ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಬಾಗಿಲು ಮುಚ್ಚಿದಾಗ

ಕವಿತೆ ಬಾಗಿಲು ಮುಚ್ಚಿದಾಗ ಅಬ್ಳಿ,ಹೆಗಡೆ  ಗಟ್ಟಿಮುಟ್ಟಾದ ಬಾಗಿಲಿಗೆ,       ಸುಂದರ,ಕಲೆಯಚಿತ್ತಾರ.     ..ಕದಮುಚ್ಚಿ,ಚಿಲಕ ಹಾಕಿದರೂ       ಅಭದ್ರ.ಮುರಿಯಲೂ ಬಹುದು       ಸೋಲಿನ ‘ಭೂತ’ಗಳು.       ಒಳಬರುವ ಹೆದರಿಕೆ,ರಾತ್ರಿ,       ಬಾನಂಗಳದಲ್ಲಿ ಆಡುವ-       ಮಕ್ಕಳ ತುಂಟಾಟಕ್ಕೆ ಸೋತು,       ಹೈರಾಣಾದ, ಅಸಹಾಯಕ                       ತಾಯಿ,ಚಂದ್ರ-        ಒಡೆದು,ಪುಡಿ,ಪುಡಿಯಾಗಿ‌ಸಿ,        ಒಳಬರಬಹುದು ಚಿಲಕ-        ವಿದ್ದರೂ.ಕಣ್ಣಕೋರೈಸುವ,        ಸೂರ್ಯನ ಪ್ರಖರ ತೇಜ-        ದೆದುರು,ಕೈಕಟ್ಟಿ ಕುಳಿತ,        .             ಕಳಾಹೀನ ಲಾಂದ್ರ.        ಅಭೇದ್ಯವಾದರೂ,ಭೇದಿಸಬಹುದು,        ಗಟ್ಟಿಮನಸ್ಸುಗಳ,ಹ್ರದಯಗಳ.       .ಸ್ರಷ್ಟಿಯನಂತ,ಸುಶ್ರಾವ್ಯ,         ತಾರಸ್ತಾಯಿಗಳ ಜುಗಲ್ಬಂದಿ-       . ಯಬ್ಬರದಲ್ಲಿ,ಮಂಕಾಗಿ                     .  ಮೂಲೆಸೇರಿದ ಮಂದ್ರ.        ಬಾಗಿಲು,ಕದ,ಚಿಲಕಗಳ,        ರಕ಼ಣೆಯಿದ್ದೂ,ಅವಿತಿಟ್ಟು-        ಕೊಳ್ಳುವ,ಹೇಡಿತನದಬದುಕಲ್ಲಿ        ಸೋಲುಗಳು ಒಳಬಂದು        ಸೋಲಿಸುವ,ಹೆದರಿಕೆ ಮಾತ್ರ,                           ನಿತ್ಯ,ನಿರಂತರ….! *************

ಬಾಗಿಲು ಮುಚ್ಚಿದಾಗ Read Post »

