್ಲ,ಹಿಂದೂ ಮುಸ್ಲಿಂ ಕ್ರೈಸ್ತರ,ಸರ್ವಜನಾಂಗದ ಶಾಂತಿಯ ತೋಟವಿದು. ***************************************

ಗಂಗಾವತಿ Read Post »

ಕಾವ್ಯಯಾನ

ತಮಟೆ ಬೇಕಾಗಿದೆ

ಕವಿತೆ ತಮಟೆ ಬೇಕಾಗಿದೆ ಎನ್.ರವಿಕುಮಾರ್ ಟೆಲೆಕ್ಸ್ ನನ್ನ ತಮಟೆ ಹರಿದು ಹೋಗಿದೆ ಎದೆಯಗಲ ಚರ್ಮ ಬೇಕಾಗಿದೆಸತ್ತ ದನದ್ದು…. ತಮಟೆ ಸದ್ದಿನೊಳಗೆದುಃಖ ದೂರುಗಳ ಜಗಕೆಆಡಿ ಹಗುರಗೊಳ್ಳಬೇಕಿದೆ ಜುಂಗು ಕಿತ್ತು ರಂಪಿಗೆ ಆಡಿಸಿಅಡಗಲ್ಲಿನಲ್ಲಿತಟ್ಟಿ ಹದ ಮಾಡಿಹದಿನಾರು ಎಳೆ ಬಿಗಿದುಎಳೆ ಬಿಸಿಲಿಗಿಡಿದುಅಲುಗು ಅಲುಗಿಗೂ…ಕಂಟ ಕಾವು ರಣಬಾಜಿ,ಹುಲಿ ಹೊಡೆತಎರಡೇಟು…ಗಸ್ತಿನೋವು ನೀಗಿಸಿಕೊಳ್ಳಬೇಕಿದೆಶತಮಾನಗಳದ್ದುಈಗೀಗ ವರ್ತಮಾನದ್ದೂ…. ಸತ್ತದನವೊಂದಿದ್ದರೆಕೊಟ್ಟು ಬಿಡಿನನ್ನ ತಮಟೆ ಹರಿದು ಹೋಗಿದೆ.// ಕಾಡುಕತ್ತಲೆಬಿಳಿಯ ತೊಗಲ ದೊರೆ ದೇಶ ತೊಲಗಿದಕರಿಯ ತೊಗಲ ಬಿಳಿಯ ಬಟ್ಟೆದೇಶ ಜನರ ಬಗೆ ಬಗೆದುಸುಲಿತಿದೆ ಹಾಡಹಗಲೆಸುಳ್ಳು ಮಾತು ಕಳ್ಳನಡೆಪೊಳ್ಳು ಧರ್ಮದ ಇಷವಯ್ಯಸತ್ತಂತಿಹರನು ಬಡಿದೆಚ್ಚರಿಸಲುತಮಟೆಯೊಂದು ಬೇಕಾಗಿದೆ// ಹೊಲಗದ್ದೆ ಸುಗ್ಗಿಕಣಊರ ಹುಣಸೆ ಮರವೂಗಂಟುಕಳ್ಳರ ಪಾಲುಅನ್ನದಾತನ ಕೈಗಳಿಗೆ ಭಿಕ್ಷೆ ಚರಿಗೆಕುಂಬಾರ, ಕಮ್ಮಾರ,ಚಮ್ಮಾರ,ಮಡಿವಾಳ,ಬಡಗಿ,ಕೂಲಿಯಾಳು, ಒಕ್ಕಲು ಕಾಡು ಪಾಲುದೇವ್ರು – ಧರ್ಮ ಕರ್ಮಗೆಡಿಸಿನೆರೆಹೊರೆ ನಂಟು ಊರಾಳುಎದೆ ಎದೆಗೂ ಇದ ಸಾರಲುತಮಟೆಯೊಂದು ಬೇಕಾಗಿದೆ. ಮುತ್ತಾತ ಮೆಚ್ಚಿ ಬಾರಿಸಿದ ತಮಟೆತಾತಾ ತಲೆ ಎತ್ತಿ ಬಡಿದ ತಮಟೆಅಪ್ಪ ಕುಣಿ ಕುಣಿದು ಅಬ್ಬರಿಸಿದ ತಮಟೆಸಾವಿನ ಸೂತಕಕ್ಕೂದೇವರ ಒಡ್ಡೋಲಗಕ್ಕೂಒಪ್ಪುಳ್ಳ ತಮಟೆ ಸತ್ತದನವೊಂದಿದ್ದರೆ ಕೊಡಿತಮಟೆ ಬಿಗಿಯಬೇಕಿದೆನಿಮ್ಮ ಮೆರವಣಿಗೆಗೆ!!! ವಲಸೆ ಹೋದ ದಾರಿಯಲ್ಲಿರಕ್ತ ಮಾಸಿಲ್ಲಬಿಮ್ಮನಿಸಿ ಬಾಣಂತಿ ಹಸುಗೂಸುಗಳನಿಟ್ಟುಸಿರು ನಿತ್ರಾಣವಿನ್ನೂ ತಣಿದಿಲ್ಲಹಸಿವು,ಕಣ್ಣೀರ ಅನಾಥ ಮೆರವಣಿಗೆಗೆನೀರಿಲ್ಲ , ನೆಳಲಿಲ್ಲ ದೇವರಿಗೊಂದುಮಹಲು‌ ಕಟ್ಟುವ ಮೋಜು ಮುಗಿದಿಲ್ಲದೊರೆಯನ್ನು ಧ್ಯಾನದಿಂದ ಎಬ್ಬಿಸಲುತಮಟೆಯೊಂದು ಬೇಕಾಗಿದೆ. ದೇವರುನಡುರಸ್ತೆಯಲ್ಲೆ ನಿಂತಿದ್ದಾನೆಹೆಣವೊಂದು ಚಟ್ಟ ಏರಲೊಲ್ಲುತ್ತಿಲ್ಲಸಂಪ್ರದಾಯ ಮುಕ್ಕಾದೀತುತಮಟೆಯೊಂದು ಬೇಕಾಗಿದೆಹೆಣದ ಮೋಕ್ಷಕ್ಕೆದೇವರ ಸುಖ ನಿದ್ರೆಗೆ ದೇಶದಲ್ಲೀಗ ಭಕ್ತರ ಕಾಲಪ್ರಶ್ನಿಸುವವರು ಜೈಲಿಗೆದುಡಿವವರು ಬೀದಿಗೆಉಳಿದವರು‌ ಜೀತಕ್ಕೆತುಂಡು ಬಾಡು ತಿಂದಿದ್ದಕ್ಕೆಕಾಡು ನ್ಯಾಯದ ಸಾವ ಶಿಕ್ಷೆಮತದ ಮತ್ತೇರಿದವರನ್ನೆಲ್ಲಮನುಜಮತದ ಮನುಷ್ಯರೂರಿಗೆಮೆರವಣಿಗೆ ಕರೆದೊಯ್ಯಬೇಕಿದೆ ಸತ್ತದನವೊಂದಿದ್ದರೆ ಕೊಡಿಎದೆಯಗಲ ಚರ್ಮ ಬೇಕಿದೆಎಂದೂ ಹರಿಯದಬುದ್ಧ ಭಾರತ,ಭೀಮ ಭಾರತಬಸವ ಪಥ ಕಟ್ಟಲುತಮಟೆಯೊಂದು ಬಿಗಿಯಬೇಕಿದೆ. *************************************

