ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ರಾಧೆಯ ಭಾವತಲ್ಲಣ

ರಾಧೆಯ ಭಾವತಲ್ಲಣ ಚಂದನ  ಜಿ ಪಿ ನೆನಪಿದೆಯಾ ಕೃಷ್ಣಾ.. ಲಲಿತೆ ಏನನ್ನುತಿದ್ದಳು ಎಂದುನೀನು ನನಗೆ ಸಿಕ್ಕಿದ್ದು ಮಣ್ಣಲ್ಲಿ ಸಿಕ್ಕ ಮಾಣಿಕ್ಯವಂತೆ ಬೃಂದಾವನದ ಹೊನ್ನ ಹೂವಂತೆಯಾರಿಗೂ ಎಟುಕದ ಭಾಗ್ಯವಂತೆನನ್ನ ಏಳೇಳು ಜನ್ಮದ ಪುಣ್ಯವಂತೆ  ಕೃಷ್ಣಾ..ಸ್ಮೃತಿ ಪಟಲದಲ್ಲಿ ನಿನ್ನ ನೆನಪೆಲ್ಲವೂ ಸ್ಪುಟ-ನಿಚ್ಚಳ ನೀ ನನ್ನ ಅರಿತಂತೆ ಅರಿತು ನನ್ನ ಬೆರೆತಂತೆ ಒಮ್ಮೇಲೆ ನನ್ನ ತೊರೆದಂತೆ  ತೊರೆದು  ನನ್ನ ಮರೆತಂತೆ ಮರೆತವನ ನಾ ನೆನೆದಂತೆ ನೆನೆನೆನೆದು ಅತ್ತಂತೆ  ಕೇಳುತ್ತಿರುವೆಯ ಕೃಷ್ಣಾ..ವಿಶಾಖ ಏನೆಂದಳು ಗೊತ್ತೆ ನೀನು ನನ್ನಿಂದ ದೂರಾದದ್ದು ಪೂರ್ವ ಜನ್ಮದ ನನ್ನ ಪಾಪವಂತೆ ನಾನು ನತದೃಷ್ಠೆಯಂತೆ ನಿನ್ನ ಪ್ರೇಮ ಪೂಜೆಗೆ ಹೂವಾಗಿ ಭಾಮಾ ರುಕ್ಮಿಣಿಯರು ಇಹರಂತೆಅವರ ರತ್ನಾಭರಣಗಳ ಮೆರುಗಲ್ಲಿ ನನ್ನ ಹೂವಾಭರಣಗಳು ಬಡವಂತೆ  ನಾನು ಬೃಂದಾವನದ ಕಾಣದಎಲೆ ಮರೆಯ ಮಲ್ಲಿಗೆಯಂತೆ ನಿನ್ನ ಕಾಯುವುದು ವ್ಯರ್ಥವಂತೆ   ಕೃಷ್ಣಾ..ಜಗದ ಪರಿವೆ ಬೇಡ ಎನಗೆ ಮನಸುಗಳ ಮಿಲನವಾದ ಮೇಲೆ ಮದುವೆಯ ಬೇಲಿ ಬೇಕೆ ಹೇಳು ನೀ ನುಡಿಸುತ್ತಿದ್ದ ಕೊಳಲ ಇಂಪು ನಿನ್ನ ಮೈಯ ಚಂದನದ ಕಂಪು ಮಾಮರದಡಿ ಅಪ್ಪಿ ತೂಗಿದ ಜೊಂಪು ಯಮುನೆಯಲಿ ಮಿಂದ ತಂಪು  ರಾಧೆ, ಪ್ರಿಯ ಸಖಿ ರಾಧೆ, ನನ್ನಾಕೆ ರಾಧೆ  ಎಂದು ಬೃಂದಾವನದಲೆಲ್ಲಾ ಕರೆದ ನೆನಪು ಸಾಕೆನಗೆ ಈ ಜನ್ಮಕೆ ಬದುಕಲು  ******

ರಾಧೆಯ ಭಾವತಲ್ಲಣ Read Post »