ಕಾವ್ಯಯಾನ

ಮತ್ತೆ ಹುಟ್ಟಿ ಬಾ ಬುದ್ದ

ಕವಿತೆ ಮತ್ತೆ ಹುಟ್ಟಿ ಬಾ ಬುದ್ದ ಅಭಿಜ್ಞಾ ಪಿ ಎಮ್ ಗೌಡ ಅಜ್ಞಾನವೆಂಬ ಕಗ್ಗತ್ತಲ ನಾಡಲಿಬರೀ ಬೆತ್ತಲೆಯಬೇತಾಳಗಳದ್ದೆ ಸದ್ದುಗದ್ದಲ….ಸ್ವಾರ್ಥವೆಂಬ ಪೈಶಾಚಿಕ ಜಗದೊಳಗೆಭ್ರಷ್ಟತೆಯ ತಿಮಿಂಗಲಗಳೆಒದ್ದಾಡುತಿವೆ ಆಸೆಯೆಂಬಐಭೊಗದ ಲಾಲಸೆಯೊಂದಿಗೆಝಣಝಣ ಕಾಂಚಾಣದವೇಷತೊಟ್ಟು.!ನಿನ್ನಾದರ್ಶಕೆವಿರುದ್ಧ ಪಣತೊಟ್ಟು ನಿಂತಿಹ ನಾಡಿಗೆಮತ್ತೆ ಹುಟ್ಟಿ ಬರುವೆಯಾ ಬುದ್ಧ.?….. ನೀ ಹೇಳಿದೆ ಬುದ್ಧ ಗುರುವೆಂದರೆಬರಿ ವ್ಯಕ್ತಿಯಲ್ಲ ಶಕ್ತಿಯೆಂದು.!ಇಂದು ಆ ವ್ಯಕ್ತಿಗೆಬೆಲೆಯು ಇಲ್ಲ ನೆಲೆಯು ಇಲ್ಲ.!ಮುಂದೆ ಗುರಿಯೂ ಇಲ್ಲಗುರುವಿನಾಶೀರ್ವಾದವೂ ಇಲ್ಲದೆಸಾಗುತಿಹ ಹಿಂಡು ಅಹಂನಮದವೇರಿದ ಸಲಗಗಳಂತಾಗಿದೆ.!ಅತಿಯಾಸೆಯ ಫಲಶೃತಿಧರಣಿಯೊಡಲ ಗರ್ಭಸೀಳಿಅಜ್ಞಾನದ ಅಮಲಲಿಸದಾ ತೂಕಡಿಸುತಿಹ ನಾಡಿಗೆನೀ ಮತ್ತೆ ಹುಟ್ಟಿ ಬರುವೆಯಾ ಬುದ್ಧ.!… ನಿನ್ನೆಯ ಆದರ್ಶಗಳು ಸಂದೇಶಗಳುಭಾಷಣಕಾರನ ಭಾಷಣದಸ್ವಾರಸ್ಯಕತೆಗಷ್ಟೆ ಬುದ್ಧ.!ಜನರ ಮನಸೆಳೆವ ತಂತ್ರಗಾರಿಕೆಯಸೂತ್ರದಾರನ ಮಂತ್ರವಿದು ಗೊತ್ತ.!ಧೂಳಿಪಟ ಮಾಡುತಿಹನುಪ್ರಕೃತಿಯೊಡಲ ಸಂಪತ್ತಾ….ಇದ ನೋಡಲು ಬರುವೆಯಾ ಬುದ್ಧ..ಬುದ್ಧಿಯಿದ್ದು ಅವಿವೇಕಿಯಂತೆವರ್ತಿಸೊ ಜಗದೊಳಗೆನೀ ಮತ್ತೆ ಹುಟ್ಟಿ ಬರುವೆಯಾ ಬುದ್ಧ.?… ಸತ್ಯ ಅಹಿಂಸೆಗಳನ್ನೆ ಕಾಲ್ಕಸ ಮಾಡಿಸುಳ್ಳಿನ ಸುಪ್ಪತ್ತಿಗೆಯಲಿರಾಜರೋಷವಾಗಿ ಮೆರೆಯುತಿಹನು…ಸದ್ಗುಣ ಸನ್ಮಾರ್ಗ ಸನ್ನಡತೆಗಳಪಥವ ಬದಲಿಸಿ ಗುರುವಿಗೆ ತಿರುಮಂತ್ರಹಾಕಿ ಬೀಗುತಿಹ ಮನುಜ.!ಏಷ್ಯಾದ ಬೆಳಕಾಗಿದ್ದ ನೀನು ,ಬುದ್ಧಅಗೋ.! ನೋಡುಈ ಕಗ್ಗತ್ತಲ ಕೋಟೆಯೆಂಬ ಜಗದೊಳಗೆಉಸಿರುಗಟ್ಟಿಸೊ ವಾತಾವರಣದಲಿಭ್ರಷ್ಟತೆಯ ಮಹಲುಗಳದ್ದೆ ಕಾರುಬಾರುತುಂಬಿಕೊಂಡಿರುವ ನಾಡಿಗೆನೀ ಮತ್ತೆ ಹುಟ್ಟಿ ಬರುವೆಯಾ ಬುದ್ಧ.?… ಅಜ್ಞಾನ ಅನೀತಿಗಳ ಆಗರದಲಿಧರೆಯೊಡಲು ಧಗಧಗಿಸಿ ಉರಿದುವಹ್ನಿ ಜ್ವಾಲೆಯ ಕೆನ್ನಾಲಿಗೆಗೆಬಲಿಯಾಗುತಿಹ ನಾಡಿಗೆಮತ್ತೆ ಬರುವೆಯಾ.? ಬುದ್ಧ.!ಇಗೋ ನೋಡು.! ಮಾನವೀಯತೆಯದುಂದುಭಿಯ ಸದ್ದಡಗಿಸಿಕ್ರೌರ್ಯತೆ ಪರ್ವ ವಿಜೃಂಭಿಸಿವೆ.!ನಿನ್ನಾದರ್ಶಗಳನ್ನೆ ಮರೆತುತನಗರಿವಿದ್ದು ಅವನಿ ಅಳಿವಿನಂಚಿನಲಿಅವನೇ ಅಂತ್ಯವಾಗುತಿಹ ಜಗಕೆಮತ್ತೆ ಹುಟ್ಟಿ ಬರುವೆಯಾ.? ಬುದ್ಧ… ****************