ತಮಟೆ ಬೇಕಾಗಿದೆ Read Post »

ಕಾವ್ಯಯಾನ

ಗುಪ್ತಗಾಮಿನಿ

ಕವಿತೆ ಗುಪ್ತಗಾಮಿನಿ ಸಂಗಮೇಶ್ವರ ಶಿ.ಕುಲಕರ್ಣಿ ನಿನಗೆ ನಾನ್ಯಾರು?ಕೇಳದಿರು ಹೇಳದಿರುಅಲ್ಲಿ ಕಾಡುವ ಒಗಟುಎದುರಾಗದಿರಲಿನಿನಗೆ ನನಗೆ ಇಬ್ಬರಿಗೂ…. ನನಗೆ ನೀನ್ಯಾರು?ಹೇಳುವೆ ಸಾರಿ ಸಾರಿಆತ್ಮದಲಿ ಆರೂಢವಾಗಿರುವಅಗೋಚರ ಆಕೃತಿ!ಪ್ರತಿಕ್ಷಣದ ಸ್ಮೃತಿ!! ಅಲ್ಲಿ ನೀನು ಇಲ್ಲಿ ನಾನುಅನ್ನುವ ಅಂತರದ ಮಾತೆಲ್ಲಿಆಣೆ ಮಾಡುವೆ ಬೇಕಾದರೆ;ಅಂತರಂಗ ಆಕ್ರಮಿಸಿದಮೊದಲ ದೊರೆಸಾನಿ ನೀನಿಲ್ಲಿ! ಉಬ್ಬುತಗ್ಗಿನ ಚರ್ಮದ-ಹೊದಿಕೆಯ ಮೋಹದಲ್ಲಿಮರೆತುಹೋಗುವ ಪಿಂಡವಲ್ಲ;ಎಲ್ಲ ದಾಟಿ ಅನಂತ ಹುಡುಕುವಅದಮ್ಯ ಚೇತನ! ನನಗೊಂದು ನಿನಗೊಂದುಬೇರೆಯದೇ ಕೋಳ,ಕಳಚಿ ಕೈಬಿಡುವ ಕೈಕಟ್ಟು ಅಲ್ಲ ಬಿಡು.ಇದರ ಮಧ್ಯೆ ನಮ್ಮದುಸಾವಿನಾಚೆಗೂ ಸಾಗುವ ಬಂಧ! ಈ ಜೀವಕ್ಕೆ ಅರ್ಧಜೀವ ನೀನು! ****************************

ಗುಪ್ತಗಾಮಿನಿ Read Post »

ಕಾವ್ಯಯಾನ

ಮಾಗಿಯ ಪದ್ಯಗಳು

ಕವಿತೆ ಮಾಗಿಯ ಪದ್ಯಗಳು ಪ್ರೇಮಲೀಲಾ ಕಲ್ಕೆರೆ ಕೌದಿ ಕವುಚಿಕಂಬಳಿ ಹುಳುವಾದರೂಅಡಗಲೊಲ್ಲದ ಚಳಿ ಬೆಳಗಾಗ ಬರುವಚುರುಕು ಬಿಸಿಲಿನ ನೆನಪೇಬಿಸಿ ಹುಟ್ಟಿಸಬಲ್ಲದುಒಳಗೆ ಉರಿಮುಖದ ಸೂರ್ಯ, ನಿನ್ನ ಆಗಮನಅದೆಷ್ಟು ಬೆಚ್ಚಗೆಜಡ ಮಾಗಿಗೆ !! 2 ತುಂಟ ಸೂರ್ಯ,ಎಲ್ಲಿ ಅಡಗಿದ್ದೆ ನೀನು ?ಇಷ್ಟೊಂದು ತಡವೇಕೆಮನೆಗೆ ಬರಲು ?? ಗುಟ್ಟೇನಿದೆ ,ಆ ನಿಶೆಯ ಜೊತೆನಿನ್ನ ಚೆಲ್ಲಾಟಜಗಕೇ ಗೊತ್ತು! ತರವಲ್ಲ ಬಿಡು,ತರವಲ್ಲ ಬಿಡು, ಆ ಕಪ್ಪುನಿಶೆಯಲಿಏನುಂಟು ಚೆಲುವು?ಬಿತ್ತಿದ್ದ ಬೆಳೆಯುವಇಳೆಗೆ ಮಿಗಿಲು?? ******************************************

ಮಾಗಿಯ ಪದ್ಯಗಳು Read Post »

ಕಾವ್ಯಯಾನ

“ಅಂತರ್ಬಹಿರಂಗ”

