ಸೂರ್ಯೋದಯ
ಕವಿತೆ ಸೂರ್ಯೋದಯ ಅಬ್ಳಿಹೆಗಡೆ ರಾತ್ರಿ;;ಹೊದ್ದು ಮಲಗಿದ,ಕತ್ತಲ-“ಕೌದಿ”ಯಲ್ಲಿ,ಬೆತ್ತಲಾಗುವ ಆಸೆ-ಹೊತ್ತು,ನಖಶಿಖಾಂತ ಉರಿವ,ಕಾಮನೆಗಳ ತಂಪಾಗಿಸಲು,ಮೆಲ್ಲನೆ,ಕಳ್ಳ ಹಜ್ಜೆಯನಿಡುತ್ತಾ,ಮುನಿಸಿಕೊಂಡಿನಿಯನ ಸಂತೈಸೆ,ಬಳಿಸಾರಿ,ಬರಸೆಳೆದು,ಬಿಗಿದಪ್ಪಿ,ಕೆನ್ನೆಗೊಂದು ಸಿಹಿಮುತ್ತನೊತ್ತಲು,ನಾಚಿ,ರಂಗೇರಿತು ಉಷೆಯ ಕೆನ್ನೆ,ಕಳೆದುದಾಗಲೆ ಕತ್ತಲೆಯ ನಿನ್ನೆ.ಉಭಯರ ಮುಖದಲ್ಲೂ-ಮಂದಹಾಸದ ಉದಯ.ಜೀವಕೋಟಿಗಳಲ್ಲಿ,ಭರವಸೆಗಳುದಯ.ಅದುವೆ,ಸುಂದರ ಶುಭೋದಯ.ಸೂರ್ಯೋದಯ…. . **************************