ಮತ್ತೆ ಹುಟ್ಟಿ ಬಾ ಬುದ್ದ Read Post »

ಕಾವ್ಯಯಾನ

ಮಹಾಪಯಣಿಗ

ಕವಿತೆ ಮಹಾಪಯಣಿಗ ಡಾ. ಗುರುಸಿದ್ಧಯ್ಯಾ ಸ್ವಾಮಿ ಚೀನಾದ ಮೆನ್-ಪಾಪ್-ಕು ಹಳ್ಳಿಯ ಕುವರಯುವನಾಗೆ ಬೌದ್ಧನಾದ ಯುವಾನ್ ಚಾಂಗ್ಭಾರತದ ಬುದ್ಧ ನಿಧಿ ಕೈ ಮಾಡಿ ಕರೆಯಲುಬುದ್ಧ ನಾಡಿನತ್ತ ಅಡಿ ಇಟ್ಟ ಮಹಾಪಯಣಿಗ ಊಹಿಸಲಾಗಿದ ಕಷ್ಟಗಳ ಬೆನ್ನೇರಿ ಹೊರಟಕುದುರೆ ಒಂಟೆ ಹೇಸರಗತ್ತೆಗಳನೇರಿ ನಡೆದಕಾಲ್ನಡಿಗೆಯಲ್ಲೂ ದಾಟಿ ಮುನ್ನಡೆದ ಧೀರ ಮರುಭೂಮಿ ಹಿಮ ಪರ್ವತ ಗಿರಿಕಂದರಗಳ ಹರ್ಷ ತುಂಬಿತವನಿಗೆ ಹರ್ಷವರ್ಧನನ ಭೆಟ್ಟಿಸಂದರ್ಶಿಸಿದ ಹತ್ತು ಹಲವು ಬೌದ್ಧ ಪೀಠಗಳಓದಲು ಕಲಿತ ಸಂಸ್ಕೃತ ಪಾಲಿ ಭಾಷೆಗಳಸಂಗ್ರಹಿಸಿದ ಅನುವಾದಿಸಿದ ಹಸ್ತಪ್ರತಿಗಳ ಕಪಿಲವಸ್ತು ಪಾಟಲಿಪುತ್ರ ನಾಲಂದಾಗಳಿಗೆಭೆಟ್ಟಿ ಇತ್ತ ನಾಗಾರ್ಜುನ ಕೊಂಡಾದಿಗಳಿಗೆಕಾಂಚಿ ಪುನ್ನಾಟ ಬನವಾಸಿ ನಾಸಿಕಗಳ ಸುತ್ತಿದಮಹಾಬೌದ್ಧ ಸಮ್ಮೇಳನದಿ ಮನ್ನಣೆ ಪಡೆದ ತೆಂಕಣ ಪಡುವಣ ಭರತ ಭೂಮಿಯ ಸುತ್ತಿಕನ್ನಡಿ ಹಿಡಿದ ಕನ್ನಡಿಗರ ಸತ್ಯಸಂಧ ಸನ್ನಡೆತೆಗೆಗೌರವಿಸಿದರು ಅಸ್ಸಾಂ ಕಾಶ್ಮೀರಾದಿ ಅರಸರುತುಂಬ ಕ್ಲೇಶದಿಂದ ಬೀಳ್ಕೊಟ್ಟ ಹರ್ಷವರ್ಧನ ಮರಳಿದ ಬುದ್ಧನಾಡ ಮಹಾಪಯಣಿಗನಿಗೆಅದ್ದೂರಿ ಸ್ವಾಗತ ದೊರಕಿತು ಚಕ್ರವರ್ತಿಯಿಂದಅನುವಾದ ಮುಂದುವರಿಸಿದ ಚೈತ್ಯ ಕಟ್ಟಿಸಿದರಾಜಕುವರ ಮಂತ್ರಿಗಳೂ ಆತುರ ಪ್ರವಚನಕೆ ಅರಮನೆ ದೊರೆಯಿತು ಪ್ರವಾಸ ಕಥೆ ಅರಳಿತುಎಪ್ಪತ್ತೈದನೆಯ ಹೊತ್ತಿಗೆ ಹೊಸ್ತಿಲೊಳಗಿತ್ತುಹಲವು ಕಗ್ಗಂಟುಗಳನು ನಿಘಂಟು ಬಿಡಿಸಿತ್ತುದಣಿದ ದೇಹ ಮಹಾಪರಿನಿರ್ವಾಣ ಬೇಡಿತ್ತು ಬೌದ್ಧ ಭಿಕ್ಕುಗಳಿಗೆ ಬುದ್ಧನಾಡ ಸುತ್ತಿ ಎಂದಹೊಸ ಬೌದ್ಧ ತತ್ವ ಶಾಸ್ತ್ರ ಹೊಸೆದು ನಿಂದನಿರ್ವಾಣಗೈದ ಚೀನಾದ ನವ ಗೋಪುರವಾದಬುದ್ಧನಾಡು ತಾಯ್ನಾಡಿಗೆ ರಸಸೇತುವೆಯಾದ ************