ಕವಿತೆ “ಅಂತರ್ಬಹಿರಂಗ“ ಉದಯ ಧರ್ಮಸ್ಥಳ ನಿದ್ದೆಯ ಮುಂಜಾವಿನಲ್ಲಿಮುಂಜಾವಿನ ನಿದ್ದೆಯಲ್ಲಿಮಂಪರು ಭಾವಗಳೊಂದಷ್ಟುಮತಿಯ ತೋಪಿನಲ್ಲಿಗತಿ ಲಯದ ಸಾಲು ತುರುಕಿದ ಕಾಡತೂಸುಗಳಂತೆಶಬ್ದಗಳಲ್ಲದೆಮೌನ ಅಕ್ಷರದುಂಡೆಗಳು ! ಎತ್ತೆತ್ತಲೋ ಎಸೆದೆರಗುವಂತಾಗಿಧಮಿಲ್ ಧಮಿಲ್ ಧಮಿಲ್ಹೊರಗುಗುಳುವಾಗಹಿಡಿದುದಾಖಲಾಗಿಸುವಾಗಅರೆಬಿರಿದ ಕಣ್ಣೆಡೆಯಿಂದದೃಷ್ಟಿ ಕಾಣುವ ಪಂಕ್ತಿ ಪದಅದೇನೋ ಅಪರೂಪದಆಗೀಗ ಬರುವ ಅತಿಥಿಯಂತೆನಕ್ಕಣರಳಿಸಿ ಬೀಸಿದ ಓರೆನೋಟ ! ಧಿಂಗಣ‌ ಕುಣಿದ ರಂಗದಂಗಳದವೇಶಗಳಾಗಿ ಬಣ್ಣಬಣ್ಣ ಕಟ್ಟಿದೊಗಲೆ ದೊಗಲೆಯೊಳಗೆಅಂಡು ಬಿಗಿದ ಹಳೆಬಟ್ಟೆಯ ಹಿಂಡುಮೇಲೆ ಮಿರಮಿರನೆ ಝಗಮಗಿಸುವರಾಜನುಡುವ ರಂಗುರಂಗಿನ ಪೋಷಾಕಿನೊಳಗಿಂದಜೀವ ಲಕಲಕ ಲಕಾ ಭಾಷೆಯುಚ್ಛಾರ ! ಅದೇನೋ ಮೊರದಗಲತಡ್ಪೆ ಕಿರೀಟದ ಬಣ್ಣದ ವೇಶಅರಚಿ ಅರಚಿ ಬೆದರಿಸಿಅರ್ಥವಾಗದಿದ್ದರೂಅರ್ಥ ಮಾತಾಡುವಂತೆ ಕಂಡರೆಅದು ಪ್ರಸಂಗದ ಮುಖ್ಯ ಅಧಿಕಪ್ರತಿನಾಯಕನ ಚಿಟ್ಟೆಯ ಮುಖದಒಳಗಿರುವ ನಿಜಮುಸುಡಿಬೆವರಿ ಬೆದರಿ ನಿಜವಲ್ಲದಕಥೆಗಳಿಗೆ ನಿಜವೆನಿಸುವ ಪದ ಉದುರಿಸಿಹಿಮ್ಮೇಳದ ಆರ್ಭಟಗಳಿಗೆಮುಮ್ಮೇಳವಾಗಿ ನಲಿಯುತ್ತದೆ ! ಬಾಲ್ಯಮುಖತನು ಸುಕ್ಕಾಗಿಮುದಿಯಾಗಿ‌ ಹಲವಾರುಪರಲೋಕ ಪಾತಾಳಗಳಮನಕನಸಲ್ಲಿ ಕಂಡಾಡಿದ ನಂತರವೂತಕತಕ ಕುಣಿವ ಪ್ರತಿಮಾಧ್ವನಿಸಂಕೇತಗಳೇ ಖುಷಿಕೊಟ್ಟುಶಿಸ್ತಿನ ಸಿಪಾಯಿಗಳಂತೆಸಾಲಾಗಿ‌ ಪಥಸಂಚಲನ ಗೈವಾಗಹಾಯಾಗಿ ಒಳತೋಟಿತಂಪಾದ ತೇಜಾಪು !