ಕಾವ್ಯಯಾನ

ಇಲ್ಲಿ

ಕವಿತೆ ಇಲ್ಲಿ ಮುತ್ತು ಬಳ್ಳಾ ಕಮತಪುರ ಇಲ್ಲಿ ರೋಗಕ್ಕೂಧರ್ಮದ ಟಚ್ ಕೊಡುತ್ತಾರೆಪ್ರಶ್ನೆಸುವಂತಿಲ್ಲ ಸುಮ್ಮನೆಜಾಗಟೆ ಹೊಡೆಯಬೇಕು.. ಆಸ್ಪತ್ರೆಗಳು ಉಳ್ಳವರಿಗೆ ಇಲ್ಲಿಎಲ್ಲವೂ ವಸಿಲಿ ಭಾಜಿಗೆ ಮನೆಹಾಕುತ್ತಾರೆ ಏಕೆ ಎಂದೂಪ್ರಶ್ನೆಸುವಂತಿಲ್ಲ..? ಇಲ್ಲಿ ಬೆಡ್ಗೂ ಬ್ರೇಡಗೂ ಪಾಲಿಹಚ್ಚಬೇಕು ಏಕೆಂದರೆ ಅವರಿಗೆಹಸಿದವರ ನೋವು ಅವರಿಗೆಹಸಿಬಿಸಿಯಾಗಿ ಕಾಣುತ್ತದೆ…! ಇಲ್ಲಿ ಸಾವಿಗೂ ರಶೀದಿಪಡೆಯಬೇಕು…..! ಮಣ್ಣಾಗುವದಕ್ಕೂಕಾಯಬೇಕು,ಎದೆಯ ಮೇಲಿನಹೂ ಬಾಡುವವರೆಗೂ..!ಚಿತೆಗೆ ಕಟ್ಟಿಗೆ ಸಿಗುವವರೆಗೂ… ಶವ ಸಂಸ್ಕಾರಕ್ಕೂಜಾತಿ ಧರ್ಮದ ಬಣ್ಣಎಲ್ಲವೂ ಪ್ರಚಾರದ ಸಾಮಗ್ರಿಆದರೆ ಪ್ರಶ್ನೆಸುವಂತಿಲ್ಲ..? ಇಲ್ಲಿ ಬೆಂಕಿಯಲಿ ಅರಳಿನಿಂತ ಕುಸುಮಗಳು ಇವೆ …..!ಅಮಲಿನ ಲವಣ ಹಾಕದಿರುಇದು ಒಂದೇ ಕೊನೆಗೆ ನಾಕೇಳುವ ಆತ್ಮದ ಪ್ರಶ್ನೆ…? ******************************

ಇಲ್ಲಿ Read Post »

ಕಾವ್ಯಯಾನ

ಎಷ್ಟೊಂದು ಚಂದದ ಭಾವಚಿತ್ರಗಳು

ಅನುಭವದಿ ಗಟ್ಟಿಗೊಳ್ಳುತ್ತಾ ನಿಂತ ನೆಲದಲ್ಲೇ ಬೇರು ಬಿಡುತ್ತಾ
ಇನ್ನರ್ಧ ವಯಸ್ಸನ್ನು ಸಾಧನೆಗೆ ಮುಡಿಪಿಡಬೇಕಾಗಿದ್ದ ವಯಸ್ಕರು

