ಯುಗ ಯುಗದ ಸೀತೆಯರು
ಯುಗ ಯುಗದ ಸೀತೆಯರು ರೇಶ್ಮಾಗುಳೇದಗುಡ್ಡಾಕರ್ ಇದು ಚರಿತ್ರೆಯ ಅವತಾರವಲ್ಲನಿತ್ಯವು ಉದ್ಭವಿಸುವಉದ್ವೇಗಗಳಿಗೆ ಇತಿಹಾಸಮರುಕಳಿಸುತ್ತಲೇತನ್ನ ಇರವ ಸಾಧಿಸುತ್ತದೆಯಲ್ಲ … ರಾಮನಿಲ್ಲದ ಸೀತೆಯರಿಗೆಕಮ್ಮಿ ಇಲ್ಲ ಈ ಜಗದಲ್ಲಿಒಡಲ ಕುಡಿಗಾಗಿ ಬದುಕಸವೆಸುವಳು ಕಂಡವರಸೆರಗಲ್ಲಿ ಗಂಡ ಬಿದ್ದರು ತನ್ನಬೆವರ ಹನಿಯ ದೀಪವಾಗಿಸಿಮನೆಯ ಬೆಳಗುವಳು …. ನೊರೆಂಟು ಮಾತುಗಳುಹಾದಿ – ಬೀದಿಯ ರಂಪಗಳುಎಷ್ಟಿದ್ದರು ಮನವದು ಗಟ್ಟಿಯಾಗುತ್ತಲೆಸಾಗುವದು ಕಲ್ಲು ಬಂಡೆಯನ್ನು ಮೀರಿಸಿಬದುಕಿನ ದಾರಿಯ ಹಿಡಿಯುವುದು ಸಮಯದೊಂದಿಗೆ ಓಡಿತಿಂಗಳ ಪಗಾರವನು ಕಾಪಿಟ್ಟುಪುಟ್ಟ ಪುಟ್ಟ ಕನಸ ನೇರವೇರಿಸಿತನ್ನ ಒಡಲ ಸಿರಿಗಾಗಿ ನಗುವ ಕಾಣುವಳುಎಲ್ಲ ನೋವ ಮರೆತು ….. ತ್ರೇತಾಯುಗದ ಸೀತೆಗೆ ಕಾಡಾದರೂ ಇತ್ತು ;ನವಯುಗದ ಹೆಣ್ಣುಗಳಿಗೆಕಾಂಕ್ರೀಟ್ ಕೋಣೆಯು ದಹಿಸುವದುಅಂತರಾತ್ಮವ ಬಡಿದು ಹಿಡಿದುಹಿಪ್ಪೆಮಾಡಿ ಸಂತಸ ಪಡುವದು ..! ಸೀತೆಯ ಯುಗವು ಅಳಿಯದೆನವನವೀನ ಸಮಸ್ಯೆಗಳ ಸರಮಾಲೆಯಲ್ಲಿರೂಪಾಂತರಗೊಂಡು ಹೊಸಮನ್ವಂತರ ವಾದರೊ,ಅವಳ ನೋವಿನ ಛಾಯೇ ಉಳಿಸಿಕೊಂಡುಮತ್ತೆ ಮತ್ತೆ ಅವತರಿಸುತಿಹುದು …. *************************************