ಮಹಾಪಯಣಿಗ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಬಾನಲಿ ಹಾರುವ ಪತಂಗದ ನೂಲು ಕೆಳಗಿಟ್ಟಿರುವೆ ಶಿವಾತೊಗಲು ಗೊಂಬೆಗಳ ಆಡಿಸುವ ಸೂತ್ರ ಮೇಲಿಟ್ಟಿರುವೆ ಶಿವಾ ಕುರುಡು ಕಾಂಚಾಣವು ತಿಪ್ಪೆಯಲಿ ಬಿದ್ದು ಒದ್ದಾಡುತಿದೆಹಸಿವು ಇಂಗಿಸುವ ಆ ಶಕ್ತಿ ನೇಗಿಲಿಗೆ ಕೊಟ್ಟಿರುವೆ ಶಿವಾ ಸಂತೆಯಲಿ ಜೀವಾನಿಲ ಸಿಗದೆ ಪ್ರಾಣಪಕ್ಷಿ ಬಿಕ್ಕುತಿದೆಪ್ರಕೃತಿಯ ಒಡಲಲಿ ಪ್ರಾಣವಾಯು ಮುಚ್ಚಿಟ್ಟಿರುವೆ ಶಿವಾ ಅವನಿಯ ಹುಳು ಹೆಮ್ಮೆಯಲಿ ಶಶಿ ಅಂಗಳದಲಿ ತೆವಳುತಿದೆಇಳೆಯ ನಂದನವನ ನಾಶ ಮಾಡಿ ಮಸಣ ಕಟ್ಟಿರುವೆ ಶಿವಾ ಜಗದ ಸೃಷ್ಟಿಯ ಸೊಬಗು ಕಾಣದೆ “ಪ್ರಭೆ” ಯ ಮನ ನರಳುತಿದೆಮುಗ್ಧ ಜೀವಿಗಳ ಬದುಕಿಗೆ ಕಿಚ್ಚನ್ನು ಇಟ್ಟಿರುವೆ ಶಿವಾ *********************

ಗಜಲ್ Read Post »

ಕಾವ್ಯಯಾನ

ಸೂರ್ಯೋದಯ

ಕವಿತೆ ಸೂರ್ಯೋದಯ ಅಬ್ಳಿಹೆಗಡೆ ರಾತ್ರಿ;;ಹೊದ್ದು ಮಲಗಿದ,ಕತ್ತಲ-“ಕೌದಿ”ಯಲ್ಲಿ,ಬೆತ್ತಲಾಗುವ ಆಸೆ-ಹೊತ್ತು,ನಖಶಿಖಾಂತ ಉರಿವ,ಕಾಮನೆಗಳ ತಂಪಾಗಿಸಲು,ಮೆಲ್ಲನೆ,ಕಳ್ಳ ಹಜ್ಜೆಯನಿಡುತ್ತಾ,ಮುನಿಸಿಕೊಂಡಿನಿಯನ ಸಂತೈಸೆ,ಬಳಿಸಾರಿ,ಬರಸೆಳೆದು,ಬಿಗಿದಪ್ಪಿ,ಕೆನ್ನೆಗೊಂದು ಸಿಹಿಮುತ್ತನೊತ್ತಲು,ನಾಚಿ,ರಂಗೇರಿತು ಉಷೆಯ ಕೆನ್ನೆ,ಕಳೆದುದಾಗಲೆ ಕತ್ತಲೆಯ ನಿನ್ನೆ.ಉಭಯರ ಮುಖದಲ್ಲೂ-ಮಂದಹಾಸದ ಉದಯ.ಜೀವಕೋಟಿಗಳಲ್ಲಿ,ಭರವಸೆಗಳುದಯ.ಅದುವೆ,ಸುಂದರ ಶುಭೋದಯ.ಸೂರ್ಯೋದಯ…. . **************************

ಸೂರ್ಯೋದಯ Read Post »

You cannot copy content of this page

Scroll to Top