ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕವಿತೆಯೆಂದರೆ ಹೀಗೆ

ಕಾವ್ಯಯಾನ ಕವಿತೆಯೆಂದರೆ ಹೀಗೆ ವಿಶ್ವನಾಥ ಎನ್. ನೇರಳಕಟ್ಟೆ ಕವಿತೆಯೆಂದರೆ ಹೀಗೆ-ಕತ್ತಿ ಅಲಗಿನಲ್ಲರಳಿದಅಲರಿನ ಹಾಗೆಹೇಗೇ ಹುಟ್ಟಿದ್ದರೂ ಕೂಡಾಪರಿಮಳ ಬೀರುವುದನ್ನುನಿಲ್ಲಿಸುವುದೇ ಇಲ್ಲ ಕವಿತೆಯೆಂದರೆ ಹೀಗೆ-ಮೌನಗರ್ಭದೊಳಗಿಂದ ಹೊರಬಂದಮಾತಿನ ಪಿಂಡದಂತೆಹೊರಬರುವವರೆಗೂ ಯಮಯಾತನೆಆಮೇಲಿನ ಸಂತಸಕ್ಕೆಣೆಯಿಲ್ಲ ಕವಿತೆಯೆಂದರೆ ಹೀಗೆ-ಇರುವೆ ಕಿವಿ ಹೊಕ್ಕ ಹಾಗೆಒಂದಿಷ್ಟು ಕಚಗುಳಿ,ಒಂದಷ್ಟು ಕಾಟ ತಪ್ಪಿದ್ದೇ ಅಲ್ಲಒಳ ಇದ್ದಷ್ಟೂ ಹೊತ್ತು ಕವಿತೆಯೆಂದರೆ ಹೀಗೆ-ಭರಣಿಯಲ್ಲಿ ಅಮ್ಮ ತುಂಬಿಸಿಟ್ಟಮಿಡಿ ಉಪ್ಪಿನಕಾಯಿಯ ಹಾಗೆಹಳತಾದಷ್ಟೂ ರುಚಿ ಜಾಸ್ತಿ + ಕವಿತೆಯೆಂದರೆ ಹೀಗೆ-ಕನ್ನಡಿ ಎದುರು ನಿಂತ ಹಾಗೆತನ್ನನ್ನು ತಾನೇ ಕಾಣುವ ತವಕ

ಕವಿತೆಯೆಂದರೆ ಹೀಗೆ Read Post »

ಕಾವ್ಯಯಾನ

ಎಲ್ಲ…ತಿರಗಾ-ಮುರಗಾ.

ಕವಿತೆ ಎಲ್ಲ…ತಿರಗಾ-ಮುರಗಾ. ಅಬ್ಳಿ,ಹೆಗಡೆ ಇದ್ದಕ್ಕಿದ್ದಂತೆ ತಲೆಕೆಳಗಾಗಿ ನಿಂತಾಗಿನ     ಅನುಭವ ಇಂದು ಎಲ್ಲ ತಿರಗಾ-ಮುರಗಾ.     ಅಂಗಾಲಿಗೆ ಬಾನು,ನೆತ್ತಿಗೆ ಭೂಮಿ     ಎಲ್ಲ ತಿರಗಾ-ಮುರಗಾ.     ಆಲಯದಲ್ಲಿ ಬಯಲು,ಬಯಲಲ್ಲಿ ಆಲಯ     ಭೃಮೆ ವಾಸ್ತವಗಳ ನಡುವಿನ ಸೆಣಸಾಟ     ಹೋರಾಟವಿಂದು,     ಎಲ್ಲ…..ತಿರಗಾ-ಮುರಗಾ.     ನೀರಿದ್ದೆಡೆ ನೆಲ,ನೆಲವಿದ್ದೆಡೆ ನೀರು     ಬಾಗಿಲಿರುವೆಡೆಯಲ್ಲಿ ಗಟ್ಟಿ ಗೋಡೆ     ಗೋಡೆಯಿರುವೆಡೆ ತೆರೆದ ಬಾಗಿಲು,     ಎಲ್ಲ…..ತಿರಗಾ-ಮುರಗಾ.     ಕಣ್ಣ ತಣಿಸುವ ಹಸಿರ ತಂಪು ಬಸಿರ     ಉಸಿರಲ್ಲಿ ಸುಡು,ಸುಡು ಬೆಂಕಿ,     ಶಾಂತಿಯಾಗರ ಹ್ರದಯ ಸಾಗರದ     ಒಳಗೆ ಹೆಡೆಯೆತ್ತಿ ಭರ‍್ಗರೆವ     ಅಶಾಂತಿಯ ನಾಗರ,     ಎಲ್ಲ…..ತಿರಗಾ-ಮುರಗಾ.    ನಾನಂದು ‘ಕೊಂಡಿ’ದ್ದು,ಕೊಳ್ಳದ್ದು    ಸಾಧಿಸಿದ್ದು,ಸಾಧಿಸದ್ದು ,    ಆಚಾರ,ವಿಚಾರ,    ಎಲ್ಲ……..ತಿರಗಾ-ಮುರಗಾ.    ದೇವರೆಂದು ಕೊಂಡಲ್ಲಿ ದೆವ್ವ,    ದೆವ್ವವೆಂದು ಕೊಂಡಲ್ಲಿ ದೇವರು,    ಎಲ್ಲ….ತಿರಗಾ-ಮುರಗಾ.    ನನ್ನೊಳಗೆ ಇನ್ಯಾರೋ….?    ಇನ್ಯಾರದ್ದೋ ಒಳಗೆ ನಾನೋ….?    ಪರಕಾಯ ಪ್ರವೇಶ …ಗೊತ್ತಿಲ್ಲ,ಒಟ್ಟಾರೆ    ಎಲ್ಲ……ತಿರಗಾ-ಮುರಗಾ.    ನನ್ನ ನೋವಿಗೆ ಯಾರದ್ದೋ ನಗು,    ನಾ..ನಕ್ಕಾಗೆಲ್ಲಾ ಯಾರಿಗೋ ನೋವು,    ಕ಼ಣಕ್ಕೊಂದು ಆಯಾಮ    ಎಲ್ಲ….ತಿರಗಾ-ಮುರಗಾ.    ಬಿತ್ತಿದ್ದು ಮಾವು,ಬೆಳೆದದ್ದು ಬೇವು,    ಕಂಗಾಲು ರೈತ ನಾ…….    ಎಲ್ಲ…..ತಿರಗಾ-ಮುರಗಾ. *****************

ಎಲ್ಲ…ತಿರಗಾ-ಮುರಗಾ. Read Post »

You cannot copy content of this page

Scroll to Top