ಎಷ್ಟೊಂದು ಚಂದದ ಭಾವಚಿತ್ರಗಳು Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಎ . ಹೇಮಗಂಗಾ ರೋಗಿಗಳ ಶುಶ್ರೂಷೆಯಲಿ ನಿರತರಾಗಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟುನಿರೋಗಿಯಾಗಲೆಂದು ಶ್ರಮಿಸುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು ನಮಗೂ ಬದುಕಿದೆ ಎಂಬುದನೇ ಮರೆತು ಬದುಕಬೇಕಿದೆ ಇಂದುಹಗಲಿರುಳು ನಿರುತ ದುಡಿಯುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು ಕಡುವೈರಿ ವೈರಾಣು ಮಹಾಮಾರಿಯಾಗಿ ಪಂಥಾಹ್ವಾನ ನೀಡಿದೆರಣಕಲಿಯಂತೆ ಹೋರಾಡುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು ಸಾವಿನ ಕಬಂಧಬಾಹು ಉಸಿರುಗಟ್ಟಿಸಿದೆ ವಯೋಭೇದವಿಲ್ಲದೇಪಾರಾಗುವ ದಾರಿಯ ಅರಸುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು ತೂಗುಗತ್ತಿ ಎಂದು ಬೀಳುವುದೋ ಭಯ ಬೇರೂರಿದೆ ಎದೆಯಲ್ಲಿಜೀವಗಳ ಉಳಿಸಲು ಪಣ ತೊಟ್ಟಿದ್ಧೇವೆ ಪ್ರಾಣವನ್ನು ಪಣಕ್ಕಿಟ್ಟು **************************

ಗಜಲ್ Read Post »

ಕಾವ್ಯಯಾನ

ಬಾಗಿಲನ್ನು ತೆರೆದಿಡಿ

ಕವಿತೆ ಬಾಗಿಲನ್ನು ತೆರೆದಿಡಿ ವಿಶ್ವನಾಥ ಎನ್ ನೇರಳಕಟ್ಟೆ ಬಾಗಿಲನ್ನು ತೆರೆದಿಡಿತುಸು ಗಾಳಿಯಾಡಲಿಬರಿಯ ಕಿಟಕಿಸಾಲುವುದಿಲ್ಲ ಈ ಕಾಲಕ್ಕೆಎದೆಯುರಿಯ ಆರುವಿಕೆಗೆಹಿರಿದು ಗಾಳಿಯ ಸಹಕಾರವಿರಲಿ ಬಿಸಿಲ ಝಳಕ್ಕೆ ಬಳಲಿದ ಪಕ್ಷಿಗಳುಬರಲಿ ಒಳಕ್ಕೆವಿರಮಿಸಲಿ ತುಸು ಹೊತ್ತುಪ್ರಣಯನಾದದ ಕೇಕೆಅನುರಣಿಸಲಿ ಭಿತ್ತಿಗಳಲಿ ಮನೆಯೊಳಗೆ ಮುತ್ತಿರುವ ಕತ್ತಲುಕಣಕಣವಾಗಿ ಕಡಿದುಹೋಗಲಿಹೊರಗಿನ ಬೆಳಕಿನಲ್ಲಿಕಣ್ಣ ದೃಷ್ಟಿ ಸೂಕ್ಷ್ಮವಾಗಲಿ ಬಾಗಿಲನ್ನು ತೆರೆದಿಡಿ ಎದೆಯ ಕವಾಟಗಳಲ್ಲಿಸಾಮರಸ್ಯದ ಗಾಳಿಯಾಡಲಿ