ಅನುಭಾವವರಳಿ ತನುಭಾವ ಕೆರಳಿ ಕೆಂಡಸಂಪಿಗೆಯ ಘಮ್ಮನೆಯ ಕಂಪು ! ರಾಗ ತಾಳ ಆಲಾಪಗಳಹಂಗು ಗುಂಗಿಲ್ಲದಾಗಹೊರ ಚೆಲ್ವ ಅಗ್ನಿಪರ್ವತದತಲೆಯೊಡೆದು ಕಿಲೋಮೀಟರ್ಮೇಲ್ಚಿಮ್ಮಿದ ಲಾವಾರಸಸುಡುಸುಡುಸುಡುತಾ ಸಾಗಿಸಿಕ್ಕಿದಕ್ಕೆಲ್ಲಾ ತಾಗಿಕರಟಾಗಿಸಿ ಒಳಸೇರಿಸಿಒರಟೊರಟಗಿ ಹೊರಟುಸಾಗಿಸಾಗಿ ಸಾಗುವಜಗದಗಲ ಪ್ರಭಾವಿಸುವ ಪ್ರವಾಹ ! ಮುಗಿಲೆಂದರದೇಮುಗಿಯದ ಮಿಗಿಲುಅಳೆಯಲಾಗದ ಅಂತರಾತ್ಮಬಿಗಿದ ಸುಯಿಲುಅದ್ಯಾವುದೋ ಸನ್ನಿಧಿಗೆಸಲ್ಲಿಸಿದ ದೂರಿನುಯಿಲು !ಕಳೆದುಕೊಂಡ ಹಪಾಹಪಿಯನಡುವೆ ಮತ್ತೆ ದಕ್ಕಿಸಿಕೊಳ್ಳುವಾಸೆಯ ಅಮಲು ಕೊಯಿಲು !ಕೊರೆದು ಬರೆದವುಗಳಸೇರಿ ಸಿಟ್ಟು ಸೇರಿಸಿಟ್ಟುಸೇರಿಸಿಡುವ ಸೇರಿ ಸುಡುವಅನರ್ಥ ಅಪಾರ್ಥಗಳ ಯತಾರ್ಥ !ಹಾಂ ! ಯತಾರ್ಥಗಳ ಅಪಾರ್ಥ ಅಪಾತ್ರ ! ಹೇಳಬಾರದ್ದನ್ನುಹೇಳುವಾಗದರರ್ಥವಾಗದಹಾಗೆ ಭೋರೆಂದು ಸುರಿದು ಹರಿದಜೀವರಸದೊಳಗಿನದ್ರವದೊಳಗಣಕಣವೊಂದಿನ್ನೊಂದರಲ್ಸೇರಿಝಗ್ಗನೆ ಸೃಜಿಸಲ್ಪಟ್ಟ ಮಿಸುಕಾಟದಪಿಂಡದುಂಡೆ ಕೆಂಡಕುಸುಮದಮುಡಿಯಲಾಗದ ಹೂದಂಡೆ ! ಅನಿರತ ಅಮಿತರತವಿರಕ್ತನೇ ತಪ್ತಶಕ್ತವಾಗಿಅನುರಕ್ತ ಭಕ್ತಭಾವಲಹರಿಯ ಹರಿಯ ಬಿಟ್ಟಹರಿ ಬಿಟ್ಟ ನರ ಹರಿದ ಬದುಕತೇಪೆಹಾಕಲುಹೃತ್ಕುಂಜದಲಿ ಜೀವಕಾರಂಜಿಯಭವಿತ ಚಿಲುಮೆಯಾಗಿಸುವಚಲಿಸುವುದನುಚಲಿಸದಂತಾಗಿಸಲುಮುನಿಯುವುದನುಮುಗುಳಾಗಿಸಿಯರಳಿಸಲುಆಗಾಗ ಹೀಗಾಗುವಜೀವಾಕ್ಷರಗಳ ಸರಪಳಿಯಖಳ ಖಳ ಸದ್ದಿನ ನೆಯ್ಗೆಅಪಾರ ಮಂಕು ಕಡಲ ಹೊಯಿಗೆ !ಬಂಡೆಯೊಡೆಯದೆಸಡಿಲಸಡಿಲವಾಗಿಘನಕಣ ಮರುಳು ಮರಳಾಗೆದಡಕಟ್ಟಿ ದಡಗಟ್ಟಿಯಾಗಿಸಿಕೊಂಡುಗುಳುಗುಳಿಸಿ ಭೋರ್ಗರಿಸಿಬೊಬ್ಬಿರಿದು ತನ್ನಲೇ ತಾ ಮೊರೆದುತಳಕೊರೆದು ಒಳಗಿಳಿದುಘಮಲಿಸುವ ತಮಲಿಸುವತಳಮಳವ ಇಳಗಿಟ್ಟುಶಾಂತಿಕವಚವ ಹೊದೆವ ಈ ಗುಟ್ಟು ! ********************************

