ಜ್ಞಾನ ಬಿತ್ತಿದವ….ಬುದ್ದ
ಕವಿತೆ ಜ್ಞಾನ ಬಿತ್ತಿದವ….ಬುದ್ದ ಶಿವಲೀಲಾ ಶುದ್ಧೋದನ ಮಗನಂತೆ ಇವನುಮಗ್ಗುಲು ಹೊರಳಿಸಿದಂತೆಲ್ಲನಿದ್ರೆಯ ಕಂಬಳಿ ಕಿತ್ತೊಗೆದುಮೆಲ್ಲಗೆ ಸದ್ದಿಲ್ಲದಂತೆ ಎದ್ದೊದನಂತೆ ಹಣೆಗೊಂದು ಭಾವ ಲೇಪಿಸಿಕೊಂಡುವೈಭೋಗವ ವಸ್ತ್ರ ಕಳಚಿ ಬೆತ್ತಲಾಗಿಸಿಇರುಳಿಗೆಲ್ಲವ ಅರ್ಪಿಸಿ ಹೊಂಟವನುಬೀದಿ ಓಣಿಯಲಿ ದಿಟ್ಟಹೆಜ್ಜೆಯಿಟ್ಟವನು ನಿಶ್ಯಬ್ದ ದಾರಿಗುಂಟ ನಿಶಾಚರಿಗಳ ಘೀಳುರಕ್ತ ಸಿಕ್ತ ಪಾದದಲಿ ಮುಕ್ತಿಯ ಹಂಬಲವುಹಪಹಪಿಸಿದರು ಜ್ಞಾನ ದಾಹ ತೀರಲೊಲ್ಲದುದೇಹ ದಂಡಿಸಿದಷ್ಟು ಬಳಲಿತು ಭಾವದೊಡಲು ದಕ್ಕಿದುಡುಗೊರೆಯು ಮೋಕ್ಷವಾಗಲಿಲ್ಲಮೋಕ್ಷದ ಬೆನ್ನ ಹತ್ತಿದವಗೆ ದಿಕ್ಷೆಯಾಗಲಿಲ್ಲಆಸೆಯೇ ದುಃಖಕ್ಕೆ ಮೂಲವೆನ್ನುವಾಗೆಲ್ಲಕಾಯಕಕೆ ಮರಣಮೃದಂಗದಾ ಅಮಲೆಲ್ಲ ಮಿಂಚಿತೊಂದು ಬೆಳ್ಳಿರೇಖೆ ಕಣ್ಣಂಚಲ್ಲಿಪೂರ್ಣ ಚಂದಿರನ ಬೆಳದಿಂಗಳಲ್ಲಿದಿವ್ಯ ಮಂಗಳ ವಾದ್ಯ ಮೊಳಗಿದಂತೆಲ್ಲಹುಣ್ಣಿಮೆ ಶಶಿಯಲ್ಲಿ ಲೀನವಾದಂತೆಲ್ಲ ಭವ ಬಂಧನವ ಕಿತ್ತು ಬುದ್ದನಾದವಭವದ ಸೌಖ್ಯಕ್ಕಾಗಿ ಎಲ್ಲ ತೊರೆದವಶಾಂತಚಿತ್ತದಿಂದ ಪ್ರೀತಿ ಹರಿಸಿದವತಾಳ್ಮೆಯ ಗೂಡಲ್ಲಿ ಜ್ಞಾನ ಬಿತ್ತಿದವ ***************************
ಜ್ಞಾನ ಬಿತ್ತಿದವ….ಬುದ್ದ Read Post »