ಬಾಗಿಲನ್ನು ತೆರೆದಿಡಿ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಸಿದ್ಧರಾಮ ಹೊನ್ಕಲ್ ಏಳು ದಶಕಗಳೇ ಕಳೆದವು ಹೊಸ ಮಳೆಯು ಸುರಿಯಲಿಲ್ಲ ನೋಡು ಸಾಕಿಭೂತಾಯಿ ಮಕ್ಕಳ ಬಂಜೆತನ ಹಿಂಗಲೇಯಿಲ್ಲ ನೋಡು ಸಾಕಿ ದುಡಿ ದುಡಿದು ನೊಂದ ರೈತನ ಮುಖದಲ್ಲಿ ನಗೆಯು ಅರಳಲಿಲ್ಲಜಗಕೆ ಅನ್ನ ಹಾಕುವವರ ಬಾಯಿಯೇ ಸಿಹಿಯಾಗಲಿಲ್ಲ ನೋಡು ಸಾಕಿ ಗಾಂಧಿ ಕಂಡ ಗ್ರಾಮೀಣ ಭಾರತದ ಕನಸುಗಳೆಲ್ಲ ಜಾರಿ ಕಡಲ ಪಾಲಾದವು ಈ ಮಣ್ಣಲಿಹಳ್ಳಿ ಹಳ್ಳಿಗಳೆಲ್ಲ ಗುಳೇ ಎದ್ದು ಹೋಗಿ ಸುಖವೆಂಬುದೇ ಸುಳಿಯಲಿಲ್ಲ ನೋಡು ಸಾಕಿ ಕುರ್ಚಿಯ ಕನಸಿನಲಿ ಸ್ವಾರ್ಥದ ಸೆಳವಿನಲಿ ದೇಶ ನಮ್ಮ ನಮ್ಮವರಲ್ಲಿಯೇಹರಾಜಾಯಿತುಅಧಿಕಾರದ ಅಮಲಿನಲ್ಲಿ ರೈತರ ನೆಮ್ಮದಿಗೆ ಯಾರು ಪೂರ್ಣ ಚಿಂತಿಸಲಿಲ್ಲ ನೋಡು ಸಾಕಿ ‘ಹೊನ್ನಸಿರಿ’ ಭೂತಾಯಿ ಮಕ್ಕಳ ಆಶೋತ್ತರಗಳಿಗೆ ಉತ್ತರ ಎಲ್ಲಿಹದುಸ್ವಾರ್ಥದ ಈ ಪಡಿಪಾಟಲಿಗೆ ಬಂಡೆಳದೇ ಫಲ ದೊರಕುವದಿಲ್ಲ ನೋಡು ಸಾಕಿ ***************************************************

ಗಜಲ್ Read Post »

ಕಾವ್ಯಯಾನ

ಅಮ್ಮ

ಕವಿತೆ ಅಮ್ಮ ಸಂತೋಷ್ ಹೆಚ್ ಈ ಈ ಜೀವಕ್ಕೆ ಗರ್ಭದಿ ನೆಲೆ ಕೊಟ್ಟುಹೃದಯದಲಿ ಪ್ರೀತಿಯ ಬಚ್ಚಿಟ್ಟುಭವಿಷ್ಯದ ಕನಸಿನ ಗಿಡನೆಟ್ಟುನವಮಾಸ ಕಳೆದಳು ಅಮ್ಮ ನನ್ನ ಒಡಲಿಗೆ ಮಡಿಲಾದೆ ನೀನುಹಾಲನ್ನು ಎರೆದ ತಾಯಿಯು ನೀನುಈ ದೇಹಕ್ಕೆ ಉಸಿರನ್ನು ನೀಡಿದವಳು ನೀನುಆ ಋಣವ ತೀರಿಸಲಾಗದ ಮಗನಾದೆ ನಾನು ಮನೆಯೆಂಬ ಗುಡಿಗೆ ದೇವರು ನೀನುಹಸಿವನ್ನು ನೀಗಿಸೋ ಕರುಣಾಮಯಿ ನೀನುಬಿಸಿಲಲ್ಲೂ ಕೂಡ ನೆರಳಾದೆ ನೀನುಆ ಮರಕ್ಕೆ ನೀರೆರೆಯುವ ಮಗನಾದೆ ನಾನು ಅಜ್ಞಾನವೆಂಬ ಇರುಳನ್ನು ಸರಿದುಅರಿವೆಂಬ ಬೆಳಕನ್ನು ನೀಡಿದೆ ನೀನುಈ ಬಾಳಿಗೊಂದು ದೀಪವು ನೀನುಆ ದೀಪ ಕಾಯೋ ಮಗನಾದೆ ನಾನು ಎಲ್ಲ ಜೀವಿಗಳಿಗೂ ಅಮ್ಮನೇ ಮೂಲಹುಡುಕಿದರು ಸಿಗದು ಅದರ ಮೂಲಅಮ್ಮನ ಒಡಲು ಪ್ರೀತಿಯ ಕಡಲುಅಳಿವಿಲ್ಲದ-ಹುಳುಕಿಲ್ಲದ ಪ್ರೀತಿಯು ನಿನ್ನದು ********

ಅಮ್ಮ Read Post »

You cannot copy content of this page

Scroll to Top