“ಅಂತರ್ಬಹಿರಂಗ” Read Post »

ಕಾವ್ಯಯಾನ

ದಿಕ್ಕಿಲ್ಲದ ಹಕ್ಕಿಯ ಮುಂದೆ ಹಿಂದೆ

ಕವಿತೆ ದಿಕ್ಕಿಲ್ಲದ ಹಕ್ಕಿಯ ಮುಂದೆ ಹಿಂದೆ ಪ್ರೇಮಶೇಖರ ಹೀಗೇಎತ್ತಲಿಂದಲೋ ಹಾರುತ್ತಾಇತ್ತ ಬಂದ ಗುರುತಿಲ್ಲದ ಹಕ್ಕಿ,ಇಲ್ಲೇ ಕೂತಿದೆ ಬೆಳಗಿನಿಂದಲೂ. ಲಲಿತೆ ಕಾಳು ಹಾಕಿದ್ದಾಳೆ,ಪುಟ್ಟಿ ನೀರಿಟ್ಟಿದ್ದಾಳೆ,ನಾನು ಕೋಲು ಹಿಡಿದುಪುಸ್ಸಿಯನ್ನು ಕಾಯುತ್ತಿದ್ದೇನೆ. ಪುಟ್ಟ ಹಕ್ಕಿಕಾಳು ತಿನ್ನುತ್ತಿಲ್ಲ,ನೀರು ಕುಡಿಯುತ್ತಿಲ್ಲ,ಬಾಯಿ ತೆರೆದು ಕೂಗುತ್ತಲೂ ಇಲ್ಲ. ಅಕ್ಕಪಕ್ಕದ ಮನೆಯವರು ಬಂದರು,ತಲೆಗೊಂದು ಮಾತು ಅಂದರು-ಅದು ಹಾರಿಬಂದ ದಿಕ್ಕುನೋಡಿದಿರಾ? ಮನೆಯೊಳಗೆ ನುಗ್ಗಿದಗಳಿಗೆ ಗಮನಿಸಿದಿರಾ? ಲಲಿತೆ ಅವರಿಗೆಲ್ಲ ಚಹ ಮಾಡುತ್ತಿದ್ದಾಳೆ,ಪುಟ್ಟಿ ವಾಷ್‍ಬೇಸಿನ್ ತೋರಿಸುತ್ತಿದ್ದಾಳೆ,ಪುಟ್ಟಹಕ್ಕಿ ಸುಮ್ಮನೆ ನೋಡುತ್ತಿದೆ,ನನ್ನ ಕೈಯಲ್ಲಿನ್ನೂ ಕೋಲು ಆಡುತ್ತಿದೆ.ಅವರು ಚಹಾ ಜತೆ ಹಕ್ಕಿಯನ್ನು ನೆಂಜಿಕೊಳ್ಳುತ್ತಿದ್ದಾರೆ. ಕಿವಿಚಿದರೆ ಕೂಸಿಗಾದರೂಒಂದೊತ್ತಿನ ಪಲ್ಯವೂ ಆಗದು.ತಿನ್ನುವ ಮಾತಾಢಬೇಡಜ್ಜೀ,ಅದಕ್ಕೆ ಜ್ವರ ಬಂದಿರಬೇಕು,ಅದೆಲ್ಲಿಯ ಗ್ರಹಚಾರ.ಅದಕ್ಯಾವ ಜ್ವರ? ಕಥೆಹೇಳಬೇಡ ಅಡುಗೂಲಜ್ಜೀ,ಕೊರೋನಾ ನರರಿಗಷ್ಟೇ. ಬಣ್ಣದ ಹಕ್ಕಿಗಳು ರುಚಿಇಲ್ಲವಂತೆ, ಸಾದಾ ಹಕ್ಕಿಗಳೇ ರುಚಿರುಚಿಯಂತೆ!ಹಾಗಂತ ಹೇಳು ಮಹಾರಾಣೀಕಾಲೇಜಿನ ಮುಂದೆ, ಅಯ್ಯೋ ಬಿಡೇ ಸಾಕು ಅದನ್ನುದಾಟಿಯೇ ಬಂದವರು ನಾವೆಲ್ಲಾ.