ಕವಿತೆ ಅಪ್ಪನ ಸೊಗಸು ರತ್ನಾ ನಾಗರಾಜ್ ಅಪ್ಪನ ಸೊಗಸೆ ಅಮ್ಮ ಅಪ್ಪನ ಮನದಾಸೆ ಅಮ್ಮ ಅಪ್ಪನಿರದೆ ಅಮ್ಮನಿರಲಾರಳು ಅಪ್ಪನ ಅಪ್ಪ ಅಮ್ಮಂದಿರಿÀಗೆ ಅಪ್ಪನೇ ಪ್ರೀತಿಯ ಆಧಾರ ಅಮ್ಮನ ಅಪ್ಪ ಅಮ್ಮಂದಿರಿಗೆ ಆಧರಣೀಯ ಅಳಿಮಯ ಅಪ್ಪನ ಸಹೋದರರಿಗೆ ಅಪ್ಪನೆ ಎಡ ಬಲ, ಬಲ ಭುಜ ಇಂತಿಪ್ಪ ಅಪ್ಪನಿಗೆ ನಾನು ಮುದ್ದಿನ ಕುವರಿ. ನನ್ನ ಅಣ್ಣ ವಂಶದ ಕುಡಿ. ಅಪ್ಪನೆಂದರೆ ಬರಿ ತಂದು ಕೊಡುವ ಅಕ್ಷಯ ಪಾತ್ರೆಯಲ್ಲ, ಅಕ್ಕರೆಯ ತುಂಬು ಪ್ರೀತಿ ಅಂವ ಅಪ್ಪ ಎನ್ನಯ ಪ್ರೀತಿಯ ಅಪ್ಪ ಅವನ ಅಂಗೈಯೊಳಗಿನ ನನ್ನ ಕೈಯಿ ಬೀಗುವ ಬಂಧನ ಬಿಗಿ ಬಂಧನ ಅವನ ಕಂಡ ಕ್ಷಣ ಓಡೋಡಿ ಹೋಗುವ ನನ್ನ ಈ ಶರೀರ ಅವನ ಅಪ್ಪುಗೆಯಲ್ಲಿ ಹಿತ ಕಾಣುವುದು ನನಗಾಗಿ ಅಂವ ದಿನ ನಿತ್ಯ ತರುವನು ತಿಂಡಿ ತಿನಿಸು, ಒಂದೊಮ್ಮೆ ಉಡಿಗೆ ತೊಡಿಗೆ ಆಟಿಕೆಗಳನ್ನು ಆಗ ಕುಣಿದು ಕುಪ್ಪಳಿಸುವುದು ಎನ್ನಯ ಮನಸು ಏನೇನೂ ತರದಿದ್ದಾಗ ಮುನಿಸಿಕೊಳ್ಳುವೆ ನಾ ಅಂವ ಎನ್ನ ಮರೆತೆನೆಂದು. ನAತರ ಅಂವ ರಮಿಸಿ ಕೊಡುವ ಆ ಮುತ್ತು ಅದೇಷ್ಟು ಸಿಹಿ ಚೆಂದ ಅವನ ತೊಡೆಯ ಪೀಠ ಎನಗೆ ಮೀಸಲು ಎನ್ನಯ ಪಾದಗಳು ತುಳಿದ ಅವನ ಶೂ ಕಳಚಿದ ಪಾದಗಳು ದಣಿವಾರಿದಾಗ ಅಂವ ಮತ್ತೆ ಮತ್ತೆ ಆ ಸುಖವನ್ನು ಕೊರುವನು ಹೆಣ್ಣು ಮಕ್ಕಳು ಅಪ್ಪನ ತದ್ರೂಪವಾದರೆ ಬಲು ಅದೃಷ್ಟದವಳೆಂದು ಕೊಂಡಾಡುವರು ಎನಗAತು ಕೋಡು ಮೂಡುವುದು ಆಗ ಅತಿಯಾದ ಅವನ ಮುದ್ದು ಕೊಡಿಸಿತು ಎನಗೆ ಜಂಬದ ಕೋಳಿಯ ಪಟ್ಟ ಬೆನ್ನಿಗೆ ಅಪ್ಪನಿರುವನೆಂದು ನಾನಾದೆ ಸಿಕ್ಕಪಟ್ಟೆ ದಿಟ್ಟೆ ಹುಡುಗರು ಓಟ ಕೀಳುವಷ್ಟು ಅಂವ ಬೆಳೆದು ನಿಂತ ಮಗಳನ್ನು ಗಂಡನ ಮನೆಗೆ ಕಳಿಸುವಾಗ ಮಗುವಿನಂತೆ ಗಳಗಳನೆ ಅತ್ತು ಮತ್ತಷ್ಟು ಎನ್ನ ದುಃಖ ಹೆಚ್ಚಿಸಿದ ಮೊಮ್ಮಕಳನ್ನು ಕಂಡು ಅವರೊಟ್ಟಿಗೆ ಕುಣಿದು ನಲಿದ ಅವನಿಗೆ ಗೊತ್ತು ಅವನ್ನನು ಅಪ್ಪನೆಂದು ಪ್ರೀತಿಸುವರೆಂದು ಅವನಿಗೆ ಗೊತ್ತಿಲ್ಲದಿರುವುದೊಂದು, ಅದು ನನ್ನ ಸ್ನೇಹಿತೆಗೆ ಅಪ್ಪನಿಲ್ಲದೆ ಒದ್ದಾಡುವ ಕೊರಗಿನ ಸಂಗತಿಯೊAದು ಉಂಟೆAದು ಅಪ್ಪನಿಲ್ಲದ ಮನೆ ಉಪ್ಪಿನ ಸಮುದ್ರವೆಂದು ಅಪ್ಪನೆAದರೆ ಅಂಗಳದಲ್ಲಿರುವ ಸಿಹಿ ನೀರಿನ ಬಾವಿಯೆಂದು ಅಪ್ಪ ಚೀರಯುವಾಗಲಿ, ಯಾವ ಕೊರೋನಾನೂ ಕೊರೆಯದಿರಲಿ ಅವನನ್ನು. ********************************************