ಈಗೆಲ್ಲಿ ಆ ವೈಭವ!ಕಳೆದುಹೋದದ್ದು ಬಿಟ್ಟು ಎದುರಿಗೆಕೂತದ್ದರ ಸುದ್ದಿ ಹೇಳು. ಬೇಸಗೆಗೆ ಬಳಲಿದೆ ಹಕ್ಕಿ,ಚಳಿ ದೇಶಕ್ಕೆ ಹಾರಿಹೋಗಲಾಗಲಿಲ್ಲವೇನೋ ಸಂಗಡಿಗರೊಡನೆ.ನಾವಾದರೂ ಬಿಟ್ಟುಬರೋಣವೆಂದರೆ ರೈಲು ವಿಮಾನಗಳಿಲ್ಲವಲ್ಲ! ಹ್ಞೂಂ, ಹಾಳು ಕೊರೋನಾ ಇವಳೇ.ಹೌದು ಆಂಟೀ, ನಮಗೂ, ಹಕ್ಕಿಗೂಅದರದೇ ಕಾಟ. ಅಂ! ಕೊರೋನಾ ಅಂದೆಯಾ?ಅರೆ ಆಂಟಿನನ್ನ ಮಾಸ್ಕ್ ಎಲ್ಲಿ?ನನ್ನದೂ ಕಾಣದು ಇವಳೇಓಹ್ ಅತ್ತೇ, ನನ್ನದೂ ಇಲ್ಲಟೀ ಕುಡಿವ ಮೊದಲು ಕಳಚಿಟ್ಟೆನಲ್ಲ… ಮಡಿಲಲ್ಲಡಗಿರಬೇಕು ನೋಡೋಣ.ಹಜಾರದ ತುಂಬಾ ಸೀರೆದುಪಟ್ಟಾಗಳ ಫಟ್‍ಫಟ್ ಫಟರವ. ಕಾಣ್ತಿಲ್ವೇ, ಹಾಳು ಹಕ್ಕಿಯಿಂದ ಹೀಗಾಯ್ತಲ್ಲ!ಗಾಳಿಯಲ್ಲಿ ಗಾಬರಿಯ ಲೊಚ್ ಲೊಚ್ ಲೊಚರವ, ಛೇ ಹಕ್ಕಿ,ಪುಟ್ಟ ಹಕ್ಕಿ, ಪುಟಾಣಿ ಹಕ್ಕಿ…ಅರೆ…!ಎಲ್ಲಿದೆ ಹಕ್ಕಿ? ಅದು ಹಾರಿಹೋಗಿದೆ,ಕೂತಿದ್ದೆಡೆ ಒಂದು ಗುಪ್ಪೆಹಿಕ್ಕೆ ಬಿದ್ದಿದೆ. ಪುಟ್ಟಿಯ ಮುಖ ಕಪ್ಪಿಟ್ಟಿದೆ,ಲಲಿತೆಯ ಕಣ್ಣಲ್ಲಿ ಹನಿ ನೀರಿದೆ,ಬಾಲ್ಕನಿಯಾಚೆಹದ್ದೊಂದು ರೆಕ್ಕೆ ಬಡಿದಿದೆ,ನೆರೆಯವರ ನಿರಿಗೆಗಳುಮೆಟ್ಟಲಸರಣಿಯಲ್ಲಿ ಆತುರದಲ್ಲಿ ಚಿಮ್ಮಿವೆ.ನನ್ನ ಕೈನ ಕೋಲು?. ಅದು ನೆಲವನ್ನು ಪಟಪಟ ಬಡಿಯುತ್ತಿದೆ. ಬಡಿಯುತ್ತಲೇ ಇದೆ. ***********************************************************************

ದಿಕ್ಕಿಲ್ಲದ ಹಕ್ಕಿಯ ಮುಂದೆ ಹಿಂದೆ Read Post »

ಕಾವ್ಯಯಾನ

ವಿರಾಗಿ ತ್ಯಾಗಿ

ಕವಿತೆ ವಿರಾಗಿ ತ್ಯಾಗಿ ಡಾಲಿ ಕೊಡನವಳ್ಳಿ ಚಕ್ರವರ್ತಿ ಭರತ…ನಿನಗಿಂತವಿರಾಗಿ ತ್ಯಾಗಿ ಬಾಹುಬಲಿಗೆಈ ಕನ್ನಡ ನೆಲ ತಲೆಬಾಗಿತಲೆ ಎತ್ತಿ ನೋಡಿದರೂ ನಿಲುಕದ ಪ್ರತಿಮೆಯನ್ನೇಕಡೆದು ನಿಲ್ಲಿಸಿದ್ದು ಯುದ್ದ ಗೆದ್ದು ಸೋತವನಏನಿಲ್ಲವೆಂದು ಹೊರಟವನಕೈಬೀಸಿ ಕರೆದುಗಿರಿನೆತ್ತಿಯ ಮೇಲಿರಿಸಿಮಸ್ತಕಕೆ ಬೆಳ್ಮುಗಿಲ ಮುಕುಟವಿರಿಸಿತಾರೆಗಳ ನೇವಣಿಯನೇರಿಸಿಅಂಬರಕೆ ಚುಂಬಿಸಿದವನನ್ನೇಕರುನಾಡುದೊರೆಯಾಗಿ ಸ್ವೀಕರಿಸಿತು ಮುರಿದು ಬೀಳುವ ಮಹಲಿನಹಂಗು ತೊರೆದವಗೆಗಿರಿಶಿಖರಗಳೇ ಕಂಬವಾಗಿಮೋಡಗಳೇ ಮೇಲ್ಛಾವಣಿಯಾಗಿನಾಡ ಗರ್ಭಗುಡಿಯಲ್ಲಿಸದ್ಗತಿ ಸಂದವನಪ್ರಾಪಂಚಿಕ ಸುಖ ಗೆದ್ದವನಪ್ರಕೃತಿಯ ಕಣಕಣವೂಪಾಲಿಸಿತಿಲ್ಲಿ ಬೆಳಗುಳ ನಂದನಪ್ರತಿದಿನ ನಿನ್ನದೇಪ್ರತೀಕ್ಷೆ ಪೃಥ್ವಿಗೆ.ಎಳೆಸಂತೆ ಕಂಗೊಳಿಸುವ ನಿನ್ನೀನವಿರು ಭಾವ ಹೊತ್ತ ಕುಸುಮ.ಗಂಧವತಿ ವಸುಧೆಯ ಗಂಧ ಘಮಹೊನ್ನ ಹಣತೆಯಲಿಜ್ಯೊತಿ ಬೆಳಗುವ ಶಶಿ ಸೂರ್ಯಆದಿ ನಾಥ ಸುತನನ್ನೇ ಅರಸಿದಂತಿದೆಪ್ರತಿ ಕ್ಷಣದ ಆರಂಭಕೆ **************************

ವಿರಾಗಿ ತ್ಯಾಗಿ Read Post »

You cannot copy content of this page

Scroll to Top